` wheelchair romeo, - chitraloka.com | Kannada Movie News, Reviews | Image

wheelchair romeo,

 • ಅಂಧ ಸೆಕ್ಸ್ ವರ್ಕರ್.. ವಿಕಲಚೇತನ ಹುಡುಗ ಲವ್ ಸ್ಟೋರಿ : ಕಥೆ ಹುಟ್ಟಿದ್ದೆಲ್ಲಿ..?

  ಅಂಧ ಸೆಕ್ಸ್ ವರ್ಕರ್.. ವಿಕಲಚೇತನ ಹುಡುಗ ಲವ್ ಸ್ಟೋರಿ : ಕಥೆ ಹುಟ್ಟಿದ್ದೆಲ್ಲಿ..?

  ಅವಳಿಗೆ ಕಣ್ಣು ಕಾಣಲ್ಲ. ಮನೆಯ ಬಡತನದಿಂದಾಗಿ ವೇಶ್ಯಾವೃತ್ತಿಗೆ ಇಳಿದಿದ್ದಾಳೆ. ಇವನಿಗೆ ವಿಚಿತ್ರ ಕಾಯಿಲೆ. ದೇಹದ ಕೆಳಭಾಗ ಮತ್ತು ಕೈಗಳು ಮೂವ್ ಮೆಂಟ್ ಆಗಲ್ಲ.

  ಕಾಮ ಪ್ರೇಮ ಎರಡನ್ನೂ ಅರಸಿ ವೇಶ್ಯಾಗೃಹಕ್ಕೆ ಹೋಗುವ ನಾಯಕ.. ಮಗನನ್ನು ಅಲ್ಲಿಗೆ ಕರೆದುಕೊಂಡು ಹೋಗುವ ತಂದೆ. ಅಲ್ಲಿ ಶುರುವಾಗುವ ಅವಳು ಮತ್ತು ಅವನ ಪ್ರೀತಿ.

  ಕಥೆ ಕೇಳಲಿಕ್ಕೇ ವ್ಹಾವ್ ಎನಿಸಿದರೆ.. ಅದರಲ್ಲಿರೋ ವಿಭಿನ್ನತೆಯೇ ಕಾರಣ. ಅಂದಹಾಗೆ ನಿರ್ದೇಶಕ ನಟರಾಜ್ ಅವರಿಗೆ ಈ ಕಥೆ ಹೊಳೆದಿದ್ದು ಹೇಗೆ?

  ನ್ಯಾಷನಲ್ ಜಿಯಾಗ್ರಫಿಯಲ್ಲಿ ಒಂದು ಡಾಕ್ಯುಮೆಂಟರಿ ನೋಡುತ್ತಿದ್ದೆ. ಅದರಲ್ಲಿ ತಂದೆಯೊಬ್ಬ ಮಗನನ್ನು ವೇಶ್ಯಾಗೃಹಕ್ಕೆ ಕರೆದೊಯ್ಯುತ್ತಾನೆ. ಮಗನಿಗೆ ಲೈಂಗಿಕ ಅನುಭವ ಸಿಗಲಿ ಎಂಬ ಕಾರಣಕ್ಕೆ ಹಾಗೆ ಮಾಡುವ ಆ ದೃಶ್ಯ ಬೆರಗು ಹುಟ್ಟಿಸಿತು. ಅದನ್ನು ನಮ್ಮಲ್ಲಿ ಊಹಿಸಿಕೊಳ್ಳೋಕೂ ಸಾಧ್ಯವಿಲ್ಲ. ಆ ದೃಶ್ಯ ನನ್ನನ್ನು ಕಾಡೋಕೆ ಶುರು ಮಾಡಿತು. ಆಗ ಹುಟ್ಟಿದ ಎಳೆಯೇ ಈ ಕಥೆ. ಒಂದು ಮನಕಲಕುವ ಕಥೆಗೆ ಹಾಸ್ಯದ ಸ್ಪರ್ಶ ಕೊಟ್ಟು ಸಿದ್ಧ ಮಾಡಿದ ಕಥೆಯೇ ವೀಲ್‍ಚೇರ್ ರೋಮಿಯೋ ಎನ್ನುತ್ತಾರೆ ನಟರಾಜ್.

  ರಾಮ್ ಚೇತನ್, ಮಯೂರಿ, ರಂಗಾಯಣ ರಘು, ಸುಚೇಂದ್ರ ಪ್ರಸಾದ್, ತಬಲಾ ನಾಣಿ, ಗಿರೀಶ್.. ಹೀಗೆ ಚಿತ್ರದಲ್ಲಿರೋ ಪ್ರತಿಯೊಬ್ಬರೂ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಗಿಸುತ್ತಲೇ ಕಣ್ಣಲ್ಲಿ ನೀರು ತುಂಬಿಸೋ ನನ್ನ ಚಿತ್ರಕ್ಕಿದೆ ಎನ್ನುವ ಕಾನ್ಫಿಡೆನ್ಸ್ ನಟರಾಜ್ ಅವರದ್ದು. ಚಿತ್ರ ಇದೇ ವಾರ ರಿಲೀಸ್ ಆಗುತ್ತಿದೆ.

 • ಕಣ್ಣಿಲ್ಲದ ವೇಶ್ಯೆಯನ್ನು ಪ್ರೀತಿಸುವ ಕಾಲಿಲ್ಲದ ಹುಡುಗ : ಇವನೇ ವೀಲ್‍ಚೇರ್ ರೋಮಿಯೋ

  ಕಣ್ಣಿಲ್ಲದ ವೇಶ್ಯೆಯನ್ನು ಪ್ರೀತಿಸುವ ಕಾಲಿಲ್ಲದ ಹುಡುಗ : ಇವನೇ ವೀಲ್‍ಚೇರ್ ರೋಮಿಯೋ

  ಒನ್ ಲೈನ್ ಕಥೆಯೇ ವಿಚಿತ್ರ ಎನಿಸುವ ಸಿನಿಮಾ ಇದು. ಚಿತ್ರದ ನಾಯಕನಿಗೆ ಕಾಲಿಲ್ಲ. ವೀಲ್‍ಚೇರ್`ನಲ್ಲೇ ಓಡಾಡುತ್ತಾನೆ. ನಾಯಕಿಗೆ ಕಣ್ಣಿಲ್ಲ. ಮೈಮಾರಿ ಬದುಕುತ್ತಾಳೆ. ಅವರಿಬ್ಬರ ಮಧ್ಯೆ ಪ್ರೀತಿಯಾದರೆ.. ಇಂತಹದ್ದೊಂದು ವಿಭಿನ್ನ ಕಾನ್ಸೆಪ್ಟ್‍ನ್ನೇ ಸಿನಿಮಾ ಮಾಡಿ ತೆರೆಗೆ ತರುತ್ತಿದ್ದಾರೆ ನಟರಾಜ್. ಹೀರೋ ಪಾತ್ರದಲ್ಲಿ ರಾಮ್ ಚೇತನ್ ನಟಿಸಿದ್ದರೆ, ನಾಯಕಿಯಾಗಿರೋದು ಮಯೂರಿ. ಚಿತ್ರದಲ್ಲಿ ಎಕ್ಸ್‍ಪೋಸ್ ಇಲ್ಲ. ಆದರೆ ಎದೆಗೇ ಚಾಕು ಹಾಕುವಂತ ಡೈಲಾಗುಗಳಿವೆ.

  ಲಂಚ ಕೇಳುವ ಪೊಲೀಸ್‍ಗೆ ನಾಯಕಿ ಕೇಳ್ತಾಳೆ. ನೀವು ಕೈಚಾಚಿ ಬದುಕ್ತೀರಾ.. ನಾವು ಮೈಚಾಚಿ ಬದುಕ್ತೀವಿ. ಅಷ್ಟೆ..

  ಮೈಮಾರುವವಳನ್ನ ಹೆಂಡ್ತಿ ಅಂತಾ ಒಪ್ಪಿಕೊಳ್ತೀರಲ್ಲ.. ಎನ್ನುವ ನಾಯಕಿಗೆ ನಾಯಕ ಕೇಳ್ತಾನೆ. ದೇಶ ಮಾರುವವರನ್ನ ಮಂತ್ರಿ ಅಂತಾ ಒಪ್ಪಿಕೊಳ್ತೀವಿ, ದೇಹ ಮಾರಿಕೊಂಡೋಳನ್ನ ಹೆಂಡ್ತಿ ಅಂತಾ ಒಪ್ಪಿಕೊಳ್ಳೋಕಾಗಲ್ವಾ..?

  ಇಂತಹ ಡೈಲಾಗುಗಳ ಹಿಂದಿರೋದು ಡೈರೆಕ್ಟರ್ ನಟರಾಜ್. ಅವರು ಸಂಭಾಷಣೆಕಾರರಾಗಿದ್ದವರು. ರೋಮಿಯೋ, ಜೂಮ್, ಆರೇಂಜ್ ಚಿತ್ರಗಳಿಗೆ ಡೈಲಾಗ್ ಬರೆದಿದ್ದವರು. ಮಠ ಗುರು ಪ್ರಸಾದ್, ಪಿ.ಸಿ.ಶೇಖರ್, ಪ್ರಶಾಂತ್ ರಾಜ್ ಜೊತೆ ಕೆಲಸ ಮಾಡಿದ್ದವರು. 15 ವರ್ಷದ ಅನುಭವದ ಹಿನ್ನೆಲೆಯಿರೋ ನಟರಾಜ್ ಅವರ ವಿಚಿತ್ರ ಲವ್ ಸ್ಟೋರಿಗೆ ಬಂಡವಾಳ ಹೂಡಿರುವುದು ತಿಮ್ಮಪ್ಪ ವೆಂಕಟಾಚಲಯ್ಯ ಮತ್ತು ಭಾರತಿ ವೆಂಕಟೇಶ್.

  ಜಾಕ್ ಮಾಮನಾಗಿ ರಂಗಾಯಣ ರಘು, ವೇಶ್ಯೆ ಮನೆಗೆ ಮಗನನ್ನು ಕರೆದುಕೊಂಡು ಹೋಗುವ ತಂದೆಯಾಗಿ ಸುಚೇಂದ್ರ ಪ್ರಸಾದ್, ತಬಲಾ ನಾಣಿ.. ಮೊದಲಾದವರು ನಟಿಸಿರೋ ಚಿತ್ರ ಇದೇ ಮೇ 27ರಂದು ರಿಲೀಸ್ ಆಗುತ್ತಿದೆ.

   

 • ತಂದೆ ಮಗನ ಬಾಂಧವ್ಯದ ಅದ್ಭುತ ಕಥೆ ವೀಲ್‍ಚೇರ್ ರೋಮಿಯೋದಲ್ಲಿ..

  ತಂದೆ ಮಗನ ಬಾಂಧವ್ಯದ ಅದ್ಭುತ ಕಥೆ ವೀಲ್‍ಚೇರ್ ರೋಮಿಯೋದಲ್ಲಿ..

  ವೀಲ್ ಚೇರ್ ರೋಮಿಯೋದಲ್ಲಿ ಅಂಧ ವೇಶ್ಯೆ ಮತ್ತು ಅಕೆಯನ್ನು ಪ್ರೀತಿಸುವ ಮದುವೆಯಾಗಲು ಬಯಸುವ ನಾಯಕನ ಪ್ರೇಮಕಥೆ ಇದೆ. ಆದರೆ, ಅಷ್ಟೇ ಅದ್ಭುತವಾದ ತಂದೆ ಮಗನ ಪ್ರೀತಿಯ ಕಥೆಯೂ ಇದೆ. ಇಲ್ಲಿ ತಂದೆಯ ಪಾತ್ರದಲ್ಲಿ ನಟಿಸಿರೋದು ಸುಚೇಂದ್ರ ಪ್ರಸಾದ್ ಅವರಾದರೆ, ವಿಕಲಚೇತನ ಮಗನಾಗಿ ನಟಿಸಿರುವುದು ರಾಮ್ ಚೇತನ್.

  ಕಾಲಿಲ್ಲದ ವೀಲ್ ಚೇರ್ ಇಲ್ಲದೆ ಚಲಿಸಲೂ ಆಗದ ಮಗನಲ್ಲಿ ಆತ್ಮವಿಶ್ವಾಸ ತುಂಬುತ್ತಾ ಪ್ರೀತಿಸುವ ಅಪ್ಪ ಸುಚೇಂದ್ರ ಪ್ರಸಾದ್. ಮಗನಿಗೆ ನ್ಯೂನತೆಗಳೇ ಅರಿವಾಗದಂತೆ ಸಾಕುವ ಅಪ್ಪ, ಮಗ ವೇಶ್ಯೆಯ ಮನೆಗೆ ಹೋಗಬೇಕು ಎಂದಾಗ ಅಲ್ಲಿಗೂ ಕರೆದುಕೊಂಡು ಹೋಗುತ್ತಾನೆ. ಅಂತಾದ್ದೊಂದು ಸನ್ನಿವೇಶವನ್ನು ಎಲ್ಲಿಯೂ ಅಭಾಸವಾಗದಂತೆ.. ಪ್ರೀತಿಯಷ್ಟೇ ಎದ್ದು ಕಾಣುವಂತೆ ಸಹಜವಾಗಿ ನಿರೂಪಿಸಿರುವುದು ನಿರ್ದೇಶಕ ನಟರಾಜ್. ವೇಶ್ಯಾಗೃಹದಲ್ಲಿ ರಾಮ್ ಚೇತನ್‍ಗೆ ಪರಿಚಯವಾಗುವ ಹುಡುಗಿಯೇ ಮಯೂರಿ. ನಂತರ ಅವರಿಬ್ಬರನ್ನೂ ಒಂದು ಗೂಡಿಸಲು ಅಪ್ಪ ಕೂಡಾ ಹೋರಾಡುತ್ತಾನೆ...

  ಇಂತಾದ್ದೊಂದು ವಿಭಿನ್ನ ಕಥೆಯ ಚಿತ್ರ ಈಗ ಥಿಯೇಟರಿನಲ್ಲಿದೆ. ವೆಂಕಟಾಚಲಯ್ಯ ನಿರ್ಮಾಣದ ವೀಲ್ ಚೇರ್ ರೋಮಿಯೋ ಒಂದು ವಿಭಿನ್ನ ವಿಶಿಷ್ಟ ಪ್ರಯೋಗಾತ್ಮಕ ಚಿತ್ರವಾಗಿ ಗಮನ ಸೆಳೆಯುತ್ತಿದೆ. ಆದರೆ.. ಪಕ್ಕಾ ಕಮರ್ಷಿಯಲ್ ಆಗಿದೆ.

 • ಮಗನ `ಆ' ಆಸೆ ಪೂರೈಸಲು ಅಪ್ಪನೇ ಹೊರಟಾಗ..

  ಮಗನ `ಆ' ಆಸೆ ಪೂರೈಸಲು ಅಪ್ಪನೇ ಹೊರಟಾಗ..

  ಪ್ರತಿಯೊಬ್ಬರಿಗೂ ಆಸೆಗಳಿರುತ್ತವೆ. ವಯಸ್ಸಿಗೆ ತಕ್ಕಂತೆ ಲೈಂಗಿಕ ಆಸೆಗಳೂ ಮೂಡುತ್ತವೆ. ಅದು ತಪ್ಪೂ ಅಲ್ಲ. ಪ್ರಕೃತಿ ಸಹಜವಾಗಿ ನಡೆಯುವ ಕ್ರಿಯೆಗಳು ಅಪರಾಧವೂ ಅಲ್ಲ. ಆದರೆ, ಅಂತಾದ್ದೊಂದು ಆಸೆ ಈಡೇರಿಸಿಕೊಳ್ಳಲು ಅಸಾಧ್ಯ ಎನ್ನುವ ಸ್ಥಿತಿಯಲ್ಲಿರುವವರು ಏನು ಮಾಡಬೇಕು..? ಅದರಲ್ಲೂ ಅಂತಹ ಸ್ಥಿತಿಯಲ್ಲಿ ಮಗನೇ ಇದ್ದರೆ.. ವ್ಹೀಲ್ ಚೇರ್ ರೋಮಿಯೋ ಚಿತ್ರದ ವಿಭಿನ್ನತೆಯೇ ಅದು.

  ಚಿತ್ರದಲ್ಲಿ ನಾಯಕ ವ್ಹೀಲ್‍ವೇರ್‍ನಲ್ಲೇ ಬದುಕುತ್ತಾನೆ. ಆತನಿಗೆ ಟೆಟ್ರಾಪ್ಲಿಗಿಯಾ ಸಿಂಡ್ರೋಮ್ ಕಾಯಿಲೆ. ಆ ಕಾಯಿಲೆ ಇದ್ದವರಿಗೆ ದೇಹದ ಮೇಲ್ಭಾಗ ಮತ್ತು ಕೆಳಭಾಗದ ಯಾವುದೇ ಅಂಗಗಳನ್ನು ಸ್ವಯಂ ಆಗಿ ಮೂವ್ ಮಾಡೋಕೆ ಆಗಲ್ಲ. ಅಸಹಾಯಕರು. ಅಂತಹ ಕಾಯಿಲೆ ಇರುವವನಿಗೆ ವಧು ಹುಡುಕಲು ಹೊರಡುತ್ತಾನೆ ಅಪ್ಪ. ಮಗನನ್ನು ವೇಶ್ಯಾಗೃಹಕ್ಕೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಅವನಿಗೆ ಕಣ್ಣೇ ಕಾಣದ ವೇಶ್ಯೆಯೊಬ್ಬಳ ಮೇಲೆ ಪ್ರೀತಿಯಾಗುತ್ತದೆ. ಅವರನ್ನು ಒಂದುಗೂಡಿಸಲು ಅಪ್ಪನೇ ಹೊರಡುತ್ತಾನೆ. ಇದನ್ನು ಒಂದಿಷ್ಟು ಕಾಮಿಡಿ ಬ್ಯಾಕ್‍ಗ್ರೌಂಡ್‍ನಲ್ಲಿಯೇ ಹೇಳಿದ್ದೇನೆ. ಕಚಗುಳಿಯಿಡುತ್ತಲೇ ಗಂಭೀರವಾಗುತ್ತಾ ಸಾಗುವ ಕಥೆ ಚಿತ್ರದಲ್ಲಿದೆ ಎನ್ನುತ್ತಾರೆ ಡೈರೆಕ್ಟರ್ ನಟರಾಜ್.

  ಅನುಮಾನವೇ ಇಲ್ಲ. ಮಗನನ್ನು ತಂದೆಯೇ ವೇಶ್ಯಾಗೃಹಕ್ಕೆ ಕರೆದುಕೊಂಡು ಹೋಗುವ ಕಲ್ಪನೆಯೇ ವಿಚಿತ್ರವಾದದ್ದು. ಆದರೆ ಪತ್ನಿಯೇ ಪತಿಯನ್ನು ವೇಶ್ಯಾಗೃಹಕ್ಕೆ ಕರೆದೊಯ್ಯುವ ಕಥೆಯನ್ನು ಪುರಾಣದಲ್ಲಿ ಕೇಳಿರುವ ನಮಗೆ ಇದು ವಿಭಿನ್ನ ಎನಿಸುವುದು ಸಹಜ. ಈ ಕಥೆಯಲ್ಲಿ ಮಗನಾಗಿರೋದು  ರಾಮ್ ಚೇತನ್. ವೇಶ್ಯೆಯ ಪಾತ್ರದಲ್ಲಿ ನಾಯಕನ ಲವ್ ಆಗಿ ನಟಿಸಿರೋದು ಮಯೂರಿ. ಹೀರೋನನ್ನು ವೇಶ್ಯೆಯ ಮನೆಗೆ ಕರೆದೊಯ್ಯುವ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್ ನಟಿಸಿದ್ದರೆ, ವೇಶ್ಯೆಯರು ಮತ್ತು ಗಿರಾಕಿಗಳ ನಡುವಿನ ಮಾಮಾ ಆಗಿ ನಟಿಸಿರೋದು ರಂಗಾಯಣ ರಘು. ತಬಲಾ ನಾಣಿ ಅವರಿಗೆ ಬೇರೆಯದ್ದೇ ಶೇಡ್ ಇದೆ. ಚಿತ್ರ ಇದೇ ವಾರ ರಿಲೀಸ್ ಆಗುತ್ತಿದೆ.

  ಥಿಯೇಟರಿಗೆ ಹೋದವರಿಗೆ ಬೇರೆಯದೇ ಅನುಭವ ಸಿಗುವುದು ಪಕ್ಕಾ. ಏಕೆಂದರೆ ಕಥೆಯೇ ಅಂಥಾದ್ದು. ತಿಮ್ಮಪ್ಪ ವೆಂಕಟಾಚಲ

 • ವೀಲ್ ಚೇರ್ ರೋಮಿಯೋ : ವೇಶ್ಯೆಯ ಜೊತೆ ಲವ್ & ಮ್ಯಾರೇಜ್

  ವೀಲ್ ಚೇರ್ ರೋಮಿಯೋ : ವೇಶ್ಯೆಯ ಜೊತೆ ಲವ್ & ಮ್ಯಾರೇಜ್

  ವೇಶ್ಯೆಗೂ ಒಂದು ಬದುಕಿದೆ.. ಆಕೆಯ ಹೃದಯದಲ್ಲೂ ಪ್ರೀತಿಯಿದೆ.. ಎಂದು ಹೇಳಿರೋ ಚಿತ್ರಗಳು ಅದೆಷ್ಟೋ.. ಇನ್ನು ಅಂಗವಿಕಲರನ್ನು ಅನುಕಂಪದಿಂದ ನೋಡಬೇಕು ಎನ್ನುವ ಚಿತ್ರಗಳಿಗೂ ಲೆಕ್ಕವಿಲ್ಲ. ಆದರೆ ಆ ಎರಡನ್ನೂ ಒಟ್ಟಿಗೇ ಸೇರಿಸಿ, ಅವರ ಮಧ್ಯೆ ಪ್ರೀತಿ, ಮದುವೆ ಮಾಡಿಸಿದರೆ ಹೇಗೆ ಅನ್ನೋ ಯೋಚನೆ ಹೊಸದು. ವೀಲ್ ಚೇರ್ ರೋಮಿಯೋ ಚಿತ್ರ ಅಂತಾದ್ದೊಂದು ವಿಭಿನ್ನ ಸಾಹಸಕ್ಕೆ ಕೈ ಹಾಕಿದೆ.

  ವೀಲ್‍ಚೇರ್ ರೋಮಿಯೋ ಆಗಿರೋದು ರಾಮ್ ಚೇತನ್, ವೇಶ್ಯೆಯಾಗಿರೋದು ಮಯೂರಿ ಹಾಗೂ ವೇಶ್ಯೆಯ ಬಳಿಗೆ ಮಗನನ್ನು ಕರೆದುಕೊಂಡು ಹೋಗೋ ತಂದೆಯ ಪಾತ್ರದಲ್ಲಿರೋದು ಸುಚೇಂದ್ರ ಪ್ರಸಾದ್. ಪ್ರತಿ ಕಲಾವಿದರೂ ತಮ್ಮ ಇಮೇಜ್‍ನ ಹಂಗು ತೊರೆದು ಪಾತ್ರ ಮಾಡಿದ್ದಾರೆ. ಈ ಕಥೆಗೆ ಜಿ.ನಟರಾಜ್ ನಿರ್ದೇಶಕರಾಗಿದ್ದರೆ, ವೆಂಕಟಾಚಲಯ್ಯ ಮತ್ತು ಭಾರತಿ ವೆಂಕಟೇಶ್ ನಿರ್ಮಾಪಕರು. ವಿಭಿನ್ನತೆಯಿಂದಾಗಿಯೇ ಚಿತ್ರದ ಟ್ರೇಲರ್ ಗಮನ ಸೆಳೆಯುತ್ತಿದೆ.

 • ವೀಲ್‍ಚೇರ್ ರೋಮಿಯೋ : ನಕ್ಕವರೆನ್ನಲ್ಲ ಮೌನವಾಗಿಸಿದ ಆ ಫೋಟೋ..

  ವೀಲ್‍ಚೇರ್ ರೋಮಿಯೋ : ನಕ್ಕವರೆನ್ನಲ್ಲ ಮೌನವಾಗಿಸಿದ ಆ ಫೋಟೋ..

  1. ನಿಂಗೂ ನಂಗೂ ಏನ್ ವ್ಯತ್ಯಾಸ. ನೀನು ಕೈಚಾಚಿ ಬದುಕ್ತೀಯಾ.. ನಾನು ಮೈಚಾಚಿ ಬದುಕ್ತೇನೆ. ಅಷ್ಟೆ..

  2. ನಿಮಗೆ ಇಎಸ್‍ಐ, ಪಿಎಫ್ ಎಲ್ಲ ಹಿಡೀತಾರಾ..

  ಇಲ್ಲ ಸರ್, ಇಲ್ಲಿ ಬರೀ ತಲೆ ಹಿಡೀತರೆ..

  3. ದೇಹ ಮಾರಿಕೊಂಡು ಬದುಕುವವಳನ್ನ ಹೆಂಗ್ರೀ ಹೆಂಡ್ತಿ ಅಂತಾ ಒಪ್ಕೋತೀರಾ..

  ದೇಶ ಮಾರೋವ್ರನ್ನ ಮಂತ್ರಿ ಅಂತಾ ಒಪ್ಕೋತೀವಿ. ದೇಹ ಮಾರಿಕೊಳ್ಳೋವ್ಳನ್ನ ಹೆಂಡ್ತೀ ಅಂತಾ ಒಪ್ಪಿಕೊಳ್ಳಲ್ವಾ..?

  4. ಕರ್ನಾಟಕದಲ್ಲಿ ಕನ್ನಡ ಬರಲಿಲ್ಲ ಅಂದ್ರೆ ಅವಮಾನ. ಇಂಗ್ಲಿಷ್ ಬರಲ್ಲ ಅಂದ್ರೆ ಅಲ್ಲಪ್ಪಾ..

  5. ಕಾಮ ಅನ್ನೋದು ಮುಚ್ಚಿಟ್ಟುಕೊಂಡು ಮಾಡುವ ಕೆಲಸ ನಿಜ. ಹಾಗಂತ ಮುಚ್ಚಿಡೋ ವಿಷಯ ಅಲ್ಲ..

  6. ಕಾಲು ಕಕ್ಕಸ್ ತುಳಿದಾಗ ನೀರು ಎಲ್ಲಿದೆ ಅಂತಾ ಹುಡುಕಬೇಕು. ಹೇತ್ತಿದ್ದು ಯಾರು ಅಂತಾ ಪತ್ತೇದಾರಿ ಕೆಲಸ ಮಾಡಬಾರದು..

  7. ಬಾಳು ಕತ್ತಲಲ್ಲಿ ಕಳೆದು ಹೋಗಿತ್ತು. ಕತ್ತಲಲ್ಲೇ ಹೊಸ ಬಾಳು ಹುಡುಕಿಕೊಳ್ಳೋ ರೀತಿ ಮಾಡಿಕೊಟ್ಟೆ. ಮಂಚನೇ ಪ್ರಪಂಚ ಅಂದ್ಕೊಂಡ್ ಬದುಕ್ತಿದ್ದಾಳೆ.

  ವೀಲ್‍ಚೇರ್ ರೋಮಿಯೋ ಸಂಭಾಷಣೆಯ ಝಲಕ್ಕುಗಳಿವು. ವೀಲ್‍ಚೇರ್ ರೋಮಿಯೋ... ಚಿತ್ರದಲ್ಲಿ ಉದ್ದಕ್ಕೂ ಇಂತಹ ಸಂಭಾಷಣೆಗಳಿವೆ. ಕಥೆಗೆ ತಕ್ಕಂತೆ.. ಕೆಲವೊಮ್ಮೆ ಗಾಬರಿ ಹುಟಿಸುವ, ಚಿಂತೆಗೆ ಹಚ್ಚಿಸುವ.. ಜೊತೆ ಜೊತೆಯಲ್ಲೇ ನಕ್ಕು ನಲಿಸುವ ಸಂಭಾಷಣೆಳು. ಅಂದಹಾಗೆ ಈ ಸಂಭಾಷಣೆಗಳ ಸೃಷ್ಟಿಕರ್ತ ಗುರು ಕಶ್ಯಪ್. ಅವರಿಗೂ ಇದು ಮೊದಲ ಸಿನಿಮಾ.

  ವೀಲ್‍ಚೇರ್ ರೋಮಿಯೋ ಸಿನಿಮಾ ಮುಗಿದಾಗ ಚಿತ್ರದ ಕೊನೆಯಲ್ಲಿ ಗುರು ಕಶ್ಯಪ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಗಿದೆ. ಆ ಫೋಟೋ ನೋಡಿದವರೆಲ್ಲ ಕ್ಷಣ ಭಾವುಕರಾಗುತ್ತಾರೆ. ಅರೆ.. ಈತನೇನಾ ಇಷ್ಟೂ ಹೊತ್ತು ನಮ್ಮನ್ನೆಲ್ಲ ಆವರಿಸಿಕೊಂಡಿದ್ದು ಎನಿಸಿ ಭಾವುಕರಾಗುತ್ತಾರೆ.

  ರಾಮ್ ಚೇತನ್, ಮಯೂರಿ, ರಂಗಾಯಣ ರಘು, ಸುಚೇಂದ್ರ ಪ್ರಸಾದ್, ತಬಲಾ ನಾಣಿ ಪ್ರಧಾನ ಪಾತ್ರದಲ್ಲಿರೋ ಈ ಸಿನಿಮಾಗೆ ನಟರಾಜ್ ನಿರ್ದೇಶಕರಾದರೆ, ತಿಮ್ಮಪ್ಪ ವೆಂಕಟಾಚಲಯ್ಯ ನಿರ್ಮಾಪಕರು. ಚಿತ್ರ ನೋಡಿದವರೆಲ್ಲ ಶಹಬ್ಬಾಸ್ ಎನ್ನುತ್ತಿರುವ ಚಿತ್ರವಿದು. ಚಿತ್ರಮಂದಿರಗಳಲ್ಲಿದೆ.

 • ಹಲವರು ಹೆದರಿ ನೋ ಎಂದ ಪಾತ್ರಕ್ಕೆ ಮಯೂರಿ ಎಸ್ ಎಂದಿದ್ದು ಏಕೆ?

  ಹಲವರು ಹೆದರಿ ನೋ ಎಂದ ಪಾತ್ರಕ್ಕೆ ಮಯೂರಿ ಎಸ್ ಎಂದಿದ್ದು ಏಕೆ?

  ಮಯೂರಿ ಮೊದಲಿನಿಂದಲೂ ಚಾಲೆಂಜಿಂಗ್ ಪಾತ್ರಗಳನ್ನೇ ಇಷ್ಟಪಟ್ಟವರು. ನಟರಾಜ ಸರ್ವಿಸ್ ಚಿತ್ರದ ಲತ್ತೆ ಪಾತ್ರವೇ ಇರಲಿ, ಕೃಷ್ಣಲೀಲಾದ ಲೀಲಾ ಪಾತ್ರವೇ ಇರಲಿ.. ಎಲ್ಲವೂ ಸವಾಲಿನ ಪಾತ್ರಗಳೇ. ಅಂತಹುದೇ ಪಾತ್ರ ವೀಲ್‍ಚೇರ್ ರೋಮಿಯೋ ಚಿತ್ರದ ನಾಯಕಿಯ ಪಾತ್ರ.

  ಚಿತ್ರದಲ್ಲಿ ನಾಯಕಿಗೆ ಕಣ್ಣು ಕಾಣಲ್ಲ. ವೃತ್ತಿಯಲ್ಲಿ ವೇಶ್ಯೆ. ಪಾತ್ರದ ಮೊದಲ ಸಾಲು ಕೇಳಿ ಥ್ರಿಲ್ಲಾಗುತ್ತಿದ್ದ ಹಲವು ನಾಯಕಿಯರು, ವೇಶ್ಯೆ ಎಂದ ತಕ್ಷಣ ನೋ ಎನ್ನುತ್ತಿದ್ದರಂತೆ. ಆದರೆ ಪಾತ್ರಕ್ಕೆ ನಿರ್ದೇಶಕರು ನೀಡಿರುವ ಘನತೆ ಪಾತ್ರವನ್ನು ಒಪ್ಪುವಂತೆ ಮಾಡಿತು ಎನ್ನುತ್ತಾರೆ ಮಯೂರಿ. ಚಿತ್ರದಲ್ಲಿ ನಾಯಕಿಗೆ ಎಕ್ಸ್‍ಪೋಸ್ ಇಲ್ಲ. ಬೀಡುಬೀಸು ಸಂಭಾಷಣೆಗಳಲ್ಲಿ ವಿಭಿನ್ನ ವ್ಯಕ್ತಿತ್ವದ ಅನಾವರಣವಾಗುತ್ತಾ ಹೋಗುತ್ತದೆ. ಹೀಗಾಗಿಯೇ ಪಾತ್ರಕ್ಕೆ ಒಪ್ಪಿಕೊಂಡೆ ಎನ್ನುತ್ತಾರೆ ಮಯೂರಿ.

  ಚಿತ್ರದ ಹೀರೋ ರಾಮ್ ಚೇತನ್. ವಿಕಲಚೇತನ. ಕಾಲಿಲ್ಲದೆ ವೀಲ್‍ಚೇರ್‍ನಲ್ಲೇ ಓಡಾಡುವ ನಾಯಕ ವೇಶ್ಯಾಗೃಹಕ್ಕೆ ಹೋಗುವ ಆಸೆ ತೋರಿಸುತ್ತಾನೆ. ಕರೆದುಕೊಂಡು ಹೋಗೋದು ಖುದ್ದು ಆತನ ತಂದೆ ಸುಚೇಂದ್ರ ಪ್ರಸಾದ್. ಅಲ್ಲಿ ಅವನಿಗೆ ವೇಶ್ಯೆ ಮಯೂರಿಯ ಮೇಲೆ ಪ್ರೀತಿಯಾಗುತ್ತೆ. ನಂತರ ನಡೆಯೋ ಕಥೆಯೇ ವೀಲ್‍ಚೇರ್ ರೋಮಿಯೋ. ನಿರ್ದೇಶಕ ನಟರಾಜ್ ಚಿತ್ರ ಕಥೆಯನ್ನೂ ಅಷ್ಟೇ ಚೆಂದವಾಗಿ ಹೇಳಿದ್ದಾರೆ. ರಂಗಾಯಣ ರಘು ವಿಭಿನ್ನ ಪಾತ್ರದಲ್ಲಿ ಆವರಿಸಿಕೊಂಡಿದ್ದಾರೆ. ಚಿತ್ರ ಇದೇ ತಿಂಗಳು 27ನೇ ತಾರೀಕು ರಿಲೀಸ್ ಆಗುತ್ತಿದೆ.