ಕಣ್ಣೂ ಹೊಡಿಯಾಕ
ಮೊನ್ನೇ ಕಲಿತೀನಿ..
ಏನು ಹೇಳಲಿ ಮಗನಾ..
ನಿನ್ನಾ ನೋಡಿ ಸುಮ್ನೆಂಗಿರ್ಲಿ..
ಬೆಲ್ಲ ಕಡಿಯಾಕಾ..
ನಿನ್ನೇ ಕಲಿತೀನಿ..
ಭಟ್ಟರ ಹಾಡು ಅಪ್ಪಟ ಉತ್ತರ ಕರ್ನಾಟಕ ಶೈಲಿಯಲ್ಲಿ ರೊಚ್ಚಿಗೆಬ್ಬಿಸುತ್ತಿದ್ದರೆ, ಅಭಿಮಾನಿಗಳು ಎದೆಯೊಳಗೆ ಇಳಿಸಿಕೊಂಡಿದ್ಧಾರೆ. ಹಾಡು ರಿಲೀಸ್ ಆದ ತಕ್ಷಣ.. ಸೆಕೆಂಡುಗಳಿಗೆ ಸಾವಿರ.. ಸಾವಿರಗಳ ಲೆಕ್ಕದಲ್ಲಿ ವೀಕ್ಷಕರ ಸಂಖ್ಯೆ ಏರಿದೆ.
ದರ್ಶನ್ ಚಿತ್ರಕ್ಕೆ ಒಂದಾದರೂ ಹಿಟ್ ಹಾಡು ಕೊಡೋ ಅಭ್ಯಾಸ ಇರೋ ಯೋಗರಾಜ್ ಭಟ್, ಒನ್ಸ್ ಎಗೇಯ್ನ್ ಉತ್ತರ ಕರ್ನಾಟಕ ಶೈಲಿಯಲ್ಲಿ ಬೆಲ್ಲ ಕಡಿದಿದ್ದಾರೆ. ಅಭಿಮಾನಿಗಳು ಗಲ್ಲ ಚಾಚಿದ್ದಾರೆ.
ತರುಣ್ ಸುಧೀರ್ ನಿರ್ದೇಶನ, ಉಮಾಪತಿ ನಿರ್ಮಾಣದ ಸಿನಿಮಾ ಮಾರ್ಚ್ 11ಕ್ಕೆ ರಿಲೀಸ್ ಆಗುತ್ತಿದ್ದು, ಟೀಸರ್, ಟ್ರೇಲರುಗಳ ಬಳಿಕ ಒಂದೊಂದೇ ಹಾಡುಗಳ ರಿಲೀಸ್ ಮಾಡಿ ಪ್ರಮೋಟ್ ಮಾಡುತ್ತಿದೆ ರಾಬರ್ಟ್ ಟೀಂ.
ಅರ್ಜುನ್ ಜನ್ಯಾ ಮ್ಯೂಸಿಕ್ಕು, ಭಟ್ಟರ ಲಿರಿಕ್ಕು.. ಶ್ರೇಯಾ ಘೋಷಾಲ್ ಮಾದಕ ಧ್ವನಿ.. ಎಲ್ಲವೂ ಒಂದಕ್ಕೊಂದು ಕೂಡಿ ಬಂದಿದೆ.