ಮುತ್ತಪ್ಪ ರೈ, ಒಂದಾನೊಂದು ಕಾಲದಲ್ಲಿ ಡಾನ್. ಅದಾದ ಮೇಲೆ ಭೂಗತ ಜಗತ್ತಿನ ಸಂಪರ್ಕ ಬಿಟ್ಟು ಸಮಾಜಮುಖಿಯಾಗಿ ಗುರುತಿಸಿಕೊಂಡಿದ್ದರು. ಜೈ ಕರ್ನಾಟಕ ಸಂಘಟನೆ ಮೂಲಕ ಕನ್ನಡ ಮತ್ತು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದ ಮುತ್ತಪ್ಪ ರೈ, ಕ್ಯಾನ್ಸರ್ನಿಂದ ಮೃತಪಟ್ಟಿದ್ದಾರೆ.
ಏ.30ರಂದು ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂರ್ನಾಲ್ಕು ದಿನಗಳಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮುತ್ತಪ್ಪ ರೈ, ಬೆಳಗ್ಗೆ 2.30ರ ಸುಮಾರಿನಲ್ಲಿ ಮೃತಪಟ್ಟಿದ್ದಾರೆ
Muthappa Rai First Clapped Movie
ಮುತ್ತಪ್ಪ ರೈ ಅವರಿಗೆ ಇಬ್ಬರು ಗಂಡು ಮಕ್ಕಳು ಮತ್ತು ಮೂವರು ಸಹೋದರರು ಹಾಗೂ ಒಬ್ಬ ಸಹೋದರಿ ಇದ್ದಾರೆ. ಒಬ್ಬ ಮಗ ಕೆನಡಾದಲ್ಲಿದ್ದು, ಇನ್ನೊಬ್ಬ ಮಗ ಬೆಂಗಳೂರಿನಲ್ಲೇ ಇದ್ದಾರೆ. ಲಾಕ್ ಡೌನ್ಗೂ ಮುನ್ನ ಕೆನಡಾಗೆ ಹೋಗಿದ್ದ ಮುತ್ತಪ್ಪ ರೈ ಅವರ ಕಿರಿಯ ಪುತ್ರನಿಗೆ ಅಂತ್ಯ ಸಂಸ್ಕಾರಕ್ಕೂ ಅವಕಾಶ ಸಿಗಲ್ಲ.
ಇಂದು ಮಧ್ಯಾಹ್ನ ಬಿಡದಿಯಲ್ಲಿ ಮುತ್ತಪ್ಪ ರೈ ಅಂತ್ಯ ಸಂಸ್ಕಾರ ನಡೆಯಲಿದೆ. ಕೊರೊನಾ ನಡುವೆ ತಾನೇನಾದರೂ ಸತ್ತರೆ, ನಿಯಮಗಳಂತೆ ಅಂತ್ಯ ಸಂಸ್ಕಾರ ಮಾಡಿ ಎಂದಿದ್ದರಂತೆ ಮುತ್ತಪ್ಪ ರೈ. ಅದೇ ರೀತಿ ಕುಟುಂಬಸ್ಥರ ಸಮ್ಮುಖದಲ್ಲಷ್ಟೇ ಅಂತ್ಯ ಸಂಸ್ಕಾರ ನಡೆಯಲಿದೆ.