` spooky college, - chitraloka.com | Kannada Movie News, Reviews | Image

spooky college,

  • First Look Of 'Spooky College' Released

    First Look Of 'Spooky College' Released

    Producer H K Prakash who had earlier produced 'Rangitaranga' and co-produced 'Avane Srimannarayana' is back with a new film called 'Spooky College'. Prakash is producing the film under his Sridevi Entertainers banner.

    As the title itself suggests, 'Spooky College' is a horror comedy set in a college. Khushi of 'Diya' fame is the heroine, while Vivek Simha who had acted in 'Premier Padmini' has been roped in as the hero. Apart from that, Vijay Chendur, Prakash Belawadi, Hanumanthegowda and others play prominent roles in the film.

    One of the highlights is, the film will be shot in a historical 103 years old college in Dharwad. The college also plays a prominent role in the film. 

    Bharath G is making his debut as a director through this film. He himself has scripted the film apart from directing it. Manohar Joshi is the camerman, while Ajaneesh Lokanath is the music composer. 

  • Spooky College Movie Review, Chitraloka Rating 3.5/5

    Spooky College Movie Review, Chitraloka Rating 3.5/5

    Film: Spooky College

    Director: Bharath G

    Cast: Kushee Ravi, Vivek Simha, KS Sridhar, Ashwin Hassan, Hanumanthe Gowda, Vijay Chendur, MK Matha

    Duration: 133 minutes

    Language: Kannada

    Platform: Theatres

    A founder who abhors even the thought of love on the campus is spoilsport enough. What if he is a ghost lurking in the college just to take anyone with romance on the mind to task? That’s Spooky College for you. Ghost Norway Michael Haydem holding fort at the St.Norway’s Engineering College where a hundred years ago he had founded an institution for orphans. Enter our lady Kushi (Kushee Ravi), who returns to college after a break just to leave behind her troubles. But she steps into a bigger trouble as the events unfolding in the college seems to have her mark all over them.

    Director Bharath G, who has also written the script tries hard in the first half to create doubts and confusion in the minds of the audience. There seems to be two separate stories happening in parallel. One is of Kushi who is exorcising the ghosts in her mind with the help of Rishi (Vivek Simha). The second is of the strange deaths that begin to occur in the campus right after Kushi returns. Are the two related is the question that keeps haunting the audience throughout. The story provides an answer only in the end and till then you keep playing the guessing game.

    There is depth in the story. There is a good background to the place and why it is haunted. Second the protagonist Kushi’s has a dark past which she has to come to terms with but has no one to share with. There are stock characters in the film including the exorcist and the police, but they are placed in a manner which furthers the story’s intention. All the tricks of a scary story are utilized well in Spooky College.

    The director has a good cast, a good location and a good team of technicians who have executed it. The BGM and editing give the film an edge. The film is a stock horror film that uses every cliché. But it is the manner in which they are sequenced that makes it special. If you enjoy horror films and get the thrill out of getting scared, this is just the right film for you to cuddle up in the cold weather.

  • ಕಾಲೇಜ್ ಸ್ಟೂಡೆಂಟ್ ಆಗಿ ಹೇಗಿದ್ದಾರೆ ಖುಷಿ..?

    ಕಾಲೇಜ್ ಸ್ಟೂಡೆಂಟ್ ಆಗಿ ಹೇಗಿದ್ದಾರೆ ಖುಷಿ..?

    ದಿಯಾ ಚಿತ್ರದ ಪಾತ್ರ ನೋಡಿದವರಿಗೆ ಇದು ಕಂಪ್ಲೀಟ್ ಹೊಸದು. ಅಲ್ಲಿಯ ಒಂದೇ ಒಂದು ಶೇಡ್ ಕೂಡಾ ಈ ಪಾತ್ರದಲ್ಲಿ ಇಲ್ಲ. ಇಲ್ಲಿ ಗ್ಲಾಮರಸ್ ಆಗಿದ್ದೇನೆ. ಸ್ಟೂಡೆಂಟ್ ಪಾತ್ರದಲ್ಲಿ ನಟಿಸಿದ್ದೇನೆ. ದಿಯಾ ನೋಡಿದ ನಂತರ ಪ್ರೇಕ್ಷಕರು ನನ್ನಿಂದ ಏನೋ ಹೊಸದು ಬಯಸುತ್ತಿದ್ದಾರೆ ಎನ್ನಿಸಿತು. ಹೀಗಾಗಿಯೇ ಹಲವು ಕಥೆ ಕೇಳಿದೆ. ಯಾವುದೂ ಎಕ್ಸೈಟ್ ಎನಿಸಲಿಲ್ಲ. ಸ್ಪೂಕಿ ಕಾಲೇಜ್ ಒಪ್ಪಿಕೊಂಡೆ. ಖಂಡಿತಾ ಸಿನಿಮಾ ನೋಡಿದವರು ಥ್ರಿಲ್ ಆಗುತ್ತಾರೆ.. ಸಿನಿಮಾ ಬಗ್ಗೆ ನಿರರ್ಗಳವಾಗಿ ಮಾತನಾಡುತ್ತಾ ಹೋಗುತ್ತಾರೆ ಖುಷಿ.

    ನಾನು ರಂಗಿತರಂಗ ನೋಡಿದೆ. ಅಂತಾದ್ದೊಂದು ಟೀಂ ಜೊತೆ ಕೆಲಸ ಮಾಡಬೇಕು ಎಂದುಕೊಳ್ಳುತ್ತಿದ್ದೆ. ಹಾಗೆ ನಾನು ರಂಗಿತರಂಗ ನೋಡಿ ಈ ರೀತಿ ಅಂದುಕೊಂಡ ವಾರದಲ್ಲೇ ರಂಗಿತರಂಗ ಚಿತ್ರದ ಪ್ರೊಡ್ಯೂಸರ್ ಕಾಲ್ ಮಾಡಿದರು. ಚಿತ್ರದ ನರೇಷನ್ ಕೇಳಿದೆ. ಇಷ್ಟವಾಯಿತು ಎನ್ನುವ ಖುಷಿ, ಸ್ಕ್ರಿಪ್ಟ್ ನೋಡಿ ಚಿತ್ರಗಳನ್ನು ಸೆಲೆಕ್ಟ್ ಮಾಡುತ್ತೇನೆ ಎನ್ನುವ ವರ್ಗಕ್ಕೆ ಸೇರಿದವರು.

    ವಿವೇಕ್ ಸಿಂಹ ಹೀರೋ ಆಗಿರುವ ಚಿತ್ರ ಇದು. ಅವರೊಂದಿಗೆ ಕೆಲಸ ಮಾಡಿದ್ದು ಒಳ್ಳೆಯ ಅನುಭವ. ಅವರೊಬ್ಬ ಒಳ್ಳೆಯ ಕೋ-ಸ್ಟಾರ್. ನನಗಂತೂ ದಿಯಾ ಚಿತ್ರದಂತೆಯೇ ಈ ಚಿತ್ರವೂ ಹೆಸರು ತಂದುಕೊಡುವ ನಿರೀಕ್ಷೆ ಇದೆ ಎನ್ನ್ನುತ್ತಾರೆ. ಚಿತ್ರದ ಸೌಂಡಿಂಗ್ ಎಫೆಕ್ಟ್, ಅದು ಸೃಷ್ಟಿಸುವ ಆತಂಕ ಅನುಭವಿಸೋಕೆ ಚಿತ್ರವನ್ನು ಥಿಯೇಟರಿನಲ್ಲೇ ನೋಡಬೇಕು ಎನ್ನುವ ಖುಷಿಗೆ ಯಾವುದೇ ಪ್ಯಾರಾನಾರ್ಮಲ್ ಅನುಭವ ಆಗಲಿಲ್ಲವಂತೆ.

    ಇಂತಹ ಚಿತ್ರಗಳನ್ನು ಮಾಡುವಾಗ ಕೆಲವು ಪ್ಯಾರಾನಾರ್ಮಲ್ ಚಟುವಟಿಕೆ ನಡೆಯುತ್ತಿರುತ್ತವೆ ಎಂದು ಕೇಳಿದ್ದೇನೆ. ಆದರೆ ನನಗೇನೂ ಅಂತಹ ಅನುಭವ ಆಗಲಿಲ್ಲ. ಆದರೆ ಒಂದು ನೆಗೆಟಿವ್ ಫೀಲ್ ಆಗಿದ್ದಂತೂ ನಿಜ. ಚಿತ್ರೀಕರಣವಾಗಿದ್ದು 103 ವರ್ಷ ಹಳೆಯ ಕಾಲೇಜ್ ಕಟ್ಟಡವೊಂದರಲ್ಲಿ. ಅಲ್ಲಿಯ ಖಾಲಿ ಕಾರಿಡಾರುಗಳಲ್ಲಿ ಓಡಾಡುವಾಗ ಬೇಡವೆಂದರೂ ಅಂತಹ ಫೀಲ್ ಆಗಿವೆ ಎನ್ನುತ್ತಾರೆ. ಸ್ಪೂಕಿ ಕಾಲೇಜ್ ಇದೇ ವಾರ ಥಿಯೇಟರಿಗೆ ಎಂಟ್ರಿ ಕೊಡುತ್ತಿದೆ. ಹೆದರುವುದಕ್ಕೆ ಸಿದ್ಧರಾಗಿ.

  • ಚಿತ್ರಮಂದಿರಕ್ಕೆ ಭಯಾನಕ ಕಾಲೇಜ್ ಎಂಟ್ರಿ

    ಚಿತ್ರಮಂದಿರಕ್ಕೆ ಭಯಾನಕ ಕಾಲೇಜ್ ಎಂಟ್ರಿ

    ಸ್ಪೂಕಿ ಎಂದರೆ ಭಯಾನಕ ಎಂದರ್ಥ. ಸ್ಪೂಕಿ ಅನ್ನೋ ಪದ ಇದುವರೆಗೆ ಬಳಕೆ ಆಗಿರಲಿಲ್ಲ. ನಮ್ಮದು ಹಾರರ್ ಚಿತ್ರವಾದ್ದರಿಂದ ಈ ಟೈಟಲ್ ಚೆನ್ನಾಗಿ ಒಪ್ಪುತ್ತೆ ಎನ್ನುವ ಖುಷಿ ರವಿಯೇ ಸ್ಪೂಕಿ ಕಾಲೇಜ್ ಚಿತ್ರದ ಸ್ಟಾರ್ ಅಟ್ಟ್ರಾಕ್ಷನ್. ಚಿತ್ರದ ಹೀರೋ ಆಗಿರುವ ವಿವೇಕ್ ಸಿಂಹ ಅವರಿಗೆ ನಾಯಕನಾಗಿ ಇದು ದೊಡ್ಡ ಪ್ರಯತ್ನ. ಆದರೆ ಚಿತ್ರದಲ್ಲಿನ ಅವರ ಪಾತ್ರಕ್ಕೆ, ಅಭಿನಯಕ್ಕೆ ಇಡೀ ಚಿತ್ರತಂಡ ಖುಷಿಯಾಗಿದೆ. ಇದು ದಿಯಾಕ್ಕಿಂತ ಕಾಂಟ್ರಾಸ್ಟ್ ಇರೋ ಪಾತ್ರ. ಇಲ್ಲಿ ನನ್ನ ಪಾತ್ರಕ್ಕೊಂದು ಇತಿಹಾಸವಿದೆ. ಆ ಇತಿಹಾಸದಿಂದಲೇ ಆಕೆ ಕಾಲೇಜಿಗೆ ಬರುತ್ತಾಳೆ.ಭೂತಕಾಲದ ನೆಪದಲ್ಲಿ ವರ್ತಮಾನದ ಕಾಲೇಜಿಗೆ ಹೋಗುವ ಆಕೆ, ಭಯಾನಕ ಘಟನೆಗಳನ್ನು ಹೇಗೆ ಫೇಸ್ ಮಾಡ್ತಾಳೆ ಎನ್ನುವುದು ಕಥೆ. ಮಾಡರ್ನ್ ಹುಡುಗಿಯ ಲುಕ್ ಇದೆ. ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ. ಇಲ್ಲಿ ನಾನು ಅಳಿಸೋದಿಲ್ಲ. ಹೆದರಿಸ್ತೇನೆ ಎಂದು ಸಖತ್ ಸ್ಮೈಲ್ ಕೊಡ್ತಾರೆ ಖುಷಿ.

    ಭರತ್ ನಿರ್ದೇಶನದ ಚಿತ್ರಕ್ಕೆ ಹೆಚ್.ಕೆ.ಪ್ರಕಾಶ್ ನಿರ್ಮಾಪಕರು. ಈ ಹಿಂದೆ ರಂಗಿತರಂಗ ಹಾಗೂ ಅವನೇ ಶ್ರೀಮನ್ನಾರಾಯಣ ಚಿತ್ರಗಳಿಗೆ ಬಂಡವಾಳ ಹೂಡಿದ್ದವರು. ಈ ಬಾರಿ ಸ್ಪೂಕಿ ಕಾಲೇಜ್ ಚಿತ್ರವನ್ನು ಕೂಡಾ ಅಷ್ಟೇ ಅದ್ಧೂರಿಯಾಗಿ ತೆರೆಗೆ ತರುತ್ತಿದ್ದಾರೆ.

  • ಜನವರಿ 6ಕ್ಕೆ ಹೆದರಿ ನಡುಗುವುದಕ್ಕೆ ಸಿದ್ಧರಾಗಿ

    ಜನವರಿ 6ಕ್ಕೆ ಹೆದರಿ ನಡುಗುವುದಕ್ಕೆ ಸಿದ್ಧರಾಗಿ

    ಒಂದು ಕಾಲೇಜ್. ಆ ಕಾಲೇಜಿನಲ್ಲಿ ಏನೇನೋ ನಡೆಯುತ್ತಿದೆ. ಭಯ..ಭಯ..ಭಯ.. ಎಲ್ಲರಿಗೂ ಭಯ ಹುಟ್ಟಿಸುತ್ತಿರೋ ಆ ಕಾಲೇಜಿನಲ್ಲೊಂದು ಭಯಾನಕ ಇತಿಹಾಸವಿದೆ. ಏನೇನೋ ನಡೆಯುತ್ತಿದೆ. ಭಯವಾಗುತ್ತಿದೆ. ಆ ಎಲ್ಲ ಘಟನೆಗಳಿಗೂ.. ಆಕೆಗೂ ಏನು ಸಂಬಂಧ? ಎರಡನೇ ಮಹಾಯುದ್ಧದಿಂದ ಶುರುವಾಗುವ ಕಥೆ.. ಇಲ್ಲಿಯವರೆಗೂ ನಡೆದುಕೊಂಡು ಬರುತ್ತೆ. ಆತ ಸತ್ತೇ ಇರಲಿಲ್ಲವಾ? ಹಾಗೆ ಸತ್ತು ಹೋದ ಅವನು ಈಗ ಏಕೆ ಕಾಡುತ್ತಿದ್ದಾನೆ. ಆಕೆ ಬಂದ ಮೇಲೇ ಅದು ಏಕೆ ಶುರುವಾಯ್ತು...

    ಟ್ರೇಲರ್ ನೋಡಿದವರಿಗೆ ಎದೆಯೊಳಗೆ ಅವಲಕ್ಕಿ ಕುಟ್ಟಿದಂತಾಗುತ್ತದೆ. ನಿರ್ದೇಶಕ ಭರತ್ ಟ್ರೇಲರಿನಲ್ಲಿಯೇ ಭಯ ಹುಟ್ಟಿಸುತ್ತಿದ್ದಾರೆ. ದಿಯಾ ಖ್ಯಾತಿಯ ಖುಷಿರವಿ ನಾಯಕಿಯಾಗಿದ್ದು, ವಿವೇಕ್ ಸಿಂಹ ಹೀರೋ. ಅವನೇ ಶ್ರೀಮನ್ನಾರಾಯಣ ಹಾಗೂ ರಂಗಿತರಂಗ ಚಿತ್ರಗಳ ಖ್ಯಾತಿಯ ಪ್ರಕಾಶ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

    ಚೂರಿಕಟ್ಟೆ, ಪ್ರೀಮಿಯರ್ ಪದ್ಮಿನಿಯಲ್ಲಿ ಗಮನ ಸೆಳೆದಿದ್ದ ವಿವೇಕ್ ಸಿಂಹ ಇಲ್ಲಿ ಹೆದರಿಸೋಕೆ ಬರುತ್ತಿದ್ದಾರೆ. ದಿಯಾ ಚಿತ್ರದಲ್ಲಿ ಎಲ್ಲರಿಗೂ ಕಣ್ಣೀರು ಹಾಕಿಸಿದ್ದೆ. ಈ ಚಿತ್ರದಲ್ಲಿ ಹೆದರಿಸುತ್ತಿದ್ದೇನೆ ಎಂದು ನಗುತ್ತಲೇ ಹೇಳುತ್ತಾರೆ ಖುಷಿ ರವಿ. ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಎನ್ನುವ ಪ್ರಕಾಶ್, ಸಿನಿಮಾವನ್ನು ಜನವರಿ 6ರಂದು ರಿಲೀಸ್ ಮಾಡುತ್ತಿದ್ದಾರೆ. ಅಂದಹಾಗೆ ಚಿತ್ರದಲ್ಲಿ ಮೆಲ್ಲುಸಿರೇ ಸವಿಗಾನ.. ಹಾಡಿನ ರೀಮಿಕ್ಸ್ ಕೂಡಾ ಇದೆ. ರೀಷ್ಮಾ ನಾಣಯ್ಯ ಅವರು ಆ ಹಾಡಿನಲ್ಲಿ ನಟಿಸಿದ್ದಾರೆ.