` sapthasagaradaache, - chitraloka.com | Kannada Movie News, Reviews | Image

sapthasagaradaache,

  • Rukmini Vasanth Selected As The Heroine Of 'Saptha Sagaradaache Ello'

    Rukmini Vasanth Selected As The Heroine Of 'Saptha Sagaradaache Ello'

    Actress Rukmini Vasanth has been selected as the female lead to Rakshith Shetty in a  new film 'Saptha Sagaradaache Ello'. The film is being written and directed by Hemanth M Rao and produced by Pushkar Mallikarjunaiah.

    Rukmini Vasanth was first seen as a female lead in RJ Srini's 'Birbal'. After that, the actress was roped in as the heroine in Upendra's new film to be directed by Shashank. However, the film got shelved due to various reasons. Now after a two year gap, the actress will be seen in an intense role in 'SSE'.

    The shooting for 'SSE' is all set to start from the last week of February. Rakshith Shetty's '777 Charlie' is almost complete except for a few days of patchwork. Once that is completed, 'SSE' will start rolling in Bangalore.

    Advaitha Gurumurthy is the cinematographer, while Charan Raj is the music composer.

  • ಡುಮ್ಮನಾದ ರಕ್ಷಿತ್ ಶೆಟ್ಟಿ : ಡುಮ್ಮ ಮಾಡಿದ್ದು ಹೇಮಂತ್

    ಡುಮ್ಮನಾದ ರಕ್ಷಿತ್ ಶೆಟ್ಟಿ : ಡುಮ್ಮ ಮಾಡಿದ್ದು ಹೇಮಂತ್

    ಇತ್ತೀಚೆಗಷ್ಟೇ ರಕ್ಷಿತ್ ಶೆಟ್ಟಿ ತಮ್ಮ ಎರಡು ಚಿತ್ರಗಳ ಪ್ರಮೋಷನ್‍ನಲ್ಲಿ ಕಾಣಿಸಿಕೊಂಡಿದ್ದರು. ಸಕುಟುಂಬ ಸಮೇತ ಮತ್ತು 777 ಚಾರ್ಲಿ ಚಿತ್ರದ ಕಾರ್ಯಕ್ರಮಗಳಲ್ಲಿ ರಕ್ಷಿತ್ ಶೆಟ್ಟಿ ಅವರನ್ನು ನೋಡಿದ್ದವರು ವಾಟ್ ಈಸ್ ದಿಸ್ ಎಂದಿದ್ದರು. ಅಷ್ಟು ದಪ್ಪಗಾಗಿದ್ದರು ರಕ್ಷಿತ್ ಶೆಟ್ಟಿ. ಏನಿಲ್ಲವೆಂದರೂ 15ರಿಂದ 20 ಕೆಜಿ ತೂಕ ಹೆಚ್ಚಿಸಿಕೊಂಡಿದ್ದರು ರಕ್ಷಿತ್ ಶೆಟ್ಟಿ. ಈಗ ಅವರ ಡುಮ್ಮನಾಗಿದ್ದರ ಹಿಂದಿನ ಸತ್ಯ ಹೊರಬಿದ್ದಿದೆ. ರಕ್ಷಿತ್ ಅವರನ್ನು ಇಷ್ಟು ಡುಮ್ಮಗಾಗಿಸಿದ್ದು ನಿರ್ದೇಶಕ ಹೇಮಂತ್ ರಾವ್ ಅವರು ಅನ್ನೋ ಸತ್ಯ ಗೊತ್ತಾಗಿದೆ.

    ಗೋಧಿ ಬಣ್ಣ ಸಾಧಾರಣ ಮೈಕಟ್ಟು ನಂತರ ಹೇಮಂತ್ ರಾವ್ ನಿರ್ದೇಶನದಲ್ಲಿ ಮತ್ತೊಮ್ಮೆ ರಕ್ಷಿತ್ ನಟಿಸುತ್ತಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ.. ಚಿತ್ರದ ಚಿತ್ರೀಕರಣ ಈಗಾಗಲೇ ಶೇ.50ರಷ್ಟು ಕಂಪ್ಲೀಟ್ ಆಗಿದೆ. ಅದರಲ್ಲಿ ರಕ್ಷಿತ್ ಶೆಟ್ಟಿ ಕಾಲೇಜು ಹುಡುಗ. ಸ್ಲಿಮ್ & ಸ್ಮಾರ್ಟ್. ಇನ್ನು ಬಾಕಿಯಿರೋ ಚಿತ್ರೀಕರಣಕ್ಕೆ ರಕ್ಷಿತ್ ಶೆಟ್ಟಿ ಇನ್ನೊಂದ್ ಹತ್ತು ವರ್ಷ ದೊಡ್ಡವರಾಗಬೇಕು. ಒಂದಿಷ್ಟು ಅಂಕಲ್ ಲುಕ್ಕೂ ಬೇಕು. ಸಾಲ್ಟ್ & ಪೆಪ್ಪರ್ ಗಡ್ಡ ಬೇಕು. ಎಲ್ಲಕ್ಕಿಂತ ಹೆಚ್ಚಾಗಿ ತೂಕ ಒಂದಿಷ್ಟು ಹೆಚ್ಚಾಗಬೇಕು. ಅದೆಲ್ಲದರ ಫಲಿತಾಂಶವೇ ರಕ್ಷಿತ್ ಶೆಟ್ಟಿಯವರ ಈ ಲುಕ್ಕು.

    ಜೂನ್ 10ಕ್ಕೆ 777 ಚಾರ್ಲಿ ರಿಲೀಸ್ ಆಗುತ್ತಿದೆ. ಆ ಚಿತ್ರದ ಪ್ರಮೋಷನ್ ಮುಗಿಸಿದ ನಂತರ ರಕ್ಷಿತ್ ಶೆಟ್ಟಿ ಸಪ್ತಸಾಗರದಾಚೆಯೆಲ್ಲೋ ಚಿತ್ರಕ್ಕೆ ಎಂಟ್ರಿ ಕೊಡಲಿದ್ದಾರೆ. ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಮನು ಹೆಸರಿನ ಪಾತ್ರ ಮಾಡುತ್ತಿದ್ದು, ರಕ್ಷಿತ್ ಎದುರು ಹೀರೋಯಿನ್ ಆಗಿರೋದು ರುಕ್ಮಿಣಿ ವಸಂತ್. ಅಂದಹಾಗೆ.. ರುಕ್ಮಿಣಿ ವಸಂತ್ ಗೆಟಪ್ ಕೂಡಾ ಚೇಂಜ್ ಆಗಲೇಬೇಕಲ್ವಾ..? ಹೇಮಂತ್ ರಾವ್ ಅವರಿಗ್ಯಾವ ಲುಕ್ ಕೊಟ್ಟಿದ್ದಾರೋ.. ಅವರೇ ಹೇಳಬೇಕು.

  • ನಾಯಕಿಯ ಅರ್ಧ ಫೋಟೋ.. ಡೈರೆಕ್ಟರ್..ಪ್ರೊಡ್ಯೂಸರ್..ಹೀರೋ ಟ್ವಿಟರ್ ಟಾಕು..

    ನಾಯಕಿಯ ಅರ್ಧ ಫೋಟೋ.. ಡೈರೆಕ್ಟರ್..ಪ್ರೊಡ್ಯೂಸರ್..ಹೀರೋ ಟ್ವಿಟರ್ ಟಾಕು..

    ಸಾಕ್ ಗುರೂ.. ಈ ಟ್ವಿಟರ್ ನಾಟಕ.. ಶೂಟಿಂಗ್ ಹೋಗೋಣ ಪ್ಲೀಸ್..

    ಹೀಗಂತ ಕೇಳೋದು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ.

    ಒಳ್ಳೆ ಡೇಟ್ ನೋಡಿ ಮುಹೂರ್ತ ಫಿಕ್ಸ್ ಮಾಡು ಗುರೂ.. ಅನ್ನೋ ಉತ್ತರ ಕೊಡೋದು ಡೈರೆಕ್ಟರ್ ಹೇಮಂತ್ ರಾವ್.

    ಗುರುವೇ.. ನಂಗೂ ಕ್ಯೂರಿಯಾಸಿಟಿ ತಡ್ಕೊಳ್ಳೋಕೆ ಆಗ್ಲಿಲ್ಲ. ಪೊಲೀಸ್ ಸ್ಟೇಷನ್‍ನಿಂದ ಫೋಟೋ ತರಿಸಿ ನೋಡ್ಕೊಂಡ್ ಬಿಟ್ಟೆ ಅನ್ನೋ ಉತ್ತರ ಕೊಡೋದು ರಕ್ಷಿತ್ ಶೆಟ್ಟಿ.

    ಅದು ಕಂಟಿನ್ಯೂ ಆಗ್ತಾ ಆಗ್ತಾ.. ಸಿನಿಮಾ ಬಗ್ಗೆ ಸೋಷಿಯಲ್ ಮೀಡಿಯಾದಲ್ಲೇ ಸಣ್ಣದೊಂದು ಟಾಕ್ ನಡೆಯುತ್ತೆ..ಇವರ ಈ ಟಾಕುಟೀಕಿಗೆ ಕಾರಣ ಸಪ್ತಸಾಗರದಾಚೆ ಎಲ್ಲೋ ಸಿನಿಮಾದ ನಾಯಕಿಯ ಅರ್ಧ ಪೋಸ್ಟರು. ಇವತ್ತು ಅಂದ್ರೆ ಫೆಬ್ರವರಿ 3ನೇ ತಾರೀಕು ನಾಯಕಿ ಯಾರು ಎಂದು ಹೇಳೋಕೆ ಹೊರಟಿರೋ ಚಿತ್ರತಂಡ, ನಾಯಕಿಯ ಅರ್ಧ ಫೋಟೋ ಮಾತ್ರ ತೋರಿಸಿದೆ. ಕಂಪ್ಲೀಟ್ ಪಿಕ್ಚರ್ ಇವತ್ತು ತೋರಿಸ್ತಾರಂತೆ.

    ಹೀರೋಯಿನ್ ಯಾರು.. ಬೀರ್‍ಬಲ್ ಚಿತ್ರದ ಮೂಲಕ ಗಮನ ಸೆಳೆದಿದ್ದ ರುಕ್ಮಿಣಿ ಎನ್ನಲಾಗಿದೆ. ಅವರೇನಾ..? ವೇಯ್ಟ್ ಮಾಡ್ತಿರಿ.