` Dr Shivarajkumar - chitraloka.com | Kannada Movie News, Reviews | Image

Dr Shivarajkumar

  • Shivarajakumar ready to take leadership

    shivarajkumar image

    Actor Shivarajakumar on Friday has said that he is ready to take the leadership and address the various problems which the Kannada film industry is facing in recent times.

    The Kannada Film Producers Association along with various other associations from the Kannada film industry met senior actor Shivarajakumar at his residence and explained about the various problems the industry is facing, particularly after the Corona Pandemic.

    you_tube_chitraloka1.gif

    Apart from that, all the film personalities including veteran director S V Rajendra Singh Babu and others told Shivarajakumar that the film industry is lacking leadership and its high time that he accepts the leadership and takes forward the Kannada film industry to the next level. After much persuasion, the 'Hatrick Hero' is said to have accepted the proposal and is ready to take the leadership of the Kannada film industry.

     

  • ಇಂದು ಶಿವ 143 ನೋಡೋಕೆ ಬರ್ತಾರೆ ಶಿವಣ್ಣ ದಂಪತಿ

    ಇಂದು ಶಿವ 143 ನೋಡೋಕೆ ಬರ್ತಾರೆ ಶಿವಣ್ಣ ದಂಪತಿ

    ಶಿವ 143 ರಿಲೀಸ್ ಆಗಿದೆ. ಧಿರೇನ್ ರಾಮಕುಮಾರ್ ಅಭಿನಯದ ಮೊದಲ ಸಿನಿಮಾ ಇದು. ಮಾಸ್.ಆ್ಯಕ್ಷನ್.ರೊಮ್ಯಾನ್ಸ್.ಲವ್... ಎಲ್ಲವೂ ಇರುವ ಚಿತ್ರ ಹೊಸ ಮಾಸ್ ಹೀರೋಗೆ ಜನ್ಮ ಕೊಟ್ಟಿದೆ. ಧಿರೇನ್ ಮತ್ತು ಮಾನ್ವಿತಾ ಕಾಮತ್ ಇಬ್ಬರೂ ಶಿವ-ಮಧು ಪಾತ್ರವನ್ನು ಆವಾಹಿಸಿಕೊಂಡು ನಟಿಸಿದ್ದಾರೆ. ರಾಜ್ ಕುಟುಂಬದ ಕುಡಿಯಾಗಿ ಅಂತಾದ್ದೊಂದು ಪಾತ್ರ ಒಪ್ಪಿಕೊಂಡ ಧಿರೇನ್ ಮತ್ತು ಅಂತಹ ನಾಯಕಿಯ ಪಾತ್ರಕ್ಕೆ ಓಕೆ ಎಂದು ನಟಿಸಿದ ಮಾನ್ವಿತಾ ಕಾಮತ್ ಇಬ್ಬರ ಧೈರ್ಯವನ್ನೂ ಮೆಚ್ಚಿಕೊಳ್ಳಲೇಬೇಕು.

    ಚಿತ್ರರಂಗದಲ್ಲಿ ಹಿರಿ ಕಿರಿಯರೆನ್ನದೆ ಎಲ್ಲರಿಗೂ ಶುಭ ಕೋರುವ ಪ್ರತಿಯೊಬ್ಬರ ಚಿತ್ರದ ಗೆಲುವನ್ನೂ ಸಂಭ್ರಮಿಸುವ ಶಿವಣ್ಣ ಸೋದರಳಿಯನ ಚಿತ್ರ ನೋಡೋಕೆ ಇವತ್ತು ಚಿತ್ರಮಂದಿರಕ್ಕೇ ಬರುತ್ತಿದ್ದಾರೆ. ದಂಪತಿ ಸಮೇತ.

    ಮೆಜೆಸ್ಟಿಕ್‍ನ ಸಂತೋಷ್ ಚಿತ್ರಮಂದಿರಕ್ಕೆ ಇಂದು ಶಿವಣ್ಣ ಹಾಗೂ ಗೀತಾ ಶಿವರಾಜಕುಮಾರ್ ಬಂದು ಶಿವ 143 ವೀಕ್ಷಿಸಲಿದ್ದಾರೆ. ಅಭಿಮಾನಿಗಳ ಜೊತೆ. ಸಮಯ ಸಂಜೆ 7 ಗಂಟೆಗೆ.

    ಜಯಣ್ಣ-ಭೋಗೇಂದ್ರ-ಡಾ.ಸೂರಿ ನಿರ್ಮಾಣದ ಚಿತ್ರಕ್ಕೆ ಅನಿಲ್ ಕುಮಾರ್ ನಿರ್ದೇಶನವಿದೆ. ಚಿತ್ರಕ್ಕೆ ಬಿಡುಗಡೆಗೂ ಮುನ್ನ ಕನ್ನಡ ಚಿತ್ರರಂಗದ ಸ್ಟಾರ್ ನಟರು ಶುಭ ಕೋರಿದ್ದರು. ರಾಜ್ ಫ್ಯಾಮಿಲಿಯವರಷ್ಟೇ ಅಲ್ಲದೆ ಕಿಚ್ಚ ಸುದೀಪ್ ಸೇರಿದಂತೆ ಚಿತ್ರರಂಗದ ಹಿರಿಯರೆಲ್ಲ ಧಿರೇನ್‍ಗೆ ಸ್ವಾಗತ ಕೋರಿದ್ದರು. ಈಗ ಪ್ರೇಕ್ಷಕರೂ ಉಘೇ ಎಂದಿದ್ದಾರೆ. 

  • ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರಿಂದ "ಲವ್ 360" ಚಿತ್ರದ ಥಿಯೇಟ್ರಿಕಲ್ ಟ್ರೇಲರ್ ಬಿಡುಗಡೆ.

    ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರಿಂದ "ಲವ್ 360" ಚಿತ್ರದ ಥಿಯೇಟ್ರಿಕಲ್ ಟ್ರೇಲರ್ ಬಿಡುಗಡೆ.

    ಶಶಾಂಕ್ ನಿರ್ದೇಶನದ "ಲವ್ 360" ಚಿತ್ರದ ಥಿಯೇಟ್ರಿಕಲ್ ಟ್ರೇಲರ್ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರಿಂದ ಬಿಡುಗಡೆಯಾಗಿದೆ. ಚಿತ್ರ ಇದೇ ಆಗಸ್ಟ್ 19 ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

    ಶಶಾಂಕ್ ನನ್ನ ಅಚ್ಚುಮೆಚ್ಚಿನ ನಿರ್ದೇಶಕರಲ್ಲಿ ಒಬ್ಬರು. ಅವರ ನಿರ್ದೇಶನದಲ್ಲಿ ನಾನು ನಟಿಸಬೇಕಿತ್ತು. ಕಾರಣಾಂತರದಿಂದ ಆಗಿಲ್ಲ. ಮುಂದೆ ನಮಿಬ್ಬರ ಕಾಂಬಿನೇಶನ್ ನಲ್ಲಿ ಚಿತ್ರ ಬರುತ್ತದೆ. ಸದ್ಯ ಶಶಾಂಕ್ ನಿರ್ದೇಶನದ "ಲವ್ 360" ಚಿತ್ರದ ಟ್ರೇಲರ್ ನೋಡಿದೆ. ಚೆನ್ನಾಗಿದೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು ಸುಮಧುರವಾಗಿದೆ. ಅದರಲ್ಲೂ ಸಿದ್ ಶ್ರೀರಾಮ್ ಹಾಡಿರುವ "ಜಗವೇ ನೀನು ಗೆಳತಿಯೆ" ಹಾಡಂತೂ ನನಗೆ ಬಹಳ ಇಷ್ಟ. ನಾಯಕ, ನಾಯಕಿ ಎಲ್ಲರೂ ಚೆನ್ನಾಗಿ ಅಭಿನಯಿಸಿದ್ದಾರೆ. ನಾನು ಬಿಡುಗಡೆ ದಿನದಂದೇ ಈ ಚಿತ್ರವನ್ನು ಚಿತ್ರಮಂದಿರದಲ್ಲಿ ಅಭಿಮಾನಿಗಳ

    ಜೊತೆಗೆ ನೋಡುತ್ತೇನೆ ಎಂದರು ನಟ ಶಿವರಾಜಕುಮಾರ್.

    ಚಿತ್ರದ ಥಿಯೇಟ್ರಿಕಲ್ ಟ್ರೇಲರ್ ಬಿಡುಗಡೆ ಮಾಡಿ ಕೊಟ್ಟ ಶಿವರಾಜಕುಮಾರ್ ಅವರಿಗೆ ಧನ್ಯವಾದಗಳು. ಚಿತ್ರ ಆಗಸ್ಟ್ ೧೯ರಂದು ತೆರೆ ಕಾಣಲಿದೆ. ಅದಕ್ಕೂ ಮುನ್ನ ನಾವು ಬೇರೆ ಬೇರೆ ಊರುಗಳಿಗೆ ಭೇಟಿ ನೀಡುತ್ತಿದ್ದೇವೆ. ಹೋದ ಕಡೆ ಸಿಗುತ್ತಿರುವ

    ಅಭೂತಪೂರ್ವ ಬೆಂಬಲಕ್ಕೆ‌ ಮನತುಂಬಿ ಬಂದಿದೆ. ಖ್ಯಾತ ಕೆ.ಆರ್.ಜಿ ಸ್ಟುಡಿಯೋಸ್ ಸಂಸ್ಥೆಯವರು ನಮ್ಮ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ. ನೂರೈವತ್ತಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದೆ. ಈಗಾಗಲೇ ಹಾಡುಗಳನ್ನು ಜನಪ್ರಿಯಗೊಳಿಸಿರುವ ಕನ್ನಡ ಕಲಾ ರಸಿಕರು ಚಿತ್ರವನ್ನೂ ಗೆಲಿಸುತ್ತಾರೆಂಬ ನಂಬಿಕೆ ಇದೆ ಎಂದರು ನಿರ್ದೇಶಕ ಶಶಾಂಕ್.

    ನನ್ನ ಸ್ನೇಹಿತನೊಬ್ಬ, "ನೀನು ಹೀರೋ ತರಹ ಇಲ್ಲ. ನಿನ್ನ ಸಿನಿಮಾ ಯಾರು ನೋಡುತ್ತಾರೆ ಅಂದಿದ್ದ". ಆ ಮಾತು‌ ನನ್ನ ಮನಸ್ಸಿನಲ್ಲೇ ಇತ್ತು. ಆದರೆ ಈಗ ಬೇರೆ ಬೇರೆ ಊರುಗಳಿಗೆ, ಅದರಲ್ಲೂ ಕಾಲೇಜುಗಳಿಗೆ ಭೇಟಿ ನೀಡಿದಾಗ ಅಲ್ಲಿನ ವಿದ್ಯಾರ್ಥಿಗಳು ನನ್ನನ್ನು ಗುರುತಿಸುತ್ತಿರುವ ರೀತಿ ಕಂಡು ಆಶ್ಚರ್ಯವಾಗಿದೆ. ಹೆಣ್ಣುಮಕ್ಕಳಂತೂ ನಾವು ನಿಮ್ಮ ಅಭಿಮಾನಿಗಳು. ನಿಮ್ಮ ಚಿತ್ರದ ಹಾಡುಗಳು ತುಂಬಾ ‌ಚೆನ್ನಾಗಿದೆ. ನೀವು ತುಂಬಾ ಚೆನ್ನಾಗಿ ಕಾಣುತ್ತೀರಾ ಎನ್ನುತ್ತಿದ್ದಾರೆ. ಅದಕ್ಕೆಲ್ಲಾ ಕಾರಣ ನಿರ್ದೇಶಕ ಶಶಾಂಕ್ ಸರ್. ಅವರಿಗೆ ಹಾಗೂ ನನಗೆ ಬೆಂಬಲ ನೀಡುತ್ತಿರುವ ನನ್ನ‌ ತಾಯಿ ಹಾಗೂ ಅಂಕಲ್ ಗೆ ಧನ್ಯವಾದ ಎಂದರು ನಾಯಕ ಪ್ರವೀಣ್.

    ನಾಯಕಿ ರಚನಾ ಇಂದರ್ ಸಹ ಚಿತ್ರಕ್ಕೆ ಬಿಡುಗಡೆ ಪೂರ್ವದಲ್ಲಿ ಸಿಗುತ್ತಿರುವ ಪ್ರತಿಕ್ರಿಯೆಗೆ ಸಂತಸಪಟ್ಟರು. ನಟರಾದ ಡ್ಯಾನಿ ಕುಟ್ಟಪ್ಪ ಹಾಗೂ ಮಹಂತೇಶ್ ಸಹ ಚಿತ್ರದ ಕುರಿತು ಮಾತನಾಡಿದರು.

  • ಕಲ್ಲು..ಕುಡುಗೋಲು.. ವೇದ ಆಯುಧ ರಹಸ್ಯ

    ಕಲ್ಲು..ಕುಡುಗೋಲು.. ವೇದ ಆಯುಧ ರಹಸ್ಯ

    ಶಿವಣ್ಣ ಲಾಂಗು ಹಿಡಿದರೆ ಸಿನಿಮಾ ಹಿಟ್ಟು ಎನ್ನುವುದು ಚಿತ್ರರಂಗದ ನಂಬಿಕೆ. ಆದರೆ ಇಲ್ಲಿ ಲಾಂಗು ಹಿಡಿದಿಲ್ಲ. ಕುಡುಗೋಲು ಹಿಡಿದಿದ್ದಾರೆ. ಜೊತೆಗೆ ಕಲ್ಲು ಕೂಡಾ ಇದೆ. ವೆಪನ್ಸ್ ಎಂದು ರಿಲೀಸ್ ಮಾಡಿರೋ ಟೀಸರ್‍ನಲ್ಲಿ ಕಾಣಿಸೋದು ಕಲ್ಲು ಮತ್ತು ಕುಡುಗೋಲು. ರಕ್ತಸಿಕ್ತ ಕಥೆ ಇದೆಯೇನೋ ಎಂದು ಅನ್ನಿಸುವ ವೇದದಲ್ಲಿ ಬೇರೆಯದೇ ಒಂದು ಕಥೆಯೂ ಇದೆ ಎಂಬ ಸುಳಿವೂ ಇದೆ.

    ಎ.ಹರ್ಷ ನಿರ್ದೇಶನದ ಚಿತ್ರವಿದು. ಹರ್ಷ-ಶಿವಣ್ಣ ಕಾಂಬಿನೇಷನ್‍ನ 4ನೇ ಚಿತ್ರ ವೇದ. ಇದೇ ಮೊದಲ ಬಾರಿಗೆ ಗೀತಾ ಶಿವರಾಜಕುಮಾರ್ ನಿರ್ಮಾಣ ಮಾಡುತ್ತಿದ್ದು, ಶಿವಣ್ಣ ವೃತ್ತಿ ಜೀವನದ 125ನೇ ಐತಿಹಾಸಿಕ ಚಿತ್ರ ಇದಾಗಲಿದೆ.

    ಶಿವಣ್ಣ ಎದುರು ಗಾನವಿ ಲಕ್ಷ್ಮಣ್, ಉಮಾಶ್ರೀ, ಆದಿತಿ ಸಾಗರ್, ಶ್ವೇತಾ ಚೆಂಗಪ್ಪ, ವೀಣಾ ಪೊನ್ನಪ್ಪ, ರಘು ಶಿವಮೊಗ್ಗ, ಜಗ್ಗಪ್ಪ, ಚೆಲುವರಾಜ್, ವಿನಯ್ ಬಿದ್ದಪ್ಪ, ಭರತ್ ಸಾಗರ್, ಪ್ರಸನ್ನ, ಸಂಜೀವ್, ಕುರಿ ಪ್ರತಾಪ್.. ಹೀಗೆ ದೊಡ್ಡ ತಾರಾಗಣವೇ ಇದೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಅಂದಹಾಗೆ ವೇದ ಡಿಸೆಂಬರ್ 23ಕ್ಕೆ ರಿಲೀಸ್ ಆಗುತ್ತಿದೆ.

  • ಗಾನವಿ, ಆದಿತಿ, ಶ್ವೇತಾ ಚೆಂಗಪ್ಪ ಬಗ್ಗೆ ಗೀತಾ ಶಿವ ರಾಜ್ ಕುಮಾರ್ ಮಾತು

    ಗಾನವಿ, ಆದಿತಿ, ಶ್ವೇತಾ ಚೆಂಗಪ್ಪ ಬಗ್ಗೆ ಗೀತಾ ಶಿವ ರಾಜ್ ಕುಮಾರ್ ಮಾತು

    ಶಿವ ರಾಜ್ ಕುಮಾರ್ ಅವರ 125ನೇ ಸಿನಿಮಾ ನಮ್ಮ ಕೈಗೆ ಬಂದಿದ್ದೇ ಒಂದು ರೋಚಕ ಕತೆ. ಮೊದಲು ಯಾರೋ ಒಬ್ಬರು ಬಂದರು. ಮುಹೂರ್ತವೂ ಆಯಿತು. ಆದರೆ ಟೇಕಾಫ್ ಆಗಲಿಲ್ಲ. ಮತ್ತೊಬ್ಬರು ಬಂದರು. ಅವರೂ ಅಷ್ಟೆ. ಕೊನೆಗೆ ನಾವೇ ಸಿನಿಮಾ ಮಾಡುತ್ತೇವೆ ಎಂದಾಗ ಅವರು ಬೇಡ ಎನ್ನಲಿಲ್ಲ. ಅದೃಷ್ಟ ಚೆನ್ನಾಗಿತ್ತು ಎಂದವರು ಗೀತಾ. ಫಸ್ಟ್ ಡೇ ಫಸ್ಟ್ ಶೋ ನೋಡಿ ಮಾತನಾಡುತ್ತಿದ್ದ ಗೀತಾಗೆ ಅಭಿಮಾನಿಗಳು ಮಡಿಲಕ್ಕಿ ತುಂಬಿದ್ದು ವಿಶೇಷವಾಗಿತ್ತು. ಇದೇ ವೇಳೆ ಮಾತನಾಡಿದ ಗೀತಾ

    ಶಿವರಾಜ್ಕುಮಾರ್ ಜೊತೆ ಅದಿತಿ ಸಾಗರ್ ಮತ್ತು ಗಾನವಿ ಇಬ್ಬರಿಗೂ ತುಂಬಾನೇ ಒಳ್ಳೆಯ ಹೆಸರು ಬಂದಿದೆ. ಆ ಇಬ್ಬರು ಹೆಣ್ಣು ಮಕ್ಕಳಿಗೆ ಹೆಸರು ಬಂದಿರುವುದು ತುಂಬಾನೇ ಇಷ್ಟವಾಯಿತು. ಸಿನಿಮಾದಲ್ಲಿ ಶ್ರಮಪಟ್ಟು ಕೆಲಸ ಮಾಡಿದ್ದಾರೆ. ಶಿವರಾಜ್ಕುಮಾರ್ ಸರಿಸಮಾನಗಿ ನಟಿಸುವುದು ಸ್ವಲ್ಪ ಕಷ್ಟನೇ ಆದರೂ ಅವರು ತುಂಬಾ ಚೆನ್ನಾಗಿ ಆಕ್ಟ್ ಮಾಡಿದ್ದಾರೆ. ನಾನು ಯಾವತ್ತೂ ಸಿನಿಮಾ ರಿಲೀಸ್ಗೆ ಹೆದರಿಕೊಂಡಿರಲಿಲ್ಲ.  ಒಳ್ಳೆಯದಾಗುತ್ತದೆ ಎಂದು ನನಗೆ ಗೊತ್ತಿತ್ತು  ಎಂದಿದ್ದಾರೆ ಗೀತಾ.

    ಶಿವಣ್ಣ ಜೊತೆ ಗಾನವಿ ಲಕ್ಷ್ಮಣ್ ಪತ್ನಿಯಾಗಿ ನಟಿಸಿದ್ದಾರೆ. ಆದಿತಿ ಸಾಗರ್ ಶಿವಣ್ಣ ಮಗಳಾಗಿ ನಟಿಸಿದ್ದಾರೆ. ಹರ್ಷ ಕ್ರೌರ್ಯವನ್ನು ವೈಭವೀಕರಿಸಿದ್ದರೂ, ಚಿತ್ರದ ಮೆಸೇಜ್ ಅದ್ಭುತವಾಗಿದ್ದು ಕ್ರೌರ್ಯ ಓಕೆ ಎನ್ನುವಂತೆ ಪ್ರೇಕ್ಷಕರು ಮೆಚ್ಚುಗೆ ತೋರಿಸಿದ್ದಾರೆ.

  • ಗಿಲಕ್ಕು ಶಿವ ಗಿಲಕ್ಕೂ.. ಹಾಡಿನಲ್ಲಿ ಅದೇನೋ ಕಿಕ್ಕು..

    ಗಿಲಕ್ಕು ಶಿವ ಗಿಲಕ್ಕೂ.. ಹಾಡಿನಲ್ಲಿ ಅದೇನೋ ಕಿಕ್ಕು..

    ಯಾವನೋ ಇವ್ನು ಗಿಲಕ್ಕೂ..

    ಎಲ್ಲಿಂದ ಬಂದ ಗಿಲಕ್ಕೂ..

    ಏಳೇಳು ಬೆಟ್ಟ ದಾಟ್ಕೊಂಡು ಬಂದ

    ಗಿಲಕ್ಕೂ ಶಿವ ಗಿಲಕ್ಕೂ..

    ಹಾಡು ಕುಣಿಯುವಂತಿದೆ. ಅರ್ಜುನ್ ಜನ್ಯ ಮ್ಯೂಸಿಕ್ಕು, ನಾಗೇಂದ್ರ ಪ್ರಸಾದ್ ಲಿರಿಕ್ಸು, ಮಂಗ್ಲಿ ವಾಯ್ಸ್ ಮ್ಯಾಜಿಕ್ಕುಕ.. ಎಲ್ಲವೂ ಒಟ್ಟೊಟ್ಟಿಗೇ ಮ್ಯಾಚ್ ಆಗಿ ಕುಣಿಯುವಂತೆ ಮಾಡಿದೆ. ಶಿವಣ್ಣ ಅವರ 125ನೇ ಸಿನಿಮಾ ವೇದ ಚಿತ್ರದ ಮೊದಲ ಹಾಡಿದು. ಇತ್ತೀಚೆಗಷ್ಟೇ ರಿಲೀಸ್ ಡೇಟ್ ಅನೌನ್ಸ್ ಮಾಡಿ ಚಿತ್ರದ ವೆಪನ್ಸ್ ಟೀಸರ್ ಬಿಟ್ಟಿದ್ದ ವೇದ, ಈಗ ಮೊದಲ ಹಾಡಿನಲ್ಲೇ ಮೋಡಿ ಮಾಡಿದೆ. ವಿಲನ್‍ಗಳನ್ನು ಶಿವಣ್ಣ ಚೆಂಡಾಡುವ ಹಾಡಿನ ಬ್ಯಾಕ್‍ಗ್ರೌಂಡ್‍ನಲ್ಲಿ ಬರುತ್ತದೆ. ಶಿವಣ್ಣನ ಒಂದೊಂದು ಹೊಡೆತಕ್ಕೂ ವಿಲನ್‍ಗಳು ಹಾರಿ ಬೀಳುತ್ತಿದ್ದರೆ, ಬ್ಯಾಕ್‍ಗ್ರೌಂಡ್‍ನಲ್ಲಿ.. ಗಿಲಕ್ಕೂ ಶಿವ ಗಿಲಕ್ಕೂ..

    ಗೀತಾ ಶಿವರಾಜ್‍ಕುಮಾರ್ ನಿರ್ಮಾಪಕಿಯಾಗಿರುವ ಮೊದಲ ಸಿನಿಮಾ ವೇದ. ಶಿವಣ್ಣ ಎದುರು ಗಾನವಿ ಲಕ್ಷ್ಮಣ್, ಉಮಾಶ್ರೀ, ಅದಿತಿ ಸಾಗರ್, ವೀಣಾ ಪೊನ್ನಪ್ಪ, ರಘು ಶಿವಮೊಗ್ಗ, ಜಗ್ಗಪ್ಪ, ಚೆಲುವರಾಜ್, ವಿನಯ್ ಬಿದ್ದಪ್ಪ, ಭರತ್ ಸಾಗರ್, ಪ್ರಸನ್ನ, ಸಂಜೀವ್, ಕುರಿ ಪ್ರತಾಪ್, ಲಾಸ್ಯ ನಾಗರಾಜ್.. ಹೀಗೆ ಕಲಾವಿದರ ದಂಡೇ ಇದೆ.

  • ನಖರನಖ ನಖರನಖ ನುಗ್ಗಿ ಬಂತೋ.. ಬೈರಾಗಿ ಹಾಡು..

    ನಖರನಖ ನಖರನಖ ನುಗ್ಗಿ ಬಂತೋ.. ಬೈರಾಗಿ ಹಾಡು..

    ಬೇರೆಯದೇ ರಿದಮ್ಮಿನಲ್ಲಿರೋ ಹಾಡು ನಖರನಖ ನಖರನಖ ನುಗ್ಗಿ ಬಂತೋ ನಾಡ ಹುಲಿ.. ಮಧ್ಯೆ ಮಧ್ಯೆ ಶಿವಪ್ಪ ಕಾಯೋ ತಂದೆ.. ಹಾಡು ನೆನಪಿಸುತ್ತೆ. ಇಡೀ ಟ್ರ್ಯಾಕ್ ಟಗರು ಟೈಟಲ್ ಟ್ರ್ಯಾಕ್ ನೆನಪಿಸುತ್ತೆ. ಆದರೆ ಬೇರೆಯದೇ ಫ್ಲೇವರ್ ಇದೆ.. ಹಾಡಿನಲ್ಲಿ ಶಿವಣ್ಣರ ಬೇರೆ ಬೇರೆ ಗೆಟಪ್ಪುಗಳು ಖುಷಿ ಕೊಡ್ತವೆ.

    ಶಿವಣ್ಣ ಅಭಿನಯದ 123ನೇ ಸಿನಿಮಾ ಬೈರಾಗಿಗೆ ವಿಜಯ್ ಮೆಲ್ಟನ್ ನಿರ್ದೇಶನದಿದೆ. ಅನೂಪ್ ಸಿಳೀನ್ ಸಂಗೀತದ ಹಾಡಿಗೆ ಸಾಹಿತ್ಯ ಒದಗಿಸಿರುವುದು ಡಾ. ವಿ.ನಾಗೇಂದ್ರ ಪ್ರಸಾದ್. ಅಂಥೋನಿ ದಾಸನ್ ಅವರ ಕಂಚಿನ ಕಂಠದಲ್ಲಿ ಬಂದಿರೋ ಹಾಡು ಕುಣಿಸೋ ಹಾಗಿದೆ.

    ಟಗರು ನಂತರ ಶಿವಣ್ಣ ಮತ್ತು ಡಾಲಿ ಒಟ್ಟಿಗೇ ನಟಿಸುತ್ತಿರೋ ಚಿತ್ರವಿದು. ಅಂಜಲಿ ನಾಯಕಿಯಾಗಿರೋ ಚಿತ್ರದಲ್ಲಿ ಅನು ಪ್ರಭಾಕರ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಇನ್ನೊಬ್ಬ ಯುವ ನಟ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಕೂಡಾ ನಟಿಸಿರೋ ಚಿತ್ರ ಬೈರಾಗಿ.

    ಕೃಷ್ಣ ಸಾರ್ಥಕ್ ನಿರ್ಮಾಣದ ಹಾಡನ್ನು ದುನಿಯಾ ವಿಜಯ್ ರಿಲೀಸ್ ಮಾಡಿದ್ದು ವಿಶೇಷವಾಗಿತ್ತು.

  • ಬೈರಾಗಿಯ ಸ್ಟಾರ್ ಸಿಂಗರ್ ಶರಣ್..!

    ಬೈರಾಗಿಯ ಸ್ಟಾರ್ ಸಿಂಗರ್ ಶರಣ್..!

    ಇತ್ತೀಚೆಗೆ ಒಂದು ವಿಡಿಯೋ ಭಾರಿ ಸದ್ದು ಮಾಡಿತ್ತು. ಬೈರಾಗಿ ಚಿತ್ರದಲ್ಲಿ ಶಿವಣ್ಣನ ಜೊತೆ ಹಾಡುವವರು ಯಾರು ಅನ್ನೋದು.. ಅವರು ಸ್ಟಾರ್ ನಟರೇ ಆಗಿರಲಿ ಅನ್ನೋದು ಸಂಗೀತ ನಿರ್ದೇಶಕ ಅನೂಪ್ ಸಿಳೀನ್ ಆಸೆಯಾಗಿತ್ತು. ಅದಕ್ಕಾಗಿ ಅವರು ಡಾಲಿ ಮತ್ತು ದುನಿಯಾ ವಿಜಯ್ ಅವರನ್ನು ಕೇಳಿದರೂ.. ಅವರು ಒಪ್ಪಿರಲಿಲ್ಲ. ಆ ವಿಡಿಯೋ ವೈರಲ್ ಆದ ಬೆನ್ನಲ್ಲೇ.. ಶಿವಣ್ಣನೇ ಒಂದು ಹೆಸರು ಹೇಳಿದ್ದರು. ಅವರೇ ಶರಣ್.

    ಎ ಫಾರ್ ಆಪಲ್

    ಬಿ ಫಾರ್ ಬಾರ್ಬರ್

    ಐ ಆಮ್ ಯುವರ ಹೆಡ್‍ಮಾಸ್ಟರ್..

    ಎಂದು ಶುರುವಾಗುವ ಹಾಡಿದು. ಶಿವಣ್ಣನ ಜೊತೆ ಶರಣ್ ಹಾಡಿದ್ದಾರೆ. ಪ್ರಮೋದ್ ಮರವಂತೆ ಸಾಹಿತ್ಯಕ್ಕೆ ಶಿವಣ್ಣ-ಶರಣ್ ಕಂಠ ಸಖತ್ತಾಗಿ ಕೂತಿದೆ.

    ಕೃಷ್ಣ ಸಾರ್ಥಕ್ ನಿರ್ಮಾಣದ ಚಿತ್ರಕ್ಕೆ ವಿಜಯ್ ಮಿಲ್ಟನ್ ನಿರ್ದೇಶನವಿದೆ. ಬೈರಾಗಿಯಲ್ಲಿ ಶಿವಣ್ಣ ಜೊತೆ ಡಾಲಿ, ಪೃಥ್ವಿ ಅಂಬರ್, ಅಂಜಲಿ, ಯಶ ಶಿವಕುಮಾರ್ ನಟಿಸುತ್ತಿದ್ದಾರೆ. 

  • ವೇದ ಅರ್ಧಶತಕ : ಚಿತ್ರತಂಡದವರಿಗೆ ಗೆಲುವಿನ ಪಾರಿತೋಷಕ

    ವೇದ ಅರ್ಧಶತಕ : ಚಿತ್ರತಂಡದವರಿಗೆ ಗೆಲುವಿನ ಪಾರಿತೋಷಕ

    ಗೀತಾ ಶಿವ ರಾಜ್ ಕುಮಾರ್ ನಿರ್ಮಾಣದ ಮೊದಲ ಚಿತ್ರ ವೇದ 50 ದಿನ ಪೂರೈಸಿದೆ. ವೇದ ಚಿತ್ರದ ಮೂಲಕ ಶಿವಣ್ಣ ನಿರ್ಮಾಪಕರಾಗಿದ್ದರು. ವೇದ ಅವರ 125ನೇ ಚಿತ್ರ ಕೂಡಾ ಆಗಿತ್ತು. ಹೆಣ್ಣು ಮಕ್ಕಳನ್ನು ಗೌರವಿಸಬೇಕು ಎಂಬ ಸಂದೇಶವನ್ನಿಟ್ಟುಕೊಂಡು ಬಂದಿದ್ದ ಚಿತ್ರ ವಿಶೇಷವಾಘಿ ಹೆಣ್ಣು ಮಕ್ಕಳ ಮನ ಗೆದ್ದಿತ್ತು. ಚಿತ್ರದಲ್ಲಿ ಕೂಡಾ ಶಿವಣ್ಣ ಅವರಿಗಿಂತ ಆದಿತಿ ಸಾಗರ್, ಗಾನವಿ ಲಕ್ಷ್ಮಣ್, ಶ್ವೇತಾ ಚೆಂಗಪ್ಪ, ವೀಣಾ ಪೊನ್ನಪ್ಪ, ಉಮಾಶ್ರೀ.. ಹೀಗೆ ಮಹಿಳಾ ಪಾತ್ರಧಾರಿಗಳೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದರು. ಹರ್ಷ ಜೊತೆ ಇದು 4ನೇ ಸಿನಿಮಾ. ಮೊದಲಿನ ಚಿತ್ರಗಳಿಗಿಂತ ಹೆಚ್ಚು ವೈಬ್ರೇಟ್ ಆಗಿದ್ದ ವೇದ, 50 ದಿನ ಪೂರೈಸಿದ ಸಂಭ್ರಮವನ್ನು ಗೀತಾ ಶಿವ ರಾಜ್ ಕುಮಾರ್ ಹಾಗೂ ಶಿವಣ್ಣ ಇಡೀ ಚಿತ್ರತಂಡದೊಂದಿಗೆ ಹಂಚಿಕೊಂಡರು.

    ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅವರು ನಟಿಸಿರುವ ವೇದ ಸಿನಿಮಾ 50 ದಿನ ಪೂರೈಸಿರುವ ಹಿನ್ನೆಲೆ  ಹಾಗೂ ಚಿತ್ರರಂಗಕ್ಕೆ ಶಿವಣ್ಣ ಕಾಲಿಟ್ಟು 37 ವರ್ಷ ಪೂರೈಸಿರೋ ಹಿನ್ನೆಲೆ ನಾಗವಾರದ ಶಿವರಾಜ್ ಕುಮಾರ್ ನಿವಾಸದಲ್ಲಿ  ಸಕ್ಸಸ್ ಸೆಲೆಬ್ರೇಷನ್ ಕಾರ್ಯಕ್ರಮ ನಡೆಸಲಾಗಿದೆ. ಶಿವಣ್ಣ ಆ್ಯಂಡ್ ಟೀಂ ಎರಡೂ ಕಾರ್ಯಕ್ರಮಗಳನ್ನ ಒಟ್ಟಿಗೆ ಆಚರಿಸಿದೆ. ವೇದ ಸಿನಿಮಾ ನಿಮ್ಮೆಲ್ಲರ ಆಶೀರ್ವಾದದಿಂದ 50 ದಿನ ಪೂರೈಸಿದೆ. ವೇದ ಸಿನಿಮಾ ಈಗ್ಲೂ ಚನ್ನಾಗಿ ಪ್ರದರ್ಶನ ಆಗ್ತಿದೆ. ಹರ್ಷ ಹಾಗು ಟೀಂ ತುಂಬಾ ಚನ್ನಾಗಿ ಕೆಲಸ ಮಾಡಿ ಈ ಸಿನಿಮಾ ಗೆಲ್ಲಿಸಿದ್ದಾರೆ ಎಂದರು ಗೀತಾ ಶಿವರಾಜ್ ಕುಮಾರ್.

    ನಾನು ಹೋದಲ್ಲೆಲ್ಲಾ ಸಿನಿಮಾನ ನೋಡಿ ಮೆಚ್ಚಿಕೊಂಡಿದ್ದಾರೆ.   ನನ್ನ ತಂದೆ ತಾಯಿಗೆ ನಮ್ಮ ವೇದ ಸಿನಿಮಾ ತಂಡಕ್ಕೆ ನನ್ನ ಧನ್ಯವಾದ. ವೇದ ಸಿನಿಮಾದ ಪುಷ್ಪ ಕ್ಯಾರೆಕ್ಟರ್ ತುಂಬಾ ಇಷ್ಟ ಆಯ್ತು.  ನನಗೆ ಆ ಪಾತ್ರ ಮಾಡ್ತೀನಾ ಅನ್ನೋ ಡೌಟ್ ಇತ್ತು. ಗೀತಾ ಶಿವರಾಜ್ ಕುಮಾರ್ ಸ್ವೀಟ್ ಆ್ಯಂಡ್ ಲವ್ಲಿ ಹಾರ್ಟ್ ಇರೋರು.  ಶಿವಣ್ಣ ಎನರ್ಜಿಟಿಕ್ ಅಂತ ನಮ್ಗೆಲ್ಲಾ ಗೊತ್ತು. ಆದ್ರೆ ಗೀತಾ ಶಿವರಾಜ್ ಕುಮಾರ್ ಶಿವಣ್ಣನಿಗಿಂತ ಎನರ್ಜಿಟಿಕ್ ಎಂದರು ನಾಯಕಿ ಗಾನವಿ ಲಕ್ಷ್ಮಣ್.

    ನನಗೂ ಇಬ್ಬರು ಹೆಣ್ಣು ಮಕ್ಖಳಿದ್ದಾರೆ ಎನ್ನುತ್ತಲೇ ಮಾತನಾಡಿದ ಶಿವಣ್ಣ, ಈ 37 ವರ್ಷದ ಜರ್ನಿಯಲ್ಲಿ ನನಗೆ ಹಲವಾರು ಜನ ನೆರವಿಗೆ ನಿಂತಿದ್ದಾರೆ. ನನ್ನ ಮೊದಲ ಚಿತ್ರಕ್ಕೆ ಅಮ್ಮ ನಿರ್ಮಾಪಕಿಯಾದರೆ, 125ನೇ ಚಿತ್ರಕ್ಕೆ ಪತ್ನಿ ನಿರ್ಮಾಪಕಿ ಎಂದು ಖುಷಿಗೊಂಡರು. ಚಿತ್ರತಂಡದ ಎಲ್ಲರಿಗೂ ಬೆಳ್ಳಿ ಪಾರಿತೋಷಕ ನೀಡಿ ಗೌರವಿಸಲಾಯಿತು.

  • ವೇದ ಒಟಿಟಿ ರಿಲೀಸ್ ಡೇಟ್ ಪಕ್ಕಾ..

    ವೇದ ಒಟಿಟಿ ರಿಲೀಸ್ ಡೇಟ್ ಪಕ್ಕಾ..

    2022ರ ಕೊನೆಯಲ್ಲಿ ಕನ್ನಡ ಚಿತ್ರರಂಗಕ್ಕೆ ಶುಭ ಸುದ್ದಿ ಕೊಟ್ಟ ವೇದ 50ನೇ ದಿನದತ್ತ ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ಶಿವಣ್ಣ ಅಭಿನಯದ 125ನೇ ಸಿನಿಮಾ, ಗೀತಾ ಶಿವರಾಜ್ ಕುಮಾರ್ ನಿರ್ಮಾಣದ ಮೊದಲ ಸಿನಿಮಾ.. ಶಿವಣ್ಣ-ಹರ್ಷ ಕಾಂಬಿನೇಷನ್`ನ 4ನೇ ಸಿನಿಮಾ.. ಹೀಗೆ ಹಲವು ವಿಷೇಷತೆಗಳಿದ್ದ ವೇದವನ್ನು ಕನ್ನಡಿಗರು ಬಾಚಿ ತಬ್ಬಿಕೊಂಡರು. ಹೆಣ್ಣು ಮಕ್ಕಳಿಗೆ ಗೌರವಿಸಬೇಕು ಎಂಬ ಸಂದೇಶವಿದ್ದ ರಕ್ತಸಿಕ್ತ ಕಥೆಯನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದರು. ಇದೀಗ ವೇದ ತೆಲುಗಿಗೂ ಡಬ್ ಆಗಿ ರಿಲೀಸ್ ಆಗುತ್ತಿದೆ. ಹೊಸ ಟ್ರೆಂಡ್ ಸೃಷ್ಟಿಸುವ ಹಾದಿಯಲ್ಲಿದೆ. ಇದೀಗ ಮನೆ ಮನೆಗೆ ಬರುವ ದಿನಾಂಕ ಫಿಕ್ಸ್ ಆಗಿದೆ ಎನ್ನುವ ಸುದ್ದಿ ಹೊರಬಿದ್ದಿದೆ.

    ವೇದ ಚಿತ್ರವನ್ನು ಝೀ ಟಿವಿ ಖರೀದಿಸಿತ್ತು. ಝೀಟಿವಿ ಸಹಯೋಗದಲ್ಲಿಯೇ ನಿರ್ಮಾಣವಾಗಿದ್ದ ವೇದ ಜೀ5ನಲ್ಲಿ ಪ್ರಸಾರವಾಗುವುದಕ್ಕೆ ವೇದಿಕೆ ಸಿದ್ಧವಾಗಿದೆ. ಫೆಬ್ರವರಿ 10ರಂದು ವೇದ ಪ್ರಸಾರವಾಗಲಿದೆ. ಶೀಘ್ರದಲ್ಲಿಯೇ ಅಧಿಕೃತವಾಗಿ ಇದನ್ನು ಅಧಿಕೃತವಾಗಿ ಘೋಷಿಸಲಾಗುವುದು.

    ಅಲ್ಲಿಗೆ ಪ್ರೇಕ್ಷಕರು ಇಷ್ಟಪಟ್ಟಿದ್ದ  ಗಿಲಕ್ಕೋ ಶಿವ ಗಿಲಕ್ಕೋ.. ಪುಷ್ಪ ಪುಷ್ಪ ಹಾಡನ್ನು ಅಭಿಮಾನಿಳು ಮನೆಯಲ್ಲಿಯೇ ಅಥವಾ ಮೊಬೈಲಿನಲ್ಲಿಯೇ ನೋಡಬಹುದು. ವೇದ ಶಿವಣ್ಣ ಅವರ 125ನೇ ಚಿತ್ರವಾದರೂ ಮಿಂಚಿದ್ದು ಆದಿತಿ ಸಾಗರ್. ಆ ಮೂಲಕ  ಶಿವರಾಜ್ ಕುಮಾರ್ ಮತ್ತೊಮ್ಮೆ ಪ್ರೇಕ್ಷಕರ ಹೃದಯ ಕದ್ದಿದ್ದರು. ಆದಿತಿ ಸಾಗರ್ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು. ಗಾನವಿ ಲಕ್ಷ್ಮಣ್, ಶ್ವೇತಾ ಚೆಂಗಪ್ಪ, ಗೀತಾ ಪೊನ್ನಪ್ಪ, ಉಮಾಶ್ರೀ.. ಎಲ್ಲರೂ ಒಬ್ಬರಿಗಿಂತ ಒಬ್ಬರು ಮಿಂಚಿದ್ದರು. ಇವೆಲ್ಲವುಗಳ ನಡುವೆ ಥಿಯೇಟರಿನಲ್ಲಿ ನೋಡಲು ಸಾಧ್ಯವಾಗದವರಿಗೆ ಈಗ  ಮನೆಯಲ್ಲಿಯೇ ವೇದ ನೋಡುವ ಅವಕಾಶ ಬಂದಿದೆ.

  • ಶಿವಣ್ಣನ ಸಿಂಪ್ಲಿಸಿಟಿಗೆ ಶರಣಾದ ಇನ್ನೊಬ್ಬ ಸ್ಟಾರ್ ನಟ

    ಶಿವಣ್ಣನ ಸಿಂಪ್ಲಿಸಿಟಿಗೆ ಶರಣಾದ ಇನ್ನೊಬ್ಬ ಸ್ಟಾರ್ ನಟ

    ಹ್ಯಾಟ್ರಿಕ್ ಹೀರೋ.. ಈಗ ಸೆಂಚುರಿ ಸ್ಟಾರ್ ಆಗಿರೋ ಶಿವಣ್ಣ 125ನೇ ಸಿನಿಮಾ ಬಿಡುಗಡೆಗೆ ತಯಾರಾಗುತ್ತಿದ್ದಾರೆ. ಇದುವರೆಗೆ ಶಿವಣ್ಣನ ಬಗ್ಗೆ ಮಾತನಾಡಿರುವ ದೊಡ್ಡದೊಡ್ಡ ಸ್ಟಾರ್ ನಟರೆಲ್ಲ ಶರಣಾಗಿರುವುದು ಅವರ ಸಿಂಪ್ಲಿಸಿಟಿಗೆ. ಅವರೂ ಅಂತನೇ ಅಲ್ಲ, ದೊಡ್ಮನೆಯ ಎಲ್ಲರ ಅತಿ ದೊಡ್ಡ ಆಭರಣ ಸಿಂಪ್ಲಿಸಿಟಿ. ಆ ಸಿಂಪ್ಲಿಸಿಟಿಗೆ ಇನ್ನೊಬ್ಬ ನಟ ಶರಣಾಗಿದ್ದಾರೆ. ಮಲಯಾಳಂ ಸ್ಟಾರ್ ನಟ ಜಯರಾಂ ಶಿವಣ್ಣನ ವ್ಯಕ್ತಿತ್ವಕ್ಕೆ ಮಾರು ಹೋಗಿದ್ದಾರೆ.

    ಜಾಹೀರಾತೊಂದರಲ್ಲಿ ನಾವಿಬ್ಬರೂ ಒಟ್ಟಿಗೇ ನಟಿಸಿದ್ದೆವು. ಆಗಿನಿಂದಲೂ ಶಿವಣ್ಣ ನನಗೆ ಪರಿಚಯ. ಇತ್ತೀಚೆಗೆ ಮಲಯಾಳಂ ಚಿತ್ರರಂಗದಲ್ಲಿ ಒಂದು ಕಾರ್ಯಕ್ರಮದಲ್ಲಿ ಪುನೀತ್ ಅವರ ಬೊಂಬೆ ಹೇಳುತೈತೆ ಹಾಡು ಹಾಡಿದ್ದೆ. ಆ ಕಾರ್ಯಕ್ರಮಕ್ಕೆ ಶಿವಣ್ಣ ಕೂಡಾ ಬರಬೇಕಿತ್ತು. ಬರಲಿಲ್ಲ. ಆದರೆ ನಂತರ ವಿಡಿಯೋ ನೋಡಿ ಮೆಚ್ಚುಗೆ ತಿಳಿಸಿದ್ದರು ಎನ್ನುವ ಜಯರಾಂ ಈಗ ಘೋಸ್ಟ್ ಚಿತ್ರದ ಮೂಲಕ ಕನ್ನಡಕ್ಕೆ ಬಂದಿದ್ದಾರೆ.

    ಶ್ರೀನಿ ನಿರ್ದೇಶನದ ಘೋಸ್ಟ್ ಚಿತ್ರದ ಸೆಟ್ಟಿಂಗ್‍ನಲ್ಲಿ ಶಿವಣ್ಣ ಲೈಟ್ ಬಾಯ್ಸ್ ಆಗಲೀ, ಬೇರೆಯವರೇ ಆಗಲಿ, ಅಭಿಮಾನಿಗಳೇ ಆಗಲಿ.. ಎಲ್ಲರೊಂದಿಗೆ ನಡೆದುಕೊಳ್ಳುವ ರೀತಿ ನನಗೆ ಇಷ್ಟವಾಯಿತು. ಅವರೊಬ್ಬ ಡೌನ್ ಟು ಅರ್ಥ್ ಮನುಷ್ಯ ಎಂದಿದ್ದಾರೆ. ನನಗೆ ಬೆಂಗಳುರು ಇಷ್ಟ. ಚಿತ್ರೀಕರಣಕ್ಕೆಂದು ಬೆಂಗಳೂರಿಗೆ ಬಂದಾಗ ಚಿತ್ರೀಕರಣ ಮುಗಿಸಿದವನೇ ಇಡೀ ಬೆಂಗಳೂರನ್ನು ಸುತ್ತುತ್ತೇನೆ. ಈಗಲೂ ಅಷ್ಟೆ, ಘೋಸ್ಟ್ ಚಿತ್ರೀಕರಣ ಮುಗಿದ ನಂತರ ಬೆಂಗಳೂರು ಸುತ್ತುವುದೇ ಕೆಲಸ ಎಂದಿದ್ದಾರೆ ಜಯರಾಂ. ಆದರೆ ಜಯರಾಂ ಅಷ್ಟು ದೊಡ್ಡ ನಟರಾಗಿದ್ದರೂ ರೈತ ಎಂದು ಕರೆಸಿಕೊಳ್ಳುವುದೇ ಇಷ್ಟವಂತೆ. ಇತ್ತೀಚೆಗೆ ಕೇರಳ ಸರ್ಕಾರದಿಂದ ಆದರ್ಶ ರೈತ ಪ್ರಶಸ್ತಿಯನ್ನೂ ಪಡೆದಿದ್ದಾರೆ ಜಯರಾಂ.

  • ಸುದೀಪ್`ಗೆ ಗೀತಾ ಶಿವರಾಜಕುಮಾರ್ ಕೊಟ್ಟ ಅಚ್ಚರಿ

    ಸುದೀಪ್`ಗೆ ಗೀತಾ ಶಿವರಾಜಕುಮಾರ್ ಕೊಟ್ಟ ಅಚ್ಚರಿ

    ಸುದೀಪ್ ಅವರ ಬಗ್ಗೆ ಎಲ್ಲ ವೇದಿಕೆಗಳಲ್ಲೂ ಮುಕ್ತವಾಗಿ ಹೊಗಳುವ ಶಿವಣ್ಣ, ಸುದೀಪ್ ನಮ್ಮ ಕುಟುಂಬದ ಸದಸ್ಯ ಎನ್ನುತ್ತಾರೆ. ಗೀತಾ ಅವರನ್ನು ಗೀತಕ್ಕ ಎಂದೇ ಕರೆಯುವ ಸುದೀಪ್ ಅವರಿಗೆ ಗೀತಕ್ಕ ಈ ಹುಟ್ಟುಹಬ್ಬಕ್ಕೆ ಒಂದು ವಿಶೇಷ ಗಿಫ್ಟ್ ಕೊಟ್ಟಿದ್ದಾರೆ.

    ಸುದೀಪ್ ಅವರ ಮನೆಗೆ ಶಿವಣ್ಣ ಮತ್ತು ಗೀತಾ ಶಿವರಾಜಕುಮಾರ್ ಹೋಗಿ ವಿಶೇಷ ಕೇಕ್ ತಯಾರಿಸಿ ಹ್ಯಾಪಿ ಬರ್ತ್‍ಡೇ ಎಂದು ಹೇಳಿ ಶುಭ ಕೋರಿದ್ದಾರೆ. ಸುದೀಪ್ ಹುಟ್ಟುಹಬ್ಬವನ್ನು ಅವರ ಕುಟುಂಬದ ಜೊತೆ ಶಿವಣ್ಣ ಕುಟುಂಬವೂ ಸೆಲಬ್ರೇಟ್ ಮಾಡಿದೆ.

    ಅಂದಹಾಗೆ ಕೇಕ್ ತಯಾರಿಸೋದ್ರಲ್ಲಿ ಗೀತಾ ಅವರು ಎಕ್ಸ್‍ಪರ್ಟ್. ಶಕ್ತಿಧಾಮದ ಮಕ್ಕಳಿಗೂ ಕೇಕ್ ತಯಾರಿಸೋ ಟ್ರೈನಿಂಗ್ ಕೊಡುತ್ತಿರೋ ಗೀತಾ ಸುದೀಪ್ ಅವರಿಗಾಗಿ ವಿಶೇಷ ಕೇಕ್ ಕಾಣಿಕೆ ಕೊಟ್ಟು ಹಾರೈಸಿದ್ದಾರೆ. 

  • ಹೊಸಪೇಟೆಯಲ್ಲಿ ಶಿವಣ್ಣ ನೋಡೋಕೆ ನೂಕುನುಗ್ಗಲು

    ಹೊಸಪೇಟೆಯಲ್ಲಿ ಶಿವಣ್ಣ ನೋಡೋಕೆ ನೂಕುನುಗ್ಗಲು

    ಹೊಸಪೇಟೆ. ದೊಡ್ಮನೆಯವರ ಅಭಿಮಾನಿ ದೇವರುಗಳ ಅರಮನೆ. ಈ ಹೊಸಪೇಟೆಯಲ್ಲೀಗ ವೇದ ಕ್ರೇಜ್. ವರ್ಷಾರಂಭದಲ್ಲೇ ಭರ್ಜರಿ ಹಿಟ್ ಕೊಟ್ಟು ಸಂಚಲನ ಸೃಷ್ಟಿಸಿರುವ ಶಿವರಾಜ  ಕುಮಾರ್ ಮೈಸೂರು ಭಾಗದ ಯಾತ್ರೆ ಮುಗಿಸಿ ಉತ್ತರ ಕನಾಟಕಕ್ಕೆ ಕಾಲಿಟ್ಟಿದ್ದಾರೆ. ಪತ್ನಿ ಹಾಗೂ ನಿರ್ಮಾಪಕಿ ಗೀತಾ ಅವರ ಜೊತೆಯಲ್ಲಿ ಚಿತ್ರದುರ್ಗ, ಚಳ್ಳಕೆರೆ, ಬಳ್ಳಾರಿ, ಹೊಸಪೇಟೆಯಲ್ಲಿ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ.

     ಬಳ್ಳಾರಿಯ ನಟರಾಜ್ ಹಾಗೂ ಉಮಾ ಚಿತ್ರಮಂದಿರಕ್ಕೆ ಶಿವಣ್ಣ ದಂಪತಿ ಹಾಗೂ ವೇದ ಚಿತ್ರ ತಂಡ ಭೇಟಿ ನೀಡಿತ್ತು. ಈ ವೇಳೆ ಶಿವಣ್ಣನ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಈ ವೇಳೆ ನೂಕು ನುಗ್ಗಲು ಉಂಟಾದ ಪರಿಣಾಮ ಪೊಲೀಸರು ಅಭಿಮಾನಿಗಳಿಗೆ ಲಾಠಿ ರುಚಿ ತೋರಿಸಿದ್ದಾರೆ. ಬಹಳಷ್ಟು ಜನರಿದ್ದ ಕಾರಣ ಅಭಿಮಾನಿಗಳನ್ನು ನಿಯಂತ್ರಣ ಮಾಡಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಶಿವಣ್ಣ ಅವರಿಗೆ ಹೂಮಳೆ ಗರೆದು ಸ್ವಾಗತ ಕೋರಿದ್ದಾರೆ ಅಭಿಮಾನಿಗಳು. ಶಿವಣ್ಣ ದಂಪತಿ ಅಭಿಮಾನಿಗಳ ಜೊತೆಗೆ ಕೆಲ ಕಾಲ ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ.

    ಪರಿಸ್ಥಿತಿ ಹತೋಟಿ ಮೀರುತ್ತಿರುವುದನ್ನು ಅರಿತ ಶಿವರಾಜ್ ಕುಮಾರ್ ಪೊಲೀಸರಿಗೆ ಮನವಿ ಮಾಡಿ ಲಾಠಿ ಪ್ರಹಾರ ನಿಯಂತ್ರಿಸಿದ್ದಾರೆ. ಹೊಸಪೇಟೆಯಲ್ಲಿಯಂತೂ ಅಭಿಮಾನಿಗಳ ಮಧ್ಯೆ ಪುಟ್ಟ ಜಾಗದಲ್ಲಿಯೇ ಅಭಿಮಾನಿಗಳ ಒತ್ತಡಕ್ಕೆ ಮಣಿದು ಪುಷ್ಪಾ ಪುಷ್ಪಾ ಹಾಗೂ ಗಿಲಕ್ಕೋ ಹಾಡಿಗೆ ಡ್ಯಾನ್ಸ್ ಮಾಡಿದರು. ಅಭಿಮಾನಿಗಳು ಹುಚ್ಚೆದ್ದು ಕುಣಿದರು.

    ಅಂದಹಾಗೆ ಇಂದು ದಾವಣಗೆರೆ, ಹರಿಹರ,ರಾಣೆಬೆನ್ನೂರು, ಹಾವೇರಿ, ಗದಗ ಜಿಲ್ಲೆಗಳಿಗೆ ವೇದ ಚಿತ್ರತಂಡ ಬರುತ್ತಿದೆ. ಶಿವಣ್ಣ ಅಷ್ಟೇ ಅಲ್ಲ, ನಿರ್ದೇಶಕ ಹರ್ಷ, ಗಾನವಿ, ಆದಿತಿ ಸಾಗರ್ ಸೇರಿದಂತೆ ಇಡೀ ಚಿತ್ರತಂಡ ಗೆಲುವಿನ ಯಾತ್ರೆಯಲ್ಲಿ ಊರೂರು ತಲುಪುತ್ತಿದೆ.