` rukmini vasanth, - chitraloka.com | Kannada Movie News, Reviews | Image

rukmini vasanth,

  • Rukmini Vasanth Selected As The Heroine Of 'Saptha Sagaradaache Ello'

    Rukmini Vasanth Selected As The Heroine Of 'Saptha Sagaradaache Ello'

    Actress Rukmini Vasanth has been selected as the female lead to Rakshith Shetty in a  new film 'Saptha Sagaradaache Ello'. The film is being written and directed by Hemanth M Rao and produced by Pushkar Mallikarjunaiah.

    Rukmini Vasanth was first seen as a female lead in RJ Srini's 'Birbal'. After that, the actress was roped in as the heroine in Upendra's new film to be directed by Shashank. However, the film got shelved due to various reasons. Now after a two year gap, the actress will be seen in an intense role in 'SSE'.

    The shooting for 'SSE' is all set to start from the last week of February. Rakshith Shetty's '777 Charlie' is almost complete except for a few days of patchwork. Once that is completed, 'SSE' will start rolling in Bangalore.

    Advaitha Gurumurthy is the cinematographer, while Charan Raj is the music composer.

  • ಗೋಲ್ಡನ್ ಬಾನ ದಾರಿಗೆ ಸಪ್ತ ಸಾಗರದ ಸುಂದರಿ..

    ಗೋಲ್ಡನ್ ಬಾನ ದಾರಿಗೆ ಸಪ್ತ ಸಾಗರದ ಸುಂದರಿ..

    ಗೋಲ್ಡನ್‌ ಸ್ಟಾರ್‌  ಗಣೇಶ್‌ ಮತ್ತು ನಿರ್ದೇಶಕ ಪ್ರೀತಂ ಗುಬ್ಬಿ ಜೋಡಿಯ ನಾಲ್ಕನೇ ಸಿನಿಮಾ ಬಾನ ದಾರಿಯಲ್ಲಿ.. ಈ ಚಿತ್ರಕ್ಕೀಗ ಸಪ್ತ ಸಾಗರದಾಚೆಯ ಚೆಲುವೆ ಬಂದಿದ್ದಾರೆ. ಗಣೇಶ್ ಎದುರು ನಾಯಕಿಯಾಗಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ. ಬೀರ್ ಬಲ್ ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರುಕ್ಮಿಣಿ, ರಕ್ಷಿತ್ ಶೆಟ್ಟಿ, ಹೇಮಂತ್ ರಾವ್ ಕಾಂಬಿನೇಷನ್ನಿನ ಸಪ್ತ ಸಾಗರದಾಚೆ ಎಲ್ಲೋ ಚಿತ್ರದಲ್ಲೂ ನಟಿಸಿದ್ದಾರೆ. ಆ ಚಿತ್ರ ತೆರೆಗೆ ಬರುವ ಮುನ್ನವೇ ಬಾನ ದಾರಿಯಲ್ಲಿ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ ರುಕ್ಮಿಣಿ.

    ಬಾನ ದಾರಿಯಲ್ಲಿ ರೊಮ್ಯಾಂಟಿಕ್‌ ಡ್ರಾಮಾ ಮೂವಿ. ಪ್ರೀತಮ್ ಮತ್ತು ಗಣೇಶ್ ಅವರ ಜೊತೆ ಜೊತೆಯಲಿ ಮತ್ತು 99 ಚಿತ್ರಗಳನ್ನು ನೋಡಿದೆ. ಇಷ್ಟವಾಯಿತು. ಚಿತ್ರದಲ್ಲಿ ನಾನು ವಾಟರ್‌ ಸ್ಪೋರ್ಟ್ಸ್ ಆಟಗಾರ್ತಿಯಾಗಿದ್ದೇನೆ. ಆ ಆಟ ಯಾವುದು ಎಂದು ಈಗಲೇ ಹೇಳೋಕಾಗಲ್ಲ. ಪಾತ್ರಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ ರುಕ್ಮಿಣಿ ವಸಂತ್.

    ಮೇ 2ನೇ ವಾರದಿಂದ ಚಿತ್ರೀಕರಣ ಆರಂಭವಾಗಲಿದ್ದು, ಆಫ್ರಿಕಾ, ಬೆಂಗಳೂರು ಮತ್ತು ಚೆನ್ನೈಯಲ್ಲಿ ಚಿತ್ರೀಕರಣ ನಡೆಯಲಿದೆ. ರುಕ್ಮಿಣಿ ವಸಂತ್ ಅವರು ನಾನು ಬರೆದ ಕಥೆಗೆ ತುಂಬ ಚೆನ್ನಾಗಿ ಹೊಂದಿಕೊಳ್ಳುತ್ತಾರೆ. ಹೀಗಾಗಿಯೇ ಅವರನ್ನು ಸೆಲೆಕ್ಟ್ ಮಾಡಿದೆ. ಪರ್ಫಾಮೆನ್ಸ್ಗೆ ಒಳ್ಳೆಯ ಅವಕಾಶ ಇದೆ ಎಂದಿದ್ದಾರೆ ಪ್ರೀತಂ.

  • ವಿಜಯ್ ಸೇತುಪತಿ ಜೊತೆ ರುಕ್ಮಿಣಿ ವಸಂತ್

    ವಿಜಯ್ ಸೇತುಪತಿ ಜೊತೆ ರುಕ್ಮಿಣಿ ವಸಂತ್

    ಇತ್ತೀಚಿನ ದಶಕದಲ್ಲಿ ಇಡೀ ಭಾರತದ ಗಮನ ಸೆಳೆದ ಹೀರೋ ಎಂದರೆ ವಿಜಯ್ ಸೇತುಪತಿ ಹೆಸರನ್ನು ಪ್ರಮುಖವಾಗಿ ಹೇಳಬಹುದು. ಅವರ ಚಿತ್ರಗಳಲ್ಲಿ ಕಥೆ ಸಖತ್ತಾಗಿರುತ್ತದೆ ಎನ್ನುವ ನಂಬಿಕೆ ಪ್ರೇಕ್ಷಕರದ್ದು. ವಿಜಯ್ ಸೇತುಪತಿ ನಟಿಸಿದ ಚಿತ್ರಗಳನ್ನು ರೀಮೇಕ್ ಮಾಡುವವರು ಕೂಡಾ, ಅವರ ಪಾತ್ರ ಮಾಡುವಾಗ ಕೇರ್ ಫುಲ್ ಆಗಿರುತ್ತಾರೆ. ತಮಿಳಿನ ಈ ನಟ ಇದೀಗ ಸಿದ್ದರಾಮಯ್ಯ ಬಯೋಪಿಕ್`ನಲ್ಲಿ ಕೂಡಾ ನಟಿಸಲು ಒಪ್ಪಿದ್ದಾರಂತೆ.

    ಕಮಲ್ ಹಾಸನ್ ಎದುರು ಕೂಡಾ ವಿಲನ್ ಆಗಿ ನಟಿಸಿ ಶಭಾಶ್ ಎನಿಸಿಕೊಂಡ ವಿಜಯ್ ಸೇತುಪತಿ ಜೊತೆ ಈಗ ಕನ್ನಡದ ನಟಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ. ಬೀರ್ ಬಲ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ರುಕ್ಮಿಣಿ ವಸಂತ್, ರಕ್ಷಿತ್ ಶೆಟ್ಟಿ ಜೊತೆ ಸಪ್ತಸಾಗರದಾಚೆಯೆಲ್ಲೋ, ಶ್ರೀಮುರಳಿ ಜೊತೆ ಬಘೀರ ಹಾಗೂ ಗಣೇಶ್ ಜೊತೆ ಬಾನದಾರಿಯಲ್ಲಿ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ವಿಜಯ್ ಸೇತುಪತಿಯಂತಹ ಸ್ಟಾರ್ ಕಲಾವಿದನ ಎದುರು ನಟಿಸುತ್ತಿರೋದು ಥ್ರಿಲ್ ಕೊಟ್ಟಿದೆ ಎಂದಿದ್ದಾರೆ ರುಕ್ಮಿಣಿ ವಸಂತ್. ಈ ಚಿತ್ರದ ಊಲಕ ರುಕ್ಮಿಣಿ, ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.