` love you rachchu - chitraloka.com | Kannada Movie News, Reviews | Image

love you rachchu

 • ಲವ್ ಯೂ ರಚ್ಚು ದುರಂತ : ನಿಜಕ್ಕೂ ನಡೆದಿದ್ದಾದರೂ ಏನು?

  ಲವ್ ಯೂ ರಚ್ಚು ದುರಂತ : ನಿಜಕ್ಕೂ ನಡೆದಿದ್ದಾದರೂ ಏನು?

  ಲವ್ ಯೂ ರಚ್ಚು ಚಿತ್ರ ಮೊದಲು ಸುದ್ದಿಯಾಗಿದ್ದು ಚಿತ್ರದ ಚೆಂದದ ಟೈಟಲ್ಲು, ಲುಕ್.. ಇತ್ಯಾದಿಗಳಿಗೆ. ಆದರೆ ಆಗಸ್ಟ್ 9ನೇ ತಾರೀಕು ನಡೆದ ದುರಂತ, ಫೈಟರ್ ವಿವೇಕ್ ದುರ್ಮರಣ ಚಿತ್ರತಂಡಕ್ಕೂ ಶಾಕ್. ಇಷ್ಟಕ್ಕೂ ಆಗಿದ್ದೇನು?

  ದುರಂತಕ್ಕೆ ಕಾರಣ ಸಾಹಸ ನಿರ್ದೇಶಕ ವಿನೋದ್ ಅಲ್ಲ, ಚಿತ್ರತಂಡದಲ್ಲಿದ್ದ ಯಾವೊಬ್ಬ ಸಾಹಸ ಕಲಾವಿದರೂ ಅಲ್ಲ. ಬದಲಿಗೆ ಇದೆಲ್ಲ ಆಗಿದ್ದು ಕ್ರೇನ್ ಆಪರೇಟರ್‍ನಿಂದ. ಬಿಡದಿಯ ಜೋಗಯ್ಯನ ಪಾಳ್ಯದಲ್ಲಿ ನಡೆಯುತ್ತಿದ್ದ ಶೂಟಿಂಗ್‍ನಲ್ಲಿ ರೋಪ್ ಸ್ಟಂಟ್ ಇತ್ತು. ದುರದೃಷ್ಟವಶಾತ್ ಅದು ಹೈಟೆನ್ಷನ್ ವೈರ್ ಕೆಳಗೆ ನಡೆಯುತ್ತಿದ್ದ ಸಾಹಸ. ಆ ವೇಳೆ ಕ್ರೇನ್ ಆಪರೇಟರ್, ಕ್ರೇನ್‍ನ್ನು ಮರಕ್ಕೆ ಟಚ್ ಮಾಡಿದ್ದ. ಆಗ ಅವನಿಗೆ ವಾರ್ನಿಂಗ್ ಕೊಡಲಾಗಿತ್ತು. ಕೊನೆಗೆ ಆತ ವೈರ್‍ಗೆ ಟಚ್ ಮಾಡಿಬಿಟ್ಟ. ಅದು 11  ಕೆವಿ ವಿದ್ಯುತ್ ಲೇನ್. ಆಗ ಕ್ರೇನ್‍ಗೆ ತಗುಲಿದ್ದ ಕರೆಂಟ್, ವಿವೇಕ್ ಮತ್ತು ರಂಜಿತ್ ಇಬ್ಬರಿಗೂ ಟಚ್ ಆಯ್ತು. ರಂಜಿತ್ ಅದೃಷ್ಟ ಚೆನ್ನಾಗಿತ್ತು. ಕರೆಂಟ್ ಹೊಡೆದರೂ ಬದುಕುಳಿದರು. ವಿವೇಕ್ ಅಲ್ಲಿಯೇ ಮೃತಪಟ್ಟರು. ಇದು ರಂಜಿತ್ ಹೇಳಿರುವ ಘಟನೆಯ ವಿವರ.

  ಸದ್ಯಕ್ಕೆ ಚಿತ್ರದ ನಿರ್ದೇಶಕ ಶಂಕರ್ ರಾಜ್, ಸಾಹಸ ನಿರ್ದೇಶಕ ವಿನೋದ್, ಟ್ರೇನ್ ಆಪರೇಟರ್ ಮಾದೇಶ (ಮುನಿಯಪ್ಪ) ಹಾಗೂ ಜಮೀನಿನ ಮಾಲೀಕ ಪುಟ್ಟರಾಜು ಅವರನ್ನು ಪೊಲೀಸರು ಬಂಧಿಸಿದ್ದಾರೆ. ರಾತ್ರಿಯೇ ನ್ಯಾಯಾಧೀಶರ ಎದುರು ಹಾಜರು ಪಡಿಸಿ ವಿಚಾರಣೆ ಆರಂಭಿಸಿದ್ದಾರೆ.

  ನಿರ್ಮಾಪಕ ಗುರು ದೇಶಪಾಂಡೆ ಸ್ಥಳದಲ್ಲಿ ಇರಲಿಲ್ಲ. ಘಟನೆಯ ಸಂಪೂರ್ಣ ಮಾಹಿತಿ ಪಡೆದು, ಮುಂದಿನ ಹೆಜ್ಜೆ ಇಡುತ್ತೇನೆ ಎಂದಿದ್ದಾರೆ ಗುರು ದೇಶಪಾಂಡೆ.

 • ಶೂಟಿಂಗ್ ವೇಳೆ ದುರಂತ : ಫೈಟ್ ಮಾಸ್ಟರ್ ವಿವೇಕ್ ದುರ್ಮರಣ - Breaking

  love you rachchu image

  ಬೆಂಗಳೂರಲ್ಲಿ ಸಿನಿಮಾ ಶೂಟಿಂಗ್ ವೇಳೆ ದುರಂತ ಸಂಭವಿಸಿದೆ. ದುರಂತದಲ್ಲಿ ಫೈಟ್ ಮಾಸ್ಟರ್ ವಿವೇಕ್ ಸಾವಿಗೀಡಾಗಿದ್ದಾರೆ. ಬಿಡದಿಯ ಈಗಲ್ ಟನ್ ರೆಸಾರ್ಟ್ ಬಳಿ ಘಟನೆ ನಡೆದಿದ್ದು, ಹೈಟೆನ್ಷನ್ ವೈರ್ ತಗುಲಿ ಫೈಟ್ ಮಾಸ್ಟರ್ ವಿವೇಕ್ ಸಾವನ್ನಪ್ಪಿದ್ದಾರೆ.  

  ಅಜೇಯ್ ರಾವ್ ಮತ್ತು ರಚಿತಾ ರಾಮ್ ಅಭಿನಯದ ‘ಲವ್ ಯೂ ರಚ್ಚು’ ಸಿನಿಮಾ ಚಿತ್ರೀಕರಣದ ವೇಳೆ ಸಂಭವಿಸಿರುವ ದುರಂತವಿದು. ಗುರುದೇಶ ಪಾಂಡೆ ನಿರ್ಮಾಣದ ಚಿತ್ರದಲ್ಲಿ ಫೈಟ್ ಮಾಸ್ಟರ್ ವಿನೋದ್ ಸಾಹಸ ನಿರ್ದೇಶನವಿತ್ತು.

  ಮೆಟಲ್ ರೋಪ್ ಮೇಲೆ ವಿವೇಕ್ ಜಾಕೆಟ್ ಹಾಕಿದ್ದರೂ, ಶಾರ್ಟ್ ಸರ್ಕ್ಯೂಟ್ ಆಗಿ ದುರಂತ ಸಂಭವಿಸಿದೆ. ಘಟನಾ ಸ್ಥಳದಲ್ಲಿ ಇಬ್ಬರು ಗಾಯಗೊಂಡರು. ಆದರೆ, ವಿವೇಕ್ ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಸಾವನ್ನಪ್ಪಿದರು.

  ಘಟನೆ ಸಂಬಂಧ ಫೈಟ್ ಮಾಸ್ಟರ್ ವಿನೋದ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದು ನನ್ನ ಅರಿವಿಗೆ ಬಂದಿರಲಿಲ್ಲ. ಗೊತ್ತಿದ್ದರೆ, ಖಂಡಿತಾ ಆ ರಿಸ್ಕ್ ಶಾಟ್ಗೆ ಒಪ್ಪುತ್ತಿರಲಿಲ್ಲ. ಮೃತ ವಿವೇಕ್ ಅವರಿಗೆ ನ್ಯಾಯ ಸಿಗುವವರೆಗೂ ಶೂಟಿಂಗ್ಗೆ ಹೋಗಲ್ಲ ಎಂದಿದ್ದಾರೆ ನಟ ಅಜೇಯ್ ರಾವ್.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery