ಹಿರಿಯ ನಿರ್ದೇಶಕ ಕಲಾ ಸಾಮ್ರಾಟ್ ಈಗ ಮಾವನಾಗಿದ್ದಾರೆ. ನಾರಾಯಣ್ ಪುತ್ರ ಪವನ್, ಪವಿತ್ರಾ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದು ಹಿರಿಯರೇ ನಿಶ್ಚಯಿಸಿದ ಮದುವೆ.
ನಿರ್ದೇಶಕರಾಗಿ ಗುರುತಿಸಿಕೊಂಡಿರೋ ಪವನ್, ತಂದೆಯ ಜೊತೆ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ ನಟನೆಯ ಶುಗರ್ ಫ್ಯಾಕ್ಟರಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರೋ ಪವನ್, ಮುತ್ತುರತ್ನ ಎಂಬ ಚಿತ್ರದಲ್ಲಿ ಹೀರೋ. ಜೊತೆಗೆ ನವಮಿ ಅನ್ನೋ ಚಿತ್ರಕ್ಕೆ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಇನ್ನೂ ಯಾವ ಚಿತ್ರಗಳೂ ಬಿಡುಗಡೆ ಆಗಿಲ್ಲ