ಕೊರೊನಾ ರುದ್ರತಾಂಡವ, ಲಾಕ್ಡೌನ್ ಎಲ್ಲವೂ ಮುಗಿದು ಥಿಯೇಟರ್ ಓಪನ್ ಆದ ಮೇಲೆ ರಿಲೀಸ್ ಆದ ಮೊದಲ ಕನ್ನಡ ಚಿತ್ರ ಆ್ಯಕ್ಟ್ 1978. ಯಜ್ಞಾ ಶೆಟ್ಟಿ, ಬಿ.ಸುರೇಶ್, ಸಂಚಾರಿ ವಿಜಯ್ ಮೊದಲಾದವರು ನಟಿಸಿದ್ದ ಚಿತ್ರ, ತನ್ನ ವಿಭಿನ್ನ ಕಥಾಹಂದರದಿಂದಾಗಿ ಗಮನ ಸೆಳೆಯಿತಷ್ಟೇ ಅಲ್ಲ, ಹಿಟ್ ಚಿತ್ರಗಳ ಲಿಸ್ಟ್ ಸೇರಿದೆ.
ಮಂಸೋರೆ ನಿರ್ದೇಶನದ ಆ್ಯಕ್ಟ್ 1978, 50 ದಿನ ಪೂರೈಸಿದೆ. 2020ರ ನವೆಂಬರ್ 20ರಂದು ರಿಲೀಸ್ ಆಗಿದ್ದ ಚಿತ್ರ ಅರ್ಧಶತಕ ಬಾರಿ ಮುನ್ನುಗ್ಗುತ್ತಿದೆ. ಇದು ಒಂದು ಚಿತ್ರದ ಸಕ್ಸಸ್ ಎನ್ನುವುದಕ್ಕೂ ಮಿಗಿಲಾಗಿ ಕನ್ನಡ ಚಿತ್ರರಂಗಕ್ಕೆ ಸಿಕ್ಕ ಗೆಲುವಿನ ಟಾನಿಕ್ ಎನ್ನಬಹುದು.