` guru shisyaru, - chitraloka.com | Kannada Movie News, Reviews | Image

guru shisyaru,

 • 1996ರ ನಂತರ ಮೀಸೆ ಬಿಟ್ಟ ಶರಣ್ : ಗುರುವಿನ ಮೀಸೆ ಸ್ಟೋರಿ

  1996ರ ನಂತರ ಮೀಸೆ ಬಿಟ್ಟ ಶರಣ್ : ಗುರುವಿನ ಮೀಸೆ ಸ್ಟೋರಿ

  ಕರ್ಪೂರದ ಗೊಂಬೆ. 1996ರಲ್ಲಿ ರಿಲೀಸ್ ಆಗಿದ್ದ ಸಿನಿಮಾ. ಅಕ್ಕ ಶೃತಿ ನಾಯಕಿಯಾಗಿದ್ದ ಚಿತ್ರದಲ್ಲಿ ಶರಣ್ ನಟಿಸಿದ್ದರು. ಶೃತಿಯ ಸೋದರಿಯನ್ನು ಮದುವೆಯಾಗುವ ಹುಡುಗನ ಪಾತ್ರವದು. ಪಾತ್ರವೂ ಹಿಟ್ ಆಗಿತ್ತು. ಚಿತ್ರವೂ ಹಿಟ್ ಆಗಿತ್ತು. ಆ ಪಾತ್ರ ನೋಡಿದ್ದವರಿಗೆ ಒಂದು ನೆನಪಿನಲ್ಲಿರುತ್ತೆ. ಮೀಸೆ ಹೊತ್ತ ಶರಣ್. ಆ ಚಿತ್ರದ ನಂತರ ಶರಣ್ ಮೀಸೆ ಹೊತ್ತು ಗಂಡಸಾಗುವ ಲಕ್ಕೇ ಸಿಗಲಿಲ್ಲ. ಈಗ ಜಡೇಶ್ ಕೆ.ಹಂಪಿ ಶರಣ್`ಗೆ ಮೀಸೆ ತೊಡಿಸಿದ್ದಾರೆ.

  ಹಾಗಂತ ಮಧ್ಯೆ ಎಲ್ಲಿಯೂ ಹಾಕಿಲ್ಲ ಅಂತಿಲ್ಲ. ಬುಲೆಟ್ ಬಸ್ಯಾ ಚಿತ್ರದಲ್ಲಿ ಮೀಸೆ ತೊಟ್ಟಿದ್ದರೂ.. ಡಬಲ್ ರೋಲ್. ಮೀಸೆ ಇಲ್ಲದ ರೋಲ್ ಕೂಡಾ ಇತ್ತು. ಮೀಸೆಗೊಬ್ಬ.. ಆಸೆಗೊಬ್ಬ. ಆದರೆ.. ಗುರು ಶಿಷ್ಯರು ಚಿತ್ರದಲ್ಲಿ ಶರಣ್ ವೊರಿಜಿನಲ್ಲಾಗೇ ಮೀಸೆ ಬೆಳೆಸಿ ಪಿಟಿ ಮೇಷ್ಟರಾಗಿದ್ದಾರೆ.

  1996ರ ನಂತರ ಮೀಸೆ ಬೆಳೆಸಿಕೊಂಡು ನಟಿಸಿರುವ ಚಿತ್ರ ಗುರು ಶಿಷ್ಯರು. ಹಾಗಾಗಿ ಇದೊಂಥರಾ ಸ್ಪೆಷಲ್. ಇದು 80ರ ದಶಕದ ಕಥೆ. ಆಗಿನ ಕಾಲದಲ್ಲಿ ಮೀಸೆ ಬಿಡುವುದೊಂದು ಪ್ಯಾಷನ್. ಮೀಸೆ ಬಿಟ್ಟರಷ್ಟೇ ಮರ್ಯಾದೆ ಎಂಬ ಸ್ಥಿತಿಯಿತ್ತು. ಆಗಿನ ಕಾಲಕ್ಕೆ ತಕ್ಕಂತೆ ಮೀಸೆ ಬಿಟ್ಟು ನಟಿಸಿದ್ದೇನೆ ಎನ್ನುವ ಶರಣ್ ಮೀಸೆಯ ಮರೆಯಲ್ಲೇ ನಗುತ್ತಾರೆನ್ನುವುದು ನೋಡೋಕೆ ಚೆಂದ ಚೆಂದ.

  ಶರಣ್ ಪಿಟಿ ಮೇಷ್ಟ್ರಾದ ಮಾತ್ರ ಕಾಮಿಡಿ ಇಲ್ಲ ಎಂದೇನಿಲ್ಲ. ಶರಣ್ ಚಿತ್ರದಲ್ಲಿ ಕಾಮಿಡಿ ಇರಲೇಬೇಕು. ಜೊತೆಗೆ ಆಗಿನ ಕಾಲದಲ್ಲಿ ಮೇಷ್ಟ್ರುಗಳು ಮಕ್ಕಳನ್ನು ಬಯ್ಯೋಕೆ ಬಳಸುತ್ತಿದ್ದ ಪದಗಳನ್ನೆಲ್ಲ ಬಳಸಿಕೊಳ್ಳಲಾಗಿದೆಯಂತೆ. ಅಲ್ಲಿಗೆ 30 ದಾಟಿರುವವರಿಗೆಲ್ಲ ಹಳೆಯ ಕಾಲದ ನೆನಪಾದರೆ ಅಚ್ಚರಿಯಿಲ್ಲ.

  ಶರಣ್ ಮನೋಹರ್ ಎಂಬ ಪಿಟಿ ಮೇಷ್ಟ್ರಾಗಿ ನಟಿಸಿದ್ದರೆ, ಹಾಲು ಮಾರುವ ಸುಜಾತ ಅಲಿಯಾಸ್ ಸೂಜಿಯಾಗಿ ನಿಶ್ವಿಕಾ ನಾಯ್ಡು ನಟಿಸಿದ್ದಾರೆ. ಹಳ್ಳಿಮೇಷ್ಟ್ರು ರವಿಚಂದ್ರನ್‍ರನ್ನು ಸಿಕ್ಕಾಪಟ್ಟೆ ಇಷ್ಟಪಡುವ ಸೂಜಿ, ಪಿಟಿ ಮೇಷ್ಟ್ರ ಮೇಲೆ ಲವ್ವಾಗುತ್ತೆ. ಹಾಲು ಮಾರುವ ಹುಡುಗಿ ಕಣ್ಣ ನೋಟದಲ್ಲೇ ಬಾಣ ಬಿಡುತ್ತಾಳೆ. ಕಣ್ಣಿನಲ್ಲೇ ನಟಿಸಿದ್ದಾರೆ. ಖಂಡಿತಾ ಅವರಿಗೆ ಸ್ಯಾಂಡಲ್‍ವುಡ್`ನಲ್ಲಿ ಭವಿಷ್ಯ ಇದೆ ಎನ್ನುತ್ತಾರೆ ಶರಣ್.

  ಸಿನಿಮಾ ಇದೇ ಶುಕ್ರವಾರ ರಿಲೀಸ್ ಆಗುತ್ತಿದೆ. ಖೋಖೋ ಆಟದ ಬೇಸ್‍ನಲ್ಲೇ ಬೆಳೆಯುವ ಸ್ಟೋರಿ ಇದು.

 • Guru Shishyaru Censored U, Movie Releasing On 23rd

  Guru Shishyaru Censored U, Movie Releasing On 23rd

  Guru Shishyaru movie was censored today evening. Censor has given a clean chit 'U' certificate. No Mutes, no cuts, no deletion. Censor team appreciated the hardest efforts of the team for making a clean family entertainment.

  The movie is produced under laddu cinema house in association with Tharun Sudhir Kreative. The movie is stated to release on September 23rd. The movie has been sold for record price for all areas of Karnataka. 

  Running length of the movie is 2 hours 40 minutes.

  This is the third production of actor - producer Sharan and first production of Actor 0 director Tharun Sudhor. Movie is written and directed by jadeesha Hampi, creative head by Tharun Sudhir and dialogues are by Maasti. Sudhakar shetty has handled Cinematography while Mohan B Kere is the art director.

 • Kantara and Guru Sishyaru trailers released

  Kantara and Guru Sishyaru trailers released

  Trailers of two upcoming Kannada films; Guru Sishyaru and Kantara was released today. Guru Sishyaru is made under Laddu productions of actor Sharan and Tharun Sudheer. It is directed by Jadesh Kumar who made a mark with Gentleman. The film is about a PT master who trains a group of youngsters to play kho-kho. The film is releasing on September 23.

  Another trailer that released today was of Hombale Films’ Kantara. The Rishab Shetty film also stars Kishore, Achyuth Kumar among others. Set in the coastal districts where Kambala is a popular sport, it is the first film set in the backdrop of this traditional sport. Kantara is releasing on September 30. 

  Both the films are much awaited for various reasons. Kantara is from Hombale Films who made the worldwide blockbuster KGF2 recently. Though Kantara is releasing only in Kannada, its business may be expanded into other languages after the response it generates in Karnataka. The Kannada version will be released in a big way in other states also. 

 • Sharan's New Film Titled 'Guru Shishyaru'

  Sharan's New Film Titled 'Guru Shishyaru'

  Sharan's new film being directed by Jadesh Hampi has been titled as 'Guru Shishyaru'. The title is derived from Dwarkish's iconic film of the same name, which was released in the early 80s.

  Dwarkish unveiled the Title Motion Poster of the film on Monday morning at his residence. Sharan, Tarun, Jadesh, Yogi Dwarkish and others were present at the occasion. The film is all set to be launched after Sankranti next year.

  The film is set in 1995 and revolves around a sport. Apart from acting in the film, Sharan will also be producing the film through his Laddoo Cinema House. Ajaneesh Lokanath is the music director, while Sudhakar Raj is the cinematographer.

   

 • ಗುರು ಶಿಷ್ಯರ ಹಾಡು ರಿಲೀಸ್ ಮಾಡಿದ ಹಳ್ಳಿಮೇಷ್ಟ್ರು

  ಗುರು ಶಿಷ್ಯರ ಹಾಡು ರಿಲೀಸ್ ಮಾಡಿದ ಹಳ್ಳಿಮೇಷ್ಟ್ರು

  ಗುರು ಶಿಷ್ಯರು. ಶರಣ್ ಹೀರೋ ಆಗಿರೋ ಸಿನಿಮಾ. ಶರಣ್ ಹೀರೋ ಅಷ್ಟೇ ಅಲ್ಲ, ನಿರ್ಮಾಪಕರೂ ಹೌದು. ನಿರ್ಮಾಣದಲ್ಲಿ ಶರಣ್ ಜೊತೆ ತರುಣ್ ಸುಧೀರ್ ಕೂಡಾ ಕೈಜೋಡಿಸಿದ್ದಾರೆ. ಜಂಟಲ್‍ಮನ್ ಅನ್ನೋ ವಿಭಿನ್ನ ಚಿತ್ರವನ್ನು ನಿರ್ದೇಶಿಸಿ ಗಮನ ಸೆಳೆದಿದ್ದ ಜಡೇಶ್ ಕೆ.ಹಂಪಿ ಈ ಚಿತ್ರಕ್ಕೆ ಡೈರೆಕ್ಟರ್. ನಿಶ್ವಿಕಾ ನಾಯ್ಡು ಹೀರೋಯಿನ್ ಆಗಿರೋ ಚಿತ್ರದಲ್ಲಿ ಶರಣ್ ಪಿಟಿ ಮೇಷ್ಟ್ರು ಪಾತ್ರ ಮಾಡುತ್ತಿದ್ದಾರೆ.

  ಈಗ ಚಿತ್ರದ ಮೊದಲ ಹಾಡು ರಿಲೀಸಾಗಿದೆ. ಆಣೆ ಮಾಡಿ ಹೇಳುತೀನಿ ನಾನು ನಿನ್ನವಳು.. ಎಂದು ಶರಣ್ ಬಗ್ಗೆ ನಿಶ್ವಿಕಾ ಕನವರಿಸೋ ಹಾಡಿದು. ಪುನೀತ್ ಆರ್ಯ ಬರೆದಿರುವ ಹಾಡಿಗೆ ಧ್ವನಿ ನೀಡಿರುವುದು ಹರ್ಷಿಕಾ ದೇವಾಂತ್ ಮತ್ತು ವಿಜಯ್ ಪ್ರಕಾಶ್. ತರುಣ್ ಕ್ರಿಯೇಟಿವ್ ಆಗಿರೋದ್ರಿಂದ.. ಅವರು ಕ್ರಿಯೇಟಿವ್ ಹೆಡ್ ಆಗಿದ್ದ ಚಿತ್ರಗಳು ಹಿಟ್ ಆಗಿರೋದ್ರಿಂದ ಈ ಚಿತ್ರದ ಮೇಲೆಯೂ ಭಾರಿ ನಿರೀಕ್ಷೆಗಳಿವೆ.

  ಆಂದಹಾಗೆ ಈ ಹಾಡು ರಿಲೀಸ್ ಮಾಡಿದ್ದು ಹಳ್ಳಿಮೇಷ್ಟ್ರು ರವಿಚಂದ್ರನ್. ಚಿತ್ರದ ಕಾನ್ಸೆಪ್ಟ್ ನನಗೆ ಇಷ್ಟವಾಯಿತು ಎಂದು ಓಪನ್ ಆಗಿ ಹೇಳಿ ತರುಣ್ ಮತ್ತು ಶರಣ್ ಬೆನ್ನು ತಟ್ಟಿದರು ರವಿಚಂದ್ರನ್. ಜೊತೆಗೆ ಲವ್ ಸೀನ್ಸ್‍ಗಳಲ್ಲಿ ಹೀರೋಗೆ ಹೀರೋಯಿನ್ ಮುಟ್ಟೋಕಾದ್ರೂ ಬಿಡಿ ಎಂದು ನಿರ್ದೇಶಕರ ಕಾಲೆಳೆದರು. ಅಂದಹಾಗೆ ಹಾಡು ಬೊಂಬಾಟ್ ಆಗಿದೆ. ಅಜನೀಶ್ ಲೋಕನಾಥ್ ಸಂಗೀತದಂತೆಯೇ.. ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ಹಿಟ್ ಮ್ಯೂಸಿಕ್ ಕೊಟ್ಟಿರುವ ಅಜನೀಶ್ ಮತ್ತೊಮ್ಮೆ ಮೆಲೋಡಿ ಡಿಂಡಿಮ ಮೊಳಗಿಸಿದ್ದಾರೆ.

 • ಗುರು ಶಿಷ್ಯರು : ಶರಣ್`ಗೆ ಠಕ್ಕರ್ ಕೊಡೋವ್ರೆಲ್ಲ ಸ್ಟಾರ್ ನಟರ ಮಕ್ಕಳೇ..

  ಗುರು ಶಿಷ್ಯರು : ಶರಣ್`ಗೆ ಠಕ್ಕರ್ ಕೊಡೋವ್ರೆಲ್ಲ ಸ್ಟಾರ್ ನಟರ ಮಕ್ಕಳೇ..

  ಗುರು ಶಿಷ್ಯರು. ಇತ್ತೀಚೆಗಷ್ಟೇ ಚಿತ್ರದ ಪುಟ್ಟ ಪುಟ್ಟ ಮಕ್ಕಳ ಪಾತ್ರಗಳನ್ನು ಪರಿಚಯ ಮಾಡಿಕೊಡಲಾಗಿದೆ. ಚಿತ್ರದಲ್ಲಿ ಶರಣ್ ಪಿಟಿ ಮಾಸ್ಟರ್ ಆಗಿ ನಟಿಸಿದ್ದಾರೆ. ಖೋಖೋ ಕಲಿಸ್ತಾರಂತೆ. ಖೋಖೋ ಕಲಿಸ್ತಾರಂತೆ ಅಂದ್ಮೇಲೆ ಖೋಖೋ ಹುಡುಗರ ಟೀಂ ಕೂಡಾ ಇರಬೇಕಲ್ವಾ? ಈಗ ಬಿಟ್ಟಿರೋ 13 ಹುಡುಗರ ಟೀಂ ಅದೇ. ಆದರೆ ವಿಶೇಷವೇನು ಗೊತ್ತೇ..? ಇವರೆಲ್ಲ ಸ್ಟಾರ್ ನಟರ ಮಕ್ಕಳು. 13ರಲ್ಲಿ 6 ಜನ ಕಲಾವಿದರ ಮಕ್ಕಳೇ..

  ಸ್ವತಃ ಶರಣ್ ತಮ್ಮ ಪುತ್ರ ಹೃದಯ್‍ನನ್ನು ತೆರೆಗೆ ತರುತ್ತಿದ್ದಾರೆ. ನೆನಪಿರಲಿ ಪ್ರೇಮ್ ಪುತ್ರ ಏಕಾಂತ್, ನಟ ರವಿಶಂಕರ್ ಗೌಡ ಪುತ್ರ ಸೂರ್ಯ, ನವೀನ್ ಕೃಷ್ಣ ಪುತ್ರ ಹರ್ಷಿತ್ ಹಾಗೂ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಇಲ್ಲಿ ನಟಿಸುತ್ತಿದ್ದಾರೆ. ಶಾಸಕ ರಾಜುಗೌಡ ಪುತ್ರ ಮಣಿಕಾಂತ್ ನಾಯಕ್ ಕೂಡಾ ಇಲ್ಲಿ ನಟಿಸುತ್ತಿರೋದು ಇನ್ನೊಂದು ಸ್ಪೆಷಲ್.

  ಸುಮಾರು 450 ಹುಡುಗರನ್ನು ಅಡಿಷನ್ ಮಾಡಿ ಫೈನಲ್ ಮಾಡಿರೋ 13 ಹುಡುಗರು ಇವರು. ಹಾಗಂತ ಇವರನ್ನು ಸುಮ್ಮನೆ ಆಕ್ಟ್ ಮಾಡಿಸಿಲ್ಲ. ವಿಜಯನಗರ ಖೋಖೋ ಫೆಡರೇಷನ್ ಕ್ಲಬ್‍ಗೆ ಸೇರಿಸಿ ಒಂದು ತಿಂಗಳು ಟ್ರೇನಿಂಗ್ ಕೂಡಾ ಕೊಡಿಸಿದ್ದಾರೆ ಕ್ರಿಯೇಟಿವ್ ಹೆಡ್ ತರುಣ್ ಸುಧೀರ್.

  ಜಡೇಶ್ ಕುಮಾರ್ ಹಂಪಿ ನಿರ್ದೇಶನದ ಗುರು ಶಿಷ್ಯರು ಚಿತ್ರದಲ್ಲಿರೋದು ಖೋಖೋ ಕಥೆಯೇ ಅಂತೆ. ನಿಶ್ವಿಕಾ ನಾಯ್ಡು ಹೀರೋಯಿನ್ ಆಗಿದ್ದು ಲಡ್ಡು ಸಿನಿಮಾಸ್ ಮೂಲಕ ಗುರು ಶಿಷ್ಯರು ರೆಡಿಯಾಗುತ್ತಿದ್ದಾರೆ.

 • ಗುರು ಶಿಷ್ಯರು : ಸೋಮಾರಿ..ಮೋಸಗಾರ..ಛಲಗಾರನ ಕಥೆಯಾ..?

  ಗುರು ಶಿಷ್ಯರು : ಸೋಮಾರಿ..ಮೋಸಗಾರ..ಛಲಗಾರನ ಕಥೆಯಾ..?

  ಅವನು ಸೋಮಾರಿ. ಕೆಲಸಕ್ಕೆ ಬಾರದವನು. ಅವನಿಗೆ ಒಂದು ಊರಿನ ಪಿಟಿ ಮೇಷ್ಟ್ರು ಕೆಲಸ ಸಿಗುತ್ತೆ. ಬೈದುಕೊಂಡೇ ಊರಿಗೆ ಹೋದವನಿಗೆ ಚೆಲುವಾಂತ ಚೆಲುವೆಯೂ ಸಿಗ್ತಾಳೆ. ಹಳ್ಳಿಮೇಷ್ಟ್ರು ಅಂತಾ ನಂಬ್ತಾಳೆ. ಜೊತೆಗೆ ಉಢಾಳ್ ಹುಡುಗ್ರು. ಊರಿಗೊಬ್ಬ ವಂಚಕ. ಮೋಸಗಾರನಾಗೋಕೆ ಹೊರಡುವ ಮೇಷ್ಟ್ರು ಆಮೇಲೆ ಛಲಗಾರನಾಗುತ್ತಾನೆ. ನಡುವೆ ಮೈ ನವಿರೇಳಿಸುವ ಖೋಖೋ ಆಟ..

  ಒಂದು ಸಿನಿಮಾಗೆ ಏನೇನೆಲ್ಲ ಇರಬೇಕೋ.. ಅವೆಲ್ಲವೂ ಇದೆ. ಶರಣ್ ತಾನು ಕಾಮಿಡಿಗಷ್ಟೆ ಅಲ್ಲ, ಅಳಿಸೋಕೂ ಗೊತ್ತು ಎನ್ನುವುದನ್ನು ಪ್ರೂವ್ ಮಾಡಿದ್ದಾರೆ. ಈ ಚಿತ್ರದಲ್ಲಿ ಎಮೋಷನ್ಸ್ ಜಾಸ್ತಿ ಇವೆ. ನಿಶ್ವಿಕಾ ನಾಯ್ಡು ಪಕ್ಕಾ ಹಳ್ಳಿ ಹುಡುಗಿಯಾಗಿ ಕಂಗೊಳಿಸುತ್ತಾರೆ. ಆಣೆ ಮಾಡಿ ಹೇಳುತೀನಿ ನಾನು ನಿನ್ನವಳು.. ಹಾಗೂ ಪಾಠ ಮಾಡುವ ಮೇಷ್ಟ್ರುನ್ನು ಭಗವಂತನಿಗೆ  ಹೋಲಿಸಿ ಬರೆದಿದ್ದ ಗೀತೆಗಳ ಮೂಲಕವೇ ಹವಾ ಸೃಷ್ಟಿಮಾಡಿದ್ದ ಸಿನಿಮಾ, ಟ್ರೇಲರ್ ಮೂಲಕ ಹೊಸತನದ ಕಥೆ ಅನ್ನೋದನ್ನ ಸಾಬೀತು ಮಾಡಿದೆ.

  ಜಡೇಶ್ ಕುಮಾರ್ ನಿರ್ದೇಶನದ ಚಿತ್ರದ ಇನ್ನೊಂದು ಹೈಲೈಟ್ 12 ಹುಡುಗರು. ಆ 12ರಲ್ಲಿ 6 ಜನ ಸ್ಟಾರ್ ಕಲಾವಿದರ ಮಕ್ಕಳು. ನೆನಪಿರಲಿ ಪ್ರೇಮ್, ನವೀನ್ ಕೃಷ್ಣ, ಬುಲೆಟ್ ಪ್ರಕಾಶ್, ರವಿಶಂಕರ್, ಶಾಸಕ ರಾಜೂಗೌಡ ಮಕ್ಕಳು. ಹವಾ ಜೋರಾಗಿದೆ.

 • ಗುರು ಶಿಷ್ಯರು ನೋಡಿ ಬಾಲ್ಯಕ್ಕೆ ಜಾರಿದ ರಾಜಾಹುಲಿ

  ಗುರು ಶಿಷ್ಯರು ನೋಡಿ ಬಾಲ್ಯಕ್ಕೆ ಜಾರಿದ ರಾಜಾಹುಲಿ

  ಗುರು ಶಿಷ್ಯರು ಸಿನಿಮಾ 2ನೇ ವಾರಕ್ಕೆ ಕಾಲಿಟ್ಟಿದೆ. ಶರಣ್-ನಿಶ್ವಿಕಾ ನಾಯ್ಡು ಹಾಗೂ 12 ಹುಡುಗರ ಖೋಖೋ ಸೃಷ್ಟಿಸೋ ಗಮ್ಮತ್ತೇ ಬೇರೆ. ಸಿನಿಮಾವನ್ನು ಕನ್ನಡ ಚಿತ್ರರಸಿಕರಷ್ಟೇ ಅಲ್ಲ, ರಾಜಕಾರಣಿಗಳೂ ಮೆಚ್ಚಿಕೊಂಡಿದ್ದಾರೆ. ಇತ್ತೀಚೆಗೆ ಸಿಎಂ ಬಸವರಾಜ ಬೊಮ್ಮಾಯಿ ಚಿತ್ರವನ್ನು ಬಿಡುವು ಮಾಡಿಕೊಂಡು ನೋಡುವುದಾಗಿ ಹೇಳಿದ್ದರು. ಈಗ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಿತ್ರವನ್ನು ನೋಡಿದ್ದಾರೆ.

  ಬೆಂಗಳೂರಿನ ಒರಾಯನ್ ಮಾಲ್‍ನಲ್ಲಿ ಸಿನಿಮಾ ನೋಡಿದ ಯಡಿಯೂರಪ್ಪ ಫುಲ್ ರಿಲ್ಯಾಕ್ಸ್ ಆಗಿದ್ದಾರೆ. ಅಂದಹಾಗೆ ಯಡಿಯೂರಪ್ಪ ಬಾಲ್ಯದಲ್ಲಿ ಖೋಖೋ ಮತ್ತು ಕಬಡ್ಡಿ ಆಡಿದ್ದವರೇ. ತಮ್ಮ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಯಡಿಯೂರಪ್ಪ ಅವರ ಜೊತೆ ಸಚಿವ ಆರ್.ಅಶೋಕ್ ಕೂಡಾ ಸಿನಿಮಾ ವೀಕ್ಷಿಸಿ ಖುಷಿ ಪಟ್ಟರು. ಜಡೇಶ್ ಕುಮಾರ್ ಹಂಪಿ ನಿರ್ದೇಶನದ ಗುರು ಶಿಷ್ಯರು ಚಿತ್ರಕ್ಕೆ ಶರಣ್ ಮತ್ತು ತರುಣ್ ಸುಧೀರ್ ನಿರ್ಮಾಪಕರು.

 • ಗುರು ಶಿಷ್ಯರು ಮತ್ತು ಕಾಂತಾರ ಗೆಲುವು ಸೃಷ್ಟಿಸಿದ ಹೊಸ ಹೆಜ್ಜೆ

  ಗುರು ಶಿಷ್ಯರು ಮತ್ತು ಕಾಂತಾರ ಗೆಲುವು ಸೃಷ್ಟಿಸಿದ ಹೊಸ ಹೆಜ್ಜೆ

  ಗುರು ಶಿಷ್ಯರು ರಿಲೀಸ್ ಆದ ಒಂದೇ ವಾರಕ್ಕೆ ರಿಲೀಸ್ ಆಗಿದ್ದು ಕಾಂತಾರ. ಕ್ರಿಕೆಟ್ ಭಾಷೆಯಲ್ಲಿ ಹೇಳೋದಾದರೆ ಕಾಂತಾರದ ಓಟ ಸೂರ್ಯ ಕುಮಾರ್ ಯಾದವ್ ಬ್ಯಾಟಿಂಗಿನಂತಿದೆ. ಗುರು ಶಿಷ್ಯರ ಓಟ ವಿರಾಟ್ ಕೊಹ್ಲಿ ಬ್ಯಾಟಿಂಗಿನಂತೆ. ಸ್ಟಡಿ ಗೋ. ಆದರೆ ಗುರು ಶಿಷ್ಯರ ಗೆಲುವು ಸೃಷ್ಟಿಸಿದ ಹೊಸ ಹೆಜ್ಜೆಯಲ್ಲಿ ಕಥೆಗಳ ಹುಡುಕಾಟ ಶುರುವಾಗಿರೋದು ವಿಶೇಷ.

  ಜಡೇಶ್ ಕುಮಾರ್ ಹಂಪಿ ಖೋಖೋ ಎಂಬ ಹಳ್ಳಿ ಆಟವನ್ನು ಗುರು ಶಿಷ್ಯರು ಚಿತ್ರದಲ್ಲಿ ಎಲ್ಲ ಕಾಮಿಡಿ, ಮನರಂಜನೆ, ಪ್ರೀತಿಯೊಂದಿಗೆ ಬೆರೆಸಿ ರುಚಿಕಟ್ಟಾದ ಅಡುಗೆ ಮಾಡಿ ಉಣಬಡಿಸಿದ್ದರು. ಶರಣ್-ನಿಶ್ವಿಕಾ, 12 ಹುಡುಗರ ಅದ್ಭುತ ಆಟ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಈಗಲೂ ಚಿತ್ರಮಂದಿರಗಳಲ್ಲಿ ಬೊಂಬಾಟ್ ಕಲೆಕ್ಷನ್ ಮಾಡುತ್ತಿದೆ. ಅತ್ತ ಕಾಂತಾರ ಕೂಡಾ ಕರಾವಳಿ ಕಡೆಯ ಅಪ್ಪಟ ನಂಬಿಕೆ ಆಚರಣೆಗಳ ಕುರಿತು ಬೆಳಕು ಚೆಲ್ಲಿರುವ ಚಿತ್ರ.

  ಈ ಎರಡೂ ಚಿತ್ರಗಳ ಗೆಲುವು ಕನ್ನಡ ಚಿತ್ರರಂಗದವರನ್ನು ಹೊಸ ಹುಡುಕಾಟಕ್ಕೆ ಪ್ರೇರೇಪಿಸಿವೆ. ಎರಡೂ ಕೂಡಾ ದೇಸಿ ಕಥೆಗಳದ್ದು. ಇಲ್ಲಿನ ಮಣ್ಣಿನ ಕಥೆಗಳು. ಇವುಗಳಿಗೆ ಸ್ಥಳೀಯ ಜನಪದಗಳನ್ನು ಕೂಡಾ ಹೊಂದಿಸಿ ಜೋಡಿಸಲಾಗಿದೆ. ಇದು ಹೊಸ ಕ್ರಾಂತಿಗೆ ನಂದಿ ಹಾಡಿದ್ದು ಇಂತಹ ಹಳ್ಳಿ ಸೊಗಡಿನ ಕಥೆಗಳ ಹುಡುಕಾಟ ಈಗ ಶುರುವಾಗಿದೆ. ಬರಲಿ.. ಅಂತಹ ಎಲ್ಲ ಕಥೆಗಳೂ ಸಿನಿಮಾಗಳಾಗಿ ಕನ್ನಡದ ಸಂಸೃತಿ ವಿಜೃಂಭಿಸಲಿ.

 • ಗುರುವನ್ನೂ ಮೀರಿಸಿದ ಶಿಷ್ಯರು

  ಗುರುವನ್ನೂ ಮೀರಿಸಿದ ಶಿಷ್ಯರು

  ಶಾಲಾ ಪಠ್ಯ ವಿವಾದ ಯಾರನ್ನೂ ಬಿಡುತ್ತಿಲ್ಲ. ಜಾತಿ, ಮತ, ಧರ್ಮ, ಪಂಥ.. ಎಲ್ಲವನ್ನೂ ಮೀರಿದ್ದ ನಟ ಡಾ.ರಾಜ್ ಕುಮಾರ್ ಅವರಿಗೂ ಇದರ ಬಿಸಿ ತಟ್ಟಿದೆ. ಪ್ರಸಕ್ತ ವರ್ಷದ ಪಠ್ಯ ಪುಸ್ತಕ ಪರಿಷ್ಕೃತ ಕ್ರಮದಲ್ಲಿ ೭ ಸಾಹಿತಿಗಳ ಕೃತಿಯನ್ನು ವಾಪಸ್ ಪಡೆಯುವಂತೆ ಸರ್ಕಾರ ಸೂಚಿಸಿದೆ. ಅದರಲ್ಲಿ ಡಾ.ರಾಜ್ ಕುಮಾರ್ ಪಠ್ಯವೂ ಸೇರಿರುವುದು ವಿಶೇಷ.

  ದೇವನೂರು ಮಹಾದೇವ ಅವರ ಎದೆಗೆ ಬಿದ್ದ ಅಕ್ಷರ, ಡಾ.ಜಿ.ರಾಮಕೃಷ್ಣ ಅವರ ಭಗತ್ ಸಿಂಗ್, ರೂಪಾ ಹಾಸನ ಅವರ ಅಮ್ಮನಾಗುವುದೆಂದರೆ, ಈರಪ್ಪ ಎಂ.ಕAಬಳಿ ಅವರ ಹೀಗೊಂದು ಟಾಪ್ ಪ್ರಯಾಣ, ಸತೀಶ್ ಕುಲಕರ್ಣಿ ಅವರ ಕಟ್ಟತೇವು ನಾವು, ಸುಕನ್ಯಾ ಮಾರುತಿ ಅವರ ಏಣಿ ಹಾಗೂ ಎಂ.ರುಕ್ಕೋಜಿ ರಾವ್ ಅವರು ಬರೆದಿದ್ದ ಡಾ.ರಾಜ್ ಕುಮಾರ್ ಗದ್ಯವನ್ನು ವಾಪಸ್ ಪಡೆಯಲಾಗಿದೆ.

  ೬ನೇ ತರಗತಿ ಪ್ರಥಮ ಭಾಷೆ ಕನ್ನಡದಲ್ಲಿ ಡಾ.ರಾಜಕುಮಾರ್ ಅವರ ಗದ್ಯವನ್ನು ಸೇರಿಸಲಾಗಿತ್ತು. ರಾಜ್ಯ ಬಿಜೆಪಿ ಸರ್ಕಾರ ಪಠ್ಯ ಪುಸ್ತಕಗಳನ್ನು ಕೋಮುವಾದೀಕರಣ ಮಾಡುತ್ತಿದೆ ಎಂದು ಆರೋಪಿಸಿ ಹಲವು ಸಾಹಿತಿಗಳು ಪಠ್ಯವನ್ನು ವಾಪಸ್ ಪಡೆದಿದ್ದರು. ಅವರಲ್ಲಿ ರುಕ್ಕೋಜಿ ರಾವ್ ಕೂಡಾ ಸೇರಿದ್ದು, ಇದರಿಂದಾಗಿ ಡಾ.ರಾಜ ಕುಮಾರ್ ಪಠ್ಯವನ್ನು ಕೈಬಿಡಬೇಕಾದ ಪರಿಸ್ಥಿತಿ ಬಂದಿದೆ.

  ಸಾಮಾನ್ಯವಾಗಿ ಮೊದಲು ಅನುಮತಿ ನೀಡಲಾಗಿರುತ್ತದೆ. ಏಕೆಂದರೆ ಅನುಮತಿಯಿಲ್ಲದೆ ಪಠ್ಯ ಪುಸ್ತಕ ಮುದ್ರಿಸಲು ಬರುವುದಿಲ್ಲ. ಆದರೆ ವಿವಾದದ ಹಿನ್ನೆಲೆಯಲ್ಲಿ ಪುಸ್ತಕ ಮುದ್ರಣವಾದ ನಂತರ ಅನುಮತಿ ವಾಪಸ್ ಪಡೆದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೀಗಾಗಿ ಈ ಶೈಕ್ಷಣಿಕ ವರ್ಷದ ಪಠ್ಯ ಪರೀಕ್ಷೆಯಲ್ಲಿ ಈ ಕೃತಿಗಳಿಗೆ ಸಂಬAಧಿಸಿದ ಪ್ರಶ್ನೆಗಳೂ ಇರುವುದಿಲ್ಲ. ಶಿಕ್ಷಕರು ಪಾಠವನ್ನೂ ಮಾಡುವುದಿಲ್ಲ. ಮುಂದಿನ ವರ್ಷದಿಂದ ಪಠ್ಯ ಪುಸ್ತಕದಲ್ಲಿ ಮುದ್ರಣವೂ ಆಗುವುದಿಲ್ಲ.

 • ದೇಖೋ ದೇಖೋ ಖೋಖೋ ಖೋಖೋ : ಗುರುಶಿಷ್ಯರು ಗೆದ್ದ ಸಂಭ್ರಮದಲ್ಲಿ..

  ದೇಖೋ ದೇಖೋ ಖೋಖೋ ಖೋಖೋ : ಗುರುಶಿಷ್ಯರು ಗೆದ್ದ ಸಂಭ್ರಮದಲ್ಲಿ..

  ಗುರು ಶಿಷ್ಯರು ಸಿನಿಮಾ ಕ್ರೇಜ್ ಜೋರಾಗಿಯೇ ಇದೆ. ಕನ್ನಡಿಗರಿಗೆ ಅಪರೂಪದ ಕ್ರೀಡಾ ಸಿನಿಮಾ ಸಿಕ್ಕಿದೆ. ಅದೂ ನಮ್ಮದೇ ನೆಲದ ಖೋಖೋ. ಅದನ್ನು ಚೆಂದದ ಕಥೆ, ಚಿತ್ರಕಥೆಯೊಂದಿಗೆ.. ಅದ್ಭುತ ಮೇಕಿಂಗ್ ಜೊತೆ.. ಹೇಳಿರೋದು ಜಡೇಶ್ ಕುಮಾರ್ ಹಂಪಿ.

  ನಾನು, ನಿಶ್ವಿಕಾ, ತರುಣ್ ಅಲ್ಲ. ಚಿತ್ರದ ಹೀರೋಗಳು ನಮ್ಮ ಹುಡುಗರು. 12 ಹುಡುಗರ ಶ್ರಮಕ್ಕೆ ಫಲ ಸಿಕ್ಕಿದೆ ಎಂದಿದ್ದಾರೆ ಶರಣ್. ಚಿತ್ರದ ನಿರ್ದೇಶಕ ಜಡೇಶ್ ಅವರನ್ನು ಸ್ಪೆಷಲ್ಲಾಗಿಯೇ ಹೊಗಳಿದ್ದಾರೆ.

  ಥಿಯೇಟರಿಗೆ ರಿಯಾಕ್ಷನ್ ನೋಡೋಕೆ ಬಂದ ಶರಣ್, ನಿಶ್ವಿಕಾಗೆ ಅಭಿಮಾನಿಗಳು ಸೇಮ್ ಶಿಷ್ಯರು ಗುರುಗಳ ಕಾಲೆಳೆಯುವಂತೆಯೇ ಕಾಲೆಳೆದದ್ದು ವಿಶೇಷವಾಗಿತ್ತು. ಶರಣ್ ಕಕ್ಕಾಬಿಕ್ಕಿಯಾಗಿ.. ಒಳಗೊಳಗೇ ಖುಷಿಯಾಗಿದ್ದರು.

  ಇದು ಕನ್ನಡಕ್ಕೆ ಮತ್ತು ಖೋಖೋಗೆ ಸಿಕ್ಕ ಗೆಲುವು ಎನ್ನುವುದು ಜಡೇಶ್ ಕುಮಾರ್ ಮಾತು. ಕನ್ನಡದಲ್ಲಿ ಇದು ಹೊಸ ಟ್ರೆಂಡ್ ಸೃಷ್ಟಿಸುತ್ತೆ ಎಂಬ ಮಾತೇ ಥ್ರಿಲ್ ಕೊಟ್ಟಿದೆ ಎಂದಿದ್ದಾರೆ.

 • ಯಾರ್ ಯಾರು ಏನೇನು? ಇವರೇ ಗುರು ಶಿಷ್ಯರು

  ಯಾರ್ ಯಾರು ಏನೇನು? ಇವರೇ ಗುರು ಶಿಷ್ಯರು

  ಗುರು ಶಿಷ್ಯರು ಚಿತ್ರತಂಡ ವಿಭಿನ್ನವಾಗಿ ಪ್ಲಾನ್ ಮಾಡಿ ಇಡೀ ಚಿತ್ರತಂಡವನ್ನು ಸ್ಪೆಷಲ್ ಆಗಿ ಪರಿಚಯ ಮಾಡಿಕೊಟ್ಟಿದೆ.

  ಬಸವ : ಹರ್ಷಿತ್ ನವೀನ್ ಕೃಷ್ಣ

  ಚೆನ್ನಿಗರಾಯ : ಆಸಿಫ್ ಮುಲ್ಲಾ

  ಜೋಸೆಫ್ : ಸೂರ್ಯ ರವಿಶಂಕರ್

  ಬಾಷ : ರಕ್ಷಕ್ ಬುಲೆಟ್

  ಓಬಳೇಶ : ಸಾಂಬ ಶಿವ

  ನಟೇಶ-ಗಿರೀಶ : ಸಂದೇಶ್-ಸಾಗರ್

  ಕಾಡಸಿದ್ಧ : ರುದ್ರಗೌಡ

  ಟೈರ್ : ಅನೂಪ್ ರಮಣ

  ಕಿರಣ್ : ಅಮಿತ್ ಬಿ

  ಕಾರ್ತಿಕ್ : ಹೃದಯ್ ಶರಣ್

  ಸೀನ : ಏಕಾಂತ್ ಪ್ರೇಮ್

  ವೀರಣ್ಣ : ಮಣಿಕಂಠ ನಾಯಕ್

  ಇವರೆಲ್ಲರ ಗುರು ಶರಣ್. ಇದು 1995ರಲ್ಲಿ ನಡೆಯೋ ಕಥೆ. ಶರಣ್ ಎದುರು ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸಿದ್ದಾರೆ. ಜಂಟಲ್‍ಮನ್ ಖ್ಯಾತಿಯ ಜಡೇಶ್ ಹಂಪಿ ನಿರ್ದೇಶನವಿದೆ.

 • ಶಿಷ್ಯರಿಂದ ಗುರುಗಳಿಗಾಗಿ.. ಕನ್ನಡಿಗರಿಂದ ಕನ್ನಡಕ್ಕಾಗಿ.. ಗುರು ನಮನ ಗೀತೆ..

  ಶಿಷ್ಯರಿಂದ ಗುರುಗಳಿಗಾಗಿ.. ಕನ್ನಡಿಗರಿಂದ ಕನ್ನಡಕ್ಕಾಗಿ.. ಗುರು ನಮನ ಗೀತೆ..

  ಬಳಪ ಹಿಡಿದ ಭಗವಂತಾ..

  ಇರುತಾನೆ ನಮ ಸುತ್ತ..

  ನಮ್ಮೆಲ್ಲರ ಹಣ ಬರಹ ತಿದ್ದೀ ಬರೆಯಲು..

  ಗುರುಗಳು ನಮ್ಮ ಗುರುಗಳು..

   

  ಆಹಾ.. ಇದು ಶಿಷ್ಯರು ಗುರುಗಳಿಗಾಗಿ.. ಪ್ರೀತಿಯಿಂದ ಭಕ್ತಿಯಿಂದ ಬರೆದಿರೋ ಗೀತೆ.. ಆ ಗೀತೆಯನ್ನು ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ ಎಂಬಂತೆ ಹಾಡಿದ್ದಾರೆ ವಿಜಯ ಪ್ರಕಾಶ್. ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರವೇ ನಮಃ ಎಂಬಂತೆ ಅಕ್ಷರ ತಿದ್ದಿದ್ದಾರೆ ಡಾ.ವಿ. ನಾಗೇಂದ್ರ ಪ್ರಸಾದ್. ಗುರು ಶಿಷ್ಯರು ಚಿತ್ರದ ಹೊಸ ಹಾಡಿನ ಲಿರಿಕಲ್ ಗೀತೆ ಕೇಳಿದವರು ಗುರುಗಳನ್ನು ನೆನಪಿಸಿಕೊಳ್ಳೋದು ಖಂಡಿತಾ.

  ಹಾಡಿನ ಲಿರಿಕಲ್ ವಿಡಿಯೋ ನೋಡಿ.. ಹಾಡು ಕೇಳಿ ಹಲವು ಗುರುಗಳು ಭಾವುಕರಾಗಿ ಮಾತನ್ನಾಡಿದ್ದಾರೆ. ಅದನ್ನೂ ಲಿರಿಕಲ್ ವಿಡಿಯೋನಲ್ಲಿ ತೋರಿಸಲಾಗಿದೆ. ಕ್ರಿಯೇಟಿವ್ ಡೈರೆಕ್ಟರ್ ತರುಣ್ ಸುಧೀರ್ ಮತ್ತು ಡೈರೆಕ್ಟರ್ ಜಡೇಶ್ ಕೆ.ಹಂಪಿ ಪರಿಕಲ್ಪನೆಯ ಹಾಡಿದು. ಶರಣ್, ನಿಶ್ವಿಕಾ ನಾಯ್ಡು, ದತ್ತಣ್ಣ ಪ್ರಧಾನ ಪಾತ್ರದಲ್ಲಿರೋ ಚಿತ್ರದಲ್ಲಿ ಗುರು ಶಿಷ್ಯರ ಕಥೆಯೇ ಇದೆ.