` bairagi, - chitraloka.com | Kannada Movie News, Reviews | Image

bairagi,

  • ಜೇಮ್ಸ್ ಜೊತೆ ಬೈರಾಗಿ

    ಜೇಮ್ಸ್ ಜೊತೆ ಬೈರಾಗಿ

    ಜೇಮ್ಸ್ ನಾಳೆ ರಿಲೀಸ್. ಇದೇ ಮೊದಲ ಬಾರಿಗೆ ಅಪ್ಪು ಪಾತ್ರಕ್ಕೆ ಶಿವಣ್ಣ ಡಬ್ ಮಾಡಿದ್ದಾರೆ. ಇದರ ಜೊತೆ ಅಭಿಮಾನಿಗಳಿಗೆ ಇನ್ನೂ ಒಂದು ಥ್ರಿಲ್ ಇದೆ. ನಾಳೆ ಥಿಯೇಟರಿನಲ್ಲಿ ಜೇಮ್ಸ್ ಜೊತೆ ಶಿವಣ್ಣ ಅಭಿನಯದ ಬೈರಾಗಿ ಚಿತ್ರದ ಟೀಸರ್ ಕೂಡಾ ರಿಲೀಸ್ ಆಗುತ್ತಿದೆ.

    ವಿಜಯ್ ಮಿಲ್ಟನ್ ನಿರ್ದೇಶನದ ಚಿತ್ರ ಬೈರಾಗಿ. ಶಿವಣ್ಣರನ್ನು ಹುಲಿವೇಷದಲ್ಲಿ ತೋರಿಸಿ ವ್ಹಾವ್ ಎನಿಸಿಕೊಂಡಿತ್ತು ಬೈರಾಗಿ ಟೀಂ. ಶಿವಣ್ಣ ಜೊತೆ ಡಾಲಿ ಧನಂಜಯ್, ಪೃಥ್ವಿ ಅಂಬರ್, ಶಶಿಕುಮಾರ್ ಕೂಡಾ ನಟಿಸುತ್ತಿದ್ದು, ಅಂಜಲಿ ನಾಯಕಿ. ಕೃಷ್ಣ ಸಾರ್ಥಕ್ ನಿರ್ಮಾಣದ ಬೈರಾಗಿ, ಕಿಶೋರ್ ಪತ್ತಿಕೊಂಡ ನಿರ್ಮಾಣದ ಜೇಮ್ಸ್ ಚಿತ್ರದ ಜೊತೆ ಜೊತೆಯಲ್ಲೇ ಬರುತ್ತಿರೋದು ವಿಶೇಷ. 

  • ಟೈಟಲ್ ಬೈರಾಗಿ.. ಲುಕ್ಕು ಸಖತ್ ಸ್ಟೈಲಿಶ್..

    ಟೈಟಲ್ ಬೈರಾಗಿ.. ಲುಕ್ಕು ಸಖತ್ ಸ್ಟೈಲಿಶ್..

    ಲುಕ್ ನೋಡಿದರೆ ಸಖತ್ ಸ್ಟೈಲಿಶ್. ಮಿರಮಿರ ಮಿಂಚುವ ಡ್ರೆಸ್.. ಎದೆ ಕಾಣಿಸುವ ಲುಕ್ಕು.. ಗಾಗಲ್ಸ್.. ಟೈಟಲ್ ಮಾತ್ರ ಬೈರಾಗಿ..

    ಇದು ಶಿವರಾಜ್ ಕುಮಾರ್ ಅಭಿನಯದ 123ನೇ ಸಿನಿಮಾ ಬೈರಾಗಿ ಚಿತ್ರದ ಕಥೆ. ಚಿತ್ರದ ಚಿತ್ರೀಕರಣ ಅಂತಿಮ ಹಂತಕ್ಕೆ ತಲುಪಿದೆ. ಈಗಾಗಲೇ 100 ದಿನಗಳ ಶೂಟಿಂಗ್ ಮುಗಿಸಿದೆ ಬೈರಾಗಿ ಟೀಂ.

    ವಿಜಯ್ ಮಿಲ್ಟನ್ ನಿರ್ದೇಶನದ ಚಿತ್ರದಲ್ಲಿ ಟಗರು ಜೋಡಿ ಶಿವಣ್ಣ ಮತ್ತು ಡಾಲಿ ಧನಂಜಯ್ ಮತ್ತೊಮ್ಮೆ ಒಟ್ಟಾಗಿದ್ದಾರೆ. ಅಂಜಲಿ ನಾಯಕಿಯಾಗಿದ್ದು, ದಿಯಾ ಖ್ಯಾತಿಯ ಪೃಥ್ವಿ ಅಂಬಾರ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಕೃಷ್ಣ ಸಾರ್ಥಕ್ ನಿರ್ಮಾಣದ ಬೈರಾಗಿ ಸಿನಿಮಾ ಟೈಟಲ್ಲಿಗೆ ವಿರುದ್ಧ ಲುಕ್ ತೋರಿಸಿಯೇ ಕುತೂಹಲ ಹುಟ್ಟಿಸಿದೆ.

  • ತುಳು ಇಂಡಸ್ಟ್ರಿಯ ಕ್ರಷ್ ಕಂಡಂತೆ ಬೈರಾಗಿ

    ತುಳು ಇಂಡಸ್ಟ್ರಿಯ ಕ್ರಷ್ ಕಂಡಂತೆ ಬೈರಾಗಿ

    ಬೈರಾಗಿ. ಜುಲೈನಲ್ಲಿ ರಿಲೀಸ್ ಆಗುತ್ತಿರೋ ಚಿತ್ರವಿದು. ಶಿವಣ್ಣ, ಡಾಲಿ ಧನಂಜಯ್ ಕಾಂಬಿನೇಷನ್ ಸಿನಿಮಾದಲ್ಲಿ ಅಂಜಲಿ, ಯಶಾ ಶಿವಕುಮಾರ್, ಪೃಥ್ವಿ ಅಂಬರ್ ಮೊದಲಾದವರು ನಟಿಸಿದ್ದಾರೆ. ಅಂದಹಾಗೆ ತುಳು ಇಂಡಸ್ಟ್ರಿಯ ಕ್ರಷ್ ಇವರೇ... ಯಶಾ ಶಿವಕುಮಾರ್.

    ಅದು ನನಗೆ ಸಿಕ್ಕ ಅತಿ ದೊಡ್ಡ ಕಾಂಪ್ಲಿಮೆಂಟ್ ಎನ್ನುವ ಯಶಾ ಶಿವಕುಮಾರ್ ಈಗ ಕನ್ನಡದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿಬಿಟ್ಟಿದ್ದಾರೆ. ಏಕೆಂದರೆ ಅವರ ಕೈಲೀಗ ಒಂದಲ್ಲ.. ಎರಡಲ್ಲ.. 8 ಸಿನಿಮಾಗಳಿವೆ. ಪದವಿಪೂರ್ವ, ಮಾನ್ಸೂನ್ ರಾಗ, ಗಾನ.. ಇತ್ಯಾದಿ.. ಅವುಗಳಲ್ಲಿ ರಿಲೀಸ್ ಆಗುತ್ತಿರುವ ಮೊದಲ ಸಿನಿಮಾ ಬೈರಾಗಿ.

    ಮೊದಲ ಚಿತ್ರದಲ್ಲೇ ನನಗೆ ಧನಂಜಯ್ ಮತ್ತು ಶಿವಣ್ಣ ಜೊತೆ ನಟಿಸೋ ಅವಕಾಶ ಸಿಕ್ಕಿತು. ಧನಂಜಯ್ ನಮಗೆ ಒಂದು ಕಂಫರ್ಟ್ ಕ್ರಿಯೇಟ್ ಮಾಡುತ್ತಾರೆ. ಶಿವಣ್ಣ ಅವರಂತೂ ನಾನು ತಡವರಿಸಿದಾಗಲೆಲ್ಲ ನನ್ನ ಪಾತ್ರವನ್ನು ಅಭಿನಯಿಸಿ ತೋರಿಸೋರು ಎಂದು ಖುಷಿಯಾಗಿ ಹೇಳಿಕೊಂಡಿದ್ದಾರೆ ಯಶಾ ಶಿವಕುಮಾರ್.

  • ನಖರನಖ ನಖರನಖ ನುಗ್ಗಿ ಬಂತೋ.. ಬೈರಾಗಿ ಹಾಡು..

    ನಖರನಖ ನಖರನಖ ನುಗ್ಗಿ ಬಂತೋ.. ಬೈರಾಗಿ ಹಾಡು..

    ಬೇರೆಯದೇ ರಿದಮ್ಮಿನಲ್ಲಿರೋ ಹಾಡು ನಖರನಖ ನಖರನಖ ನುಗ್ಗಿ ಬಂತೋ ನಾಡ ಹುಲಿ.. ಮಧ್ಯೆ ಮಧ್ಯೆ ಶಿವಪ್ಪ ಕಾಯೋ ತಂದೆ.. ಹಾಡು ನೆನಪಿಸುತ್ತೆ. ಇಡೀ ಟ್ರ್ಯಾಕ್ ಟಗರು ಟೈಟಲ್ ಟ್ರ್ಯಾಕ್ ನೆನಪಿಸುತ್ತೆ. ಆದರೆ ಬೇರೆಯದೇ ಫ್ಲೇವರ್ ಇದೆ.. ಹಾಡಿನಲ್ಲಿ ಶಿವಣ್ಣರ ಬೇರೆ ಬೇರೆ ಗೆಟಪ್ಪುಗಳು ಖುಷಿ ಕೊಡ್ತವೆ.

    ಶಿವಣ್ಣ ಅಭಿನಯದ 123ನೇ ಸಿನಿಮಾ ಬೈರಾಗಿಗೆ ವಿಜಯ್ ಮೆಲ್ಟನ್ ನಿರ್ದೇಶನದಿದೆ. ಅನೂಪ್ ಸಿಳೀನ್ ಸಂಗೀತದ ಹಾಡಿಗೆ ಸಾಹಿತ್ಯ ಒದಗಿಸಿರುವುದು ಡಾ. ವಿ.ನಾಗೇಂದ್ರ ಪ್ರಸಾದ್. ಅಂಥೋನಿ ದಾಸನ್ ಅವರ ಕಂಚಿನ ಕಂಠದಲ್ಲಿ ಬಂದಿರೋ ಹಾಡು ಕುಣಿಸೋ ಹಾಗಿದೆ.

    ಟಗರು ನಂತರ ಶಿವಣ್ಣ ಮತ್ತು ಡಾಲಿ ಒಟ್ಟಿಗೇ ನಟಿಸುತ್ತಿರೋ ಚಿತ್ರವಿದು. ಅಂಜಲಿ ನಾಯಕಿಯಾಗಿರೋ ಚಿತ್ರದಲ್ಲಿ ಅನು ಪ್ರಭಾಕರ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಇನ್ನೊಬ್ಬ ಯುವ ನಟ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಕೂಡಾ ನಟಿಸಿರೋ ಚಿತ್ರ ಬೈರಾಗಿ.

    ಕೃಷ್ಣ ಸಾರ್ಥಕ್ ನಿರ್ಮಾಣದ ಹಾಡನ್ನು ದುನಿಯಾ ವಿಜಯ್ ರಿಲೀಸ್ ಮಾಡಿದ್ದು ವಿಶೇಷವಾಗಿತ್ತು.

  • ನೋವು ಮನಸ್ಸಿನಲ್ಲಿದೆ.. ವೃತ್ತಿ ಬಂದಾಗ ಕೆಲಸ ಮಾಡಲೇಬೇಕು : ಶಿವಣ್ಣ

    ನೋವು ಮನಸ್ಸಿನಲ್ಲಿದೆ.. ವೃತ್ತಿ ಬಂದಾಗ ಕೆಲಸ ಮಾಡಲೇಬೇಕು : ಶಿವಣ್ಣ

    ಬೈರಾಗಿ. ಇದೇ ಜುಲೈ 1ಕ್ಕೆ ರಿಲೀಸ್ ಆಗುತ್ತಿರೋ ಸಿನಿಮಾ. ಭಜರಂಗಿ 2 ರಿಲೀಸ್ ಆದ 8 ತಿಂಗಳ ನಂತರ, ಅಪ್ಪು ನಿಧನರಾದ 8 ತಿಂಗಳ ನಂತರ ರಿಲೀಸ್ ಆಗುತ್ತಿರೋ ಸಿನಿಮಾ. ಭಜರಂಗಿ 2 ಚಿತ್ರದ ಪ್ರೇಕ್ಷಕರ ರಿಯಾಕ್ಷನ್ ಅಪ್‍ಡೇಟ್ ತೆಗೆದುಕೊಳ್ಳುತ್ತಲೇ ಇಹಲೋಕ ತ್ಯಜಿಸಿದ್ದರು ಅಪ್ಪು. ಅಣ್ಣನಿಗಾಗಿ ತನ್ನ ಗನ್‍ಮ್ಯಾನ್‍ಗಳನ್ನೂ ಕಳಿಸಿಕೊಟ್ಟಿದ್ದರು ಅಪ್ಪು. ವಿಧಿಬರಹ. ಈಗ ಬೈರಾಗಿ ರಿಲೀಸ್ ಆಗುತ್ತಿದೆ. ನೋವು ಮಾಸಿಲ್ಲ.

    ನೋವು ಮನಸ್ಸಿನಲ್ಲಿರಬೇಕು. ವೃತ್ತಿ ಬಂದಾಗ ಕೆಲಸ ಮಾಡಬೇಕು. ಅದು ವೃತ್ತಿಧರ್ಮ ಎಂದರು ಶಿವಣ್ಣ. ಬೈರಾಗಿ ಚಿತ್ರದ ಪ್ರೆಸ್‍ಮೀಟ್‍ನಲ್ಲಿ ಮಾತನಾಡುತ್ತಿದ್ದ ಶಿವಣ್ಣಗೆ ಬೇಡಬೇಡವೆಂದರೂ ಅಪ್ಪು ನೆನಪಾಗಿ ಕಾಡುತ್ತಿದ್ದರು. ಈಗ ಹಿಟ್ ಆಗಿರುವ ರಿದಂ ಆಫ್ ಶಿವಪ್ಪ ಹಾಡನ್ನು ಅಪ್ಪುನೇ ಹಾಡಬೇಕಿತ್ತು. ನನ್ನ 60ನೇ ಹುಟ್ಟುಹಬ್ಬದ ಬಗ್ಗೆ  ಯಾವುದೇ ಪ್ಲಾನ್ ಇಲ್ಲ. ಬಹುಶಃ ಅಪ್ಪು ಇದ್ದಿದ್ದರೆ ಏನೋ ಮಾಡುತ್ತಿದ್ದ. ಈಗ ಅದರ ಬಗ್ಗೆ ನನಗೆ ಇಂಟ್ರೆಸ್ಟ್ ಇಲ್ಲ ಎಂದ ಶಿವಣ್ಣ ಮತ್ತೊಮ್ಮೆ ನೋವು ಮನಸ್ಸಿನಲ್ಲಿರಬೇಕು. ವೃತ್ತಿ ಮಾಡುತ್ತಿರಬೇಕು ಎಂದರು.

    ಚಿತ್ರದಲ್ಲಿ ತಮ್ಮ ಮತ್ತು ಡಾಲಿಯ ಪಾತ್ರದ ಹೈಲೈಟ್ಸ್ ಹೇಳಿದ ಶಿವಣ್ಣ, ನೀವು ನಿರೀಕ್ಷೆ ಮಾಡಿರೋದಕ್ಕಿಂತ ಡಬಲ್ ಆಗಿ ಬಂದಿದೆ ಎಂದು ಭರವಸೆ ಕೊಟ್ಟರು. ನಿರ್ದೇಶಕ ವಿಜಯ್ ಮಿಲ್ಟನ್ ಬಗ್ಗೆ ಮಾನಾಡಿದ ಶಿವಣ್ಣ ಚಿತ್ರದಲ್ಲಿ ನನ್ನ ಪಾತ್ರದ ಹೆಸರೇ ಶಿವಪ್ಪ ಎಂದು ಹೇಳಿಕೊಂಡರು. ಕೃಷ್ಣ ಸಾರ್ಥಕ್ ನಿರ್ಮಾಣದ ಬೈರಾಗಿಯಲ್ಲಿ ಡಾಲಿ ಧನಂಜಯ್, ಪೃಥ್ವಿ ಅಂಬರ್, ಅಂಜಲಿ ಸೇರಿದಂತೆ ಬೃಹತ್ ತಾರಾಗಣವೇ ಇದೆ. ಚಿತ್ರದ ಪ್ರೀ-ರಿಲೀಸ್ ಈವೆಂಟ್ ಚಾಮರಾಜನಗರದಲ್ಲಿ ನಡೆಯಲಿದೆ.

  • ಪವರ್'ಫುಲ್ ಬೈರಾಗಿ ಟೀಸರ್

    ಪವರ್'ಫುಲ್ ಬೈರಾಗಿ ಟೀಸರ್

    ಜೇಮ್ಸ್ ಚಿತ್ರದ ಜೊತೆಯಲ್ಲೆ ರಿಲೀಸ್ ಆಗಿದ್ದು ಬೈರಾಗಿ ಟೀಸರ್. ಚಿತ್ರದ ಟೀಸರ್ ಸಖತ್ ಪವರ್‍ಫುಲ್ ಆಗಿದ್ದು, ಫ್ಯಾನ್ಸ್ ವ್ಹಾವ್ ಎಂದಿದ್ದಾರೆ. ಚಿತ್ರದಲ್ಲಿ ಆ್ಯಕ್ಷನ್ ಸೀಕ್ವೆನ್ಸ್ ಥ್ರಿಲ್ ಕೊಡುತ್ತಿದ್ದು, ಬೇರೆಯದೇ ಕಥೆ ಇರೋ ಹಿಂಟ್ ಕೊಟ್ಟಿದ್ದಾರೆ ನಿರ್ದೇಶಕ ವಿಜಯ್ ಮಿಲ್ಟನ್.

    ಶಿವಣ್ಣ, ಡಾಲಿ ಧನಂಜಯ್, ಪೃಥ್ವಿ ಅಂಬರ್, ಅಂಜಲಿ, ಶಶಿಕುಮಾರ್.. ನಟಿಸಿರೋ ಚಿತ್ರದ ಟೀಸರ್ ಕಥೆಯ ಬಗ್ಗೆ ಕುತೂಹಲವನ್ನೂ ಹುಟ್ಟಿಸಿದೆ. ಆ್ಯಕ್ಷನ್ ಸೀನ್ ಬಿಲ್ಡಪ್ಪುಗಳೂ ಖುಷಿ ಕೊಡುತ್ತಿವೆ.

  • ಬೈರಾಗಿ : ಟಾಕೀಸುಗಳಿಗೆ ಶಿವಣ್ಣ ಯಾತ್ರೆ

    ಬೈರಾಗಿ : ಟಾಕೀಸುಗಳಿಗೆ ಶಿವಣ್ಣ ಯಾತ್ರೆ

    ಇದೇ ವಾರ ರಿಲೀಸ್ ಆಗಿರೋ ಶಿವಣ್ಣ ಅಭಿನಯದ ಬೈರಾಗಿ ಚಿತ್ರ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಶಿವಣ್ಣ & ಡಾಲಿ ಟಗರು ನಂತರ ಒಟ್ಟಿಗೇ ನಟಿಸಿರುವ ಚಿತ್ರವಿದು. ಈ ಹಿನ್ನೆಲೆಯಲ್ಲಿ ಶಿವಣ್ಣ ಚಾಮರಾಜನಗರ ಮತ್ತು ಕೊಳ್ಳೇಗಾಲದಲ್ಲಿ ಪ್ರದರ್ಶನಗೊಳ್ಳುತ್ತಿರೋ ಚಿತ್ರಮಂದಿರಗಳಿಗೆ ಭೇಟಿ ಕೊಟ್ಟಿದ್ದಾರೆ.

    ಕೊಳ್ಳೇಗಾದಲ್ಲಿ ಟೀ ಮಂಜು ಎಂದೇ ಫೇಮಸ್ ಆಗಿರುವ ಅಭಿಮಾನಿಯ ಟೀ ಹೋಟೆಲ್‍ಗೆ ಭೇಟಿ ಕೊಟ್ಟು ಟೀ ಕುಡಿದರು. ಅಭಿಮಾನಿಗಳಂತೂ ಎಲ್ಲೆಡೆ ನಿಂತು ಅಪ್ಪು ಅಪ್ಪು ಎಂದು ಕೂಗುತ್ತಿದ್ದರು. ಚಾಮರಾಜನಗರದಲ್ಲಿ ಅಪ್ಪು ಪುತ್ಥಳಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ಶಾಸಕ ಮಹೇಶ್ ಭರಚುಕ್ಕಿ ಜಲಪಾತದ ಬಳಿಯೇ ಪುತ್ಥಳಿ ನಿರ್ಮಿಸುತ್ತಿರುವುದಾಗಿ ತಿಳಿಸಿದ್ದಾರೆ.

  • ಬೈರಾಗಿ ಹೈಲೈಟ್ಸ್ : ಅಪ್ಪು ಇಲ್ಲದೆ ರಿಲೀಸ್ ಆಗುತ್ತಿರುವ ಮೊದಲ ಸಿನಿಮಾ

    ಬೈರಾಗಿ ಹೈಲೈಟ್ಸ್ : ಅಪ್ಪು ಇಲ್ಲದೆ ರಿಲೀಸ್ ಆಗುತ್ತಿರುವ ಮೊದಲ ಸಿನಿಮಾ

    ಬೈರಾಗಿ ಈಗ ಚಿತ್ರಮಂದಿರಗಳಲ್ಲಿದೆ. ಈ ಚಿತ್ರ ಶಿವಣ್ಣ ಅಭಿಮಾನಿಗಳಿಗೆ ಹಬ್ಬವಂತೂ ಹೌದು. ಅದ್ಧೂರಿ ಪ್ರಚಾರದೊಂದಿಗೆ ರಿಲೀಸ್ ಆಗುತ್ತಿರೋ ಸಿನಿಮಾ, ಶಿವಣ್ಣ ವೃತ್ತಿ ಜೀವನದ 123ನೇ ಸಿನಿಮಾ. ವಿಜಯ್ ಮಿಲ್ಟನ್ ನಿರ್ದೇಶನದ ಚಿತ್ರಕ್ಕೆ ಕೃಷ್ಣ ಸಾರ್ಥಕ್ ಬಂಡವಾಳ ಹೂಡಿದ್ದಾರೆ. ಚಿತ್ರ ಹೈಲೈಟ್ಸ್ ನೋಡೋದಾದರೆ..

    ಟಗರು ನಂತರ ಶಿವಣ್ಣ ಮತ್ತು ಡಾಲಿ ಒಟ್ಟಿಗೇ ನಟಿಸಿರುವ ಸಿನಿಮಾ. ಶಿವಣ್ಣ ಜೊತೆ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಕೂಡಾ ನಟಿಸಿದ್ದಾರೆ.

    ಬಹಳ ವರ್ಷಗಳ ನಂತರ ಶಿವಣ್ಣ ಮತ್ತು ಶಶಿಕುಮಾರ್ ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಣವಿಕ್ರಮ ನಂತರ ಅಂಜಲಿ ನಟಿಸಿರುವ 2ನೇ ಕನ್ನಡ ಸಿನಿಮಾ ಇದು. ಮೊದಲು ರಣವಿಕ್ರಮದಲ್ಲಿ ಅಪ್ಪುಗೆ ನಾಯಕಿಯಾಗಿದ್ದವರು, ಈ ಚಿತ್ರದಲ್ಲಿ ಶಿವಣ್ಣಂಗೆ ಜೋಡಿಯಾಗಿದ್ದಾರೆ.

    ಶಿವಣ್ಣ ಈ ಚಿತ್ರದ ರಿದಂ ಆಫ್ ಶಿವಪ್ಪ ಹಾಡು ಹಾಡಿದ್ದಾರೆ. ಈ ಹಾಡಿಗೆ ಜೊತೆಯಾಗಿರೋ ನಾಯಕ ಕಂ ಗಾಯಕ ಶರಣ್. ವಿಶೇಷವೆಂದರೆ ಈ ಹಾಡನ್ನು ಅಪ್ಪು ಜೊತೆ ಶಿವಣ್ಣ ಹಾಡಬೇಕಿತ್ತು. ಅಣ್ಣನ ಜೊತೆ ಹಾಡುವ ಮೊದಲ ಹಾಡಿದು ಎಂದು ಖುಷಿಯಾಗಿದ್ದರಂತೆ ಅಪ್ಪು.

    ಅಷ್ಟೇ ಅಲ್ಲ, ಚಿತ್ರದ ಇನ್ನೊಂದು ಹಾಡನ್ನು ಶಿವಣ್ಣ ಮೇಲಿನ ಪ್ರೀತಿಗಾಗಿ ವಸಿಷ್ಠ ಸಿಂಹ ಹಾಡಿದ್ದಾರೆ.

    ಅಪ್ಪು ಇಲ್ಲದೆ.. ಪುನೀತ್ ಅನುಪಸ್ಥಿತಿಯಲ್ಲಿ ರಿಲೀಸ್ ಆಗುತ್ತಿರುವ ಮೊದಲ ಸಿನಿಮಾ ಬೈರಾಗಿ.

    ಭಜರಂಗಿ 2 ನಂತರ ಬರುತ್ತಿರೋ ಮೊದಲ ಸಿನಿಮಾ ಬೈರಾಗಿ.

    ಈ ಚಿತ್ರಕ್ಕಾಗಿ ಮೈಸೂರಿನಲ್ಲಿ ಭರ್ಜರಿ ತಯಾರಿ ನಡೆದಿದೆ. ಎಕೆ47 ನಂತರ ಇದೇ ಮೊದಲ ಬಾರಿಗೆ 80 ಅಡಿ ಎತ್ತರದ ಕಟೌಟ್ ಹಾಕುತ್ತಿದ್ದಾರೆ ಫ್ಯಾನ್ಸ್.

    ಇದೇ ಮೊದಲ ಬಾರಿಗೆ ತುಳು ಚಿತ್ರರಂಗದ ಕ್ರಷ್ ಎನಿಸಿಕೊಂಡಿರುವ ಯಶ ಶಿವಕುಮಾರ್ ನಟಿಸಿರುವ ಮೊದಲ ಕನ್ನಡ ಸಿನಿಮಾ ಬೈರಾಗಿ.

    ಬೈರಾಗಿ 400ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ರಿಲೀಸ್ ಆಗಿದೆ.

  • ಬೈರಾಗಿಯ ಸ್ಟಾರ್ ಸಿಂಗರ್ ಶರಣ್..!

    ಬೈರಾಗಿಯ ಸ್ಟಾರ್ ಸಿಂಗರ್ ಶರಣ್..!

    ಇತ್ತೀಚೆಗೆ ಒಂದು ವಿಡಿಯೋ ಭಾರಿ ಸದ್ದು ಮಾಡಿತ್ತು. ಬೈರಾಗಿ ಚಿತ್ರದಲ್ಲಿ ಶಿವಣ್ಣನ ಜೊತೆ ಹಾಡುವವರು ಯಾರು ಅನ್ನೋದು.. ಅವರು ಸ್ಟಾರ್ ನಟರೇ ಆಗಿರಲಿ ಅನ್ನೋದು ಸಂಗೀತ ನಿರ್ದೇಶಕ ಅನೂಪ್ ಸಿಳೀನ್ ಆಸೆಯಾಗಿತ್ತು. ಅದಕ್ಕಾಗಿ ಅವರು ಡಾಲಿ ಮತ್ತು ದುನಿಯಾ ವಿಜಯ್ ಅವರನ್ನು ಕೇಳಿದರೂ.. ಅವರು ಒಪ್ಪಿರಲಿಲ್ಲ. ಆ ವಿಡಿಯೋ ವೈರಲ್ ಆದ ಬೆನ್ನಲ್ಲೇ.. ಶಿವಣ್ಣನೇ ಒಂದು ಹೆಸರು ಹೇಳಿದ್ದರು. ಅವರೇ ಶರಣ್.

    ಎ ಫಾರ್ ಆಪಲ್

    ಬಿ ಫಾರ್ ಬಾರ್ಬರ್

    ಐ ಆಮ್ ಯುವರ ಹೆಡ್‍ಮಾಸ್ಟರ್..

    ಎಂದು ಶುರುವಾಗುವ ಹಾಡಿದು. ಶಿವಣ್ಣನ ಜೊತೆ ಶರಣ್ ಹಾಡಿದ್ದಾರೆ. ಪ್ರಮೋದ್ ಮರವಂತೆ ಸಾಹಿತ್ಯಕ್ಕೆ ಶಿವಣ್ಣ-ಶರಣ್ ಕಂಠ ಸಖತ್ತಾಗಿ ಕೂತಿದೆ.

    ಕೃಷ್ಣ ಸಾರ್ಥಕ್ ನಿರ್ಮಾಣದ ಚಿತ್ರಕ್ಕೆ ವಿಜಯ್ ಮಿಲ್ಟನ್ ನಿರ್ದೇಶನವಿದೆ. ಬೈರಾಗಿಯಲ್ಲಿ ಶಿವಣ್ಣ ಜೊತೆ ಡಾಲಿ, ಪೃಥ್ವಿ ಅಂಬರ್, ಅಂಜಲಿ, ಯಶ ಶಿವಕುಮಾರ್ ನಟಿಸುತ್ತಿದ್ದಾರೆ. 

  • ಬೈರಾಗಿಯಲ್ಲಿ ಮೂರು ಹೀರೋಗಳು.. ಮೂವರು ಹೀರೋಯಿನ್ಸ್. ಆದರೆ..

    ಬೈರಾಗಿಯಲ್ಲಿ ಮೂರು ಹೀರೋಗಳು.. ಮೂವರು ಹೀರೋಯಿನ್ಸ್. ಆದರೆ..

    ಬೈರಾಗಿ. ಇದೇ ವಾರ ರಿಲೀಸ್ ಆಗುತ್ತಿರುವ ಶಿವಣ್ಣ ನಟಿಸಿರೋ 123ನೇ ಸಿನಿಮಾ. ವಿಜಯ್ ಮಿಲ್ಟನ್ ನಿರ್ದೇಶನದ ಈ ಚಿತ್ರದಲ್ಲಿ ಮೂವರು ಹೀರೋಗಳಿದ್ದಾರೆ. ಶಿವಣ್ಣ. ಡಾಲಿ ಧನಂಜಯ್ ಮತ್ತು ಪೃಥ್ವಿ ಅಂಬರ್. ಇವರ ಜೊತೆಗೆ ಶಶಿಕುಮಾರ್, ಚಿಕ್ಕಣ್ಣ.. ಹೀಗೆ ಬೃಹತ್ ತಾರಾಗಣವೇ ಇದೆ. ಇವರೆಲ್ಲರ ಜೊತೆ ಮೂವರು ನಾಯಕಿಯರು.

    ಅಂಜಲಿ : ಈ ಮೊದಲು ಪುನೀತ್ ರಾಜಕುಮಾರ್ ಅವರ ರಣವಿಕ್ರಮದಲ್ಲಿ ನಟಿಸಿದ್ದವರು.

    ಯಶಾ ಶಿವಕುಮಾರ್ : ತುಳು ಚಿತ್ರರಂಗದ ಕ್ರಷ್ ಆಗಿರೋ ಯಶಾ ಅವರಿಗೆ ಕನ್ನಡದಲ್ಲಿದು ಮೊದಲ ಸಿನಿಮಾ. ಕನ್ನಡದಲ್ಲಿ ಆಗಲೇ ಮೂರ್ನಾಲ್ಕು ಪ್ರಾಜೆಕ್ಟ್‍ಗಳಲ್ಲಿ ಬ್ಯುಸಿಯಾಗಿರುವ ಯಶಾ ಅವರಿಗೆ ತೆಲುಗಿನಲ್ಲೂ ಡಿಮ್ಯಾಂಡ್ ಸೃಷ್ಟಿಯಾಗಿದೆ.

    ಸಪ್ತಾ ಪವೂರ್ : ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಚಿತ್ರದಲ್ಲಿ ನಟಿಸಿದ್ದ ಹುಡುಗಿ. ಪ್ರವೀಣನ ಕ್ರಷ್ಷು.

    ಇವರಲ್ಲದೆ ರಂಗಭೂಮಿ ಪ್ರತಿಭೆ ಕಲ್ಪನಾ ನಾಗನಾಥ್ ಕೂಡಾ ನಟಿಸಿದ್ದಾರೆ.

    ಹೀರೋಗಳಷ್ಟೇ ಅಲ್ಲ, ನಾಯಕಿಯರಿಗೆ ಕೂಡಾ ಅತ್ಯುತ್ತಮ ರೋಲ್ ಇದೆ. ಸ್ಪೇಸ್ ಇದೆ. ಇಡೀ ಚಿತ್ರದ ಕಥೆ ಈ ನಾಲ್ವರು ಮಹಿಳಾ ಪಾತ್ರಧಾರಿಗಳ ಪಾತ್ರಗಳ ಸುತ್ತಲೇ ಇದೆ ಎಂದಿದ್ದಾರೆ ಡೈರೆಕ್ಟರ್ ವಿಜಯ್ ಮಿಲ್ಟನ್. ಕೃಷ್ಣ ಸಾರ್ಥಕ್ ನಿರ್ಮಾಣದ ಬೈರಾಗಿ ಸಖತ್ ಸೌಂಡ್ ಮಾಡುತ್ತಿದ್ದು, ಈ ಶುಕ್ರವಾರ ಶಿವಣ್ಣನ ಹಬ್ಬ ಫಿಕ್ಸ್.

  • ರಿಲೀಸ್`ಗೂ ಮೊದಲೇ ಬೈರಾಗಿಗೆ 10 ಕೋಟಿ

    ರಿಲೀಸ್`ಗೂ ಮೊದಲೇ ಬೈರಾಗಿಗೆ 10 ಕೋಟಿ

    ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿನಯದ ಸಿನಿಮಾಗಳು ನಿರ್ಮಾಪಕರಿಗೆ ಲಾಸ್ ಮಾಡಲ್ಲ. ಈ ಮಾತನ್ನು ಹಲವು ನಿರ್ಮಾಪಕರು ಓಪನ್ ಆಗಿ ಹೇಳ್ತಾರೆ. ಅದು ಮತ್ತೊಮ್ಮೆ ಪ್ರೂವ್ ಆಗಿರೋದು ಬೈರಾಗಿ ವಿಷಯದಲ್ಲಿ. ಬೈರಾಗಿ ರಿಲೀಸ್ ಆಗುತ್ತಿರೋದು ಜುಲೈ 1ಕ್ಕೆ. ಆದರೆ ಈಗಾಗಲೇ ಸಿನಿಮಾ 10 ಕೋಟಿ ಬಿಸಿನೆಸ್ ಮಾಡಿದೆ.

    ಬೈರಾಗಿ ಚಿತ್ರದ ಓಟಿಟಿ ಮತ್ತು ಸ್ಯಾಟಲೈಟ್ ಹಕ್ಕುಗಳು ಮಾರಾಟವಾಗಿದ್ದು 10 ಕೋಟಿ ಬಿಸಿನೆಸ್ ಆಗಿದೆ ಅನ್ನೋ ವಿಷಯ ಸ್ವತಃ ನಿರ್ಮಾಪಕರಿಂದಲೇ ಹೊರಬಿದ್ದಿದೆ. ಕೃಷ್ಣ ಸಾರ್ಥಕ್ ಬೈರಾಗಿಯನ್ನು ಸ್ಪೆಷಲ್ ಆಗಿ ಪ್ರಚಾರ ಮಾಡುತ್ತಿದ್ದು, ಜೂನ್ 25ಕ್ಕೆ ಪ್ರೀ ರಿಲೀಸ್ ಈವೆಂಟ್ ಶೋ ಇಟ್ಟುಕೊಂಡಿದ್ದಾರೆ. ಅದೂ ಚಾಮರಾಜನಗರದಲ್ಲಿ. ಅಲ್ಲಿಯವರೆಗೆ ರೋಡ್ ಶೋಗಳಿವೆ. ಜೂನ್ 24ರಿಂದ ಬೆಂಗಳೂರಿನಿಂದ ಹೊರಡುವ ರೋಡ್ ಶೋ ಚಾಮರಾಜ ನಗರ ತಲುಪೋದು ಜೂನ್ 25ಕ್ಕೆ.

    ಶಿವಣ್ಣಗೆ ಇದು 123ನೇ ಸಿನಿಮಾ. ನಿರ್ದೇಶಕ ವಿಜಯ್ ಮಿಲ್ಟನ್ ಈ ಚಿತ್ರದಲ್ಲಿ ಶಿವಣ್ಣ ಜೊತೆ ಡಾಲಿಯನ್ನೂ ಸೇರಿಸಿದ್ದಾರೆ. ಒಂದು ಹಾಡಿಗೆ ಶರಣ್ ದನಿಯಾಗಿದ್ದರೆ, ಇನ್ನೊಂದು ಹಾಡಿಗೆ ವಸಿಷ್ಠ ಸಿಂಹ ದನಿಯಾಗಿದ್ದಾರೆ.

    ಚಿತ್ರದಲ್ಲಿ ಪೃಥ್ವಿ ಅಂಬರ್, ಅಂಜಲಿ, ಯಶ ಶಿವಕುಮಾರ್, ಶಶಿಕುಮಾರ್, ಅನುಪ್ರಭಾಕರ್, ಚಿಕ್ಕಣ್ಣ.. ಹೀಗೆ ಹಲವರು ನಟಿಸಿದ್ದಾರೆ.

  • ಲೈ 1ಕ್ಕೆ ಬೈರಾಗಿ ಬರ್ತಾನೆ

    ಲೈ 1ಕ್ಕೆ ಬೈರಾಗಿ ಬರ್ತಾನೆ

    ಭಜರಂಗಿ 2 ನಂತರ ಶಿವಣ್ಣ ಅಭಿನಯದ ಬೈರಾಗಿ ರಿಲೀಸ್ ಆಗುತ್ತಿದೆ. ಭಜರಂಗಿ 2 ಜೊತೆಗೆ ಇಡೀ ಕರ್ನಾಟಕಕ್ಕೆ ಕಹಿ ನೆನಪುಗಳಿವೆ. ಅದಾದನಂತರ ರಿಲೀಸ್ ಆಗುತ್ತಿರುವ ಶಿವಣ್ಣ ಚಿತ್ರ ಇದೇ ಬೈರಾಗಿ. ಕೃಷ್ಣ ಸಾರ್ಥಕ್ ನಿರ್ಮಾಣದ ಚಿತ್ರಕ್ಕೆ ವಿಜಯ್ ಮಿಲ್ಟನ್ ನಿರ್ದೇಶನವಿದೆ. ಚಿತ್ರ ಜುಲೈ 1ಕ್ಕೆ ರಿಲೀಸ್ ಆಗುತ್ತಿದೆ.

    ಶಿವಣ್ಣ, ಡಾಲಿ ಧನಂಜಯ್ ಕಾಂಬಿನೇಷನ್ ಸಿನಿಮಾ ಇದು. ಪೃಥ್ವಿ ಅಂಬರ್, ಅಂಜಲಿ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರಕ್ಕಿದೆ. ಈಗಾಗಲೇ ಚಿತ್ರದ ನಕ್ಕರನಖ ಮತ್ತು ರಿದಮ್ ಆಫ್ ಶಿವಪ್ಪ ಹಾಡುಗಳು ಹವಾ ಎಬ್ಬಿಸಿವೆ. ಅನೂಪ್ ಸಿಳೀನ್ ಸಂಗೀತ ಮೋಡಿ ಮಾಡುತ್ತಿದೆ. ಇದೊಂದು ಪಕ್ಕಾ ಆ್ಯಕ್ಷನ್ ಸಿನಿಮಾ ಆಗಿದ್ದು, ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದೆ.

  • ಹುಲಿರಾಯ ಬೈರಾಗಿ ಶಿವಣ್ಣ

    ಹುಲಿರಾಯ ಬೈರಾಗಿ ಶಿವಣ್ಣ

    ವಿಜಯ್ ಮೆಲ್ಟನ್ ನಿರ್ದೇಶನದ ಬೈರಾಗಿ ಚಿತ್ರದ ಕೆಲಸಗಳು ಸೂಪರ್ ಫಾಸ್ಟ್ ಆಗಿ ನಡೆಯುತ್ತಿವೆ. ಮೊನ್ನೆ ಮೊನ್ನೆಯಷ್ಟೇ ಶುರುವಾದಂತೆ ತೋರುತ್ತಿದ್ದ ಬೈರಾಗಿ ಸಿನಿಮಾದ ಟಾಕಿ ಪೋರ್ಷನ್ ಶೂಟಿಂಗ್ ಮುಗಿದೇ ಹೋಗಿದೆ. ಇದೇ ವೇಳೆ ಎಲ್ಲ ಕಡೆ ಥ್ರಿಲ್ ಹುಟ್ಟಿಸಿರುವುದು ಚಿತ್ರದ ಒಂದು ಪೋಸ್ಟರ್. ಅದರಲ್ಲಿ ಶಿವಣ್ಣ ಹುಲಿ ವೇಷಧಾರಿಯಾಗಿ ಕಾಣಿಸಿಕೊಂಡಿದ್ದಾರೆ.

    ಶಿವ ರಾಜ್‍ಕುಮಾರ್ ಜೊತೆ ಡಾಲಿ ಧನಂಜಯ್, ಪೃಥ್ವಿ ಅಂಬಾರ್, ಶಶಿ ಕುಮಾರ್ ಕೂಡಾ ನಟಿಸುತ್ತಿದ್ದಾರೆ. ಹೀರೋಯಿನ್ ಅಂಜಲಿ. ಬೈರಾಗಿ ಶಿವಣ್ಣ ಅಭಿನಯದ 123ನೇ ಸಿನಿಮಾ. ಕೃಷ್ಣ ಸಾರ್ಥಕ್ ನಿರ್ಮಾಣದ ಬೈರಾಗಿ ಚಿತ್ರ ವರ್ಷಾಂತ್ಯಕ್ಕೆ ಕಂಪ್ಲೀಟ್ ರೆಡಿಯಾಗುವ ಸಾಧ್ಯತೆ ಇದೆ.