` ajai rao, - chitraloka.com | Kannada Movie News, Reviews | Image

ajai rao,

 • Power Star Releases Video Of Thayige Thakka Maga Title Track

  power star releases the title video of thayige thakka maga

  With just few days to go for the grand release of director and producer Shashank's 'Thayige Thakka Maga’ starring Krishna Ajai Rao in his 25th film, Power Star Puneeth Rajkumar has released its video of the title track.Penned by Shashank himself, the title track composed by Judah Sandy is sung by Kannada rapper Chandan Shetty. 

  While releasing the video song, Puneeth Rajkumar has expressed his excitement saying that the title of the film is very special to him as it reminds him of his legendary father Dr. Rajkumar. The hit combination of Shashank and Ajai Rao is hoping for a hat trick after Krishnan Love Story and Krishna Leela. 

  Produced under Shashank Cinemass banner, the action thriller packed with motherly sentiment stars Mrs Sumalatha Ambareesh in a special role along with Ajai Rao, Ashika Ranganath and others. Watch the video on Anand Audio official channel on YouTube.

 • Rainbow' To Be Launched On Varamahalakshmi Festival

  rainbow will be launched tomorrow

  Ajay Rao's new film, which has been titled as 'Rainbow -  Colours of Crime' is all set to be launched at the Maha Ganapathi Temple in Basaveshwara Nagar. The 

  As the title itself suggests, the film is a crime thriller. The story and screenplay of the film is jointly written by Guru Deshpande, S Rajavardhan, Joe George and Jadesh Kumar. Actress Manvitha Harish has been roped in as the heroine of the film. The song recording has already started and countdown has started for the film's launch.

  The film is being produced by Guru Deshpande under his G Cinemas banner. S Rajavardhan makes his debut as a director. Emil is the music director. The shooting for the film will commence soon. Chandrashekhar is the cinematographer.

 • Six Films Releasing on 26th

  kannada movie images

  Like last week, this Friday (February 26th) will also be witnessing a release of total of six films. Last week Dayal's 'Actor', Sumanth Shailendra's 'Bhale Jodi', Rakshath's 'Nan Love Track', Thriller Puneeth's 'Raj Bahadur', Arjun Kapikad's 'Madhura Swapna' and Nag directed 'U/A The End' was released.

  This week A M R Ramesh's 'Game', Ajay Rao's 'Krishna Rukku', 'Preethi Kitabu', 'Whatsapp Love', 'Mareyalaare' and '400' are schedulued for a release.

  Of the six films which films will be appreciated by the audience is yet to be seen.

 • ಅಜಯ್ ರಾವ್ ಕೈಮೇಲೆ ಸುಮಲತಾ ಹಚ್ಚೆ..!

  sumalatha's tattoo on ajai rao's arms

  ನಟ ಅಜಯ್ ರಾವ್ ಅವರ ಕೈಮೇಲೆ ಸುಮಲತಾ ಹಚ್ಚೆ ಪ್ರತ್ಯಕ್ಷವಾಗಿದೆ. ಹಚ್ಚೆಯೆಂದರೆ ಹೆಸರೂ ಅಲ್ಲ, ಸುಮಲತಾ ಅವರ ಚಿತ್ರ. ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಸುಮಲತಾ ಅವರ ಮಗನ ಪಾತ್ರ ನಿರ್ವಹಿಸಿರುವ ಅಜಯ್ ರಾವ್, ಕೈಮೇಲೆ ತಾಯಿಯ ಚಿತ್ರವನ್ನೇ ಹಚ್ಚೆ ಹಾಕಿಸಿಕೊಂಡಿರುತ್ತಾರೆ. ಅಂದಹಾಗೆ, ಚಿತ್ರಕಥೆಯಲ್ಲಿ ಆ ಟ್ಯಾಟೂ ಕೂಡಾ ಪ್ರಮುಖ ಪಾತ್ರ ವಹಿಸಲಿದೆಯಂತೆ.

  ಶಶಾಂಕ್ ನಿರ್ಮಾಣ ಮತ್ತು ನಿರ್ದೇಶನದ ಚಿತ್ರಕ್ಕೆ ಅಶಿಕಾ ರಂಗನಾಥ್ ನಾಯಕಿ. ಚಿತ್ರೀಕರಣವನ್ನು ಬಹುತೇಕ ಮುಗಿಸಿರುವ ಶಶಾಂಕ್, ಒಂದು ಹಾಡಿನ ಚಿತ್ರೀಕರಣವನ್ನಷ್ಟೇ ಬಾಕಿ ಉಳಿಸಿಕೊಂಡಿದ್ದಾರೆ. ತಾಯಿಯನ್ನು ಪ್ರೀತಿಸುವ ಪ್ರತಿಯೊಬ್ಬರಿಗೂ ಇದು ಕನೆಕ್ಟ್ ಆಗಲಿದೆ ಎಂದು ಹೇಳಿಕೊಂಡಿದ್ದಾರೆ ಶಶಾಂಕ್.

 • ಅಜೇಯ್ ರಾವ್ ಈ ಬಾರಿ ಕಿರಿಕ್ ಕೃಷ್ಣ 

  ajai roa in new kirik krishna

  ಅಜೇಯ್ ರಾವ್‍ಗೂ, ಕೃಷ್ಣಂಗೂ ನಂಟಿದೆ. ಅದು ಸೂಪರ್ ಹಿಟ್ ನಂಟು. ಅಜೇಯ್ ರಾವ್ ಇದುವರೆಗೆ ಕೃಷ್ಣನ್ ಲವ್ ಸ್ಟೋರಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ, ಕೃಷ್ಣಲೀಲಾ ಚಿತ್ರಗಳಲ್ಲಿ ನಟಿಸಿದ್ದಾರೆ. ಎಲ್ಲ ಕೃಷ್ಣನ ಸ್ಟೋರಿಗಳೂ ಸೂಪರ್ ಹಿಟ್. ಹೀಗಾಗಿಯೇ.. ಮತ್ತೊಮ್ಮೆ ಕೃಷ್ಣನಾಗುತ್ತಿದ್ದಾರೆ ಅಜೇಯ್ ರಾವ್. 

  ಕೃಷ್ಣನ್ ಕಿರಿಕ್ ಸ್ಟೋರಿ ಅನ್ನೋ ಸೆಟ್ಟೇರುವ ಸಾಧ್ಯತೆ ಇದ್ದು, ಗುರು ದೇಶಪಾಂಡೆ ನಿರ್ಮಾಪಕ. ಗುರು ದೇಶಪಾಂಡೆ ಅವರ ಜೊತೆಯಲ್ಲೇ ಸಹನಿರ್ದೇಶಕರಾಗಿದ್ದ ರಾಜವರ್ಧನ್ ಶಂಕರ್, ಈ ಚಿತ್ರದಿಂದ ನಿರ್ದೇಶಕರಾಗಿದ್ದಾರೆ.

  ಜನವರಿ 24ರಂದು ಅಜೇಯ್ ರಾವ್ ಹುಟ್ಟುಹಬ್ಬ. ಅದೇ ದಿನ ಚಿತ್ರಕ್ಕೆ ಮುಹೂರ್ತ ನಡೆಯಲಿದ್ದು, ಶೂಟಿಂಗ್ ಶುರುವಾಗಲಿದೆ.

 • ಅಜೇಯ್ ರಾವ್ ಹುಟ್ಟುಹಬ್ಬಕ್ಕೆ ಶೋಕಿವಾಲನ ಗಿಫ್ಟು

  shokilawala teaser is a gift to ajai rao's birthday

  ಅಜೇಯ್ ರಾವ್ ನಟಿಸಿರುವ ಹೊಸ ಚಿತ್ರ ಶೋಕಿವಾಲ. ಟಿ.ಆರ್.ಚಂದ್ರಶೇಖರ್ ನಿರ್ಮಾಣದ ಚಿತ್ರ, ಅಜೇಯ್ ರಾವ್ ಹುಟ್ಟುಹಬ್ಬಕ್ಕೆ ಬೊಂಬಾಟ್ ಗಿಫ್ಟ್ ಕೊಟ್ಟಿದೆ. ಅಭಿಮಾನಿಗಳು ಥ್ರಿಲ್ಲಾಗುವಂತೆ ಟೀಸರ್ ಕೊಟ್ಟಿದೆ.

  ನಿನ್ ಮಗನ್ ಬಗ್ಗೆ ಹೇಳಮ್ಮ ಅನ್ನೋ ಡೈಲಾಗ್‍ನಿಂದ ಶುರುವಾಗುತ್ತೆ ಟೀಸರ್. ಅವ್ನ್ ಬಗ್ಗೆ ಒಂದ್ ಫೋಟೋದಾಗೆ ಹೇಳಕ್ ಆಗಲ್ಲ ಸರ್, ಒಂದ್ ಆಲ್ಬಮ್ಮೇ ಬೇಕು. ಅವ್ನು ಸಪರೇಟು ಸರ್ ಅನ್ನೋ ಪಂಚ್ ಬೆನ್ನಲ್ಲೇ ಬರುತ್ತೆ.

  ಹಾರ ಬಿದ್ಮೇಲೆ ಚಪ್ಪಾಳೆನೂ ಬೀಳುತ್ತೆ. ಶಿಳ್ಳೆನೂ ಬೀಳುತ್ತೆ. ಟೈಂ ಚೇಂಜ್ ಆಯ್ತು ಗುರೂ.. ಇನ್ಮೇಲೆ ಈ ಶೋಕಿವಾಲನ ಆಟ ಶುರು.. ಡೌಟಾ.. ನೋಡೇ ಬಿಡುವಾ.. ಅಂತಾರೆ ಅಜೇಯ್.

  ಬಿ.ತಿಮ್ಮೇಗೌಡ ಅಲಿಯಾಸ್ ಜಾಕಿ ನಿರ್ದೇಶನದ ಚಿತ್ರದಲ್ಲಿ ಅಜೇಯ್ ರಾವ್ ಎದುರು ಸಂಜನಾ ಆನಂದ್ ನಾಯಕಿ.

 • ಅಜೇಯ್ ರಾವ್ ಹೊಸ ಸಿನಿಮಾ ಎಜೆಆರ್ 27

  ajai rao's next is ajr 27

  ಅಜೇಯ್ ರಾವ್ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ತಾಯಿಗೆ ತಕ್ಕ ಮಗ ಚಿತ್ರದ ನಂತರ ಅಜೇಯ್ ರಾವ್ ನಟಿಸುತ್ತಿರುವ ಈ ಸಿನಿಮಾಗೆ ಆನಂದ ಪ್ರಿಯ ನಿರ್ದೇಶಕ. ಕಾಶೀನಾಥ್ ಅವರ ಕಟ್ಟಕಡೆಯ ಚಿತ್ರ ಓಳ್ ಮುನಿಸ್ವಾಮಿ ಚಿತ್ರ ನಿರ್ದೇಶಿಸಿದ್ದ ಆನಂದ ಪ್ರಿಯ, ಅಜೇಯ್ ರಾವ್ ಅವರ ಹೊಸ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನವನ್ನೂ ಮಾಡುತ್ತಿದ್ದಾರೆ.

  ಗೋವಿಂದರಾಜ್ ಮತ್ತು ಕೃಷ್ಣಮೂರ್ತಿ ಚಿತ್ರದ ನಿರ್ಮಾಪಕರು. ಎಂದಿನಂತೆ ಶ್ರೀಧರ್ ಸಂಭ್ರಮ್ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಚಿತ್ರದ ನಾಯಕಿ ಸೇರಿದಂತೆ ಉಳಿದ ಕಲಾವಿದರು, ತಂತ್ರಜ್ಞರ ಆಯ್ಕೆ ಪ್ರಗತಿಯಲ್ಲಿದೆ.

 • ಅಜೇಯ್ ರಾವ್‍ಗೆ ಸಿಕ್ಕರು ಅದೃಷ್ಟದ ಅಮ್ಮ

  sumalatha in thayige thakka maga

  ಅಜೇಯ್ ರಾವ್ ಅಭಿನಯಿಸುತ್ತಿರುವ, ಖ್ಯಾತ ನಿರ್ದೇಶಕ ಶಶಾಂಕ್ ನಿರ್ಮಾಣದ `ತಾಯಿಗೆ ತಕ್ಕ ಮಗ' ಚಿತ್ರಕ್ಕೆ ಹೀರೋಯಿನ್ ಇನ್ನೂ ಸಿಕ್ಕಿಲ್ಲ. ಆದರೆ, ಹೀರೋಗೆ ಅಮ್ಮ ಸಿಕ್ಕಿದ್ದಾರೆ. ಅದೂ ಕೂಡಾ ಅಜೇಯ್ ರಾವ್‍ಗೆ ಅದೃಷ್ಟದ ಅಮ್ಮ ಸುಮಲತಾ. 

  ಮದುವೆಯ ನಂತರ ಹೆಚ್ಚೂ ಕಡಿಮೆ ಚಿತ್ರರಂಗದಿಂದ ದೂರವೇ ಇದ್ದ ಸುಮಲತಾ, ಸುದೀರ್ಘ ವಿರಾಮದ ನಂತರ ಎಕ್ಸ್‍ಕ್ಯೂಸ್ ಮಿ ಚಿತ್ರದಲ್ಲಿ ಅಜೇಯ್ ರಾವ್ ಅಮ್ಮನ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ಅದು ಅಜೇಯ್ ರಾವ್ ಅಭಿನಯದ ಮೊದಲ ಸಿನಿಮಾ. ಆ ಚಿತ್ರ ಸೂಪರ್ ಡ್ಯೂಪರ್ ಹಿಟ್ ಆಗಿತ್ತು. ಬ್ರಹ್ಮ ವಿಷ್ಣು ಶಿವಾ ಎದೆ ಹಾಲು ಕುಡಿದರೋ.. ಇಂದಿಗೂ ತಾಯಿಯನ್ನು ಪ್ರೀತಿಸುವ ಮಕ್ಕಳ ಪಾಲಿನ ಮೆಚ್ಚಿನ ಗೀತೆಗಳಲ್ಲೊಂದು.

  ಈಗ ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಅಜೇಯ್ ರಾವ್‍ಗೆ ಮತ್ತೆ ಅಮ್ಮನಾಗಿದ್ದಾರೆ. ಸುಮಲತಾ ಅವರು ತಮ್ಮ ಚಿತ್ರ ಒಪ್ಪಿಕೊಂಡಿದ್ದೇ ಖುಷಿಯ ಸಂಗತಿ ಎಂದು ಸಂಭ್ರಮಿಸುತ್ತಿದ್ದಾರೆ ಶಶಾಂಕ್. 

  Related Articles :-

  ತಾಯಿಗೆ ತಕ್ಕ ಮಗ ನಿರ್ದೇಶಕ ಬದಲು

  ‘ತಾಯಿಗೆ ತಕ್ಕ ಮಗ’ ಚಿತ್ರಕ್ಕೆ ಜುಡಾ ಸ್ಯಾಂಡಿ ಸಂಗೀತ

  Thayige Thakka Maga by Shashank - Exclusive

 • ಅಣ್ಣಾವ್ರು ಬಾಕ್ಸರ್ ಆಗಿದ್ದರೆ, ಈ ಮಗ ಕುಂಗ್‍ಫೂ ಫೈಟರ್

  ajai rao's kung fu fghter

  ಓಲ್ಡ್ ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಡಾ.ರಾಜ್‍ಕುಮಾರ್ ಬಾಕ್ಸರ್ ಆಗಿ ನಟಿಸಿದ್ದರು. ತಾಯಿಗೆ ಗೊತ್ತಿಲ್ಲದೆ ಬಾಕ್ಸಿಂಗ್ ರಿಂಗ್‍ಗಿಳಿಯುವ ಮಗನಾಗಿ ರಾಜ್ ಗೆದ್ದಿದ್ದರು. ಈಗ ಹೊಸ ತಾಯಿಯ ಮಗ. ಈ ಹೊಸ ತಾಯಿಗೆ ತಕ್ಕ ಮಗ  ಅಜಯ್ ರಾವ್, ಕುಂಗ್‍ಫು ಫೈಟರ್ ಆಗಿದ್ದಾರೆ. 

  ಶಶಾಂಕ್ ನಿರ್ಮಾಣ ನಿರ್ದೇಶನದ ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಸೆಂಟಿಮೆಂಟ್ ಕಥೆಯಷ್ಟೇ ಅಲ್ಲ, ಮೈ ನವಿರೇಳಿಸುವ ಸಾಹಸ ದೃಶ್ಯಗಳೂ ಇವೆ. ತಾಯಿಯಾಗಿ ಸುಮಲತಾ ನಟಿಸುತ್ತಿದ್ದಾರೆ. ನಾನಾ ವಿಶೇಷತೆಗಳಿರುವ ಚಿತ್ರದಲ್ಲಿ ಅಜಯ್ ರಾವ್, ತಾಯಿಗಾಗಿಯೇ ಕುಂಗ್‍ಫು ಕಲಿಯುತ್ತಾನೆ ಎನ್ನುವುದು ಇನ್ನಷ್ಟು ಆಸಕ್ತಿ ಕೆರಳಿಸಿದೆ.

 • ಅಮ್ಮನ ಜೊತೆ ಸೆಲ್ಫಿ ತಗೊಳ್ಳಿ.. 50,000 ರೂ. ಗೆಲ್ಲಿ

  thayige thakka maga selfie contest

  ತಾಯಿಗೆ ತಕ್ಕ ಮಗ ಚಿತ್ರ, ತಾಯಿ ಮತ್ತು ಮಕ್ಕಳಿಗಾಗಿ ವಿಶೇಷ ಸ್ಪರ್ಧೆಯೊಂದನ್ನು ಆಯೋಜಿಸಿದೆ. ನೀವು ಮಾಡಬೇಕಿರೋದು ಇಷ್ಟೆ. ನಿಮ್ಮ ತಾಯಿಯ ಜೊತೆ ಸೆಲ್ಫಿ ತಗೊಳ್ಳೋದು. ಮತ್ತು ಅದನ್ನು 7338259619 ನಂಬರ್‍ಗೆ ವಾಟ್ಸಪ್ ಮಾಡಿ. ಅಷ್ಟೆ

  ನೀವು ನಿಮ್ಮ ತಾಯಿಯ ಜೊತೆಗಿನ ಸೆಲ್ಫಿಯನ್ನು ನವೆಂಬರ್ 2ರವರೆಗೆ ಕಳಿಸಬಹುದು. ಪ್ರಶಸ್ತಿ ವಿಜೇತರಿಗೆ 50,000 ರೂ. ಬಹುಮಾನ ಇದೆ.

  ಶಶಾಂಕ್ ನಿರ್ದೇಶನದ ತಾಯಿಗೆ ತಕ್ಕ ಮಗ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಅಜೇಯ್ ರಾವ್, ಸುಮಲತಾ ಅಂಬರೀಶ್, ಆಶಿಕಾ ರಂಗನಾಥ್ ನಟಿಸಿರುವ ಸಿನಿಮಾ, ಬಿಡುಗಡೆಗೆ ಮುನ್ನವೇ ಭಾರಿ ಸದ್ದು ಮಾಡುತ್ತಿದೆ.

 • ಆಕ್ರೋಶ, ಕ್ರಾಂತಿ, ಶಾಂತಿಯ ಸಂಗಮ ತಾಯಿಗೆ ತಕ್ಕ ಮಗ

  thayige thakka maga is a complete package

  ತಾಯಿಗೆ ತಕ್ಕ ಮಗ ಚಿತ್ರದಲ್ಲೇನಿದೆ..? ಕಥೆಯಲ್ಲಿ ಅಂಥಾ ವಿಶೇಷ ಏನಿದೆ..? ಹೀಗೆ ಹುಡುಕುತ್ತಾ ಹೋದರೆ ನಾಯಕ ನಟ ಅಜಯ್ ರಾವ್ ಕನಸು ತೆರೆದುಕೊಳ್ಳುತ್ತೆ. ಬ್ರೂಸ್ ಲೀ ಸಿನಿಮಾಗಳನ್ನು ನೋಡಿ ನೋಡಿ ಕರಾಟೆ ಕಲಿತಿದ್ದ, ಅಂಬರೀಷ್, ಅಮಿತಾಬ್ ಸಿನಿಮಾಗಳನ್ನು ನೋಡಿ ಆ್ಯಂಗ್ರಿಯಂಗ್ ಮ್ಯಾನ್ ಆಗಬೇಕು ಎಂದುಕೊಂಡಿದ್ದ ಅಜಯ್ ರಾವ್‍ಗೆ ಆರಂಭದಲ್ಲಿ ಸಿಕ್ಕಿದ್ದು ಚಾಕೊಲೇಟ್ ಹೀರೋ ಪಾತ್ರಗಳು. ಈಗ ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಅವರ ಕನಸಿನ ರೋಲ್ ಸಿಕ್ಕಿದೆ.

  ಚಿತ್ರದಲ್ಲಿ ತಾಯಿ ಸುಮಲತಾ ಅವರದ್ದು ಕ್ರಾಂತಿಯಾದರೆ, ಮಗ ಅಜಯ್ ರಾವ್ ಅವರದ್ದು ಆಕ್ರೋಶ, ಆವೇಶದ ಪಾತ್ರ. ನಾಯಕಿ ಅಶಿಕಾ ರಂಗನಾಥ್ ಅವರದ್ದು ಶಾಂತಂ.. ಶಾಂತಂ. ಇವರೆಲ್ಲರ ಸಂಗಮದ ಕಥೆಯೇ ತಾಯಿಗೆ ತಕ್ಕ ಮಗ.

  ನಿರ್ದೇಶಕ ಶಶಾಂಕ್ ಸಿನಿಮಾಸ್ ಬ್ಯಾನರ್‍ನ ಮೊದಲ ಸಿನಿಮಾ ಇದು. ಅಜಯ್ ರಾವ್‍ಗೆ ಇದು 25ನೇ ಸಿನಿಮಾ. ಇಬ್ಬರ ಜೋಡಿಯೂ ಈಗಾಗಲೇ ಸತತ 2 ಹಿಟ್ ಚಿತ್ರಗಳನ್ನು ಕೊಟ್ಟಿದೆ. ಮತ್ತೊಂದು ಹಿಟ್ ನಿರೀಕ್ಷೆಯಲ್ಲಿ ಕಾಯುತ್ತಿದೆ.

 • ಈಗ.. ಇನ್ಸ್‍ಪೆಕ್ಟರ್ ಅಜೇಯ್ ರಾವ್

  ajai rao turns cop for is next film

  ಅಜೇಯ್ ರಾವ್ ಚಿತ್ರರಂಗಕ್ಕೆ ಬಂದು ದಶಕವೇ ಕಳೆದುಹೋಗಿದೆ. ಈ ದಶಕದಲ್ಲಿ ಹಲವು ವಿಭಿನ್ನ ಪಾತ್ರಗಳನ್ನು ಮಾಡಿದ್ದ ಅಜೇಯ್ ರಾವ್‍ಗೆ ಖಾಕಿ ಹಾಕುವ ಕಾಲ ಕೂಡಿ ಬಂದಿರಲಿಲ್ಲ. ಅವರೀಗ ಪೊಲೀಸ್ ಆಗುತ್ತಿದ್ದಾರೆ. ಸೆಟ್ಟೇರುತ್ತಿರುವ ಗುರು ದೇಶಪಾಂಡೆ ನಿರ್ಮಾಣದ ಹೊಸ ಚಿತ್ರದಲ್ಲಿ ಅಜೇಯ್ ರಾವ್ ಖಾಕಿಧಾರಿ.

  ರಾಜವರ್ಧನ್ ಚಿತ್ರದ ನಿರ್ದೇಶಕರಾಗಿದ್ದಾರೆ. ತಮ್ಮ ಗರಡಿಯಲ್ಲಿ ಪಳಗಿದ ರಾಜವರ್ಧನ್‍ಗೆ ನಿರ್ದೇಶನದ ಜವಾಬ್ದಾರಿ ಹೊರಿಸಿದ್ದಾರೆ ಗುರು ದೇಶಪಾಂಡೆ. 

  ಅಂದಹಾಗೆ ಚಿತ್ರಕ್ಕಿನ್ನೂ ನಾಮಕರಣವಾಗಿಲ್ಲ. ಕಲಾವಿದರು, ತಂತ್ರಜ್ಞರ ಆಯ್ಕೆ ನಡೆಯುತ್ತಿದೆ.

 • ಕಾದಂಬರಿ ಆಧಾರಿತ ಚಿತ್ರದಲ್ಲಿ ಅಜಯ್ ರಾವ್

  ಕಾದಂಬರಿ ಆಧಾರಿತ ಚಿತ್ರದಲ್ಲಿ ಅಜಯ್ ರಾವ್

  ನಟ ಅಜಯ್ ರಾವ್ ಹೊಸ ಸಿನಿಮಾಗೆ ಓಕೆ ಎಂದಿದ್ದಾರೆ. ಮಂಜು ಸ್ವರಾಜ್ ನಿರ್ದೇಶನದ ಚಿತ್ರವದು. ಅದೊಂದು ರೆಟ್ರೋ ಲವ್ ಸ್ಟೋರಿ. ಪೇಪರ್ ವರ್ಕ್ ಬಹುತೇಕ ಕಂಪ್ಲೀಟ್ ಆಗಿದೆ. ಈ ತಿಂಗಳ ಕೊನೆಯಲ್ಲಿ ಅಥವಾ ಏಪ್ರಿಲ್ ಆರಂಭದಲ್ಲಿ ಚಿತ್ರ ಸೆಟ್ಟೇರಲಿದೆ. ಕಾದಂಬರಿ ಆಧರಿತ ಚಿತ್ರ ಎಂದಿದ್ದಾರೆ ನಟ ಅಜಯ್ ರಾವ್. ಚಿತ್ರದ ಇನ್ನಷ್ಟು ವಿವರಗಳನ್ನು ಶೂಟಿಂಗ್ ಶುರುವಾದ ನೀಡುತ್ತೇವೆ ಎಂದೂ ಹೇಳಿದ್ದಾರೆ ಅಜಯ್ ರಾವ್.


  ಇದರ ಜೊತೆಗೆ ನಿರ್ದೇಶನಕ್ಕೂ ಇಳಿಯುವ ಕನಸು ಹೊಂದಿರೋ ಅಜಯ್ ರಾವ್ ತಮ್ಮದೇ ಆದ ಕಥೆಯೊಂದನ್ನು ಸಿದ್ಧ ಮಾಡುತ್ತಿದ್ದಾರಂತೆ. ನಿರ್ದೇಶನ ಮಾಡೋದು ನನ್ನ ಕನಸು. ಆ ಚಿತ್ರವನ್ನು ನನ್ನ ಬ್ಯಾನರ್‍ನಲ್ಲೇ ಮಾಡಲಿದ್ದೇನೆ ಎಂದಿದ್ದಾರೆ ಅಜಯ್ ರಾವ್.

 • ಕೃಷ್ಣ ಟಾಕೀಸ್ ಸಸ್ಪೆನ್ಸ್.. ಥ್ರಿಲ್ಲರ್.. ಟೀಸರ್

  krishna talkie teaser holds suspense, thriller

  ಅಜೇಯ್ ರಾವ್ ಅಭಿನಯದ ಕೃಷ್ಣ ಟಾಕೀಸ್ ಚಿತ್ರದ ಒಂದು ಟೀಸರ್ ಹೊರಬಿದ್ದಿದೆ. ಈ ಬಾರಿ ಕೃಷ್ಣ ಸಿರೀಸ್‍ನಲ್ಲಿ ಅಜೇಯ್ ರಾವ್ ಹೇಳೋಕೆ ಹೊರಟಿರೋದು ಒಂದು ಸಸ್ಪೆನ್ಸ್ ಥ್ರಿಲ್ಲರ್ ಸ್ಟೋರಿ. ಯಾವುದೋ ಕೊಲೆ, ಇನ್ಯಾವುದೋ ನಿಗೂಢ ಜಗತ್ತಿನ ಬೆನ್ನು ಹತ್ತಿ ಹೋಗುವ ಕೃಷ್ಣ ಕೊನೆಗೆ ಎಲ್ಲಿಗೆ ಮುಟ್ತಾನೆ ಅನ್ನೋದೇ ಕಥೆ. ಟೀಸರ್ ಕುತೂಹಲ ಹುಟ್ಟಿಸುವಲ್ಲಿ ಗೆದ್ದಿದೆ.

  ಅಜೇಯ್ ರಾವ್ ಜೊತೆ ಸಿಂಧು ಲೋಕನಾಥ್, ಅಪೂರ್ವ ನಟಿಸಿದ್ದಾರೆ. ವಿಜಯ್ ಆನಂದ್ ನಿರ್ದೇಶನದ ಚಿತ್ರಕ್ಕೆ ಗೋವಿಂದರಾಜು ಅಲೂರು ನಿರ್ಮಾಪಕ.

 • ಕೃಷ್ಣ ಟಾಕೀಸ್'ನಲ್ಲಿ ಸಿಂಧು ಅಪೂರ್ವ ಸಂಗಮ

  ajai rao once again in krishna avatar

  ಅಜೇಯ್ ರಾವ್, ಸ್ಯಾಂಡಲ್‍ವುಡ್‍ನ ಸೂಪರ್ ಹಿಟ್ ಕೃಷ್ಣ. ಕೃಷ್ಣ ಅಜೇಯ್ ರಾವ್ ಎಂದೇ ಹೆಸರಿಟ್ಟುಕೊಂಡಿರೋ ಅವರಿಗೆ ಕೃಷ್ಣನ ಹೆಸರಿನ ಸಿನಿಮಾಗಳೆಂದರೆ ಅಚ್ಚುಮೆಚ್ಚು. ಈ ಕೃಷ್ಣನ್ ಸರಣಿಯ ಹೊಸ ಸಿನಿಮಾ `ಕೃಷ್ಣ ಟಾಕೀಸ್ ಬಾಲ್ಕನಿ ಎಫ್ 13'

  ಕೃಷ್ಣನ್ ಲವ್ ಸ್ಟೋರಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ, ಕೃಷ್ಣಲೀಲಾ, ಕೃಷ್ಣ ರುಕ್ಕು, ಕೃಷ್ಣ ಸನ್ ಆಫ್ ಸಿಎಂ ನಂತರ ಅಜೇಯ್ ರಾವ್‍ಗೆ ಕೃಷ್ಣ ಸಿರೀಸ್‍ನ 6ನೇ ಸಿನಿಮಾ ಇದು.

  ಚಿತ್ರದಲ್ಲಿ ಇಬ್ಬರು ಹೀರೋಯಿನ್‍ಗಳಿದ್ದಾರೆ. ಸಿಂಧು ಲೋಕನಾಥ್ ಮತ್ತು ಅಪೂರ್ವ. ನಿರ್ದೇಶಕ ಆನಂದಪ್ರಿಯಾ, ಈ ಚಿತ್ರಕ್ಕೆ ತಮ್ಮ ಹೆಸರನ್ನು ವಿಜಯಾನಂದ ಎಂದು ಬದಲಿಸಿಕೊಂಡಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಲವ್‍ಸ್ಟೋರಿಯಂತೆ.

 • ಕೃಷ್ಣನ್ ಟಾಕೀಸಲ್ಲಿ ಎಲ್ಲವೂ ಉಂಟು..!

  ಕೃಷ್ಣನ್ ಟಾಕೀಸಲ್ಲಿ ಎಲ್ಲವೂ ಉಂಟು..!

  ಹಾರರ್ ಇಷ್ಟಪಡೋವ್ರಿಗೆ : ಓಪನಿಂಗ್ನಲ್ಲಿಯೇ ಸಿಗರೇಟು ಹಚ್ಚಲು ಯತ್ನಿಸೋ ಪೊಲೀಸ್. ಆರಿ ಹೋದ ಬೆಂಕಿಕಡ್ಡಿ ಮತ್ತೆ ಹತ್ತಿಕೊಳ್ಳೋದು, ಹಿನ್ನೆಲೆಯಲ್ಲಿ ಕೇಳಿ ಬರೋ ಪ್ರಕಾಶ.. ಪ್ರಕಾಶ ಅನ್ನೋ ವಾಯ್ಸು..

  ತುಂಟತನ ಇಷ್ಟಪಡೋವ್ರಿಗೆ : ಎಲ್ಲ ಹುಡುಗೀರು ಸುಮಾರಾಗೇ ಇರ್ತಾರೆ. ಆದರೆ, ಅವರೆಷ್ಟು ಅಂದವಾಗಿದ್ದಾರೆ ಅನ್ನೋದು ನಾವೆಷ್ಟು ಬರಗೆಟ್ಟಿದ್ದೀವಿ ಅನ್ನೋದ್ರ ಮೇಲೆ ಡಿಪೆಂಡ್ ಆಗಿರುತ್ತೆ.

  ಫೈಟ್ ಇಷ್ಟಪಡೋವ್ರಿಗೆ : ಮೈನವರಿವೇಳಿಸುವ ಸಾಹಸ ಸಂಯೋಜನೆಯ ಝಲಕ್ ಕಾಣಿಸ್ತಿದೆ.

  ರೊಮ್ಯಾನ್ಸ್ ಇಷ್ಟಪಡೋವ್ರಿಗೆ ಚೆಂದದ ಹಾಡು, ಪಡ್ಡೆಗಳ ಪರದಾಟಕ್ಕೊಂದು ಐಟಮ್ ಸಾಂಗು, ಸಸ್ಪೆನ್ಸ್, ಥ್ರಿಲ್ ಎಲ್ಲವೂ ಇರುವ ಟ್ರೇಲರ್ ಕೃಷ್ಣ ಟಾಕೀಸ್. ನೈಂಟಿ ಮಾತ್ರ ಹಾಕೊಬೇಡ ಮೇನಕಾ.. ನಮ್ಗೆ 90 ಹೊಡ್ದ್ಂಗ್ ಆಯ್ತದೆ ಜೀವಕಾ.. ಅನ್ನೋ ಹಾಡು ಹೊಸ ಹವಾ ಕ್ರಿಯೇಟ್ ಮಾಡೋ ಹಾಗಿದೆ.

  ಅಜೇಯ್ ರಾವ್ ವೃತ್ತಿ ಜೀವನದಲ್ಲಿ ಇದು ಬೇರೆಯೇ ಜಾನರ್ನ ಸಿನಿಮಾ. ಅಪೂರ್ವ, ಸಿಂಧು ಲೋಕನಾಥ್ ನಟಿಸಿರೋ ಚಿತ್ರಕ್ಕೆ ವಿಜಯ್ ಆನಂದ್ ನಿರ್ದೇಶನವಿದೆ.  ಚಿಕ್ಕಣ್ಣ, ಶೋಭರಾಜ್, ಪ್ರಮೋದ್ ಶೆಟ್ಟಿ, ಮಂಡ್ಯ ರಮೇಶ್..ಹೀಗೆ ಹಿರಿಯ ಕಲಾವಿದರ ತಂಡವೇ ಚಿತ್ರದಲ್ಲಿದೆ. ಗೋವಿಂದ ರಾಜು ಮತ್ತು ಎ.ಹೆಚ್. ಅಲ್ಲೂರು ನಿರ್ಮಾಣದ ಸಿನಿಮಾ ಮೇಕಿಂಗ್ನಲ್ಲಿ ಗಮನ ಸೆಳೆಯುತ್ತಿದೆ.

 • ಜನ ಬರ್ತಿಲ್ಲ.. ಕಲೆಕ್ಷನ್ ಇಲ್ಲ : ಶೋಕಿವಾಲ

  ಜನ ಬರ್ತಿಲ್ಲ.. ಕಲೆಕ್ಷನ್ ಇಲ್ಲ : ಶೋಕಿವಾಲ

  ಒಂದು ಸಿನಿಮಾ ರಿಲೀಸ್ ಆದ ನಂತರ ಥಿಯೇಟರಿನಲ್ಲಿ ಜನ ಇರ್ತಾರೋ.. ಇಲ್ವೋ.. ಸಿನಿಮಾ ಸೂಪರ್ ಹಿಟ್.. ಸೂಪರ್.. ಎನ್ನುವವರನ್ನು ನೋಡಿರುತ್ತೀರಿ. ಆದರೆ ಶೋಕಿವಾಲಾ ಸ್ವಲ್ಪ ಡಿಫರೆಂಟ್. ಈ ವಾರವಷ್ಟೇ ರಿಲೀಸಾಗಿರೋ ಶೋಕಿವಾಲ ಚಿತ್ರದ ಬಗ್ಗೆ ಸ್ವತಃ ನಾಯಕ ನಟ ಅಜೇಯ್ ರಾವ್ ಮತ್ತು ನಾಯಕಿ ಸಂಜನಾ ಆನಂದ್ ಬೇಸರ ವ್ಯಕ್ತಪಡಿಸಿದ್ದಾರೆ.

  ಜನ ಥಿಯೇಟರಿಗೆ ಬರುತ್ತಿಲ್ಲ. ನಿರೀಕ್ಷೆಗಳು ಭಾರಿ ಇದ್ದವು. ಆದರೆ ಜನರೇ ಬರುತ್ತಿಲ್ಲ. ಆದರೆ ನೋಡಿದವರು ಚಿತ್ರ ಚೆನ್ನಾಗಿದೆ ಎನ್ನುತ್ತಿದ್ದಾರೆ ಎನ್ನುವುದು ಅಜಯ್ ರಾವ್ ಮಾತು.

  ಸಂಜನಾ ಆನಂದ್, ತಬಲಾ ನಾಣಿ, ನಿರ್ದೇಶಕ ಜಾಕಿ ಕೂಡಾ ದಯವಿಟ್ಟು ಚಿತ್ರಮಂದಿರಕ್ಕೆ ಬನ್ನಿ, ಸಿನಿಮಾ ಗೆಲ್ಲಿಸಿ ಎಂದು ಕೈಮುಗಿದಿದ್ದಾರೆ. ಸಿನಿಮಾ ಚೆನ್ನಾಗಿದೆ. ಆದರೆ ಜನರಿಗೆ ಸಿನಿಮಾ ಬಗ್ಗೆ ಸರಿಯಾದ ಮಾಹಿತಿ ಹೋಗಿಲ್ಲ ಎನ್ನುತ್ತಿರುವ ಚಿತ್ರತಂಡದವರ ಮಾತು ನೋಡಿದರೆ, ಚಿತ್ರದ ಪ್ರಚಾರವೇ ಸರಿಯಾಗಿ ಆಗಿಲ್ಲವಾ ಎನ್ನಿಸೋದು ಸಹಜ. ಆದರೆ ನಿರ್ಮಾಪಕ ಚಂದ್ರಶೇಖರ್ ಸಿನಿಮಾ ಪ್ರಚಾರವನ್ನು ಚೆನ್ನಾಗಿಯೇ ಮಾಡಿದ್ದಾರೆ.

 • ತಾಯಿಗೆ ತಕ್ಕ ಮಗ ಅಲ್ಲ, ಮಗನಿಗೆ ತಕ್ಕ ತಾಯಿ..!

  perfect son for a perfcet mother

  ತಾಯಿಗೆ ತಕ್ಕ ಮಗ. ಇದು ಶಶಾಂಕ್ ನಿರ್ಮಾಣದ ಅಜೇಯ್ ರಾವ್ ನಾಯಕರಾಗಿ ನಟಿಸುತ್ತಿರುವ ಚಿತ್ರ. ಚಿತ್ರದಲ್ಲಿ ಅತ್ಯಂತ ವಿಶೇಷ ಪಾತ್ರ ಮಾಡುತ್ತಿರುವುದು ಸುಮಲತಾ. ಎಕ್ಸ್‍ಕ್ಯೂಸ್ ಮಿ ಚಿತ್ರದಲ್ಲಿ ಅಜೇಯ್ ರಾವ್‍ಗೆ ಅಮ್ಮನಾಗಿದ್ದ ಸುಮಲತಾ, ಈ ಚಿತ್ರದಲ್ಲಿ ಮತ್ತೊಮ್ಮೆ ತಾಯಿಯಾಗಿದ್ದಾರೆ.

  ಆ ಚಿತ್ರದಲ್ಲಿ ಅಜೇಯ್ ರಾವ್ ಜೀವನಕ್ಕಾಗಿ, ತಮ್ಮ ಪ್ರೀತಿಯನ್ನೇ ತ್ಯಾಗ ಮಾಡುವ ಅಮ್ಮನಾಗಿದ್ದ ಸುಮಲತಾ, ಈ ಚಿತ್ರದಲ್ಲಿ ಮಗನಿಗಾಗಿ ಹೋರಾಡುವ ಅಮ್ಮನ ಪಾತ್ರ ಮಾಡುತ್ತಿದ್ದಾರೆ.

  ಅಜೇಯ್ ರಾವ್, ಸಿನಿಮಾದಲ್ಲಿ ಅನ್ಯಾಯದ ವಿರುದ್ಧ ಹೋರಾಡುತ್ತಿರುತ್ತಾರೆ. ಮಗನ ಹೋರಾಟಗಳಿಗೆ ಬೆಂಬಲವಾಗಿ ನಿಲ್ಲುವುದು ಅಮ್ಮ ಸುಮಲತಾ. ಕೋರ್ಟ್‍ನಲ್ಲಿ ಲಾಯರ್ ಆಗಿ ಮಗನನ್ನು ಗೆಲ್ಲಿಸಿಕೊಳ್ಳುವ ರೆಬಲ್ ಅಮ್ಮನಾಗಿದ್ದಾರೆ ಸುಮಲತಾ.

  ಹಾಗಾದರೆ, ಚಿತ್ರದ ಟೈಟಲ್‍ನ್ನು ಮಗನಿಗೆ ತಕ್ಕ ತಾಯಿ ಎಂದೇನಾದರೂ ಬದಲಾಯಿಸುವ ಐಡಿಯಾ ಇದೆಯಾ..? ಶಶಾಂಕ್ ಅವರನ್ನು ಕೇಳಿನೋಡಿ.. ಜೋರಾಗಿ ನಕ್ಕುಬಿಡುತ್ತಾರೆ.

 • ತಾಯಿಗೆ ತಕ್ಕ ಮಗ ಟ್ರೇಲರ್ ಹವಾ..

  thayige thakka maga creates craze

  ತಾಯಿಗೆ ತಕ್ಕ ಮಗ. ಶಶಾಂಕ್ ನಿರ್ದೇಶನದ ಸಿನಿಮಾ ಟೈಟಲ್‍ನಿಂದಲೇ ಸದ್ದು ಮಾಡಿದ್ದ ಸಿನಿಮಾ. ಇನ್ನು ಎಕ್ಸ್‍ಕ್ಯೂಸ್ ಮಿ ನಂತರ ಸುಮಲತಾ ಮತ್ತು ಅಜೇಯ್ ರಾವ್ ಮತ್ತೊಮ್ಮೆ ತಾಯಿ ಮಗನಾಗಿ ನಟಿಸಿದ್ದು, ಚಿತ್ರದ ನಿರೀಕ್ಷೆ ಹೆಚ್ಚಿಸಿತ್ತು. ಆ ನಿರೀಕ್ಷೆಗಳನ್ನು ಇನ್ನಷ್ಟು ಹೆಚ್ಚಿಸಿದೆ ಚಿತ್ರದ ಟ್ರೇಲರ್.

  ಕಿಚ್ಚು ಸುದೀಪ್ ಹಿನ್ನೆಲೆ ಧ್ವನಿಯೊಂದಿಗೆ ಶುರುವಾಗುವ ಚಿತ್ರದ ಟ್ರೇಲರ್‍ನಲ್ಲಿ, ತಾಯಿ-ಮಗನ ಬಾಂಧವ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಸಾಹಸ ದೃಶ್ಯ ಮತ್ತು ಪಂಚಿಂಗ್ ಡೈಲಾಗುಗಳ ಹಿನ್ನೆಲೆಯಲ್ಲೂ ತಾಯಿ-ಮಗನ ಸೆಂಟಿಮೆಂಟ್ ಕಾಣುವಂತೆ ಮಾಡಿರೋದು ಶಶಾಂಕ್ ಸ್ಪೆಷಾಲಿಟಿ. 

  ಚಿತ್ರದ ನಾಯಕಿ ಆಶಿಕಾ ರಂಗನಾಥ್, ಸಿನಿಮಾದ ಹಾಟ್ ಹಾಟ್ ಸಬ್ಜೆಕ್ಟ್. ಕ್ಲಾಸ್ ಮತ್ತು ಮಾಸ್ ಎರಡೂ ಮಿಕ್ಸ್ ಆಗಿರುವ ಸಿನಿಮಾ ಅಜೇಯ್ ರಾವ್ ಅವರ 25ನೇ ಸಿನಿಮಾ ಎನ್ನವುದು ವಿಶೇಷ.

 • ತಾಯಿಗೆ ತಕ್ಕ ಮಗ ನಿರ್ದೇಶಕ ಬದಲು

  thayige thakka maga

  ತಾಯಿಗೆ ತಕ್ಕ ಮಗ. ಅಜೇಯ್ ರಾವ್ ಅಭಿನಯದ ಹಾಗೂ ಕನ್ನಡ ಚಿತ್ರರಂಗದ ಯಶಸ್ವಿ ನಿರ್ದೇಶಕ ಶಶಾಂಕ್ ನಿರ್ಮಾಣದ ಮೊದಲ ಸಿನಿಮಾ. ನಿರ್ದೇಶಕ, ನಾಯಕರಾಗಿ ಅಜೇಯ್ ರಾವ್-ಶಶಾಂಕ್ ಜೋಡಿಯ ಈ ಹಿಂದಿನ ಎರಡೂ ಚಿತ್ರಗಳು ಸೂಪರ್ ಹಿಟ್. 3ನೇ ಬಾರಿ ಜೊತೆಯಾಗುತ್ತಿರುವ ಜೋಡಿ, ಮತ್ತೊಂದು ಸೂಪರ್ ಹಿಟ್ ನಿರೀಕ್ಷೆಯಲ್ಲಿದೆ.

  ಇದು ಶಶಾಂಕ್ ನಿರ್ಮಾಣದ ಮೊದಲ ಸಿನಿಮಾವಾದರೆ, ಅಜೇಯ್ ರಾವ್‍ಗೆ 25ನೇ ಸಿನಿಮಾ. ಅಂದಹಾಗೆ ಶಶಾಂಕ್ ನಿರ್ಮಿಸುತ್ತಿದ್ದರೂ, ಚಿತ್ರಕ್ಕೆ ಅವರು ನಿರ್ದೇಶಕರಲ್ಲ. ಮೊದಲು ರಘುಕೋವಿ ಎಂಬುವರು ನಿರ್ದೇಶಿಸುತ್ತಾರೆ ಎನ್ನಲಾಗಿತ್ತು. ಈಗ ನಿರ್ದೇಶಕರು ಬದಲಾಗಿದ್ದಾರೆ. ಅವರ ಜಾಗಕ್ಕೆ ವೇದಗುರು ಬಂದಿದ್ದಾರೆ. ಅವರು ಈ ಹಿಂದೆ ದಂಡಯಾತ್ರೆ ಎಂಬ ಸಿನಿಮಾ ನಿರ್ದೇಶಿಸಿದ್ದವರು.

  ಪುನೀತ್ ಚಿತ್ರ ಒಪ್ಪಿಕೊಂಡಿರುವ ಶಶಾಂಕ್, ಈಗ ಎರಡೂ ಚಿತ್ರಗಳಲ್ಲಿ ಬ್ಯುಸಿ. ನಾಯಕಿಯರ ಹುಡುಕಾಟ ನಡೆಯುತ್ತಿದ್ದು, 100ಕ್ಕೂ ಹೆಚ್ಚು ನಟಿಯರ ಅಡಿಷನ್ ಆಗಿದೆ. ಆದರೆ, ಯಾವುದೂ ಸಮಾಧಾನ ತಂದಿಲ್ಲ. ಚಿತ್ರತಂಡ ಇನ್ನೂ ಹೀರೋಯಿನ್ಸ್ ಹುಡುಕಾಟದಲ್ಲೇ ಇದೆ.