` gym ravi, - chitraloka.com | Kannada Movie News, Reviews | Image

gym ravi,

  • ಪುರುಷೋತ್ತಮ ಜಿಮ್ ರವಿ

    ಪುರುಷೋತ್ತಮ ಜಿಮ್ ರವಿ

    ಜಿಮ್ ರವಿ, ಬಾಡಿಬಿಲ್ಡರ್. ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಿಮ್ ರವಿಗೆ ಬೇರೆಯೇ ಖ್ಯಾತಿ ಇದೆ. ಸಿನಿಮಾಗಳಲ್ಲೂ ಸಣ್ಣ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿರೋ ಜಿಮ್ ರವಿ, ಕನ್ನಡ, ತಮಿಳು, ತೆಲುಗಿನ 130ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮ್ಮದೇ ಜಿಮ್ ಇಟ್ಟುಕೊಂಡಿರೋ ಜಿಮ್ ರವಿ, ಈಗ ಹೀರೋ ಆಗೋಕೆ ಹೊರಟಿದ್ದಾರೆ.

    ದಿಲ್ದಾರ್, ನಾನು ನಮ್ಮುಡ್ಗಿ, ಖರ್ಚಿಗೊಂದ್ ಮಾಫಿಯಾ ಸಿನಿಮಾಗಳನ್ನು ನಿರ್ದೇಶಿಸಿದ್ದ ಅವರ್‍ನಾಥ್, ಜಿಮ್ ರವಿಯನ್ನು ಹೀರೋ ಮಾಡುತ್ತಿದ್ದಾರೆ. ಚಿತ್ರದ ಟೈಟಲ್ ಪುರುಷೋತ್ತಮ. ಈ ಚಿತ್ರಕ್ಕೆ ಸ್ವತಃ ಜಿಮ್ ರವಿಯೇ ನಿರ್ಮಾಪಕ.

     

  • ಪುರುಷೋತ್ತಮನ ಅರ್ಧಶತಕ

    ಪುರುಷೋತ್ತಮನ ಅರ್ಧಶತಕ

    ಜಿಮ್ ರವಿ ಹೀರೋ ಆಗಿ ನಟಿಸಿದ್ದ ಮೊದಲ ಸಿನಿಮಾ ಪುರುಷೋತ್ತಮ. ಅವರೇ ನಿರ್ಮಾಪಕರೂ ಆಗಿದ್ದ ಸಿನಿಮಾ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಂಡು ಯಶಸ್ವೀ 50 ದಿನ ಪೂರೈಸಿದೆ. ಅತ್ಯಾಚಾರಕ್ಕೊಳಗಾದ ಪತ್ನಿಗೆ ಬೆಂಬಲವಾಗಿ ನಿಂತು, ಪತ್ನಿಯಂದಲೇ ಅತ್ಯಾಚಾರಿಗಳನ್ನು ಕೊಲ್ಲಿಸುವ ಪತಿಯ ಪಾತ್ರದಲ್ಲಿ ರವಿ ಜೀವಿಸಿದ್ದರು. ಪತ್ನಿಗೇ ಗೊತ್ತಾಗದಂತೆ ಆಕೆಗೆ ಹೇಗೆ ನೆರವಾಗುತ್ತಾನೆ ಎನ್ನುವ ಕಥೆ ರೋಚಕವಾಗಿತ್ತು. ಪ್ರೇಕ್ಷಕರಿಗೂ ಇಷ್ಟವಾಗಿ ಈಗ 50 ದಿನ ಪೂರೈಸಿ ಮುನ್ನುಗ್ಗುತ್ತಿದೆ.

    ರವಿ ಎದುರು ನಾಯಕಿಯಾಗಿ ಅಪೂರ್ವ ನಟಿಸಿದ್ದರು. ಎಸ್.ವಿ.ಅಮರನಾಥ್ ನಿರ್ದೇಶನದ ಚಿತ್ರವಿದು. ಚಿತ್ರದ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕುಗಳನ್ನು ಕಲರ್ಸ್ ಮತ್ತು ವೂಟ್ ಪಡೆದುಕೊಂಡಿದೆ.

  • ಪುರುಷೋತ್ತಮನ ಟ್ರೇಲರ್ ನೋಡೋಕೆ ಸಿದ್ಧರಾಗಿ..

    ಪುರುಷೋತ್ತಮನ ಟ್ರೇಲರ್ ನೋಡೋಕೆ ಸಿದ್ಧರಾಗಿ..

    ಜಿಮ್ ರವಿ ಇದೇ ಮೊದಲ ಬಾರಿಗೆ ಹೀರೋ ಆಗಿರುವ ಸಿನಿಮಾ ಪುರುಷೋತ್ತಮ. ಸೆನ್ಸಾರ್ ಮುಗಿಸಿರುವ ಪುರುಷೋತ್ತಮ ಯು/ಎ ಪ್ರಮಾಣ ಪತ್ರವನ್ನೂ ಪಡೆದುಕೊಂಡಿದೆ. ಸಿನಿಮಾದ ಟ್ರೇಲರ್ ರಿಲೀಸ್ ಮಾಡಿ, ಪ್ರಚಾರದ ಕೆಲಸಗಳಿಗೆ ಚುರುಕು ಮುಟ್ಟಿಸೋ ಪ್ಲಾನ್‍ನಲ್ಲಿದ್ದಾರೆ ರವಿ.

    ಶೋಷಣೆಗೊಳಗಾದ ಹೆಣ್ಣನ್ನು ಕಾಪಾಡುವ ಗಂಡನಾಗಿ ನಟಿಸಿದ್ದಾರೆ ರವಿ. ನಾಯಕಿಯಾಗಿರೋದು ಅಪೂರ್ವ. ಚಿತ್ರಕ್ಕೆ ನಿರ್ಮಾಪಕರೂ ಅವರೇ. ನಿರ್ದೇಶನದ ಹೊಣೆ ಹೊತ್ತಿರೋದು ದಿಲ್ದಾರ, ನಾನು ನಮ್ಮುಡ್ಗಿ ಖರ್ಚ್‍ಗೊಂದು ಮಾಫಿಯಾ ಚಿತ್ರಗಳನ್ನು ನಿರ್ದೇಶಿಸಿದ್ದ ಅಮರನಾಥ್. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನೂರಾರು ಪ್ರಶಸ್ತಿ, ಗೌರವಗಳನ್ನು ಪಡೆದಿರುವ ಜಿಮ್ ರವಿ, ಹಲವು ಸಿನಿಮಾಗಳಲ್ಲಿ ಸ್ಟಂಟ್ ಕಲಾವಿದನಾಗಿ, ಪುಟ್ಟ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು. ಈಗ ಹೀರೋ ಕಮ್ ನಿರ್ಮಾಪಕರಾಗಿದ್ದಾರೆ.

  • ಬಾಡಿ ಬಿಲ್ಡರ್ ರವಿಯ ಪುರುಷೋತ್ತಮ ಸಿದ್ಧ

    ಬಾಡಿ ಬಿಲ್ಡರ್ ರವಿಯ ಪುರುಷೋತ್ತಮ ಸಿದ್ಧ

    ಬಾಡಿಬಿಲ್ಡರ್, ಮಿ.ಇಂಡಿಯಾ ಖ್ಯಾತಿಯ ಜಿಮ್ ರವಿ ಹೀರೋ ಆಗಿರುವ ಮೊದಲ ಚಿತ್ರ ಪುರುಷೋತ್ತಮ. ಅಪೂರ್ವ ನಾಯಕಿಯಾಗಿರುವ ಪುರುಷೋತ್ತಮ ಚಿತ್ರ ಚಿತ್ರೀಕರಣ ಮುಗಿಸಿದ್ದು, ರಿಲೀಸ್‍ಗೆ ರೆಡಿಯಾಗಿದೆ. 130ಕ್ಕೂ ಅಧಿಕ ಸಿನಿಮಾಗಳಲ್ಲಿ ಪುಟ್ಟ ಪುಟ್ಟ ಪಾತ್ರಗಳಲ್ಲಿ ನಟಿಸಿರುವ ಜಿಮ್ ರವಿ ಇದೇ ಮೊದಲ ಬಾರಿಗೆ ಹೀರೋ ಆಗಿದ್ದಾರೆ.

    ನಾನು ನಮ್ಮುಡ್ಗಿ ಖರ್ಚ್‍ಗೊಂದ್ ಮಾಫಿಯಾ ಮತ್ತು ದಿಲ್ದಾರ ಚಿತ್ರಗಳ ನಿರ್ದೇಶಕ ಎಸ್.ವಿ.ಅಮರ್‍ನಾಥ್ ಈ ಚಿತ್ರದ ನಿರ್ದೇಶಕ. ರವಿ ಜಿಮ್ಸ್ ಬ್ಯಾನರ್‍ನಲ್ಲಿ ನಿರ್ಮಾಣವಾಗಿರುವ ಚಿತ್ರವನ್ನು ವಿಜಯ್ ರಾಮೇಗೌಡ ಭೂಕನಕೆರೆ ಅರ್ಪಿಸುತ್ತಿದ್ದಾರೆ. ಪತ್ನಿಯನ್ನು ಹೇಗೆ ನೋಡಿಕೊಳ್ಳಬೇಕು ಅನ್ನೋ ಸಂದೇಶವಿರುವ ಚಿತ್ರದಲ್ಲಿ ರವಿ ಎದುರು ಅಪೂರ್ವ ನಾಯಕಿಯಾಗಿ ನಟಿಸಿದ್ದಾರೆ.