ಲವ್ ಯೂ ರಚ್ಚು ಈ ವರ್ಷದ ಕೊನೆಯಲ್ಲಿ ರಿಲೀಸ್ ಆಗುತ್ತಿರೋ ಸಿನಿಮಾ. ರಚಿತಾ ರಾಮ್, ಅಜೇಯ್ ರಾವ್ ಪ್ರಧಾನ ಪಾತ್ರದಲ್ಲಿರೋ ಸಿನಿಮಾ ಈಗಾಗಲೇ ಹಾಡುಗಳ ಮೂಲಕ ಪಡ್ಡೆಗಳನ್ನು ರೊಚ್ಚಿಗೆಬ್ಬಿಸಿರೋ ಚಿತ್ರ. ಚಿತ್ರದ ಟ್ರೇಲರ್ ಇದೇ ಡಿಸೆಂಬರ್ 16ಕ್ಕೆ ರಿಲೀಸ್ ಆಗುತ್ತಿದೆ. ಟ್ರೇಲರ್‍ನ್ನು ನೋಡಿದವರು ಶಹಬ್ಬಾಸ್ ಎನ್ನುತ್ತಿದ್ದಾರೆ.
ನಿರ್ದೇಶಕ ಎಂ.ಡಿ.ಶ್ರೀಧರ್ : ನಿರ್ದೇಶಕರು ಹೊಸಬರಾದರೂ ಚೆನ್ನಾಗಿ ಮಾಡಿದ್ದಾರೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ.
ಆರ್.ಚಂದ್ರು : ಗುರು ದೇಶಪಾಂಡೆ, ಒಳ್ಳೆಯ ಅಭಿರುಚಿ ಇರುವ ನಿರ್ದೇಶಕರು. ಈ ಚಿತ್ರಕ್ಕೆ ನಿರ್ಮಾಪಕರಾಗಿ ಇನ್ನೊಬ್ಬರಿಗೆ ನಿರ್ದೇಶನ ಕೊಟ್ಟಿದ್ದಾರೆ. ಇಡೀ ಚಿತ್ರ ತಂಡಕ್ಕೆ ಒಳ್ಳೆಯದಾಗಲಿ.
ಎನ್.ಮಹೇಶ್ ಕುಮಾರ್ : ಟೈಟಲ್ ನೋಡಿ ಕೇವಲ ಲವ್ ಸ್ಟೋರಿ ಅಂದುಕೊಳ್ಳಬೇಡಿ. ಚಿತ್ರದಲ್ಲಿ ಆ್ಯಕ್ಷನ್, ಥ್ರಿಲ್ ಎಲ್ಲವೂ ಇದೆ. ನಿರ್ದೇಶಕರಿಗೆ ಏನು ಹೇಳಬೇಕು ಅನ್ನೋ ಕ್ಲಾರಿಟಿ ಇದೆ. ಟ್ರೇಲರ್ ಸಖತ್ತಾಗಿದೆ.
ನಂದ ಕಿಶೋರ್ : ನಿರ್ದೇಶಕರು ಹೊಸಬರು. ಆದರೆ ಟ್ರೇಲರ್ ನೋಡಿದರೆ ಹಾಗೆ ಅನ್ನಿಸೋದಿಲ್ಲ. ಟ್ರೇಲರ್ ತುಂಬಾ ಚೆನ್ನಾಗಿದೆ. ಸಿನಿಮಾ ಕೂಡಾ ಅಷ್ಟೇ ಚೆನ್ನಾಗಿರಲಿದೆ ಅನ್ನೋ ನಿರೀಕ್ಷೆ ಇದೆ...
ಹೀಗೆ ಚಿತ್ರದ ಟ್ರೇಲರ್ ನೋಡಿದ ನಿರ್ದೇಶಕರೆಲ್ಲ ಚಿತ್ರದ ಬಗ್ಗೆ ಒಳ್ಳೊಳ್ಳೆ ಮಾತನಾಡುತ್ತಿದ್ದಾರೆ. ರಚಿತಾ ರಾಮ್ ಅಭಿನಯಕ್ಕೆ ಹೆಚ್ಚು ಮಾಕ್ರ್ಸ್ ಬೀಳುತ್ತಿವೆ. ಶಂಕರ್ ಎಸ್.ರಾಜ್ ನಿರ್ದೇಶನದ ಮೊದಲ ಚಿತ್ರವಿದು. ವೇಯ್ಟ್.. ವೇಯ್ಟ್.. ವೇಯ್ಟ್..