` love you racchu, - chitraloka.com | Kannada Movie News, Reviews | Image

love you racchu,

 • 2021 ಕೊನೆಗೆ ಲವ್ ಯೂ ರಚ್ಚು

  2021 ಕೊನೆಗೆ ಲವ್ ಯೂ ರಚ್ಚು

  ಈಗಾಗಲೇ ಹಾಡಿನ ಮೂಲಕ ರೋಮಾಂಚನ ಹುಟ್ಟಿಸಿರುವ ಲವ್ ಯೂ ರಚ್ಚು ರಿಲೀಸ್ ಡೇಟ್ ಫಿಕ್ಸ್ ಆಗಿದೆ. ವರ್ಷದ ಕೊನೆಗೆ ಡಿ.31ಕ್ಕೆ ಲವ್ ಯೂ ರಚ್ಚು ಥಿಯೇಟರಿನಲ್ಲಿ ಥ್ರಿಲ್ ಕೊಡೋಕೆ ಬರ್ತಿದೆ. ಅಜೇಯ್ ರಾವ್, ರಚಿತಾ ರಾಮ್ ಅಭಿನಯದ ಚಿತ್ರಕ್ಕೆ ಶಂಕರ್ ಎಸ್. ರಾಜ್ ನಿರ್ದೇಶಕ. ಕ್ರಿಯೇಟಿವ್ ಹೆಡ್ ಮತ್ತು ನಿರ್ಮಾಪಕರೂ ಆಗಿರುವ ಗುರು ದೇಶಪಾಂಡೆ ಚಿತ್ರದ ಪ್ರಚಾರಕ್ಕೆ ಧುಮುಕಿದ್ದಾರೆ.

  ಅಲ್ಲಿಗೆ ವರ್ಷದ ಕೊನೆಗೆ ಒಂದು ಕಡೆ ರಕ್ಷಿತ್ ಶೆಟ್ಟಿಯವರ ಚಾರ್ಲಿ 777 ಮತ್ತು ಲವ್ ಯೂ ರಚ್ಚು ಮುಖಾಮುಖಿಯಾಗಲಿವೆ. ಎರಡೂ ಚಿತ್ರಗಳ ಜಾನರ್ ಬೇರೆ ಬೇರೆಯಾಗಿರುವ ಕಾರಣ ಚಿಂತೆ ಇಲ್ಲ.

 • ಫಸ್ಟ್ ನೈಟ್ ಎಲ್ಲರೂ ಏನ್ ಮಾಡ್ತಾರೆ? : ಡಿಂಪಲ್ ಪ್ರಶ್ನೆಗೆ ಎಲ್ರೂ ಕಂಗಾಲ್

  ಫಸ್ಟ್ ನೈಟ್ ಎಲ್ಲರೂ ಏನ್ ಮಾಡ್ತಾರೆ? : ಡಿಂಪಲ್ ಪ್ರಶ್ನೆಗೆ ಎಲ್ರೂ ಕಂಗಾಲ್

  ಲವ್ ಯೂ ರಚ್ಚು ಚಿತ್ರದ ಹಾಡು ರಿಲೀಸ್ ಆಗಿದೆ. ಮುದ್ದು ನೀನು.. ಅನ್ನೋ ಹಾಡು.. ಆ ಹಾಡಿನಲ್ಲಿರೋ ಅಜೇಯ್ ರಾವ್, ರಚಿತಾ ರೊಮ್ಯಾನ್ಸ್.. ನೋಡುಗರನ್ನು ಬೆಚ್ಚಚ್ಚಚ್ಚಗಾಗಿಸೋ ರಚಿತಾ ರಾಮ್.. ಹಾಡು ಹಿಟ್ ಆಗಿದೆ. ಆದರೆ.. ಎಲ್ಲರದ್ದೂ ಒಂದೇ ಪ್ರಶ್ನೆ. ಐ ಲವ್ ಯೂ ನಂತರ ರಚಿತಾ ರಾಮ್ ಅಂತಾ ದೃಶ್ಯಗಳಲ್ಲಿ ನಟಿಸೋದಿಲ್ಲ ಎಂದಿದ್ದರು. ಹಾಗಾದರೆ ರಚಿತಾ ರಾಮ್ ಆ ಪ್ರತಿಜ್ಞೆ ಮುರಿದಿದ್ದು ಏಕೆ..? ಇಂತಾದ್ದೊಂದು ಪ್ರಶ್ನೆ ರಚಿತಾಗೆ ಎದುರಾಗಿದ್ದು ಸುದ್ದಿಗೋಷ್ಟಿಯಲ್ಲಿ.

  ಮದುವೆ ಆದ ಮೇಲೆ ಫಸ್ಟ್ ನೈಟ್ ಇರುತ್ತಲ್ಲಾ.. ಅಲ್ಲಿ ಎಲ್ಲರೂ ಏನ್ ಮಾಡ್ತಾರೆ? ನಂಗೆ ಗೊತ್ತಿಲ್ಲ. ನಂಗಿನ್ನೂ ಮದುವೆ ಆಗಿಲ್ಲ. ರೊಮ್ಯಾನ್ಸ್ ಮಾಡ್ತಾರೆ ಅಲ್ವಾ..? ಅದನ್ನೇ ಸಿನಿಮಾದಲ್ಲಿ ತೋರಿಸಿದ್ದೇವೆ ಎಂದು ಉತ್ತರಿಸಿದ ರಚಿತಾ ರಾಮ್, ಮಾಡಲ್ಲ ಎಂದು ಹೇಳಿದ್ದ ದೃಶ್ಯದಲ್ಲಿ ನಟಿಸಿದ್ದೇನೆ ಎಂದರೆ ಅದಕ್ಕೊಂದು ರೀಸನ್ ಇರುತ್ತೆ ಅಲ್ವಾ..? ಸಿನಿಮಾ ರಿಲೀಸ್ ಆದ ಮೇಲೆ ನಿಮಗೇ ಗೊತ್ತಾಗುತ್ತೆ. ಆಗ ನೋಡಿ ಹೇಳಿ.. ಎಂದು ವಿವಾದಕ್ಕೆ ಫುಲ್ ಸ್ಟಾಪ್ ಇಡೋ ಪ್ರಯತ್ನ ಮಾಡಿದರು.

  ಗುರುದೇಶಪಾಂಡೆ ನಿರ್ಮಾಣದ ಲವ್ ಯೂ ರಚ್ಚು ಚಿತ್ರಕ್ಕೆ ಶಂಕರ್ ರಾಜ್ ಡೈರೆಕ್ಟರ್. ಮಣಿಕಾಂತ್ ಕದ್ರಿ ಸಂಗೀತ ನೀಡಿರೋ ಹಾಡಿಗೆ ಧ್ವನಿ ನೀಡಿರೋದು ಸಿದ್ದ್ ಶ್ರೀರಾಮ್ ಮತ್ತು ಸುಪ್ರಿಯಾ ರಾಮ್. ನಾಗಾರ್ಜುನ್ ಶರ್ಮಾ ಅವರು ಬರೆದಿರೋ ಹಾಡಿನ ಸಾಹಿತ್ಯಕ್ಕೆ ಅಷ್ಟೇ ರೊಮ್ಯಾಂಟಿಕ್ ಆಗಿ ಕಿಕ್ ಕೊಟ್ಟಿರೋದು ರಚಿತಾ ರಾಮ್ ಮತ್ತು ಅಜೇಯ್ ರಾವ್.

 • ಫೈಟಿಂಗ್.. ಶೂಟಿಂಗ್.. ಆ್ಯಕ್ಸಿಡೆಂಟ್.. : ಹಿಸ್ಟರಿ ರಿಪೀಟ್ಸ್

  ಫೈಟಿಂಗ್.. ಶೂಟಿಂಗ್.. ಆ್ಯಕ್ಸಿಡೆಂಟ್.. : ಹಿಸ್ಟರಿ ರಿಪೀಟ್ಸ್

  ಲವ್ ಯೂ ರಚ್ಚು ಚಿತ್ರೀಕರಣದ ವೇಳೆ ನಡೆದ ಘಟನೆ, ದುರಂತ ಸಾವು.. ಹಳೆಯ ಘಟನೆಗಳನ್ನೆಲ್ಲ ನೆನಪಿಸಿಕೊಳ್ಳುವಂತೆ ಮಾಡಿದೆ. ಚಿತ್ರರಂಗಕ್ಕೆ ಇಂತಹ ದುರಂತಗಳು ಹೊಸದಲ್ಲ. ಪ್ರಾಣ ಕಳೆದುಕೊಂಡಿರುವುದು, ಗಾಯಾಳುಗಳಾಗಿರುವುದೂ ಹೊಸದಲ್ಲ.

  ಇತ್ತೀಚೆಗೆ ಕನ್ನಡಿಗರಿಗೆ ನೆನಪಿರುವ ಅತಿ ದೊಡ್ಡ ಪ್ರಕರಣ ಮಾಸ್ತಿಗುಡಿ ದುರಂತದ್ದು. 2016ರ ನವೆಂಬರ್‍ನಲ್ಲಿ ನಡೆದಿದ್ದ ಘಟನೆಯಲ್ಲಿ ಉದಯೋನ್ಮುಖ ಕಲಾವಿದರಾದ ಅನಿಲ್ ಮತ್ತು ಉದಯ್ ಮೃತಪಟ್ಟಿದ್ದರು.

  2019ರಲ್ಲಿ ರಣಂ ಚಿತ್ರದ ಚಿತ್ರೀಕರಣದ ವೇಳೆ ಸಿಲಿಂಡರ್ ಸ್ಫೋಟ ಸಂಭವಿಸಿತ್ತು. ಪ್ರಾಣಹಾನಿಯೂ ಆಗಿತ್ತು. ಶೂಟಿಂಗ್ ನೋಡಲು ಬಂದಿದ್ದ ಇಬ್ಬರು ಮೃತಪಟ್ಟಿದ್ದರು.

  1997ರಲ್ಲಿ ಸಿಂಹದ ಮರಿ ಚಿತ್ರೀಕರಣದ ವೇಳೆ ಕ್ಯಾಮೆರಾ ಆಪರೇಟರ್ ವಿಜಿ ಪ್ರಾಣ ಕಳೆದುಕೊಂಡಿದ್ದರು.

  ಹಲೋ ಸಿಸ್ಟರ್ ಚಿತ್ರೀಕರಣದಲ್ಲಿ ವಿದ್ಯುತ್ ತಂತಿ ತಗುಲಿ ಇಬ್ಬರು ಯುವಕರು ಸುಟ್ಟು ಕರಕಲಾಗಿದ್ದರು.

  ಆದರೆ ಚಿತ್ರರಂಗವನ್ನು ಬೆಚ್ಚಿ ಬೀಳಿಸಿದ್ದ ಪ್ರಕರಣ ಲಾಕಪ್ ಡೆತ್ ಚಿತ್ರೀಕರಣದ ವೇಳೆ ನಡೆದ ದುರಂತ. ಶೂಟಿಂಗ್ ವೇಳೆ ಸ್ಟಂಟ್ ಕಲಾವಿದನೊಬ್ಬ ಪ್ರಾಣ ಕಳೆದುಕೊಂಡ ಮೊದಲ ಪ್ರಕರಣ ಅದು.

  1999ರಲ್ಲಿ ಟಿಕೆಟ್ ಟಿಕೆಟ್ ಚಿತ್ರದ ಶೂಟಿಂಗ್‍ನಲ್ಲಿ ಪೆಟ್ರೋಲ್ ಬಾಂಬ್ ತಯಾರಿಸುತ್ತಿದ್ದ ಬಾಂಬ್ ರವಿ, ಸ್ಫೋಟದಲ್ಲಿ ಸಾವನ್ನಪ್ಪಿದ್ದರು.

  2000ದಲ್ಲಿ ರೌಡಿ ಅಳಿಯ ಶೂಟಿಂಗ್‍ನಲ್ಲಿ ಡಿಫರೆಂಟ್ ಡ್ಯಾನಿ ಅದೃಷ್ಟವಶಾತ್ ಸಾವನ್ನು ಗೆದ್ದಿದ್ದರು.

  ಹಾಯ್ ಬೆಂಗಳೂರು ಚಿತ್ರದ ಶೂಟಿಂಗ್‍ನಲ್ಲಿ ಇಬ್ಬರು ಸ್ಟಂಟ್ ಕಲಾವಿದರು ಗಾಯಗೊಂಡಿದ್ದರು.

  ಕಿರಣ್ ಬೇಡಿ ಚಿತ್ರೀಕರಣದಲ್ಲಿ ನಟ ಸರಿಗಮ ವಿಜಿ ಅವರಿಗೆ ಪೆಟ್ಟಾಗಿತ್ತು.

  ಬ್ಲಾಕ್ & ವೈಟ್ ಚಿತ್ರಗಳ ಕಾಲದಲ್ಲೂ ಅವಘಡಗಳು ಸಂಭವಿಸಿದ್ದವು. ಕಠಾರಿ ವೀರ ಚಿತ್ರದಲ್ಲಿ ರಾಜ್ ಕಣ್ಣಿಗೆ ಕಠಾರಿಯ ಪೆಟ್ಟು ಬಿದ್ದಿತ್ತು. ಮಿಂಚಿನ ಓಟ ಚಿತ್ರೀಕರಣದಲ್ಲಿ ನಟ ಲೋಕನಾಥ್ ಗಾಯಗೊಂಡಿದ್ದರು. ಹಾಗೆ ನೋಡಿದರೆ ಇಂತಹ ಪ್ರಕರಣಗಳು ಕನ್ನಡ ಚಿತ್ರರಂಗದಲ್ಲಿಯೇ ಕಡಿಮೆ. ಬಾಲಿವುಡ್ ಸೇರಿದಂತೆ ಬೇರೆ ಬೇರೆ ಚಿತ್ರರಂಗಗಳಲ್ಲಿ ದುರಂತಗಳಿಗೆ ಲೆಕ್ಕವೂ ಇಲ್ಲ. ಸಾವಿಗೂ ಲೆಕ್ಕ ವಿಲ್ಲ.

 • ರಚಿತಾ ರಾಮ್ ಆಸ್ಪತ್ರೆಗೆ ದಾಖಲು

  rachita ram image

  ನಟಿ ರಚಿತಾ ರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯಕ್ಕೆ ರಚಿತಾ ರಾಮ್ ಅತ್ಯಂತ ಬ್ಯುಸಿ ಹೀರೋಯಿನ್. ಇದೇ ತಿಂಗಳು ಡಿ.31ಕ್ಕೆ ಅವರ ಅಭಿನಯದ ಲವ್ ಯೂ ರಚ್ಚು ರಿಲೀಸ್ ಆಗುತ್ತಿದೆ. ಜನವರಿಯಲ್ಲಿ ಏಕ್ ಲವ್ ಯಾ ರಿಲೀಸ್ ಇದೆ. ಹಿಂದಿನ ತಿಂಗಳು 100 ಮೂವಿ ರಿಲೀಸ್ ಆಗಿತ್ತು. ಮತ್ತೊಂದೆಡೆ ಚಂದನ್ ಶೆಟ್ಟಿ ಜೊತೆಗೆ ಲಕಲಕ ಲ್ಯಾಂಬೋರ್ಗಿನಿ ಶೂಟಿಂಗ್ ಆಗಿದ್ದು, ಆ ಹಾಡು ಕೂಡಾ ಈಗ ರಿಲೀಸ್ ಹಂತದಲ್ಲಿದೆ.

  ಒಂದೆಡೆ ನಿರಂತರವಾಗಿ ಲವ್ ಯೂ ರಚ್ಚು ಮತ್ತು ಏಕ್ ಲವ್ ಯಾ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ರಚಿತಾ ರಾಮ್, ನಿರಂತರ ಶೂಟಿಂಗ್ ಮತ್ತು ಪ್ರಚಾರದ ಒತ್ತಡದಲ್ಲಿ ಸುಸ್ತಾಗಿದ್ದರು. ಶೀತಜ್ವರಕ್ಕೆ ತುತ್ತಾಗಿದ್ದ ರಚಿತಾ ರಾಮ್, ಶಿವಮೊಗ್ಗಕ್ಕೆ ಹೋಗಿ ಬಂದ ಮೇಲೆ ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಆರೋಗ್ಯ ಸುಧಾರಿಸಿದ್ದು, ರಚಿತಾ ಅವರಿಗೆ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ. ಹೀಗಾಗಿ ರಚಿತಾ ಸದ್ಯಕ್ಕೆ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ.

 • ಲವ್ ಯೂ ರಚ್ಚು : ಹೀರೋ ಅಜಯ್ ರಾವ್`ಗೆ ನಿರ್ಮಾಪಕರು ಅವಮಾನ ಮಾಡಿದ್ರಾ?

  ಲವ್ ಯೂ ರಚ್ಚು : ಹೀರೋ ಅಜಯ್ ರಾವ್`ಗೆ ನಿರ್ಮಾಪಕರು ಅವಮಾನ ಮಾಡಿದ್ರಾ?

  ಲವ್ ಯೂ ರಚ್ಚು, ಈ ವರ್ಷದ ಕೊನೆಗೆ ರಿಲೀಸ್ ಆಗುತ್ತಿದೆ. ಟ್ರೇಲರ್ ಮತ್ತು ಹಾಡುಗಳು ಉತ್ತಮ ಪ್ರತಿಕ್ರಿಯೆ ಪಡೆದಿರೋದ್ರಿಂದ ಸಿನಿಮಾಗೆ ಒಳ್ಳೆಯ ಓಪನಿಂಗ್ ಸಿಗೋ ಎಲ್ಲ ನಿರೀಕ್ಷೆಗಳೂ ಇವೆ. ಇದರ ನಡುವೆ ಚಿತ್ರದ ನಿರ್ಮಾಪಕರು ಮತ್ತು ಹೀರೋ ನಡುವೆ ಗುದ್ದಾಟ ಶುರುವಾಗಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್ ರಿಲೀಸ್ ಆಗಿತ್ತು. ಧ್ರುವ ಸರ್ಜಾ ರಿಲೀಸ್ ಮಾಡಿದ್ದರು. ಆದರೆ, ಕಾರ್ಯಕ್ರಮಕ್ಕೆ ಹೀರೋ ಅಜಯ್ ರಾವ್ ಅವರೇ ಇರಲಿಲ್ಲ. ಚಿತ್ರತಂಡದ ಸ್ಪಷ್ಟನೆಗಳು ಗೊಂದಲ ಹುಟ್ಟಿಸಿದ್ದವು.

  ನನಗೆ ಚಿತ್ರದ ನಿರ್ಮಾಪಕರಿಂದ ಅವಮಾನವಾಗಿದೆ. ನನಗೂ ಆತ್ಮಗೌರವ ಇದೆ. ಹೀಗಾಗಿ ಚಿತ್ರತಂಡದವರ ಜೊತೆ, ನಿರ್ಮಾಪಕರ ಜೊತೆ ನಾನು ಪ್ರಚಾರ ಮಾಡಲ್ಲ. ವೈಯಕ್ತಿಕವಾಗಿ ಚಿತ್ರದ ಬಗ್ಗೆ ಪ್ರಚಾರ ಮಾಡ್ತೇನೆ. ಅವಮಾನವಾಗಿರೋ ಜಾಗಕ್ಕೆ ಮತ್ತೆ ನಾನು ಹೋಗಲ್ಲ ಎಂದಿರುವ ಅಜಯ್ ರಾವ್, ಯಾವ ಕಾರಣಕ್ಕೆ ಇದೆಲ್ಲ ಶುರುವಾಯ್ತು ಅನ್ನೋದನ್ನ ಬಹಿರಂಗಪಡಿಸುವುದಿಲ್ಲವಂತೆ. ಅದರ ಬಗ್ಗೆ ಮುಂದೆ ಕೂಡಾ ಮಾತನಾಡಲ್ಲ ಎಂದಿದ್ದಾರೆ ಹೀರೋ.

  ವೈಮನಸ್ಯ, ಮನಸ್ತಾಪ ಇರುತ್ತೆ. ಆದರೆ ಅವಮಾನ ಮಾಡಿಲ್ಲ. 4 ಜನ ಇರೋ ಕುಟುಂಬದಲ್ಲೇ ಮನಸ್ತಾಪ ಬರುತ್ತೆ, 150 ಜನರ ತಂಡ ಇರೋವಾಗ ಬರೋದಿಲ್ವೇ? ಕೂತು ಮಾತನಾಡಿ, ವಿವಾದ ಬಗೆಹರಿಸಿಕೊಳ್ಳೋಕೆ ನಾನು ಸಿದ್ಧ. 25ನೇ ತಾರೀಕು ಪ್ರೆಸ್‍ಮೀಟ್ ಇದೆ. 29ರಂದು ಈವೆಂಟ್ ಇದೆ. ಅಜಯ್ ರಾವ್ ಅವರಿಗೆ ನಾನೇ ಖುದ್ದು ಫೋನ್ ಮಾಡಿ ಕರೆದಿದ್ದೇನೆ ಎಂದಿದ್ದಾರೆ ನಿರ್ಮಾಪಕ, ಕ್ರಿಯೇಟಿವ್ ಡೈರೆಕ್ಟರ್ ಗುರು ದೇಶಪಾಂಡೆ.

  ಇಡೀ ಚಿತ್ರತಂಡವೇ ಒಂದು ಮಾತು ಹೇಳ್ತಿರೋವಾಗ, ಒಂದು ನಿರ್ಣಯದ ಮೇಲೆ ನಿಂತಿರೋವಾಗ ಇವರೊಬ್ಬರೇ ಒಂದು ಮಾತು ಹೇಳ್ತಿದ್ದರೆ ಅದು ಸರಿಹೋಗಲ್ಲ. ಅದು ಅವರ ಸಂಸ್ಕøತಿಯನ್ನು ತೋರಿಸುತ್ತೆ ಎಂದಿದ್ದಾರೆ ಗುರು ದೇಶಪಾಂಡೆ.

 • ಲವ್ ಯೂ ರಚ್ಚು ಮೃತನ ಕುಟುಂಬಕ್ಕೆ ನಿರ್ಮಾಪಕರಿಂದ ಪರಿಹಾರ

  ಲವ್ ಯೂ ರಚ್ಚು ಮೃತನ ಕುಟುಂಬಕ್ಕೆ ನಿರ್ಮಾಪಕರಿಂದ ಪರಿಹಾರ

  ಇತ್ತೀಚೆಗೆ ಕನ್ನಡ ಚಿತ್ರರಂಗವನ್ನು ಬೆಚ್ಚಿ ಬೀಳಿಸಿದ್ದ ಘಟನೆ ಲವ್ ಯೂ ರಚ್ಚು ಚಿತ್ರದ ಚಿತ್ರೀಕರಣ ವೇಳೆ ನಡೆದ ದುರಂತ. ಫೈಟರ್ ವಿವೇಕ್ ಎಂಬುವವರು ಸಾವಿಗೀಡಾಗಿದ್ದರು. ಚಿತ್ರದ ನಿರ್ದೇಶಕ, ಸಾಹಸ ನಿರ್ದೇಶಕ ಸೇರಿದಂತೆ ಕೆಲವರು ಅರೆಸ್ಟ್ ಕೂಡಾ ಆಗಿದ್ದರು. ಈಗ ಎಲ್ಲರೂ ಜಾಮೀನಿನ ಮೇಲೆ ಹೊರಗಿದ್ದಾರೆ. ದುರಂತದ ವೇಳೆ ನಿರ್ಮಾಪಕ ಗುರು ದೇಶಪಾಂಡೆ ಪತ್ನಿ ಪ್ರೀತಿಕಾ ದೇಶಪಾಂಡೆ ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡೋದಾಗಿ ಘೋಷಿಸಿದ್ದರು.

  ಈಗ ಮೃತ ವಿವೇಕ್ ಅವರ ಮನೆಗೆ ತೆರಳಿದ್ದ ನಿರ್ಮಾಪಕ ಗುರು ದೇಶಪಾಂಡೆ ವಿವೇಕ್ ಅವರ ತಾಯಿಗೆ 5 ಲಕ್ಷ ರೂ. ಪರಿಹಾರದ ಚೆಕ್ ನೀಡಿದ್ದಾರೆ. ಇನ್ನು 5 ಲಕ್ಷವನ್ನು ಸಿನಿಮಾ ರಿಲೀಸ್ ಆದ ಮೇಲೆ 2 ದಿನಗಳ ಒಳಗೆ ಕೊಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ವಿವೇಕ್ ಅವರ ತಮ್ಮನ ವಿದ್ಯಾಭ್ಯಾಸದ ಜವಾಬ್ದಾರಿಯನ್ನೂ ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ.

 • ಲವ್ ಯೂ ರಚ್ಚು.. ವಿಭಿನ್ನ ಕಥೆಯಲ್ಲಿ ಟ್ವಿಸ್ಟುಗಳೇ ಹೆಚ್ಚು.. ಎಲ್ಲರಿಗೂ ಮೆಚ್ಚು

  ಲವ್ ಯೂ ರಚ್ಚು.. ವಿಭಿನ್ನ ಕಥೆಯಲ್ಲಿ ಟ್ವಿಸ್ಟುಗಳೇ ಹೆಚ್ಚು.. ಎಲ್ಲರಿಗೂ ಮೆಚ್ಚು

  ಲವ್ ಯೂ ರಚ್ಚು. ಡಿಸೆಂಬರ್ 31ಕ್ಕೆ ರಿಲೀಸ್ ಆಗುತ್ತಿರೋ ಚಿತ್ರದ ಟ್ರೇಲರ್ ಹೊರಬಿದ್ದಿದ್ದೇ ತಡ.. ಇದು ಬೇರೆಯದೇ ಕಥೆ ಇರೋ ಸಸ್ಪೆನ್ಸ್ ಥ್ರಿಲ್ಲರ್ ಲವ್ ಸ್ಟೋರಿ ಅನ್ನೋ ಮಾತು ಹೊರಬಿದ್ದಿದೆ. ಟ್ರೇಲರಿನಲ್ಲಿಯೇ ರೋಮಾಂಚನವಾಗುವಷ್ಟು ಟ್ವಿಸ್ಟುಗಳಿವೆ. ಥ್ರಿಲ್ಲುಗಳಿವೆ. ಇನ್ನು ಸಿನಿಮಾದಲ್ಲಿ ಹೇಗಿರಬಹುದು..? ರಚ್ಚು ಮೆಚ್ಚಿಕೊಳ್ಳೋಕೆ ಅಷ್ಟು ಸಾಕು.

  ಅಜೇಯ್ ರಾವ್ ಮತ್ತು ರಚಿತಾ ರಾಮ್ ಲವ್ ಸ್ಟೋರಿ, ಮಧ್ಯೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆಯಾಗೋ ಡ್ರೈವರ್, ಆತನ ಹೆಣವನ್ನು ಮುಚ್ಚಿ ಹಾಕೋ ಅಜೇಯ್, ರಚಿತಾ.. ಅವರಿಬ್ಬರಿಗೆ ಮಾತ್ರವೇ ಗೊತ್ತಿದ್ದ ಸತ್ಯ ಆ ಇನ್ನೊಬ್ಬನಿಗೆ ಗೊತ್ತಾಗೋದು ಹೇಗೆ? ಅವನ್ಯಾರು? ಕೊಲೆ ನಿಜಕ್ಕೂ ನಡೆದಿದ್ಯಾ? ಕೊಲೆ ನಡೆಯಿತು ಅನ್ನೋದೇ ಸುಳ್ಳಾ? ಟ್ರೇಲರ್ ನೋಡಿದವರಿಗೆ ಇಷ್ಟೆಲ್ಲ ಕುತೂಹಲ ಹುಟ್ಟುತ್ತವೆ. ಉತ್ತರ ತಿಳ್ಕೊಳ್ಳೋಕೆ ಡಿಸೆಂಬರ್ 31ರವರೆಗೆ ಕಾಯಬೇಕು.

  ಶಶಾಂಕ್ ಅವರ ಕಥೆ ಇಟ್ಟುಕೊಂಡು, ಶಂಕರ್ ರಾಜ್ ಚೆಂದದ ಕಥೆ ಹೇಳೋಕೆ ಹೊರಟಿದ್ದಾರೆ ಅನ್ನೋ ಸುಳಿವು ಟ್ರೇಲರಿನಲ್ಲಿ ಸಿಕ್ಕಿದೆ. ಗುರು ದೇಶಪಾಂಡೆ ಅವರ ಕ್ರಿಯೇಟಿವಿಟಿಯೂ ಕಾಣಿಸುತ್ತದೆ. ಒಂದಂತೂ ಪಕ್ಕಾ.. ಲವ್ ಯೂ ರಚ್ಚು ಟೀಂ ಒಂದೊಳ್ಳೆ ಕಥೆ ಹೇಳೋಕೆ ಸಿದ್ಧವಾಗಿದೆ. ಗೆಟ್ ರೆಡಿ..

 • ಹೀರೋ..ಹೀರೋಯಿನ್ ಬಿಡಿ. ಸಿನಿಮಾ ಚೆನ್ನಾಗಿದೆ : ರಚ್ಚು ನಿರ್ಮಾಪಕ ಗುರು ದೇಶಪಾಂಡೆ

  ಹೀರೋ..ಹೀರೋಯಿನ್ ಬಿಡಿ. ಸಿನಿಮಾ ಚೆನ್ನಾಗಿದೆ : ರಚ್ಚು ನಿರ್ಮಾಪಕ ಗುರು ದೇಶಪಾಂಡೆ

  ಲವ್ ಯೂ ರಚ್ಚು ರಿಲೀಸ್ ಆಗಿದೆ. ಪ್ರೇಕ್ಷಕರಿಗೆ ಇಷ್ಟವಾಗಿರೋದು ಚಿತ್ರದ ಕಥೆ. ರೊಮ್ಯಾಂಟಿಕ್ ಥ್ರಿಲ್ಲರ್ ಜಾನರ್‍ನ ಕಥೆ ಕಡೆಯ ಕ್ಷಣದವರೆಗೂ ಥ್ರಿಲ್ಲಿಂಗ್ ಕೊಟ್ಟಿದೆ. ಎಲ್ಲಿಯೂ ನಿಲ್ಲದೆ ಕ್ಷಣ ಕ್ಷಣವೂ ವೇಗವಾಗಿ ಓಡುತ್ತಲೇ ಹೋಗುವ ಲವ್ ಯೂ ರಚ್ಚು ಆರಂಭದಿಂದ ಒಂದಿಷ್ಟು ವಿವಾದಕ್ಕೆ ಸಿಲುಕಿತ್ತು. ಸಿನಿಮಾ ರಿಲೀಸ್ ಆದ ದಿನವೂ ಅದು ಬಿಡಲಿಲ್ಲ. ಪ್ರೇಕ್ಷರ ರೆಸ್ಪಾನ್ಸ್ ತಿಳಿಯಲು ಥಿಯೇಟರಿಗೆ ಬಂದ ಚಿತ್ರತಂಡದ ಜೊತೆ ನಾಯಕ ಅಜಯ್ ರಾವ್ ಅವರಾಗಲೀ, ನಾಯಕಿ ರಚಿತಾ ರಾಮ್ ಅವರಾಗಲಿ ಇರಲಿಲ್ಲ.

  ಅವರ ಬಗ್ಗೆಯೇ ಎಷ್ಟು ಕೇಳ್ತೀರಿ. ಚಿತ್ರ ತಂಡದವರೆಲ್ಲ ಇಲ್ಲೇ ಇದ್ದಾರೆ. ನಿರ್ಮಾಪಕನಾದ ನಾನು, ನಿರ್ದೇಶಕರು, ಆರುಗೌಡ, ಸಂಗೀತ ನಿರ್ದೇಶಕರು.. ಎಲ್ಲರೂ ಇದ್ದಾರೆ. ನಾನು ಒಳ್ಳೆಯದು ಮಾಡಿದ್ದೇನೆ. ಒಳ್ಳೆಯದೇ ಆಗುತ್ತೆ ಎಂದಿದ್ದಾರೆ ನಿರ್ಮಾಪಕ ಗುರು ದೇಶಪಾಂಡೆ.