` saptha sagarache ello, - chitraloka.com | Kannada Movie News, Reviews | Image

saptha sagarache ello,

  • Sapta Sagaradaache Ello' Launched

    Sapta Sagaradaache Ello' Launched

    Rakshit Shetty's new film 'Sapta Sagaradaache Ello' being written and directed by Hemanth Rao was launched at the Dharmagiri Manjunatha Swamy Temple in Bangalore.

    'Sapta Sagaradaache Ello' is an intense love story, 'My films usually deal with relationships and this film also deals with the relationship of a boy and girl. The film shows a 10 year journey of a couple. The film travels in two timelines, while the first one is in 2010, the second one is in 2020. The shooting of the film will start from this month end. Before that, we are planning a workshop between the lead actors Rakshit Shetty and Rukmini Vasanth' says Hemanth.

    This is Rakshit's second film with Hemanth after 'Godhi Banna Sadhara Maikattu'. 'Hemanth told me the idea of the film in just 10 minutes, which I liked a lot. I wanted to be a part of the project and that's how it started' says Rakshit.

    Rakshit himself is producing the film under his Parmavah Pictures. The shooting for the film start from this month end and will complete by mid-july. Rakshith plans to release in the last week of December this year.

    Charan Raj is the music director, while Advaitha is the cinematographer.

  • ಚೈತ್ರಾ ಪ್ಯಾಂಟ್`ಲೆಸ್ ಫೋಟೋ : ಸಪ್ತಸಾಗರದಾಚೆಗೂ ವೈರಲ್..!

    ಚೈತ್ರಾ ಪ್ಯಾಂಟ್`ಲೆಸ್ ಫೋಟೋ : ಸಪ್ತಸಾಗರದಾಚೆಗೂ ವೈರಲ್..!

    ನಟಿ ಚೈತ್ರಾ ಆಚಾರ್ ಸಪ್ತ ಸಾಗರದಾಚೆಯೆಲ್ಲೋ ಚಿತ್ರದ ಹೀರೋಯಿನ್. ಮಹಿರಾ, ಗಿಲ್ಕಿ, ತಲೆದಂಡ ಚಿತ್ರಗಳಲ್ಲಿ ನಟಿಸಿದ್ದರೂ, ಚೈತ್ರಾ ಸೆನ್ಸೇಷನ್ ಶುರುವಾಗಿದ್ದು ಸಪ್ತಸಾಗರದಾಚೆಯೆಲ್ಲೋ ಚಿತ್ರ ಶುರುವಾದ ನಂತರ. ರಕ್ಷಿತ್ ಶೆಟ್ಟಿ ಹೀರೋ, ಹೇಮಂತ್ ಡೈರೆಕ್ಷನ್ ಎಂಬ ಕಾರಣಕ್ಕೆ ಶುರವಾದ ಸೆನ್ಸೇಷನ್ ಅದು. ಆದರೆ ಈಗ ಚೈತ್ರಾ ಅವರು ಒಂದು ಫೋಟೋ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.

    ಚೈತ್ರಾ ಅವರೇ ತಮ್ಮ ಸೋಷಿಯಲ್ ಮೀಡಿಯಾ ಪೇಜಿನಲ್ಲಿ ಪ್ಯಾಂಟ್`ಲೆಸ್ ಪೋಸ್ ಕೊಡುವ ಮೂಲಕ ಪಡ್ಡೆಗಳ ಎದೆಬಡಿತ ಹೆಚ್ಚಿಸಿದ್ದಾರೆ. ಚೈತ್ರಾ ಆಚಾರ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ನಟಿ. ಆಗಾಗ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಸಿಕ್ಕಾಪಟ್ಟೆ ಬೋಲ್ಡ್ ಫೋಟೋಗಳನ್ನು ಶೇರ್ ಮಾಡಿರುವ ನಟಿ ಚೈತ್ರಾ ಇದೀಗ ಪ್ಯಾಂಟ್ ಲೆಸ್ ಆಗಿ ಪೋಸ್ ನೀಡಿದ್ದಾರೆ. ಪ್ಯಾಂಟ್ ಧರಿಸದೇ ಟಿ ಶರ್ಟ್ನಲ್ಲೇ ಕ್ಯಾಮರಾಗೆ ಪೋಸ್ ನೀಡಿರುವ ಚೈತ್ರಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸದಾ ಹಾಟ್ ಫೋಟೋಗಳನ್ನು ಹರಿಬಿಡುವ ಚೈತ್ರಾ ಈ ಬಾರಿ ಪ್ಯಾಂಟ್ ಇಲ್ಲದೆ ಫೋಟೋ ಕ್ಲಿಕ್ಕಿಸಿ ಶೇರ್ ಮಾಡಿದ್ದಾರೆ.

    ಸದ್ಯ ಚೈತ್ರಾ ಆಚಾರ್ ನಟನೆಯ ಸಾಲು ಸಾಲು ಸಿನಿಮಾಗಳು ರಿಲೀಸ್ಗೆ ರೆಡಿ ಆಗ್ತಿದೆ. 'ಸ್ಟ್ರಾಬೆರಿ', 'ಬ್ಲಿಂಕ್', 'ಹ್ಯಾಪಿ ಬರ್ತ್ಡೇ ಟು ಮಿ', 'ಯಾರಿಗೂ ಹೇಳ್ಬೇಡಿ', 'ಅಕಟಕಟ' ಹೀಗೆ ಈಕೆ ನಟಿಸುತ್ತಿರುವ ನಾಲ್ಕೈದು ಸಿನಿಮಾಗಳ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೀತಿದೆ.

  • ನೋಡ್ ನೋಡ್ತಾನೇ ಮುಗಿದೋಯ್ತು ಮೊದಲ ಹಂತ

    ನೋಡ್ ನೋಡ್ತಾನೇ ಮುಗಿದೋಯ್ತು ಮೊದಲ ಹಂತ

    ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತು ಹೇಮಂತ್ ರಾವ್ ಮತ್ತೆ ಜೋಡಿಯಾಗಿರುವ ಸಪ್ತ ಸಾಗರದಾಚೆಯೆಲ್ಲೋ ಚಿತ್ರದ ಮೊದಲ ಹಂತದ ಚಿತ್ರೀಕರಣ ನೋಡ ನೋಡುತ್ತಲೇ ಮುಗಿದು ಹೋಗಿದೆ. ಮೊನ್ನೆ ಮೊನ್ನೆ ಶುರುವಾಯ್ತು ಎಂದುಕೊಳ್ಳುತ್ತಿರುವಾಗಲೇ 21 ದಿನಗಳ ಮೊದಲ ಶೆಡ್ಯೂಲ್ ಮುಗಿಸಿದೆ ಚಿತ್ರತಂಡ.

    ರಕ್ಷಿತ್ ಶೆಟ್ಟಿ ಎದುರು ರುಕ್ಮಿಣಿ ನಾಯಕಿಯಾಗಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಶೂಟಿಂಗ್‍ನ್ನು ತರಾತುರಿಯಲ್ಲೇ ಮುಗಿಸಿದ್ದಾರೆ. ಚಿತ್ರತಂಡದ ಎಲ್ಲರಿಗೂ ಕೊರೊನಾ ವ್ಯಾಕ್ಸಿನ್ ಹಾಕಿಸಿದ ನಂತರ ಮುಂದಿನ ಹಂತದ ಚಿತ್ರೀಕರಣ ಶುರುವಾಗಲಿದೆ. 2ನೇ ಹಂತಕ್ಕಾಗಿ ರಕ್ಷಿತ್ ಶೆಟ್ಟಿ 10ರಿಂದ 15 ಕೆಜಿ ದಪ್ಪಗಾಗಬೇಕಿದ್ದು, ಜುಲೈನಲ್ಲಿ ಶೂಟಿಂಗ್ ಶುರುವಾಗಲಿದೆ.

  • ರಕ್ಷಿತ್ ಶೆಟ್ಟಿ ಲವ್ ರಿಹರ್ಸಲ್

    ರಕ್ಷಿತ್ ಶೆಟ್ಟಿ ಲವ್ ರಿಹರ್ಸಲ್

    ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಲವ್ವಲ್ಲಿ ಬಿದ್ದಿದ್ದಾರೆ. ಅವಳ ನೆನಪಲ್ಲೇ ಮ್ಯೂಸಿಕ್ಕು ಕೇಳುತ್ತಿದ್ದಾರೆ. ಅವಳಿಗಾಗಿ ಅಡುಗೆ ಮನೆಗೂ ಹೆಜ್ಜೆಯಿಟ್ಟಿದ್ದಾರೆ. ಅವಳು ಮಾತನಾಡುತ್ತಿದ್ದರೆ.. ಜಗತ್ತನ್ನೇ ಮರೆತು ಅವಳ ಮುಖವನ್ನೇ ನೋಡುತ್ತಾ ಕೂರುತ್ತಿದ್ದಾರೆ. ಯಾರವಳು..?

    ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ರಿಹರ್ಸಲ್ ದೃಶ್ಯಗಳಿವು. ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ಅವರನ್ನು ಈ ರಿಹರ್ಸಲ್‍ಗೆ ಕೂರಿಸಿರುವುದು ನಿರ್ದೇಶಕ ಹೇಮಂತ್ ರಾವ್. 777 ಚಾರ್ಲಿ ಶೂಟಿಂಗ್ ಮುಗಿಸಿರುವ ರಕ್ಷಿತ್ ಶೆಟ್ಟಿ, ಅಷ್ಟೇ ಫಾಸ್ಟಾಗಿ ಲವ್ ಮೂಡ್‍ಗೆ ಬಂದಿದ್ದಾರೆ. ಲವ್ ಮೂಡ್‍ಗೆ ಯಾವತ್ತಿದ್ರೂ ಫಾಸ್ಟಾಗೇ ಬರಬೇಕಲ್ವಾ..

  • ರಕ್ಷಿತ್ ಶೆಟ್ಟಿ ಹೇರ್ ಸ್ಟೈಲ್, ಗೆಟಪ್ ಕಂಪ್ಲೀಟ್ ಚೇಂಜ್..!

    ರಕ್ಷಿತ್ ಶೆಟ್ಟಿ ಹೇರ್ ಸ್ಟೈಲ್, ಗೆಟಪ್ ಕಂಪ್ಲೀಟ್ ಚೇಂಜ್..!

    ರಕ್ಷಿತ್ ಶೆಟ್ಟಿ ತಾವು ನಟಿಸುವ ಪಾತ್ರಗಳಿಗೆ ತಕ್ಕಂತೆ ಗೆಟಪ್ ಬದಲಿಸುತ್ತಾರೆ. ಅವರು ಮಾಡಿಕೊಳ್ಳೋ ಸಣ್ಣ ಸಣ್ಣ ಬದಲಾವಣೆಗಳು ಸ್ಕ್ರೀನ್ನಲ್ಲಿ ಬೇರೆಯದ್ದೇ ರೀತಿಯ ಫೀಲ್ ಕೊಡುತ್ತವೆ. ಈ ಬಾರಿಯೂ ಅಷ್ಟೆ, ರಕ್ಷಿತ್ ಶೆಟ್ಟಿ ಅವರ ಹೇರ್ ಸ್ಟೈಲ್, ಗೆಟಪ್ ಚೇಂಜ್ ಆಗಿದೆ.

    ರಕ್ಷಿತ್ ಶೆಟ್ಟಿ ಅವರನ್ನು ಈ ಮಟ್ಟಿಗೆ ಬದಲಿಸಿರೋದು ಗೋಧಿ ಬಣ್ಣ ಸಾಧಾರಣ ಮೈಕಟ್ಟು ಮತ್ತು ಕವಲು ದಾರಿ ಖ್ಯಾತಿಯ ಹೇಮಂತ್ ರಾವ್. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಸಪ್ತಸಾಗರದಾಚೆ ಎಲ್ಲೋ.. ಚಿತ್ರದ ರಕ್ಷಿತ್ ಶೆಟ್ಟಿ ಲುಕ್ ಕಂಪ್ಲೀಟ್ ಡಿಫರೆಂಟ್ ಆಗಿದೆ. ರಕ್ಷಿತ್ ಶೆಟ್ಟಿ ಅವರಿಗೆ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವುದು ರುಕ್ಮಿಣಿ ವಸಂತ್. ಮತ್ತೊಮ್ಮೆ ರಕ್ಷಿತ್-ಪುಷ್ಕರ್-ಹೇಮಂತ್ ಜೋಡಿ ಒಂದಾಗಿರುವುದರಿಂದ ಒಂದೊಳ್ಳೆಯ ಸಿನಿಮಾ ಗ್ಯಾರಂಟಿ ಅನ್ನೋ ಕಾನ್ಫಿಡೆನ್ಸ್ ಇಟ್ಟುಕೊಳ್ಳಬಹುದು.

  • ರಕ್ಷಿತ್ ಹುಟ್ಟುಹಬ್ಬಕ್ಕೆ ಸಪ್ತ ಸಾಗರದಾಚೆ ಸಡಗರ.. : ಗಿಫ್ಟ್ ರೆಡಿನಾ?

    ರಕ್ಷಿತ್ ಹುಟ್ಟುಹಬ್ಬಕ್ಕೆ ಸಪ್ತ ಸಾಗರದಾಚೆ ಸಡಗರ.. : ಗಿಫ್ಟ್ ರೆಡಿನಾ?

    ಒಂದು ಚೆಂದದ ಪ್ರೇಮಕಥೆ ಎನ್ನುವ ಆಸೆ ಹುಟ್ಟಿಸಿಯೇ ಕುತೂಹಲ ಹುಟ್ಟಿಸಿದ್ದಾರೆ ಹೇಮಂತ್ ಎಂ. ರಾವ್. ಒಂದೆಡೆ 777 ಚಾರ್ಲಿ ಚಿತ್ರವನ್ನು ಪ್ರೀತಿಯಿಂದ ಪ್ರಚಾರ ಮಾಡುತ್ತಿರೋ ರಕ್ಷಿತ್ ಶೆಟ್ಟಿ, ಇನ್ನೊಂದೆಡೆ ತಮ್ಮ ಸಪ್ತಸಾಗರದಾಚೆ ಎಲ್ಲೋ ಚಿತ್ರದ ಟೀಸರ್ ಹೊರಬಿಟ್ಟಿದ್ದಾರೆ. ಅಂದಹಾಗೆ ಈ ಟೀಸರ್ ಹೊರಬರೋಕೆ ಕಾರಣ ಜೂನ್ 6. ಅದು ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ದಿನ.

    ಟೀಸರ್‍ನಲ್ಲಿ ಪ್ರೀತಿಯ ಮನುವಿಗೆ ಮನದಾಳದ ಪ್ರೀತಿಯನ್ನೆಲ್ಲ ಹೇಳಿಕೊಳ್ಳೋ ನಾಯಕಿ.. ಕೇಳಿಸಿಕೊಳ್ಳುವ ನಾಯಕ.. ಇದ್ದಕ್ಕಿದ್ದಂತೆ ರಕ್ತ.. ಏನೋ ತಲ್ಲಣ.. ಎಲ್ಲವನ್ನೂ 1.26 ನಿಮಿಷದ ಟೀಸರ್‍ನಲ್ಲೇ ತೋರಿಸಿ ಬೆರಗು ಹುಟ್ಟಿಸುತ್ತಾರೆ ಹೇಮಂತ್.

    ರಕ್ಷಿತ್ ಶೆಟ್ಟಿ ಜೊತೆಗೆ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಅವಿನಾಶ್, ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್, ರಮೇಶ್ ಇಂದಿರಾ, ಗೋಪಾಲ ಕೃಷ್ಣ ದೇಶಪಾಂಡೆ.. ಹೀಗೆ ಬೃಹತ್ ತಾರಾಗಣವೇ ಚಿತ್ರಕ್ಕಿದೆ.

    ಅಂದಹಾಗೆ ರಕ್ಷಿತ್ ಶೆಟ್ಟಿಗೆ ಗಿಫ್ಟ್ ಕೊಡುವ ಆಸೆಯಿದ್ದವರೆಲ್ಲ ಜೂನ್ 10ಕ್ಕೆ ಕೊಡಬಹುದು. ಆವತ್ತೇ ಅಲ್ವಾ 777 ಚಾರ್ಲಿ ರಿಲೀಸ್..?

  • ಸಪ್ತ ಸಾಗರದಾಚೆಗೆ ಬಂದಳು ಇನ್ನೊಬ್ಬ ಸುಪ್ತ ಸುಂದರಿ

    ಸಪ್ತ ಸಾಗರದಾಚೆಗೆ ಬಂದಳು ಇನ್ನೊಬ್ಬ ಸುಪ್ತ ಸುಂದರಿ

    ಸಪ್ತಸಾಗರದಾಚೆಯೆಲ್ಲೋ.. ರಕ್ಷಿತ್ ಶೆಟ್ಟಿ ಮತ್ತು ಹೇಮಂತ್ ರಾವ್ ಕಾಂಬಿನೇಷನ್‍ನಲ್ಲಿ ಬರುತ್ತಿರೋ ಹೊಸ ಸಿನಿಮಾ. ಅರ್ಧ ಚಿತ್ರೀಕರಣ ಮುಗಿದಿದೆ. ಇನ್ನರ್ಧ ಬಾಕಿಯಿದೆ. ಗೋಧಿಬಣ್ಣ ಸಾಧಾರಣ ಮೈಕಟ್ಟು ನಂತರ ರಕ್ಷಿತ್-ರಾವ್ ಜೋಡಿ ಮತ್ತೊಮ್ಮೆ ಒಂದಾಗಿರುವುದೇ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಈ ಚಿತ್ರಕ್ಕೀಗ ಇನ್ನೊಬ್ಬ ಸುಪ್ತ ಸುಂದರಿಯ ಪ್ರವೇಶವಾಗಿದೆ. ರುಕ್ಮಿಣಿ ವಸಂತ್ ಅವರ ಜೊತೆಗೆ ಚೈತ್ರಾ ಜೆ.ಆಚಾರ್ ನಾಯಕಿಯಾಗಿ ಸುರಭಿ ಪಾತ್ರಧಾರಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

    ನನ್ನದ ಸುರಭಿ ಅನ್ನೋ ಹೆಸರಿನ ಪಾತ್ರ. ಹೇಮಂತ್ ರಾವ್ ಕರೆ ಮಾಡಿದಾಗ ಬೇರಾವುದೋ ಚಿತ್ರಕ್ಕೆ ಕಾಲ್ ಮಾಡಿದ್ದಾರೆ ಎಂದುಕೊಂಡೆ. ಸಪ್ತಸಾಗರದಾಚೆಯೆಲ್ಲೋ.. ಚಿತ್ರಕ್ಕೆ ನೀವೂ ಒಬ್ಬರು ಹೀರೋಯಿನ್ ಎಂದಾಗ ಆದ ಖುಷಿ ಅಷ್ಟಿಷ್ಟಲ್ಲ. ಏಕೆಂದರೆ ಹೇಮಂತ್ ರಾವ್ ನನ್ನ ಫೇವರಿಟ್ ಡೈರೆಕ್ಟರ್. ಥಿಯೇಟರಿನಲ್ಲಿ ಆ ಚಿತ್ರವನ್ನು 6 ಸಲ ನೋಡಿದ್ದೇನೆ. ಆಗ ನಾನು ಎಂಜಿನಿಯರಿಂಗ್ ಫೈನಲ್ ಸೆಮಿಸ್ಟರ್‍ನಲ್ಲಿದ್ದೆ. ಈಗ ನನ್ನ ಕನಸಿನ ಡೈರೆಕ್ಟರ್ ಜೊತೆ ಕೆಲಸ ಮಾಡೋದು, ರಕ್ಷಿತ್ ಶೆಟ್ಟಿಯವರ ಜೊತೆ ನಟಿಸೋದು ಅಂದ್ರೆ ಎಕ್ಸೈಟ್‍ಮೆಂಟ್ ಇದ್ದೇ ಇರುತ್ತಲ್ವಾ ಎನ್ನುತ್ತಾರೆ ಚೈತ್ರಾ.

    ಸುರಭಿಯದ್ದು ಸಾದಾಸೀದಾ ಪಾತ್ರ. ಆದರೆ ಜೀವನ ಅವಳ ಜೊತೆ ಸಾದಾಸೀದಾ ಇರಲ್ಲ. ಸುರಭಿ & ಮನು (ರಕ್ಷಿತ್ ಶೆಟ್ಟಿ) ಮಧ್ಯೆ ಒಂದು ವಿಶೇಷ ಸಂಬಂಧ ಏರ್ಪಡುತ್ತೆ. ಅದು ಪ್ರೇಕ್ಷಕರ ಹೃದಯ ತಟ್ಟುತ್ತೆ ಎನ್ನುತ್ತಾರೆ ಹೇಮಂತ್ ರಾವ್.

    ರುಕ್ಮಿಣಿ ಪಾತ್ರ 2010ರಲ್ಲಿ ಮನು ಜೀವನಕ್ಕೆ ಎಂಟ್ರಿ ಕೊಟ್ಟರೆ,ಸುರಭಿಯ ಪಾತ್ರ 10 ವರ್ಷಗಳ ನಂತರ ಬರುತ್ತಂತೆ. ಕೊರೊನಾ ಕಾಲವೂ ಚಿತ್ರದಲ್ಲಿದೆಯಂತೆ. ಹೇಮಂತ್ ರಾವ್ ಚಿತ್ರ ಎಂದ ಮೇಲೆ ನಿರೀಕ್ಷೆ ಸಹಜವೇ ಬಿಡಿ.

  • ಸಪ್ತಸಾಗರದಾಚೆಯೆಲ್ಲೋ.. ಚಿತ್ರೀಕರಣ ಮುಗೀತ್..

    ಸಪ್ತಸಾಗರದಾಚೆಯೆಲ್ಲೋ.. ಚಿತ್ರೀಕರಣ ಮುಗೀತ್..

    ಬರೋಬ್ಬರಿ 137 ದಿನ. ಎರಡು ಲುಕ್. ಒಂದರಲ್ಲಿ ಸ್ಲಿಮ್ಮು.. ಮತ್ತೊಂದರಲ್ಲಿ ಡುಮ್ಮು.. ಎರಡು ಶೇಡ್‍ಗಳಲ್ಲಿ ಕಾಣಿಸಿಕೊಂಡಿರೋ ರಕ್ಷಿತ್ ಶೆಟ್ಟಿ. ಡೈರೆಕ್ಟರ್ ಹೇಮಂತ್ ರಾವ್. ಗೋಧಿ ಬಣ್ಣ ಸಾಧಾರಣ ಮೈಕಟ್ಟು ನಂತರ ಜೋಡಿ ಸಪ್ತಸಾಗರದಾಚೆಯೆಲ್ಲೋ ಚಿತ್ರದಲ್ಲಿ  ಮತ್ತೊಮ್ಮೆ ಜೊತೆಯಾಗಿದೆ. ನಾಯಕಿಯಾಗಿ ರುಕ್ಮಿಣಿ ವಸಂತ್ ಹಾಗೂ ಚೈತ್ರಾ ಆಚಾರ್ ಇದ್ದಾರೆ. ಇದೀಗ ಚಿತ್ರ ಚಿತ್ರೀಕರಣ ಪೂರೈಸಿದೆ.

    ಕವಲು ದಾರಿ ಚಿತ್ರದ ನಂತರ ನಿರ್ದೇಶಕ ಹೇಮಂತ್ `ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ಕೈಗೆತ್ತಿಕೊಂಡಿದ್ದರು. ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ಗೆ ಒಂದಷ್ಟು ದಿನ ವರ್ಕ್ಶಾಪ್ ನಡೆಸಿ ನಂತರ ಚಿತ್ರೀಕರಣ ಆರಂಭಿಸಿದ್ದರು. ಚಿತ್ರದಲ್ಲಿ 2 ಭಿನ್ನ ಶೇಡ್ಗಳಿರೋ ಪಾತ್ರದಲ್ಲಿ ರಕ್ಷಿತ್ ನಟಿಸಿದ್ದಾರೆ.  137 ದಿನಗಳ ಕಾಲ ಸಿನಿಮಾ ಚಿತ್ರೀಕರಣ ನಡೆಸಿ, ಕಡಲ ತಡಿಯಲ್ಲಿ ಪೂಜೆ ಸಲ್ಲಿಸಿ ಚಿತ್ರತಂಡ ಕುಂಬಳ ಕಾಯಿ ಒಡೆದಿದೆ. ಈ ವಿಚಾರವನ್ನು ನಟ ರಕ್ಷಿತ್ ಶೆಟ್ಟಿ ವಿಡಿಯೋ ಸಮೇತ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ತನ್ನ ಪಾತ್ರಕ್ಕಾಗಿ ರಕ್ಷಿತ್, 15 ರಿಂದ 20 ಕೆಜಿ ತೂಕ ಹೆಚ್ಚಿಸಿಕೊಂಡು ಮತ್ತೆ ತೂಕ ಇಳಿಸಿಕೊಂಡು ಕಸರತ್ತು ಮಾಡಿದ್ದಾರೆ. ಚಿತ್ರದಲ್ಲಿ ನಾಯಕನ 25 ಹಾಗೂ 45ರ ವಯೋಮಾನದ ಕುರಿತ ಕಥೆ ಇದೆ. ಅದಕ್ಕೆ ತಕ್ಕಂತೆ ಅರ್ಧ ಸಿನಿಮಾ ಸ್ಲಿಮ್ ಅಂಡ್ ಸ್ಮಾರ್ಟ್ ಕಾಲೇಜು ಹುಡುಗನಾಗಿ ರಕ್ಷಿತ್ ಮಿಂಚಿದ್ದಾರೆ. ಹಾಗೆಯೇ ಗಡ್ಡ ಬಿಟ್ಟು ರಗಡ್ ಆಗಿ ಕೂಡ ಕಾಣಿಸಿಕೊಂಡಿದ್ದಾರೆ.

    777 ಚಾರ್ಲಿ ಸಿನಿಮಾದ ಸೂಪರ್ ಸಕ್ಸಸ್ ನಂತರ ರಕ್ಷಿತ್ ಶೆಟ್ಟಿ ಅವರನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯ್ತಿದ್ದಾರೆ. `ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ರಿಲೀಸ್ಗೆ ಎದುರು ನೋಡ್ತಿದ್ದಾರೆ.