` pentagon, - chitraloka.com | Kannada Movie News, Reviews | Image

pentagon,

  • Guru Deshapande Starts A New Film Called 'Pentagon'

    Guru Deshapande Starts A New Film Called 'Pentagon'

    Director-producer Guru Deshapande has silently started a new film called 'Pentagon' under his G Cinemas production house and one of the highlights of the film is, five directors are directing a single film.

    There are earlier a few instances of many directors directing a single film. Shivarajakumar starrer 'Sugreeva' had 10 directors coming together to direct a single film. 'Police Story 3' had six directors teaming up for a film. But both these films were shot in a limited span of time and that is not the case of 'Pentagon'.

    'Pentagon' has five different stories interwoven into a single film. Guru Deshapande will be directing one of the stories, while the names of the rest of the four directors have still been kept a secret. Already, two of the stories have already been shot and the makers plan to complete the film by this year end. 

  • Pentagon Movie review, Chitraloka Rating  4/5

    Pentagon Movie review, Chitraloka Rating  4/5

    Film: Pentagon

    Directors: Guru Deshpande, Raghu Shivamogga, Akash Srivatsa, Chandra Mohan, Kiran Kumar

    Cast: Kishore, P Ravishankar, Pruthvi Ambar, Prakash Belawadi, Pramod Shetty, Pritika Deshpande, Tanisha Kuppanda

    Duration: 174 minutes

    Certificate: A

    Packing the power of five

    Anthologies can turn out to be experimental when more than one director is involved. With no less than five directors churning out five different stories, this movie effortlessly manages to stand out in the crowd. The common thread that connects these five stories is death, which is made amply clear by the use of a crow as the film’s mascot and a metaphor throughout. The presence of death does not mean the stories are about it; just that there is a death in every story. And death can come to not just lives, but to ideas, ideologies, beliefs and hope.

    The sense of purpose in these five stories is their biggest advantage. The shortest story (length-wise) of the lot is directed by Akash Srivatsa (of Shivaji Surathkal fame). He presents a retired teacher’s obsession with Mysore Pak and interestingly builds a story about relationships through it. The story is however predictable and could have been well done with more commercial touch. Debutant Kiran Kumar picks up a caste conflict in a village that erupts over the accidental death of a child. How this incident results in the uprising of an entire community is neatly presented.

    Chandra Mohan’s comedy take on a dejected person’s unsuccessful suicide attempt is easily the most dissimilar story of the lot. This director sticks to his core competence of comedy and this story has a brilliant script. Raghu Shivamogga’s story on a youth in a honey trap is visually stunning and resonates with the contemporary concerns. It also combines action with drama and is quite entertaining. Guru Deshpande’s final piece on a rowdy-turned-Kannada activist’s life has rightly ruffled many feathers as it boldly portrays both sides of the story without batting an eyelid.

    It is inevitable that these five stories compete among themselves to be judged the best of the lot. Though connected by the metaphor of death, each story is quite unique and it would be a disservice to put each on a different pedestal for being in the same lineup. However, the stories directed by Guru Deshpande (Kannada activist) and Raghu Shivamogga (Sex trap) have a more cinematic appeal than the others. Kiran Kumar’s story shows great concern and may have been better explored as an individual film.

    Each of the stories has good actors dotting them. While the faceoff between Kishore and Pruthvi Ambar is awesome, that between P Ravishankar and Pritika Deshpande is commendable. Tanisha Kuppanda as a seductress and Prakash Belawadi as a no-nonsense cop fit the bill perfectly. The theme song stands out and could not have been better. It suits the film to perfection. Manikant Kadri deserves special mention.

    At almost three hours long, the film might feel tiresome, but the stories are refreshing. They also have uneven duration which could have been better planned. With time being the most important resource, it is the audience who need to plan their visit to the theatres impeccably.

  • ಆ ಒಂದು ಪದ : ಪೆಂಟಗನ್ ಚಿತ್ರದಲ್ಲಿ ನಟಿಸಿದ್ದವರೇ ಸಿಟ್ಟಾಗಿದ್ದು ಯಾಕೆ?

    ಆ ಒಂದು ಪದ : ಪೆಂಟಗನ್ ಚಿತ್ರದಲ್ಲಿ ನಟಿಸಿದ್ದವರೇ ಸಿಟ್ಟಾಗಿದ್ದು ಯಾಕೆ?

    ಪೆಂಟಗನ್ ಚಿತ್ರದ ಟೀಸರ್ ರಿಲೀಸ್ ಆಗಿದೆ. ಐವರು ನಿರ್ದೇಶಕರು ಮತ್ತು ಐದು ಕಥೆಗಳ ಲಿಸ್ಟಿನಲ್ಲಿದು ಮೊದಲ ಕಥೆ ಇದು. ಕನ್ನಡ ಹೋರಾಟಗಾರನೊಬ್ಬನ ರಕ್ತ ಚರಿತ್ರೆ. ಕಿಶೋರ್ ಕನ್ನಡ ಹೋರಾಟಗಾರನ ಪಾತ್ರದಲ್ಲಿ ನಟಿಸಿದ್ದಾರೆ. ಕಿಶೋರ್ ಪಾತ್ರ ಹೋರಾಟಗಾರನದ್ದಷ್ಟೇ ಅಲ್ಲ, ಭೂಗತದೊರೆಯೊಬ್ಬನ ಕಥೆಯೂ ಹೌದು. ಡಾನ್ ಒಬ್ಬ ಕನ್ನಡ ಹೋರಾಟಗಾರನ ವೇಷ ಧರಿಸಿ ಬದಲಾಗುವ ಕಥೆ. ಚಿತ್ರದ ಟೀಸರ್ ಕುತೂಹಲ ಹುಟ್ಟಿಸುತ್ತಿದೆ. ಗುರು ದೇಶಪಾಂಡೆ ಕೈಚಳಕ. ಕಿಶೋರ್, ಪ್ರಥ್ವಿ ಅಂಬರ್ ಪ್ರಧಾನ ಪಾತ್ರದಲ್ಲಿದ್ದಾರೆ. ರೂಪೇಶ್ ರಾಜಣ್ಣ, ಅಶ್ವಿನಿ ಗೌಡ, ಶರಣ್ಯ ಶೆಟ್ಟಿ, ವೈಭವ್ ನಾಗರಾಜ್ ಕೂಡಾ ನಟಿಸಿದ್ದಾರೆ.

    ಆದರೆ ರೂಪೇಶ್ ರಾಜಣ್ಣ ಮತ್ತು ಅಶ್ವಿನಿ ಗೌಡ ಇಬ್ಬರೂ ಕಲಾವಿದರಷ್ಟೇ ಅಲ್ಲ, ಕನ್ನಡ ಹೋರಾಟಗಾರರೂ ಹೌದು. ಟೀಸರಿನಲ್ಲಿ ಒಂದು ಕಡೆ ಎಷ್ಟು ಬಂತು ರೋಲ್ ಕಾಲ ಅನ್ನೋ ಡೈಲಾಗ್ ಬರುತ್ತೆ. ಈ ಪದವೇ ಈಗ ವಿವಾದದ ಮೂಲ.

    ಟೀಸರ್ ರಿಲೀಸ್ ವೇಳೆಯಲ್ಲೇ ರೂಪೇಶ್ ರಾಜಣ್ಣ ಗುರು ದೇಶಪಾಂಡೆ ಅವರನ್ನು ತರಾಟೆಗೆ ತೆಗೆದುಕೊಂಡರು. ರೂಲ್ ಕಾಲ್ ಪದಕ್ಕೆ ಸ್ಪಷ್ಟನೆ ಕೊಡಿ ಎಂದು ಹಠಕ್ಕೆ ಬಿದ್ದರು. ಸಿನಿಮಾದಲ್ಲಿ ಉತ್ತರ ಇದೆ. ಹೋರಾಟಗಾರರನ್ನು ಲೇವಡಿ ಮಾಡಿಲ್ಲ ಎಂದರು ಗುರು ದೇಶಪಾಂಡೆ.

    ಕನ್ನಡದ ಕೆಲಸಕ್ಕಾಗಿ ಹೋರಾಡುವವರನ್ನು ರೋಲ್ ಕಾಲ್ ಎಂದು ಕರೆದಾಗ ಖಂಡಿತಾ ಸಿಟ್ಟು ಬರುತ್ತೆ. ನಮಗೆ ಯಾರೂ ಪ್ರಶಸ್ತಿ ಕೊಟ್ಟು ಸನ್ಮಾನ ಮಾಡಿಲ್ಲ. ಬದಲಿಗೆ ಕೇಸು ಬಿದ್ದಿವೆ. ಈಗಲೂ ನನ್ನ ಮೇಲೆ ನಾಲ್ಕು ಕೋರ್ಟ್ ಕೇಸ್ ನಡೆಯುತ್ತಿದೆ. ಯಾರಾದರೂ ಕನ್ನಡ ಕಲಾವಿದರನ್ನು ಕಾರ್ಯಕ್ರಮಕ್ಕೆ ಕರೆದಾಗ ಎಷ್ಟು ಕೊಡ್ತೀರಾ ಎಂದು ಡೈರೆಕ್ಟ್ ಆಗಿ ಕೇಳ್ತಾರೆ. ಆದರೆ ನಾವು ನಮ್ಮ ಪೆಟ್ರೂಲ್ ಹಾಕಿಕೊಂಡು ಕನ್ನಡದ ಕೆಲಸಕ್ಕೆ ಹೋಗುತ್ತೇವೆ. ಹೀಗಾಗಿ ರೋಲ್ ಕಾಲ್ ಹೋರಾಟಗಾರರು ಅನ್ನೋ ಪದ ಕೇಳಿದಾಗ ನಿಜಕ್ಕೂ ನೋವಾಗುತ್ತೆ ಎಂದಿದ್ದಾರೆ ಅಶ್ವಿನಿ ಗೌಡ.

    ನೀವೂ ಕೂಡಾ ನಟಿಸಿದ್ದೀರಲ್ವಾ ಎಂದಾಗ ಹೌದು, ನಟನೆಯೇ ಬೇರೆ. ನಮಗೆ ಕೊಟ್ಟ ಪಾತ್ರ ಮತ್ತು ಅದರ ಬಗ್ಗೆ ವಿವರ ತಿಳ್ಕೊಳ್ತೀವಿ. ಒಪ್ಕೊಂಡ್ವಾ.. ನಟಿಸಿದ್ವಾ.. ಬಂದ್ವಾ.. ಅಷ್ಟೆ. ಇಡೀ ಸಿನಿಮಾ ಏನಿರುತ್ತೆ ಅನ್ನೋದು ನಮಗೆ ಗೊತ್ತಿರಲ್ಲ ಎಂದಿದ್ದಾರೆ ಅಶ್ವಿನಿ ಗೌಡ.

     

  • ಗುರು ದೇಶಪಾಂಡೆ ಒನ್ ಪೆಗ್ ಒನ್ ಶಾಟ್'ಗೆ ರಚಿತಾ ಬೆಂಬಲ

    ಗುರು ದೇಶಪಾಂಡೆ ಒನ್ ಪೆಗ್ ಒನ್ ಶಾಟ್'ಗೆ ರಚಿತಾ ಬೆಂಬಲ

    ಜಂಟಲ್‍ಮೆನ್ ಎಂಬ ಡಿಫರೆಂಟ್ ಚಿತ್ರವನ್ನು ನಿರ್ಮಿಸಿದ್ದ ಗುರು ದೇಶಪಾಂಡೆ ಈಗ ಐವರು ನಿರ್ದೇಶಕರ ಮೂಲಕ ಐದು ಕಥೆಗಳನ್ನು ಒಂದೇ ಚಿತ್ರದಲ್ಲಿ ಹೇಳೋ ಸಾಹಸಕ್ಕೆ ಕೈ ಹಾಕಿದ್ದಾರೆ. ಸಿಂಪಲ್ಲಾಗಿ ಹೇಳ್ಬೇಕಂದ್ರೆ, ರಿಷಬ್ ಶೆಟ್ಟಿಯವರ ಕಥಾ ಸಂಗಮ ದಂತಹ ಪ್ರಯೋಗ. ಈ ಸಾಹಸದ ಸಿನಿಮಾಗೆ ಅವರು ಕೊಟ್ಟಿರೋ ಟೈಟಲ್ ಪೆಂಟಗನ್.

    ಪೆಂಟಗನ್ ಚಿತ್ರದಲ್ಲಿ ಈಗ ಒಂದು ಕಥೆಯ ಥೀಮ್ ಪೋಸ್ಟರ್ ರಿಲೀಸ್ ಆಗಿದೆ. `ಒನ್ ಶಾಟ್ ಒನ್ ಪೆಗ್' ಕಥೆಯ ಥೀಮ್ ಪೋಸ್ಟರ್‍ನ್ನು ರಚಿತಾ ರಾಮ್ ರಿಲೀಸ್ ಮಾಡಿದ್ದಾರೆ. ಇದಕ್ಕೂ ಮುನ್ನ ಟೈಟಲ್‍ನ್ನು ಡಾರ್ಲಿಂಗ್ ಕೃಷ್ಣ ರಿಲೀಸ್ ಮಾಡಿದ್ದರು. ಜನವರಿ 18ರ ವೇಳೆಗೆ ಎಲ್ಲ 5 ನಿರ್ದೇಶಕರೂ ಗೊತ್ತಾಗಲಿದ್ದಾರೆ

  • ಜಾತಿ..ಪ್ರೀತಿ..ಹನಿಟ್ರ್ಯಾಪ್..ಕನ್ನಡ ಹೋರಾಟ..ಸುಪಾರಿ ಕಿಲ್ಲರ್ಸ್ ಕಥೆ ಪೆಂಟಗನ್

    ಜಾತಿ..ಪ್ರೀತಿ..ಹನಿಟ್ರ್ಯಾಪ್..ಕನ್ನಡ ಹೋರಾಟ..ಸುಪಾರಿ ಕಿಲ್ಲರ್ಸ್ ಕಥೆ ಪೆಂಟಗನ್

    ಪೆಂಟಗನ್. ಅಪರೂಪಕ್ಕೆ ಆಗುವ ಪ್ರಯೋಗ. ಆದರೆ ಗುರು ದೇಶಪಾಂಡೆ ಪ್ರಯೋಗವನ್ನು ಕಮರ್ಷಿಯಲ್ಲಾಗಿಯೇ ಮಾಡಿದ್ದಾರೆ. ಐವರು ನಿರ್ದೇಶಕರು.. ಐದು ಕಥೆ.. ಆದರೆ ಈ ಎಲ್ಲ ಐದು ಕಥೆಗಳೂ ಒಂದೆಡೆ ಸೇರುತ್ತವಾ..? ಎಲ್ಲ ಐದು ಕಥೆಗಳಿಗೂ ಒಂದು ಕಾಮನ್ ಲಿಂಕ್ ಇದೆಯಾ..? ಹೀಗೊಂದು ಕುತೂಹಲ ಹುಟ್ಟಿಸುತ್ತದೆ ಟ್ರೇಲರ್. ತಾರಾಗಣವಂತೂ ಭರ್ಜರಿ..

    ರವಿಶಂಕರ್, ಕಿಶೋರ್, ಪ್ರಕಾಶ್ ಬೆಳವಾಡಿ, ಪ್ರಮೋದ್ ಶೆಟ್ಟಿ.. ಹೀಗೆ ದೊಡ್ಡ ದೊಡ್ಡ ಕಲಾವಿದರೇ ಇದ್ದಾರೆ. ಶಿವಾಜಿ ಸುರತ್ಕಲ್' ಸಿನಿಮಾ ನಿರ್ದೇಶಿಸಿರೋ ಆಕಾಶ್ಶ್ರೀವತ್ಸ, 'ಚೂರಿಕಟ್ಟೆ' ಸಿನಿಮಾದ ನಿರ್ದೇಶಕ ರಾಘು ಶಿವಮೊಗ್ಗ, 'ಬ್ರಹ್ಮಚಾರಿ' ನಿರ್ದೇಶಕ ಚಂದ್ರಮೋಹನ್, ಹೊಸ ಪ್ರತಿಭೆ ಕಿರಣ್ ಕುಮಾರ್ಹಾಗೂ ಗುರುದೇಶಪಾಂಡೆ ಒಂದೊಂದು ಕಥೆಗೆ ಆಕ್ಷನ್ ಕಟ್ ಹೇಳಿದ್ದಾರೆ. ರಾಜಹುಲಿ' ಖ್ಯಾತಿಯ ಗುರು ದೇಶಪಾಂಡೆ 'ಪೆಂಟಗನ್' ಸಿನಿಮಾಗೆ ನಿರ್ದೇಶಕ, ನಿರ್ಮಾಪಕ ಕಮ್ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿದ್ದಾರೆ.

    ಈ ಹಿಂದೆ ಕಥಾಸಂಗಮ ಮೂಲಕ ರಿಷಬ್ ಶೆಟ್ಟಿ ಈ ರೀತಿಯ ಪ್ರಯೋಗ ಮಾಡಿದ್ದರು. ಹೀಗಾಗಿಯೇ ರಿಷಬ್ ಶೆಟ್ಟಿ ಚಿತ್ರಕ್ಕೆ ಶುಭಕೋರಿದ್ದಾರೆ. ಏಪ್ರಿಲ್ 7ರಂದು ಪೆಂಟಗನ್ ರಿಲೀಸ್ ಆಗುತ್ತಿದೆ. ಸ್ಟಾರ್ ನಟರ ಜೊತೆ ಜೊತೆಯಲ್ಲಿಯೇ ತನಿಶಾ, ಪ್ರೇರಣಾ ಕಂಬಂ, ಪ್ರೀತಿಕಾ ದೇಶಪಾಂಡೆ, ರವಿ ನಾಯಕ್, ಶ್ರುತಿ ನಾಯಕ್, ವಂಶಿ ಕೃಷ್ಣ ಸೇರಿದಂತೆ ದೊಡ್ಡ ತಾರಾಗಣ ಈ ಸಿನಿಮಾದಲ್ಲಿದೆ. ಅಭಿಲಾಷ್ ಕಲ್ಲತ್ತಿ, ಗುರುಪ್ರಸಾದ್ ಎಮ್.ಜಿ. ಹಾಗೂ ಕಿರಣ್ ಹಂಪಾಪುರ ಛಾಯಾಗ್ರಹಣ ಮಾಡಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಕನ್ನಡದಲ್ಲಿ ಈ ರೀತಿಯ ಪ್ರಯೋಗಗಳು ವಿರಳ. ಆ ಕಾರಣಕ್ಕಾಗಿ ‘ಪೆಂಟಗನ್’ ಸಿನಿಮಾ ಮೇಲಿನ ನಿರೀಕ್ಷೆ ಜಾಸ್ತಿ ಆಗಿದೆ. ಟ್ರೇಲರ್ ನೋಡಿದ ಬಳಿಕ ಸಿನಿಪ್ರಿಯರ ನಿರೀಕ್ಷೆ ಡಬಲ್ ಆಗಿದೆ.

  • ಪಡ್ಡೆಗಳನ್ನು ಬೇಲಿ ಹಾರಿಸಿದ ಪೆಂಟಗನ್ ಸಾಂಗು..

    ಪಡ್ಡೆಗಳನ್ನು ಬೇಲಿ ಹಾರಿಸಿದ ಪೆಂಟಗನ್ ಸಾಂಗು..

    ಕಾಮನ ಬಿಲ್ಲು ಮೂಡುತ್ತಿದೆ.. ಕಣ್ಣಿನ ಅಂಬರದಲ್ಲಿ..

    ರಂಗನು ಕಾಣೊ ಆತುರದಿ.. ಸಂಜೆಯು ಹಾರಿದೆ ಬೇಲಿ..

    ಹಾಡುಗಳಲ್ಲಿ ಅಮೃತ.. ವಿಡಿಯೋದಲ್ಲಿ ರತಿ ಮನ್ಮಥ.. ಇದು ಗುರುದೇಶಪಾಂಡೆ ನಿರ್ಮಾಣದ ಪೆಂಟಗನ್ ಚಿತ್ರದ ಹಾಡಿನ ಕಥೆ. ಐದು ಕಥೆಗಳನ್ನು ಒಳಗೊಂಡ, ಐವರು ನಿರ್ದೇಶಕರು ನಿರ್ದೇಶನ ಮಾಡಿರುವ ಪೆಂಟಗನ್ ಸಿನಿಮಾದ 5 ನೇ ಕಥೆಯ ಟೀಸರ್ ಈಗಾಗಲೇ ಬಿಡುಗಡೆಯಾಗಿ ಸದ್ದು ಮಾಡಿದ್ದು, ಸಾಕಷ್ಟು ಚರ್ಚೆ  ಕೂಡ ಆಗಿದೆ. ಇದೀಗ ಈ ಚಿದ್ರದಲ್ಲಿನ ಮೂರನೇ ಕಥೆಯ ‘ಕಾಮನಬಿಲ್ಲು ಮೂಡುತಿದೆ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ.

    ಪೆಂಟಗನ್ ಸಿನಿಮಾದ ಈ ಕಥೆಯಲ್ಲಿ ಸಾಮಾಜಿಕ ಜಾಲತಾಣದ ಮೋಸ, ಅಪರಾಧ ಜಗತ್ತು, ಯವ ಪೀಳಿಗೆಯ ಭವಿಷ್ಯದ ಕುರಿತು ಬೆಳಕು ಚೆಲ್ಲುವ ಕಥೆಯಿದು. ರಾಘು ಶಿವಮೊಗ್ಗ  ನಿರ್ದೇಶನದಲ್ಲಿ ಈ ಅಧ್ಯಾಯದಲ್ಲಿ ಪ್ರಕಾಶ್ ಬೆಳವಾಡಿ, ತನಿಷಾ ಕುಪ್ಪಂದ, ಪ್ರೇರಣಾ,ಸಾಗರ್,ರಾಕೇಶ ಇನ್ನು ಹಲವರು ಕಾಣಿಸಿಕೊಂಡಿದ್ದಾರೆ.

    ಹಾಡಿನುದ್ದಕ್ಕೂ ಚುಂಬನದ ಆಟ.. ಬೆತ್ತಲೆ ನೋಟಗಳ ನಡುವೆ ಶೃಂಗಾರ ರಸವನ್ನೇ ಹರಿಸಿದ್ದಾರೆ. ನಾಗಾರ್ಜುನ ಶರ್ಮಾ ಅವರ ಸಾಹಿತ್ಯವಿದ್ದು, ಸಂತೋಷ್ ವೆಂಕಿ, ಇಂಚರ ರಾವ್ ಹಾಡಿದ್ದಾರೆ. ಈ ಅಧ್ಯಾಯಕ್ಕೆ ಕಿರಣ್ ಹಂಪಾಪುರ ಸಿನಿಮಾಟೋಗ್ರಫಿ ಮಾಡಿದ್ದು, ಮಣಿಕಾಂತ್ ಕದ್ರಿ ಅವರ ಸಂಗೀತ ಸಂಯೋಜನೆಯಿದೆ. ಪೆಂಟಗನ್ ಸಿನಿಮಾದಲ್ಲಿ ಒಟ್ಟು ಐದು ಕಥೆಗಳಿದ್ದು, ಆಕಾಶ್ ಶ್ರೀವತ್ಸ (ಶಿವಾಜಿ ಸುರತ್ಕಲ್) ಚಂದ್ರಮೋಹನ್ (ಬ್ರಹ್ಮಚಾರಿ), ರಾಘು ಶಿವಮೊಗ್ಗ (ಚೂರಿಕಟ್ಟೆ), ಕಿರಣ್ ಕುಮಾರ್  ಹಾಗೂ ಗುರು ದೇಶಪಾಂಡೆ ತಲಾ ಒಂದೊಂದು ಕಥೆಯನ್ನು ನಿರ್ದೇಶನ ಮಾಡಿದ್ದಾರೆ.

  • ಪೆಂಟಗನ್ ನಾಯಕಿ ನೀಲಿ ಚಿತ್ರ ಆರೋಪಕ್ಕೆ ರಾಜಾಹುಲಿ ಹರ್ಷ ಸ್ಪಷ್ಟನೆ

    ಪೆಂಟಗನ್ ನಾಯಕಿ ನೀಲಿ ಚಿತ್ರ ಆರೋಪಕ್ಕೆ ರಾಜಾಹುಲಿ ಹರ್ಷ ಸ್ಪಷ್ಟನೆ

    ಪೆಂಟಗನ್ ಚಿತ್ರ ಇದೇ ವಾರ ರಿಲೀಸ್ ಆಗುತ್ತಿದೆ. ಏಪ್ರಿಲ್ 7ಕ್ಕೆ ರಿಲೀಸ್ ಆಗುತ್ತಿರುವ ಚಿತ್ರದಲ್ಲಿ 5 ಕಥೆಗಳು ಹಾಗೂ ಐವರು ನಿರ್ದೇಶಕರಿದ್ದಾರೆ. ಚಿತ್ರದ ಟ್ರೇಲರ್ ನೋಡಿದವರು ಚಿತ್ರದ ಬಗ್ಗೆ ಒಳ್ಳೆಯ ಮಾತನ್ನಾಡುತ್ತಿದ್ದಾರೆ. ಇದರ ಮಧ್ಯೆ ರಘು ಚೂರಿಕಟ್ಟೆ ನಿರ್ದೇಶನದ ಪೆಂಟಗನ್ ಚಿತ್ರದ ಒಂದು ವರ್ಷನ್‍ನಲ್ಲಿ ಬೋಲ್ಡ್ ಸೀನ್‍ಗಳಿವೆ. ಕಾಮನಬಿಲ್ಲು.. ಹಾಡಿನಲ್ಲಿ ಇಂಟಿಮೇಟ್ ಸೀನ್‍ಗಳಿವೆ. ಬೆತ್ತಲೆ ಬೆನ್ನು ತೋರಿಸಿರುವ ತನಿಷಾ ಕುಪ್ಪಂಡ, ಬೆಡ್`ರೂಂ ಸೀನುಗಳಲ್ಲಿ ಬಿಂದಾಸ್ ಆಗಿಯೇ ನಟಿಸಿದ್ದಾರೆ. ಆದರೆ ಚಿತ್ರದ ಪ್ರಚಾರದ ವೇಳೆ ಮಾತನಾಡುವಾಗ ಯೂಟ್ಯೂಬರ್ ಒಬ್ಬ ನೀವು ನೀಲಿ ಚಿತ್ರಗಳಲ್ಲಿ ಬೆತ್ತಲೆ ಚಿತ್ರಗಳಲ್ಲಿ ನಟಿಸೋಕೆ ಸಿದ್ಧರಿದ್ದೀರಾ ಎಂದು ಪ್ರಶ್ನಿಸಿಬಿಟ್ಟಿದ್ದ.

    ತನಿಷಾ ಗರಂ ಆಗಿಯೇ ಉತ್ತರ ಕೊಟ್ಟಿದ್ದರೆನ್ನಿ. ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು ಕೂಡಾ. ಅದಾದ ನಂತರ ಸುದ್ದಿಗೋಷ್ಠಿ ಮಾಡಿದ್ದ ತನಿಷಾ ರಾಜಾಹುಲಿ ಹರ್ಷ ಕೂಡಾ ಅದೇ ರೀತಿಯ ಮೆಸೇಜ್ ಕಳಿಸಿದ್ದಾರೆ ಎಂದು ಆರೋಪಿಸಿದ್ದರು. ಗೊತ್ತಿಲ್ಲದವರು ಹಾಗೆ ಮಾತನಾಡಿದರೆ ಏನೂ ಅನ್ನಿಸಲ್ಲ. ಆದರೆ ಎಲ್ಲವೂ ಗೊತ್ತಿರುವ ನಮವರೇ ಇಂತಹ ಕೆಲಸ ಮಾಡಿದಾಗ ನೋವಾಗುತ್ತೆ ಎಂದಿದ್ದರು. ಇದಕ್ಕೆ ಖುದ್ದು ಹರ್ಷ ಅವರೇ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಸ್ಪಷ್ಟನೆ ಕೊಟ್ಟಿದ್ದಾರೆ.

    ನಾನು ಮತ್ತು ತನಿಷಾ ಒಳ್ಳೆಯ ಸ್ನೇಹಿತರು. ಯುಟ್ಯೂಬರ್ ವೈರಲ್ ವೀಡಿಯೋಗೆ ಪ್ರತಿಕ್ರಿಯಿಸಿ, ನಾನು ಸಂದೇಶ ಕಳಿಸಿದ್ದು ನಿಜ. ಆದರೆ ಯಾವುದೇ ಕೆಟ್ಟ ಆಲೋಚನೆಯಿಂದ ಅಲ್ಲ. ಬ್ಲೂಫಿಲ್ಮ್ ಮಾಡ್ತೀರಾ ಎಂದು ಆ ಯುಟ್ಯೂಬರ್ ಹೀಗ್ಯಾಕೆ ಕೇಳಿದ್ದರು ಎಂದು ಪ್ರಶ್ನೆ ಮಾಡುವ ರೀತಿಯಲ್ಲಿ ನಗುವಿನ ಇಮೋಜಿ ಕಳುಹಿಸಿದೆ ಅಷ್ಟೇ. ಆ ಸಂದೇಶವೇ ಈ ಗೊಂದಲಕ್ಕೆ ಕಾರಣವಾಗಿದೆ. ಅನ್ಯತಾ ಭಾವಿಸಬಾರದು ಎಂದು ಮತ್ತೆ ವಾಯ್ಸ್ ನೋಟ್ ಕಳುಹಿಸಿದ್ದೀನಿ. ಯುಟ್ಯೂಬರ್ ಯಾಕೆ ಹೀಗೆ ಪ್ರಶ್ನೆ ಮಾಡಿದ್ದರು ಎಂದು ಕೇಳಿದ್ದೀನಿ. ಅದು ಬಿಟ್ಟು ನೀಲಿ ಸಿನಿಮಾದಲ್ಲಿ ಆಕ್ಟ್ ಮಾಡ್ತೀರಾ ಎಂದು ನಾನು ಪ್ರಶ್ನೆ ಮಾಡಿಲ್ಲ. ಎಲ್ಲವೂ ನಾವು ಅರ್ಥ ಮಾಡಿಕೊಳ್ಳುವ ದೃಷ್ಟಿಕೋನದಲ್ಲಿದೆ ಎಂದಿರುವ ಹರ್ಷ, ಇದೀಗ ಅವರ ಸಿನಿಮಾ ರಿಲೀಸ್ಗೆ ರೆಡಿಯಿದೆ. ಪ್ರಚಾರಕ್ಕಾಗಿ ಹೀಗೆಲ್ಲಾ ಮಾಡುತ್ತಿದ್ದಾರೆನಟಿಯಾಗಿ ಬೋಲ್ಡ್ ಸಿನಿಮಾದಲ್ಲಿ ನಟಿಸಿದ ಮೇಲೆ ಬೋಲ್ಡ್ ಪ್ರಶ್ನೆಗಳನ್ನ ಕೂಡ ಎದುರಿಸಲು ರೆಡಿಯಾಗಿಬೇಕು ಎಂದು ಹರ್ಷ ಮಾತನಾಡಿದ್ದಾರೆ.

  • ಬೋಲ್ಡ್ ನಟಿಯರನ್ನು ಇನ್ನೂ `ಅದೇ ಥರ’ ನೋಡ್ತಿದ್ದಾರಾ ಜನ..?

    ಬೋಲ್ಡ್ ನಟಿಯರನ್ನು ಇನ್ನೂ `ಅದೇ ಥರ’ ನೋಡ್ತಿದ್ದಾರಾ ಜನ..?

    ಬೋಲ್ಡ್ ಆಗಿ ನಟಿಸುತ್ತಾರೆ ಎಂದರೆ ಅವರು ಎಲ್ಲದಕ್ಕೂ ಸಿದ್ಧರಿರುತ್ತಾರೆ ಅನ್ನೋ ಭಾವನೆ ಒಂದು ಕಾಲದಲ್ಲಿ ಇತ್ತು. ಕನ್ನಡದಲ್ಲಿ ಮೊದಲ ಬಾರಿ ಸ್ವಿಮ್ ಸೂಟ್ ಹಾಕಿದ್ದ ಜಯಂತಿವರಿಂದ ಹಿಡಿದು, ಇತ್ತೀಚಿನ ಹಲವು ನಟಿಯರವರೆಗೆ ಇಂತಹ ಪ್ರಾಬ್ಲಂ ಫೇಸ್ ಮಾಡಿದ್ದವರೇ. ಡಬಲ್ ಮೀನಿಂಗ್ ಡೈಲಾಗ್ ಹೊಡೆಯೋವ್ರನ್ನ ಹಾಗೂ ಚಿತ್ರದಲ್ಲಿ ಕಿಸ್ಸಿಂಗ್, ಬೆಡ್ ರೂಂ ಸೀನುಗಳಲ್ಲಿ ನಟಿಸುವವರನ್ನ ಕೆಲವರು ನೋಡುವ ದೃಷ್ಟಿಯೇ ಬೇರೆ. ಈ ಅನುಭವ ಪೆಂಟಗನ್ ಚಿತ್ರದ ತನಿಷಾ ಕುಪ್ಪಂಡ ಅವರಿಗೂ ಆಗಿದೆ.

    ಏಪ್ರಿಲ್ 7ರಂದು ರಿಲೀಸ್ ಆಗುತ್ತಿರುವ ಪೆಂಟಗನ್ ಚಿತ್ರದಲ್ಲಿ ತನಿಷಾ ಕುಪ್ಪಂಡ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಹನಿ ಟ್ರ್ಯಾಪ್ ಕಥೆಯಲ್ಲಿ ಬರುವ ಸೀನ್‍ಗಳಲ್ಲಿ ಕಿಸ್ಸಿಂಗ್ ಸೀನ್ ಇದೆ. ಬೆಡ್ ರೂಂ ದೃಶ್ಯಗಳಿವೆ. ಜೊತೆಗೆ ಬ್ಯಾಕ್ ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. ರಿಲೀಸ್ ಹತ್ತಿರವಾಗಿರೋ ಕಾರಣ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ ಚಿತ್ರತಂಡ. ಈ ವೇಳೆ ತನಿಷಾ ಕುಪ್ಪಂಡ ಅವರಿಗೆ ಯೂಟ್ಯೂಬರ್ ಒಬ್ಬ ಪ್ರಶ್ನೆ ಕೇಳಿದ್ದಾನೆ. ನೀವು ಬ್ಲೂಫಿಲ್ಮ್`ನಲ್ಲಿ ನಟಿಸೋಕೆ ಸಿದ್ಧರಿದ್ದೀರಾ ಎನ್ನುವುದು ಈತನ ಪ್ರಶ್ನೆ. ತನಿಷಾ ಕೆಂಡಾಮಂಡಲವಾಗಿ ಹೋಗಿದ್ದಾರೆ.

    ಹಾಗಿದ್ರೆ ನಾನು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇರಬಾರದಿತ್ತು. ನೀಲಿ ಸಿನಿಮಾ ಇಂಡಸ್ಟ್ರಿಯಲ್ಲೇ ಇರಬೇಕಿತ್ತು. ಬೋಲ್ಡ್ ಆಗಿ ನಟಿಸಿದ್ದೀವಿ ಅಂದ ಮಾತ್ರಕ್ಕೆ.. ಈ ತರಹ ಪ್ರಶ್ನೆ ಕೇಳೋದ್ರಲ್ಲಿ ಅರ್ಥವೇ ಇಲ್ಲ. ನೀಲಿ ಚಿತ್ರದ ತಾರೆಯರು ಬೆತ್ತಲಾಗುತ್ತಾರೆ. ನಾನು ನೀಲಿ ಚಿತ್ರದ ತಾರೆಯಲ್ಲ. ಯಾಕೆ ಈ ರೀತಿ ಪ್ರಶ್ನೆ ಮಾಡ್ತಿದ್ದೀರಾ.? ಪ್ರಶ್ನೆ ಮಾಡೋಕೂ ಮುನ್ನ ನಿಮಗೆ ಕಾಮನ್ ಸೆನ್ಸ್ ಇರಬೇಕು. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಯಾರು ಬೆತ್ತಲೆ ಸಿನಿಮಾ ಮಾಡ್ತಿದ್ದಾರೆ? ಯಾಕೆ ಈ ರೀತಿ ಅಸಭ್ಯವಾಗಿ ಪ್ರಶ್ನೆಯನ್ನ ಕೇಳುತ್ತಿದ್ದೀರಾ?

    ಎಂದು ಹೇಳಿ ಸಂದರ್ಶನದಿಂದ ಎದ್ದು ಹೋಗಿದ್ದಾರೆ ತನಿಷಾ. ಇಡೀ ಪೆಂಟಗನ್ ಚಿತ್ರತಂಡ, ಯೂಟ್ಯೂಬರ್`ನನ್ನು ತರಾಟೆಗೆ ತೆಗೆದುಕೊಂಡಿದೆ. ಅಂದಹಾಗೆ ಇದು ಗುರು ದೇಶಪಾಂಡೆ ನಿರ್ಮಾಣದ ಸಿನಿಮಾ. ಐವರು ನಿರ್ದೇಶಕರು, ಐದು ಕಥೆಗಳಿರೋ ಚಿತ್ರದಲ್ಲಿ ಒಂದು ಚಿತ್ರದಲ್ಲಿ ಹನಿ ಟ್ರ್ಯಾಪ್ ಸ್ಟೋರಿ ಇದೆ. ಆ ಸ್ಟೋರಿ ಇರೋ ಚಿತ್ರದ ದೃಶ್ಯವನ್ನೇ ಆ ಯೂಟ್ಯೂಬರ್ ಅಂತಹ ಪ್ರಶ್ನೆ ಕೇಳಿರುವುದು. ಸಾಮಾಜಿಕ ಜಾಲತಾಣದಲ್ಲಿ ಆಗುವ ಮೋಸ, ಅಪರಾಧ, ಯುವ ಪೀಳಿಗೆಯ ಭವಿಷ್ಯದ ಕುರಿತು ಬೆಳಕು ಚೆಲ್ಲುವ ಸಿನಿಮಾ ಪೆಂಟಗನ್. ಈ ಚಿತ್ರದಲ್ಲಿ ಕಾಮನಬಿಲ್ಲು.. ಹಾಡಿನಲ್ಲಿ ತನಿಷಾ ಕುಪ್ಪಂಡ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ರಾಘು ಶಿವಮೊಗ್ಗ ನಿರ್ದೇಶನದ ಕಥೆಯಲ್ಲಿ ತನಿಷಾ ಕುಪ್ಪಂಡ ನಟಿಸಿದ್ದಾರೆ.

  • ರಾಜಾಹುಲಿ ಹರ್ಷ ಪೆಂಟಗನ್ ನಾಯಕಿಗೆ ಆ ರೀತಿ ಮೆಸೇಜ್ ಕಳಿಸಿದ್ರಾ..?

    ರಾಜಾಹುಲಿ ಹರ್ಷ ಪೆಂಟಗನ್ ನಾಯಕಿಗೆ ಆ ರೀತಿ ಮೆಸೇಜ್ ಕಳಿಸಿದ್ರಾ..?

    ನೀವು ಬ್ಲೂಫಿಲಂನಲ್ಲಿ ನಟಿಸ್ತೀರಾ..? ಬೆತ್ತಲೆ ಚಿತ್ರಗಳಲ್ಲಿ ಆಕ್ಟ್ ಮಾಡ್ತೀರಾ..? ಪೆಂಟಗನ್ ಚಿತ್ರದ ನಾಯಕಿ ತನಿಷಾ ಕುಪ್ಪಂಡ ಅವರಿಗೆ  ಈ ಪ್ರಶ್ನೆ ಕೇಳಿ ಯೂಟ್ಯುಬರ್ ಒಬ್ಬ ಫೇಮಸ್ ಆಗಿದ್ದಾನೆ. ಆದರೆ ಆತ ಅಷ್ಟೇ ಅಲ್ಲ, ಈ ಸುದ್ದಿ ವೈರಲ್ ಆದ ನಂತರ ರಾಜಾಹುಲಿ ಖ್ಯಾತಿಯ ಹರ್ಷ ಕೂಡಾ ಇದೇ ರೀತಿ ಎಡವಟ್ಟು ಮಾಡಿದ್ದಾರೆ ಅನ್ನೋದು ತನಿಷಾ ಆರೋಪ.

     ಅವನಾದರೂ ಹೊರಗಿನವರು, ಅವನಿಂದಾಗಿ ಈಗ ನಮ್ಮವರೇ ನನ್ನನ್ನು ಕೆಟ್ಟದಾಗಿ ನೋಡುವಂತಾಗಿದೆ. ಸಹನಟನೇ ಒಬ್ಬ ನನ್ನನ್ನು ಬ್ಲೂ ಫಿಲಂನಲ್ಲಿ ನಟಿಸುತ್ತೀಯಾ ಎಂದು ಕೇಳಿ ಮೆಸೇಜ್ ಮಾಡಿದ್ದಾನೆ ಎಂದು ಕಣ್ಣೀರು ಹಾಕಿದ್ದಾರೆ ತನಿಷಾ. ಆತ ಯಾರು ಎಂದು ಒತ್ತಾಯ ಮಾಡಿದ ಮೇಲೆ ಆತ ರಾಜಾಹುಲಿ ಹರ್ಷ ಎಂದಿದ್ದಾರೆ ತನಿಷಾ.  ಇನ್ಸ್ಟಾಗ್ರಾಂನಲ್ಲಿ ನಾನು ಹಾಕಿದ್ದ ಸ್ಟೋರಿಗೆ ಪ್ರತಿಕ್ರಿಯೆ ನೀಡಿ, ಬ್ಲೂ ಫಿಲಂನಲ್ಲಿ ನಟಿಸಿದ್ದೀಯ ಎಂದು ಮೆಸೇಜ್ ಮಾಡಿದ್ದಾನೆ, ಅದಕ್ಕೆ ಸ್ಮೈಲಿ ಇಮೇಜು ಬೇರೆ ಹಾಕಿದ್ದಾನೆ. ನಾನು ಗೆಳೆಯರು ಎಂದುಕೊಂಡವರೇ ಹೀಗೆ ಕೀಳಾಗಿ ನೋಡುತ್ತಿದ್ದಾರೆ ಎಂದು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

    ನಟಿ ತನಿಷಾ, ಪೆಂಟಗನ್ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಕಾಮನಬಿಲ್ಲು ಹೆಸರಿನ ಹಾಡೊಂದು ಯೂಟ್ಯೂಬ್ನಲ್ಲಿ ಬಿಡುಗಡೆ ಆಗಿದ್ದು, ಹಾಡಿನಲ್ಲಿ ಸಖತ್ ಬೋಲ್ಡ್ ಆಗಿ ನಟಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಗುರು ದೇಶಪಾಂಡೆ ನಿರ್ಮಾಪಕರು. ರಾಜಾಹುಲಿ ಚಿತ್ರಕ್ಕೂ ಅವರೇ ಡೈರೆಕ್ಟರ್ ಆಗಿದ್ದರು. ಯಶ್ ಅವರನ್ನು ಸ್ಟಾರ್ ಪಟ್ಟಕ್ಕೇರಿದ ಚಿತ್ರ ರಾಜಾಹುಲಿ. ಆ ಚಿತ್ರದಲ್ಲಿ ನಟಿಸಿದ್ದ ಹರ್ಷ ಅವರಿಗೆ ರಾಜಾಹುಲಿ ದೊಡ್ಡ ಹೆಸರು ತಂದುಕೊಟ್ಟಿತ್ತು.

    ಇದು ದೇವರಾಣೆಗೂ ಪಬ್ಲಿಸಿಟಿ ಗಿಮಿಕ್ ಅಲ್ಲ. ಅವನನ್ನು ಪ್ರೆಸ್ ಮೀಟ್ಗೆ ಕರೆದವರು ಯಾರೆಂಬುದು ಸಹ ನನಗೆ ಗೊತ್ತಿಲ್ಲ. ನೆಗೆಟಿವ್ ಪ್ರಚಾರದಿಂದ ಸಿನಿಮಾ ಹೆಸರು ಕೆಲವರಿಗೆ ಗೊತ್ತಾಗಬಹುದಷ್ಟೆ ಸಿನಿಮಾ ಚೆನ್ನಾಗಿದ್ದರಷ್ಟೆ ಅದು ಓಡಲು ಸಾಧ್ಯ. ಬೋಲ್ಡ್ ಆಗಿ ನಟಿಸಿದ್ದಾರೆಂದು ಹೇಗೆಂದರೆ ಹಾಗೆ ಪ್ರಶ್ನೆ ಕೇಳಿರುವ ಆತ ಅದೇ ಹಾಡಿನಲ್ಲಿ ಒಬ್ಬ ಯುವಕನೂ ನಟಿಸಿದ್ದಾನೆ ಅವನನ್ನು ಯಾಕೆ ಅದೇ ಪ್ರಶ್ನೆ ಕೇಳಿಲ್ಲ ಎಂದು ಪ್ರಶ್ನಿಸಿದ್ದಾರೆ ಆ ಕಥೆಯ ಡೈರೆಕ್ಟರ್ ರಘು ಶಿವಮೊಗ್ಗ.

    ಪೆಂಟಗನ್ ಇದೇ ಏಪ್ರಿಲ್ 7ರಂದು ರಿಲೀಸ್ ಆಗುತ್ತಿದೆ.