` bhageera, - chitraloka.com | Kannada Movie News, Reviews | Image

bhageera,

  • Hombale Productions To Produce Srimurali's 'Bhageera'

    Hombale Productions To Produce Srimurali's 'Bhageera'

    Hombale Productions had earlier said that it would be announcing a new venture on the 17th of December. As the date coincides with actor Srimurali's birthday, it was believed that the production house's new project will be obviously with Srimurali.

    The project has been finally announced and Hombale Productions' eight venture will star Srimurali and has been titled as 'Bhageera'. Dr Suri who had earlier directed Yash's 'Lucky'. One of the highlights is, Prashanth Neel who gave a big break to Srimurali through 'Ugram' has penned the story of the film.

    'Bhageera' will be launched next year and the first look poster of the film was released on Murali's birthday. Srimurali plays a police officer in this film. More details are yet awaited.

  • ಬಘೀರನ ಶೂಟಿಂಗ್ ಯಾವಾಗ ಶುರು?

    ಬಘೀರನ ಶೂಟಿಂಗ್ ಯಾವಾಗ ಶುರು?

    ರೋರಿಂಗ್ ಸ್ಟಾರ್ ಶ್ರೀಮುರಳಿ ಈಗಾಗಲೇ ಮದಗಜ ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ. ಇನ್ನೇನಿದ್ದರೂ ಪೋಸ್ಟ್ ಪ್ರೊಡಕ್ಷನ್ ಕೆಲಸ. ಅದು ಮುಗಿಯುತ್ತಿದ್ದಂತೆಯೇ ಶುರುವಾಗಬೇಕಿದ್ದ ಬಘೀರ ಚಿತ್ರದ ಚಿತ್ರೀಕರಣ ಯಾವಾಗ?

    ಡಿಸೆಂಬರ್ ಅಂತ್ಯ ಅಥವಾ ಜನವರಿ ಆರಂಭದಲ್ಲಿ ಚಿತ್ರೀಕರಣ ಶುರುವಾಗಲಿದೆ. ಚಿತ್ರೀಕರಣ ವಿಳಂಬವಾಗುತ್ತಿರುವುದು ಹೌದು. ಆದರೆ, ಅದಕ್ಕೆ ಕೊರೊನಾ ಕಾರಣ ಅಲ್ಲ. ಚಿತ್ರದ ಕಥೆಯೇ ಅಂತದ್ದೊಂದು ತಯಾರಿ ಕೇಳುತ್ತಿದೆ ಎಂದಿದ್ದಾರೆ ಡಾ.ಸೂರಿ.

    ಹೊಂಬಾಳೆ ವಿಜಯ್ ಕಿರಗಂದೂರು ಜೊತೆ ಶ್ರೀಮುರಳಿ ಕೈ ಜೋಡಿಸಿರುವ ಮೊದಲ ಪ್ರಾಜೆಕ್ಟ್ ಇದು. ಚಿತ್ರಕ್ಕಿನ್ನೂ ತಾಂತ್ರಿಕ ವರ್ಗ ಮತ್ತು ಇತರೆ ಕಲವಿದರ ಆಯ್ಕೆ ಆಗಿಲ್ಲ.ನ

  • ಬಘೀರನಿಗೆ ಕೂಡಿ ಬಂತು ಕಾಲ

    ಬಘೀರನಿಗೆ ಕೂಡಿ ಬಂತು ಕಾಲ

    ರೋರಿಂಗ್ ಸ್ಟಾರ್ ಶ್ರೀಮುರಳಿ ಮದಗಜ ನಂತರ ನಟಿಸುತ್ತಿರೋ ಹೊಸ ಸಿನಿಮಾ ಬಘೀರ. ಈ ಚಿತ್ರಕ್ಕೆ ಕಥೆ ಬರೆದಿರುವುದು ಪ್ರಶಾಂತ್ ನೀಲ್. ಡೈರೆಕ್ಷನ್ ಮಾಡುತ್ತಿರೋದು ಡಾ.ಸೂರಿ. ಲಕ್ಕಿ, ಕ್ವಾಟ್ಲೆ ಸತೀಶ ಚಿತ್ರಗಳನ್ನು ನಿರ್ದೇಶಿಸಿದ್ದ ಸೂರಿ, ಈಗ ಬಘೀರನಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕೆ ಈಗ ಕಾಲ ಕೂಡಿ ಬಂದಿದ್ದು  ಮೇ 20ರಂದು ಸಿನಿಮಾಗೆ ಮುಹೂರ್ತ ನಡೆಯುತ್ತಿದೆ.

    ಜಂಗಲ್ ಬುಕ್ ಕಾರ್ಟೂನ್ ನೋಡಿರುವವರಿಗೆ ಬಘೀರ ಅನ್ನೋ ಹೆಸರು ಪರಿಚಿತವಾಗಿಯೇ ಇರುತ್ತೆ. ಕಷ್ಟಕ್ಕೆ ಸಿಲುಕುವ ಮೋಗ್ಲಿಯನ್ನು ಕಾಪಾಡುವವನು ಬಘೀರ. ವೆನ್ ಸೊಸೈಟಿ ಬಿಕಮ್ಸ್ ಎ ಜಂಗಲ್.. ಅಂಡ್ ಓನ್ಲಿ ಒನ್ ಪ್ರಿಡೇಟರ್ ರೋರ್ಸ್ ಫಾರ್ ಜಸ್ಟಿಸ್ ಅನ್ನೋದು ಚಿತ್ರದ ಟ್ಯಾಗ್‍ಲೈನ್. ಸಮಾಜವೇ ಒಂದು ಅರಣ್ಯವಾದಾಗ ಪರಭಕ್ಷಕನೇ ನ್ಯಾಯಕ್ಕಾಗಿ ಹೋರಾಡುತ್ತಾನೆ ಅನ್ನೋ ಅರ್ಥವದು. ಚಿತ್ರದಲ್ಲಿ ಶ್ರೀಮುರಳಿಯವರದ್ದು ಪೊಲೀಸ್ ಆಫೀಸರ್ ಪಾತ್ರ. ಚಿತ್ರವನ್ನು ಹೊಂಬಾಳೆಯವರು ಪ್ರೊಡ್ಯೂಸ್ ಮಾಡ್ತಿರೋದ್ರಿಂದ ಅದ್ಧೂರಿತನಕ್ಕೆ ನೋ ಪ್ರಾಬ್ಲಂ.

  • ಬಘೀರನಿಗೆ ಶುಭಾರಂಭ

    ಬಘೀರನಿಗೆ ಶುಭಾರಂಭ

    ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಹೊಸ ಸಿನಿಮಾ ಬಘೀರ ಶುರುವಾಗಿದೆ. ಮದಗಜ ನಂತರ ಶುರುವಾಗುತ್ತಿರೋ ಸಿನಿಮಾ ಇದು. ಇಂಡಿಯಾದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಬ್ಯಾನರ್ ಅಡಿಯಲ್ಲಿ ಶುರುವಾಗುತ್ತಿರೋ ಸಿನಿಮಾ ಬಘೀರ.

    ಡಾ.ಸೂರಿ ನಿರ್ದೇಶನದ ಬಘೀರ ಚಿತ್ರದ ಮುಹೂರ್ತ ಮಹಾಲಕ್ಷ್ಮಿ ಲೇಔಟ್‍ನಲ್ಲಿ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಮೊದಲ ದೃಶ್ಯಕ್ಕೆ ನಿರ್ಮಾಪಕ ವಿಜಯ್ ಕಿರಗಂದೂರು ಅವರ ತಮ್ಮ ಮಂಜುನಾಥ್ ಕ್ಲಾಪ್ ಮಾಡಿದರೆ, ನಿರ್ದೇಶಕ ಸೂರಿಯವರ ತಾಯಿ ಸರೋಜ ಕ್ಯಾಮೆರಾ ಸ್ವಿಚ್ ಆನ್ ಮಾಡಿದರು.

    ಪ್ರಶಾಂತ್ ನೀಲ್ ಅವರ ಕಥೆ ಬಘೀರ ಚಿತ್ರಕ್ಕಿದೆ. ಉಗ್ರಂ ನಂತರ ಪ್ರಶಾಂತ್ ನೀಲ್ ಅವರ ಕಥೆಯಲ್ಲಿ ಶ್ರೀಮುರಳಿ ನಟಿಸುತ್ತಿರೋ ಚಿತ್ರವಿದು. ಮೇ ತಿಂಗಳ ಕೊನೆಯಲ್ಲಿ ಚಿತ್ರದ ಶೂಟಿಂಗ್ ಶುರುವಾಗಲಿದೆ. ಅಜನೀಶ್ ಲೋಕನಾಥ್ ಸಂಗೀತವಿದೆ.

  • ರೋರಿಂಗ್ ಬಘೀರ : ಉಗ್ರಂ ಜೋಡಿ ರಿಪೀಟ್

    Prashanth Neel Writes Story For Bhageera

    ಉಗ್ರಂ, ಮಫ್ತಿ ನಂತರ ಮತ್ತೊಮ್ಮೆ ಅದೇ ಶೇಡ್‍ನಲ್ಲಿ ಪ್ರತ್ಯಕ್ಷವಾಗುತ್ತಿದ್ದಾರೆ ರೋರಿಂಗ್ ಸ್ಟಾರ್ ಶ್ರೀಮುರಳಿ. ಈ ಬಾರಿ ಕನ್ನಡದಲ್ಲಷ್ಟೇ ಅಲ್ಲ, ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲಿ. ಶ್ರೀಮುರಳಿಯ ಬಘೀರ ಚಿತ್ರಕ್ಕೆ ಡೈರೆಕ್ಟರ್ ಪ್ರಶಾಂತ್ ನೀಲ್ ಅಲ್ಲ. ಆದರೆ, ಕಥೆ, ಚಿತ್ರಕಥೆ ಅವರದ್ದೇ. ನಿರ್ದೇಶಕರಾಗಿರುವುದು ಯಶ್-ರಮ್ಯಾ ಜೋಡಿಯ ಲಕ್ಕಿ ಚಿತ್ರದ ಖ್ಯಾತಿಯ ಡಾ.ಸೂರಿ.

    ಯುವರತ್ನ, ಕೆಜಿಎಫ್ ಚಾಪ್ಟರ್ 2, ಸಲಾರ್‍ನಂತರ ಬಿಗ್ ಬಜೆಟ್ ಚಿತ್ರಗಳ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಬಘೀರನಿಗೆ ಬಂಡವಾಳ ಹೂಡುತ್ತಿದೆ.

    ಇಡೀ ಸಮಾಜವೇ ಅರಣ್ಯವಾದಾಗ, ಒಬ್ಬನೇ ಒಬ್ಬ ರಕ್ಷಕ ನ್ಯಾಯಕ್ಕಾಗಿ ಘರ್ಜಿಸುತ್ತಾನೆ ಅನ್ನೋ ಟ್ಯಾಗ್‍ಲೈನ್ ಬೇರೆ ಇದೆ. ಡೌಟೇ ಇಲ್ಲದಂತೆ ಇದೊಂದು ಆಕ್ಷನ್ ಡ್ರಾಮಾ. 

  • ಹೊಂಬಾಳೆ ಮತ್ತು ಮೂರು ಸಾವಿರ ಕೋಟಿ

    ಹೊಂಬಾಳೆ ಮತ್ತು ಮೂರು ಸಾವಿರ ಕೋಟಿ

    ಹೊಂಬಾಳೆ ಫಿಲಮ್ಸ್ ಸಂಸ್ಥೆ ಈಗ ದೇಶದ ನಂ.1 ಚಿತ್ರ ನಿರ್ಮಾಣ ಸಂಸ್ಥೆ. ಈ ವರ್ಷವೇ ಕೆಜಿಎಫ್ ಮತ್ತು ಕಾಂತಾರ ಎಂಬ ಎರಡು ಬ್ಲಾಕ್ ಬಸ್ಟರ್ ಹಿಟ್ ಕೊಟ್ಟ ಹೊಂಬಾಳೆಯ ಬೆನ್ನೆಲುಬು ವಿಜಯ್ ಕಿರಗಂದೂರು. ಅವರೀಗ ಮೂರು ಸಾವಿರ ಕೋಟಿ ಬಂಡವಾಳ ಹೂಡಿ ಎಲ್ಲರ ಹುಬ್ಬೇರಿಸಿದ್ದಾರೆ. ಇದು ಒಂದು ದಿನದ ಕಥೆ ಅಲ್ಲ, ಘೋಷಣೆಯ ವೈಭವವೂ ಅಲ್ಲ. ಇದು 5 ವರ್ಷಗಳ ಪ್ಲಾನ್. ಮುಂದಿನ 5 ವರ್ಷಗಳಲ್ಲಿ 3 ಸಾವಿರ ಕೋಟಿ ಬಂಡವಾಳ ಹೂಡುತ್ತಿರುವುದಾಗಿ ವಿಜಯ್ ಕಿರಗಂದೂರು ಘೋಷಿಸಿದ್ದಾರೆ. ಹೊಂಬಾಳೆಯವರ ಕೈಲಿ ಸುಮಾರು ಚಿತ್ರಗಳಿವೆ.

    1.ಸಲಾರ್ : ಇದು ಪ್ರಭಾಸ್, ಶೃತಿ ಹಾಸನ್, ಜಗಪತಿ ಬಾಬು ನಟಿಸುತ್ತಿರುವ ಸಿನಿಮಾ. ನಿರ್ದೇಶಕ ಪ್ರಶಾಂತ್ ನೀಲ್.

    2.ರಾಘವೇಂದ್ರ ಸ್ಟೋರ್ಸ್ : ಇದು ಜಗ್ಗೇಶ್, ಶ್ವೇತಾ ಶ್ರೀವಾತ್ಸವ್ ಸಿನಿಮಾ. ನಿರ್ದೇಶಕ ಸಂತೋಷ್ ಆನಂದರಾಮ್.

    3. ರಿಚರ್ಡ್ ಆಂಟನಿ : ರಕ್ಷಿತ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಸಿನಿಮಾ.

    4. ಟೈಸನ್ : ಪೃಥ್ವಿರಾಜ್ ಸುಕುಮಾರನ್ ನಟನೆ, ನಿರ್ದೇಶನದ ಮಲಯಾಳಂ ಸಿನಿಮಾ

    5. ಧೂಮಮ್ : ಪವನ್ ಕುಮಾರ್ ನಿರ್ದೇಶನದ ಚಿತ್ರ. ಫಾಹದ್ ಫಾಸಿಲ್, ಅಪರ್ಣಾ ಬಾಲಮುರಳಿ ನಟಿಸುತ್ತಿರುವ ಸಿನಿಮಾ.

    6. ಬಘೀರಾ : ಶ್ರೀಮುರಳಿ ನಟನೆಯ ಸಿನಿಮಾ. ಡಾ.ಸೂರಿ ನಿರ್ದೇಶಕ

    7. ರಘುತಾತ : ಕೀರ್ತಿ ಸುರೇಶ್ ಪ್ರಧಾನ ಪಾತ್ರದಲ್ಲಿರೋ ಚಿತ್ರ. ಸುಮನ್ ಕುಮಾರ್ ನಿರ್ದೇಶಕ

    8. ಸೂರರೈಪೊಟ್ರು ನಿರ್ದೇಶಕಿ ಸುಧಾ ಕೊಂಗೆರಾ ಜೊತೆಗೊಂದು ಸಿನಿಮಾ.

    ಅದ್ಧೂರಿ ಚಿತ್ರವೆಂದರೆ ದುಡ್ಡು ಸುರಿದೇ ಸಿನಿಮಾ  ಮಾಡಬೇಕು ಎಂತಿಲ್ಲ. ಕಥೆಯನ್ನೇ ಮುಖ್ಯವಾಗಿಟ್ಟುಕೊಂಡು ಚಿತ್ರದ ಕಥೆಗೆ ಏನೇನು ಬೇಕೋ ಎಲ್ಲವನ್ನೂ ಕೊಡುವ ಕೆಲಸ ಮಾಡುತ್ತಿರುವ ಹೊಂಬಾಳೆಯವರು ದೊಡ್ಡ ಕನಸಿನ ಬೆನ್ನು ಹತ್ತಿದ್ದಾರೆ. ವಿಜಯ್ ಕಿರಗಂದೂರು ಅವರಿಗೆ ಎಲ್ಲರೂ ಶುಭ ಕೋರಿದ್ದಾರೆ.