` narendra modi, - chitraloka.com | Kannada Movie News, Reviews | Image

narendra modi,

  • Hebbuli Predicted What Modi Did! 

    hebbuli predicted what modi did

    In a coincidence that is mind-blowing the film Hebbuli has actually predicted what Prime Minister Narendra Modi has done in the last few months. There are two important things which the film shows and what the prime minister actually did. 

    Firstly in the film Sudeep plays an Indian army paratrooper captain who along with special commandos conducts surgical strike inside Pakistan occupied Kashmir. This was what the Indian army did a few months ago after the Patankoth attacks by terrorists. Though the surgical strike by Indian army was done a few months ago the film was launched a year ago and the script was done before that. The dialogues in the movie about the motive of the surgical strike and said by the character played by Sudeep says is very close to what the Indian government also said. Director Krishna predicted it in the film very closely. 

    Second is about prices of medicine. Last week the Indian government put a cap on the prices of stents used in heart operations. Earlier hospitals used to charge arbitrary rates running into Lakhs of Rupees. The government fixed the maximum price at Rs 30,000. In Hebbuli the main message is about medicine has become a business and poor people suffer. It gives an idea about how medicines can be given at a much lower price than it is being sold. It also shows why medicine prices are artificially kept high. To know more you should watch the film.

    Hebbuli Movie Gallery - View

    Related Articles :-

    Hebbuli Movie Review :- 4/5

    Fans Pay Rs 1.45 Lakh For Hebbuli Tickets

    Hebbuli To Release In A Record 425 Theater

    An Excitement Called Hebbuli - Sudeep 

    No Trailer For Hebbuli, Direct Show

    PVR Releasing Hebbuli Outside Karnataka

    Hebbuli Booking Starts

    Hebbuli Censored UA; Releasing On 23rd 

    Hebbuli's Sundari Released

    False Start for Hebbuli Title Track 

    Hebbuli Song Creating Record

  • Mythrea Gowda Creates Ruckus in BJP Rally

    mythrea gowda image

    Fighting with police is not new to Actress Mythrea Gowda. A few years back Mythrea had tried to slap a police constable when she was stopped by the police for travelling in a high speed.

    Now the actress has done it again. Mythrea Gowda on Friday evening created ruckus at the BJP rally in National High School grounds in Bangalore and argued with the police for not letting her to meet Prime Minister Narendra Modi.

    Mythrea Gowda had arrived at the National High School Grounds to meet PM Modi and complain to him against Union Minister Sadananda Gowda. Mythrea neither did not have proper passes or permission to get near the stage. When the police stopped her, Mythrea created a ruckus and started an argument with the police regarding this.

    However, the police took her to custody and released after a while.

  • Roopa Iyer To Direct A Film About Narendra Modi

    roopa iyer ti direct movie on narendra modi

    Actress turned director Roopa Iyer is all set to direct a film about Prime Minister Narendra Modi called 'Namo'. The details about the film will be officially announced soon.

    In the past, Roopa has directed films like 'Mukhaputa', 'Chandra' and 'Colours' and this is her fourth film as director. Roopa has done a lot of research about the Prime Minister and has finalized the script. The film will be made simultaneously in Kannada and Hindi.

    The film not only tells the life of Narendra Modi, but also tells the spiritual side of him. The film is being funded by and NRI from America. The artistes and technicians are yet to be finalized in the coming days.

  • ಕನ್ನಡದಲ್ಲಿ ಬರಲಿದೆ ನರೇಂದ್ರ ಮೋದಿ ಸಿನಿಮಾ

    a movie in kannada on narendra modi

    ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರ ರಾಜಕೀಯದ ಕೇಂದ್ರಬಿಂದು. ಒಬ್ಬ ಚಾಯ್‍ವಾಲಾ ಪ್ರಧಾನಿಯ ಹುದ್ದೆಗೆ ಏರುವುದು ಸಾಧಾರಣ ಸಂಗತಿಯಲ್ಲ. ಈಗ ಅವರ ಲೈಫ್‍ಸ್ಟೋರಿಯನ್ನು ಸಿನಿಮಾ ಮಾಡಲು ಹೊರಟಿದ್ದಾರೆ ನಿರ್ದೇಶಕಿ ರೂಪಾ ಅಯ್ಯರ್.

    ಮಾಡರ್ನ್ ಆಧ್ಯಾತ್ಮ ಚಿಂತಕಿಯೂ ಆಗಿರುವ ನಿರ್ದೇಶಕಿ ರೂಪಾ ಅಯ್ಯರ್, ಚಿತ್ರದಲ್ಲಿ ಆಧ್ಯಾತ್ಮವನ್ನೂ ಸೇರಿಸಿದ್ದಾರಂತೆ. ಇಡೀ ದೇಶವನ್ನು ಸುತ್ತಿರುವ ಕೆಲವೇ ನಾಯಕರಲ್ಲಿ ಒಬ್ಬರಾಗಿರುವ ಮೋದಿಯವರ ಜೀವನದ ಕಥೆ ನಿರ್ಮಿಸೋಕೆ ನಿರ್ಮಾಪಕರೂ ಸಿಕ್ಕಿದ್ದಾರೆ. ಕೆಲವೇ ದಿನಗಳಲ್ಲಿ ಚಿತ್ರದ ಸಂಪೂರ್ಣ ವಿವರ ನೀಡೋದಾಗಿ ಹೇಳಿಕೊಂಡಿದ್ದಾರೆ ರೂಪಾ ಅಯ್ಯರ್.

    ಮೋದಿ ಯುವಜನತೆಗೆ ಪ್ರೇರಣೆಯಾದ ರೀತಿಯೇ ನನಗೆ ಇಷ್ಟವಾಯಿತು. ಹಾಗಾಗಿಯೇ ಸಿನಿಮಾ ಮಾಡಲು ನಿರ್ಧರಿಸಿದೆ ಎಂದು ಹೇಳಿಕೊಂಡಿದ್ದಾರೆ ರೂಪಾ. ಹೆಚ್ಚಿನ ಮಾಹಿತಿಗೆ ಇನ್ನೂ ಕೆಲವು ದಿನ ಕಾಯಬೇಕು.

    Related Articles :-

    Roopa Iyer To Direct A Film About Narendra Modi

  • ಕನ್ನಡದಲ್ಲೂ ಬರುತ್ತಾ ಪಿಎಂ ನರೇಂದ್ರ ಮೋದಿ ಸಿನಿಮಾ..?

    vivek oberoi in modi'e biopic

    ಪಿಎಂ ನರೇಂದ್ರ ಮೋದಿ ಅನ್ನೋದು ಆ ಚಿತ್ರದ ಹೆಸರು. ಒಮುಂಗ್ ಕುಮಾರ್ ನಿರ್ದೇಶಕ. ವಿವೇಕ್ ಒಬೇರಾಯ್ ಮೋದಿ ಪಾತ್ರಧಾರಿ. ಹಿಂದಿಯಲ್ಲಿ ತಯಾರಾಗುತ್ತಿರುವ ಈ ಚಿತ್ರವನ್ನು ದೇಶದ ಎಲ್ಲ ಭಾಷೆಗಳಲ್ಲೂ ರಿಲೀಸ್ ಮಾಡಲು ಯೋಚಿಸಿದೆ ಚಿತ್ರತಂಡ.

    ಜನವರಿ 7ರಂದು ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗುತ್ತಿದೆ. ಅದಾದ ಒಂದು ವಾರದ ನಂತರ ಶೂಟಿಂಗ್ ಕೂಡಾ ಶುರುವಾಗಲಿದೆ. ದೇಶದಲ್ಲಿ ಒಟ್ಟು 23 ಭಾಷೆಗಳಲ್ಲಿ ಮೋದಿ ಸಿನಿಮಾ ಮಾಡಲು ಸಿದ್ಧವಾಗಿರುವ ಚಿತ್ರತಂಡದ ಲಿಸ್ಟ್‍ನಲ್ಲಿ ಕನ್ನಡವೂ ಇದೆ. 

  • ಚಿತ್ರರಂಗದ ದಶಕಗಳ ಬೇಡಿಕೆಗೆ ಮೋದಿ ತಥಾಸ್ತು

    modi gifts single window clearance for film kaers

    ಕನ್ನಡ ಚಿತ್ರರಂಗವಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗವನ್ನೇ ಕಾಡುವ ಅತಿ ದೊಡ್ಡ ಸಮಸ್ಯೆ ಚಿತ್ರೀಕರಣಕ್ಕೆ ಅನುಮತಿ ಗಿಟ್ಟಿಸಿಕೊಳ್ಳುವುದು. ದೇಶದಲ್ಲಿ ನೀವು ಎಲ್ಲೇ ಸಿನಿಮಾ ಶೂಟಿಂಗ್ ಮಾಡಿ, ಅದಕ್ಕಾಗಿ ಇಲಾಖೆಯಿಂದ ಇಲಾಖೆಗಳಿಗೆ ಅಲೆಯಬೇಕು. ಚಿತ್ರೀಕರಣಕ್ಕೆ ಅನುಮತಿ ಇದ್ದರೂ, ಚಿತ್ರೀಕರಣ ನಡೆಯುವ ಪ್ರದೇಶದ ಯಾವುದಾದರೂ ಸ್ಥಳೀಯ ಅಧಿಕಾರಿ ಕೂಡಾ ಚಿತ್ರೀಕರಣಕ್ಕೆ ನನ್ನ ಅನುಮತಿ ಪಡೆದಿಲ್ಲ ಎಂದು ಹೇಳಿ ಕಿರಿಕ್ ಮಾಡುವ ಘಟನೆಗಳನ್ನು ಅನುಭವಿಸಿದವರಿಗೇ ಗೊತ್ತು. ಹೀಗಾಗಿ.. ದೇಶದ ಎಲ್ಲ ಭಾಷೆಯ ಚಿತ್ರರಂಗದವರೂ ಸಿಂಗಲ್ ವಿಂಡೋ ಸಿಸ್ಟಂ ಕೊಡುವಂತೆ ಸರ್ಕಾರಗಳನ್ನು ದಶಕಗಳಿಂದ ಒತ್ತಾಯಿಸುತ್ತಲೇ ಇದ್ದರು. ಅದು ಈ ಬಾರಿಯ ಬಜೆಟ್‍ನಲ್ಲಿ ಈಡೇರಿದೆ.

    ಯಾವುದೇ ಭಾಷೆಯಲ್ಲಿ ಸಿನಿಮಾ ಮಾಡಿದರೂ, ಒಂದೇ ಕಡೆ ಅನುಮತಿ ಕೊಡುವ ಸಿಂಗಲ್ ವಿಂಡೋ ಪದ್ಧತಿಗೆ ಮೋದಿ ಬಜೆಟ್ ಅಸ್ತು ಎಂದಿದೆ. ಬಜೆಟ್ ಘೋಷಣೆ ಎಷ್ಟು ತ್ವರಿತವಾಗಿ, ಶಿಸ್ತುಬದ್ಧವಾಗಿ ಜಾರಿಗೆ ಬರಲಿದೆ ಎನ್ನುವುದನ್ನು ತಿಳಿಯಲು ಇನ್ನೂ ಕೆಲ ಸಮಯ ಬೇಕು.

  • ನಾನೆಲ್ಲಿ ಮೋದಿಯನ್ನು ಟೀಕಿಸಿದೆ : ವಿವಾದ ಸೃಷ್ಟಿಸಿದ್ದಕ್ಕೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅಸಮಾಧಾನ

    sp balasubramanyam upset pver modi's chnage within controversy

    ಇತ್ತೀಚೆಗೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಚೇಂಜ್ ವಿತ್ ಮೀಟ್ ಅನ್ನೋ ಔತಣಕೂಟ ಏರ್ಪಡಿಸಿದ್ದರು. ಚಿತ್ರರಂಗದ ಸೆಲಬ್ರಿಟಿಗಳನ್ನೆಲ್ಲ ಆ ಪಾರ್ಟಿಗೆ ಕರೆಯಲಾಗಿತ್ತು. ಅಲ್ಲಿ ದಕ್ಷಿಣದ ಕಲಾವಿದರೇ ಇರಲಿಲ್ಲ ಎಂದು ಆಗಲೂ ಒಂದು ವಿರೋಧ ಕೇಳಿ ಬಂದಿತ್ತು. ಅದು ಇನ್ನೊಂದು ಮಜಲು ತಲುಪಿದ್ದು ಎಸ್.ಪಿ.ಬಾಲಸುಬ್ರಹ್ಮಣ್ಯಂ ಹೇಳಿಕೆ ನಂತರ. ಅದು ಇನ್ನೊಂದು ವಿವಾದವಾಗಿ, ಎಸ್ಪಿಬಿ ಮೋದಿ ವಿರುದ್ಧ ಗರಂ ಎಂದೆಲ್ಲ ದೊಡ್ಡ ಬ್ರೇಕಿಂಗ್ ನ್ಯೂಸ್ ಆಯ್ತು. ಈಗ ಆ ವಿವಾದದ ಬ್ರೇಕಿಂಗ್ ನ್ಯೂಸಿಗೆ ಎಸ್ಪಿಬಿ ಉತ್ತರ ಕೊಟ್ಟಿದ್ದಾರೆ.

    ‘ಇದ್ಯಾಕೆ ವಿವಾದಾವಾಯಿತೋ ಅರ್ಥವಾಗುತ್ತಿಲ್ಲ. ನೀವು ಬಳಸಿದ ಪದಗಳಿಂದ ಆ ರೀತಿ ಆಗಿದೆ. ನನ್ನ ಫೋನನ್ನು ಕಸಿದುಕೊಂಡರು, ಪ್ರಧಾನಿ ಮೋದಿ ಜತೆಗೆ ಅಸಮಾಧಾನ ವ್ಯಕ್ತಪಡಿಸಿದರು ಎಂದೆಲ್ಲ ಬರೆಯಲಾಗಿದೆ. ನಾನು ಪ್ರಧಾನ ಮಂತ್ರಿಗಳ ವಿರುದ್ಧ ಏನೂ ಹೇಳಿಯೇ ಇಲ್ಲ. ಅದೇ ರೀತಿ ಸ್ಟಾರ್‌ಗಳ ವಿರುದ್ಧವೂ ಏನೂ ಹೇಳಿಲ್ಲ. ನಾನು ಹೇಳಿದ್ದು ಇಷ್ಟೇ, ಒಳಗಡೆಗೆ ನಮ್ಮ ಫೋನ್‌ಗಳನ್ನು ಕೊಂಡೊಯ್ಯಲು ಅನುಮತಿ ನೀಡಲಿಲ್ಲ. ಕೆಲವರು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಆದರೆ ನಮಗದು ಸಾಧ್ಯವಾಗಲಿಲ್ಲ. ಅಷ್ಟೇ ನಾನು ಹೇಳಿದ್ದು’ ಎಂದಿದ್ದಾರೆ.

    ಔತಣಕೂಟದಲ್ಲಿ ಮೋದಿ ನಮ್ಮನ್ನು ಚೆನ್ನಾಗಿಯೇ ಕಂಡರು. ನನಗೆ ಸಿಗಬೇಕಾದ ಮರ್ಯಾದೆ ಸಿಕ್ಕಿದೆ ಎಂದಿದ್ದಾರೆ ಮೋದಿ. ಎಸ್ಪಿಬಿಯ ಒಂದು ಸ್ಟೇಟ್ಮೆಂಟ್ ಇಟ್ಟುಕೊಂಡು ಇಷ್ಟೆಲ್ಲ ವಿವಾದ ಸೃಷ್ಟಿಯಾಗಿದ್ದು ಹೇಗೆ..?

  • ಮೋದಿ ಬಾಲಿವುಡ್ ಪ್ರೀತಿ : ಜಗ್ಗೇಶ್, ಖುಷ್ಬೂ ಅಸಮಾಧಾನ

    jaggesh, khusbhoo expressed displeasure over modis ignorance towards south film industry

    ಮಹಾತ್ಮಾ ಗಾಂಧೀಜಿ 150ನೇ ಜಯಂತಿ ವಿಶೇಷವಾಗಿ ಕೇಂದ್ರ ಸರ್ಕಾರ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಕಾರ್ಯಕ್ರಮಕ್ಕೆ ಬಾಲಿವುಡ್ ಗಣ್ಯರನ್ನು ಆಹ್ವಾನಿಸಲಾಗಿತ್ತು. ಇಡೀ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಯಾವುದೇ ಭಾಷೆಯ ಒಬ್ಬ ಕಲಾವಿದರೂ ಇರಲಿಲ್ಲ. ಮೋದಿಯವರ ಕಣ್ಣಿಗೆ ದಕ್ಷಿಣ ಭಾರತದ ಕನ್ನಡ, ತೆಲುಗು, ತಮಿಳು, ಮಲಯಾಳಂ ಕಲಾವಿದರು ಕಾಣಲಿಲ್ಲವೇ ಎಂದು ಹಲವು ದಕ್ಷಿಣದ ತಾರೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸ್ವತಃ ಬಿಜೆಪಿ ಮುಖಂಡರೂ ಅಗಿರುವ ಜಗ್ಗೇಶ್ ಕಲಾರಂಗಕ್ಕೆ ಶಾರೂಕ್, ಅಮೀರ್ ಅವರೇ ಒಡೆಯರಲ್ಲ. ಕನ್ನಡದಲ್ಲೂ ಕಲಿಗಳು ಅನೇಕರಿದ್ದಾರೆ. ಪರಭಾಷೆಗಳಿಗೆ ಚಪ್ಪಾಳೆ ಹೊಡೆತ ತಪ್ಪಿಗೆ ನಾವು ಕನ್ನಡಿಗರು ದಾರಿ ತಪ್ಪಿದಂತೆ ಆಗಿದ್ದೇವೆ. ಉತ್ತರ ಭಾರತದ ನಟನಟಿಯರಿಗಿಂತ ನಾವು ಯಾವುದ್ರಲ್ಲೂ ಕಡಿಮೆ ಇಲ್ಲ ಎಂದು ಟ್ವೀಟ್ ಮಾಡಿದ್ದಾರೆ.

    ಬಿಜೆಪಿ ಮುಖಂಡರಾಗಿ ಮೋದಿ ವಿರುದ್ಧ ಮಾತನಾಡಿದ್ರಾ ಎಂಬ ಪ್ರಶ್ನೆಗೂ ಉತ್ತರ ಕೊಟ್ಟಿರುವ ಜಗ್ಗೇಶ್ ನಾನು ಮೋದಿ ವಿರುದ್ಧ ತಿರುಗಿಬೀಳುಷ್ಟು ದೊಡ್ಡವನಲ್ಲ. ಸೌತ್ ಇಂಡಿಯಾದವರನ್ನು ಬಿಟ್ಟಿದ್ದಕ್ಕೆ ವಿರೋಧಿಸಿದ್ದೇನೆ ಅಷ್ಟೆ ಎಂದು ಸ್ಪಷ್ಟಪಡಿಸಿದ್ದಾರೆ.

    ನಟಿ ಖುಷ್ಬೂ ಸುಂದರ್, ತೆಲುಗು ನಟ ರಾಮ್ ಚರಣ್ ಅವರ ಪತ್ನಿ ಉಪಾಸನಾ ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಭಾರತದ ಕಲಾವಿದರನ್ನೂ ಇದೇ ರೀತಿ ಆಹ್ವಾನಿಸಿ ಗೌರವಿಸಿದರೆ ಆಗ ಸರಿ ಎನ್ನುತ್ತೇನೆ. ಭಾರತದ ಅಭಿವೃದ್ಧಿಗೆ ದಕ್ಷಿಣ ಭಾರತದವರ ಕೊಡುಗೆಯೂ ಇದೆ ಎಂಬುದನ್ನು ಮರೆಯಬಾರದು ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ. ದಕ್ಷಿಣ ಭಾರತದ ಹಲವು ಕಲಾವಿದರು ಈ ನಡೆಯನ್ನು ಬೆಂಬಲಿಸಿದ್ದಾರೆ.

  • ಮೋದಿ ಸಿನಿಮಾ.. ಕನ್ನಡದಲ್ಲಿ ಬರೋದು ಈಗ ಪಕ್ಕಾ..! 

    narendra modi;s biopic will release in kannada

    ಪ್ರಧಾನಮಂತ್ರಿ ನರೇಂದ್ರ ಮೋದಿ ಸಿನಿಮಾ, ಕನ್ನಡದಲ್ಲಿಯೂ ಬರುವ ಸಾಧ್ಯತೆ ಇದೆ ಅನ್ನೋ ಸುದ್ದಿಯನ್ನು ನೀವು ಚಿತ್ರಲೋಕದಲ್ಲಿಯೇ ಓದಿದ್ದಿರಿ. ಈಗ ಅದು ಅಧಿಕೃತವಾಗಿದೆ. ಚಿತ್ರತಂಡ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದ್ದು, ಆ ಫಸ್ಟ್ ಲುಕ್‍ಗಳಲ್ಲಿ ಕನ್ನಡದ ಪೋಸ್ಟರ್ ಕೂಡಾ ಇದೆ.

    ಒಮುಂಗ್ ಕುಮಾರ್ ನಿರ್ದೇಶಕರಾಗಿರುವ ಚಿತ್ರದಲ್ಲಿ ನರೇಂದ್ರ ಮೋದಿ ಅವತಾರದಲ್ಲಿ ಕಾಣಿಸಿಕೊಳ್ತಿರೋದು ವಿವೇಕ್ ಒಬೇರಾಯ್. ಹಿಂದಿಯಲ್ಲಿ ತಯಾರಾಗುತ್ತಿರುವ ಈ ಚಿತ್ರವನ್ನು ದೇಶದ ಎಲ್ಲ ಭಾಷೆಗಳಲ್ಲೂ ರಿಲೀಸ್ ಮಾಡುವುದಾಗಿ ಹೇಳಿದೆ ಮೋದಿ ಟೀಂ.

    Related Articles :-

    ಕನ್ನಡದಲ್ಲಿ ಬರಲಿದೆ ನರೇಂದ್ರ ಮೋದಿ ಸಿನಿಮಾ

  • ಮೋದಿಗೆ ಸಿಗಲಿದೆ ಮಹದಾಯಿ ಬಂದ್ ಸ್ವಾಗತ

    bundh will welcome modi

    ಮಹದಾಯಿ ಕುರಿತ ವಿಚಾರದಲ್ಲಿ ಕನ್ನಡ ಚಿತ್ರರಂಗ ಬೆಂಬಲ ನೀಡುತ್ತಿಲ್ಲ ಎಂಬ ಆರೋಪ ಇತ್ತೀಚೆಗೆ ಕೇಳಿಬಂದಿತ್ತು. ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದ ಮಹದಾಯಿ ಹೋರಾಟಗಾರರಿಗೆ ಚಿತ್ರರಂಗದ ಹಲವರು ಬೆಂಬಲ ವ್ಯಕ್ತಪಡಿಸಿದ್ದರಾದರೂ, ಒಂದು ಪಕ್ಷದ ವಿರುದ್ಧ ನಡೆಯುವ ಹೋರಾಟ ಸರಿಯಲ್ಲ ಎಂದು ವಿರೋಧಿಸಿದ್ದರು. ಎಲ್ಲ ಪಕ್ಷಗಳ ವಿರುದ್ಧ ಒಗ್ಗಟ್ಟಾಗಿ ಹೋರಾಡುವ ಘೋಷಣೆ ಮೊಳಗಿಸಿದ್ದರು. ಈಗ ನಿರ್ಧಾರ ಹೊರಬಿದ್ದಿದೆ.

    ಮಹದಾಯಿಗೆ ಬೆಂಬಲ ಸೂಚಿಸಿ ಜನವರಿ 27ರಂದು ಕರ್ನಾಕಟ ಬಂದ್‍ಗೆ ಕರೆ ನೀಡಲಾಗಿದೆ. ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್‍ಗೆ ಕರೆ ಕೊಟ್ಟಿವೆ. ಫಿಲಂ ಚೇಂಬರ್ ಕೂಡಾ ಬೆಂಬಲ ಘೋಷಿಸಿದೆ. ಆ ದಿನ ಕನ್ನಡ ಚಿತ್ರರಂಗದಲ್ಲಿ ಯಾವುದೇ ಸಿನಿಮಾದ ಶೂಟಿಂಗ್ ಸಹಾ ಇರುವುದಿಲ್ಲ ಎಂದು ಘೋಷಿಸಿದ್ದಾರೆ ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದು. 

    ಅಂದಹಾಗೆ ಪ್ರಧಾನಿ ನರೇಂದ್ರ ಮೋದಿ ಜನವರಿ 28ರಂದು ಕರ್ನಾಟಕಕ್ಕೆ ಬರುತ್ತಿದ್ದಾರೆ. ಮೋದಿ ಬರುವ ಒಂದು ದಿನ ಮುನ್ನ, ಪ್ರಧಾನಿಗೆ ಮಹದಾಯಿ ವಿಚಾರ ತಲುಪಿಸಲೆಂದೇ ಈ  ಬಂದ್‍ಗೆ ಕರೆ ನೀಡಲಾಗಿದೆ. ಅಂದಹಾಗೆ ಬಂದ್ ಒಬ್ಬರ ವಿರುದ್ಧ ಅಲ್ಲ. ಗೋವಾ ಸಿಎಂ ಪತ್ರವನ್ನಿಟ್ಟುಕೊಂಡು ಬಿಜೆಪಿ ಮಾಡಿದ ರಾಜಕೀಯದ ವಿರುದ್ಧ. ಒಂದು ಪತ್ರ ಕೈ ಸೇರಿದ ನಂತರ, ಅದನ್ನು ರಾಜಕಾರಣಕ್ಕಷ್ಟೇ ಬಳಸಿ, ಹೇಗೋ ಸಿಕ್ಕಿದ್ದ ಒಂದು ಅವಕಾಶವನ್ನು ಹಾಳು ಮಾಡಿದ ಕಾಂಗ್ರೆಸ್ ವಿರುದ್ಧ. ಎರಡೂ ಪಕ್ಷಗಳನ್ನು ಟೀಕಿಸುವುದರಲ್ಲೇ ಕಾಲಕಳೆದ ಜೆಡಿಎಸ್ ವಿರುದ್ಧ. ಹೀಗೆ ಎಲ್ಲ ಪಕ್ಷಗಳ ವಿರುದ್ಧವೂ ಈ ಬಂದ್ ನಡೆಯುತ್ತಿದೆ.

  • ಮೋದಿಗೇ ಜಗ್ಗೇಶ್ ಚಾಲೆಂಜ್..!

    jaggesh challenges om narendra modi

    ನವರಸ ನಾಯಕ ಜಗ್ಗೇಶ್, ಪ್ರಧಾನಿ ನರೇಂದ್ರ ಮೋದಿಯವರ ಅಪ್ಪಟ ಅಭಿಮಾನಿ. ಜೊತೆಗೆ ಬಿಜೆಪಿ ಮುಖಂಡರೂ ಹೌದು. ಹೀಗಿರುವಾಗ ಅವರೇಕೆ ಮೋದಿಗೆ ಚಾಲೆಂಜ್ ಹಾಕ್ತಾರೆ ಅಂದ್ಕೊಂಡ್ರಾ..? ಎಲ್ಲ ಫಿಟ್‍ನೆಸ್ ಚಾಲೆಂಜ್ ಮಹಾತ್ಮೆ.

    ಮೋದಿಗೆ ಮೊದಲು ಫಿಟ್‍ನೆಸ್ ಚಾಲೆಂಜ್ ಹಾಕಿದ್ದು ವಿರಾಟ್ ಕೊಹ್ಲಿ. ಅದು ಶುರುವಾಗಿದ್ದು ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್‍ರಿಂದ. ಈಗ ಜಗ್ಗೇಶ್ ಸತತವಾಗಿ 50 ಡಿಪ್ಸ್ ಹೊಡೆದು ಫಿಟ್‍ನೆಸ್ ಚಾಲೆಂಜ್ ಹಾಕಿದ್ದಾರೆ.

    ಜಗ್ಗೇಶ್ ಬಾಲ್ಯದಿಂದಲೂ ತಪ್ಪದೇ 50 ದಂಡ ಬೈಠಕ್ ಮಾಡ್ತಾರಂತೆ. ಅದರಿಂದ ಇಡೀ ದೇಹ ಹದ್ದುಬಸ್ತಿನಲ್ಲಿರುತ್ತೆ. ಇದನ್ನು ಹಲವು ವರ್ಷಗಳಿಂದಲೂ ಮಾಡಿಕೊಂಡು ಬಂದಿದ್ದೇನೆ. ಆ ಕಾಲದ ಗರಡಿ ಮನೆ ತಾಲೀಮು, ಈಗಿನ 55ನೇ ವಯಸ್ಸಿನಲ್ಲೂ ಮುಂದುವರೆದಿದೆ ಎಂದು ಹೇಳಿಕೊಂಡಿದ್ದಾರೆ ಜಗ್ಗೇಶ್.

  • ಸಿನಿಮಾ ಟಿಕೆಟ್ ಜಿಎಸ್‍ಟಿ ಇಳಿಕೆ - ಮೋದಿಗೆ ಬಾಲಿವುಡ್ ಥ್ಯಾಂಕ್ಸ್

    movie ticket price ghst drops down

    ಚಿತ್ರಮಂದಿರಗಳಲ್ಲಿ, ಮಲ್ಟಿಪ್ಲೆಕ್ಸುಗಳಲ್ಲಿ ಸಿನಿಮಾ ಟಿಕೆಟ್ ದರ ದುಬಾರಿ ಎನ್ನುತ್ತಿದ್ದವರಿಗೆ ಕೇಂದ್ರ ಸರ್ಕಾರ ಗುಡ್‍ನ್ಯೂಸ್ ಕೊಟ್ಟಿದೆ. ಟಿಕೆಟ್ ದರದ ಮೇಲಿದ್ದ ತೆರಿಗೆ ಹೊರೆಯ್ನು ಇಳಿಸಿದೆ. 

    100 ರೂ. ಒಳಗಿನ ಸಿನಿಮಾ ಟಿಕೆಟ್ ಮೇಲಿನ ಜಿಎಸ್‍ಟಿ, ಜನವರಿಯಿಂದ ಶೇ.18ರಿಂದ 12ಕ್ಕೆ ಇಳಿಕೆಯಾಗಲಿದೆ. 

    100 ರೂ.ಗಿಂತ ಮೇಲ್ಪಟ್ಟ ಸಿನಿಮಾ ಟಿಕೆಟ್‍ಗಳ ಮೇಲಿನ ಜಿಎಸ್‍ಟಿ, ಜನವರಿಯಿಂದ ಶೇ.28ರಿಂದ ಶೇ.18ಕ್ಕೆ ಇಳಿಕೆಯಾಗಲಿದೆ. 

    ಇದರ ಪರಿಣಾಮ, ಸಿನಿಮಾ ಟಿಕೆಟ್‍ಗಳ ದರ ಸ್ವಲ್ಪ ಮಟ್ಟದಲ್ಲಿ ತಗ್ಗಲಿದೆ.

    ಈ ಹಿನ್ನೆಲೆಯಲ್ಲಿ ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಅಜಯ್ ದೇವಗನ್, ಅಮೀರ್ ಖಾನ್ ಮೊದಲಾದವರು ಸ್ವಾಗತಿಸಿದ್ದಾರೆ. ಇದರಿಂದ ಚಿತ್ರೋದ್ಯಮಕ್ಕೆ ಲಾಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ತಿಳಿಸಿದ್ದಾರೆ. ಜಿಎಸ್‍ಟಿ ಇಳಿಸಬೇಕು ಎಂದು ಒತ್ತಾಯಿಸಿ ನಟ ಅಕ್ಷಯ್ ಕುಮಾರ್ ನೇತೃತ್ವದಲ್ಲಿ ಚಿತ್ರರಂಗದ ಗಣ್ಯರು ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.