ಓಂ. 1995ರಲ್ಲಿ ರಿಲೀಸ್ ಆದ ಸಿನಿಮಾ. ಕನ್ನಡದಲ್ಲಿ ರೌಡಿಸಂ ಚಿತ್ರಗಳಿಗೆ ಓಂಕಾರ ಹಾಕಿದ ಸಿನಿಮಾ. ಶಿವರಾಜ್ ಕುಮಾರ್ ಇಮೇಜ್ ಬದಲಿಸಿದ ಸಿನಿಮಾ. ಉಪೇಂದ್ರ ನಿರ್ದೇಶನದ ಸಿನಿಮಾ ಕೇವಲ ಕನ್ನಡದಲ್ಲಷ್ಟೇ ಅಲ್ಲ, ದಕ್ಷಿಣ ಭಾರತ ಚಿತ್ರರಂಗದಲ್ಲೇ ದಾಖಲೆ ಸೃಷ್ಟಿಸಿದ ಚಿತ್ರ. ಆ ಚಿತ್ರ ರಿಲೀಸ್ ಆಗಿ 25 ವರ್ಷಗಳಾಗಿವೆ. ಅಂದಹಾಗೆ ಅತೀ ಹೆಚ್ಚು ಬಾರಿ ರೀ-ರಿಲೀಸ್ ಆದ ಚಿತ್ರವೂ ಓಂ. ಅಷ್ಟೇ ಏಕೆ, ಪ್ರತಿ ಬಾರಿ ರಿಲೀಸ್ ಆದಾಗಲೂ ಬಾಕ್ಸಾಫೀಸ್ನಲ್ಲಿ ಯಶಸ್ಸು ಕಂಡ ಸಿನಿಮಾ ಓಂ.
ಶಿವರಾಜ್ ಕುಮಾರ್, ಪ್ರೇಮಾ, ಶ್ರೀಶಾಂತಿ ಪ್ರಧಾನ ಪಾತ್ರದಲ್ಲಿ ಚಿತ್ರದಲ್ಲಿ ರಿಯಲ್ ರೌಡಿಗಳೂ ಕಾಣಿಸಿಕೊಂಡಿದ್ದರು. ಹೀಗೆ ಹಲವಾರು ಸಂಚಲನ ಸೃಷ್ಟಿಸಿದ್ದ ಚಿತ್ರದ ರಜತ ಮಹೋತ್ಸವನ್ನು ಚಿತ್ರತಂಡ ವಿಶೇಷವಾಗಿಯೇ ಆಚರಿಸುತ್ತಿದೆ.
OM 550 Releases In 20 Years - Exclusive
ಶಿವರಾಜ್ ಕುಮಾರ್ ಅಭಿಮಾನಿಗಳು ಮೇ 18ರಂದು ಟ್ವಿಟರ್ನಲ್ಲಿ ಕಾಮನ್ ಡಿಪಿ ಸೃಷ್ಟಿಸುತ್ತಿದ್ದಾರೆ. ಅಭಿಮಾನಿಗಳ ಜೊತೆ ಕೈ ಜೋಡಿಸಿರುವುದು ನಿರ್ದೇಶಕರಾದ ಸಂತೋಷ್ ಆನಂದ ರಾಮ್, ಸಿಂಪಲ್ ಸುನಿ, ಬಹದ್ದೂರ್ ಚೇತನ್, ಪವನ್ ಒಡೆಯರ್, ರಿಷಬ್ ಶೆಟ್ಟಿ, ಯೋಗಿ ಜಿ.ರಾವ್. ಇದೆಲ್ಲದರ ಜೊತೆ ಇನ್ನೂ ಹಲವು ಅಚ್ಚರಿಗಳಿವೆ.
Om To Re-Release in New Technology - Exclusive
OM 550 Releases In 20 Years - Exclusive