` mangli, - chitraloka.com | Kannada Movie News, Reviews | Image

mangli,

  • ಕರುನಾಡ ಚಕ್ರವರ್ತಿ ಜೊತೆ ಕಣ್ಣೇ ಅದಿರಿಂದಿ ಕಣ್ಮಣಿ

    ಕರುನಾಡ ಚಕ್ರವರ್ತಿ ಜೊತೆ ಕಣ್ಣೇ ಅದಿರಿಂದಿ ಕಣ್ಮಣಿ

    ಕಣ್ಣೇ ಅದಿರಿಂದಿ ಖ್ಯಾತಿಯ ಮಂಗ್ಲಿ, ನೋಡೋಕೂ ಅಂದಗಾತಿ. ತಮ್ಮದೇ ಆಲ್ಬಂ ಸಾಂಗ್‍ಗಳಲ್ಲಿ ಈಗಾಗಲೇ ಸಾಕಷ್ಟು ಮಿಂಚಿರುವ ಮಂಗ್ಲಿ ಈಗ ಶಿವಣ್ಣ ಜೊತೆ ತೆರೆಯೇರಲು ಸಿದ್ಧರಾಗಿದ್ದಾರೆ.

    ಶಿವಣ್ಣ ಅಭಿನಯದ 124ನೇ ಸಿನಿಮಾ, ರಾಮ್ ಧುಲಿಪುಡಿ ನಿರ್ದೇಶನದ ಚಿತ್ರಕ್ಕೆ ಮಂಗ್ಲಿ ಹೀರೋಯಿನ್ ಎನ್ನಲಾಗುತ್ತಿದೆ. ಶ್ರೀಕಾಂತ್ ಧುಲಿಪುಡಿ ಮತ್ತು ನಾರಾಲ ಶ್ರೀನಿವಾಸ ರೆಡ್ಡಿ ನಿರ್ಮಾಣದ ಚಿತ್ರಕ್ಕಿನ್ನೂ ಟೈಟಲ್ ಇಟ್ಟಿಲ್ಲ. ಆದರೆ, ಮಂಗ್ಲಿ ನಾಯಕಿ ಎನ್ನುವ ಸುದ್ದಿ ದೊಡ್ಡದಾಗಿಯೇ ಕೇಳಿ ಬಂದಿದೆ. ಜೂನ್ ಮೊದಲ ವಾರ ಶೂಟಿಂಗ್ ಶುರುವಾಗಲಿದ್ದು, ಅಷ್ಟು ಹೊತ್ತಿಗೆ ಸುದ್ದಿ ಅಧಿಕೃತವಾಗಲಿದೆ.

  • ಜೋಗಿ ಪ್ರೇಮ್ ಚಿತ್ರಕ್ಕೂ ಕಣ್ಣು ಹೊಡ್ಯಾಕ್ ಬಂದ ಮಂಗ್ಲಿ..

    ಜೋಗಿ ಪ್ರೇಮ್ ಚಿತ್ರಕ್ಕೂ ಕಣ್ಣು ಹೊಡ್ಯಾಕ್ ಬಂದ ಮಂಗ್ಲಿ..

    ಕಣ್ಣೂ ಹೊಡಿಯಾಕ ಮೊನ್ನೀ ಕಲಿತ್ಯಾನಿ.. ಹಾಡನ್ನು ಕಣ್ಣೇ ಅದಿರಿಂದಿ.. ಎಂದು ತೆಲುಗಿನಲ್ಲಿ ಹಾಡಿ ಫೇಮಸ್ ಆದವರು ಮಂಗ್ಲಿ. ಅಪ್ಪಟ ರಾ ಲುಕ್.. ರಾ ವಾಯ್ಸ್ ಇರೋ ಮಂಗ್ಲಿ ಈಗ ಜೋಗಿ ಪ್ರೇಮ್ ಚಿತ್ರಕ್ಕೆ ಬಂದಿದ್ದಾರೆ. ಏಕ್ ಲವ್ ಯಾ ಚಿತ್ರದಲ್ಲಿ ಒಂದು ಹಾಡನ್ನೂ ಹಾಡಿದ್ದಾರೆ. ಅದು ಎಣ್ಣೆ ಹಾಡಂತೆ.

    ರಕ್ಷಿತಾ ಪ್ರೇಮ್ ಅವರ ತಮ್ಮ ರಾಣಾ ಹೀರೋ ಆಗಿ ಎಂಟ್ರಿ ಕೊಡುತ್ತಿರೋ ಚಿತ್ರ ಏಕ್ ಲವ್ ಯಾ. ರಚಿತಾ ರಾಮ್ ಮತ್ತು ರೀಷ್ಮಾ ನಾಣಯ್ಯ, ಇಬ್ಬರು ಹೀರೋಯಿನ್‍ಗಳು. ಈ ಎಣ್ಣೆ ಹಾಡಿನಲ್ಲಿ ರಕ್ಷಿತಾ ಕೂಡಾ ಹೆಜ್ಜೆ ಹಾಕಿದ್ದಾರೆ.

    ಪ್ರೇಮ್ ಚಿತ್ರಗಳಲ್ಲಿ ಹಾಡುಗಳಂತೂ ಬೊಂಬಾಟ್ ಆಗಿರುತ್ತವೆ. ಪ್ರೇಮ್-ಜನ್ಯಾ ಕಾಂಬಿನೇಷನ್ ಈಗಾಗಲೇ ವಿಲನ್ ಚಿತ್ರದಲ್ಲಿ ವ್ಹಾವ್ ಎನ್ನಿಸಿಕೊಂಡಿದೆ. ಅಂತಾದ್ದರಲ್ಲಿ ಮಂಗ್ಲಿಯ ವಾಯ್ಸ್‍ನ ಕಿಕ್ಕೂ ಸೇರಿದರೆ.. ಹಾಡು ಇನ್ನೆಷ್ಟು ಕಿಕ್ಕೇರಿಸಲಿದೆಯೋ..

  • ನಾಯಕಿಯಾಗಿ ಮಂಗ್ಲಿ ಎಂಟ್ರಿ

    ನಾಯಕಿಯಾಗಿ ಮಂಗ್ಲಿ ಎಂಟ್ರಿ

    ಪಾದರಾಯ. ಜಾಕ್ ಮಂಜು ನಿರ್ಮಾಣದ ಚಿತ್ರವಿದು. ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಚಿತ್ರಕ್ಕೆ ಡೈರೆಕ್ಟರ್ ನಾಗಶೇಖರ್ ಹೀರೋ ಎಂಬುದು ಗೊತ್ತಿರುವ ವಿಷಯವೇ. ಆ ಚಿತ್ರದ ಮೂಲಕವೇ ನಾಯಕಿಯಾಗಿ ಮಂಗ್ಲಿ ಎಂಟ್ರಿ ಕೊಡುತ್ತಿದ್ದಾರೆ.

    ಅಂಜನಾದ್ರಿ ಬೆಟ್ಟದ ಸುತ್ತ ನಡೆದಿದ್ದ ಸತ್ಯ ಘಟನೆ ಆಧಾರಿತ ಚಿತ್ರ ಇದು. ಈ ಚಿತ್ರಕ್ಕಾಗಿ ನಾಗಶೇಖರ್ ಈಗಾಗಲೇ ಹನುಮಮಾಲೆ ಧರಿಸಿ ಅಂಜನಾದ್ರಿಯಲ್ಲೇ ವ್ರತದಲ್ಲಿದ್ದಾರೆ. ಹನುಮಮಾಲೆ ಧರಿಸಿರುವ ನಾಗಶೇಖರ್ 42 ದಿನಗಳ ಕಟ್ಟುನಿಟ್ಟಿನ ವ್ರತದಲ್ಲಿದ್ದಾರೆ. ತೆಲುಗಿನಲ್ಲಿ ಈಗಾಗಲೇ ಸಣ್ಣ ಸಣ್ಣ ಪಾತ್ರಗಳಲ್ಲಿ, ಆಲ್ಬಂ ಸಾಂಗುಗಳಲ್ಲಿ ನಟಿಸಿರುವ ಮಂಗ್ಲಿ ಈ ಚಿತ್ರದ ಮೂಲಕ ನಾಯಕಿಯಾಗುತ್ತಿದ್ದಾರೆ.

    ತೆಲುಗಿನಲ್ಲಿ ರಾಮುಲೋ ರಾಮುಲಾ, ಸರಂಗಾ ದರಿಯಾ, ಊ ಅಂಟಾವಾ ಮಾವ ಊಹೂ ಅಂಟಾವಾ ಹಾಡುಗಳು ಹಾಗೂ ಕನ್ನಡದಲ್ಲಿ ಕಣ್ಣೂ ಹೊಡಿಯಾಕ, ಯೆಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಹೇಳೋ ಭಗವಂತಾ, ರಾ ರಾ ರಕ್ಕಮ್ಮ, ಯಟ್ಟ ಸಟ್ಟಾ, ರಾಮ ರಾಮ ರಾಮ, ಗಿಲಕ್ಕೋ ಶಿವ ಗಿಲಕ್ಕೋ.. ಹಾಡುಗಳು ಸಂಚಲನ ಸೃಷ್ಟಿಸಿವೆ. ಈಗ ನಾಯಕಿಯಾಗಿ ಪಾದರಾಯನ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದ್ಧಾರೆ.