ಸಂಪದಾ ಹುಲಿವಾನ. ಮಿಥುನ ರಾಶಿ ಅನ್ನೋ ಸೀರಿಯಲ್ಲಿನಲ್ಲಿ ಹೊಳೆಯುತ್ತಿದ್ದ ಚೆಲುವೆ. ವಿದ್ಯಾಭ್ಯಾಸಕ್ಕೆ ಬ್ರೇಕ್ ಹಾಕುತ್ತಿದೆ ಅನ್ನೋ ಕಾರಣಕ್ಕೆ ಸೀರಿಯಲ್ಲಿನಿಂದ ಹೊರಬಂದ ಸಂಪದಾ, ಮತ್ತೆ ಕಾಣಿಸಿದ್ದು ರೈಡರ್ ಚಿತ್ರದಲ್ಲಿ.
ಸೀರಿಯಲ್ಲಿನ ಅನುಭವವೇ ಬೇರೆ. ಸಿನಿಮಾ ಅನುಭವವೇ ಬೇರೆ. ಸೆಟ್ ಇರಬಹುದು, ಇಡೀ ತಂಡವೇ ಇರಬಹುದು. ಪ್ರತಿಯೊಂದೂ ದೊಡ್ಡದಾಗಿಯೇ ಇರುತ್ತೆ. ಒಂದೊಳ್ಳೆ ಟೀಂ ಜೊತೆ ಕೆಲಸ ಮಾಡಿದ ತೃಪ್ತಿ ಇದೆ ಎನ್ನುತ್ತಾರೆ ಸಂಪದಾ ಹುಲಿವಾನ.
ರೈಡರ್ ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಎದುರು ಕಾಶ್ಮೀರ ಪರದೇಸಿ ನಾಯಕಿಯಾದರೂ, ಸಂಪದಾ ಹುಲಿವಾನ ಅವರಿಗೆ ಪ್ರಮುಖ ಪಾತ್ರವಿದೆಯಂತೆ. ವಿಜಯ್ ಕುಮಾರ್ ಕೊಂಡ ನಿರ್ದೇಶನದ ಚಿತ್ರದಲ್ಲಿ ಲವ್, ಆ್ಯಕ್ಷನ್, ಸಸ್ಪೆನ್ಸ್ ಮತ್ತು ಥ್ರಿಲ್ ಎಲ್ಲವೂ ಹದವಾಗಿ ಬೆರೆತಿರೋ ಸುಳಿವು ಟ್ರೇಲರಿನಲ್ಲಿ ಸಿಕ್ಕಿದೆ. ವೇಯ್ಟ್.