` dvitva, - chitraloka.com | Kannada Movie News, Reviews | Image

dvitva,

  • ದ್ವಿತ್ವ : ಹೀಗಂದರೆ ಏನು..?

    ದ್ವಿತ್ವ : ಹೀಗಂದರೆ ಏನು..?

    ಪುನೀತ್ ರಾಜ್‍ಕುಮಾರ್, ಹೊಂಬಾಳೆ ಫಿಲಮ್ಸ್ ಮತ್ತೆ ಒಂದಾಗಿವೆ. ಇದು 4ನೇ ಬಾರಿ. ಈ ಬಾರಿ ಈ ಜೋಡಿಯ ಜೊತೆ ಸೇರಿರುವುದು ಪವನ್ ಕುಮಾರ್. ಕನ್ನಡಿಗರಿಗೆ ಲೂಸಿಯಾ ಪವನ್ ಎಂದೇ ಚಿರಪರಿಚಿತರಾಗಿರೋ ವಿಭಿನ್ನ ಕಥೆಗಳ ಡೈರೆಕ್ಟರ್. ಆ ವಿಭಿನ್ನತೆ ಪುನೀತ್ ಅವರ ಚಿತ್ರದ ಟೈಟಲ್ಲಿನಲ್ಲಿಯೂ ಕಾಣಿಸಿದೆ. ದ್ವಿತ್ವ.

    ಹೊಂಬಾಳೆ ಫಿಲಮ್ಸ್ ಚಿತ್ರ ಘೋಷಣೆ ಮಾಡಿದ್ದೇ ತಡ, ಎಲ್ಲರಿಗೂ ಇಷ್ಟವಾಗಿದ್ದು ಚಿತ್ರದ ಪೋಸ್ಟರ್ ಮತ್ತು ಟೈಟಲ್. ಟೈಟಲ್ ಕ್ಯಾಚಿಯಾಗಿದ್ದು, ಡಿಫರೆಂಟ್ ಎನಿಸಿದ್ದರ ಜೊತೆಗೆ ಹಾಗೆಂದರೆ ಏನು ಅನ್ನೋ ಪ್ರಶ್ನೆಯೂ ಉದ್ಭವವಾಯ್ತು. ಉತ್ತರ ಸಿಂಪಲ್. ದ್ವಿತ್ವ ಎಂದರೆ ಎರಡು ವ್ಯಕ್ತಿತ್ವ. ಇದು ಸಂಸ್ಕøತ ಮೂಲದ ಪದ. ಸ್ಪ್ಲಿಟ್ ಅಥವಾ ಮಲ್ಟಿ ಪರ್ಸನಾಲಿಟಿಯನ್ನು ಈ ಪದದಲ್ಲೂ ಕರೆಯಬಹುದು. ಪವನ್ ಕುಮಾರ್ ಈಗಾಗಲೇ ಇದು ಸೈಕಲಾಜಿಕಲ್ ಥ್ರಿಲ್ಲರ್ ಡ್ರಾಮಾ ಎಂದಿರೋದ್ರಿಂದ ಇಲ್ಲಿ ಸ್ಪ್ಲಿಟ್ ಪರ್ಸನಾಲಿಟಿ ಡಿಸಾರ್ಡರ್ ಕಥೆ ಇದ್ದರೂ ಆಶ್ಚರ್ಯವಿಲ್ಲ.

    ತುಂಬಾ ವರ್ಷದಿಂದ ಕಾಡುತ್ತಿದ್ದ ಕಥೆಯಿದು. ಗಾಳಿಪಟ 2 ಶೂಟಿಂಗ್‍ಗೆ ಹೋಗೋಕು ಮುನ್ನ ಥಾಯ್ಲೆಂಡ್‍ಗೆ ಹೋಗಿದ್ದಾಗ ಚಿತ್ರಕಥೆ ಸಿದ್ಧವಾಯ್ತು. ದ್ವಿತ್ವ ಅನ್ನೋ ಟೈಟಲ್ಲೇ ಇರಲಿ ಎಂದ ಪುನೀತ್ ಮತ್ತು ವಿಜಯ್ ಕಿರಗಂದೂರು ಅವರಿಗೆ ಥ್ಯಾಂಕ್ಸ್ ಎಂದಿದ್ದಾರೆ ಪವನ್.

    ಹೊಂಬಾಳೆ ನನ್ನ 2ನೇ ಮನೆಯಿದ್ದಂತೆ. ಪವನ್ ಸಿನಿಮಾಗಳನ್ನು ನೋಡುತ್ತಿದ್ದೆ. ಈಗ ಜತೆಯಾಗಿ ಕೆಲಸ ಮಾಡ್ತಿದ್ದೇನೆ. ಯುನಿಕ್ ಕಥೆ ಹೇಳುತ್ತಾರೆ ಅನ್ನೋ ನಂಬಿಕೆ ಇದೆ. ನನ್ನನ್ನು ನಾನೇ ನೋಡಿಕೊಳ್ಳೋಕೆ ಕಾಯ್ತಿದ್ದೇನೆ ಎಂದಿದ್ದಾರೆ ಪುನೀತ್.

    ಈ ಚಿತ್ರದಲ್ಲಿ ಡಿಫರೆಂಟ್ ಅಪ್ಪು ಕಾಣಿಸೋದು ಖಂಡಿತಾ ಅನ್ನೋ ಭರವಸೆ ಕೊಟ್ಟಿದ್ದಾರೆ ವಿಜಯ್ ಕಿರಗಂದೂರು.

  • ದ್ವಿತ್ವ ಪೋಸ್ಟರ್ ನಕಲಿ ಆರೋಪ : ಡಿಸೈನರ್ ಕೊಟ್ಟ ಸ್ಪಷ್ಟನೆ

    ದ್ವಿತ್ವ ಪೋಸ್ಟರ್ ನಕಲಿ ಆರೋಪ : ಡಿಸೈನರ್ ಕೊಟ್ಟ ಸ್ಪಷ್ಟನೆ

    ದ್ವಿತ್ವ ಚಿತ್ರದ ಟೈಟಲ್ ಮತ್ತು ಪೋಸ್ಟರ್ ರಿಲೀಸ್ ಆಗಿದ್ದೇ ತಡ. ಅಭಿಮಾನಿಗಳು ಹೊಸತನದ ಲುಕ್‍ಗೆ ಥ್ರಿಲ್ಲಾದರು. ಹೆಸರಿನ ಅರ್ಥ ಏನಿರಬಹುದು ಎಂದು ತಲೆಗೆ ಹುಳ ಬಿಟ್ಟುಕೊಂಡರು. ಒಡೆದು ಹೋದಂತೆ ಕಾಣುವ ಪುನೀತ್ ಮುಖದಲ್ಲಿ ಬೇರೆಯ ಫೀಲ್ ಇತ್ತು. ಆದರೆ, ಇದರ ನಡುವೆಯೇ ಆ ಪೋಸ್ಟರ್ ಕಾಪಿ ಮಾಡಿದ್ದು ಎಂಬ ಆರೋಪವೂ ಕೇಳಿ ಬಂತು.

    ಪಾಡ್ ಕ್ಲಾಸ್ಟ್ ಅನ್ನೋ ಆಡಿಯೋ, ವಿಡಿಯೋ ಪ್ಲಾಟ್ ಫಾರ್ಮ್ ವೆಬ್‍ಸೈಟ್‍ವೊಂದು ದ್ವಿತ್ವ ಮಾದರಿಯ ಫೋಟೋ ಹಾಕಿತ್ತು. ಅದೇ ಮಾಡೆಲ್‍ನಲ್ಲಿ ದ್ವಿತ್ವ ಪೋಸ್ಟರ್ ಬಂದಾಗ ಇದು ಕಾಪಿ ಮಾಡಿದ್ದು ಎಂಬ ಆರೋಪ ಬಂದಿದ್ದು ಸಹಜವಾಗಿಯೇ ಇತ್ತು. ಈಗ ಅದಕ್ಕೆ ಪೋಸ್ಟರ್ ಡಿಸೈನ್ ಮಾಡಿದ ಸಂಸ್ಥೆಯೇ ಉತ್ತರ ಕೊಟ್ಟಿದೆ.

    ಪೋಸ್ಟರ್ ಡಿಸೈನ್ ಮಾಡಿದ್ದ ಆದರ್ಶ್ `ಈ ಪೋಸ್ಟರ್ ಕೃತಿಚೌರ್ಯದ್ದಲ್ಲ. ಷಟರ್‍ಸ್ಟಾಕ್ ಚಿತ್ರಗಳನ್ನು ಮಾರುವ ವೆಬ್‍ಸೈಟ್‍ನಿಂದ   ಖರೀದಿಸಿದ್ದೇವೆ. ಹಾಗೆ ಖರೀದಿಸಿದ್ದ ಪೋಸ್ಟರ್‍ನ್ನೇ ದ್ವಿತ್ವ ಚಿತ್ರಕ್ಕೆ ತಕ್ಕಂತೆ ಸ್ವಲ್ಪ ಬದಲಿಸಿದ್ದೇವೆ. ಇದು ಹೊಂಬಾಳೆ ಸಂಸ್ಥೆಗಾಗಲೀ, ಪವನ್ ಕುಮಾರ್ ಅವರಿಗಾಗಲೀ ಗೊತ್ತಿಲ್ಲ. ಲಾಕ್ ಡೌನ್ ಇದ್ದ ಕಾರಣ ಫೋಟೋಶೂಟ್ ಮಾಡಿಸೋಕೆ ಆಗಲಿಲ್ಲ. ಹೀಗಾಗಿ ಈ ರೀತಿ ಮಾಡಿದೆವು. ಇಷ್ಟಕ್ಕೂ ಆ ಪೋಸ್ಟರ್ ಡಿಸೈನ್‍ಗೆ ನಾವು ಹಣ ಕೊಟ್ಟು ಖರೀದಿಸಿದ ಮೇಲೆ ಅದು ನಮ್ಮದೇ ಪ್ರಾಪರ್ಟಿ' ಎಂದಿದ್ದಾರೆ ಆದರ್ಶ್.