` vikranth rona, - chitraloka.com | Kannada Movie News, Reviews | Image

vikranth rona,

  • ವಿಕ್ರಾಂತ್ ರೋಣನಿಗೆ 3ನೇ ಬಲ

    ವಿಕ್ರಾಂತ್ ರೋಣನಿಗೆ 3ನೇ ಬಲ

    ವಿಕ್ರಾಂತ್ ರೋಣ ಚಿತ್ರಕ್ಕೆ ಕಿಚ್ಚ ಸುದೀಪ್ ಹೀರೋ ಆದಾಗಲೇ ಒಂದು ಶಕ್ತಿ ಸಿಕ್ಕಿತ್ತು. ಅನೂಪ್ ಭಂಡಾರಿ ನಿರ್ದೇಶನದಲ್ಲಿ ತಯಾರಾಗುತ್ತಿರೋ ಸಿನಿಮಾ ಭರ್ಜರಿ ಸೌಂಡ್ ಮಾಡುತ್ತಿದೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್ ಆಗುತ್ತಿರೋ ಸಿನಿಮಾ ಇಂಗ್ಲಿಷ್‍ನಲ್ಲೂ ರಿಲೀಸ್ ಆಗುತ್ತಿರೋದು ವಿಶೇಷ. ವಿಕ್ರಾಂತ್ ರೋಣ ಚಿತ್ರಕ್ಕೆ ಒಂದೊಂದು ಭಾಷೆಯಲ್ಲಿ ಒಬ್ಬೊಬ್ಬ ಸ್ಟಾರ್ ಸಪೋರ್ಟ್ ಮಾಡುತ್ತಿದ್ದಾರೆ.

    ಹಿಂದಿಯಲ್ಲಿ ಖುದ್ದು ಸಲ್ಮಾನ್ ಖಾನ್ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದ್ದಾರೆ. ಇನ್ನೊಂದೆಡೆ ವಿತರಣೆಯ ಜವಾಬ್ದಾರಿ ಹೊತ್ತಿರುವುದು ದೇಶದ ಪ್ರತಿಷ್ಠಿತ ಸಂಸ್ಥೆ ಝೀ ಸ್ಟುಡಿಯೋಸ್. ಈಗ ಪಿವಿಆರ್ ಸಿನಿಮಾಸ್ ಕೂಡಾ ಕೈಜೋಡಿಸಿದೆ. ಅಲ್ಲಿಗೆ ವಿಕ್ರಾಂತ್ ರೋಣನಿಗೆ 3ನೇ ಬಲ ಸಿಕ್ಕಿದೆ.

    ವಿಕ್ರಾಂತ್ ರೋಣ ಫಿಕ್ಷನ್ ಸಿನಿಮಾ ಆಗಿದ್ದು, ಸುದೀಪ್ ಜೊತೆ ನಿರೂಪ್ ಭಂಡಾರಿ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಜುಲೈ 28ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.

  • ವಿಕ್ರಾಂತ್ ರೋಣನಿಗೆ ಸಲ್ಲು ಪವರ್

    ವಿಕ್ರಾಂತ್ ರೋಣನಿಗೆ ಸಲ್ಲು ಪವರ್

    ಕನ್ನಡದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ವಿಕ್ರಾಂತ್ ರೋಣ ಈಗಾಗಲೇ ಮೇಕಿಂಗ್‍ನಿಂದ ಗಮನ ಸೆಳೆದಿದೆ. ಟೀಸರ್ ವ್ಹಾವ್ ಎನ್ನಿಸಿದೆ. ಗುಮ್ಮನ ಕಥೆಯ ಸಸ್ಪೆನ್ಸ್ ಕೊಟ್ಟಿರುವ ಅನೂಪ್ ಭಂಡಾರಿ ಚಿತ್ರವನ್ನು 3ಡಿಯಲ್ಲೂ ರಿಲೀಸ್ ಮಾಡುತ್ತಿದ್ದಾರೆ. ಜುಲೈ 28ಕ್ಕೆ ರಿಲೀಸ್ ಆಗುತ್ತಿರೋ ಕಿಚ್ಚನ ಡಿಫರೆಂಟ್ ಚಿತ್ರಕ್ಕೆ ಸಲ್ಮಾನ್ ಖಾನ್ ಸಪೋರ್ಟು ಕೂಡಾ ಸಿಕ್ಕಿದೆ.

    ವಿಕ್ರಾಂತ್ ರೋಣ ಚಿತ್ರದ ಹಿಂದಿ ವರ್ಷನ್‍ನ್ನು ಸಲ್ಮಾನ್ ಖಾನ್ ಅವರ ಎಸ್‍ಕೆಎಫ್ ರಿಲೀಸ್ ಮಾಡುತ್ತಿದೆ. ಸಲ್ಮಾನ್ ಮತ್ತು ಸುದೀಪ್ ಸ್ನೇಹ ಹೊಸದೇನಲ್ಲ. ದಬಾಂಗ್‍ನಲ್ಲಿ ಕೇವಲ ಸಲ್ಮಾನ್ ಖಾನ್ ಅವರಿಗಾಗಿ ವಿಲನ್ ಆಗಿ ನಟಿಸಿದ್ದರು ಕಿಚ್ಚ. ಸುದೀಪ್ ಅವರೊಂದಿಗೆ ಇರುವ ಸ್ನೇಹವನ್ನು ವಿಭಿನ್ನ ರೀತಿಯಲ್ಲಿ ಸೆಲಬ್ರೇಟ್ ಮಾಡಿರುವುದು ಸಲ್ಮಾನ್ ಖಾನ್. ಈಗ ವಿಕ್ರಾಂತ್ ರೋಣ ಹಿಂದಿ ಡಿಸ್ಟ್ರಿಬ್ಯೂಷನ್ ಹೊಣೆ ಹೊತ್ತಿದ್ದಾರೆ ಸಲ್ಮಾನ್.

    ವಿಕ್ರಾಂತ್ ರೋಣ ಚಿತ್ರಕ್ಕೆ ಈಗಾಗಲೇ ಬೇರೆ ಬೇರೆ ಚಿತ್ರರಂಗದಲ್ಲಿ ಸ್ಟಾರ್ ನಟರ ಬೆಂಬಲ ಸಿಕ್ಕಿದೆ. ಕನ್ನಡದ ಜೊತೆಗೆ ಏಕಕಾಲದಲ್ಲಿ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ನಿರ್ಮಾಣ ಜಾಕ್ ಮಂಜು ಅವರದ್ದು. ಸುದೀಪ್ ಜೊತೆಗೆ ನಿರೂಪ್ ಭಂಡಾರಿ, ನೀತು ಜೋಸೆಫ್, ಜಾಕ್ವೆಲಿನ್ ಫರ್ನಾಂಡಿಸ್ ಸೇರಿದಂತೆ ಘಟಾನುಘಟಿ ಕಲಾವಿದರ ದಂಡೇ ಗುಮ್ಮನ ಕಥೆಯಲ್ಲಿದೆ.

  • ವಿಷ್ಯುಯಲ್ ಮ್ಯಾಜಿಕ್ ತೋರಿಸಿದ ವಿಕ್ರಾಂತ್ ರೋಣ

    ವಿಷ್ಯುಯಲ್ ಮ್ಯಾಜಿಕ್ ತೋರಿಸಿದ ವಿಕ್ರಾಂತ್ ರೋಣ

    ವಿಕ್ರಾಂತ್ ರೋಣ ಚಿತ್ರದ ಒಂದಿಷ್ಟು ತುಣುಕುಗಳನ್ನು ತೋರಿಸಿದ್ದಾರೆ ನಿರ್ದೇಶಕ ಅನೂಪ್ ಭಂಡಾರಿ. ನೋಡಿದ ಪ್ರತಿಯೊಬ್ಬರಿಗೂ ವ್ಹಾವ್ ಎನ್ನಿಸುವಂತಿದೆ. ನಿರ್ಮಾಪಕ ಜಾಕ್ ಮಂಜು ಅವರು ಮಾಡಿರುವ ವೆಚ್ಚ ಕಣ್ಣಿಗೆ ಕಾಣುತ್ತಿದೆ. ಸುದೀಪ್ ಹುಟ್ಟುಹಬ್ಬಕ್ಕೆಂದೇ ಬಿಡುಗಡೆಯಾದ ವಿಕ್ರಾಂತ್ ರೋಣ ಚಿತ್ರದ ತುಣುಕುಗಳು, ಮೇಕಿಂಗ್ ಕ್ವಾಲಿಟಿ ಅದ್ಭುತವಾಗಿದೆ. ಅನೂಪ್ ಭಂಡಾರಿ ರಿಲೀಸ್ ಮಾಡಿರುವುದು ಡೆಡ್ ಮ್ಯಾನ್ ಆಂಥಮ್‍ನ ಟೀಸರ್‍ನ್ನು ಮಾತ್ರ.

    ಟೀಸರ್ ವಿಷ್ಯುಯಲಿ ರಿಚ್ ಆಗಿದೆ. ಒಂದೊಂದು ಫ್ರೇಮ್‍ನಲ್ಲೂ ಡೈರೆಕ್ಟರ್ ಹಾಕಿರುವ ಶ್ರಮ ಗೋಚರವಾಗುತ್ತಿದೆ. ಐದೂ ಭಾಷೆಗಳಲ್ಲಿ ತಯಾರಾಗುತ್ತಿರುವ ವಿಕ್ರಾಂತ್ ರೋಣ ರಿಲೀಸ್ ಆಗುವುದೇನಿದ್ದರೂ ಕೋಟಿಗೊಬ್ಬ 3 ನಂತರವೇ. ಸ್ವತಃ ಸುದೀಪ್ ಇದನ್ನು ಹೇಳಿರೋದ್ರಿಂದ ಈ ಚಿತ್ರವನ್ನು ಕೂಡಾ 2022ಕ್ಕೆ ಕಾಯ್ದಿರಿಸಬೇಕು.

  • ಸಂಗೀತ ನಿರ್ದೇಶಕ ಅಜನೀಶ್`ಗೆ ಸಂಗೀತ ನಿರ್ದೇಶಕರ ಬಹುಪರಾಕ್

    ಸಂಗೀತ ನಿರ್ದೇಶಕ ಅಜನೀಶ್`ಗೆ ಸಂಗೀತ ನಿರ್ದೇಶಕರ ಬಹುಪರಾಕ್

    ಒಬ್ಬ ನಟನ ನಟನೆಯನ್ನು ಇನ್ನೊಬ್ಬ ನಟ ಹೊಗಳಿದಾಗ, ಇಷ್ಟಪಟ್ಟಾಗ ಸಿಗುವ ಖುಷಿಯೇ ಬೇರೆ. ಒಬ್ಬ ನಿರ್ದೇಶಕನಿಗೂ ಅಷ್ಟೆ, ಇನ್ನೊಬ್ಬ ನಿರ್ದೇಶಕರು ಆತನ ನಿರ್ದೇಶನ ಹೊಗಳಿದಾಗ ಸಿಗುವ ಆತ್ಮತೃಪ್ತಿಯೇ ಬೇರೆ. ಸದ್ಯಕ್ಕೆ ಅಂತಾ ಖುಷಿಯಲ್ಲಿರೋದು ಅಜನೀಶ್ ಲೋಕನಾಥ್.

    ಸದ್ಯಕ್ಕೆ ದೇಶದಾದ್ಯಂತ ಟ್ರೆಂಡಿಂಗ್‍ನಲ್ಲಿರೋದು ಅಜನೀಶ್ ಲೋಕನಾಥ್ ಕಂಪೋಸ್ ಮಾಡಿರುವ ರಾರಾ ರಕ್ಕಮ್ಮ ಸಾಂಗ್. ವಿಕ್ರಾಂತ್ ರೋಣ ಚಿತ್ರದ ಬ್ರಾಂಡ್ ಅಂಬಾಸಿಡರ್ ಆಗಿರೋ ಹಾಡು ಜನರಿಗೆ ಅದೆಷ್ಟು ಇಷ್ಟವಾಗಿದೆಯೆಂದರೆ, ಸಿಕ್ಕ ಸಿಕ್ಕ ಕಡೆ ಅಭಿಮಾನಿಗಳು ಹಾಡಿ ಕುಣಿಯುತ್ತಿದ್ದಾರೆ. ಸುದೀಪ್, ಜಾಕ್ವೆಲಿನ್ ಅಷ್ಟೆ ಅಲ್ಲ, ಬೇರೆ ಬೇರೆ  ಸಿನಿಮಾ ತಾರೆಗಳು ಸ್ಟೆಪ್ ಹಾಕುತ್ತಿದ್ದಾರೆ. ಇದರ ನಡುವೆ ಸಂಗೀತ ನಿರ್ದೇಶಕ ಗುರುಕಿರಣ್, ಅಜನೀಶ್ ಲೋಕನಾಥ್ ಅವರನ್ನು ಸಂದರ್ಶನ ಮಾಡಿದ್ದಾರೆ.

    ಈಗ ಇನ್ನೊಬ್ಬ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ರಾರಾ ರಕ್ಕಮ್ಮ ಹಾಡಿನ ಮ್ಯೂಸಿಕ್ ನುಡಿಸಿ ಥ್ರಿಲ್ಲಾಗಿ ಅಜನೀಶ್‍ಗೆ ವಿಷ್ ಮಾಡಿದ್ದಾರೆ. ಸದ್ಯಕ್ಕಂತೂ ಅಜನೀಶ್ ಖುಷಿಯ ಉತ್ತುಂಗದಲ್ಲಿದ್ದಾರೆ. ಏಕೆಂದರೆ ಈಗಿನ್ನೂ 777 ಚಾರ್ಲಿ ಸೂಪರ್ ಹಿಟ್ ಆಗಿದ್ದು, ಆ ಚಿತ್ರದ ಮ್ಯೂಸಿಕ್ ಹೀರೋ ಕೂಡಾ ಅವರೇ.

  • ಸಿಂಹಾಸನದ ಮೇಲೆ ವಿಕ್ರಾಂತ್ ರೋಣ

    phantom image

    ಕಿಚ್ಚ ಸುದೀಪ್ ಸಿಂಹಾಸನವೇರಿದ್ದಾರೆ. ಇದು ಫ್ಯಾಂಟಮ್ ಚಿತ್ರಕ್ಕಾಗಿ. ಸದ್ದೇ ಇಲ್ಲದ ಸರ್‍ಪ್ರೈಸ್ ಕೊಟ್ಟಿದ್ದಾರೆ ನಿರ್ದೇಶಕ ಅನೂಪ್ ಭಂಡಾರಿ. ಸಿಂಹಾಸನದ ಮೇಲೆ ಕುಳಿತಿರೋ ವಿಕ್ರಾಂತ್ ರೋಣನ ಪೋಸ್ಟರ್ ಹೊರಬಿಟ್ಟಿದ್ದಾರೆ. ಜೊತೆಗೆ ಕೈಯ್ಯಲ್ಲಿ ಗನ್.

    ವಿಕ್ರಾಂತ್ ರೋಣ ಅನ್ನೋ ಹೆಸರಲ್ಲಿ ಎಷ್ಟು ಪವರ್ ಇದೆಯೋ, ಅಷ್ಟೇ ಪವರ್ ಆತನ ಪಾತ್ರಕ್ಕೂ ಇದೆ. ಅವನು ತುಂಬಾ ಪವರ್‍ಫುಲ್. ಅವನು ಏನು ಮಾಡ್ತಾನೋ ಯಾರಿಗೂ ಅರ್ಥ ಆಗಲ್ಲ. ಆದರೆ, ಅದರ ಹಿಂದೆ ಬಲವಾದ ಕಾರಣ ಇರುತ್ತೆ ಅನ್ನೋದು ಅನೂಪ್ ಭಂಡಾರಿ ಮಾತು.

    ಹೈದರಾಬಾದ್‍ನಲ್ಲಿ ಫ್ಯಾಂಟಮ್ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಶೀಘ್ರದಲ್ಲೇ ಒಂದೊಂದೇ ಪಾತ್ರದ ಲುಕ್ ಬಹಿರಂಗವಾಗಲಿದೆ.

  • ಸ್ಯಾಂಡಲ್‍ವುಡ್ 2022 ರಿಪೋರ್ಟ್ : ಹಿಟ್..ಫ್ಲಾಪ್..ಸ್ಟಾರ್ಸ್ ಲೆಕ್ಕ..

    ಸ್ಯಾಂಡಲ್‍ವುಡ್ 2022 ರಿಪೋರ್ಟ್ : ಹಿಟ್..ಫ್ಲಾಪ್..ಸ್ಟಾರ್ಸ್ ಲೆಕ್ಕ..

    2022 ಶುರುವಾದಾಗ ಭಯವಿತ್ತು. ಈಗ ಕೊನೆಯಾಗುತ್ತಿರುವಾಗಲೂ ಒಂದು ಆತಂಕವಿದೆ. ಆರಂಭ ಮತ್ತು ಅಂತ್ಯದ ಆತಂಕಕ್ಕೆ ಕಾರಣ ಎರಡೂ ಕೊರೊನಾವೇ. ಬಾಲಿವುಡ್‍ಗೆ ಸವಾಲು ಹಾಕಿದ ದಕ್ಷಿಣದ ಚಿತ್ರರಂಗಗಳೆಲ್ಲ ಭರ್ಜರಿ ಸಕ್ಸಸ್ ರುಚಿ ನೋಡಿವೆ. ತೆಲುಗಿನಲ್ಲಿ ಆರ್.ಆರ್.ಆರ್. ಪುಷ್ಪ (ಕಳೆದ ವರ್ಷ ರಿಲೀಸ್ ಆದರೂ ಸೆನ್ಸೇಷನ್ 2022ರಲ್ಲೂ ಇತ್ತು), ಮೇಜರ್, ಮಲಯಾಳಂನಲ್ಲಿ ಹೃದಯಂ, ಕಡೇವರ್, ಜನಗಣಮನ, ತಮಿಳಿನಲ್ಲಿ ವಿಕ್ರಂ, ಪೊನ್ನಿಯನ್ ಸೆಲ್ವನ್, ಲವ್ ಟುಡೇ ಚಿತ್ರಗಳು ಭಾರಿ ಗೆಲುವು ದಾಖಲಿಸಿದವು. ಕನ್ನಡದ ವಿಷಯಕ್ಕೆ ಬಂದರೆ ಈ ವರ್ಷ ಕಂಟೆಂಟ್ ಚಿತ್ರಗಳದ್ದೇ ಸದ್ದು.

    ಈ ವರ್ಷ ರಿಲೀಸ್ ಆಗಿದ್ದು ಒಟ್ಟು 200+ ಸಿನಿಮಾ. ಹೂಡಿಕೆಯಾದ ಹಣದ ಮೊತ್ತ 500 ಕೋಟಿಗೂ ಹೆಚ್ಚು.

    ಬ್ಲಾಕ್ ಬಸ್ಟರ್ ಚಿತ್ರಗಳು 5 : ಕೆಜಿಎಫ್ ಚಾಪ್ಟರ್ 2 (1250+ ಕೋಟಿ), ಕಾಂತಾರ (400+ಕೋಟಿ), ವಿಕ್ರಾಂತ್ ರೋಣ (200+ಕೋಟಿ), 777 ಚಾರ್ಲಿ (150+ಕೋಟಿ) ಹಾಗೂ ಜೇಮ್ಸ್ (100+ಕೋಟಿ)

    ಹಿಟ್ ಸಿನಿಮಾಗಳು : ವೇದ. ಗಾಳಿಪಟ 2, ಗುರು ಶಿಷ್ಯರು, ಗಂಧದ ಗುಡಿ, ಲವ್ ಮಾಕ್ಟೇಲ್ 2

    ಗಮನ ಸೆಳೆದವು : ಧರಣಿ  ಮಂಡಲ ಮಧ್ಯದೊಳಗೆ, ವೀಲ್ ಚೇರ್ ರೋಮಿಯೋ, ಕಂಬ್ಳಿಹುಳ, ತೂತು ಮಡಿಕೆ, ಲವ್ 360, 10

    ನಾಯಕಿಯರ ಮೋಡಿ : ಸಪ್ತಮಿಗೌಡ (ಕಾಂತಾರ), ಸಂಗೀತಾ ಶೃಂಗೇರಿ (777 ಚಾರ್ಲಿ), ಐಶಾನಿ ಶೆಟ್ಟಿ (ಧರಣಿ ಮಂಡಲ ಮಧ್ಯದೊಳಗೆ), ನಿಶ್ವಿಕಾ ನಾಯ್ಡು (ಗುರು ಶಿಷ್ಯರು), ಆದಿತಿ ಸಾಗರ್ (ವೇದ), ಗಾನವಿ ಲಕ್ಷ್ಮಣ್ (ವೇದ)

  • ಹೇಗಿದೆ ವಿಕ್ರಾಂತ್ ರೋಣನ ಗುಮ್ಮ ಟೀಸರ್?

    ಹೇಗಿದೆ ವಿಕ್ರಾಂತ್ ರೋಣನ ಗುಮ್ಮ ಟೀಸರ್?

    ಮಕ್ಕಳು ಹೇಳೋ ಕಥೆ.. ಮಕ್ಕಳು ಕಥೆಗಾಗಿ ಕಾಯುತ್ತಿರೋ ಕಥೆ.. ಆ ಮಕ್ಕಳ ಕಥೆಯಲ್ಲಿ ಬರೋ ಸಿಂಹಕ್ಕಿಂತ ಭಯಾನಕ ವ್ಯಕ್ತಿ.. ಗುಮ್ಮ.. ಆ ಗುಮ್ಮ ಬರೋದನ್ನೇ ಕಾಯ್ತಿರೋ ಮಕ್ಕಳ ಮೂಲಕವೇ ಟೀಸರ್ ಬಿಟ್ಟಿದ್ದಾರೆ ನಿರ್ದೇಶಕ ಅನೂಪ್ ಭಂಡಾರಿ. ಕಾನ್ಸೆಪ್ಟ್ ಹೊಸದು. ಟ್ರೀಟ್‍ಮೆಂಟೂ ಹೊಸದು. ಪುಟ್ಟ ಟೀಸರಿನಲ್ಲೇ ವಿಕ್ರಾಂತ್ ರೋಣನ ದೃಶ್ಯ ವೈಭವ ಹೇಗಿರಲಿದೆ ಅನ್ನೋದರ ಸ್ಯಾಂಪಲ್ ಕೊಟ್ಟಿದ್ದಾರೆ ಅನೂಪ್ ಭಂಡಾರಿ.

    ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಟೀಸರ್‍ನ್ನು ಯುಗಾದಿಯ ದಿನ 5 ಭಾಷೆಗಳಲ್ಲೂ ರಿಲೀಸ್ ಮಾಡಲಾಗಿದೆ. ಜುಲೈ 28ರ ಭೀಮನ ಅಮಾವಾಸ್ಯೆಗೆ ರಿಲೀಸ್. ಹಿಂದಿಯಲ್ಲಿ ಸಲ್ಮಾನ್ ಖಾನ್, ಮಲಯಾಳಂನಲ್ಲಿ ಮೋಹನ್ ಲಾಲ್, ತೆಲುಗಿನಲ್ಲಿ ಚಿರಂಜೀವಿ ಹಾಗೂ ತಮಿಳಿನಲ್ಲಿ ಸಿಂಬು ಟೀಸರ್ ರಿಲೀಸ್ ಮಾಡಿದ್ದಾರೆ. ನಜಾಫ್‍ಗಡ್ ಸುಲ್ತಾನ್ ವೀರೇಂದ್ರ ಸೆಹ್ವಾಗ್ ಕೂಡಾ ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ. ವಿಕ್ರಾಂತ್ ರೋಣ ಚಿತ್ರದ ಇಂಗ್ಲಿಷ್ ಟೀಸರ್‍ನ್ನು ರಿಲೀಸ್ ಮಾಡಿದ್ದು ವೀರೂ.

    ಜಾಕ್ ಮಂಜು, ಶಾಲಿನಿ ಮಂಜುನಾಥ್ ನಿರ್ಮಾಣದ ಚಿತ್ರದಲ್ಲಿ ಕಿಚ್ಚನ ಜೊತೆಗೆ ನಿರೂಪ್ ಭಂಡಾರಿ, ನೀತಾ ಅಶೋಕ್, ಜಾಕ್ವೆಲಿನ್ ಫರ್ನಾಂಡಿಸ್ ಮೊದಲಾದವರು ನಟಿಸಿರೋ ಚಿತ್ರವಿದು.