` parul yadav, - chitraloka.com | Kannada Movie News, Reviews | Image

parul yadav,

  • ನಿರ್ದೇಶಕರ ಅನುಭವವೇ ಸಿನಿಮಾ ಸೀಜರ್

    ravichandra, chiru sarja, parul yadav in seizer

    ಅದು 2010ನೇ ಇಸವಿ. ಆಗ ವಿನಯ್ ಕೃಷ್ಣ ಅವರ ವಾಹನವನ್ನು ಸೀಜ್ ಮಾಡಲಾಗಿತ್ತು. ಆ ದಿನ ತಮ್ಮ ವಾಹವನ್ನು ಬಿಡಿಸಿಕೊಳ್ಳೋಕೆ ಪರದಾಡಿದ್ದರು ವಿನಯ್‍ಕೃಷ್ಣ. ಈ ವಿನಯ್ ಕೃಷ್ಣ ಬೇರ್ಯಾರೋ ಅಲ್ಲ, ಸೀಜರ್ ಚಿತ್ರದ ನಿರ್ದೇಶಕ.

    ಅಂದಿನ ಆ ಅನುಭವವನ್ನು ಸಿನಿಮಾ ಮಾಡಬೇಕು ಎಂದು ಆ ದಿನವೇ ನಿರ್ಧರಿಸಿದ್ದರಂತೆ ವಿನಯ್‍ಕೃಷ್ಣ. ಆಗ ಅವರು ಖ್ಯಾತ ನಿರ್ದೇಶಕರೊಬ್ಬರ ಬಳಿ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. 2010ರಲ್ಲಿ ಬಿತ್ತಿದ್ದ ಕನಸಿನ ಬೀಜ, ಹೆಮ್ಮರವಾಗಿ ಈಗ ಸಿನಿಮಾ ರೂಪದಲ್ಲಿ ನಿಂತಿದೆ.

    ಚಿತ್ರ ನಿಧಾನವಾಯಿತು ಎಂಬುದನ್ನು ಒಪ್ಪುವ ವಿನಯ್‍ಕೃಷ್ಣ, ಚಿತ್ರದ ಕ್ವಾಲಿಟಿ ನೋಡಿದಾಗ.. ಇಷ್ಟು ದಿನ ಕಾಯ್ದಿದ್ದಕ್ಕೂ ಸಾರ್ಥಕವಾಯಿತು ಎಂದೆನಿಸುತ್ತೆ ಅಂತಾರೆ. ಇಷ್ಟು ಟೈಮ್ ಕೊಟ್ಟ ನಿರ್ಮಾಪಕ ತ್ರಿವಿಕ್ರಮ್‍ಗೆ ಕೃತಜ್ಞತೆ ಹೇಳೋಕೆ ಮರೆಯೋದಿಲ್ಲ. ಸಿನಿಮಾ ಇದೇ ಶುಕ್ರವಾರ ತೆರೆಗೆ ಬರುತ್ತಿದೆ.

  • ಪಾರುಲ್ ಅದ್ದೂರಿ ಮದುವೆ

    parul's grand wedding n butterfly

    ಕೈತುಂಬಾ ಮೆಹಂದಿಯ ರಂಗು.. ಮೈತುಂಬಾ ಅಲಂಕಾರ.. ಒಡವೆ.. ನವವಧುವಿನಂತೆ ಕಂಗೊಳಿಸಿದ್ದಾರೆ ಪಾರುಲ್ ಯಾದವ್..ಅವರ ಮದುವೆಯಲ್ಲಿ. ಇಲ್ಲಿ ಮದುಮಗಳಾಗಿರೋದು ಪಾರುಲ್ ಯಾದವ್ ಅಲಿಯಾಸ್ ಪಾರ್ವತಿ.

    ಪಾರುಲ್ ಯಾವಾಗ ಪಾರ್ವತಿಯಾದರು ಎಂದು ತಲೆಗೆ ಹುಳು ಬಿಟ್ಟುಕೊಳ್ಳಬೇಡಿ. ಬಟರ್‍ಫ್ಲೈ ಚಿತ್ರದಲ್ಲಿ ಪಾರುಲ್  ಪಾತ್ರದ ಹೆಸರು ಪಾರ್ವತಿ. ನಮ್ಮ ಮನೆಲೊಂದು ಬಾಳ ದೊಡ್ಡ ಕಾರ್ಯಕ್ರಮ ಅನ್ನೋ ಹಾಡಿನ ಮೂಲವೇ ಮದುವೆ. ಬಟರ್‍ಫ್ಲೈ ಚಿತ್ರಕ್ಕಾಗಿ.

    ಯೋಗರಾಜ್ ಭಟ್ಟರ ಹಾಡಿಗೆ ಬಾಲಿವುಡ್ ಕೊರಿಯೋಗ್ರಾಫರ್ ಸೀಜರ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಚಿತ್ರದಲ್ಲೊಂದು ಹಳೆಯ ಸಿನಿಮಾ ಹಾಡುಗಳ ರೀಮಿಕ್ಸ್ ಹಾಡು ಕೂಡಾ ಇದೆಯಂತೆ. ಚಿತ್ರದ ನಿರ್ದೇಶಕ ರಮೇಶ್ ಅರವಿಂದ್. ಚಿತ್ರದ ನಿರ್ಮಾಪಕಿಯರಲ್ಲಿ ಪಾರುಲ್ ಕೂಡಾ ಒಬ್ಬರು.

  • ಪಾರುಲ್ ಮಿಸ್ಸಿಂಗ್.. ನಾಟ್ ರೀಚಬಲ್ - ಸೀಜರ್ ಟೀಂ

    seizer director prpducer upset on heroine parul

    ಬಿಡುಗಡೆಯ ಹೊಸ್ತಿಲಲ್ಲಿ ನಿಂತಿರುವ ಚಿತ್ರ ಸೀಜರ್. ಆದರೆ, ಚಿತ್ರದ ಪ್ರಚಾರಕ್ಕೆ ಚಿತ್ರದ ಕಲಾವಿದರೇ ಸಹಕರಿಸುತ್ತಿಲ್ಲವಾ..? ಸೀಜರ್ ಚಿತ್ರದ ನಿರ್ಮಾಪಕ, ನಿರ್ದೇಶಕರ ಮಾತು ಕೇಳಿದರೆ ಹಾಗನ್ನಿಸೋದು ಸಹಜ.

    ಚಿತ್ರದ ನಾಯಕಿ ಪಾರುಲ್ ಯಾದವ್. ಆದರೆ, ನಿರ್ಮಾಪಕರಿಗೆ, ನಿರ್ದೇಶಕರಿಗೆ ಸಿಗುತ್ತಿಲ್ಲ. ಫೋನ್ ಸ್ವಿಚ್‍ಆಫ್. ಅವರು ಉಳಿದುಕೊಂಡಿರುವ ಹೋಟೆಲ್‍ಗೆ ಹೋಗಿ ಗಂಟೆಗಟ್ಟಲೆ ಕಾದರೂ ಸಿಕ್ಕಲ್ಲ. ತಾವು ನಟಿಸಿರುವ ಸಿನಿಮಾ ಬಗ್ಗೆ ಒಂದೇ ಒಂದು ಮಾತೂ ಆಡಲ್ಲ. ನಾವು ಪಾರುಲ್ ಅವರಿಗೆ ಯಾವುದೇ ಸಂಭಾವನೆ ಬಾಕಿ ಉಳಿಸಿಕೊಂಡಿಲ್ಲ ಎನ್ನುತ್ತಾರೆ ಚಿತ್ರದ ನಿರ್ದೇಶಕ ವಿನಯ್ ಕೃಷ್ಣ.

    ನಿರ್ಮಾಪಕ ತ್ರಿವಿಕ್ರಮ್ ಅವರದ್ದೂ ಇದೇ ಆರೋಪ. ಚಿತ್ರ 4 ವರ್ಷಗಳ ಹಿಂದೆ ಶುರುವಾಯ್ತು. ಆರಂಭದಲ್ಲಿ ಕನ್ನಡದಲ್ಲಷ್ಟೇ ಎಂದುಕೊಂಡಿದ್ದೆವು, ನಂತರ 4 ಭಾಷೆಯಲ್ಲೂ ನಿರ್ಮಿಸಿದೆವು. 15 ಕೋಟಿ ವೆಚ್ಚದ ಸಿನಿಮಾ. ಬಿಡುಗಡೆ ವಿಳಂಬವಾಗಿದ್ದಕ್ಕೆ ಬೇರೆ ಬೇರೆ ಕಾರಣಗಳಿವೆ. ಕಲಾವಿದರು ನಿರ್ಮಾಪಕರಿಗೆ ಈ ರೀತಿ ಅವಮಾನ ಮಾಡಬಾರದು ಎಂದು ಆಕ್ರೋಶ ಹೊರಹಾಕಿದ್ದಾರೆ ತ್ರಿವಿಕ್ರಮ್.

    ಚಿತ್ರತಂಡದ ಮುನಿಸು, ಆಕ್ರೋಶವೇನೇ ಇರಲಿ, ಸೀಜರ್ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಉಳಿದದ್ದು ಪ್ರೇಕ್ಷಕರಿಗೆ ಬಿಟ್ಟಿದ್ದು.

  • ಪಾರುಲ್‍ಗೆ ಓಲಾ ಕ್ಯಾಬ್ ಚಾಲಕನ ವಂಚನೆ

    parul yadav recovers valubles lost in cabs

    ಓಲಾ ಕ್ಯಾಬ್‍ನಲ್ಲಿ ಪ್ರಯಾಣಿಸಿದ ಹಲವರಿಗೆ ಕ್ಯಾಬ್ ಚಾಲಕರ ದುರ್ವರ್ತನೆಗಳು ಅನುಭವಕ್ಕೆ ಬಂದಿರುವುದು ಹೌದು. ಅಂಥಾದ್ದೊಂದು ಭಯಾನಕ ಅನುಭವ ಪಾರುಲ್ ಅವರಿಗೂ ಆಗಿದೆ. ಇತ್ತೀಚೆಗೆ ಪಾರುಲ್ ಏರ್‍ಪೋರ್ಟ್‍ನಿಂದ ಮನೆಗೆ ಓಲಾ ಕ್ಯಾಬ್‍ನಲ್ಲಿ ಹೋಗಿದ್ದರು. ಆಗ ಅವರಿಗೆ ಓಲಾ ಕ್ಯಾಬ್‍ನಲ್ಲಿ ತಮ್ಮ ಎರಡು ವಾಚ್‍ಗಳು ಮಿಸ್ ಆಗಿವೆ ಎಂದು ಗೊತ್ತಾಗಿದೆ.

    ಆದರೆ, ಮನೆಯಲ್ಲಿ ವಸ್ತುಗಳನ್ನು ಶಿಫ್ಟ್ ಮಾಡಿದಾಗ ವಾಚ್‍ಗಳು ಮಿಸ್ಸಾಗಿರುವುದು ಗಮನಕ್ಕೆ ಬಂದಿದೆ. ಓಲಾ ಕ್ಯಾಬ್ ಚಾಲಕ, ತನಗೇನೂ ಗೊತ್ತೇ ಇಲ್ಲ ಎಂದು ಜಾರಿಕೊಂಡಿದ್ದಾನೆ. ಕೊನೆಗೆ ಪಾರುಲ್ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಪೊಲೀಸರು, ಅದೇ ಕ್ಯಾಬ್ ಚಾಲಕನಿಂದ ಆ ಎರಡೂ ವಾಚ್‍ಗಳನ್ನು ವಾಪಸ್ ಕೊಡಿಸಿದ್ದಾರೆ.

    ದುಬಾರಿ ಬೆಲೆಯ ವಾಚ್‍ಗಳನ್ನು ಇಟ್ಟುಕೊಂಡಿದ್ದ ಆ ಕ್ಯಾಬ್ ಚಾಲಕನಿಗೆ ಕ್ರೈಂ ಹಿನ್ನೆಲೆಯೂ ಇದೆಯಂತೆ. ಇಷ್ಟಿದ್ದರೂ, ಓಲಾದವರಿಗೆ ಇದನ್ನು ಗಮನಕ್ಕೆ ತಂದಿದ್ದರೂ, ಓಲಾ ಸಂಸ್ಥೆಯ ಯಾರೊಬ್ಬರೂ ಸೌಜನ್ಯಕ್ಕಾಗಿಯೂ ಕೂಡಾ ಪಾರುಲ್ ಅವರ ಜೊತೆ ಮಾತನಾಡಿಲ್ಲ. 

    Related Articles :-

    Parul Yadva Recovers Valuables lost In Cab

  • ಪಾರೂಲ್ ಕನ್ನಡ ಕಲಿತ ಹಿಂದಿನ ಕಾರಣ ಗೊತ್ತೇ..?

    parul yadav turns kannadathi

    ಪಾರೂಲ್ ಯಾದವ್ ಅಂದ್ರೆ ತಕ್ಷಣ ನೆನಪಾಗೋದು ಪ್ಯಾರ್‍ಗೆ ಆಗ್‍ಬುಟ್ಟೈತೆ ಹಾಡು. ಈ ಪ್ಯಾರ್‍ಗೇ ಹುಡುಗಿ ಕನ್ನಡದವರೇನಲ್ಲ. ಅಪ್ಪಟ ಗುಜರಾತಿ. ಆದರೆ, ವಾಸ ಇರುವುದು ಮುಂಬೈನಲ್ಲಿ. ತಮಿಳು, ತೆಲುಗು, ಮಲಯಾಳಂನಲ್ಲಿ ನಟಿಸಿದ್ದರೂ, ಕನ್ನಡದಲ್ಲಿಯೇ ಜನಪ್ರಿಯ ನಾಯಕಿ. ಈಗ ಬೆಂಗಳೂರಿಗೇ ಶಿಫ್ಟ್ ಆಗಿರುವ ಪಾರೂಲ್, ಕನ್ನಡತಿಯೂ ಆಗಿ ಬಿಟ್ಟಿದ್ದಾರೆ.

    ನಿಮಗೆಲ್ಲ ಗೊತ್ತಿರೋ ಹಾಗೆ, ಪಾರೂಲ್ ಈಗ ನಟಿಯಷ್ಟೇ ಅಲ್ಲ. ನಿರ್ಮಾಪಕಿಯೂ ಹೌದು. ಬಟರ್ ಫ್ಲೈ ಚಿತ್ರದ ನಿರ್ಮಾಪಕರಲ್ಲಿ ಪಾರೂಲ್ ಕೂಡಾ ಒಬ್ಬರು. ಅದು ಕ್ವೀನ್ ಚಿತ್ರದ ರೀಮೇಕ್. ನಿರ್ದೇಶಕ ರಮೇಶ್ ಅರವಿಂದ್. ಈಗ ಕನ್ನಡದ ವಿಷಯಕ್ಕೆ ಬರೋಣ.

    ಚಿತ್ರದ ಸ್ಕ್ರಿಪ್ಟ್ ವರ್ಕ್ ಎಲ್ಲ ಮುಗಿಯುವ ಹಂತದಲ್ಲಿದ್ದಾಗ, ರಮೇಶ್ ಅರವಿಂದ್ ಚಿತ್ರತಂಡಕ್ಕೊಂದು ವರ್ಕ್‍ಶಾಪ್ ಇಟ್ಟುಕೊಂಡಿದ್ದಾರೆ. ಆಗ ಪಾರೂಲ್‍ಗೆ ರಮೇಶ್, ನಿಮಗೆ ಕನ್ನಡ ಓದೋಕೆ ಬರುತ್ತಾ ಎಂದು ಕೇಳಿದರಂತೆ. ಪಾರೂಲ್ ಇಲ್ಲ ಎಂದು ಹೇಳಿದ್ದೇ ತಡ, ರಮೇಶ್ ಮುಖಭಾವವೇ ಬದಲಾಗಿ ಹೋಯ್ತಂತೆ. ರಮೇಶ್ ಕಣ್ಣಿನಲ್ಲಿ ಮೂಡಿದ ಆ ಬೇಸರವನ್ನು ತಕ್ಷಣ ಆರ್ಥ ಮಾಡಿಕೊಂಡ ಪಾರೂಲ್, ನಂತರ ರಮೇಶ್‍ಗೂ ಹೇಳದೆ ಮಾಡಿದ ಮೊದಲ ಕೆಲಸ ಕನ್ನಡ ಟೀಚರ್‍ನ್ನು ನೇಮಕ ಮಾಡಿಕೊಂಡಿದ್ದು.

    ಅದಾದ ನಂತರ ಶೂಟಿಂಗ್ ಶುರುವಾಗುವ ವೇಳೆಗೆ ನನಗೆ ಕನ್ನಡ ಪ್ರಾಂಪ್ಟ್ ಮಾಡೋಕೆ ಬರುತ್ತೆ ಎಂದಾಗ, ರಮೇಶ್ ಕಣ್ಣಿನಲ್ಲಿ ನಗು ಕಾಣಿಸಿತಂತೆ.

    ಬಟರ್ ಫ್ಲೈ ಚಿತ್ರದ ಕನ್ನಡದ ನೆನಪು ಹೇಳಿಕೊಂಡಿರುವ ಪಾರೂಲ್, ಈಗ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ. ಚಿತ್ರ ಮೇ ತಿಂಗಳಲ್ಲಿ ತೆರೆ ಕಾಣುವ ಸಾಧ್ಯತೆ ಇದೆ.

  • ಪಾರೂಲ್ ಪದೇ ಪದೇ ಅತ್ತಿದ್ರಂತೆ.. ಈ ಹಾಡು ಕೇಳಿ

    parul yadav in love wth this song

    ಪಾರೂಲ್ ಯಾದವ್ ಅಭಿನಯದ ಕ್ವೀನ್ ಚಿತ್ರದ ರೀಮೇಕ್ ಸಿನಿಮಾ ಬಟರ್ ಫ್ಲೈ ರಿಲೀಸಾಗೋಕೆ ರೆಡಿಯಾಗಿದೆ. ಬಿಡುಗಡೆಗೆ ಮುನ್ನ ಎಲ್ಲರನ್ನೂ ಆಕರ್ಷಿಸಿರುವ ಹಾಡು `ಮೆಲ್ಲ ಕೈ ಹಿಡಿದು ನೀ ತಲುಪಿಸು ಬಾ ಮನೆ ತನಕ.. ' ಎಂಬ ಗೀತೆ. ಜಯಂತ್ ಕಾಯ್ಕಿಣಿಯವರ ಸಾಹಿತ್ಯ ಹೃದಯವನ್ನು ಕಲಕುವಂತಿದೆ.

    ಇಡೀ ಸಿನಿಮಾದಲ್ಲಿ ನನಗೆ ಅತ್ಯಂತ ಹೆಚ್ಚು ಇಷ್ಟವಾದ ಗೀತೆ ಇದು. ಈ ಹಾಡಿನ ಚಿತ್ರೀಕರಣದ ವೇಳೆ ಪದೇ ಪದೇ ಕಣ್ಣೀರಿಟ್ಟಿದ್ದೇನೆ. ಈ ಹಾಡನ್ನು ಯಾರೇ ಕೇಳಿದರೂ ಭಾವುಕರಾಗುವುದು ಖಂಡಿತಾ. ನಾನಂತೂ ಪಾತ್ರದೊಳಗೆ ಬೆರೆತು ಹೋಗಿದ್ದೆ' ಎನ್ನುತ್ತಾರೆ ಪಾರುಲ್.

    ರಮೇಶ್ ಅರವಿಂದ್ ನಿರ್ದೇಶನದ ಬಟರ್ ಫ್ಲೈ ಚಿತ್ರಕ್ಕೆ ಪಾರುಲ್ ಯಾದವ್ ಸಹ ನಿರ್ಮಾಪಕಿಯೂ ಹೌದು. 

  • ಪಾರೂಲ್ ಪಾರ್ವತಿ ಮದುವೆಗೆ ರೆಡಿ. ನಾಳೇನೇ ಮದ್ವೆ..!

    parul parvathi's wedding song out

    ಪಾರುಲ್ ಯಾದವ್ ಮನೆಯಲ್ಲೀಗ ಮದುವೆ ಸಂಭ್ರಮ. ನಾಳೆಯೇ ಮದುವೆ. ಲಂಡನ್ ಹುಡುಗ. ಮದುವೆ ಆದ ಮೇಲೆ ಲಂಡನ್ ಲೈಫು. ಅರೆ.. ಇದೇನ್ ಶಾಕಿಂಗ್ ನ್ಯೂಸ್ ಅಂದ್ಕೋಬೇಡಿ. ಇದೆಲ್ಲ ರಿಯಲ್ ಲೈಫ್ ಸ್ಟೋರಿ ಅಲ್ಲ, ರೀಲ್ ಲೈಫಿನದ್ದು.

    ಬಟರ್ ಫ್ಲೈ ಚಿತ್ರದ ಸಾಂಗ್ ರಿಲೀಸ್ ಆಗಿದ್ದು, ಹಾಡಿನ ಸಾಹಿತ್ಯವೇ ಅದು. ನಾಳೆ ನಮ್ಮ ಮನೇಲೊಂದು ಬಾಳ ದೊಡ್ಡ ಕಾರ್ಯಕ್ರಮ.. ನಮ್ಮ ಹುಡ್ಗಿ ಮ್ಯಾರೇಜಿದೆ.. ಎಂದು ಶುರುವಾಗುವ ಹಾಡಿಗೆ ಸಾಹಿತ್ಯ ಬರೆದಿರೋದು ಭಟ್ಟರು. ಅಮಿತ್ ತ್ರಿವೇದಿ ಸಂಗೀತ ಸಂಯೋಜನೆಯ ಹಾಡಿದು. ಹಿಂದಿಯ ಕ್ವೀನ್ ಚಿತ್ರದ ರೀಮೇಕ್ ಇದಾಗಿದ್ದು, ರಮೇಶ್ ಅರವಿಂದ್ ನಿರ್ದೇಶಿಸಿದ್ದಾರೆ.

  • ಪ್ಯಾರಿಸ್‍ನಲ್ಲಿ ಪಾರ್ವತಿ ಪಾರುಲ್ ಹನಿಮೂನ್

    parul completes shooting in paris

    ಪ್ಯಾರ್ ಗೇ ಪಾರುಲ್ ಪಾರ್ವತಿಯಾಗಿದ್ದಾರೆ. ಚಿಟ್ಟಯಾಗಿದ್ದಾರೆ. ಬಟರ್ ಫ್ಲೈನಂತೆ ಹಾರುತ್ತಿದ್ದಾರೆ. ಹಾರಿರುವುದು ಪ್ಯಾರಿಸ್‍ನಲ್ಲಿ. ಹಾರಿಸಿರುವುದು ರಮೇಶ್ ಅರವಿಂದ್. ಇದು ಬಟರ್ ಫೈ ಚಿತ್ರದ ಶೂಟಿಂಗ್ ಕಥೆ. 45 ದಿನಗಳ ಪ್ಯಾರಿಸ್ ಶೂಟಿಂಗ್ ಮುಗಿಸಿರುವ ಪಾರುಲ್, ಚಿತ್ರದ ನಿರ್ಮಾಪಕಿಯರಲ್ಲಿ ಒಬ್ಬರು. 

    ಏಕಕಾಲದಲ್ಲಿ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಸಿದ್ಧವಾಗುತ್ತಿದೆ ಬಟರ್ ಫ್ಲೈ. ಕನ್ನಡದಲ್ಲಿ ಪಾರುಲ್ ಯಾದವ್ ಗೋಕರ್ಣದ ಪಾರ್ವತಿಯಾಗಿ ನಟಿಸಿದ್ದಾರೆ. ಸತತ 45 ದಿನ ಪ್ಯಾರಿಸ್‍ನಲ್ಲಿದ್ದ ಪಾರುಲ್‍ಗೆ ಅದೊಂದು ಹಿತಾನುಭವ. ಇಂಡಿಯಾ ಬಿಟ್ಟು, ಬೇರೆಲ್ಲೂ ಇಷ್ಟು ಸುದೀರ್ಘ ಕಾಲ ಇರಲಿಲ್ಲವಂತೆ. ಈಗಲೂ ಪ್ಯಾರಿಸ್ ಗುಂಗು ಕಾಡುತ್ತಿದೆ ಎನ್ನುವ ಪಾರುಲ್, ಚಿತ್ರಕ್ಕಾಗಿ ಒಂದೂವರೆ ವರ್ಷ ಮೀಸಲಿಟ್ಟಿದ್ದಾರೆ. ಇದು ಜಾಸ್ತಿ ಅಯ್ತಲ್ವಾ ಎಂದರೆ, ಬಾಹುಬಲಿ ಚಿತ್ರಕ್ಕಾಗಿ ಪ್ರಭಾಸ್ ಮೂರೂವರೆ ವರ್ಷ ಮೀಸಲಿಟ್ಟಿದ್ದರು. ಅದರ ಮುಂದೆ ನನ್ನದೇನು ಮಹಾ ಅಂತಾರೆ. 

    ತಮನ್ನಾ, ಕಾಜಲ್ ಮತ್ತು ಮಂಜಿಮಾ ಮೋಹನ್, ತೆಲುಗು, ತಮಿಳು, ಮಲಯಾಳಂ ಹೀರೊಯಿನ್‍ಗಳು. ಎಲ್ಲರೂ ಒಂದೇ ಸೆಟ್‍ನಲ್ಲಿದ್ದದ್ದು ವಿಶೇಷ. ಅಂದಹಾಗೆ ಇದು ಹಿಂದಿನ ಕ್ವೀನ್ ಚಿತ್ರದ ರೀಮೇಕ್. ಹನಿಮೂನ್‍ಗೆ ಬರುವ ಹಳ್ಳಿ ಹುಡುಗಿಯ ಬೆರಗುಗಳನ್ನು ಕ್ವೀನ್ ಅದ್ಭುತವಾಗಿ ಕಟ್ಟಿಕೊಟ್ಟಿತ್ತು. ಆ ಚಿತ್ರವನ್ನು ಕನ್ನಡಕ್ಕೆ ತರಬೇಕು ಎನ್ನುವುದು ನನ್ನ ಹಂಬಲ ಎಂದು ಹೇಳಿಕೊಂಡಿದ್ದಾರೆ.

    ನಾನೀನ ಕನ್ನಡತಿ. ನನ್ನನ್ನು ಪ್ರೀತಿಸಿದವರು, ಬೆಳೆಸಿದವರು ಕನ್ನಡದವರು ಎಂದು ಅಭಿಮಾನದಿಂದ ಹೇಳಿಕೊಳ್ಳುವ ಪಾರುಲ್ ಯಾದವ್, ಕನ್ನಡದ ಟೀಚರ್ ಒಬ್ಬರಿಂದ ಹೇಳಿಸಿಕೊಂಡು ಕನ್ನಡವನ್ನು ಸ್ಪಷ್ಟವಾಗಿ ಕಲಿತಿದ್ದಾರೆ. ಕನ್ನಡತಿಯೇ ಆಗಿಬಿಟ್ಟಿದ್ದಾರೆ. ಸಿನಿಮಾ ಮೇ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

  • ಬಟರ್ ಫ್ಲೈ ಚಿತ್ರಕ್ಕೆ ಅಮಿತಾಬ್ ಬಚ್ಚನ್ ವಾಯ್ಸ್

    butterfly parul gets bachchan's power

    ಪಾರೂಲ್ ಯಾದವ್ ಅಭಿನಯದ, ರಮೇಶ್ ಅರವಿಂದ್ ನಿರ್ದೇಶನದ ಸಿನಿಮಾ ಬಟರ್ ಫ್ಲೈ. ರಿಲೀಸ್‍ಗೆ ರೆಡಿಯಾಗಿರುವ ಈ ಸಿನಿಮಾಗೆ ಈಗ ಬಾಲಿವುಡ್ ಸೂಪರ್ ಸ್ಟಾರ್ ಸಪೋರ್ಟು ಸಿಕ್ಕಿದೆ.

    ಬಟರ್ ಫ್ಲೈ ಚಿತ್ರದ ಕ್ಲಬ್ ಸಾಂಗ್‍ನ್ನು ಅಮಿತಾಬ್ ಹಾಡಿದ್ದಾರೆ. ಈ ಹಾಡಿಗೆ ಸಾಹಿತ್ಯ ಬರೆದಿರುವುದು ರಂಗಭೂಮಿ ದಿಗ್ಗಜ ಮಾಸ್ಟರ್ ಹಿರಣ್ಣಯ್ಯ. ಅಮಿತಾಬ್ ಹಾಡಿರುವ ಈ ಹಾಡನ್ನು ಪ್ಯಾರಿಸ್‍ನಲ್ಲಿ ಚಿತ್ರೀಕರಿಸಲಾಗಿದೆ. 

    ಈ ಹಿಂದೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಅಮೃತಧಾರೆ ಚಿತ್ರದಲ್ಲಿ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅಮಿತಾಬ್, ಈ ಬಾರಿ ಮತ್ತೊಮ್ಮೆ ಗಾಯಕರಾಗಿ ಬಂದಿದ್ದಾರೆ.

  • ಬಟರ್ ಫ್ಲೈಗೆ ಯು/ಎ ಸರ್ಟಿಫಿಕೇಟ್

    butterfly censored

    ಪ್ಯಾರ್ ಗೇ ಹುಡುಗಿ ಪಾರೂಲ್ ಯಾದವ್ ನಟಿಸಿರುವ ಸಿನಿಮಾ ಬಟರ್ ಫ್ಲೈ. ಈ ಚಿತ್ರಕ್ಕೆ ಅವರು ನಾಯಕಿಯೂ ಹೌದು, ನಿರ್ಮಾಪಕಿಯೂ ಹೌದು. ರಮೇಶ್ ಅರವಿಂದ್ ನಿರ್ದೇಶನದ ಹಿಂದಿಯ ಕ್ವೀನ್ ಚಿತ್ರದ ರೀಮೇಕ್ ಇದು. ಏಕಕಾಲದಲ್ಲಿ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ತಯಾರಾಗಿರುವ ಸಿನಿಮಾ, ಸೆನ್ಸಾರ್ ಗೆದ್ದಿದೆ. ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ.

    ಚಿತ್ರಕ್ಕೆ ಯಾವುದೇ ಕಟ್ ಹೇಳದೆ ಸೆನ್ಸಾರ್ ಪಾಸ್ ಮಾಡಿದೆ. ಮೇ ತಿಂಗಳಲ್ಲಿ ಸಿನಿಮಾ ಏಕಕಾಲದಲ್ಲಿ ನಾಲ್ಕೂ ಭಾಷೆಗಳಲ್ಲಿ ತೆರೆ ಕಾಣಲಿದೆ. ತಮಿಳಿನಲ್ಲಿ ತಮನ್ನಾ, ತೆಲುಗಿನ ಕಾಜಲ್ ಅಗರ್‍ವಾಲ್ ಹಾಗೂ ಮಲಯಾಳಂನಲ್ಲಿ ಮಂಜಿಮ್ ಮೋಹನ್ ಬಟರ್ ಫ್ಲೈ ಆಗಿದ್ದಾರೆ

  • ಬಟರ್‍ಫ್ಲೈ.. ಬಟರ್‍ಫ್ಲೈ.. ಬಟರ್‍ಫ್ಲೈ..

    butterfly shooting in mysore

    ಬಟರ್‍ಫ್ಲೈ.. ಅನ್ನೋ ಪದ ಮೂರು ಸಾರಿ ಕೇಳಿದ್ರೆ ಸಾಕು, ಹಳೆಯ ದಿನಗಳ ಒಂದು ಜಾಹೀರಾತು ನೆನಪಾಗುತ್ತಲ್ಲ.. ಹಾಗೆಯೇ ನೆನಪಲ್ಲಿ ಉಳಿಯುವಂತಹ ಚಿತ್ರವೊಂದು ಬಟರ್‍ಫ್ಲೈ.. ಹೆಸರಿನಲ್ಲಿಯೇ ತಯಾರಾಗುತ್ತಿದೆ. ರಮೇಶ್ ಅರವಿಂದ್ ನಿರ್ದೇಶನದಲ್ಲಿ ಪಾರೂಲ್ ಯಾದವ್ ಬಟರ್‍ಫ್ಲೈ ಆಗಿ ನಟಿಸುತ್ತಿದ್ದಾರೆ. ನಾಯಕಿಯಷ್ಟೇ ಅಲ್ಲ, ಚಿತ್ರದ ನಿರ್ಮಾಪಕರಲ್ಲಿ ಪಾರುಲ್ ಕೂಡಾ ಒಬ್ಬರು. 

    ದುಂಬಿಯೊಂದು ಚಿಟ್ಟೆಯಾಗುವಂತೆಯೇ, ಮುಗ್ದ ಹುಡುಗಿಯೊಬ್ಬಳು ಬದಲಾಗುವ ಕಥೆ ಚಿತ್ರದಲ್ಲಿದೆ. ಪಾರೂಲ್ ಪಾರ್ವತಿಯಾಗಿದ್ದಾರೆ. ಚಿತ್ರೀಕರಣ ಈಗ ಫೈನಲ್ ಹಂತದಲ್ಲಿದೆ. ಪ್ಯಾರಿಸ್‍ನಲ್ಲಿ ಒಂದು ದೃಶ್ಯ ಚಿತ್ರೀಕರಿಸಿಬಿಟ್ಟರೆ ಚಿತ್ರೀಕರಣ ಮುಗಿದಂತೆಯೇ. ಅಂದಹಾಗೆ ಇದು ಹಿಂದಿಯ ಕ್ವೀನ್ ಚಿತ್ರದ ರೀಮೇಕ್.

    ಮೈಸೂರಿನಲ್ಲಿ ಈಗ ಚಿತ್ರೀಕರಣ ಬಿರುಸಾಗಿ ನಡೆಯುತ್ತಿದ್ದು, ಮಾಧ್ಯಮದವರನ್ನೆಲ್ಲ ಶೂಟಿಂಗ್ ಸೆಟ್‍ಗೆ ಕರೆದು ಚಿತ್ರತಂಡದ ಪರಿಚಯ ಮಾಡಿಸಿದ್ದಾರೆ ನಿರ್ದೇಶಕ ರಮೇಶ್ ಅರವಿಂದ್. ರಮೇಶ್ ಅರವಿಂದ್ ಜೊತೆ ಕೆಲಸ ಮಾಡುವುದು ಹೆಮ್ಮೆಯ ಸಂಗತಿ ಎಂದು ಹೇಳಿಕೊಂಡಿದ್ದಾರೆ ಪಾರೂಲ್. ಸಿನಿಮಾ ಆಗಸ್ಟ್‍ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

  • ಮೆಲ್ಲ ಮೆಲ್ಲನೆ ಆವರಿಸಿತು ಮೆಲ್ಲನೆ ಕೈ ಹಿಡಿದು..

    mellamellane song creates magic

    ಹಾಡು ಬರೆದಿರುವುದು ಜಯಂತ್ ಕಾಯ್ಕಿಣಿ. ಹಾಡಿರುವುದು ಸುಪ್ರಿಯಾ ಲೋಹಿತ್ ಮತ್ತು ಸತ್ಯ ಪ್ರಕಾಶ್. ಅಮಿತ್ ತ್ರಿವೇದಿ ಸಂಗೀತ ನಿರ್ದೇಶನದ ಹಾಡು.. ಮೆಲ್ಲ ಕೈ ಹಿಡಿದು.. ನೀ ತಲುಪಿಸು ಬಾ.. ನನ್ನ ಮನೆತನಕಾ.. 

    ಒಂದೊಂದು ಪದದಲ್ಲೇ ಇಡೀ ಜೀವನವನ್ನು ತುಂಬಿಸಿ ಕೊಡುವ ಜಯಂತ್ ಕಾಯ್ಕಿಣಿ, ಇಲ್ಲೂ ಗೆದ್ದಿದ್ದಾರೆ.

    ಹಾಡು ಮೆಲ್ಲ ಮೆಲ್ಲನೆ ಆವರಿಸುತ್ತಾ ಹೋಗುತ್ತೆ. ದುಃಖದಲ್ಲಿದ್ದಾಗ ಸಂಗಾತಿಯಂತೆ, ಖುಷಿಯಲ್ಲಿದ್ದಾಗ ವಿಷಾದ ಗೀತೆಯಂತೆ ಕೇಳಿಸುವ ಈ ವಿಭಿನ್ನ ಗೀತೆ, ಬಟರ್ ಫ್ಲೈ ಚಿತ್ರದ್ದು.

    ಮನು ಕುಮಾರ್, ಪಾರೂಲ್ ಯಾದವ್ ನಿರ್ಮಾಣದ ಚಿತ್ರದಲ್ಲಿ ಪಾರೂಲ್ ಯಾದವ್, ಪಾರೂ ಆಗಿ ನಟಿಸಿದ್ದಾರೆ. ರಮೇಶ್ ಅರವಿಂದ್ ನಿರ್ದೇಶನದ ಚಿತ್ರ, ಮಲೆನಾಡಿನ ಮಡಿಲಲ್ಲಿ, ಗೋಕರ್ಣದಲ್ಲಿ, ಪ್ಯಾರಿಸ್ಸಿನಲ್ಲಿ ಚಿತ್ರೀಕರಣಗೊಂಡಿದೆ. ಪುನೀತ್ ರಾಜ್‍ಕುಮಾರ್ ಬಿಡುಗಡೆ ಮಾಡಿದ್ದ ಈ ಹಾಡು ಪ್ರೇಮಿಗಳ ಹೃದಯವನ್ನು ನಿಧಾನವಾಗಿ ಆವರಿಸಿಕೊಳ್ಳುತ್ತಿದೆ.

  • ಮೈಸೂರ್ ಮ್ಯಾಲೆ ಪ್ಯಾರ್‍ಗೇ ಆಗ್‍ಬುಟ್ಟೈತೆ

    parul in love with mysore

    ಪ್ಯಾರ್‍ಗೇ ಆಗ್‍ಬುಟ್ಟೈತೆ ಪಾರೂಲ್‍ಗೆ ಈಗ ಮೈಸೂರ್ ಮೇಲೆ ಪ್ಯಾರ್‍ಗೇ ಆಗ್‍ಬುಟ್ಟಿದೆ. ಬಟರ್ ಫ್ಲೈ ಸಿನಿಮಾಗಾಗಿ ಅಪ್ಪಟ ಕನ್ನಡದ ಹಳ್ಳಿ ಸೊಗಡಿನ ಉಡುಪಿನಲ್ಲಿ ಮಿಂಚುತ್ತಿರುವ ಪಾರೂಲ್‍ಗೆ ಮೈಸೂರು, ಅಲ್ಲಿನ ಜನ, ವಾತಾವರಣ ಎಲ್ಲವೂ ಇಷ್ಟವಾಗಿಬಿಟ್ಟಿದೆ.

    ಮೈಸೂರು ಇಷ್ಟವಾಗಿದ್ದಕ್ಕೆ ಕಾರಣಗಳೂ ಇವೆ. ಮೈಸೂರಿನ ರಸ್ತೆಗಳು ಬೆಂಗಳೂರಿನ ರಸ್ತೆಗಳ ಹಾಗಲ್ಲ. ಅಗಲವಾದ ರಸ್ತೆಗಳಿರುವ ಕಾರಣಕ್ಕೇ ಟ್ರಾಫಿಕ್ ಜಾಮ್ ಆಗೋದಿಲ್ಲ. ಹೀಗಾಗಿ ಒಂದೇ ದಿನ 5 ಲೊಕೇಶನ್‍ಗಳಲ್ಲಿ ಶೂಟಿಂಗ್ ಮಾಡಿದೆ ಚಿತ್ರತಂಡ. 

    ಮೈಸೂರಿನ ವಾತಾವರಣ ತುಂಬಾ ಇಷ್ಟವಾಯ್ತು. ಇಲ್ಲಿಯೇ ಮನೆ ಮಾಡಿದರೆ ಹೇಗೆ ಅನ್ನೋ ಯೋಚನೆಯೂ ಇದೆ. ಇಲ್ಲಿನ ಜನ ತುಂಬಾ ಒಳ್ಳೆಯವ್ರು ಎಂದು ಮನೆ ಮಾಡುವ ಕನಸು ಹಂಚಿಕೊಂಡಿದ್ದಾರೆ ಪಾರುಲ್.

  • ಶೂಟಿಂಗ್ ಮುಗಿಸಿದ ಬಟರ್ ಫ್ಲೈ

    butterfly shooting completed

    ಪರೂಲ್ ಯಾದವ್ ಅಭಿನಯದ ರಮೇಶ್ ಅರವಿಂದ್ ನಿರ್ದೇಶಿಸುತ್ತಿರುವ ಬಟರ್ ಫ್ಲೈ ಚಿತ್ರದ ಚಿತ್ರೀಕರಣ ಯೂರೋಪ್‍ನಲ್ಲಿ ಮುಕ್ತಾಯಗೊಂಡಿದೆ. ಗೋಕರ್ಣದಿಂದ ಶುರುವಾದ ಚಿತ್ರೀಕರಣ, ಮೈಸೂರು, ಬೆಂಗಳೂರು, ಪ್ಯಾರಿಸ್‍ಗಳನ್ನು ಸುತ್ತಿದೆ.  ಪ್ಯಾರಿಸ್‍ನಲ್ಲಿಯೇ ಚಿತ್ರದ ಚಿತ್ರೀಕರಣ ಮುಗಿದಿರುವುದು ವಿಶೇಷ. ಸಿನಿಮಾ ಅಕ್ಟೋಬರ್‍ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

    ಕ್ವೀನ್ ಚಿತ್ರದ ರೀಮೇಕ್ ಆಗಿರುವ ಬಟರ್‍ಫ್ಲೈನಲ್ಲಿ ಪರೂಲ್ ಯಾದವ್, ಹೀರೋಯಿನ್ ಅಷ್ಟೇ ಅಲ್ಲ, ಸಹ ನಿರ್ಮಾಪಕಿಯೂ ಹೌದು. ತೆಲುಗಿನಲ್ಲಿ ದಟ್ ಈಸ್ ಮಹಾಲಕ್ಷ್ಮಿ ಹೆಸರಿನಲ್ಲಿ ತಮನ್ನಾ ಭಾಟಿಯಾ, ತಮಿಳಿನಲ್ಲಿ ಪ್ಯಾರಿಸ್ ಪ್ಯಾರಿಸ್ ಹೆಸರಿನಲ್ಲಿ ಕಾಜಲ್ ಅಗರ್‍ವಾಲ್, ಮಲಯಾಳಂನಲ್ಲಿ ಜಾಮ್ ಜಾಮ್ ಹೆಸರಿನಲ್ಲಿ ಮಂಜಿಮಾ ಮೋಹನ್ ನಟಿಸುತ್ತಿದ್ದಾರೆ. 4 ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗಿರುವ ಚಿತ್ರಗಳಲ್ಲಿ ಕನ್ನಡ ಹಾಗೂ ತಮಿಳು ಚಿತ್ರಗಳನ್ನು ರಮೇಶ್ ಅರವಿಂದ್ ನಿರ್ದೇಶಿಸಿದ್ದಾರೆ. 

    ಚಿತ್ರದ ಹಾಡುಗಳನ್ನು ಎಲ್ಲ ನಟಿಯರೂ ಸಿಂಗಲ್ ಟೇಕ್‍ನಲ್ಲೇ ಮುಗಿಸಿಕೊಟ್ಟರು. ಇದು ಈ ಚಿತ್ರದ ಸ್ಪೆಷಲ್. ನಾಲ್ವರು ಸ್ಟಾರ್‍ಗಳು, ಒಂದೇ ಸೆಟ್.. ಅಬ್ಬಾ.. ಆ ಸವಾಲಿನ ಕೆಲಸವನ್ನು ಯಶಸ್ವಿಯಾಗಿ ಮುಗಿಸಿದ್ದೇವೆ ಎಂದು ಖುಷಿಯಾಗಿದ್ದಾರೆ ರಮೇಶ್ ಅರವಿಂದ್.

    ಚಿತ್ರೀಕರಣ ಇಷ್ಟು ಸರಳವಾಗಿ, ಸೊಗಸಾಗಿ ಮುಗಿಯುತ್ತದೆ ಎಂದು ನಾವಂದುಕೊಂಡಿರಲಿಲ್ಲ. ಯಾವುದೇ ಸಮಸ್ಯೆ, ಗೊಂದಲವಿಲ್ಲದೆ ಚಿತ್ರೀಕರಣ ಮುಗಿದಿದೆ, ಅಕ್ಟೋಬರ್‍ನಲ್ಲಿ ತೆರೆಗೆ ತರುವ ಯೋಜನೆ ಇದೆ ಎಂದು ಹೇಳಿದ್ದಾರೆ ನಿರ್ಮಾಪಕ ಮನು ಕುಮಾರನ್.

    ಚಿತ್ರಕ್ಕೆ ಬಾಲಿವುಡ್ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಸಂಗೀತ ನೀಡಿರುವುದು ಇನ್ನೊಂದು ವಿಶೇಷ.

  • ಸೋತ ಪಾಕಿಸ್ತಾನಕ್ಕೆ ಪಾರೂಲ್ ಕೊಟ್ಟ ಗಿಫ್ಟ್ ಏನ್ ಗೊತ್ತಾ..?

    parul yadav's gift to pakistan

    ಪ್ಯಾರ್‍ಗೇ ಹುಡುಗಿ, ಚಿಟ್ಟೆಯ ಬೆಡಗಿ ಪಾರೂಲ್ ಯಾದವ್, ವಿಶ್ವಕಪ್‍ನಲ್ಲಿ ಹೀನಾಯ ಸೋಲು ಕಂಡ ಪಾಕಿಸ್ತಾನಕ್ಕೆ ಒಂದೊಳ್ಳೆ ಗಿಫ್ಟ್ ಕೊಟ್ಟಿದ್ದಾರೆ. ಭಾರತದ ವಿರುದ್ಧ ಸೋತು ಸುಣ್ಣವಾದ ಪಾಕಿಸ್ತಾನಕ್ಕೆ ತಮ್ಮದೇ ಶೈಲಿಯಲ್ಲಿ ಉಡುಗೊರೆ ನೀಡಿ ಕಾಲೆಳೆದಿದ್ದಾರೆ.

    ಪಂದ್ಯಕ್ಕೂ ಮುನ್ನ ಭಾರತದ ವೀರ ಯೋಧ ಅಭಿನಂದನ್‍ರನ್ನು ಕಾಮಿಡಿಯಾಗಿ ತೋರಿಸಿ ಅವಹೇಳನ ಮಾಡಿದ್ದ ಪಾಕಿಸ್ತಾನಕ್ಕೆ, ಅಭಿನಂದನ್ ಶೈಲಿಯಲ್ಲೇ ಉತ್ತರಿಸಿದ್ದಾರೆ ಪಾರೂಲ್. ಅಭಿನಂದನ್ ಗೆಟಪ್ಪಿನ ಮೀಸೆಯಲ್ಲಿ ವಿಡಿಯೋ ಮಾಡಿ, ಟೀ ಕುಡಿಯುತ್ತಾ  ಮಾತನಾಡುವ ಪಾರೂಲ್, ಈ ಕಪ್ ನಿಮಗೇ.. ನೀವೇ ಇಟ್ಟುಕೊಳ್ಳಿ. ನಾವು ವಲ್ರ್ಡ್‍ಕಪ್ ತೆಗೆದುಕೊಳ್ತೇವೆ ಎಂದು ಹೇಳಿರುವ ವಿಡಿಯೋ ಬಿಟ್ಟು, ಪಾಕಿಗಳನ್ನು ಕಿಚಾಯಿಸಿದ್ದಾರೆ.