ತಮಿಳುನಾಡಿನ ಚೆನ್ನೈ ಸಮೀಪದಲ್ಲಿ ಅರ್ಜುನ್ ಸರ್ಜಾ ಅವರು ನಿರ್ಮಿಸಿರುವ ಶ್ರೀರಾಮಾಂಜನೇಯ ದೇಗುಲವನ್ನು ಉಡುಪಿಯ ಕೃಷ್ಣ ಮಠದ ಪೇಜಾವರ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಅವದೂತ ವಿನಯ್ ಗುರೂಜಿ ಸಾನಿಧ್ಯದಲ್ಲಿ ಉದ್ಘಾಟನೆಯಾಗಿದೆ.
ಅಯೋಧ್ಯೆ ಪ್ರವಾಸದಲ್ಲಿದ್ದ ಪೇಜಾವರ ಶ್ರೀಗಳು, ಈ ದೇವಸ್ಥಾನದ ಉದ್ಘಾಟನೆಗಾಗಿಯೇ ಬಂದು ಕುಂಭಾಭಿಷೇಕ ನೆರವೇರಿಸಿದರೆ, ಅವದೂತ ವಿನಯ್ ಗುರೂಜಿ ಈ ಕೈಂಕರ್ಯಕ್ಕೆ ಸಾಕ್ಷಿಯಾದರು.
ಇದು ನನ್ನ ದಶಕದ ಕನಸು. ಈ ಸಂದರ್ಭಕ್ಕೆ ಸ್ವತಃ ಪೇಜಾವರ ಶ್ರೀಗಳು ಬರುತ್ತಾರೆ ಎಂದುಕೊಂಡಿರಲಿಲ್ಲ. ದೇವರು ಭಗವಂತನ ಸೇವೆಗೆ ಅವಕಾಶ ಕೊಟ್ಟಿದ್ದಾನೆ. ಮಾಡಿದ್ದೇನೆ ಅಷ್ಟೆ ಎಂದಿದ್ದಾರೆ ಅರ್ಜುನ್ ಸರ್ಜಾ.