` head bush, - chitraloka.com | Kannada Movie News, Reviews | Image

head bush,

 • Payal Rajput Selected As The Heroine For Dhananjay's 'Head Bush'

  Payal Rajput Selected As The Heroine For Dhananjay's 'Head Bush'

  Actress Payal Rajput who has acted in Hindi, Punjabi, Telugu and Tamil films is all set to make her debut in Kannada through Dhananjay starrer 'Head Bush' which is all set to be launched on Monday in Bangalore.

  'Head Bush' which is based on the life of former Bangalore don M P Jayaraj was supposed to have launched last year. Due to lockdown the project got postponed various times and is now finally being launched. Ashu Bedra who was supposed to produce the film originally has walked out of the film and now Dhananjay along with Somanna is producing the film.

  Agni Sreedhar who is famous for his underworld films has written the story, screenplay and dialogues for the film. Debutante Shoonya will be directing the film. 'Head Bush' is a PAN Indian film to be released in Kannada, Telugu, Tamil, Hindi and Malayalam continuously. 

 • ಅಕ್ಟೋಬರ್‍ಗೆ ಬರ್ತಾನೆ ಡಾನ್ ಡಾಲಿ

  ಅಕ್ಟೋಬರ್‍ಗೆ ಬರ್ತಾನೆ ಡಾನ್ ಡಾಲಿ

  ಡಾಲಿ ಧನಂಜಯ್ ಮತ್ತೊಮ್ಮೆ ತೆರೆ ಮೇಲೆ ಅಬ್ಬರಿಸೋಕೆ ರೆಡಿಯಾಗ್ತಿದ್ದಾರೆ. ಒಂದರ ಹಿಂದೊಂದು ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಡಾಲಿ, ಡಾನ್ ಜಯರಾಜ್ ಆಗಿ ನಟಿಸಿರೋ ಸಿನಿಮಾ ಹೆಡ್ ಬುಷ್. ಸೋಮಣ್ಣ ಟಾಕಿಸ್ ಬ್ಯಾನರ್‍ನಲ್ಲಿ ಬರುತ್ತಿರೋ ಚಿತ್ರದಲ್ಲಿ ಡಾಲಿ ಒಬ್ಬರೇ ಅಲ್ಲ, ಯೋಗಿ, ವಸಿಷ್ಠ ಸಿಂಹ, ದೇವರಾಜ್, ಪಾಯಲ್ ರಜಪೂತ್, ರಘು ಮುಖರ್ಜಿ, ಶೃತಿ ಹರಿಹರನ್ ಸೇರಿದಂತೆ ಬೃಹತ್ ತಾರಾಗಣವೇ ಇದೆ. ವಿ.ರವಿಚಂದ್ರನ್ ಚಿತ್ರದಲ್ಲಿ ಪುಟ್ಟ ಪಾತ್ರವೊಂದರಲ್ಲಿ ನಟಿಸುತ್ತಿರುವುದು ಚಿತ್ರದ ತೂಕವನ್ನು ಹೆಚ್ಚಿಸಿದೆ. ಶೂನ್ಯ ನಿರ್ದೇಶನದ ಚಿತ್ರಕ್ಕೆ ಡಾಲಿ ಧನಂಜಯ್ ನಿರ್ಮಾಪಕರೂ ಹೌದು.

  ಸಿನಿಮ ಅಕ್ಟೋಬರ್ 21ರಂದು ಥಿಯೇಟರ್‍ಗೆ ಬರೋದಾಗಿ ಘೋಷಿಸಿದೆ. ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ ಬರೆದಿರುವುದು ಅಗ್ನಿ ಶ್ರೀಧರ್. ಅಂದಹಾಗೆ ಅದು ದೀಪಾವಳಿ ಸಮಯ. ಸ್ಸೋ.. ಪಟಾಕಿ ಹೊಡೆಯೋಕೆ ರೆಡಿಯಾಗಿ..

 • ಅಗ್ನಿ ಶ್ರೀಧರ್ ಕಥೆ ಎಂದಾಕ್ಷಣ ಓಕೆ ಎಂದರಂತೆ ಶೃತಿ ಹರಿಹರನ್..!

  ಅಗ್ನಿ ಶ್ರೀಧರ್ ಕಥೆ ಎಂದಾಕ್ಷಣ ಓಕೆ ಎಂದರಂತೆ ಶೃತಿ ಹರಿಹರನ್..!

  ಡಾಲಿ ಧನಂಜಯ್ ಮತ್ತು ಶೃತಿ ಹರಿಹರನ್ ಜೋಡಿ ಎಂದರೆ ಥಟ್ಟನೆ ನೆನಪಾಗುವ ಸಿನಿಮಾ ರಾಟೆ. ಆ ಜೋಡಿ ಈಗ ಮತ್ತೊಮ್ಮೆ ಒಂದಾಗುತ್ತಿದೆ. ಅದು ಹೆಡ್ ಬುಷ್ ಚಿತ್ರದಲ್ಲಿ. ಸ್ವತಃ ಡಾಲಿ ಧನಂಜಯ್ ನಿರ್ಮಾಣ ಮಾಡ್ತಿರೋ ಚಿತ್ರವಿದು. ಹೀಗಾಗಿ ಚಿತ್ರದ ಮೇಲೆ ಭಾರಿ ನಿರೀಕ್ಷೆಗಳಿವೆ.

  ಈ ಚಿತ್ರವನ್ನು ಒಪ್ಪಿಕೊಳ್ಳೋಕೆ ಮೊದಲನೇ ಕಾರಣವೇ ಅಗ್ನಿ ಶ್ರೀಧರ್ ಕಥೆ ಅನ್ನೋದು. ನಮ್ಮ ನಡುವೆ ಇರೋ ಒಳ್ಳೆಯ ಕಥೆಗಾರ ಅಗ್ನಿ ಶ್ರೀಧರ್. ಇನ್ನು ತಂಡದಲ್ಲಿರೋ ಎಲ್ಲರೂ ನನಗೆ ಒಳ್ಳೆ ಫ್ರೆಂಡ್ಸ್ ಕೂಡಾ. ಕಥೆ ಚೆನ್ನಾಗಿದೆ. ನಮ್ಮ ನಡುವೆಯೇ ಬದುಕಿರುವವರ ಪಾತ್ರವನ್ನು ಮಾಡೋದು ದೊಡ್ಡ ಸವಾಲು ಎಂದಿದ್ದಾರೆ ಶೃತಿ ಹರಿಹರನ್. ಅಂದಹಾಗೆ ಇದು ಬೆಂಗಳೂರಿನ ಒಂದು ಕಾಲದ ಡಾನ್ ಎಂಪಿ ಜೈರಾಜ್ ಬಯೋಪಿಕ್.

  ಈಗಾಗಲೇ ಹೆಡ್ ಬುಷ್ ಸಿನಿಮಾ ದೊಡ್ಡ ದೊಡ್ಡವರಿಂದ ತುಂಬಿ ತುಳುಕುತ್ತಿದೆ. ಧನಂಜಯ್, ವಸಿಷ್ಠ ಸಿಂಹ, ಪ್ರಕಾಶ್ ಬೆಳವಾಡಿ, ಪಾಯಲ್ ರಜಪೂತ್ ಜೊತೆಗೆ ಈಗ ಶೃತಿ ಹರಿಹರನ್ ಕೂಡಾ ಸೇರಿದ್ದಾಗಿದೆ.

 • ಡಾನ್ ಡಾಲಿ ಪರ ಜಯರಾಜ್ ಸೋದರಿ.. ವಿರುದ್ಧ ಸೊಸೆ : ಹೆಡ್ ಬುಷ್ ಜೂಟಾಟ

  ಡಾನ್ ಡಾಲಿ ಪರ ಜಯರಾಜ್ ಸೋದರಿ.. ವಿರುದ್ಧ ಸೊಸೆ : ಹೆಡ್ ಬುಷ್ ಜೂಟಾಟ

  ಡಾಲಿ ಧನಂಜಯ್ ನಟಿಸಿ ನಿರ್ಮಿಸುತ್ತಿರುವ ಸಿನಿಮಾ ಹೆಡ್ ಬುಷ್. ಇದು ಅಂಡರ್‍ವಲ್ರ್ಡ್ ಕಥೆಯಾಗಿದ್ದು ಡಾನ್ ಜಯರಾಜನ ಪಾತ್ರದಲ್ಲಿ ಡಾಲಿ ನಟಿಸಿದ್ದಾರೆ. ಇತ್ತೀಚೆಗೆ ಡಾಲಿ ಧನಂಜಯ್ ಡಾನ್ ಜಯರಾಜ್ ಗೆಟಪ್ಪಿನಲ್ಲಿ ದುಬೈಗೆ ಹೊರಡುವ ದೃಶ್ಯದ ಪುಟ್ಟದೊಂದು ವಿಡಿಯೋ ಹಾಕಿದ್ದರು. ಡಾನ್ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿರುವ ಧನಂಜಯ್ ಬಗ್ಗೆ ಫ್ಯಾನ್ಸ್ ಥ್ರಿಲ್ಲಾದರೆ.. ಜಯರಾಜನ ಫ್ಯಾಮಿಲಿಯಲ್ಲಿ ಪರ ವಿರೋಧ ಮಾತುಗಳು ಶುರುವಾಗಿವೆ.

  ಚಿತ್ರ ಶುರುವಾದಾಗ ಚಿತ್ರದ ಬಗ್ಗೆ ಪಾಸಿಟಿವ್ ಆಗಿಯೇ ಇದ್ದರು ಎನ್ನಲಾಗಿದ್ದ ಜಯರಾಜ್ ಪುತ್ರ ಅಜಿತ್ ಚಿತ್ರವನ್ನು ವಿರೋಧಿಸಿದ್ದರು. ಈಗ ಈ ವಿಡಿಯೋ ರಿಲೀಸ್ ಆದ ಮೇಲೆ ಜಯರಾಜ್ ಸೊಸೆ ಅಂದ್ರೆ ಅಜಿತ್ ಅವರ ಪತ್ನಿ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

  ರಾಜ ಯಾವಾಗಲೂ ರಾಜನಾಗಿಯೇ ಇರುತ್ತಾನೆ. ಕೆಲವರು ನಿಮ್ಮ ರೀತಿ ಆಗಲು ಹೋಗಿ ಸೋಲುತ್ತಾರೆ. ನಿಮ್ಮ ಅಜಿತ್ ನಿಮ್ಮನ್ನು ಎಂದಿಗೂ ಸೋಲೋಕೆ ಬಿಡೋದಿಲ್ಲ ಎಂಬ ಸ್ಟೇಟಸ್ ಹಾಕಿದ್ದಾರೆ ಇಂಪನಾ ಅಜಿತ್. ಇಂಪನಾ ಜಯರಾಜ್ ಅವರ ಮಗ ಅಜಿತ್ ಅವರ ಪತ್ನಿ.

  ಆದರೆ.. ಅಜಿತ್ ಅವರ ಸೋದರಿ ಹೇಮಾವತಿ ಹೇಳೋದೇ ಬೇರೆ. ಹೆಡ್ ಬುಷ್ ಮಾಡುತ್ತಿರುವವರು ನನ್ನ ಸೋದರರು. ನನ್ನ ಅಣ್ಣನ ವ್ಯಕ್ತಿತ್ವ ಹೇಳುವುದು ನನ್ನ ಸೋದರರು. ಚಿತ್ರ ತಂಡಕ್ಕೆ ಒಳ್ಳೆಯದಾಗಲಿ ಎಂದಿದ್ದಾರೆ ಹೇಮಾವತಿ.

  ಅಂದಹಾಗೆ ಚಿತ್ರವನ್ನು ಡಾಲಿ ಧನಂಜಯ್ ಅವರೇ ನಿರ್ಮಿಸುತ್ತಿದ್ದಾರೆ. ಡಾಲಿ ಜೊತೆಗೆ ವಸಿಷ್ಠ ಸಿಂಹ, ಲೂಸ್ ಮಾದ ಯೋಗಿ, ದೇವರಾಜ್, ರಘು ಮುಖರ್ಜಿ.. ಅಲ್ಲದೆ ಅತಿಥಿ ನಟರಾಗಿ ವಿ.ರವಿಚಂದ್ರನ್ ನಟಿಸುತ್ತಿದ್ದಾರೆ. ಅಗ್ನಿ ಶ್ರೀಧರ್ ಕಥೆ-ಚಿತ್ರಕಥೆ ಬರೆದಿದ್ದು ಶೂನ್ಯ ಡೈರೆಕ್ಟರ್. ಅಕ್ಟೋಬರ್ 21ಕ್ಕೆ ಸಿನಿಮಾ ರಿಲೀಸ್ ಆಗಲಿದೆ

 • ಡಾಲಿ ವಿರುದ್ಧ ದೂರು. ಹಿಂದೆ ಇರೋದು ಯಾರು?

  ಡಾಲಿ ವಿರುದ್ಧ ದೂರು. ಹಿಂದೆ ಇರೋದು ಯಾರು?

  ಹೆಡ್ ಬುಷ್. ಇದು ಡಾಲಿ ಧನಂಜಯ್ ನಿರ್ಮಾಪಕರಾಗಿರೋ ಇನ್ನೊಂದು ಸಿನಿಮಾ. ಈಗಾಗಲೇ ಶೂಟಿಂಗ್ ಕೂಡಾ ಮುಗಿದಿದೆ. ಡಾಲಿ ಜೊತೆ ಚಿತ್ರದಲ್ಲಿ ಘಟಾನುಘಟಿಗಳೇ ನಟಿಸಿದ್ದಾರೆ. 5 ಭಾಷೆಗಳಲ್ಲಿ ಬರುತ್ತಿರೋ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ಬರೆದಿರೋದು ಒಂದಾನೊಂದು ಕಾಲದಲ್ಲಿ ಡಾನ್ ಎಂ.ಪಿ. ಜಯರಾಜ್ ಲೈಫ್‍ನ್ನು ಹತ್ತಿರದಿಂದ ನೋಡಿರೋ ಅಗ್ನಿ ಶ್ರೀಧರ್. ಡಾಲಿ ಚಿತ್ರದಲ್ಲಿ ಎಂ.ಪಿ.ಜಯರಾಜ್ ಪಾತ್ರ ಮಾಡುತ್ತಿದ್ದಾರೆ. ಶೂನ್ಯ ಚಿತ್ರದ ಡೈರೆಕ್ಟರ್. ಕ್ರೇಜಿ ಸ್ಟಾರ್ ರವಿಚಂದ್ರನ್, ಲೂಸ್ ಮಾದ ಯೋಗಿ, ವಸಿಷ್ಠ ಸಿಂಹ, ರಘು ಮುಖರ್ಜಿ, ಪಾಯಲ್ ರಹ್ತೋಗಿ ಸೇರಿದಂತೆ ಹಲವರು ನಟಿಸಿರೋ ಚಿತ್ರದ ವಿರುದ್ಧ ಈಗ ಫಿಲಂ ಚೇಂಬರ್`ಗೆ ದೂರು ಹೋಗಿದೆ. ದೂರು ನೀಡಿರೋದು ಜಯರಾಜ್ ಪುತ್ರ ಅಜಿತ್.

  ನನ್ನ ತಂದೆಯ ಬಯೋಪಿಕ್ ಮಾಡುವಾಗ ಮಾಡುವಾಗ ನನ್ನ ಅನುಮತಿ ತೆಗೆದುಕೊಂಡಿಲ್ಲ. ಅವರಿಗೆ ಬೇಕಾದಂತೆ ಕಥೆ ಮಾಡಿಕೊಂಡಿದ್ದಾರೆ. ಸಿನಿಮಾ ಶುರುವಾದ ಕೂಡಲೇ ಚಿತ್ರತಂಡದವರನ್ನು ಕಾಂಟ್ಯಾಕ್ಟ್ ಮಾಡೋಕೆ ಪ್ರಯತ್ನ ಪಟ್ಟೆ. ಆಗಲಿಲ್ಲ. ಈಗ ರಿಲೀಸ್ ಆಗಿರುವ ಟ್ರೇಲರಿನಲ್ಲಿ ನನ್ನ ತಂದೆಯನ್ನು ಕೆಟ್ಟದಾಗಿ ಬಿಂಬಿಸಲಾಗಿದೆ. ನನ್ನ ಅಪ್ಪನ ಎದುರು ನಿಂತು ಮಾತನಾಡೋಕೂ ಹೆದರುತ್ತಿದ್ದವರು ಈಗ ಅವನು.. ಇವನು ಅಂತೆಲ್ಲ ಮಾತನಾಡುತ್ತಿದ್ದಾರೆ. ವೈಯಕ್ತಿಕವಾಗಿ ನನಗೆ ನೋವಾಗಿದೆ. ಚಿತ್ರದ ಬಿಡುಗಡೆಗೆ ಅವಕಾಶ ಕೊಡಬಾರದು ಎನ್ನುವುದು ಅಜಿತ್ ಜಯರಾಜ್ ವಾದ. ಆದರೆ ವಿವಾದಗಳು ಬೆಳೆದು ಬಂದ ಹಾದಿ ನೋಡಿದರೆ ಹಲವು ಪ್ರಶ್ನೆಗಳೇಳುತ್ತವೆ. ಡಾಲಿ ಧನಂಜಯ್ ಕೂಡಾ ಅದೇ ಮಾತು ಕೇಳ್ತಾರೆ. ಡಾಲಿ ಪ್ರಕಾರ..

  ``ಸಿನಿಮಾ ಸೆಟ್ಟೇರುವುದು ಎಲ್ಲರಿಗೂ ಗೊತ್ತಿತ್ತು. ಹೆಡ್ ಬುಷ್ ಶುರುವಾದಾಗ ಅಜಿತ್ ಕೂಡಾ ವಿಷ್ ಮಾಡಿದ್ದರು. ಆದರೆ ಈಗ ವಿವಾದ ಮಾಡುತ್ತಿದ್ದಾರೆ. ನನಗೆ ಅಜಿತ್ ಒಳ್ಳೆಯ ಫ್ರೆಂಡ್. ಅವರ ಒಂದು ಚಿತ್ರಕ್ಕೆ ನಾನು ವಾಯ್ಸ್ ಕೊಟ್ಟಿದ್ದೇನೆ. ಸಿನಿಮಾ ಶುರುವಾದಾಗ ಜೊತೆಯಲ್ಲಿದ್ದು ಈಗ ಕುಂಭಳಕಾಯಿ ಒಡೆದ ಮೇಲೆ ತಗಾದೆ ತೆಗೆದಿದ್ದಾರೆ. ಚಿತ್ರಕ್ಕೆ ಕಥೆ ಬರೆದಿರೋದು ಅಗ್ನಿ ಶ್ರೀಧರ್. ಅವರ ಬಳಿ ನಾನು ಹಕ್ಕು ಖರೀದಿಸಿದ್ದೇನೆ. ಒಬ್ಬ ನಿರ್ಮಾಪಕನಾಗಿ ಚಿತ್ರಕ್ಕೆ ಹಣ ಮತ್ತು ಶ್ರಮ ಹಾಕಿದ್ದೇನೆ. ಈ ಹಂತದಲ್ಲಿ ಚಿತ್ರದ ಬಿಡುಗಡೆ ಮಾಡಬಾರದು ಎಂದು ದೂರು ಕೊಡೋದರ ಹಿಂದೆ ಬೇರೆ ಯಾರೋ ಇದ್ದಾರೆ''

  ಹೌದು ಎನ್ನಿಸೋಕೆ ಕಾರಣಗಳೂ ಇವೆ.

  ಅಜಿತ್ ಮಾತಿನಲ್ಲಿ ಟ್ರೇಲರಿನಲ್ಲಿ ಜಯರಾಜ್ ಅವರನ್ನು ಕೆಟ್ಟದಾಗಿ ತೋರಿಸಿದ್ದಾರೆ ಎನ್ನುತ್ತಾರೆ. ಆದರೆ, ಹೆಡ್ ಬುಷ್ ಟ್ರೇಲರ್ ಇನ್ನೂ ರಿಲೀಸ್ ಆಗಿಲ್ಲ.

  ದೈವಾಂಶ ಸಂಭೂತನಂತೆ ಜಯರಾಜ್`ನನ್ನ ತೋರಿಸೋಕೆ ಆತನೇನು ದೈವಾಂಶ ಸಂಭೂತ ವ್ಯಕ್ತಿಯಲ್ಲ. ರೌಡಿಯಾಗಿದ್ದವನು. ಕ್ರಿಮಿನಲ್ ಹಿಸ್ಟರಿ ಇದೆ.

  ವೈಯಕ್ತಿಕವಾಗಿ ಸ್ನೇಹಿತರಾಗಿದ್ದೂ ಡಾಲಿ ಧನಂಜಯ್ ಜೊತೆ ಮಾತನಾಡದೆ, ಅವರ ವಿರುದ್ಧ ನೇರವಾಗಿ ಚೇಂಬರ್`ಗೆ ಬಂದು ದೂರು ಕೊಟ್ಟಿದ್ದು ಯಾಕೆ ಅನ್ನೋ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.

  ಸದ್ಯಕ್ಕೆ ಹೆಡ್ ಬುಷ್ ಚಿತ್ರಕ್ಕೆ ವಿವಾದವೊಂದು ಸುತ್ತಿಕೊಂಡಿದೆ. ಬೇಗ ಬಗೆಹರಿಯಲಿ.

 • ಶೂಟಿಂಗ್ ಮುಗಿಸಿದ ಹೆಡ್ ಬುಷ್

  ಶೂಟಿಂಗ್ ಮುಗಿಸಿದ ಹೆಡ್ ಬುಷ್

  ಭೂಗತ ಪಾತಕಿ ಎಂ.ಪಿ.ಜಯರಾಜ್ ಲೈಫ್ ಸ್ಟೋರಿ ಆಧರಿಸಿ ನಿರ್ಮಾಣವಾಗುತ್ತಿರೋ ಚಿತ್ರ ಹೆಡ್ ಬುಷ್. 1970ರ ದಶಕದ ಭೂಗತ ಜಗತ್ತನ್ನು, ಭೂಗತ ಜಗತ್ತಿನಲ್ಲೇ ಇದ್ದ ಅಗ್ನಿ ಶ್ರೀಧರ್ ಅಗ್ನಿ ಶ್ರೀಧರ್ ಕಥೆ ಚಿತ್ರಕಥೆ ಸಂಭಾಷಣೆ ಮೂಲಕ ತೋರಿಸಿದ್ದರೆ ಶೂನ್ಯ ಈ ಚಿತ್ರದ ಡೈರೆಕ್ಟರ್. ಚಿತ್ರಕ್ಕೆ ಹೀರೋ ಡಾಲಿ ಧನಂಜಯ್. ನಿರ್ಮಾಪಕರೂ ಅವರೇ.

  ಡಾಲಿ ಜೊತೆ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ಲೂಸ್ ಮಾದ ಯೋಗಿ, ವಸಿಷ್ಠ ಸಿಂಹ, ದೇವರಾಜ್, ಶೃತಿ ಹರಿಹರನ್, ಪಾಯಲ್ ರಜಪೂತ್, ರಘು ಮುಖರ್ಜಿ, ಬಾಲು ನಾಗೇಂದ್ರ ಸೇರಿದಂತೆ ಘಟಾನುಘಟಿಗಳೇ ನಟಿಸುತ್ತಿದ್ದಾರೆ. ಚಿತ್ರದ ಶೂಟಿಂಗ್ ಬೆಂಗಳೂರಿನ ಸೆಟ್‍ಗಳಲ್ಲೇ ಬಹುತೇಕ ನಡೆದಿದ್ದು, ಈಗ ಚಿತ್ರೀಕರಣ ಮುಕ್ತಾಯವಾಗಿದೆ.

  ನಿರ್ಮಾಣದಲ್ಲಿ ಡಾಲಿ ಜೊತೆ ರಾಮ್ಕೊ ಸೋಮಣ್ಣ ಕೂಡಾ ಕೈಜೋಡಿಸಿದ್ದಾರೆ. ಚಿತ್ರದ ನಿರ್ದೇಶಕರ ಹೆಸರು ಸ್ವಲ್ಪ ವಿಭಿನ್ನವಾಗಿದೆ. ಶೂನ್ಯ. ಅವರು ಫಿಲಂ ಮೇಕಿಂಗ್‍ನಲ್ಲಿ ಡಬಲ್ ಡಿಗ್ರಿ ಪಡೆದಿದ್ದು, ರಕ್ಷಿತ್ ಶೆಟ್ಟಿ ಜೊತೆ ಕೆಲಸ ಮಡಿದ ಅನುಭವವಿದೆ.

 • ಶ್ರೀಮಂತ ರಾಸ್ಕಲ್`ನ ಹೆಡ್ ಬುಷ್'ನಲ್ಲಿ ವಸಿಷ್ಠ ಸಿಂಹ ಪಾತ್ರವೇನು?

  ಶ್ರೀಮಂತ ರಾಸ್ಕಲ್`ನ ಹೆಡ್ ಬುಷ್'ನಲ್ಲಿ ವಸಿಷ್ಠ ಸಿಂಹ ಪಾತ್ರವೇನು?

  ಬಡವ ರಾಸ್ಕಲ್ ಚಿತ್ರದ ಸಕ್ಸಸ್ ನಂತರ ನಿರ್ಮಾಪಕರಾಗಿಯೂ ಗೆದ್ದ ಡಾಲಿ ಧನಂಜಯ್ ಅವರಿಗೆ ನಟ ಹಾಗೂ ಗೆಳೆಯ ವಸಿಷ್ಠ ಸಿಂಹ ರ್ಶರೀಮಂತ ರಾಸ್ಕಲ್ ಅನ್ನೋ ಬಿರುದು ಕೊಟ್ಟಿದ್ದಾರೆ. ಇದೆಲ್ಲ ಆಗಿದ್ದು ಹೆಡ್ ಬುಷ್ ಚಿತ್ರದ ಬಗ್ಗೆ ಮಾಹಿತಿ ನೀಡುವ ಸಂದರ್ಭದಲ್ಲಿ.

  ಬಡವ ರಾಸ್ಕಲ್ ಚಿತ್ರದಲ್ಲೇ ವಸಿಷ್ಠ ಅತಿಥಿಯಾಗಿ ಬರಬೇಕಿತ್ತು. ಆಗಲಿಲ್ಲ. ನನ್ನ ಮುಂದಿನ ಸಿನಿಮಾ ಹೆಡ್ ಬುಷ್‍ನಲ್ಲಿ ರೌಡಿ ಜಯರಾಜ್ ಆಗುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ ನಿರ್ಮಾಪಕ ಡಾಲಿ ಧನಂಜಯ್.

  ಧನಂಜಯ್`ಗೆ ಇದು 10 ವರ್ಷಗಲ ಸ್ಟ್ರಗಲ್‍ಗೆ ಸಿಕ್ಕ ಗೆಲುವು. ಅವನೀಗ ಶ್ರೀಮಂತ ರಾಸ್ಕಲ್ ಆಗಿದ್ದಾನೆ. ನಮ್ಮ ನಿರ್ಮಾಪಕರೇ ಹೇಳಿರೋದ್ರಿಂದ ನಾನೂ ಹೇಳಬಹುದು. ನನ್ನದು ರೌಡಿ ಜಯರಾಜ್ ಪಾತ್ರ ಎಂದಿದ್ದಾರೆ ವಸಿಷ್ಠ ಸಿಂಹ.

  ಚಿತ್ರಕ್ಕೆ ಅಗ್ನಿ ಶ್ರೀಧರ್ ಕಥೆ ಚಿತ್ರಕಥೆ ಅಗ್ನಿ ಶ್ರೀಧರ್ ಅವರದ್ದು. ಶೂನ್ಯ ನಿರ್ದೇಶಿಸುತ್ತಿರೋ ಚಿತ್ರದಲ್ಲಿ ರವಿಚಂದ್ರನ್, ಲೂಸ್ ಮಾದ ಯೋಗಿ, ಶೃತಿ ಹರಿಹರನ್, ರಘು ಮುಖರ್ಜಿ ಸೇರಿದಂತೆ ಬೃಹತ್ ತಾರಾಗಣವಿದೆ.