ಬಾಡಿಬಿಲ್ಡರ್, ಮಿ.ಇಂಡಿಯಾ ಖ್ಯಾತಿಯ ಜಿಮ್ ರವಿ ಹೀರೋ ಆಗಿರುವ ಮೊದಲ ಚಿತ್ರ ಪುರುಷೋತ್ತಮ. ಅಪೂರ್ವ ನಾಯಕಿಯಾಗಿರುವ ಪುರುಷೋತ್ತಮ ಚಿತ್ರ ಚಿತ್ರೀಕರಣ ಮುಗಿಸಿದ್ದು, ರಿಲೀಸ್‍ಗೆ ರೆಡಿಯಾಗಿದೆ. 130ಕ್ಕೂ ಅಧಿಕ ಸಿನಿಮಾಗಳಲ್ಲಿ ಪುಟ್ಟ ಪುಟ್ಟ ಪಾತ್ರಗಳಲ್ಲಿ ನಟಿಸಿರುವ ಜಿಮ್ ರವಿ ಇದೇ ಮೊದಲ ಬಾರಿಗೆ ಹೀರೋ ಆಗಿದ್ದಾರೆ.
ನಾನು ನಮ್ಮುಡ್ಗಿ ಖರ್ಚ್‍ಗೊಂದ್ ಮಾಫಿಯಾ ಮತ್ತು ದಿಲ್ದಾರ ಚಿತ್ರಗಳ ನಿರ್ದೇಶಕ ಎಸ್.ವಿ.ಅಮರ್‍ನಾಥ್ ಈ ಚಿತ್ರದ ನಿರ್ದೇಶಕ. ರವಿ ಜಿಮ್ಸ್ ಬ್ಯಾನರ್‍ನಲ್ಲಿ ನಿರ್ಮಾಣವಾಗಿರುವ ಚಿತ್ರವನ್ನು ವಿಜಯ್ ರಾಮೇಗೌಡ ಭೂಕನಕೆರೆ ಅರ್ಪಿಸುತ್ತಿದ್ದಾರೆ. ಪತ್ನಿಯನ್ನು ಹೇಗೆ ನೋಡಿಕೊಳ್ಳಬೇಕು ಅನ್ನೋ ಸಂದೇಶವಿರುವ ಚಿತ್ರದಲ್ಲಿ ರವಿ ಎದುರು ಅಪೂರ್ವ ನಾಯಕಿಯಾಗಿ ನಟಿಸಿದ್ದಾರೆ.