` gawli - chitraloka.com | Kannada Movie News, Reviews | Image

gawli

  • ಗೌಳಿ ಕಿಟ್ಟಿಗೆ ಪಾವನಾ ಜೋಡಿ

    ಗೌಳಿ ಕಿಟ್ಟಿಗೆ ಪಾವನಾ ಜೋಡಿ

    ಪಾವನಾ ಈಗ ಸಿಕ್ಕಾಪಟ್ಟೆ ಬ್ಯುಸಿಯಾಗಿ ಹೋಗಿದ್ದಾರೆ. ಈಗಾಗಲೇ ಕೈಲಿ 8 ಚಿತ್ರಗಳಿವೆ. ಇದರ ಜೊತೆ 9ನೇ ಸಿನಿಮಾ. ಶ್ರೀನಗರ ಕಿಟ್ಟಿ ಕಮ್ ಬ್ಯಾಕ್ ಮಾಡುತ್ತಿರುವ ಗೌಳಿ ಚಿತ್ರಕ್ಕೆ ಪಾವನಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

    ಇತ್ತೀಚೆಗೆ ನನಗೆ ಒಳ್ಳೊಳ್ಳೆಯ ಪಾತ್ರಗಳೇ ಸಿಗುತ್ತಿವೆ. ಕಥೆಗಳು ಹೊಸದಾಗಿವೆ. ಕೇಳಿದ ಕಥೆಗಳಲ್ಲಿ ಗೌಳಿಯ ನನ್ನ ಪಾತ್ರ ಇಷ್ಟವಾಯಿತು ಎಂದಿದ್ದಾರೆ ಪಾವನಾ.

    ರಘು ಸಿಂಗಂ ನಿರ್ಮಾಣದ ಗೌಳಿ ಚಿತ್ರಕ್ಕೆ ಸೂರ ನಿರ್ದೇಶಕ. ಆಗಸ್ಟ್ 3ನೇ ವಾರದಲ್ಲಿ ಶೂಟಿಂಗ್ ಶುರುವಾಗಲಿದೆ.

    ಸದ್ಯಕ್ಕೆ ಪಾವನಾ ಕೈಲಿ ತೂತುಮಡಿಕೆ, ರುದ್ರಿ, ಕಲಿವೀರ, ಮೈಸೂರು ಡೈರೀಸ್, ಕನ್ನಡಿಗ, ಸದ್ದು, ಫೈಟರ್, ಮೆಹಬೂಬ ಚಿತ್ರಗಳಿವೆ. ಫೈಟರ್ ಮತ್ತು ಮೆಹಬೂಬ ಬಿಟ್ಟರೆ ಉಳಿದ ಚಿತ್ರಗಳ ಶೂಟಿಂಗ್ ಮುಗಿದಿದ್ದು, ಬಿಡುಗಡೆ ಹಂತದಲ್ಲಿವೆ.

  • ಶ್ರೀನಗರ ಕಿಟ್ಟಿಯ ಗೌಳಿ ಅವತಾರ

    ಶ್ರೀನಗರ ಕಿಟ್ಟಿಯ ಗೌಳಿ ಅವತಾರ

    ಪಾತ್ರ ಯಾವುದೇ ಇರಲಿ.. ಶ್ರೀನಗರ ಕಿಟ್ಟಿ ಅದರೊಳಕ್ಕೆ ಇಳಿಯೋದ್ರಲ್ಲಿ ಎಕ್ಸ್‍ಪರ್ಟ್. ಇಂತಿ ನಿನ್ನ ಪ್ರೀತಿಯ ಕುಡುಕ, ಸವಾರಿಯ ಬೈಕ್ ಕಳ್ಳ, ಹುಡುಗರು ಚಿತ್ರದ ಗೆಳೆಯನ ಪಾತ್ರ, ಮತ್ತೆ ಮುಂಗಾರುವಿನ ಅಸಹಾಯಕ ಪ್ರೇಮಿ, ಬಹುಪಾರ್‍ಕನ ಹಲವು ಶೇಡ್‍ಗಳ ರೋಲ್.. ಹೀಗೆ.. ಈ ಭಾರಿ ಮತ್ತೊಮ್ಮೆ ಡಿಫರೆಂಟ್ ಅವತಾರದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಗೌಳಿಯಾಗಿ...

    ಗೌಳಿ, ಶ್ರೀನಗರ ಕಿಟ್ಟಿ ನಟಿಸುತ್ತಿರುವ ಹೊಸ ಸಿನಿಮಾ. ಸೋಹನ್ ಫಿಲ್ಮ್ ಫ್ಯಾಕ್ಟರಿಯ ರಘು ಸಿಂಗಂ ನಿರ್ಮಾಣದ ಗೌಳಿಯ ಫಸ್ಟ್ ಲುಕ್ ಹೊರಬಂದಿದ್ದು, ಶ್ರೀನಗರ ಕಿಟ್ಟಿಯ ಲುಕ್ ಅಬ್ಬಾ ಎನ್ನಿಸುವಂತಿದೆ. ರಕ್ತ ಸಿಕ್ತ ಅಧ್ಯಾಯದ ಕಥೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲದಂತಹ ಲುಕ್ ಹೊರಬಿದ್ದಿದೆ. ಸೂರಾ ನಿರ್ದೇಶಿಸುತ್ತಿರುವ ಚಿತ್ರದ ಉಳಿದ ಕಲಾವಿರದ ಟೀಂ ಇನ್ನೂ ಫೈನಲ್ ಆಗಿಲ್ಲ.