` satyapaakash, - chitraloka.com | Kannada Movie News, Reviews | Image

satyapaakash,

 • Satyaprakash's 'Man Of The Match' Launched

  Satyaprakash's 'Man Of The Match' Launched

  After 'Rama Rama Re' and 'Ondalla Eradalla', director Satyaprakash is back with a new film called 'Man of the Match'. The film was launched recently in Bangalore. While, veteran music director Hamsalekha sounded the clap for the first shot, Dhananjay switched on the camera.

  Though the film has titled as 'Man of the Match', the film has nothing to do with cricked says Satyaprakash. The director says, the film revolves around an audition of a film and discusses the emotional journey of few people who have come for the audition,

  Like his previous films, Satyaprakash himself has written the story and screenplay apart from directing the film. Satya has launched a production company called Satya Pictures and will be co-producing the film along with Manjunath of Mayura Motion Pictures. The film stars Dharmanna Kadur, Nataraj and others in prominent roles. Vasuki Vaibhav and Nobin Paul will be composing the music.

 • ಪುನೀತ್ ಚಿತ್ರಕ್ಕೆ ಬಂದ ಸತ್ಯಗೆ ಸಿಕ್ಕಿದ್ದು ಮ್ಯಾನ್ ಆಫ್ ದಿ ಮ್ಯಾಚ್ ಆಫರ್

  ಪುನೀತ್ ಚಿತ್ರಕ್ಕೆ ಬಂದ ಸತ್ಯಗೆ ಸಿಕ್ಕಿದ್ದು ಮ್ಯಾನ್ ಆಫ್ ದಿ ಮ್ಯಾಚ್ ಆಫರ್

  ಸತ್ಯ ಪ್ರಕಾಶ್, ಕನ್ನಡದಲ್ಲಿ ವಿಭಿನ್ನ ಕಥೆಗಳಿಂದ ಗುರುತಿಸಿಕೊಂಡಿರುವ ನಿರ್ದೇಶಕ. ಒಂದಲ್ಲ ಎರಡಲ್ಲ, ರಾಮಾ ರಾಮಾ ರೇ ಚಿತ್ರಗಳ ಮೂಲಕ ತಮ್ಮದೇ ಛಾಪು ಮೂಡಿಸಿರುವ ಸತ್ಯ ಪ್ರಕಾಶ್ ಇಷ್ಟು ಹೊತ್ತಿಗೆ ಪುನೀತ್ ಅವರಿಗಾಗಿಯೇ ಒಂದು ಕಮರ್ಷಿಯಲ್ ಸಿನಿಮಾ ಮಾಡಬೇಕಿತ್ತು. ಆದರೆ, ಹಾಗಾಗಲಿಲ್ಲ. ಯಾವಾಗ ಲಾಕ್ ಡೌನ್ ನಿರ್ಬಂಧ ಶುರುವಾಯಿತೋ, ಪುನೀತ್ ಡೇಟ್ಸ್ ಏರುಪೇರಾದವು. ಜೇಮ್ಸ್ ಮತ್ತು ಇನ್ನೊಂದು ಚಿತ್ರಕ್ಕಾಗಿ ಡೇಟ್ಸ್ ಹೊಂದಿಸಬೇಕಾಯಿತು. ಆದರೆ, ಸತ್ಯ ಪ್ರಕಾಶ್ ಅವರಿಗೆ ಪುನೀತ್ ಅವರ ಚಿತ್ರ ಕೈತಪ್ಪಿದರೂ, ಅವರದ್ದೇ ಇನ್ನೊಂದು ಚಿತ್ರದ ಆಫರ್ ಸಿಕ್ಕಿತು.

  ಪುನೀತ್ ಚಿತ್ರ ಕೈತಪ್ಪಿದಾಗ ಸತ್ಯ ಪ್ರಕಾಶ್ ಹೇಳಿದ ಇನ್ನೊಂದು ಕಥೆಗೆ ಥ್ರಿಲ್ ಆದ ಪುನೀತ್, ತಮ್ಮದೇ ಬ್ಯಾನರ್‍ನಲ್ಲಿ ಆ ಚಿತ್ರ ನಿರ್ಮಿಸೋಕೆ ಮುಂದಾದರು. ಅದೇ ಮ್ಯಾನ್ ಆಫ್ ದಿ ಮ್ಯಾಚ್. ಇಷ್ಟೊತ್ತಿಗೆ ಪುನೀತ್ ಅವರ ಜೊತೆ ಸಿನಿಮಾ ಶುರುವಾಗಬೇಕಿತ್ತು. ಆದರೆ ಲಾಕ್‍ಡೌನ್‍ನಿಂದಾಗಿ ಡೇಟ್ಸ್ ಕ್ಲಾಷ್ ಆದವು. ಇದರ ನಡುವೆ ನಾನು ಹೇಳಿದ ಇನ್ನೊಂದು ಕಥೆ ಪುನೀತ್ ಅವರಿಗೆ ಇಷ್ಟವಾಗಿ, ತಮ್ಮದೇ ಬ್ಯಾನರ್‍ನಲ್ಲಿ ನಿರ್ಮಾಣಕ್ಕೆ ಮುಂದಾದರು. ಚಿತ್ರೀಕರಣಕ್ಕೆ ಗ್ರೀನ್ ಸಿಗ್ನಲ್ ಕೊಟ್ಟರು. ಈಗ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದೆ ಎಂದಿದ್ದಾರೆ ಸತ್ಯ ಪ್ರಕಾಶ್.

  ಮ್ಯಾನ್ ಆಫ್ ದಿ ಮ್ಯಾಚ್ ಹೊಸಬರೇ ಇರುವ ಕಥೆ. ಚಿತ್ರದಲ್ಲಿ ನಟರಾಜ್, ಧರ್ಮಣ್ಣ ಕಡೂರ್, ವೀಣಾ ಸುಂದರ್ ಮೊದಲಾದವರು ನಟಿಸಿದ್ದಾರೆ. ಇತ್ತೀಚೆಗೆ ಚಿತ್ರೀಕರಣದ ಸ್ಥಳಕ್ಕೆ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ ಪುನೀತ್. ಚಿತ್ರವನ್ನು ಪಿಆರ್‍ಕೆ ಬ್ಯಾನರ್, ಮಯೂರ ಪಿಕ್ಚರ್ಸ್ ಸಹಯೋಗದಲ್ಲಿ ನಿರ್ಮಾಣ ಮಾಡುತ್ತಿದೆ.

 • ಮ್ಯಾನ್ ಆಫ್ ದಿ ಮ್ಯಾಚ್ ಒಂದು ದಿನದ ಕಥೆ

  ಮ್ಯಾನ್ ಆಫ್ ದಿ ಮ್ಯಾಚ್ ಒಂದು ದಿನದ ಕಥೆ

  ಮ್ಯಾನ್ ಆಫ್ ದಿ ಮ್ಯಾಚ್. ಇದು ರಾಮಾ ರಾಮಾ ರೇ, ಒಂದಲ್ಲ ಎರಡಲ್ಲ ಖ್ಯಾತಿಯ ಸತ್ಯಪ್ರಕಾಶ್ ಸಿನಿಮಾ. ಚಿತ್ರಕ್ಕೀಗ ಮುಹೂರ್ತವೂ ನೆರವೇರಿದೆ. ನಾದ ಬ್ರಹ್ಮ ಹಂಸಲೇಖ ಅವರು ಸತ್ಯಪ್ರಕಾಶ್ ಸಿನಿಮಾಗೆ ಕ್ಲಾಪ್ ಮಾಡಿದ್ದಾರೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ, ಧನಂಜಯ್ ಮೊದಲಾದವರು ಹೊಸ ಚಿತ್ರಕ್ಕೆ ಶುಭ ಕೋರಿದರು.

  `ಟೈಟಲ್ ನೋಡಿ ಏನೋ ಅಂದುಕೊಳ್ಳಬೇಡಿ. ಇದು ಸ್ಪೋಟ್ರ್ಸ್ ಸಿನಿಮಾ ಅಲ್ಲ. ಇದು ಒಂದು ದಿನದ ಕಥೆಯ ಸಿನಿಮಾ. ಒಂದೇ ಲೊಕೇಷನ್ನಿನಲ್ಲಿ ನಡೆಯೋ ಕಥೆ. ಪ್ರತಿದಿನವೂ ಒಬ್ಬೊಬ್ಬರಿಗೆ ಒಂದೊಂದು ಮ್ಯಾಚ್. ಆ ರೀತಿಯಲ್ಲಿ ಆ ದಿನ ಚಿತ್ರದಲ್ಲಿರೋ ಪಾತ್ರಗಳಿಗೆ ಮುಖ್ಯ. ಆ ದಿನ ಗೆಲ್ಲೋರು ಯಾರು ಅನ್ನೋದೇ ಚಿತ್ರದ ಕಥೆ. ಆಕ್ಚುಯಲಿ ಇದು ಸಿನಿಮಾದ ಅಡಿಷನ್ ಬ್ಯಾಕ್‍ಗ್ರೌಂಡ್‍ನಲ್ಲಿ ನಡೆಯೋ ಕತೆ' ಎಂದಿದ್ದಾರೆ ಸತ್ಯಪ್ರಕಾಶ್. ಚಿತ್ರದಲ್ಲಿ ಆಲ್‍ಮೋಸ್ಟ್ ರಾಮಾ ರಾಮಾ ರೇ ಟೀಂ ವರ್ಕ್ ಮಾಡ್ತಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery