` rachana inder, - chitraloka.com | Kannada Movie News, Reviews | Image

rachana inder,

 • ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರಿಂದ "ಲವ್ 360" ಚಿತ್ರದ ಥಿಯೇಟ್ರಿಕಲ್ ಟ್ರೇಲರ್ ಬಿಡುಗಡೆ.

  ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರಿಂದ "ಲವ್ 360" ಚಿತ್ರದ ಥಿಯೇಟ್ರಿಕಲ್ ಟ್ರೇಲರ್ ಬಿಡುಗಡೆ.

  ಶಶಾಂಕ್ ನಿರ್ದೇಶನದ "ಲವ್ 360" ಚಿತ್ರದ ಥಿಯೇಟ್ರಿಕಲ್ ಟ್ರೇಲರ್ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರಿಂದ ಬಿಡುಗಡೆಯಾಗಿದೆ. ಚಿತ್ರ ಇದೇ ಆಗಸ್ಟ್ 19 ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

  ಶಶಾಂಕ್ ನನ್ನ ಅಚ್ಚುಮೆಚ್ಚಿನ ನಿರ್ದೇಶಕರಲ್ಲಿ ಒಬ್ಬರು. ಅವರ ನಿರ್ದೇಶನದಲ್ಲಿ ನಾನು ನಟಿಸಬೇಕಿತ್ತು. ಕಾರಣಾಂತರದಿಂದ ಆಗಿಲ್ಲ. ಮುಂದೆ ನಮಿಬ್ಬರ ಕಾಂಬಿನೇಶನ್ ನಲ್ಲಿ ಚಿತ್ರ ಬರುತ್ತದೆ. ಸದ್ಯ ಶಶಾಂಕ್ ನಿರ್ದೇಶನದ "ಲವ್ 360" ಚಿತ್ರದ ಟ್ರೇಲರ್ ನೋಡಿದೆ. ಚೆನ್ನಾಗಿದೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು ಸುಮಧುರವಾಗಿದೆ. ಅದರಲ್ಲೂ ಸಿದ್ ಶ್ರೀರಾಮ್ ಹಾಡಿರುವ "ಜಗವೇ ನೀನು ಗೆಳತಿಯೆ" ಹಾಡಂತೂ ನನಗೆ ಬಹಳ ಇಷ್ಟ. ನಾಯಕ, ನಾಯಕಿ ಎಲ್ಲರೂ ಚೆನ್ನಾಗಿ ಅಭಿನಯಿಸಿದ್ದಾರೆ. ನಾನು ಬಿಡುಗಡೆ ದಿನದಂದೇ ಈ ಚಿತ್ರವನ್ನು ಚಿತ್ರಮಂದಿರದಲ್ಲಿ ಅಭಿಮಾನಿಗಳ

  ಜೊತೆಗೆ ನೋಡುತ್ತೇನೆ ಎಂದರು ನಟ ಶಿವರಾಜಕುಮಾರ್.

  ಚಿತ್ರದ ಥಿಯೇಟ್ರಿಕಲ್ ಟ್ರೇಲರ್ ಬಿಡುಗಡೆ ಮಾಡಿ ಕೊಟ್ಟ ಶಿವರಾಜಕುಮಾರ್ ಅವರಿಗೆ ಧನ್ಯವಾದಗಳು. ಚಿತ್ರ ಆಗಸ್ಟ್ ೧೯ರಂದು ತೆರೆ ಕಾಣಲಿದೆ. ಅದಕ್ಕೂ ಮುನ್ನ ನಾವು ಬೇರೆ ಬೇರೆ ಊರುಗಳಿಗೆ ಭೇಟಿ ನೀಡುತ್ತಿದ್ದೇವೆ. ಹೋದ ಕಡೆ ಸಿಗುತ್ತಿರುವ

  ಅಭೂತಪೂರ್ವ ಬೆಂಬಲಕ್ಕೆ‌ ಮನತುಂಬಿ ಬಂದಿದೆ. ಖ್ಯಾತ ಕೆ.ಆರ್.ಜಿ ಸ್ಟುಡಿಯೋಸ್ ಸಂಸ್ಥೆಯವರು ನಮ್ಮ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ. ನೂರೈವತ್ತಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದೆ. ಈಗಾಗಲೇ ಹಾಡುಗಳನ್ನು ಜನಪ್ರಿಯಗೊಳಿಸಿರುವ ಕನ್ನಡ ಕಲಾ ರಸಿಕರು ಚಿತ್ರವನ್ನೂ ಗೆಲಿಸುತ್ತಾರೆಂಬ ನಂಬಿಕೆ ಇದೆ ಎಂದರು ನಿರ್ದೇಶಕ ಶಶಾಂಕ್.

  ನನ್ನ ಸ್ನೇಹಿತನೊಬ್ಬ, "ನೀನು ಹೀರೋ ತರಹ ಇಲ್ಲ. ನಿನ್ನ ಸಿನಿಮಾ ಯಾರು ನೋಡುತ್ತಾರೆ ಅಂದಿದ್ದ". ಆ ಮಾತು‌ ನನ್ನ ಮನಸ್ಸಿನಲ್ಲೇ ಇತ್ತು. ಆದರೆ ಈಗ ಬೇರೆ ಬೇರೆ ಊರುಗಳಿಗೆ, ಅದರಲ್ಲೂ ಕಾಲೇಜುಗಳಿಗೆ ಭೇಟಿ ನೀಡಿದಾಗ ಅಲ್ಲಿನ ವಿದ್ಯಾರ್ಥಿಗಳು ನನ್ನನ್ನು ಗುರುತಿಸುತ್ತಿರುವ ರೀತಿ ಕಂಡು ಆಶ್ಚರ್ಯವಾಗಿದೆ. ಹೆಣ್ಣುಮಕ್ಕಳಂತೂ ನಾವು ನಿಮ್ಮ ಅಭಿಮಾನಿಗಳು. ನಿಮ್ಮ ಚಿತ್ರದ ಹಾಡುಗಳು ತುಂಬಾ ‌ಚೆನ್ನಾಗಿದೆ. ನೀವು ತುಂಬಾ ಚೆನ್ನಾಗಿ ಕಾಣುತ್ತೀರಾ ಎನ್ನುತ್ತಿದ್ದಾರೆ. ಅದಕ್ಕೆಲ್ಲಾ ಕಾರಣ ನಿರ್ದೇಶಕ ಶಶಾಂಕ್ ಸರ್. ಅವರಿಗೆ ಹಾಗೂ ನನಗೆ ಬೆಂಬಲ ನೀಡುತ್ತಿರುವ ನನ್ನ‌ ತಾಯಿ ಹಾಗೂ ಅಂಕಲ್ ಗೆ ಧನ್ಯವಾದ ಎಂದರು ನಾಯಕ ಪ್ರವೀಣ್.

  ನಾಯಕಿ ರಚನಾ ಇಂದರ್ ಸಹ ಚಿತ್ರಕ್ಕೆ ಬಿಡುಗಡೆ ಪೂರ್ವದಲ್ಲಿ ಸಿಗುತ್ತಿರುವ ಪ್ರತಿಕ್ರಿಯೆಗೆ ಸಂತಸಪಟ್ಟರು. ನಟರಾದ ಡ್ಯಾನಿ ಕುಟ್ಟಪ್ಪ ಹಾಗೂ ಮಹಂತೇಶ್ ಸಹ ಚಿತ್ರದ ಕುರಿತು ಮಾತನಾಡಿದರು.

 • ಪ್ರೇಮಿಗಳ ಕಥೆಯೋ.. ಸೇಡಿನ ಕಥೆಯೋ.. ಲವ್ 360 ಎಂಥ ಕಥೆ?

  ಪ್ರೇಮಿಗಳ ಕಥೆಯೋ.. ಸೇಡಿನ ಕಥೆಯೋ.. ಲವ್ 360 ಎಂಥ ಕಥೆ?

  ಟ್ರೇಲರ್ ನೋಡಿದವರಿಗೆ ಅಷ್ಟೂ ಕುತೂಹಲ ಹುಟ್ಟಿಸದಿದ್ದರೆ ಹೇಗೆ..? ನಿರ್ದೇಶಕ ಶಶಾಂಕ್ ಟ್ರೇಲರಿನಲ್ಲೇ ಒಂದು ಗಟ್ಟಿ ಕಥೆಯ ಸುಳಿವು ಕೊಟ್ಟಿದ್ದಾರೆ. ಅಲ್ಲಿ ಇಬ್ಬರು ಪ್ರೇಮಿಗಳು. ಅವಳು ಚೆನ್ನಾಗಿದ್ದಾಳೆಯೋ.. ಮಾನಸಿಕ ಅಸ್ವಸ್ಥೆಯೋ.. ಆಥವಾ ಬುದ್ದಿ ಬೆಳವಣಿಗೆಯಾಗದ ಯುವತಿಯೋ.. ಕುತೂಹಲ ಉಳಿಸುತ್ತಾರೆ ಶಶಾಂಕ್. ಮಧ್ಯೆ ಮಧ್ಯೆ ಅವಳನ್ನು ಗುಣಮುಖಳನ್ನಾಗಿ ಮಾಡಿಸಲು ನಾಯಕ ಪಡುವ ಯಾತನೆ.. ಮಧ್ಯದಲ್ಲೊಂದು ಫೈಟ್.. ಅಲ್ಲೇನೋ ನಡೆಯಬಾರದ್ದು ನಡೆದು ಹೀರೋ ಸೇಡು ತೀರಿಸಿಕೊಳ್ಳುತ್ತಿರಬಹುದಾ..? ಮತ್ತೊಂದು ಕುತೂಹಲ..

  ಲವ್ 360 ಚಿತ್ರದ ಟ್ರೇಲರ್.. ಹೀರೋ ಪ್ರವೀಣ್ ಹೊಸಬ. ನಾಯಕಿ ರಚನಾ ಇಂದರ್. ಲವ್ ಮಾಕ್ಟೇಲ್`ನ ಹೆಂಗೆ ನಾವು ಚೆಲುವೆ. ಅಭಿನಯ ಮಾತ್ರ.. ಹೃದಯ ಮುಟ್ಟುವಂತಿದೆ. ಏಕೆಂದರೆ ಅದು ಶಶಾಂಕ್ ಗರಡಿ. ತಮ್ಮದೇ ಬ್ಯಾನರ್‍ನಲ್ಲಿ ಹೊಸ ಹೀರೋನನ್ನು ಪರಿಚಯಿಸುತ್ತಿರೋ ಶಶಾಂಕ್ ಜೊತೆ ನಿರ್ಮಾಣಕ್ಕೆ ಕೈ ಜೋಡಿಸಿರುವುದು ಡಾ.ಮಂಜುಳಾ ಮೂರ್ತಿ. ಈಗಾಗಲೇ ಅರ್ಜುನ್ ಜನ್ಯಾ ಅವರ ಜಗವೇ ನೀನು ಗೆಳತಿಯೇ.. ಹಾಡು ಪ್ರೇಮಿಗಳ ಹೃದಯ ಮುಟ್ಟಿದೆ. ಸಿನಿಮಾ ಆಗಸ್ಟ್ 19ಕ್ಕೆ ಬರುತ್ತಿದೆ. ಕೆಆರ್‍ಜಿ ಸ್ಟುಡಿಯೋಸ್ ಲವ್ 360ಯನ್ನು ದೇಶದಾದ್ಯಂತ ವಿತರಿಸುತ್ತಿದೆ.

 • ಮತ್ತೆ ಹೃದಯಕ್ಕೆ ಲಗ್ಗೆ ಇಟ್ಟು ಬೋರ್ಗರೆದ ಲವ್ 360

  ಮತ್ತೆ ಹೃದಯಕ್ಕೆ ಲಗ್ಗೆ ಇಟ್ಟು ಬೋರ್ಗರೆದ ಲವ್ 360

  ಶುದ್ಧ ಪ್ರೀತಿಯ ಪಯಣ ಎಂದೂ ಸುಗಮವಾಗಿ ಸಾಗಿಲ್ಲ : ಶೇಕ್ಸ್‍ಪಿಯರ್

  ಈ ಒಂದು ಸಾಲಿನೊಂದಿಗೇ ಶುರುವಾಗುವ ಲವ್ ಸ್ಟೋರಿಯಿದು. ಮೊಗ್ಗಿನ ಮನಸು, ಕೃಷ್ಣನ್ ಲವ್ ಸ್ಟೋರಿ, ಕೃಷ್ಣ ಲೀಲಾದಂತಹ ಅಪ್ಪಟ ಪ್ರೇಮಕಥೆಗಳನ್ನು ನೀಡಿ ಗೆದ್ದಿರುವ ಶಶಾಂಕ್ ಈ ಬಾರಿ ಮತ್ತೊಂದು ವಿಭಿನ್ನ ಪ್ರೇಮಕಥೆಯೊಂದಿಗೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಲವ್ 360. ಆ ಚಿತ್ರದ ಮತ್ತೊಂದು ಹಾಡು ಬೋರ್ಗರೆವ ಕಡಲು..

  ಹಾಡಿನ ಸಾಹಿತ್ಯ ಚೆಂದವಾಗಿದೆ. ಶಶಾಂಕ್ ಅವರದ್ದೇ ಪದಗಳು. ಆ ಪದಗಳನ್ನು ಅರ್ಜುನ್ ಜನ್ಯ ಸಂಗೀತ ಇನ್ನೊಂದು ಲೆವೆಲ್ಲಿಗೆ ಕೊಂಡೊಯ್ದರೆ.. ಇಡೀ ಹಾಡನ್ನು ನೋಡುಗರ ಮತ್ತು ಕೇಳುಗರೆ ಎದೆಗೆ ನಾಟಿಸಿರುವುದು ಗಾಯಕ ಕೀರ್ತನ್ ಹೊಳ್ಳ. ಒಂದು ಕಂಪ್ಲೀಟ್ ಭಾವತೀವ್ರತೆಯ ಹಾಡು..

  ಈ ಚಿತ್ರದಲ್ಲಿ ಶಶಾಂಕ್ ಹೊಸಬರನ್ನಿಟ್ಟುಕೊಂಡೇ ಹೊರಟಿದ್ದಾರೆ. ಹೊಸಬರೆಂದರೆ ಸಂಪೂರ್ಣ ಹೊಸಬರೂ ಅಲ್ಲ. ಹೀರೋ ಪ್ರವೀಣ್ ಹೊಸ ಪರಿಚಯವಾದರೆ.. ಹೆಂಗೆ ನಾವು ಖ್ಯಾತಿಯ ರಚನಾ ಇಂದರ್ ನಾಯಕಿ. ನಿರ್ಮಾಣದಲ್ಲಿ ಡಾ.ಮಂಜುಳಾ ಮೂರ್ತಿ, ಶಶಾಂಕ್ ಅವರೊಂದಿಗೆ ಕೈಜೋಡಿಸಿದ್ದಾರೆ.

 • ಲವ್ 360 : ನಿರೀಕ್ಷೆ ಸುಳ್ಳು ಮಾಡಲಿಲ್ಲ ಶಶಾಂಕ್..!

  ಲವ್ 360 : ನಿರೀಕ್ಷೆ ಸುಳ್ಳು ಮಾಡಲಿಲ್ಲ ಶಶಾಂಕ್..!

  ನಿರ್ದೇಶಕ ಶಶಾಂಕ್ ಚಿತ್ರಗಳೆಂದರೆ ಅಲ್ಲೊಂದು ಚೆಂದದ ಕಥೆಯಿದ್ದೇ ಇರುತ್ತದೆ. ಉತ್ಕಟ ಭಾವನೆಗಳ ಸಂಘರ್ಷದ ಜೊತೆ ಜೊತೆಯಲ್ಲೇ ಎಲ್ಲರ ಹೃದಯಕ್ಕೂ ತಟ್ಟುವ ಕಥೆ ಇಟ್ಟುಕೊಂಡೇ ಬರುತ್ತಾರೆ ಶಶಾಂಕ್. ಮೊಗ್ಗಿನ ಮನಸ್ಸು ಚಿತ್ರದಿಂದಲೂ ಶಶಾಂಕ್ ಚಿತ್ರಗಳಲ್ಲಿ ಬ್ಯೂಟಿಫುಲ್ ಸ್ಟೋರಿ.. ಆ ಸ್ಟೋರಿಯೊಳಗೇ ಒಂದು ಹೃದಯ ಮುಟ್ಟುವ ಸಂದೇಶ.. ಇರುತ್ತದೆ. ಲವ್ 360 ಟ್ರೇಲರ್ ನೋಡಿದವರಿಗೆ ಒನ್ಸ್ ಎಗೇನ್ ಅದೇ ಫೀಲಿಂಗ್ ಬರುತ್ತದೆ. ಲವ್ 360ಯ ಪುಟ್ಟ ಟ್ರೇಲರ್‍ನಲ್ಲೇ ಒಂದು ಅದ್ಭುತ ಕಥೆಯಿದೆ.

  ಶುದ್ಧ ಪ್ರೀತಿಯ ಪಯಣ ಎಂದೂ ಸುಗಮನವಾಗಿ ಸಾಗಲ್ಲ ಎಂಬ ಷೇಕ್ಸ್‍ಪಿಯರ್ ಮಾತಿನೊಂದಿಗೇ ಶುರುವಾಗುವ ಟ್ರೇಲರ್.. ತುಂಟಾಟದ ಪ್ರೇಮಿಗಳು.. ಅವರ ನಡುವೆ ಸಂಭವಿಸಿರೋ ವಿಚಿತ್ರವೋ.. ವಿಭಿನ್ನವೋ.. ಎನ್ನಿಸುವ ಘಟನೆ.. ನಾಯಕಿ ಹುಚ್ಚಿಯೇ ಇರಬಹುದೇನೋ ಎನ್ನಿಸುತ್ತಲೇ.. ಇಲ್ಲ ಅವಳು ನಾರ್ಮಲ್ ಆಗಿಯೇ ಇದ್ದಾಳೆ ಎನ್ನಿಸುವ ಸಂಭಾಷಣೆ.. ನಾಯಕಿಯನ್ನು ಪ್ರಾಣದಂತೆ ಪ್ರೀತಿಸುವ ಹುಡುಗ.. ಅಲ್ಲೇನೋ ಸಸ್ಪೆನ್ಸು.. ಹೃದಯ ತಾಕುವ ಸಣ್ಣ ಸಣ್ಣ ದೃಶ್ಯಗಳನ್ನಿಟ್ಟುಕೊಂಡೇ ಕಥೆ ಹೇಳಲು ಹೊರಟಿದ್ದಾರೆ ಶಶಾಂಕ್. ಟ್ರೇಲರ್‍ನಲ್ಲಿ ಗೊತ್ತಾಗೋದೇನಂದರೆ ಇಲ್ಲೊಂದು ಚೆಂದದ ಕಥೆಯಿದೆ ಅನ್ನೋದು.

  ಚಿತ್ರದ ಟ್ರೇಲರ್‍ನ್ನು ರಿಲೀಸ್ ಮಾಡಿರೋ ಡಾಲಿ ಧನಂಜಯ್ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಈ ಚಿತ್ರದ ಮೂಲಕ ಪ್ರವೀಣ್ ಎಂಬ ಹೊಸ ಹುಡುಗನನ್ನು ಪರಿಚಯಿಸುತ್ತಿದ್ದಾರೆ ಶಶಾಂಕ್. ಹೆಂಗೆ ನಾವು ಖ್ಯಾತಿಯ ರಚನಾ ಇಂದರ್ ಇಲ್ಲಿ ಅಕ್ಷರಶಃ ಬೆರಗು ಹುಟ್ಟಿಸುತ್ತಾರೆ.

 • ಲವ್ 360 ಡಿಗ್ರಿ ರೋಡ್ ಶೋ

  ಲವ್ 360 ಡಿಗ್ರಿ ರೋಡ್ ಶೋ

  ಮೊಗ್ಗಿನ ಮನಸ್ಸು, ಕೃಷ್ಣನ್ ಲವ್ ಸ್ಟೋರಿ ಚಿತ್ರಗಳ ಖ್ಯಾತಿಯ ಶಶಾಂಕ್ ನಿರ್ದೇಶನದ ಹೊಸ ಸಿನಿಮಾ ಲವ್ 360 ಡಿಗ್ರಿ. ಈಗ ರೋಡ್ ಶೋ ಮೂಲಕ ಪ್ರಚಾರ ಹಮ್ಮಿಕೊಂಡಿದೆ. ಒಂದೆಡೆ ನಾಳೆ ಟ್ರೇಲರ್ ಬಿಡುಗಡೆ ಇಟ್ಟುಕೊಂಡಿರೋ ಚಿತ್ರತಂಡ ಇನ್ನೊಂದೆಡೆ ಚಿತ್ರವನ್ನು ಪುಟ್ಟ ಪುಟ್ಟ ನಗರಗಳಿಗೂ ತಲುಪಿಸಿ ಪ್ರಚಾರ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸಪೇಟೆಯ ಮರಿಯಮ್ಮನಹಳ್ಳಿಯಲ್ಲಿ ನಡೆದ ಪ್ರಚಾರದಲ್ಲಿ ಗ್ರಾಮಸ್ಥರು ಹಾಗೂ ಹೊಸಪೇಟೆ ನಗರದ ಜನ ತೋರಿಸಿದ ಪ್ರೀತಿಗೆ ಶಶಾಂಕ್ ಮೂಕರಾಗಿ ಹೋಗಿದ್ದಾರೆ.

  ಏಕೆಂದರೆ ಚಿತ್ರದ ಹೀರೋ ಪ್ರವೀಣ್ ಇದೇ ಮರಿಯಮ್ಮನಹಳ್ಳಿಯ ಹುಡುಗ. ಇವರ ಕುಟುಂಬ ಹೊಸಪೇಟೆಯಲ್ಲಿ ಆಸ್ಪತ್ರೆ ತೆರೆದು ಜನಸೇವೆ ಮಾಡುತ್ತಿದೆ. ವೈದ್ಯಕೀಯ ಸೇವೆಯನ್ನು ಎಲ್ಲರೂ ಬಿಸಿನೆಸ್ ರೀತಿ ನೋಡುವಾಗ ಇವರ ಕುಟುಂಬ ಅದನ್ನು ಪ್ರೀತಿಯಿಂದ ಸೇವೆಯಂತೆ ನೋಡುತ್ತಿರುವುದೇ ಇಷ್ಟೆಲ್ಲ ಜನರ ಪ್ರೀತಿಗೆ ಕಾರಣ.

  ಹೊಸಪೇಟೆಯಿಂದ ಶುರುವಾದ ರೋಡ್ ಶೋ ಚಿತ್ರದುರ್ಗ, ತುಮಕೂರು, ನೆಲಮಂಗಲ ಮೂಲಕ ರೋಡ್ ಶೋ ಮುಗಿಸಿ ಬಂದಿದೆ.

  ಲವ್ 360 ಚಿತ್ರಕ್ಕೆ ಪ್ರವೀಣ್ ಹೀರೋ. ರಚನಾ ಇಂದರ್ ನಾಯಕಿ. ಮುಗ್ಧ ಹೃದಯಗಳ ಪ್ರೀತಿಯ ಕಥೆ ಹೇಳೋಕೆ ಹೊರಟಿದ್ದಾರೆ ಶಶಾಂಕ್. ಅರ್ಜುನ್ ಜನ್ಯಾ ಸಂಗೀತ ನೀಡಿದ್ದು ಚಿತ್ರದ ಜಗವೇ ನೀನು ಹಾಡು ಈಗಾಗಲೇ 1 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಆಗಸ್ಟ್ 19ಕ್ಕೆ ರಿಲೀಸ್ ಆಗುತ್ತಿರೋ ಚಿತ್ರ ಬೇರೆಯದೇ ಫೀಲ್ ಇರುವ ಅಪ್ಪಟ ಲವ್ ಸ್ಟೋರಿ. ಶಶಾಂಕ್ ಇದುವರೆಗೆ ಪ್ರೇಕ್ಷಕರು ತಮ್ಮ ಮೇಲಿಟ್ಟಿರುವ ನಂಬಿಕೆಯನ್ನ ಹುಸಿ ಮಾಡಿಲ್ಲ. ಹೀಗಾಗಿ ಕೆಆರ್‍ಜಿ ಸ್ಟುಡಿಯೋಸ್ ಮೂಲಕ ವಿತರಣೆಯಾಗುತ್ತಿರುವ ಚಿತ್ರದ ಮೇಲೆ ಭಾರಿ ನಿರೀಕ್ಷೆಯಂತೂ ಇದೆ.

 • ಲೆಟ್ಸ್ ಬ್ರೇಕಪ್.. ಎಲ್ಲರೂ ಚೇಂಜ್

  ಲೆಟ್ಸ್ ಬ್ರೇಕಪ್.. ಎಲ್ಲರೂ ಚೇಂಜ್

  ಲೆಟ್ಸ್ ಬ್ರೇಕಪ್ ಅನ್ನೋ ಚಿತ್ರ ಕಳೆದ ವರ್ಷ ಸುದ್ದಿ ಮಾಡಿತ್ತು. ಜಯಣ್ಣ ಬ್ಯಾನರ್‍ನಲ್ಲಿ ಪಂಚತಂತ್ರ ಖ್ಯಾತಿಯ ವಿಹಾನ್, ಕಿಸ್ ಖ್ಯಾತಿಯ ಶ್ರೀಲೀಲಾ ನಟಿಸಲಿದ್ದಾರೆ. ಈಗ ಎಲ್ಲರೂ ಬದಲಾಗಿದ್ದಾರೆ. ಅದೇ ಚಿತ್ರ, ಅದೇ ಡೈರೆಕ್ಟರ್. ಹೀರೋ.. ಹೀರೋಯಿನ್.. ಪ್ರೊಡ್ಯುಸರ್ ಎಲ್ಲರೂ ಚೇಂಜ್.

  ಲಖನೌ ಟು ಬೆಂಗಳೂರು ಎಂಬ ಸಿನಿಮಾ ಮಾಡಿದ್ದ ಸ್ವರೂಪ್ ಅವರೇ ನಿರ್ದೇಶನ ಮಾಡುತ್ತಿದ್ದು, ನಿರ್ಮಾಪಕರಾಗಿ ಪ್ರದೀಪ್ ಯಾದವ್ ಸಿನಿಮಾ ನಿರ್ಮಿಸುತ್ತಿದ್ದಾರೆ. ಹೀರೋ ಜಾಗಕ್ಕೆ ಇರುವುದೆಲ್ಲವ ಬಿಟ್ಟು ಚಿತ್ರದಲ್ಲಿ ಮೇಘನಾ ರಾಜ್ ಎದುರು ನಟಿಸಿ ಸೈ ಎನಿಸಿಕೊಂಡಿದ್ದ ಮಹದೇವ್ ನಟಿಸುತ್ತಿದ್ದಾರೆ. ಹೀರೋಯಿನ್ ಜಾಗಕ್ಕೆ ಲವ್ ಮಾಕ್‍ಟೇಲ್ ಚಿತ್ರದಲ್ಲಿ ನಟಿಸಿದ್ದ ರಚನಾ ಇಂದರ್ ಬಂದಿದ್ದಾರೆ.

 • ಹರಿಕಥೆ ಅಲ್ಲ ಗಿರಿಕಥೆ : ಏನ್ ಕ್ವಾಟ್ಲೆ ಗುರೂ..

  ಹರಿಕಥೆ ಅಲ್ಲ ಗಿರಿಕಥೆ : ಏನ್ ಕ್ವಾಟ್ಲೆ ಗುರೂ..

  ಸಾರ್.. ನಾನೊಬ್ಬ ಒಳ್ಳೆ ಡೈರೆಕ್ಟರು.. ಹೀಗೆ ಶುರುವಾಗುವ ಕಥೆಯ ಟ್ರೇಲರ್ 2 ನಿಮಿಷ 40 ಸೆಕೆಂಡ್ ಮುಗಿದ ಮೇಲೂ ಮುಖದ ಮೇಲೊಂದು ಮುಗುಳ್ನಗೆ ಉಳಿಸುತ್ತೆ. ಚಿತ್ರದ ಟ್ರೇಲರಿನ ತಾಕತ್ತೇ ಅದು. ಅವನು ಹೇಳೋ ಯಾವ ಕಥೆ ಸತ್ಯ.. ಯಾವ ಕಥೆ ಸುಳ್ಳು ಅನ್ನೋದು ಅರ್ಥವೇ ಆಗಲ್ಲ.

  ರಿಷಬ್ ಕಥೆ ಹೇಳೋದು ಯೋಗರಾಜ್ ಭಟ್ಟರಿಗೆ. ಆದರೆ, ಆಕ್ಚುಯಲಿ ಕಥೆ ಹೇಳೋದು ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್. ಜಾಯಿಂಟ್ ಡೈರೆಕ್ಷನ್.

  ಟ್ರೇಲರಿನ ಮಧ್ಯೆ ಇಣುಕಿ ಹೋಗುವ ನಾಯಕಿಯರಾದ ತಪಸ್ವಿನಿ ಪೂಣಚ್ಚ ಮತ್ತು ರಚನಾ ಇಂದರ್ ಮತ್ತೆ ಮತ್ತೆ ನೋಡಬೇಕು ಎನ್ನುವಷ್ಟು ಮುದ್ದಾಗಿ ಕಾಣುತ್ತಾರೆ. ಹೊನ್ನವಳ್ಳಿ ಕೃಷ್ಣ ನಿಜಕ್ಕೂ ಗಿರಿಯ ಅಪ್ಪನಾ? ಪ್ರಮೋದ್ ಶೆಟ್ಟಿ ಅದ್ಯಾಕೆ ಅಷ್ಟು ರಗಡ್ ಆಗ್ತಾರೆ. ಅಷ್ಟು ರಗಡ್ ಆಗಿ ಕಾಣ್ತಿದ್ದರೂ.. ನಮಗ್ಯಾಕೆ ನಗು ಬರುತ್ತೆ.. ಗೊತ್ತಾಗೋಕೆ ಸಿನಿಮಾ ನೋಡಬೇಕಷ್ಟೆ.

  ಸಂದೇಶ್ ನಾಗರಾಜ್ ನಿರ್ಮಾಣದ ಸಿನಿಮಾ ಜೂನ್ 23ಕ್ಕೆ ರಿಲೀಸ್ ಆಗುತ್ತಿದೆ.

 • ಹರಿಕಥೆ ಅಲ್ಲ ಗಿರಿಕಥೆಯಲ್ಲಿ ವಾಸುಕಿ ಕಥೆಯೇ ರೋಚಕ.. ರೋಮಾಂಚಕ..

  ಹರಿಕಥೆ ಅಲ್ಲ ಗಿರಿಕಥೆಯಲ್ಲಿ ವಾಸುಕಿ ಕಥೆಯೇ ರೋಚಕ.. ರೋಮಾಂಚಕ..

  ಹರಿಕಥೆ ಅಲ್ಲ ಗಿರಿಕಥೆ. ಪ್ರೇಕ್ಷಕರು ಇದನ್ನಾಗಲೇ ಶಾರ್ಟ್ & ಸ್ವೀಟ್ ಆಗಿ ಹೆಚ್.ಕೆ.ಜಿ.ಕೆ. ಎನ್ನುತ್ತಿದ್ದಾರೆ. ರಿಷಬ್ ಶೆಟ್ಟಿ ನಟಿಸಿರೋ ಚಿತ್ರದಲ್ಲಿ ಕಾಮಿಡಿ ಬ್ಯಾಕ್‍ಗ್ರೌಂಡ್ ಸ್ಟೋರಿ. ಇದೇ ವಾರ ರಿಲೀಸ್ ಆಗುತ್ತಿರೋ ಚಿತ್ರಕ್ಕೆ ಇಬ್ಬರು ನಿರ್ದೇಶಕರು. ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್. ನಿರ್ದೇಶಕರಷ್ಟೇ ಅಲ್ಲ, ನಾಯಕಿಯರೂ ಇಬ್ಬಿಬ್ಬರು. ತಪಸ್ವಿನಿ ಪೂಣಚ್ಚ ಮತ್ತು ರಚನಾ ಇಂದರ್. ಈ ಚಿತ್ರದ ಮ್ಯೂಸಿಕ್ ಡೈರೆಕ್ಟರ್ ವಾಸುಕಿ ವೈಭವ್.

  ಬಿಗ್‍ಬಾಸ್‍ನಲ್ಲಿ ಮನ್ಸಿಂದ ಯಾರೂನೂ ದೊಡ್ಡೋರಲ್ಲ ಅನ್ನೋ ಸೀರಿಯಸ್ ಹಾಡಿನ ಮೂಲಕ ಕನ್ನಡಿಗರ ಮನೆ ಮನ ತಲುಪಿದ ವಾಸುಕಿ ವೈಭವ್, ಇತ್ತೀಚೆಗೆ ಬಡವ ರಾಸ್ಕಲ್ ಚಿತ್ರದಲ್ಲಿ ಮಾಸ್ ಹಾಡುಗಳನ್ನೂ ಕೊಟ್ಟು ಗೆದ್ದಿದ್ದಾರೆ. ಈಗ ಕಾಮಿಡಿ ಟ್ರ್ಯಾಕ್ ಸಿನಿಮಾ.

  ಆ್ಯಕ್ಷನ್ ಮತ್ತು ಎಮೋಷನ್ ಸಿನಿಮಾಗಳಿಗೆ ಸಂಗೀತ ನೀಡುವುದಕ್ಕಿಂತ ದೊಡ್ಡ ಚಾಲೆಂಜ್ ಕಾಮಿಡಿ ಸಿನಿಮಾಗಳಿಗೆ ಮ್ಯೂಸಿಕ್ ನೀಡೋದು. ಜೊತೆಗೆ ಚಿತ್ರದಲ್ಲಿ ಆಗಲೇ ಶೂಟಿಂಗ್ ಆಗಿತ್ತು. ಆ ದೃಶ್ಯಗಳಿಗೆ ತಕ್ಕಂತೆ ಮ್ಯೂಸಿಕ್ ಕೊಡುವುದು ಇನ್ನೂ ದೊಡ್ಡ ಚಾಲೆಂಜ್ ಎನ್ನುವ ವಾಸುಕಿ ವೈಭವ್ ಚಿತ್ರದ ನಿರ್ದೇಶಕರಿಗೆ ಸಂಗೀತದ ಕ್ರೆಡಿಟ್ ಕೊಟ್ಟಿದ್ದಾರೆ. ಅವರಿಗೆ ಏನು ಬೇಕು ಅನ್ನೊದು ಸ್ಪಷ್ಟವಾಗಿ ಗೊತ್ತಿತ್ತು. ಹೀಗಾಗಿ ಕೆಲಸ ಸುಲಭವಾಗುತ್ತಾ ಹೋಯಿತು ಎನ್ನುವ ವಾಸುಕಿ ವೈಭವ್ ಅವರಿಗೆ ಈಗಾಗಲೇ ಚಿತ್ರದ ಎರಡು ಹಾಡುಗಳು ಹಿಟ್ ಆಗಿರೋದು ಖುಷಿ ಕೊಟ್ಟಿದೆ.

  ಜೂ.ಮೊನಾಲಿಸಾ ಮತ್ತು ಬಾವರ್ಚಿ ಹಾಡುಗಳು ಹಿಟ್ ಆಗಿವೆ.

  ಚಿತ್ರದ ಹಾಡುಗಳಿಗೆ ಸಾಹಿತ್ಯ ಕೊಟ್ಟಿರೋದು ಯೋಗರಾಜ್ ಭಟ್, ಸತ್ಯ ಪ್ರಕಾಶ್, ತ್ರಿಲೋಕ್ ವಿಕ್ರಂ ಮತ್ತು ಕಲ್ಯಾಣ್.

 • ಹರಿಕಥೆಯ ಜ್ಯೂ.ಮೊನಾಲಿಸಾ ಹೇಗಿದ್ದಾಳೆ ನೋಡಿದ್ರಾ?

  ಹರಿಕಥೆಯ ಜ್ಯೂ.ಮೊನಾಲಿಸಾ ಹೇಗಿದ್ದಾಳೆ ನೋಡಿದ್ರಾ?

  ರಿಷಬ್ ಶೆಟ್ಟಿ ಚಿತ್ರಗಳಲ್ಲಿ ಕತೆಯ ಜೊತೆಗೆ ಹಾಡುಗಳೂ ಕೇಳುವಂತಿರುತ್ತವೆ ಹಾಗೂ ನೋಡುವಂತಿರುತ್ತವೆ. ಹರಿಕಥೆ ಅಲ್ಲ ಗಿರಿಕಥೆ  ಚಿತ್ರದ ಜ್ಯೂ.ಮೊನಾಲಿಸಾ ಹಾಡು ಕೂಡಾ ಅಷ್ಟೆ.. ನೋಡುವಂತಿದೆ.. ಕೇಳುವಂತಿದೆ. ಮೊನಾಲಿಸಾ ನಗುವಿಗೆ ನೀವೂ ಬಿದ್ದರೆ.. ರಿಷಬ್ ಶೆಟ್ಟರು ಬೇಜಾರಾಗಬಹುದು. ಅವರಾಗಲೇ.. ಲವ್ವಲ್ಲಿ ಬಿದ್ದಾಗಿದೆ..

  ವಾಸುಕಿ ವೈಭವ್ ಸಂಗೀತದ ಜೊತೆಗೆ ಹಾಡನ್ನೂ ಹಾಡಿದ್ದಾರೆ. ಎದೆಗೇ ತಟ್ಟುವಂತೆ. ಚೆಂದದ ಕೊರಿಯೋಗ್ರಫಿಯಲ್ಲಿ ತುಂಟತನವಿದೆ. ಗಿರಿಕನ್ಯೆಗಾಗಿ ದಾರಿ ತಪ್ಪಿದ ಮಗನಾಗುವ ಹರಿಗೆ ಅನುರಾಗ ಅರಳಿದ ಕಥೆ ಹಾಡಿನಲ್ಲಿದೆ. ತ್ರಿಲೋಕ್ ತ್ರಿವಿಕ್ರಮ ಪೆನ್ನಿನಲ್ಲಿ ತುಂಟ ಹುಡುಗನ ಭಾವನೆಗಳನ್ನೆಲ್ಲ ತಂದು ಸುರಿದಿದ್ದಾರೆ.

  ಸಂದೇಶ್ ನಾಗರಾಜ್ ನಿರ್ಮಾಣದ ಚಿತ್ರಕ್ಕೆ ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್ ನಿರ್ದೇಶನವಿದೆ. ರಿಷಬ್ ಶೆಟ್ಟಿ ಹೀರೋ ಆಗಿದ್ದು ತಪಸ್ವಿನಿ ಪೂಣಚ್ಚ, ರಚನಾ ಇಂದರ್ ನಾಯಕಿಯರು.