` raana, - chitraloka.com | Kannada Movie News, Reviews | Image

raana,

 • ಎಣ್ಣೆಗೂ ಹೆಣ್ಣಿಗೂ ಹಾಡು ಹುಟ್ಟಿದ ಕಥೆ

  ಎಣ್ಣೆಗೂ ಹೆಣ್ಣಿಗೂ ಹಾಡು ಹುಟ್ಟಿದ ಕಥೆ

  ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಹೇಳೋ ಭಗವಂತ.. ಏಕ್ ಲವ್ ಯಾ ಚಿತ್ರದ ಈ ಹಾಡು ಈಗ ಎಲ್ಲರ ಹಾಟ್ & ಹಾರ್ಟ್ ಫೇವರಿಟ್. ಗಂಡು ಮಕ್ಕಳಿಗೆ ಬ್ರೇಕಪ್ ಆದಾಗ ಹಾಡೋಕೆ.. ಕುಣಿಯೋಕೆ ಬೇಜಾನ್ ಹಾಡುಗಳಿದ್ದರೂ, ಹೆಣ್ಣು ಮಕ್ಕಳಿಗೆಂದೇ ಒಂದು ಬ್ರೇಕಪ್ ಸಾಂಗ್ ಇರಲಿಲ್ಲ. ಆ ಕೊರತೆಗೆ ಫುಲ್ ಸ್ಟಾಪ್ ಇಟ್ಟಿದೆ ಏಕ್ ಲವ್ ಯಾ ಸಾಂಗ್.

  ಈ ಹಾಡು ಹಿಟ್ ಆಗುತ್ತೆ ಅನ್ನೋ ಕಲ್ಪನೆ ಮತ್ತು ನಿರೀಕ್ಷೆ ಎರಡೂ ಇತ್ತು ಅಂತಾರೆ ಹಾಡಿಗೆ ಸಾಹಿತ್ಯ ಬರೆದಿರೋ ಜೋಗಿ ಪ್ರೇಮ್. ಹಾಡಿನ ಸಾಹಿತ್ಯ ಹುಟ್ಟಿದ್ದು ಪಬ್‍ಗಳಲ್ಲಂತೆ. ಪಬ್‍ಗಳಲ್ಲಿ ಬ್ರೇಕಪ್ ಮಾಡಿಕೊಂಡ ಹೆಣ್ಣು ಮಕ್ಕಳು ದಿಸ್ ಗಯ್ ಈಸ್ ಬುಲ್‍ಶಿಟ್ ಯಾ.. ಎಂದು ತಮ್ಮ ತಮ್ಮ ಬಾಯ್‍ಫ್ರೆಂಡ್‍ಗಳ ಬಗ್ಗೆ ಮಾತನಾಡಿಕೊಂಡಿದ್ದು ಕೇಳಿ ಹುಟ್ಟಿದ ಸಾಲುಗಳೇ ಎಣ್ಣೆಗೂ ಹೆಣ್ಣಿಗೂ ಹಾಡಿನ ಸಾಹಿತ್ಯ. ಎಣ್ಣೆಗೂ ಹೆಣ್ಣಿಗೂ.. ಅನ್ನೋ ಪದ ಬಂದೊಡನೆ ಹಾಡು ಹಿಟ್ ಆಗುತ್ತೆ ಎನಿಸಿಬಿಟ್ಟಿತು ಎನ್ನುತ್ತಾರೆ ಪ್ರೇಮ್.

  ನಂತರ ಆ ಹಾಡಿಗೆ ಶಕ್ತಿ ತುಂಬಿದ್ದು ಅರ್ಜುನ್ ಜನ್ಯಾ ಮತ್ತು ಮಂಗ್ಲಿ. ಹಾಡಿನಲ್ಲಿ ಹೆಜ್ಜೆ ಹಾಕಿರೋದು ರಾಣಾ ಮತ್ತು ರಚಿತಾ ರಾಮ್. ಹಾಡು ಈಗಾಗಲೇ ಮಿಲಿಯನ್‍ಗಟ್ಟಲೆ ವೀಕ್ಷಣೆ ಕಂಡಿದೆ. ಹೀಗಾಗಿ ಈಗ ಪ್ರೇಮ್ ಎಣ್ಣೆ ಸಾಂಗಿಗೂ ಸಕ್ಸಸ್ಸಿಗೂ ಎಲ್ಲಿಂದ ಲಿಂಕಿಟ್ಟೆ ಹೇಳೋ ಭಗವಂತ ಎಂದು ಇನ್ನೊಂದು ಹಾಡು ಬರೆಯಬಹುದು.

 • ಏಕ್ ಲವ್ ಯಾ ಎಣ್ಣೆ ಸಾಂಗ್ ಬಂತು..

  ಏಕ್ ಲವ್ ಯಾ ಎಣ್ಣೆ ಸಾಂಗ್ ಬಂತು..

  ಎಣ್ಣೆಗೂ.. ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಹೇಳೋ ಭಗವಂತಾ..

  ಬಾರಲ್ಲಿ ಹೆಣ್ ಹೈಕ್ಳು ಕುಡಿಯೋದು ತಪ್ಪಂತಾ ಯಾರಾನಾ ಬೋರ್ಡ್ ಹಾಕವ್ರಾ..

  ಅಯ್ಯೋ ನಮ್ಗೂನೂ ಲವ್ವಲ್ಲಿ ಬ್ರೇಕಪ್ಪು ಆಗೈತೆ.. ಒಂದೆರಡು ಪೆಗ್ ಹಾಕ್ತೀರಾ.. ಶಿವನೇ.. ಒಂದೆರಡು ಪೆಗ್ ಹಾಕ್ತೀರಾ..

  ಹೀಗೆ ಸಾಗೋ ಹಾಡು.. ಗುಂಗು ಹಿಡಿಸುತ್ತಾ ಕಿಕ್ಕೇರಿಸುತ್ತೆ. ಒನ್ಸ್ ಎಗೇಯ್ನ್ ಪ್ರೇಮ್ ಹಾಡಿನ ಮೋಡಿಯನ್ನು ಕಂಟಿನ್ಯೂ ಮಾಡಿದ್ದಾರೆ. ಇದು ಏಕ್ ಲವ್ ಯಾ ಚಿತ್ರದ ಎಣ್ಣೆ ಸಾಂಗ್.

  ಕಿಕ್ಕೇರಿಸೋ ಸಾಹಿತ್ಯಕ್ಕೆ ಅಕ್ಷರ ಕೊಟ್ಟಿರೋದು ಶೋಮ್ಯಾನ್ ಪ್ರೇಮ್ ಅರ್ಥಾತ್ ಜೋಗಿ ಪ್ರೇಮ್. ಅದಕ್ಕೆ ಇನ್ನಷ್ಟು ಕಿಕ್ಕೇರಿಸಿರೋದು ಮಂಗ್ಲಿ ಮತ್ತು ಕೈಲಾಶ್ ಖೇರ್. ಕಣ್ಣಿನಲ್ಲೇ ಕಿಕ್ಕೇರಿಸಿರೋ ರಚಿತಾ ರಾಮ್ ಎದುರು ಅಷ್ಟೇ ಕಾನ್ಫಿಡೆಂಟ್ ಆಗಿ ಹೆಜ್ಜೆ ಹಾಕಿರೋದು ರಾಣಾ. ಜನವರಿ 21ಕ್ಕೆ ರಿಲೀಸ್ ಆಗುತ್ತಿರೋ ಏಕ್ ಲವ್ ಯಾ ಚಿತ್ರಕ್ಕೆ ಎಂದಿನಂತೆ ಅದ್ಧೂರಿ ಪ್ರಚಾರ ಶುರು ಮಾಡಿದ್ದಾರೆ ಪ್ರೇಮ್.

 • ತೆಲುಗಿಗೂ ಏಕ್ ಲವ್ ಯಾ : ರಕ್ಷಿತಾ ಪ್ರೇಮ್ ಭರ್ಜರಿ ಪ್ಲಾನ್

  ತೆಲುಗಿಗೂ ಏಕ್ ಲವ್ ಯಾ : ರಕ್ಷಿತಾ ಪ್ರೇಮ್ ಭರ್ಜರಿ ಪ್ಲಾನ್

  ಏಕ್ ಲವ್ ಯಾ ಚಿತ್ರ ಜನವರಿಯಲ್ಲಿ ರಿಲೀಸ್ ಆಗುತ್ತಿದೆ. 5 ಭಾಷಗಳಲ್ಲಿ ಬರುತ್ತಿರೋ ಚಿತ್ರದ ಹಾಡು, ಟೀಸರ್ ನೋಡಿದವರಿಗೆ ಇದು ಹೊಸ ನಟನ ಚಿತ್ರ ಎಂಬ ಫೀಲಿಂಗ್ ಬರುತ್ತಿಲ್ಲ. ಬದಲಿಗೆ ಇದು ಒಬ್ಬ ಸ್ಟಾರ್ ನಟನ ಚಿತ್ರ ಇರಬೇಕು ಎಂಬ ಭಾವನೆ ಬರುತ್ತಿದೆ. ಜೋಗಿ ಪ್ರೇಮ್ ಮೋಡಿಯೇ ಅಂಥದ್ದು. ಚಿತ್ರದ ಹಾಡು, ಟೀಸರ್‍ಗಳು ಕನ್ನಡದಲ್ಲಿ ಮೋಡಿ ಮಾಡಿವೆ. ಆ ಚಿತ್ರವನ್ನು ತೆಲುಗಿಗೂ ಕೊಂಡೊಯ್ಯೋಕೆ, ತಮ್ಮ ಪ್ರೀತಿಯ ತಮ್ಮನನ್ನು ತೆಲುಗಿನಲ್ಲಿ ಲಾಂಚ್ ಮಾಡೋಕೆ ಹೊರಟಿದ್ದಾರೆ ರಕ್ಷಿತಾ ಪ್ರೇಮ್.

  ರಕ್ಷಿತಾಗೆ ತೆಲುಗು ಇಂಡಸ್ಟ್ರಿ ಹೊಸದಲ್ಲ. ಒಂದು ಕಾಲದಲ್ಲಿ ರಕ್ಷಿತಾ ಆಳಿದ್ದ ಚಿತ್ರರಂಗವದು. ಅಲ್ಲಿ ಏಕ್ ಲವ್ ಯಾ ಚಿತ್ರದ ಈವೆಂಟ್ ಮಾಡುವುದು ರಕ್ಷಿತಾ ಯೋಜನೆ. ಇನ್ನು ರಕ್ಷಿತಾಗೆ ಪುರಿ ಜಗನ್ನಾಥ್, ಮಹೇಶ್ ಬಾಬು, ರವಿತೇಜ ಸೇರಿದಂತೆ ತೆಲುಗು ಇಂಡಸ್ಟ್ರಿಯ ದಿಗ್ಗಜರ ಜೊತೆ ಒಳ್ಳೆಯ ಬಾಂಧವ್ಯ ಈಗಲೂ ಇದೆ. ತಮ್ಮ ರಾಣಾನನ್ನು ಪರಿಚಯಿಸುವ ಕಾರ್ಯಕ್ರಮವನ್ನು ಅವರೆಲ್ಲರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮಾಡೋಕೆ ರಕ್ಷಿತಾ ರೆಡಿಯಾಗಿದ್ದಾರೆ.

 • ಪ್ರೀತಿನೇ ದೇವ್ರು.. ಅಂತಾ ಅಂದೋರ್ ಯಾರು..? ದೇವರೊಬ್ಬ ಬಿಸಿನೆಸ್ ಮ್ಯಾನ್ ಕಣೋ..

  ಪ್ರೀತಿನೇ ದೇವ್ರು.. ಅಂತಾ ಅಂದೋರ್ ಯಾರು..? ದೇವರೊಬ್ಬ ಬಿಸಿನೆಸ್ ಮ್ಯಾನ್ ಕಣೋ..

  ಯಾರೆ ಯಾರೇ.. ನೀನು ನಂಗೆ..

  ಹೊತ್ತಿಲ್ಲದ ಹೊತ್ತು.. ತುತ್ತಿಲ್ಲದೆ ನಿಂತು. ಕಾದಿದ್ದೆ ನಿನಗಾಗಿ ಯಾಕೆ.. ಹೇಳು ಯಾಕೆ..

  ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಹೇಳು ಭಗವಂತ..

  ಒಂದರ ಹಿಂದೊಂದು ಬಂದ ಮೂರು ಹಾಡುಗಳೂ ಹಿಟ್ ಆಗಿವೆ. ಎಲ್ಲವೂ ಜೋಗಿ ಪ್ರೇಮ್ ಮತ್ತು ಅರ್ಜುನ್ ಜನ್ಯಾ ಮ್ಯಾಜಿಕ್. ಪ್ರತಿ ಹಾಡೂ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದಿದೆ. ಹಾಡುಗಳ ಹ್ಯಾಟ್ರಿಕ್ ನಂತರ 4ನೇ ಹಾಡಿಗೂ ರೆಡಿಯಾಗಿದ್ದಾರೆ ಪ್ರೇಮ್. 4ನೇ ಹಾಡು ಪ್ರೀತಿನೇ ದೇವ್ರು.. ಅಂತಾ ಅಂದೋರ್ ಯಾರು..? ದೇವರೊಬ್ಬ ಬಿಸಿನೆಸ್ ಮ್ಯಾನ್ ಕಣೋ…

  ಇದು ಪ್ರೀತಿಯ ಹಾಡಂತೆ. ಗವಾಯಿಗಳ ಶಿಷ್ಯ ಬರೆದಿರೋ ಪ್ರೀತಿಯ ಹಾಡಿನ ಬಗ್ಗೆ ಸಹಜವಾಗಿಯೇ ಕುತೂಹಲವಿದೆ. ಆ ಹಾಡನ್ನು ಹುಬ್ಬಳ್ಳಿಯಲ್ಲಿ ರಿಲೀಸ್ ಮಾಡೋ ಪ್ಲಾನ್ ಹಾಕಿದ್ದಾರೆ ಪ್ರೇಮ್.

  ಏಕ್ ಲವ್ ಯಾದಲ್ಲಿ ಇದೇ ಮೊದಲ ಬಾರಿಗೆ ನಟಿ ರಕ್ಷಿತಾ ಸಹೋದರ ರಾಣಾ ಹೀರೋ ಆಗಿದ್ದಾರೆ. ರಚಿತಾ ರಾಮ್ ಮತ್ತು ರೀಷ್ಮಾ ನಾಣಯ್ಯ ಇಬ್ಬರೂ ಹೀರೋಯಿನ್ಸ್. ಕನ್ನಡದಲ್ಲಷ್ಟೇ ಅಲ್ಲ, ತೆಲುಗು, ತಮಿಳು, ಮಲಯಾಳಂನಲ್ಲೂ ಏಕಕಾಲಕ್ಕೆ ಜನವರಿಯಲ್ಲೇ ರಿಲೀಸ್ ಆಗುತ್ತಿದೆ. ಸಂಕ್ರಾಂತಿ ಸಂಭ್ರಮ ಹೆಚ್ಚಿಸಲಿದೆ. ಕನ್ನಡದಲ್ಲಿ ಮಾತ್ರ ಪ್ರೇಮ್ ಅವರೇ ವಿತರಣೆ ಮಾಡಲಿದ್ದು, ಬೇರೆ ಭಾಷೆಗಳಿಗೆ ಈಗಾಗಲೇ ಮಾರಾಟ ಮಾಡಿದ್ದಾರಂತೆ.

 • ರಾಣನಿಗೆ ಜೊತೆಯಾದ ರಾಗಿಣಿ

  ragini image

  ರಾಣ. ಕೆ.ಮಂಜು ಪುತ್ರ ಶ್ರೇಯಸ್ ಮಂಜು ನಾಯಕರಾಗಿರೋ ಸಿನಿಮಾ. ನಂದಕಿಶೋರ್ ನಿರ್ದೇಶನದ ಚಿತ್ರಕ್ಕೀಗ ರಾಗಿಣಿ ದ್ವಿವೇದಿ ಎಂಟ್ರಿ ಕೊಟ್ಟಿದ್ದಾರೆ. ರೀಷ್ಮಾ ನಾಣಯ್ಯ ಮತ್ತು ರಜನಿ ಭಾರದ್ವಾಜ್ ಚಿತ್ರದ ನಾಯಕಿಯರು. ಇಬ್ಬರು ಹೀರೋಯಿನ್ ಇರೋವಾಗ ರಾಗಿಣಿಗೇನು ಕೆಲಸ ಅಂತೀರಾ..?

  ರಾಗಿಣಿ ಚಿತ್ರದ ಸ್ಪೆಷಲ್ ಹಾಡೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಕ್ಕಾ ನಿನ್ ಮಗ್ಳು ನಂಗೆ ಚಿಕ್ಕೋಳಾಗಲ್ವಾ.. ಹಾಡಿನ ಮೂಲಕ ಹಿಂದೊಮ್ಮೆ ಕಿಚ್ಚು ಹಚ್ಚಿದ್ದರು ರಾಗಿಣಿ. ಅದೇ ನಂದಕಿಶೋರ್ ಚಿತ್ರದಲ್ಲಿ.. ಆ ಹಾಡು ಬರೆದಿದ್ದ ಶಿವು ಭೇರ್ಗಿಯವರೇ ಹೊಸ ಹಾಡು ಬರೆದಿದ್ದು, ರಾಗಿಣಿ ಆ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ. ಗುಜ್ಜಲ್ ಪುರುಷೋತ್ತಮ್ ನಿರ್ಮಾಣದ ಚಿತ್ರಕ್ಕೆ ಸಂಗೀತ ನೀಡುತ್ತಿರೋದು ಚಂದನ್ ಶೆಟ್ಟಿ.

 • ರಾಣನಿಗೆ ಮುಹೂರ್ತ : ಉಪ್ಪಿ ಆ್ಯಕ್ಷನ್ ಕಟ್

  ರಾಣನಿಗೆ ಮುಹೂರ್ತ : ಉಪ್ಪಿ ಆ್ಯಕ್ಷನ್ ಕಟ್

  ಹಾಗಂತ ಉಪೇಂದ್ರ ಅವರೇನೂ ನಿರ್ದೇಶನಕ್ಕಿಳಿದಿಲ್ಲ. ಅಭಿಮಾನಿಗಳು ಆಹಾ.. ಉಪ್ಪಿ ಡೈರೆಕ್ಷನ್ ಮಾಡ್ತಾವ್ರಂತೆ ಅಂತಾ ಥ್ರಿಲ್ ಆಗೋ ಅಗತ್ಯವೂ ಇಲ್ಲ. ಇದು ರಾಣ ಚಿತ್ರದ ಮುಹೂರ್ತದ ಸ್ಟೋರಿ.

  ಶ್ರೇಯಸ್ ಮಂಜು ನಟಿಸುತ್ತಿರುವ ಹೊಸ ಚಿತ್ರ ರಾಣ. ಗವಿಪುರಂನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿದೆ. ನಂದಕಿಶೋರ್ ಡೈರೆಕ್ಷನ್`ನ ಈ ಚಿತ್ರಕ್ಕೆ ಗುಜ್ಜಲ್ ಪುರುಷೋತ್ತಮ್ ಪ್ರೊಡ್ಯೂಸರ್. ಮೊದಲ ಶಾಟ್‍ಗೆ ಆ್ಯಕ್ಷನ್ ಕಟ್ ಹೇಳಿ, ಚಿತ್ರಕ್ಕೆ ಶುಭ ಕೋರಿದ್ದು ರಿಯಲ್ ಸ್ಟಾರ್ ಉಪೇಂದ್ರ. ಕ್ಲಾಪ್ ಮಾಡಿದವರು ಗುಜ್ಜಲ್ ಪುರುಷೋತ್ತಮ್ ತಾಯಿ.

  ಪಡ್ಡೆಹುಲಿ ಮಂಜುರ 2ನೇ ಚಿತ್ರಕ್ಕೇ ಇಬ್ಬರು ಹೀರೋಯಿನ್ಸ್. ರೀಷ್ಮಾ ನಾಣಯ್ಯ ಮತ್ತು ರಜನಿ ಭಾರದ್ವಾಜ್. ನಿರ್ಮಾಪಕ ಗುಜ್ಜಲ್ ಪುರುಷೋತ್ತಮ್ ಜೊತೆ ಕೆ.ಮಂಜು ಕೂಡಾ ಇದ್ದಾರೆ.

 • ರಾಣಾ ಅವತಾರದಲ್ಲಿ ಶ್ರೇಯಸ್ ಮಂಜು

  ರಾಣಾ ಅವತಾರದಲ್ಲಿ ಶ್ರೇಯಸ್ ಮಂಜು

  ಪಡ್ಡೆಹುಲಿ ಚಿತ್ರದ ನಂತರ ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಮಂಜು ನಟಿಸುತ್ತಿರುವ ಚಿತ್ರದ ಟೈಟಲ್ ಈಗ ರಿವೀಲ್ ಆಗಿದೆ. ಶ್ರೇಯಸ್ ಮಂಜು ನಟನೆಯ ಚಿತ್ರದ ಟೈಟಲ್ ರಾಣಾ.

  ಪೊಗರು ನಂತರ ದುಬಾರಿ ನಿರ್ದೇಶಿಸಬೇಕಿದ್ದ ನಂದಕಿಶೋರ್, ಆ ಚಿತ್ರವನ್ನು ಕೈಬಿಟ್ಟು ಈಗ ರಾಣಾ ಕೈಗೆತ್ತಿಕೊಂಡಿದ್ದಾರೆ. ಜುಲೈ 7ರಂದು ಚಿತ್ರದ ಮುಹೂರ್ತ ನೆರವೇರಲಿದೆ. ಅದಕ್ಕೂ ಮುನ್ನ ಚಿತ್ರದ ಟೈಟಲ್ ಹೊರಬಿಟ್ಟಿದ್ದಾರೆ ನಂದಕಿಶೋರ್.

  ರಾಣಾ ಚಿತ್ರದ ಟೈಟಲ್ ನಿರ್ಮಾಪಕ ರಮೇಶ್ ಕಶ್ಯಪ್ ಬಳಿ ಇತ್ತಂತೆ. ಯಶ್ ನಟಿಸಬೇಕಿತ್ತು. ಆದರೆ, ಆ ಟೈಟಲ್‍ನ್ನು ಶ್ರೇಯಸ್ ಮಂಜು ಅವರಿಗಾಗಿ ಬಿಟ್ಟುಕೊಟ್ಟಿದ್ದಾರೆ. ಹೀಗಾಗಿಯೇ ನಿರ್ಮಾಪಕರಾದ ಪುರುಷೋತ್ತಮ ಗುಜ್ವಾಲ್, ಕೆ.ಮಂಜು ರಮೇಶ್ ಕಶ್ಯಪ್ ಅವರಿಗೆ ಥ್ಯಾಂಕ್ಸ್ ಹೇಳಿದ್ದಾರೆ.

  ಶ್ರೇಯಸ್ ಮಂಜು ರಾಣಾಗೆ ಚಂದನ್ ಶೆಟ್ಟಿ ಸಂಗೀತವಿದೆ. ರೀಷ್ಮಾ ನಾಣಯ್ಯ ಹೀರೋಯಿನ್.

 • ಸಂಕ್ರಾಂತಿಗೆ ರಕ್ಷಿತಾ ಪ್ರೇಮ್ ತಮ್ಮನ ಸಿನಿಮಾ

  ಸಂಕ್ರಾಂತಿಗೆ ರಕ್ಷಿತಾ ಪ್ರೇಮ್ ತಮ್ಮನ ಸಿನಿಮಾ

  ಜೋಗಿ ಪ್ರೇಮ್ ನಿರ್ದೇಶನದ ಹೊಸ ಲವ್ ಸ್ಟೋರಿ ಏಕ್ ಲವ್ ಯಾ. ಇದು ರಕ್ಷಿತಾ ಪ್ರೇಮ್ ಸೋದರ ರಾಣಾ ಅಭಿನಯದ ಮೊದಲ ಸಿನಿಮಾ. ಎಕ್ಸ್ ಕ್ಯೂಸ್ ಮಿ ನಂತರ ಪ್ರೇಮ್ ಡೈರೆಕ್ಟ್ ಮಾಡಿರೋ ಅಪ್ಪಟ ಲವ್ ಸ್ಟೋರಿ. ರಕ್ಷಿತಾ ಪ್ರೇಮ್ ತಮ್ಮನ ಚಿತ್ರದ ಹಾಡುಗಳು ಈಗಾಗಲೇ ಪ್ರೇಮಿಗಳ ಎದೆಯಲ್ಲಿ ಗುಂಯ್ಗುಟ್ಟುತ್ತಿವೆ. ಚಿತ್ರಕ್ಕೀಗ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಸಂಕ್ರಾಂತಿಗೆ ಅರ್ಥಾತ್ ಜನವರಿ 14ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.

  ರಾಣಾ ಎದುರು ರಚಿತಾ ರಾಮ್ ಮತ್ತು ರೀಷ್ಮಾ ನಾಣಯ್ಯ ನಾಯಕಿಯರು. ರಚಿತಾ ರಾಮ್ ಇದೇ ಮೊದಲ ಬಾರಿಗೆ ಲಿಪ್ ಲಾಕ್ ಮಾಡಿರೋ ಚಿತ್ರದಲ್ಲಿ ರಕ್ಷಿತಾ ಕೂಡಾ ಹೆಜ್ಜೆ ಹಾಕಿದ್ದಾರೆ. ಒಟ್ಟಿನಲ್ಲಿ ಸಲಗ, ಕೋಟಿಗೊಬ್ಬ-3ಯಿಂದ ಶುರುವಾದ ಸಿನಿಮಾ ಹಬ್ಬ.. ಸಂಕ್ರಾಂತಿಗೆ ಇನ್ನೊಂದು ಮಜಲು ತಲುಪಲಿದೆ.

 • ಸರಿಗಮಪ ಹನುಮಂತ ಏಕ್ ಲವ್ ಯಾ ಎಂದಾಗ..

  ಸರಿಗಮಪ ಹನುಮಂತ ಏಕ್ ಲವ್ ಯಾ ಎಂದಾಗ..

  ಜೋಗಿ ಪ್ರೇಮ್ ತಮ್ಮ ಚಿತ್ರಗಳನ್ನು ಸ್ಪೆಷಲ್ ಆಗಿ ಪ್ರಮೋಟ್ ಮಾಡೋದ್ರಲ್ಲಿ ಸಖತ್ ಡಿಫರೆಂಟ್. ಪ್ರತಿ ಬಾರಿಯೂ ವ್ಹಾವ್ ಎನ್ನಿಸುವ ತಂತ್ರಗಳನ್ನು ಅದ್ಭುತವಾಗಿ ಬಳಸುವ ಪ್ರೇಮ್, ಈ ಬಾರಿ ಏಕ್ ಲವ್ ಯಾ ಚಿತ್ರಕ್ಕೆ ಸರಿಗಮಪ ಹನುಮಂತನನ್ನು ಕರೆ ತಂದಿದಾರೆ. ಏಕ್ ಲವ್ ಯಾ ಚಿತ್ರದ ಹಾಡೊಂದನ್ನು ಹನುಮ ಹಾಡಲಿದ್ದಾರೆ.

  ಈಗಾಗಲೇ ಹೊರಬಿದ್ದಿರುವ ಏಕ್ ಲವ್ ಯಾದ ಟ್ರ್ಯಾಕ್ಸ್, ಕೇಳುಗರ ಕಿವಿಯಲ್ಲಿ ಗುಂಯ್‍ಗುಟ್ಟುತ್ತಿವೆ. ರಕ್ಷಿತಾ ಪ್ರೇಮ್ ಸೋದರ ರಾಣಾ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈಗ ಮತ್ತೊಂದು ಹಾಡು.. ಅದೂ 2019ರಲ್ಲಿ ಕಿರುತೆರೆಯ ಸೆನ್ಸೇಷನ್ ಆಗಿದ್ದ ಹನುಮಂತನ  ಧ್ವನಿಯಲ್ಲಿ. ಲಮಾಣಿ ಜಾನಪದ ಗೀತೆಗಳನ್ನು ಜವಾರಿ ಶೈಲಿಯಲ್ಲಿ ಹಾಡಿ ಕನ್ನಡಿಗರ ಮನಸ್ಸು ಗೆದ್ದ ಹನುಮಂತನ ಮೇಲೆ ಪ್ರೇಮ್ ಕಣ್ಣು ಬಿದ್ದಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery