` director mahesh, - chitraloka.com | Kannada Movie News, Reviews | Image

director mahesh,

  • Madagaja Movie Review, Chitraloka Rating 4/5

    Madagaja Movie Review, Chitraloka Rating 4/5

    Film: Madhagaja

    Director: S Mahesh Kumar

    Cast: Sriimurali, Ashika Ranganath, Jagapati Babu, Rangayana Raghu, Chikkanna 

    Duration: 2 hour 12 minutes 

    Stars: 4/5

    Madhagaja is an action film with equal amounts of sentiments around a family with loads of entertainment in the form of romance, thrills and fights. A wholesome film that entertains both the mass and class audience, it makes for a perfect outing to the theatres. 

    As the name implies, it is heavy on action. It follows a traditional approach to the story. A child born in the midst of violence is sent away to be brought up in a different environment. But as luck would have it, he has to return to his roots and take up the unfinished job of his father. The director adds much colour and drama to what seems like a simple plot and makes it grand and largely entertaining by fulfilling the needs of both the fans of Sriimurali and the audience who look for wholesome fare. 

    A long-standing fued between two villages over sharing of a river water results in hundreds of deaths over the years. Jagapati Babu as Bhairava, who heads one of the villages has to constantly fight off the evil forces from the other village who will not stop at destroying both the villages. When Bhairava's wife gives birth to their son, it is in the midst of one such violent encounter. She gives away the child to a mendicant who brings him up in Kashi. Twenty eight years later, the prodigal son returns home and becomes the support to this father who does not yet know his identity. 

    How the son fulfils the destiny forms the rest of the story told in an action packed melodrama. The drama is between the mother and son. It is an emotional journey that starts from the very first scene and remains the backdrop for the rest of the film. There is also the sentiment between the father and son which develops without them knowing their relationship for the most part. The romance between the lead pair, that actually unfolds in the second half receives lots of catcalls and whistles from the audience. Ashika Ranganath gets to play a meaty role where there is ample scope for her good acting skills and do something different from the regular roles. She bicycles, works in the fields, talks like a sophisticated village girl, even smokes and delivers romantic dialogues. 

    The second half of the film has much more twists and turns than the first half. The performances by Devayani, Srimurali, Ashika Ranganath and Jagapati Babu keeps the audience hooked to the screen. Sriimurali gets to display not only his fighting skills but his softer side too in the role where he also has to play a son and a loverboy. There is scope for comedy also in the film with Chikkanna and Shivaraj KR Pete providing the required entertainment. 

    Apart from the actors what works for the film is the brilliant technical aspects of the film. The cinematography captures the images in a very grand manner. The music, especially the BGM has the potential to keep the audience mesmerised. Crisp editing that keeps the story rushing forward and punching dialogues that come out like bullets out of a pistol are the other highlights of the film. Overall, Madhagaja is a total entertainer. The only drawback may be the over the top violence. There is lots of bloodshed which the story demands. Otherwise, this film will entertain audience of all ages.

  • ಅಯೋಗ್ಯನಿಗಿಂತ ಮದಗಜನದ್ದೇ ಡಬಲ್ ಟೆನ್ಷನ್ : ಮಹೇಶ್

    ಅಯೋಗ್ಯನಿಗಿಂತ ಮದಗಜನದ್ದೇ ಡಬಲ್ ಟೆನ್ಷನ್ : ಮಹೇಶ್

    ಅಯೋಗ್ಯ ಚಿತ್ರದ ಮೂಲಕ ಅಯೋಗ್ಯ ಮಹೇಶ್ ಎಂದೇ ಖ್ಯಾತರಾದವರು ನಿರ್ದೇಶಕ ಮಹೇಶ್ ಕುಮಾರ್. ಮಹೇಶ್ ನಿರ್ದೇಶನದ 2ನೇ ಸಿನಿಮಾ ಮದಗಜ. ಆದರೆ ಮಹೇಶ್ ಅವರಿಗೆ ಅಯೋಗ್ಯ ಚಿತ್ರಕ್ಕಿಂತ ಹೆಚ್ಚಿನ ಟೆನ್ಷನ್  ಮತ್ತು ಆತಂಕ ಇರೋದು ಮದಗಜ ಚಿತ್ರದ ಮೇಲಂತೆ.

    ಅಯೋಗ್ಯ ಚಿತ್ರ ಮಾಡಿದಾಗ ನನ್ನ ಮೇಲೆ ನಿರೀಕ್ಷೆಗಳಿರಲಿಲ್ಲ. ಎಲ್ಲ ಹೊಸಬರಂತೆ ನಾನೂ ಒಬ್ಬ ಹೊಸ ನಿರ್ದೇಶಕ. ಅಷ್ಟೆ. ಆದರೆ, ಆ ಚಿತ್ರ ಹಿಟ್ ಆಯ್ತು. ಹಾಗಾಗಿಯೇ ಈ ಚಿತ್ರದ ಮೇಲೆ ಸಹಜವಾಗಿಯೇ ಪ್ರೇಕ್ಷಕರಿಗೆ ನಿರೀಕ್ಷೆ ಮತ್ತು ಕುತೂಹಲಗಳಿರುತ್ತವೆ.  ನನಗೂ ಆ ಟೆನ್ಷನ್ ಇದೆ ಎನ್ನುತ್ತಾರೆ ಮಹೇಶ್.

    ಅವರ ನಿರೀಕ್ಷೆ, ಆತಂಕಕ್ಕೆ ಇನ್ನೂ ಹಲವು ಕಾರಣಗಳಿವೆ. ಶ್ರೀಮುರಳಿಯವರಿಗೆ ಕಥೆ ಹೇಳಿದಾಗ ಅವರು ಅಯೋಗ್ಯ ಚಿತ್ರವನ್ನು ನೋಡಿರಲಿಲ್ಲ. ಆದರೆ ಚಿತ್ರದ ಬಗ್ಗೆ ಕೇಳಿದ್ದರು. ನನ್ನ ಕಥೆ ಹೇಳೋ ಶೈಲಿ ಮುತ್ತು ಉತ್ಸಾಹ ಇಷ್ಟವಾಗಿತ್ತು. ಓಕೆ ಎಂದರು. ವಾರಾಣಸಿಯಲ್ಲಿ ನಡೆದ ಸತ್ಯ ಘಟನೆಯೊಂದರ ಬೆನ್ನು ಹತ್ತಿ ಹೋದಾಗ ಬೆಳೆದ ಕಥೆ ಇದು. ಮದರ್ ಸೆಂಟಿಮೆಂಟ್ ಜೊತೆಗೆ ಒಂದು ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲ ಅಂಶಗಳನ್ನೂ ಇಟ್ಟುಕೊಂಡು ಬೆಳೆಸಿರುವ ಕಥೆ ಮದಗಜ ಎನ್ನುತ್ತಾರೆ ಮಹೇಶ್.

    ಈ ಚಿತ್ರದಲ್ಲಿ ಜಗಪತಿ ಬಾಬು, ದೇವಯಾನಿಯಂತಹವರ ಜೊತೆ ಕೆಲಸ ಮಾಡಿದ ಖುಷಿ ಇದೆ. ನಿರ್ಮಾಪಕ ಉಮಾಪತಿ ಅವರಿಗೆ ಮೊದಲು ಇದನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಯೋಚನೆ ಇರಲಿಲ್ಲ. ಆದರೆ ವಾರಾಣಸಿ ಶೂಟಿಂಗ್ ನಂತರ ಉಮಾಪತಿ ಶ್ರೀನಿವಾಸ್ ಗೌಡ ಇದನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡೋಣ ಎಂದರು. ಹಾಗೆ ನೋಡಿದರೆ, ತೆರೆಯ ಮೇಲಿನ ಮದಗಜ ಶ್ರೀಮುರಳಿ. ತೆರೆಯ ಹಿಂದಿನ ಮದಗಜ ನಮ್ಮ ಪ್ರೊಡ್ಯೂಸರ್ ಎಂದು ಎಲ್ಲ ಕ್ರೆಡಿಟ್‍ನ್ನೂ ನಿರ್ಮಾಪಕರಿಗೇ ಕೊಡುತ್ತಾರೆ ಡೈರೆಕ್ಟರ್. 

  • ಮದಗಜ ನಿರ್ದೇಶಕರಿಗೆ ರಾಬರ್ಟ್ ನಿರ್ಮಾಪಕರಿಂದ ಕಾರ್ ಗಿಫ್ಟ್

    ಮದಗಜ ನಿರ್ದೇಶಕರಿಗೆ ರಾಬರ್ಟ್ ನಿರ್ಮಾಪಕರಿಂದ ಕಾರ್ ಗಿಫ್ಟ್

    ರೋರಿಂಗ್ ಸ್ಟಾರ್ ಮುರಳಿ ನಟನೆಯ ಹೊಸ ಸಿನಿಮಾ ಮದಗಜ. ಆ ಚಿತ್ರಕ್ಕೆ ಅಯೋಗ್ಯ ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶಕ. ಅವರಿಗೆ ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಕಾರ್‍ವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಂದಹಾಗೆ ಮದಗಜ ಚಿತ್ರಕ್ಕೂ ಉಮಾಪತಿ ಅವರೇ ಪ್ರೊಡ್ಯೂಸರ್.

    ಮದಗಜ ಚಿತ್ರದ ನಿರ್ದೇಶಕರಾದರೂ, ರಾಬರ್ಟ್ ಚಿತ್ರದ ಪ್ರಚಾರ, ಪೈರಸಿ ವಿರುದ್ಧದ ಹೋರಾಟ ಸೇರಿದಂತೆ ಪ್ರತಿ ಹಂತದಲ್ಲೂ ರಾಬರ್ಟ್ ಟೀಂ ಜೊತೆಯಲ್ಲಿದ್ದವರು ಮಹೇಶ್. ಅದರ ಎಫೆಕ್ಟ್ ಪ್ರತಿ ಹಂತದಲ್ಲೂ ಗೋಚರಿಸಿತ್ತು ಕೂಡಾ.

    ಇದರಿಂದ ಖುಷಿಯಾಗಿರುವ ನಿರ್ಮಾಪಕ ಉಮಾಪತಿ ತಮ್ಮ ನಿರ್ದೇಶಕರಿಗೆ ಕಾರ್ ಗಿಫ್ಟ್ ಕೊಟ್ಟಿದ್ದಾರೆ. ಇದು ಮಹೇಶ್ ಅವರ ಮೊದಲ ಕಾರ್ ಎನ್ನುವುದು ವಿಶೇಷ. ತಮಗೆ ಕಾರ್ ಗಿಫ್ಟ್ ಕೊಟ್ಟ ನಿರ್ಮಾಪಕರಿಗೆ ಥ್ಯಾಂಕ್ಸ್ ಹೇಳಿದ್ದಾರೆ ಮಹೇಶ್ ಕುಮಾರ್.