ಒಂದು..ಎರಡು..ಮೂರು..ನಾಲ್ಕು.. ಹೀಗೆ.. ಎಣಿಸಿ ಎಣಿಸಿ 14 ಸಾರಿ ಶಕೀಲಾ ಕೆನ್ನೆಗೆ ಬಾರಿಸಿದ್ದರಂತೆ ಸಿಲ್ಕ್ ಸ್ಮಿತಾ. ಇದೆಲ್ಲ ನಡೆದದ್ದು ತಮಿಳಿನ ಕಥೈರಾಣಿ ಅನ್ನೋ ಸಿನಿಮಾ ಸೆಟ್ಟಿನಲ್ಲಿ. ಆ ಚಿತ್ರದಲ್ಲಿ ಸಿಲ್ಕ್ ಸ್ಮಿತಾ ಮತ್ತು ಶಕೀಲಾ ಇಬ್ಬರೂ ಇದ್ದರು. ಸಿಲ್ಕ್, ಶಕೀಲಾಗೆ ಕೆನ್ನೆಗೆ ಹೊಡೆಯುವ ಸನ್ನಿವೇಶ ಇತ್ತು. ಆ ದೃಶ್ಯದಲ್ಲಿ ಶಕೀಲಾ ಮೇಲಿನ ಸಿಟ್ಟನ್ನೆಲ್ಲ ತೀರಿಸಿಕೊಂಡಿದ್ದರು ಸಿಲ್ಕ್ ಸ್ಮಿತಾ.
ಕಾರಣ ಬೇರೇನಿರಲಿಲ್ಲ, ಶಕೀಲಾ ಬಂದ ಮೇಲೆ ಸಿಲ್ಕ್‍ಗೆ ಡಿಮ್ಯಾಂಡ್ ಕಡಿಮೆಯಾಗಿತ್ತು. ಕ್ಯಾಬರೆ ಹಾಡುಗಳೂ ಇರಲಿಲ್ಲ, ಸಾಫ್ಟ್ ಪೋರ್ನ್ ಚಿತ್ರಗಳೂ ಇಲ್ಲದೆ ಆರ್ಥಿಕವಾಗಿ ನಲುಗಿ ಹೋಗಿದ್ದರು ಸಿಲ್ಕ್. ತನ್ನ ಅವಕಾಶಗಳನ್ನು ಶಕೀಲಾ ಬಾಚಿಕೊಳ್ಳುತ್ತಿದ್ದಾರೆ ಎಂಬ ಸಿಟ್ಟನ್ನು ಹಾಗೆ ತೀರಿಸಿಕೊಂಡಿದ್ದರು. ಇದನ್ನೆಲ್ಲ ಸ್ವತಃ ಶಕೀಲಾ ಹೇಳಿಕೊಂಡಿದ್ದಾರೆ.
ಇದೇ ಕ್ರಿಸ್‍ಮಸ್‍ಗೆ ಶಕೀಲಾ ಸಿನಿಮಾ ರಿಲೀಸ್ ಆಗುತ್ತಿದ್ದು, ಇಂದ್ರಜಿತ್ ಲಂಕೇಶ್ ಇಂತಹ ಸನ್ನಿವೇಶಗಳನ್ನೆಲ್ಲ ಚಿತ್ರದಲ್ಲಿ ತಂದಿದ್ದಾರಂತೆ. ಶಕೀಲಾ ಪಾತ್ರದಲ್ಲಿ ರಿಚಾ ಚಡ್ಡಾ ನಟಿಸಿದ್ದು, 5 ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.