ಕೋವಿಡ್ 2ನೇ ಅಲೆ ತೀವ್ರಗೊಂಡಾಗ ಆಕ್ಸಿಜನ್ ಮತ್ತು ಐಸಿಯು ಘಟಕಗಳ ಕೊರತೆ ಎದುರಾಗಿತ್ತು. ಆ ನಿಟ್ಟಿನಲ್ಲಿ ಧೃಡವಾದ ಹೆಜ್ಜೆಯಿಟ್ಟಿದ್ದ ಹೊಂಬಾಳೆ ಫಿಲಮ್ಸ್, ಮಂಡ್ಯದಲ್ಲಿ ಐಸಿಯು ಘಟಕ ಸ್ಥಾಪನೆಗೆ ಕೈಜೋಡಿಸಿತ್ತು. ಜಿಲ್ಲಾಡಳಿತಕ್ಕೆ 50 ಲಕ್ಷ ನೀಡಿದ್ದಲ್ಲದೇ, ಅಗತ್ಯ ಇನ್ನಿತರ ನೆರವನ್ನೂ ನೀಡಿತ್ತು. ಒಟ್ಟಾರೆ 2 ಕೋಟಿ 35 ಲಕ್ಷ ನೆರವು ನೀಡಿದ್ದರು. ಆ ನೆರವು ಈಗ ಕಾರ್ಯರೂಪಕ್ಕೂ ಬಂದಿದೆ.
ಮಂಡ್ಯದಲ್ಲಿ 20 ಬೆಡ್ಗಳ ಐಸಿಯು ಬೆಡ್ ವ್ಯವಸ್ಥೆ ಸ್ಥಾಪನೆಯೂ ಆಗಿದ್ದು, ಡಿಸಿಎಂ ಅಶ್ವತ್ಥ್ ನಾರಾಯಣ ಅದನ್ನು ಉದ್ಘಾಟನೆ ಮಾಡಿದ್ದಾರೆ. ಇದು ನೂತನ ತಂತ್ರಜ್ಞಾನದ ಐಸಿಯು ಘಟಕ. ಒಂದೇ ಮಾನಿಟರ್ನಲ್ಲಿ ರೋಗಿಯ ಬಿಪಿ, ಶುಗರ್ ಲೆವೆಲ್ ಹಾಗೂ ಆಕ್ಸಿಜನ್ ಮಟ್ಟವನ್ನು ನೋಡಬಹುದು. ಹೊಂಬಾಳೆ ಫಿಲಮ್ಸ್ನ ಈ ಸೇವೆಗೆ ಡಿಸಿಎಂ ಅಶ್ವತ್ಥ್ ನಾರಾಯಣ ಧನ್ಯವಾದ ಅರ್ಪಿಸಿದ್ದಾರೆ. ವಿಜಯ್ ಕಿರಗಂದೂರು ಅವರ ಯೋಜನೆಗೆ ಮಂಡ್ಯದ ಮಿಮ್ಸ್ ವೈದ್ಯಕೀಯ ಕಾಲೇಜು ಕೈಜೋಡಿಸಿದೆ.