` akshith sashikumar, - chitraloka.com | Kannada Movie News, Reviews | Image

akshith sashikumar,

 • ಶಶಿಕುಮಾರ್ ಪುತ್ರನ 3ನೇ ಸಿನಿಮಾ

  ಶಶಿಕುಮಾರ್ ಪುತ್ರನ 3ನೇ ಸಿನಿಮಾ

  ಸುಪ್ರೀಂ ಹೀರೋ ಶಶಿಕುಮಾರ್ ಅವರ ಪುತ್ರ ಅಕ್ಷಿತ್, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರಾದರೂ ಅವರ ಯಾವುದೇ ಸಿನಿಮಾ ಇನ್ನೂ ರಿಲೀಸ್ ಆಗಿಲ್ಲ. ಮೊದಲ ಚಿತ್ರ ಸೀತಾಯಣ ರಿಲೀಸ್ ಆಗೋಕೆ ರೆಡಿಯಾಗಿದೆ. 2ನೇ ಸಿನಿಮಾ ಸಮಿತ್ ತೆಲುಗಿನಲ್ಲಿ. ಮೊದಲ ಚಿತ್ರ ರಿಲೀಸ್ ಆಗುವ ಮೊದಲೇ ಅಕ್ಷಿತ್`ಗೆ ಫುಲ್ ಡಿಮ್ಯಾಂಡ್. ಅವರೀಗ 3ನೇ ಸಿನಿಮಾ ಮಾಡುತ್ತಿದ್ದಾರೆ. ಟೈಟಲ್ ಓ ಮೈ ಲವ್.

  ಓ ಮೈ ಲವ್ ಪ್ಯೂರ್ ಲವ್ ಸ್ಟೋರಿ. ಅಕ್ಷಿತ್ ಎದುರು ಕೀರ್ತಿ ಕಲಕೇರಿ ನಾಯಕಿ. ಈಗಾಗಲೇ ಫೋಟೋಶೂಟ್ ಆಗಿದ್ದು, ಸ್ಟಿಲ್‍ಗಳು ಸಖತ್ ಗ್ಲಾಮರಸ್ ಆಗಿವೆ. ಜೆಸಿಬಿ ರಾಮಾಂಜನಿ ಚಿತ್ರದ ನಿರ್ಮಾಪಕ ಮತ್ತು ಕಥೆಗಾರ. ಸ್ಟೈಲ್ ಶ್ರೀನು ಚಿತ್ರದ ನಿರ್ದೇಶಕ.

 • ಶಶಿಕುಮಾರ್ ಪುತ್ರನ ಚಿತ್ರಕ್ಕೆ ಶಹಬ್ಬಾಸ್ ಎಂದ ದಿಗ್ಗಜ ನಿರ್ದೇಶಕ

  ಶಶಿಕುಮಾರ್ ಪುತ್ರನ ಚಿತ್ರಕ್ಕೆ ಶಹಬ್ಬಾಸ್ ಎಂದ ದಿಗ್ಗಜ ನಿರ್ದೇಶಕ

  ಶಶಿಕುಮಾರ್ ಪುತ್ರ ಅಕ್ಷಿತ್ ನಟಿಸಿರುವ ಸಿನಿಮಾ ಓ ಮೈ ಲವ್. ಇದು ಅವರ 2ನೇ ಸಿನಿಮಾ. ಸ್ಮೈಲ್ ಶ್ರೀನು ನಿರ್ದೇಶನದ ಈ ಚಿತ್ರದಲ್ಲಿರೋದು ಯೂಥ್‍ಫುಲ್ ಲವ್ ಸ್ಟೋರಿ. ಅಕ್ಷಿತ್ ಶಶಿಕುಮಾರ್ ಎದುರು ಕೀರ್ತಿ ಕಲ್ಕೆರೆ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದ ಶೂಟಿಂಗ್ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಹೀಗಿರುವಾಗಲೇ ಚಿತ್ರತಂಡಕ್ಕೆ ಭಾರತೀಯ ಚಿತ್ರರಂಗದ ದಿಗ್ಗಜ ನಿರ್ದೇಶಕ ರಾಘವೇಂದ್ರ ರಾವ್ ಅವರ ಮೆಚ್ಚುಗೆ ಸಿಕ್ಕಿದೆ.

  100ಕ್ಕೂ ಹೆಚ್ಚು ಚಿತ್ರಗಳಿಗೆ ನಿರ್ದೇಶನ ಮಾಡಿರುವ ರಾಘವೇಂದ್ರ ರಾವ್, ರಾಜಮೌಳಿ ಸೇರಿದಂತೆ ಹಲವರಿಗೆ ಗುರುವೂ ಹೌದು. ಅಂತಹ ರಾಘವೇಂದ್ರ ರಾವ್ ಓ ಮೈ ಲವ್ ಚಿತ್ರದ ದೃಶ್ಯಗಳನ್ನು ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಇತ್ತೀಚೆಗೆ ಕನ್ನಡ ಚಿತ್ರಗಳ ಗುಣಮಟ್ಟ ದೊಡ್ಡ ಮಟ್ಟದಲ್ಲಿದೆ. ಎಲ್ಲ ಚಿತ್ರಗಳೂ ಹೀಗೇ ಬರಬೇಕು. ಸಾಧ್ಯವಾದರೆ ಈ ಚಿತ್ರವನ್ನು ತೆಲುಗಿಗೆ ಡಬ್ ಮಾಡಿ ರಿಲೀಸ್ ಮಾಡಿ ಎಂದು ನಿರ್ದೇಶಕರಿಗೆ ಹೇಳಿದ್ದಾರೆ.

  ನಿರ್ಮಾಪಕ ಜಿ.ರಾಮಾಂಜಿನಿ ಅವರೇ ಚಿತ್ರಕ್ಕೆ ಕಥೆ ಬರೆದಿದ್ದಾರೆ. ರಾಘವೇಂದ್ರ ರಾವ್ ಮೆಚ್ಚಿದ ಮೇಲೆ ಸ್ಮೈಲ್ ಶ್ರೀನಿ ಫುಲ್ ಝೂಮ್‍ನಲ್ಲಿದ್ದಾರೆ.