` veda, - chitraloka.com | Kannada Movie News, Reviews | Image

veda,

 • ಗೀತಾ ಶಿವ ರಾಜಕುಮಾರ್ ಹುಟ್ಟುಹಬ್ಬಕ್ಕೊಂದು ಶುಭ ವೇದ ಸುದ್ದಿ

  ಗೀತಾ ಶಿವ ರಾಜಕುಮಾರ್ ಹುಟ್ಟುಹಬ್ಬಕ್ಕೊಂದು ಶುಭ ವೇದ ಸುದ್ದಿ

  ಝೀ ಸ್ಟುಡಿಯೋದವರು ಒಂದು ಟ್ವೀಟ್ ಮಾಡಿದ್ರು. ಡೋಂಟ್ ಫಿಯರ್.. ಡೋಂಟ್ ಫರ್ಗಿವ್. ಹೆದರಬೇಡ.. ಕ್ಷಮಿಸಬೇಡ.. ಅನ್ನೋದಷ್ಟೇ ಅದರ ಅರ್ಥ. ಗುರುವಾರ ರಾತ್ರಿ 8ಕ್ಕೆ ಬ್ರೇಕ್ ಮಾಡಲಿದ್ದೇವೆ ಎಂದಿದ್ದೇ ತಡ.. ಗಾಂಧಿನಗರ ಮತ್ತು ಪ್ರೇಕ್ಷಕರು ಚುರುಕಾಗಿ ಹೋದರು. ಕೆಲವೇ ಗಂಟೆಗಳಲ್ಲಿ ಸುದ್ದಿ ಬ್ರೇಕ್ ಆಗಿತ್ತು.

  ಗೀತಾ ಸ್ಟುಡಿಯೋಸ್ ಮೂಲಕ ಶಿವಣ್ಣ ಮೊದಲ ಬಾರಿಗೆ ನಿರ್ಮಾಪಕರಾಗಿರೋ ಸಿನಿಮಾ. ಶಿವಣ್ಣ ಅಭಿನಯದ 125ನೇ ಸಿನಿಮಾದ ಬ್ರೇಕಿಂಗ್ ನ್ಯೂಸ್ ಇದು. ವೇದ ಈಗ ಝೀ ಸ್ಟುಡಿಯೋಸ್ ಮಡಿಲಿಗೆ ಹೋಗಿದೆ.

  ಎ. ಹರ್ಷ ನಿರ್ದೇಶನದ ಚಿತ್ರವಿದು. ಶಿವಣ್ಣ ಜೊತೆ ವಜ್ರಕಾಯ, ಭಜರಂಗಿ ಮತ್ತು ಭಜರಂಗಿ 2 ನಿರ್ದೇಶನ ಮಾಡಿ ಮೂರೂ ಚಿತ್ರಗಳಲ್ಲಿ ಗೆದ್ದಿರುವ ಹರ್ಷ ಈಗನ ಅವರ 4ನೇ ಚಿತ್ರ ನಿರ್ದೇಶಿಸುತ್ತಿದ್ದಾರೆ. 1960ರ ದಶಕದಲ್ಲಿ ನಡೆಯುವ ಕಥೆಯೊಂದನ್ನು ಹೆಣೆದಿದ್ದಾರೆ ಹರ್ಷ. ಭರ್ಜರಿ ಸ್ಟುಡಿಯೋ ಸೆಟ್ ಹಾಕಿರುವ ಹರ್ಷ, ಚಿತ್ರದ ಯಾವೊಂದು ಗುಟ್ಟನ್ನೂ ಬಿಟ್ಟುಕೊಟ್ಟಿಲ್ಲ. ಎಲ್ಲವೂ ಸಸ್ಪೆನ್ಸ್. ಈಗಲೂ ಅಷ್ಟೆ, ಇಡೀ ಚಿತ್ರತಂಡ ಸೀಕ್ರೆಟ್ ಆಗಿಟ್ಟುಕೊಂಡಿದ್ದರೆ ಹೇಗೋ ಒಂದು ಸೀಕ್ರೆಟ್ ಹೊರಬಿದ್ದಿದೆ. ಅಧಿಕೃತವಾಗೋದು ರಾತ್ರಿ 8 ಗಂಟೆಗೆ. ಅಂದಹಾಗೆ ಇವತ್ತು ಗೀತಾ ಶಿವರಾಜಕುಮಾರ್ ಹುಟ್ಟುಹಬ್ಬ.

 • ವೇದ : ಶಿವಣ್ಣ ನಂ.125

  ವೇದ : ಶಿವಣ್ಣ ನಂ.125

  ಸೆಂಚುರಿ ಸ್ಟಾರ್ ಶಿವಣ್ಣ 125ನೇ ಸಿನಿಮಾ ಅನೌನ್ಸ್ ಆಗಿದೆ. ಅದೂ ಶಿವರಾತ್ರಿ ದಿನದಂದು. ಹೊಸ ಚಿತ್ರದ ಹೆಸರು ವೇದ. ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು, ಪೋಸ್ಟರ್ನಲ್ಲಿ ದಿ ಬ್ರೂಟಲ್ 1960's ಎಂದು ಬರೆಯಲಾಗಿದೆ. ಕಾರಣವಿಷ್ಟೆ, ಇದು 1960ರ ಬ್ಯಾಕ್ ಡ್ರಾಪ್ನಲ್ಲಿ ನಡೆಯೋ ರಿಯಲೆಸ್ಟಿಕ್ ಕಥೆಯಂತೆ.

  ಶಿವಣ್ಣ ಗೆಟಪ್ ಅಂತೂ ಈ ಹಿಂದಿನ ಯಾವ ಚಿತ್ರಗಳಲ್ಲೂ ಇರದೇ ಇರುವ ರೀತಿಯಲ್ಲಿದೆ. ನಿರ್ದೇಶಕರಾಗಿರೋದು ಎ.ಹರ್ಷ. ಶಿವರಾಜ್ ಕುಮಾರ್ ಅವರಿಗೆ ಭಜರಂಗಿ, ವಜ್ರಕಾಯದಂತಾ ಹಿಟ್ ಚಿತ್ರಗಳನ್ನು ಕೊಟ್ಟ ಹರ್ಷ, ಸದ್ಯಕ್ಕೆ ಭಜರಂಗಿ 2 ಮೂಲಕ ಸದ್ದು ಮಾಡುತ್ತಿದ್ದಾರೆ.

  ಇದು ಶಿವಣ್ಣ ಬ್ಯಾನರ್ನ 125ನೇ ಸಿನಿಮಾ ಎನ್ನುವುದಷ್ಟೇ ಅಲ್ಲ, ಈ ಚಿತ್ರ ಅವರ ಬ್ಯಾನರ್ನ ಮೊದಲ ಸಿನಿಮಾ. ಗೀತಾ ಆರ್ಟ್ಸ್ ಹೆಸರಿನಲ್ಲಿ ಶಿವಣ್ಣ ಹೋಂ ಬ್ಯಾನರ್ ಶುರುವಾಗಿದ್ದು, ನಿರ್ಮಾಪಕಿಯಾಗಿರುವುದು ಗೀತಾ ಶಿವರಾಜ್ ಕುಮಾರ್.

  ಐ ಆಮ್ ಬ್ಲೆಸ್ಡ್ ಎಂದು ಖುಷಿ ಹಂಚಿಕೊಂಡಿದ್ಧಾರೆ ಹರ್ಷ. ಶಿವಣ್ಣ ವೃತ್ತಿ ಜೀವನದ ಮೈಲಿಗಲ್ಲು  ಎನಿಸಿಕೊಳ್ಳೋ 125ನೇ ಸಿನಿಮಾ ಜೊತೆಗೆ ಅವರ ಬ್ಯಾನರ್ನ ಮೊದಲ ಸಿನಿಮಾಗೆ ನಾನು ಡೈರೆಕ್ಟರ್ ಎನ್ನುವುದೇ ನನ್ನ ಪುಣ್ಯ. ನನ್ನ ಮೇಲೆ ನಂಬಿಕೆ ಇಟ್ಟು ಅವಕಾಶ ಕೊಟ್ಟಿದ್ದಾರೆ. ಅಣ್ಣಾವ್ರ  ಫ್ಯಾಮಿಲಿ ಬ್ಯಾನರ್ನಲ್ಲಿ ಫಸ್ಟ್ ಸಿನಿಮಾ ಎಂದರೆ ಯಾರಿಗೆ ಖುಷಿಯಾಗಲ್ಲ ಹೇಳಿ ಎಂದಿದ್ದಾರೆ ಹರ್ಷ.

  ಅಂದಹಾಗೆ ಇದು ಫ್ಯಾಂಟಸಿ ಸಿನಿಮಾ ಅಲ್ಲ. ರಿಯಲೆಸ್ಟಿಕ್ ಕಥೆ ಇರುವ ಸಿನಿಮಾ. ವಯಸ್ಸಾಗಿರುವ ಉದ್ದನೆಯ ಗಡ್ಡದ ಲುಕ್ನಲ್ಲಿ ಶಿವಣ್ಣ ಬ್ಯೂಟಿಫುಲ್. ಸಿನಿಮಾದಲ್ಲಿ ಶಿವಣ್ಣ ಕ್ಯಾರೆಕ್ಟರ್ ಹೆಸರು ವೇದ. ರಿಯಲಿಸ್ಟಿಕ್ ಮಾದರಿಯಲ್ಲೇ ನಡೆಯುವ ಕಾಲ್ಪನಿಕ ಕಥೆ ಎಂದಿದ್ದಾರೆ ಹರ್ಷ. ಸದ್ಯಕ್ಕೆ ಚಿತ್ರದ ಅಪ್ಡೇಟ್ ಇಷ್ಟೆ, ಉಳಿದ ಕಲಾವಿದರು, ತಂತ್ರಜ್ಞರ ಆಯ್ಕೆ ಇನ್ನಷ್ಟೇ ಆಗಬೇಕಿದೆ.

 • ವೇದ ಪೋಸ್ಟರ್ ಲಾಂಚ್‍ನಲ್ಲಿತ್ತು ಸಂಪೂರ್ಣ ರಾಜ್ ಕುಟುಂಬ

  ವೇದ ಪೋಸ್ಟರ್ ಲಾಂಚ್‍ನಲ್ಲಿತ್ತು ಸಂಪೂರ್ಣ ರಾಜ್ ಕುಟುಂಬ

  ವೇದ. ಗೀತಾ ನಿರ್ಮಾಪಕರಾಗಿರುವ ಮೊದಲ ಹಾಗೂ ಶಿವಣ್ಣ ಅವರ 125ನೇ ಸಿನಿಮಾ. ಸಿನಿಮಾ ಪೋಸ್ಟರ್ ಲಾಂಚ್ ಕಾರ್ಯಕ್ರಮಕ್ಕೆ ರಾಜ್ ಅವರ ಕುಟುಂಬವೇ ಬಂದಿತ್ತು. ಅನಂತನಾಗ್, ಅನಿಲ್ ಕುಂಬ್ಳೆ, ದುನಿಯಾ ವಿಜಯ್ ಕೂಡಾ ಇದ್ದರು. ಬ್ಯಾನರ್ ಲಾಂಚ್ ಮಾಡಿದವರೆಲ್ಲ ಗೀತಾ ಅವರಿಗೆ ಹುಟ್ಟುಹಬ್ಬದ ಶುಭ ಕೋರಿದರು.

  ಅನಂತ್ ನಾಗ್ : ರಾಜ್ ಯಾರಿಗೂ ಏನೂ ಹೇಳ್ತಾ ಇರಲಿಲ್ಲ. ತಮ್ಮ ನಡವಳಿಕೆ, ಅಭಿನಯದಲ್ಲೇ ಎಲ್ಲವನ್ನೂ ಕಲಿಸಿಕೊಟ್ಟರು. ಅವರೊಂದಿಗೆ ಒಂದು ಸೃಜನಶೀಲ ತಂಡವೇ ಇತ್ತು. ಸಮಾಜಕ್ಕೆ ಧೈರ್ಯ ಹೇಳೋ ಸಿನಿಮಾ ಮಾಡ್ತಿದ್ರು. ಶಿವರಾಜಕುಮಾರ್ ಕೂಡಾ ಆ ಹಾದಿಯಲ್ಲೆ ಸಾಗಲಿ.

  ಅನಿಲ್ ಕುಂಬ್ಳೆ : ಶಿವರಾಜಕುಮಾರ್ ಅವರನ್ನ ಒಳ್ಳೆ ಟೆಸ್ಟ್ ಪ್ಲೇಯರ್ ಅಂತಾ ಹೇಳಬಹುದು. ಶಿವಣ್ಣ, ಅಪ್ಪು ನಮ್ಮನ್ನೆಲ್ಲ ಮಾತನಾಡಿಸೋಕೆ ಸ್ಟೇಡಿಯಂಗೆ ಬರ್ತಾ ಇದ್ರು. ಒಂದ್ಸಲ ಮಳೆ ಬಂದು ಮ್ಯಾಚ್ ಕ್ಯಾನ್ಸಲ್ ಆಗಿದ್ದಾಗ, ನಾವು ಅಣ್ಣಾವ್ರ ಮನೆಗೆ ಹೋಗಿ ಎರಡು ಗಂಟೆ ಮಾತನಾಡಿಕೊಂಡು ಬಂದಿದ್ವಿ. ಈಗ ಗೀತಾ ಸಿನಿಮಾ ಮಾಡ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ.

  ಶಿವರಾಜಕುಮಾರ್ : ನನ್ನ ಸಕ್ಸಸ್‍ಗೆ ಕಾರಣ ನನ್ನ ಕುಟುಂಬ.

  ಗೀತಾ ಶಿವರಾಜಕುಮಾರ್ : ಅವರು.. ಅವರ ಹಿಂದಿನ ಸಕ್ಸಸ್ ಶಕ್ತಿ ನಾನು ಅಂತಾರೆ. ನಾನಲ್ಲ. ಅದು ಅಪ್ಪಾಜಿ. ಅಮ್ಮ, ರಾಘು, ಅಪ್ಪು, ಅವರ ತಂಗಿಯರು. ಅಭಿಮಾನಿ ದೇವರುಗಳು. ಈಗ ವೇದ ಸಿನಿಮಾ ಬರ್ತಿದೆ. ಅದು ನಿಮ್ಮದು.

  ಕಾರ್ಯಕ್ರಮದ ಕೊನೆಯಲ್ಲಿ ಇಡೀ ಕುಟುಂಬವನ್ನು ವೇದಿಕೆಗೆ ಕರೆದು ತಂದರು ಶಿವಣ್ಣ. ಅಶ್ವಿನಿ ಪುನೀತ್ ಮತ್ತು ಅವರ ಮಕ್ಕಳನ್ನು ತಮ್ಮ ಅಕ್ಕಪಕ್ಕ ಕೂರಿಸಿಕೊಂಡು ಫ್ಯಾಮಿಲಿ ಫೋಟೋ ತೆಗೆಸಿಕೊಂಡ ಕ್ಷಣ ಭಾವುಕರನ್ನಾಗಿಸಿದ್ದು ನಿಜ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery