` vikranth rona, - chitraloka.com | Kannada Movie News, Reviews | Image

vikranth rona,

  • ಡಿಸೆಂಬರ್`ಗೆ ವಿಕ್ರಾಂತ್ ರೋಣ ಫಿಕ್ಸ್

    ಡಿಸೆಂಬರ್`ಗೆ ವಿಕ್ರಾಂತ್ ರೋಣ ಫಿಕ್ಸ್

    ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ, ಅದ್ಭುತ ಎನ್ನಿಸುವ ರೀತಿಯ ಕ್ರೇಜ್ ಸೃಷ್ಟಿಸಿದೆ. ಬುರ್ಜ್ ಖಲೀಫಾದಲ್ಲಿ ಟೈಟಲ್ ಪೋಸ್ಟರ್, ಮುಂಬೈನಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದ ವಿಕ್ರಾಂತ್ ರೋಣ 2021ರ ಇಂಡಿಯಾದಲ್ಲಿನ ಭಾರಿ ನಿರೀಕ್ಷಿತ ಚಿತ್ರಗಳಲ್ಲೊಂದು. ಆ ಚಿತ್ರದ ಬಿಡುಗಡೆಗೆ ಡಿಸೆಂಬರ್‍ನಲ್ಲಿ ಮುಹೂರ್ತ ಫಿಕ್ಸ್ ಆಗಿದೆ.

    ಪರಿಸ್ಥಿತಿ ಸರಿ ಹೋದರೆ ಡಿಸೆಂಬರ್‍ನಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಡಿಸೆಂಬರ್ ಡೆಡ್‍ಲೈನ್ ಇಟ್ಟುಕೊಂಡೆ ಕೆಲಸ ಮಾಡುತ್ತಿದ್ದೇವೆ. ಎಲ್ಲ ಭಾಷೆಗಳ ಚಿತ್ರರಂಗದ ಬೆಳವಣಿಗೆಗಳನ್ನೂ ನೋಡಬೇಕು. ಬಿಡುಗಡೆಗೆ 10 ದಿನ ಮೊದಲು ಡೇಟ್ ಅನೌನ್ಸ್ ಮಾಡುತ್ತೇವೆ ಎಂದಿದ್ದಾರೆ ಜಾಕ್ ಮಂಜು.

    ಹಿಂದಿ, ತಮಿಳು, ತೆಲುಗಿಗೂ ಸುದೀಪ್ ಅವರೇ ಡಬ್ ಮಾಡಿದ್ದಾರಂತೆ. ಮಲಯಾಳಂನಲ್ಲಿ ಮಾತ್ರ ಬೇರೆಯವರು ಡಬ್ ಮಾಡಿದ್ದಾರೆ. ಏನೇ ಇದ್ದರೂ ಮೊದಲ ಬಿಡುಗಡೆ ಚಿತ್ರಮಂದಿರಗಳಲ್ಲೇ. ನಂತರವೇನಿದ್ದರೂ ಓಟಿಟಿ ಎಂದಿದ್ದಾರೆ ಜಾಕ್ ಮಂಜು.

    ಜಾಕ್ ಮಂಜು ನಿರ್ಮಾಣದ ಚಿತ್ರದಲ್ಲಿ ಸುದೀಪ್ ಹೀರೋ. ವಿಕ್ರಾಂತ್ ರೋಣ ಪಾತ್ರಧಾರಿ. ನಿರೂಪ್ ಭಂಡಾರಿ ಸಂಜೀವ್ ಗಂಭೀರ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ನೀತಾ ಅಶೋಕ್ ನಟಿಸಿದ್ದರೆ, ಜಾಕ್ವೆಲಿನ್ ಫರ್ನಾಂಡಿಸ್ ಗಡಂಗ್ ರಕ್ಕಮ್ಮನಾಗಿ ಮಿಂಚು ಹರಿಸಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದ ಅಜನೀಶ್ ಲೋಕನಾಥ್ ಸಂಗೀತವಿದೆ.

  • ತಡೆದ ಮಳೆ ಜಡಿದು ಬಂತು.. ಶುರುವಾಗಲಿದೆ ಸುಗ್ಗಿ..

    ತಡೆದ ಮಳೆ ಜಡಿದು ಬಂತು.. ಶುರುವಾಗಲಿದೆ ಸುಗ್ಗಿ..

    ಕೊರೊನಾ 3ನೇ ಅಲೆಯೂ ಅಂತ್ಯವಾಗುತ್ತಿರುವ ಹೊತ್ತಿಗೆ ತಡೆದ ಮಳೆ ಜಡಿದು ಬಂತು ಅನ್ನೋ ಹಾಗೆ ಸಿನಿಮಾಗಳ ಸುಗ್ಗಿ ಶುರುವಾಗುತ್ತಿದೆ. ಡಿಸೆಂಬರ್ ಕೊನೆಯವರೆಗೆ ಸಿನಿಮಾಗಳ ರಿಲೀಸ್ ಹಬ್ಬ ಜೋರಾಗಿತ್ತು. ಯಾವಾಗ ಡಿಸೆಂಬರ್ ಕೊನೆಯ ಹೊತ್ತಿಗೆ ಮತ್ತೊಮ್ಮೆ ಲಾಕ್ ಡೌನ್ ಭಯ ಶುರುವಾಯ್ತೋ.. ಎಲ್ಲರೂ ಸೈಲೆಂಟ್ ಆಗಿಬಿಟ್ಟರು. ಈಗ ಫೆಬ್ರವರಿ ಶುರುವಾಗೋ ಹೊತ್ತಿಗೆ ಭಯ ಹೋಗುತ್ತಿದೆ. ಸುಗ್ಗಿ ಶುರುವಾಗಿದೆ.

    ಕನ್ನಡದಲ್ಲಿ ವಿಕ್ರಾಂತ್ ರೋಣ ರಿಲೀಸ್ ಮುಂದಕ್ಕೆ ಹೋಗಿದ್ದರೂ ಏಪ್ರಿಲ್ ನಂತರ ರಿಲೀಸ್ ಡೇಟ್ ಘೋಷಣೆಯಾಗಬಹುದು.

    ಮಾರ್ಚ್ 17ಕ್ಕೆ ಪುನೀತ್ ಹುಟ್ಟುಹಬ್ಬ. ಆ ದಿನವೇ ಜೇಮ್ಸ್ ರಿಲೀಸ್ ಮಾಡೋಕೆ ಚಿತ್ರತಂಡ ಹಗಲೂ ರಾತ್ರಿ ಶ್ರಮಿಸುತ್ತಿದೆ.  ಏಪ್ರಿಲ್ 14ಕ್ಕೆ ಕೆಜಿಎಫ್ ಚಾಪ್ಟರ್ 2 ರಿಲೀಸ್ ಇದೆ.

    ಅತ್ತ ತೆಲುಗಿಗೆ ಹೋದರೆ ಆರ್.ಆರ್.ಆರ್. ಮಾರ್ಚ್ 25ಕ್ಕೆ ರಿಲೀಸ್ ಡೇಟ್ ಘೋಷಿಸಿದೆ. ಸ್ಸೋ.. ಜೇಮ್ಸ್ ಚಿತ್ರಕ್ಕೆ ಎದುರಾಳಿಯಾಗಿ ಬರುತ್ತಿಲ್ಲ. ಮಾರ್ಚ್ 11ಕ್ಕೆ ಪ್ರಭಾಸ್ ನಟನೆಯ ರಾಧೇ ಶ್ಯಾಂ ಇದೆ. ಏಪ್ರಿಲ್ 1ಕ್ಕೆ ಪವನ್ ಕಲ್ಯಾಣ್ ನಟಿಸಿರೋ ಭೀಮ್ಲಾ ನಾಯಕ್ ಬರುತ್ತಿದೆ. ಮಹೇಶ್ ಬಾಬು ನಟನೆಯ ಸರ್ಕಾರಿ ವಾರು ಪಾಟ ಕೂಡಾ ಮೇ ತಿಂಗಳ ರೇಸ್‍ನಲ್ಲಿದೆ. ಇದರ ಮಧ್ಯೆ ಚಿರಂಜೀವಿ ನಟಿಸಿರೋ ಆಚಾರ್ಯ ರಿಲೀಸ್ ಡೇಟ್ ಅನೌನ್ಸ್ ಆಗಬಹುದು.

    ಅತ್ತ ತಮಿಳಿಗೆ ಹೋದರೆ ಅಜಿತ್ ನಟನೆಯ ವಲಿಮೈ, ಆರ್.ಆರ್.ಆರ್.ಗೆ ಮೊದಲು ಫೆಬ್ರವರಿ 24ಕ್ಕೇ ಬರುತ್ತಿದೆ. ವಿಜಯ್ ನಟಿಸಿರೋ ಬೀಸ್ಟ್ ಕೆಜಿಎಫ್ ಚಾಪ್ಟರ್ 2ಗೆ ಫೈಟ್  ಕೊಡಬಹುದು. ಅಂದಹಾಗೆ ಕೆಜಿಎಫ್ ಚಾಪ್ಟರ್ 2, ಹಿಂದಿಯಲ್ಲಿ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಈಗಾಗಲೇ ಫೈಟ್ ಕೊಡೋದು ಅಧಿಕೃತವಾಗಿದೆ.

    ಕನ್ನಡದಲ್ಲಿ ಸದ್ಯಕ್ಕೆ ಫೆಬ್ರವರಿ 25ಕ್ಕೆ ರಿಲೀಸ್ ಡೇಟ್ ಅನೌನ್ಸ್ ಮಾಡಿರೋದು ಓಲ್ಡ್ ಮಾಂಕ್ ಮಾತ್ರ. ಇನ್ನುಳಿದಂತೆ ತೋತಾಪುರಿ, ಏಕ್ ಲವ್ ಯಾ ಸೇರಿದಂತೆ ಹಲವು ಚಿತ್ರಗಳು ರೇಸ್‍ನಲ್ಲಿವೆ. ಒಟ್ಟಿನಲ್ಲಿ ಸುಗ್ಗಿ ಶುರುವಾಗಿದೆ.

  • ನಾಳೆ ವಿಕ್ರಾಂತ್ ರೋಣ ಟೀಸರ್ : ಯಾವ್ಯಾವ ಭಾಷೆಯಲ್ಲಿ ಯಾವ ಸ್ಟಾರ್?

    ನಾಳೆ ವಿಕ್ರಾಂತ್ ರೋಣ ಟೀಸರ್ : ಯಾವ್ಯಾವ ಭಾಷೆಯಲ್ಲಿ ಯಾವ ಸ್ಟಾರ್?

    ವಿಕ್ರಾಂತ್ ರೋಣ. ಕಿಚ್ಚ ಸುದೀಪ್ ಅಭಿನಯದ ಈ ವರ್ಷದ ಬಹು ನಿರೀಕ್ಷಿತ ಸಿನಿಮಾ. ಈ ಸಿನಿಮಾದ ಟೀಸರ್ ರಿಲೀಸ್ ಮಾಡೋಕೆ ಯುಗಾದಿಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಜಾಕ್ ಮಂಜು. ಅನೂಪ್ ಭಂಡಾರಿ ನಿರ್ದೇಶನದ ಸಿನಿಮಾದ ಟೀಸರ್ ಎಲ್ಲ ಭಾಷೆಗಳಲ್ಲಿಯೂ ರಿಲೀಸ್ ಆಗುತ್ತಿದೆ. ಆಯಾ ಭಾಷೆಗೆ ಆಯಾ ಭಾಷೆಯ ಸ್ಟಾರ್ ನಟರೇ ಇರುತ್ತಾರೆ ಅನ್ನೋದು ವಿಶೇಷ.

    ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ, ಮಲಯಾಳಂನಲ್ಲಿ ಮೋಹನ್ ಲಾಲ್, ತಮಿಳಿನಲ್ಲಿ ಸಿಂಬು ಚಿತ್ರದ ಟೀಸರ್ ಬಿಡುಗಡೆ ಮಾಡಲಿದ್ದಾರೆ. ನಾಳೆ ಬೆಳಗ್ಗೆ 9.55ಕ್ಕೆ ಟೀಸರ್ ರಿಲೀಸ್.

    ಸುದೀಪ್ ಜೊತೆ ನಿರೂಪ್ ಭಂಡಾರಿ, ನೀತಾ ಜೋಸೆಫ್, ಜಾಕ್ವೆಲಿನ್ ಫರ್ನಾಂಡಿಸ್ ಮೊದಲಾದವರು ನಟಿಸಿರೋ ಚಿತ್ರ ಫ್ಯಾಂಟಸಿ ಮೂವಿ. ಅನೂಪ್ ಭಂಡಾರಿ ನಿರ್ದೇಶಕ. ಜಾಕ್ ಮಂಜು, ಶಾಲಿನಿ ಮಂಜು ಮತ್ತು ಅಲಂಕಾರ್ ಪಾಂಡ್ಯನ್ ನಿರ್ಮಾಣದ ಸಿನಿಮಾ 2022ರ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು

  • ಫೆಬ್ರವರಿ 24ಕ್ಕೆ ಜಗತ್ತಿಗೆ ಪರಿಚಯವಾಗುತ್ತಾನೆ ಹೊಸ ಹೀರೋ

    ಫೆಬ್ರವರಿ 24ಕ್ಕೆ ಜಗತ್ತಿಗೆ ಪರಿಚಯವಾಗುತ್ತಾನೆ ಹೊಸ ಹೀರೋ

    ವಿಕ್ರಾಂತ್ ರೋಣ. ಫೆಬ್ರವರಿ 24ಕ್ಕೆ ರಿಲೀಸ್. ಆದರೆ ಈ ಚಿತ್ರದಲ್ಲಿರೋ ವಿಶೇಷತೆಗಳು ಒಂದೆರಡಲ್ಲ. ಕಿಚ್ಚ ಸುದೀಪ್ ಫ್ಯಾನ್ಸ್ ಥ್ರಿಲ್ ಆಗೋ ಚಿತ್ರದಲ್ಲಿರೋದು ಸ್ಪೆಷಲ್‍ಗಳ ಮೇಲೆ ಸ್ಪೆಷಲ್.

    ವಿಕ್ರಾಂತ್ ರೋಣ, ಒಂದಲ್ಲ..ಎರಡಲ್ಲ.. ಒಟ್ಟು 14 ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಅದೂ 3ಡಿ ರೂಪದಲ್ಲಿ. 3ಡಿ ಸ್ಪೆಷಲ್ ಕನ್ನಡಕ ಹಾಕ್ಕೊಂಡೇ ಸಿನಿಮಾ ನೋಡ್ಬೇಕು. ಆಗಲೇ ಸಿಗೋದು ಮಜಾ. ಒಟ್ಟು 55 ದೇಶಗಳಲ್ಲಿ ರಿಲೀಸ್ ಆಗುತ್ತಿದೆ ವಿಕ್ರಾಂತ್ ರೋಣ.

    ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಚಿತ್ರಕ್ಕೆ  ಜಾಕ್ ಮಂಜು, ಶಾಲಿನಿ ಮಂಜುನಾಥ್ ಮತ್ತು ಅಲಂಕಾರ್ ಪಾಂಡ್ಯನ್ ನಿರ್ಮಾಪಕರು. ಸುದೀಪ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದಾರಂತೆ. ನಿರೂಪ್ ಭಂಡಾರಿ, ನೀತೂ ಅಶೋಕ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ.

  • ಬಿಡುಗಡೆಗೆ ಮುನ್ನವೇ ವಿಕ್ರಾಂತ್ ರೋಣ 24 ಕೋಟಿ ಬಿಸಿನೆಸ್..?!

    ಬಿಡುಗಡೆಗೆ ಮುನ್ನವೇ ವಿಕ್ರಾಂತ್ ರೋಣ 24 ಕೋಟಿ ಬಿಸಿನೆಸ್..?!

    ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಆಗುವುದಕ್ಕೂ ಮುನ್ನವೇ ದೊಡ್ಡ ಬಿಸಿನೆಸ್ ಮಾಡಿದೆ. ಅನೂಪ್ ಭಂಡಾರಿ ನಿರ್ದೇಶನದ ಚಿತ್ರದಲ್ಲಿ ಕಿಚ್ಚ ಸುದೀಪ್ ಹೀರೋ. ನಿರೂಪ್ ಭಂಡಾರಿ ಕೂಡಾ ಪ್ರಧಾನ ಪಾತ್ರದಲ್ಲಿರೋ ಸಿನಿಮಾ ವಿಕ್ರಾಂತ್ ರೋಣ. ಫೆಬ್ರವರಿ 24ರಂದು ರಿಲೀಸ್ ಆಗುತ್ತಿರುವ ವಿಕ್ರಾಂತ್ ರೋಣ ಈಗಾಗಲೇ ದೊಡ್ಡ ಮಟ್ಟದಲ್ಲಿ ಪ್ರಚಾರ ಕಾರ್ಯ ಆರಂಭಿಸಿದೆ.

    ಈಗ ರಿಲೀಸ್ ಆಗುವುದಕ್ಕೂ ಮೊದಲೇ ಚಿತ್ರದ ಸ್ಯಾಟಲೈಟ್ ಮತ್ತು ಓಟಿಟಿ ರೈಟ್ಸ್‍ಗಳಲ್ಲಿ 24 ಕೋಟಿ ಬಿಸಿನೆಸ್ ಮಾಡಿದೆ ಎನ್ನುವ ಸುದ್ದಿ ಇದೆ. ಡಬ್ಬಿಂಗ್, ಆಡಿಯೋ ರೈಟ್ಸ್‍ಗಳು ಇನ್ನೂ ನಿರ್ಮಾಪಕರ ಬಳಿಯೇ ಇದೆ. ಚಿತ್ರದ ಬಜೆಟ್ ಈಗಾಗಲೇ 50 ಕೋಟಿ ದಾಟಿದೆ. ಝೀ ಗ್ರೂಪ್‍ನವರು ಓಟಿಟಿ ಮತ್ತು ಸ್ಯಾಟಲೈಟ್ ಖರೀದಿಸಿದ್ದಾರೆ. ಪ್ರಚಾರವನ್ನೂ ಅವರೇ ವಹಿಸಿಕೊಂಡಿದ್ದಾರೆ.

    ಸದ್ಯಕ್ಕೆ ಇವಿಷ್ಟು ಬಿಸಿನೆಸ್‍ನಲ್ಲೇ ಚಿತ್ರದ ಬಹುಪಾಲು ಬಂಡವಾಳ ವಾಪಸ್ ಬಂದಂತಾಗಿದ್ದು, ಥಿಯೇಟರಿನಲ್ಲೂ ಚಿತ್ರ ದಾಖಲೆ ಬರೆಯುವ ನಿರೀಕ್ಷೆ ಇದೆ.

  • ಭಾರತದ ಮೊದಲ ಅಡ್ವೆಂಚರ್ ಹೀರೋ ಸಿನಿಮಾ ಫೆ.24ಕ್ಕೆ ರಿಲೀಸ್ ಆಗಲ್ಲ..!

    ಭಾರತದ ಮೊದಲ ಅಡ್ವೆಂಚರ್ ಹೀರೋ ಸಿನಿಮಾ ಫೆ.24ಕ್ಕೆ ರಿಲೀಸ್ ಆಗಲ್ಲ..!

    ಭಾರತದ ಮೊದಲ ಅಡ್ವೆಂಚರ್ ಹೀರೋ ಸಿನಿಮಾ ವಿಕ್ರಾಂತ್ ರೋಣ. ಅದನ್ನು ನಿರ್ಮಾಪಕ ಜಾಕ್ ಮಂಜು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಎಲ್ಲವೂ ಅವರ ಪ್ಲಾನ್ ಪ್ರಕಾರವೇ ಜರುಗಿದ್ದರೆ ಫೆ.24ಕ್ಕೆ ಸಿನಿಮಾ ರಿಲೀಸ್ ಆಗಬೇಕಿತ್ತು. ಅದನ್ನು ಚಿತ್ರತಂಡವೇ ಅಧಿಕೃತವಾಗಿ ಘೋಷಿಸಿಯಾಗಿತ್ತು. ಆದರೆ ಈಗ ಜಾಕ್ ಮಂಜು ಅವರೇ ಅಧಿಕೃತವಾಗಿ ಫೆ.24ಕ್ಕೆ ರಿಲೀಸ್ ಇಲ್ಲ ಎಂದಿದ್ದಾರೆ.

    ಸುದೀಪ್ ಅವರ ಸಿನಿಮಾವನ್ನು ಈಗಾಗಲೇ ಅಭಿಮಾನಿಗಳೇ ಪ್ರಚಾರ ಮಾಡುತ್ತಿದ್ದಾರೆ. ಸದ್ಯಕ್ಕಿನ್ನೂ ಸರ್ಕಾರ ಥಿಯೇಟರುಗಳಲ್ಲಿ 50:50 ರೂಲ್ಸ್ ತೆಗೆದಿಲ್ಲ. ಯಾವಾಗ 100% ಪ್ರೇಕ್ಷಕರಿಗೆ ಅವಕಾಶ ಕೊಡುತ್ತಾರೋ.. ಅದೂ ಗೊತ್ತಿಲ್ಲ. ಈ ಗೊಂದಲದಲ್ಲಿ ಸಿನಿಮಾ ರಿಲೀಸ್ ಮಾಡೋದು ಬೇಡ ಎನ್ನುವುದು ಜಾಕ್ ಮಂಜು ವಾದ. ಸಿನಿಮಾವನ್ನ 3ಡಿಯಲ್ಲಿಯೂ ರೂಪಿಸಲಾಗಿದೆ. ಹೀಗಾಗಿಯೇ 100 ಕೋಟಿ ಆಫರ್ ಬಂದರೂ ಸಿನಿಮಾವನ್ನು ಒಟಿಟಿಗೆ ಕೊಟ್ಟಿಲ್ಲ.

    ಅನೂಪ್ ಭಂಡಾರಿ ನಿರ್ದೇಶನದ ಸಿನಿಮಾದಲ್ಲಿ ಸುದೀಪ್, ನಿರೂಪ್ ಭಂಡಾರಿ, ನೀತಾ ಅಶೋಕ್, ಜಾಕ್ವೆಲಿನ್ ಫರ್ನಾಂಡಿಸ್ ನಟಿಸಿದ್ದಾರೆ. ಜಾಕ್ ಮಂಜು ನಿರ್ಮಾಪಕರಾಗಿದ್ದು, ಅಲಂಕಾರ್ ಪಾಂಡ್ಯನ್ ಸಹ ನಿರ್ಮಾಪಕರಾಗಿದ್ದಾರೆ.

  • ಮುಂಬೈನಲ್ಲಿ ವಿಕ್ರಾಂತ್ ರೋಣ

    ಮುಂಬೈನಲ್ಲಿ ವಿಕ್ರಾಂತ್ ರೋಣ

    ಬೆಂಗಳೂರಿನಲ್ಲಿ ಟ್ರೇಲರ್ ಲಾಂಚ್ ಮಾಡಿದ ಬೆನ್ನಲ್ಲೇ ಮುಂಬೈಗೆ ಹೋಗಿರೋ ವಿಕ್ರಾಂತ್ ರೋಣ ಟೀಂ ಅಲ್ಲಿಯೂ ರಣಕಹಳೆ ಮೊಳಗಿಸಿದೆ. ಹಿಂದಿಯಲ್ಲಿ ವಿಕ್ರಾಂತ್ ರೋಣ ಟ್ರೇಲರ್‍ನ್ನು ಸಲ್ಮಾನ್ ಖಾನ್ ರಿಲೀಸ್ ಮಾಡಿದ್ದರು. ಈಗ ಮುಂಬೈನಲ್ಲಿ ಪ್ರೀ-ರಿಲೀಸ್ ಈವೆಂಟ್ ಮೂಲಕ ಪ್ರಚಾರಕ್ಕೆ ಇನ್ನಷ್ಟು ಮೆರುಗು ನೀಡಿದೆ ವಿಕ್ರಾಂತ್ ರೋಣ.

    ದೃಶ್ಯ ವೈಭವದ ಟ್ರೇಲರಿನಲ್ಲಿ ಅನೂಪ್ ಭಂಡಾರಿ ಎಲ್ಲಿಯೂ ಕಥೆ ಬಿಟ್ಟುಕೊಟ್ಟಿಲ್ಲ. ಆದರೆ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಎನ್ನುವುದನ್ನು ಮಾತ್ರ ಹೇಳಿದ್ದಾರೆ. ಕಿಚ್ಚ ಸುದೀಪ್ ಬೇರೆಯದೇ ಶೇಡ್‍ನಲ್ಲಿ ಕಾಣಿಸುತ್ತಿದ್ದಾರೆ.

    ಇದು ಕನಸಿನ ಸಿನಿಮಾ. ದೊಡ್ಡದಾಗಿಯೇ ಶುರು ಮಾಡಿದ್ದೆವು. ಐಡಿಯಾ ದೊಡ್ಡದಾಗಿತ್ತು. ಸಿನಿಮಾ ಕಾನ್ಸೆಪ್ಟ್ ದೊಡ್ಡದಾಗಿತ್ತು. ರಿಸಲ್ಟ್‍ನ್ನೂ ಕೂಡಾ ದೊಡ್ಡದಾಗಿಯೇ ಎದುರು ನೋಡುತ್ತಿದ್ದೇವೆ ಎಂದಿರೋದು ಸುದೀಪ್.

    ಈ ಚಿತ್ರ ಹಾಗೂ ರಕ್ಕಮ್ಮ ಹಾಡಿನ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದೇನೆ. ಅದೊಂದು ಅದ್ಭುತ ಅನುಭವ ಎಂದು ಹೇಳಿಕೊಂಡಿದ್ದಾರೆ ರಕ್ಕಮ್ಮ ಫರ್ನಾಂಡಿಸ್.

  • ಯುಗಾದಿಗೆ ಕಿಚ್ಚನದ್ದೇ ಹೋಳಿಗೆ..ತುಪ್ಪ..

    ಯುಗಾದಿಗೆ ಕಿಚ್ಚನದ್ದೇ ಹೋಳಿಗೆ..ತುಪ್ಪ..

    ವಿಕ್ರಾಂತ್ ರೋಣ. ಕಿಚ್ಚ ಸುದೀಪ್, ಅನೂಪ್ ಭಂಡಾರಿ ಕಾಂಬಿನೇಷನ್‍ನ ಸಿನಿಮಾ. ಕೊರೊನಾ ಅನಿಶ್ಚಿತತೆ ಕಾಡದೇ ಇದ್ದರೆ ಇಷ್ಟು ಹೊತ್ತಿಗೆ ಕನ್ನಡಿಗರ ಮನೆ ಮನೆಯನ್ನೂ ತಲುಪಬೇಕಿದ್ದ ಸಿನಿಮಾ. ಈಗ ವಿಕ್ರಾಂತ್ ರೋಣ ಒಂದು ಗುಡ್ ನ್ಯೂಸ್ ಕೊಟ್ಟಿದ್ದಾನೆ. ಈ ಯುಗಾದಿಗೆ ಅವನದ್ದೇ ಹೋಳಿಗೆ ತುಪ್ಪ.

    ಯುಗಾದಿಯ ದಿನ, ಏಪ್ರಿಲ್ 2ರಂದು ವಿಕ್ರಾಂತ್ ರೋಣ ಚಿತ್ರದ ಟೀಸರ್ ರಿಲೀಸ್ ಆಗುತ್ತಿದೆ. ಬೆಳಗ್ಗೆ 9 ಗಂಟೆ 55 ನಿಮಿಷಕ್ಕೆ ಸರಿಯಾಗಿ ಟೀಸರ್ ಹೊರಬೀಳಲಿದೆ.

    ವಿಕ್ರಾಂತ್ ರೋಣ ಚಿತ್ರಕ್ಕೆ ಅನೂಪ್ ಭಂಡಾರಿ ನಿರ್ದೇಶಕ. ಅನೂಪ್ ಅವರು ರಂಗಿತರಂಗ ನಂತರ ಅತೀ ಹೆಚ್ಚು ನಿರೀಕ್ಷೆ ಹುಟ್ಟಿಸಿರೋ ಚಿತ್ರ ವಿಕ್ರಾಂತ್ ರೋಣ. ನಿರೂಪ್ ಭಂಡಾರಿ ಕೂಡಾ ನಟಿಸಿರೋ ಚಿತ್ರದಲ್ಲಿ ನೀತು ಅಶೋಕ್ ನಾಯಕಿಯಾಗಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್ ಕೂಡಾ ನಟಿಸಿದ್ದಾರೆ.

    ಜಾಕ್ ಮಂಜು, ಶಾಲಿನಿ ಮಂಜು ಮತ್ತು ಅಲಂಕಾರ್ ಪಾಂಡ್ಯನ್ ನಿರ್ಮಾಣದ ಸಿನಿಮಾ 2022ರ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು.

  • ರಕ್ಕಮ್ಮ ಗ್ಯಾಂಗ್ ಹವಾ : ವಿಕ್ರಾಂತ್ ರೋಣದ ಉಳಿದ ಹಾಡುಗಳು ಯಾವುದು?

    ಕ್ಕಮ್ಮ ಗ್ಯಾಂಗ್ ಹವಾ : ವಿಕ್ರಾಂತ್ ರೋಣದ ಉಳಿದ ಹಾಡುಗಳು ಯಾವುದು?

    ಎಲ್ಲೆಲ್ಲೂ ರಕ್ಕಮ್ಮನದ್ದೇ ಸದ್ದು. ಲಾಲ್ ಬಾಗ್‍ಗೆ ಹೋದರೂ ರಕ್ಕಮ್ಮ. ನೈಸ್ ರಸ್ತೆಗೆ ಹೋದರೂ ರಕ್ಕಮ್ಮ. ರೀಲ್ಸ್ ತೆಗೆದರೆ ಅಲ್ಲೂ ರಕ್ಕಮ್ಮ. ಸೆಲಬ್ರಿಟಿಗಳನ್ನು ನೋಡಿದರೆ ಅವರದ್ದೂ ರಕ್ಕಮ್ಮ.. ಒಟ್ಟಿನಲ್ಲಿ ವಿಕ್ರಾಂತ್ ರೋಣದ ರಕ್ಕಮ್ಮ ಹಾಡು ನೋಡಿದವರಿಗೆ.. ಕೇಳಿದವರಿಗೆ.. ಕ್ರೇಜ್ ಅಲ್ಲ.. ಹುಚ್ಚು ಹಿಡಿಸಿದೆ. ಮಕ್ಕಳು, ದೊಡ್ಡವರೆನ್ನದೆ ಎಲ್ಲರೂ ಹಾಡಿಗೆ ಕುಣಿಯುತ್ತಿದ್ದಾರೆ. 250ಕ್ಕೂ ಹೆಚ್ಚು ಮಕ್ಕಳು ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿರುವುದು ವಿಶೇಷ.

    ಸುದೀಪ್ ಅಭಿಮಾನಿಗಳಾದ ಬಾಲಾಜಿ ವಿಷ್ಣು ತಂಡ 250ಕ್ಕೂ ಹೆಚ್ಚು ಮಕ್ಕಳೊಂದಿಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಅಭಿಮಾನಿಗಳ ಜೊತೆ ಸಾರ್ವಜನಿಕರೂ ರಾ..ರಾ..ರಕ್ಕಮ್ಮ ಎಂದು ಕುಣಿದರು. ಈಗ ವಿಕ್ರಾಂತ್ ರೋಣದ ಉಳಿದ ಹಾಡುಗಳ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಚಿತ್ರತಂಡದ ಸದಸ್ಯರ ಪ್ರಕಾರ ರಾ..ರಾ.. ರಕ್ಕಮ್ಮನಂತೆಯೇ ಆ ಹಾಡುಗಳೂ ಗುಂಗು ಹಿಡಿಸುವಂತಿವೆ.

    ಹೇ ಫಕೀರಾ..

    ಗುಮ್ಮ ಬಂದ..

    ಚಿಕ್ಕಿ ಗೊಂಬೆ..

    ಲುಲ್ಲಾಬಿ ಹಾಡುಗಳು ಶೀಘ್ರದಲ್ಲೇ ಒಂದೊಂದೇ ರಿಲೀಸ್ ಆಗಲಿವೆ. ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತದ ರಾಯಭಾರಿಯಾಗಿದ್ದಾರೆ.

  • ರಕ್ಕಮ್ಮನಿಗೆ ಫಿದಾ ಆದ ಸ್ಟಾರ್ಸ್ : ಯಾರ್ ಯಾರೆಲ್ಲ ಸ್ಟೆಪ್ ಹಾಕಿದ್ರು ಗೊತ್ತಾ..?

    ರಕ್ಕಮ್ಮನಿಗೆ ಫಿದಾ ಆದ ಸ್ಟಾರ್ಸ್ : ಯಾರ್ ಯಾರೆಲ್ಲ ಸ್ಟೆಪ್ ಹಾಕಿದ್ರು ಗೊತ್ತಾ..?

    ರಾ ರಾ ರಕ್ಕಮ್ಮ.. ಹಾಡು ಕಿಚ್ಚು ಹಚ್ಚಿದೆ. ಕಿಕ್ಕೇರಿಸಿದೆ. ಯಕ್ಕ ಸಕ್ಕಾ.. ಯಕ್ಕ ಸಕ್ಕಾ.. ಯಕ್ಕ ಸಕ್ಕಾ.. ಎಲ್ಲಿ ನೋಡಿದರೂ ಅದೇ ಗುಂಗು.. ಮ್ಯಾಜಿಕ್ ಅಜನೀಶ್ ಲೋಕನಾಥ್ ಮ್ಯೂಸಿಕ್ಕಿನಲ್ಲಿದೆಯೋ.. ನಕಾಶ್ ಅಜೀಝ್, ಸುನಿಧಿ ಚೌಹಾಣ್ ಕಂಠದಲ್ಲಿದೆಯೋ.. ಅನೂಪ್ ಭಂಡಾರಿ ಲಿರಿಕ್ಕಿನಲ್ಲಿದೆಯೋ.. ಕಿಚ್ಚ ಮತ್ತು ಜಾಕ್ವೆಲಿನ್ ಸ್ಟೆಪ್ಪಿನಲ್ಲಿದೆಯೋ.. ಹಾಡು ಕಿಕ್ಕೇರಿಸಿರೋದು ಸತ್ಯ.

    ಹಾಡು ರಿಲೀಸ್ ಆದ ದಿನವೇ ನಟಿ ವೈಷ್ಣವಿ ಗೌಡ ಹೆಜ್ಜೆ ಹಾಕಿದ್ದರು. ಈಗ ನೋಡಿದರೆ ಸ್ಟಾರ್‍ಗಳ ಸೈನ್ಯವೇ ಹಾಡಿಗೆ ಕುಣಿಯುತ್ತಿದೆ. ಪಟಾಕಿ ಪೋರಿ ಆಶಿಕಾ ರಂಗನಾಥ್, ಜಾನಿ ಮಾಸ್ಟರ್, ಪುಟ್ಟ ಪುಟ್ಟ ಮಕ್ಕಳೊಂದಿಗೆ ಸೃಜನ್ ಲೋಕೇಶ್.. ರಾರಾರಕ್ಕಮ್ಮ ಹಾಡಿಗೆ ಯಕ್ಕಾ ಸಕ್ಕಾ ಸ್ಟೆಪ್ ಹಾಕಿದ್ದಾರೆ. ಫ್ಯಾನ್ಸ್‍ಗಳ ಯಕ್ಕಸಕ್ಕ ಕಿಕ್ಕೂ ಜೋರಾಗಿಯೇ ಇದೆ.

  • ವಿಕ್ರಾಂತ್ ರೋಣ 3D ಅವತಾರ..!

    ವಿಕ್ರಾಂತ್ ರೋಣ 3D ಅವತಾರ..!

    ಆಗಸ್ಟ್ 19. 2021. ಡೇಟ್ ನೋಟ್ ಮಾಡಿಟ್ಟುಕೊಳ್ಳಿ. ಆ ದಿನ ವಿಕ್ರಾಂತ್ ರೋಣ, ದೇಶ ವಿದೇಶಗಳಲ್ಲಿ ಏಕಕಾಲಕ್ಕೆ ಪ್ರತ್ಯಕ್ಷವಾಗ್ತಾನೆ. 2019ರಲ್ಲಿ ಬಂದ ಪೈಲ್ವಾನ್ ನಂತರ ಕಿಚ್ಚನ ಅಭಿಮಾನಿಗಳಿಗೆ ಸುದೀಪ್ ಹೀರೋ ಆಗಿ ಸಿಕ್ಕಿಲ್ಲ. ಅಭಿಮಾನಿಗಳ ಕಿಚ್ಚಿನಂತಾ ಬಯಕೆ ಈಡೇರುವ ಕಾಲ.. ಮುಹೂರ್ತ ಆಗಸ್ಟ್ 19. 2021.

    ರಿಲೀಸ್ ಡೇಟ್ ಅನೌನ್ಸ್ ಮಾಡಿರೋ VR ಟೀಂ, ಇದರ ಜೊತೆಯಲ್ಲೇ ಇನ್ನೊಂದು ಸರ್ಪ್ರೈಸ್ನ್ನೂ ಕೊಟ್ಟಿದೆ. ವಿಕ್ರಾಂತ್ ರೋಣ 3D ಅವತಾರದಲ್ಲಿ ಬರಲಿದ್ದಾನೆ. ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಚಿತ್ರದಲ್ಲಿ

    ಕಥೆ ಏನು ಎನ್ನುವುದೇ ಒಂದು ಸರ್ಪ್ರೈಸ್. ಕಿಚ್ಚನ ಜೊತೆಗೆ ನಿರೂಪ್ ಭಂಡಾರಿ ಕೂಡಾ ಇದ್ದಾರೆ. ನೀತಾ ಅಶೋಕ್ ಹೀರೋಯಿನ್.

    ಜಾಕ್ ಮಂಜು ನಿರ್ಮಾಣದ ಸಿನಿಮಾ ಆಗಸ್ಟ್ನಲ್ಲಿ ಸ್ವಾತಂತ್ರ್ಯೋತ್ಸವ ಮುಗಿದ 4ನೇ ದಿನಕ್ಕೆ ಸರಿಯಾಗಿ ಥಿಯೇಟರುಗಳಲ್ಲಿ ಕಾಣಿಸಲಿದೆ.

  • ವಿಕ್ರಾಂತ್ ರೋಣ 3ಡಿಯಲ್ಲಿ..

    ವಿಕ್ರಾಂತ್ ರೋಣ 3ಡಿಯಲ್ಲಿ..

    ವಿಕ್ರಾಂತ್ ರೋಣ ಚಿತ್ರದ ಸ್ಟಿಲ್ಸ್, ಟೀಸರ್ ನೋಡುತ್ತಿದ್ದರೆ ವ್ಹಾವ್ ಎನ್ನಿಸೋದು ಟೆಕ್ನಾಲಜಿ ಮತ್ತು ಕ್ವಾಲಿಟಿ. ಆ ಕ್ವಾಲಿಟಿಯನ್ನು ನೋಡಿಯೇ ಸುದೀಪ್ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ವಿಕ್ರಾಂತ್ ರೋಣ ಚಿತ್ರವನ್ನು 3ಡಿಯಲ್ಲೂ ರಿಲೀಸ್ ಮಾಡಲು ಯೋಜಿಸಿದ್ದಾರೆ ಸುದೀಪ್ ಮತ್ತು ಜಾಕ್ ಮಂಜು.

    3ಡಿ ವರ್ಷನ್ ರೆಡಿ ಮಾಡೋಕೆ ಸಿದ್ಧತೆ ಆರಂಭಿಸಿದ್ದೇವೆ. ಹೊಸತನ ಹಾಗೂ ಕ್ವಾಲಿಟಿ ನೋಡಿಯೇ ಈ ತೀರ್ಮಾನ ಮಾಡಿರೋದಾಗಿ ಹೇಳಿದ್ದಾರೆ ಜಾಕ್ ಮಂಜು.

    ಅನೂಪ್ ಭಂಡಾರಿ ನಿರ್ದೇಶನದ ಚಿತ್ರದಲ್ಲಿ ಸುದೀಪ್ ಹೀರೋ. ನಿರೂಪ್ ಭಂಡಾರಿ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ.

  • ವಿಕ್ರಾಂತ್ ರೋಣ ಅಡ್ವಾನ್ಸ್ ಬುಕ್ಕಿಂಗ್ ಯಾವಾಗಿಂದ..?

    ವಿಕ್ರಾಂತ್ ರೋಣ ಅಡ್ವಾನ್ಸ್ ಬುಕ್ಕಿಂಗ್ ಯಾವಾಗಿಂದ..?

    ವಿಕ್ರಾಂತ್ ರೋಣ ಚಿತ್ರ ಸಂಚಲನ ಸೃಷ್ಟಿಸೋಕೆ ಶುರುವಾಗಿದೆ. ರಾ ರಾ ರಕ್ಕಮ್ಮ ಮೂಲಕವೇ ಹವಾ ಎಬ್ಬಿಸಿದ ಸಿನಿಮಾ ವಿಕ್ರಾಂತ್ ರೋಣ. ಚಿತ್ರ ಸೆನ್ಸಾರ್ ಪ್ರಕ್ರಿಯೆ ಮುಗಿಸಿದೆ. 147.39 ನಿಮಿಷದ ಸಿನಿಮಾ ವಿಕ್ರಾಂತ್ ರೋಣ. ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಸಿನಿಮಾ ರಿಲೀಸ್ ಆಗೋದು 28ಕ್ಕೆ. ಆದರೆ ಅಭಿಮಾನಿಗಳಿಂದ ಈಗಾಗಲೇ ಟಿಕೆಟ್ ಬುಕ್ಕಿಂಗ್ ಕ್ರೇಜ್ ಶುರುವಾಗಿದೆ.

    ಆದರೆ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗೋದು ಜುಲೈ 24ರಿಂದ. ರಿಲೀಸ್ ಆಗುವ ನಾಲ್ಕು ದಿನ ಮುಂಚಿನಿಂದ. ಅದೇ ದಿನ ಕಿಚ್ಚವರ್ಸ್ ಕೂಡಾ ಓಪನ್ ಆಗಲಿದೆ. ಎಂಜಾಯ್ ಮಾಡ್ತಾ ಮಾಡ್ತಾ ನೋಡಿ.. ಕಿಚ್ಚನ ಜೊತೆ ಮಾತಾಡ್ತಾ.. ಮಾತಾಡ್ತಾ.. ಟಿಕೆಟ್ ಬುಕ್ ಮಾಡಬಹುದು.

    ಇದೆಲ್ಲದರ ಮಧ್ಯೆ ಇವತ್ತು ಅಂದ್ರೆ ಜುಲೈ 21ರಂದು ಗುಮ್ಮನನ್ನು ತೋರಿಸಲಿದ್ದಾರೆ ನಿರ್ದೇಶಕ ಅನೂಪ್ ಭಂಡಾರಿ. ವಿಕ್ರಾಂತ್ ರೋಣನ ಸೆನ್ಸೇಷನ್ ಶುರು ಮಾಡಿದ್ದೇ ಗುಮ್ಮ. ಆ ಗುಮ್ಮನ ಹಾಡಿನ ದರ್ಶನ ಇವತ್ತು ಆಗಲಿದೆ.

    ಉಳಿದಂತೆ.. ವೇಯ್ಟ್.. ವೇಯ್ಟ್.. ವೇಯ್ಟ್.. ಹಬ್ಬ ಶುರುವಾಗೋದು ಜುಲೈ 28ಕ್ಕೇ..

  • ವಿಕ್ರಾಂತ್ ರೋಣ ಆಡಿಯೋ ಕೂಡಾ ಲಹರಿ ಪಾಲು

    ವಿಕ್ರಾಂತ್ ರೋಣ ಆಡಿಯೋ ಕೂಡಾ ಲಹರಿ ಪಾಲು

    ಇತ್ತೀಚೆಗೆ ಲಹರಿ ಸಂಸ್ಥೆ ಕನ್ನಡದ ದೊಡ್ಡ ದೊಡ್ಡ ಚಿತ್ರಗಳನ್ನೆಲ್ಲ ತೆಕ್ಕೆಗೆ ಹಾಕಿಕೊಳ್ಳುತ್ತಿದೆ. ಕೆಜಿಎಫ್ ಚಾಪ್ಟರ್ 2, ಆರ್‍ಆರ್‍ಆರ್ ಚಿತ್ರಗಳ ಆಡಿಯೋ ರೈಟ್ಸ್ ಖರೀದಿಸಿದ್ದ ಲಹರಿ ಸಂಸ್ಥೆ ಈಗ ವಿಕ್ರಾಂತ್ ರೋಣ ಚಿತ್ರದ ಆಡಿಯೋ ಹಕ್ಕುಗಳನ್ನೂ ಖರೀದಿಸಿದೆ. ಅಲ್ಲಿಗೆ.. ಇನ್ನೊಂದು ಪ್ಯಾನ್ ಇಂಡಿಯಾ ಸಿನಿಮಾ ಲಹರಿ ತೆಕ್ಕೆಗೆ ಜಾರಿದೆ.

    ಹಾಗೆ ಆಡಿಯೋ ರೈಟ್ಸ್ ಖರೀದಿಸಿದ ಹಿಂದೆಯೇ ಸುದೀಪ್ ಬರ್ತ್ ಡೇ ಕೂಡಾ ಬಂದಿದೆ. ಸೆಪ್ಟೆಂಬರ್ 2ಕ್ಕೆ ಸುದೀಪ್ ಹುಟ್ಟುಹಬ್ಬ. ಅಭಿಮಾನಿಗಳ ಸೈನ್ಯವನ್ನು ಸುದೀಪ್ ಅಭಿಮಾನದಿಂದಲೇ ಕಟ್ಟಿಹಾಕಿದ್ದಾರೆ. ಅದ್ಧೂರಿತನಕ್ಕೆ ಬ್ರೇಕ್ ಹಾಕಿದ್ದಾರೆ. ಆದರೆ..  ಆ ದಿನ ವಿಕ್ರಾಂತ್ ರೋಣ ಚಿತ್ರತಂಡ ಹಬ್ಬವನ್ನಂತೂ ಮಾಡಲಿದೆ. ಸೆ.2ರಂದು ವಿಕ್ರಾಂತ್ ರೋಣ ಚಿತ್ರದ ಡೆತ್ ಮ್ಯಾನ್ ಆ್ಯಂಥಮ್ ಸಾಂಗ್ ರಿಲೀಸ್ ಆಗಲಿದೆ. ವಾಟ್ ಈಸ್ ದಿಸ್ ಎನ್ನುವಂತಿಲ್ಲ. ಡೈರೆಕ್ಟರ್ ಅನೂಪ್ ಭಂಡಾರಿ ಅವರಂತೂ ಈ ಬಾರಿ ಡಿಫರೆಂಟ್ ಗಿಫ್ಟ್‍ನ್ನು ಈ ಹಾಡಿನ ಮೂಲಕ ರೆಡಿ ಮಾಡಿಟ್ಟುಕೊಂಡಿದ್ದಾರೆ.

  • ವಿಕ್ರಾಂತ್ ರೋಣ ಟ್ರೇಲರ್ : ಅಬ್ಬಾ.. ಎಂದ ಇಡೀ ಚಿತ್ರರಂಗ

    ವಿಕ್ರಾಂತ್ ರೋಣ ಟ್ರೇಲರ್ : ಅಬ್ಬಾ.. ಎಂದ ಇಡೀ ಚಿತ್ರರಂಗ

    ಇಡೀ ಚಿತ್ರರಂಗವೇ ಅಲ್ಲಿತ್ತು. ಶಿವಣ್ಣ, ರವಿಚಂದ್ರನ್, ರಮೇಶ್ ಅರವಿಂದ್, ರಕ್ಷಿತ್ ಶೆಟ್ಟಿ, ಡಾಲಿ ಧನಂಜಯ್, ರಿಷಬ್ ಶೆಟ್ಟಿ, ರಾಜ್ ಬಿ.ಶೆಟ್ಟಿ, ಯೋಗರಾಜ್ ಭಟ್, ಯುವ ರಾಜಕುಮಾರ್,  ನಂದಕಿಶೋರ್, ಅರ್ಜುನ್ ಜನ್ಯ, ಇಂದ್ರಜಿತ್ ಲಂಕೇಶ್.. ಹೀಗೆ ಬಹುತೇಕ ಇಂಡಸ್ಟ್ರಿಯ ಗಣ್ಯರು ಅಲ್ಲಿದ್ದರು. ವಿಕ್ರಾಂತ್ ರೋಣನಿಗೆ ಶುಭ ಕೋರಿದರು. ಟ್ರೇಲರ್ ಎಲ್ಲೆಡೆ ರಿಲೀಸ್ ಆಗುವ ಮುನ್ನ ಚಿತ್ರರಂಗದ ಗಣ್ಯರಿಗೆ ಟ್ರೇಲರ್ ತೋರಿಸಿದರು ಕಿಚ್ಚ ಸುದೀಪ್, ಅನೂಪ್ ಭಂಡಾರಿ ಮತ್ತು ಜಾಕ್ ಮಂಜು.

    ರವಿಚಂದ್ರನ್ : ಚಿತ್ರಮಂದಿರಕ್ಕೆ ಜನ ಬರುತ್ತಿಲ್ಲ ಎನ್ನುತ್ತಿದ್ದರು. ಈಗ ಎಷ್ಟೊಳ್ಳೆ ಸಿನಿಮಾ ಬರುತ್ತಿವೆ ಎಂದರೆ ಜನ ಬರುತ್ತಿದ್ದಾರೆ. ಚಿತ್ರಮಂದಿರಗಳೇ ಸಾಲುತ್ತಿಲ್ಲ. ವಿಆರ್ ಎಂದರೆ ವಿಕ್ರಾಂತ್ ರೋಣ ಅಷ್ಟೇ ಅಲ್ಲ, ವಿ. ರವಿಚಂದ್ರ.

    ರಕ್ಷಿತ್ ಶೆಟ್ಟಿ : ಸುದೀಪ್ ಸರ್ ಅಂತಹ ಅದ್ಭುತ ಟ್ಯಾಲೆಂಟೆಡ್ ಕಲಾವಿದ ನನ್ನ ಪ್ರತಿ ಸಿನಿಮಾ ರಿಲೀಸ್ ಆದಾಗಲೂ ಮೆಸೇಜ್ ಮಾಡ್ತಾರೆ. ಭಾರತದ ಅದ್ಭುತ ಟ್ಯಾಲೆಂಟೆಡ್ ಆಕ್ಟರ್‍ಗಳಲ್ಲಿ 5 ಜನರ ಪಟ್ಟಿ ಮಾಡಿದರೆ ಅವರಲ್ಲಿ ಸುದೀಪ್ ಒಬ್ಬರು.

    ಶಿವರಾಜಕುಮಾರ್ : ಸುದೀಪ್ ನನ್ನ ಕ್ಲೋಸ್ ಫ್ರೆಂಡ್. ಬ್ರದರ್. ಫ್ಯಾಮಿಲಿ. ಅವರ ಶಾಂತಿನಿವಾಸಕ್ಕೆ ಸಣ್ಣದಾಗಿ ಧ್ವನಿ ನೀಡಿದ್ದೆ. ಅವರು ನನ್ನ ಹೃದಯಕ್ಕೆ ಹತ್ತಿರ. ಅನೂಪ್ ಅವರ ರಂಗಿತರಂಗ ಥಿಯೇಟರಿನಲ್ಲೇ ನೋಡಿದ್ದೆ. ಈ ಸಿನಿಮಾವನ್ನೂ ಚೆನ್ನಾಗಿ ಮಾಡಿದ್ದಾರೆ.

    ರಮೇಶ್ ಅರವಿಂದ್ : ಸಿನಿಮಾ ನೋಡಿದಾಗ ಇನ್ನೊಂದು ಜಗತ್ತು ತೆರೆದುಕೊಳ್ಳುತ್ತೆ. ಕ್ಯಾಮೆರಾ, ಮ್ಯೂಸಿಕ್ ಎಲ್ಲವೂ ಸಖತ್ತಾಗಿದೆ. ಸೂಪರ್ ಹಿಟ್ ಆಗುವ ಎಲ್ಲ ಸೂಚನೆ ಇದೆ.

    ಡಾಲಿ ಧನಂಜಯ್ : ಸರ್, ಅದ್ಭುತ. ಏನ್ ಹೇಳ್ಬೇಕು ಗೊತ್ತಾಗ್ತಿಲ್ಲ.  ಈಗ ನಾವು ಹೊರಗೆ ಹೋದಾಗ ಕನ್ನಡ ಇಂಡಸ್ಟ್ರಿ ಅಂತಾ ಹೇಳಿಕೊಳ್ಳೋಕೆ ಹೆಮ್ಮೆ. ನೀವು ಫೇಸ್. ಎಲ್ಲ ಕಡೆ ನಿಮ್ಮ ಹೆಸರಿದೆ. ಎಲ್ಲರಿಗೂ ಸಪೋರ್ಟ್ ಮಾಡ್ತೀರ. ಬೆಳೆಸ್ತೀರಾ. ಈ ಸಿನಿಮಾ ಒಟ್ಟಿಗೇ ಫ್ಯಾಮಿಲಿ ಸಮೇತ ನೋಡೋ ಸಿನಿಮಾ.

    ಯೋಗರಾಜ್ ಭಟ್ : ತುಂಬಾ ಹತ್ತಿರದ ಜೀವ ಸುದೀಪ್ ಅವರು. ಜಾಕ್ವೆಲಿನ್ ಕುಣಿತವನ್ನ ಮತ್ತೆಮತ್ತೆ ಮೊಬೈಲಿನಲ್ಲಿ ನೋಡ್ತೀವಿ. ಪ್ರೇಕ್ಷಕನಾಗಿ ಸಿನಿಮಾ ನೋಡೋಕೆ ಕಾಯ್ತಿದ್ದೇನೆ.

    ರಿಷಬ್ ಶೆಟ್ಟಿ : ನಾನು ಸುದೀಪ್ ಸರ್ ಫ್ಯಾನ್ ಅಸೋಸಿಯೇಷನ್ ಕಡೆಯಿಂದ ಬಂದದಿದ್ದೇನೆ. ಟ್ರೇಲರ್ ಅದ್ಬುತವಾಗಿದೆ. ಸುದೀಪ್ ಸರ್ ಜೊತೆ ಒಂದು ಸಿನಿಮಾ ಮಾಡೇ ಮಾಡ್ತೀನಿ.

    ಅರ್ಜುನ್ ಜನ್ಯ : ಸುದೀಪ್ ಸರ್ ನನ್ನ ಗಾಡ್ ಫಾದರ್.

    ರಾಜ್ ಬಿ.ಶೆಟ್ಟಿ : ಅವರ ಸಿನಿಮಾ ನೋಡೋಕೆ ಮನೆಯಲ್ಲಿ ಸುಳ್ಳು ಹೇಳಿ ಹೋಗ್ತಿದ್ದೆ. ಈಗ ಅವರ ಸಿನಿಮಾ ಟ್ರೇಲರ್‍ನ್ನ ಎಲ್ಲರಿಗಿಂತ ಮೊದಲು ನೋಡೋ ಭಾಗ್ಯ ಸಿಕ್ಕಿದೆ.

    ಜಾಕ್ ಮಂಜು : ಸುದೀಪ್ ಸರ್ ಇಲ್ಲದೆ ಈ ಸಿನಿಮಾ ಆಗ್ತಾ ಇರಲಿಲ್ಲ. ಪ್ರಿಯಾ ಮೇಡಂ ಸಹಾಯದಿಂದ ಈ ಕಥೆ ಹೇಳಿದವಿ. ಜಾಕ್ವೆಲಿನ್ ಕನ್ನಡದಲ್ಲಿಯೇ ಮಾತನಾಡಿದ್ದಾರೆ. ಸುದೀಪ್ ಸರ್‍ಗೆ ತುಂಬಾ ಥ್ಯಾಂಕ್ಸ್

    ಅನೂಪ್ ಭಂಡಾರಿ : ಈ ಚಿತ್ರ ಇಷ್ಟು ದೊಡ್ಡ ಮಟ್ಟಕ್ಕೆ ಆಗೋಕೆ ಕಾರಣ ಸುದೀಪ್. ಅವರಿಗೆ ನನ್ನ ಥ್ಯಾಂಕ್ಸ್.

    ವೇದಿಕೆಯಲ್ಲಿದ್ದವರೆಲ್ಲ ವಿಕ್ರಾಂತ್ ರೋಣ ಟ್ರೇಲರ್ ನೋಡಿದ್ದಾರೆ. ಇವತ್ತು ಇಡೀ ದೇಶ ಟ್ರೇಲರ್ ನೋಡಲಿದೆ. ಪ್ರತಿ ಭಾಷೆಯಲ್ಲೂ ಆಯಾ ಚಿತ್ರರಂಗದ ಸ್ಟಾರ್ ಕಲಾವಿದರೇ ಚಿತ್ರದ ಟ್ರೇಲರ್‍ನ್ನು ಡಿಜಿಟಲ್ ಲಾಂಚ್ ಮಾಡುತ್ತಿದ್ದಾರೆ.

  • ವಿಕ್ರಾಂತ್ ರೋಣ ಡಬ್ಬಿಂಗ್`ನಲ್ಲಿ ಸುದೀಪ್ ಬ್ಯುಸಿ

    ವಿಕ್ರಾಂತ್ ರೋಣ ಡಬ್ಬಿಂಗ್`ನಲ್ಲಿ ಸುದೀಪ್ ಬ್ಯುಸಿ

    2021ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ವಿಕ್ರಾಂತ್ ರೋಣ ಚಿತ್ರದ ಡಬ್ಬಿಂಗ್ ಶುರುವಾಗಿದೆ. ಸುದೀರ್ಘ ಅವಧಿಯ ಬಳಿಕ ಸಿನಿಮಾಗೆ ಧ್ವನಿ ನೀಡುತ್ತಿದ್ದೇನೆ. ಇದು ಹೊಸ ಅನುಭವದಂತೆ ಫೀಲ್ ಆಗುತ್ತಿದೆ. ಚಿತ್ರ ಅಂದುಕೊಂಡಂತೆಯೇ ಬರುತ್ತಿದೆ ಎನ್ನುವುದು ಖುಷಿಯ ವಿಚಾರ ಎಂದು ಡಬ್ಬಿಂಗ್ ಅನುಭವ ಹಂಚಿಕೊಂಡಿದ್ದಾರೆ ಕಿಚ್ಚ ಸುದೀಪ್.

    ಆಗಸ್ಟ್ 19ರಂದು ರಿಲೀಸ್ ಎಂದು ಘೋಷಿಸಿಕೊಂಡಿರುವ ವಿಕ್ರಾಂತ್ ರೋಣ, ಅದೇ ದಿನ ರಿಲೀಸ್ ಆಗುತ್ತದಾ..? ಇಲ್ಲವಾ..? ಎಂಬುದು ಗೊತ್ತಿಲ್ಲ. ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಚಿತ್ರ ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲಿ ರಿಲೀಸ್ ಆಗುತ್ತಿದೆ. ನಿರೂಪ್ ಭಂಡಾರಿ, ನೀತೂ ಅಶೋಕ್ ನಟಿಸಿರುವ ಚಿತ್ರಕ್ಕೆ ಜಾಕ್ ಮಂಜು ನಿರ್ಮಾಪಕ. ಚಿತ್ರ 2ಡಿ ಮತ್ತು 3ಡಿ ವರ್ಷನ್‍ನಲ್ಲಿ ಬರಲಿದೆ.

  • ವಿಕ್ರಾಂತ್ ರೋಣ ಬಜೆಟ್ 100 ಕೋಟಿಗೂ ಹೆಚ್ಚು..!

    ವಿಕ್ರಾಂತ್ ರೋಣ ಬಜೆಟ್ 100 ಕೋಟಿಗೂ ಹೆಚ್ಚು..!

    ವಿಕ್ರಾಂತ್ ರೋಣ ಚಿತ್ರ ಮೊದಲು ಅನೂಪ್ ಭಂಡಾರಿ-ಸುದೀಪ್ ಅವರ ಲಿಸ್ಟ್‍ನಲ್ಲಿ ಇಲ್ಲ. ಮೊದಲಿಗೆ ಶುರುವಾಗಿದ್ದು ಬಿಲ್ಲರಂಗಭಾಷಾ. ಆದರೆ ಸುದೀಪ್ ಹೇಳುವಂತೆ.. ಅದೇಕೋ ಒಂದು ಹಂತದಲ್ಲಿ ಆ ಸ್ಕ್ರಿಪ್ಟ್ ಹೋಲ್ಡ್ ಆಗುತ್ತಿತ್ತು. ಮುಂದೆ ಹೋಗ್ತಾನೇ ಇರಲಿಲ್ಲ. ಆ ಟೈಂನಲ್ಲಿ ಅನೂಪ್ ಹೇಳಿದ ಎಳೆಯೇ ಇದು. ವಿಕ್ರಾಂತ್ ರೋಣ ಸ್ಟೋರಿ. ನನಗೆ ಹಾಲಿವುಡ್`ನ ಇಂಡಿಯಾನಾ ಜೋನ್ಸ್, ಜುಮಾಂಜಿಯಂತಾ ಚಿತ್ರಗಳು ಇಷ್ಟ. ಅಂತಾ ಸಿನಿಮಾ ಮಾಡೋ ಪ್ಲಾನ್ ಮಾಡಿದೆ. ಮೊದಲು ಈ ಸಿನಿಮಾನಾ 9 ಕೋಟಿಯಲ್ಲಿ ಮಾಡೋಕೆ ನಾನೇ ನಿರ್ಧರಿಸಿದ್ದೆ. ಆದರೆ ಕಥೆ ಬೆಳೆಯುತ್ತಾ ಹೋದಂತೆ ಬಜೆಟ್ ಕೂಡಾ ಬೆಳೀತು. ನನ್ನ ವೃತ್ತಿ ಬದುಕಿನ ದೊಡ್ಡ ಸಿನಿಮಾ ಆಯಿತು ಎನ್ನುತ್ತಾರೆ ಸುದೀಪ್.

    ಅನೂಪ್ ಅವರಿಗೆ ದೊಡ್ಡ ಬಜೆಟ್ ಸಿನಿಮಾ ಮಾಡಿ ಅನುಭವ ಇರಲಿಲ್ಲ. ಆದರೆ, ಅವರು ಹಾಕಿದ ಹಣವನ್ನು ಒಂದಿಷ್ಟೂ ವೇಸ್ಟ್ ಮಾಡಲಿಲ್ಲ. ದುಡ್ಡಿದೆ ಎಂದು ಬೇಕಾಬಿಟ್ಟಿ ಖರ್ಚು ಮಾಡಲಿಲ್ಲ. ಒಂದೊಳ್ಳೆ ಟೀಂ ಕಟ್ಟಿ ಒಳ್ಳೆ ಸಿನಿಮಾ ಮಾಡಿದ್ದಾರೆ. ಅವರ ಜೊತೆ ಜಾಕ್ ಮಂಜು ಇದ್ದರು ಎನ್ನುವ ಮೂಲಕ ಸಿನಿಮಾ ಹುಟ್ಟಿದ್ದು ಹೇಗೆ ಅನ್ನೋದನ್ನ ಬಿಚ್ಚಿಟ್ಟಿದ್ದಾರೆ ಕಿಚ್ಚ.

    ದುಡ್ಡಿದೆ ಎಂದು ಖರ್ಚು ಮಾಡಿ ಬಜೆಟ್ ಏರಿಸಿದ ಸಿನಿಮಾ ಇದಲ್ಲ. ಅನೂಪ್ ಪೈಸೆ ಪೈಸೆಯನ್ನೂ ಅಳೆದೂ ತೂಗಿ ಖರ್ಚು ಮಾಡಿದ್ದಾರೆ. ಐಡಿಯಾಗಾಗಿ ಖರ್ಚು ಮಾಡಿದ್ದಾರೆ. ಖರ್ಚು ಮಾಡಿದ ಪ್ರತಿ ಹಣಕ್ಕೂ ತೆರೆಯ ಮೇಲೆ ಲೆಕ್ಕ ಇದೆ. ಹೀಗಾಗಿ ಚಿತ್ರದ ಬಜೆಟ್ 100 ಕೋಟಿ ದಾಟಿತು ಎಂದಿದ್ದಾರೆ ಸುದೀಪ್.

  • ವಿಕ್ರಾಂತ್ ರೋಣ ರಿಲೀಸ್ ಯಾವಾಗ..?

    ವಿಕ್ರಾಂತ್ ರೋಣ ರಿಲೀಸ್ ಯಾವಾಗ..?

    ವಿಕ್ರಾಂತ್ ರೋಣ. ಸಿನಿಮಾ ಘೋಷಣೆಯಾದಾಗಿನಿಂದ ಥ್ರಿಲ್ ಕೊಡುತ್ತಿರುವ ಸಿನಿಮಾ. ಸ್ವತಃ ಸುದೀಪ್ ಕೂಡಾ ಥ್ರಿಲ್ ಆಗಿರುವ ಚಿತ್ರ ಈಗಾಗಲೇ ದೇಶದಾದ್ಯಂತ ಸದ್ದು ಮಾಡಿದೆ. ಚಿತ್ರದ ಮೇಕಿಂಗ್, ಕಿಚ್ಚನ ಕಾಸ್ಟ್ಯೂಮ್, ಬುರ್ಜ್ ಖಲೀಫಾದಲ್ಲಿ ಪೋಸ್ಟರ್, ಮುಂಬೈನಲ್ಲಿ ಪೋಸ್ಟರ್.. ಹೀಗೆ ಪ್ರತಿ ಹಂತದಲ್ಲೂ ಕ್ರೇಜ್ ಸೃಷ್ಟಿಸಿರೋ ಸಿನಿಮಾ ವಿಕ್ರಾಂತ್ ರೋಣ.

    ಈ ಚಿತ್ರದ ರಿಲೀಸ್ ಡೇಟ್ ಘೋಷಣೆ ಮಾಡೋಕೆ ಚಿತ್ರತಂಡ ಡೇಟ್ ಫಿಕ್ಸ್ ಮಾಡಿದೆ. ಡಿ.7ಕ್ಕೆ ಡೇಟ್ ಅನೌನ್ಸ್ ಆಗಲಿದೆ. ಬೆಳಗ್ಗೆ 11 ಗಂಟೆ 5 ನಿಮಿಷದ ಶುಭ ಮುಹೂರ್ತದಲ್ಲಿ.

    3ಡಿಯಲ್ಲೂ ಬರುತ್ತಿರೋ ವಿಕ್ರಾಂತ್ ರೋಣ ಚಿತ್ರದಲ್ಲಿ ಸುದೀಪ್ ಹೀರೋ. ನಿರೂಪ್ ಭಂಡಾರಿ, ನೀತು ಅಶೋಕ್ ಪ್ರಧಾನ ಪಾತ್ರದಲ್ಲಿರೋ ಚಿತ್ರಕ್ಕೆ ಅನೂಪ್ ಭಂಡಾರಿ ನಿರ್ದೇಶಕ. ಶಾಲಿನಿ ಜಾಕ್ ಮಂಜು ಮತ್ತು ಅಲಂಕಾರ್ ಪಾಂಡಿಯನ್ ನಿರ್ಮಾಣದ ಸಿನಿಮಾದಲ್ಲಿ ಮಿಲನಾ ನಾಗರಾಜ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಪುಟ್ಟ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾರೆ.

  • ವಿಕ್ರಾಂತ್ ರೋಣನ ಹಾಡಿನ ಹಬ್ಬಕ್ಕೆ ಮೊದಲೇ `ಆತ' ಹೇಳಿದ ಭವಿಷ್ಯ..!

    ವಿಕ್ರಾಂತ್ ರೋಣನ ಹಾಡಿನ ಹಬ್ಬಕ್ಕೆ ಮೊದಲೇ `ಆತ' ಹೇಳಿದ ಭವಿಷ್ಯ..!

    ವಿಕ್ರಾಂತ್ ರೋಣ. ರಿಲೀಸ್ ಆಗುತ್ತಿರೋದು ಜುಲೈ 28ಕ್ಕೆ. ಹಬ್ಬ ಶುರುವಾಗುತ್ತಿರೋದು ಇಂದು. ಚಿತ್ರದ ಗಡಂಗ್ ರುಕ್ಕಮ್ಮ.. ಹಾಡಿನ ಕನ್ನಡ ವರ್ಷನ್ ಮೊದಲ ಬಾರಿಗೆ ಇವತ್ತು ರಿಲೀಸ್ ಆಗುತ್ತಿದೆ. ಇದಾದ ನಂತರ ಹಂತ ಹಂತವಾಗಿ ಪ್ರತೀ ದಿನ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನ ಹಾಡುಗಳೂ ರಿಲೀಸ್ ಆಗಲಿವೆ. ದಿನಕ್ಕೊಂದು ಭಾಷೆಯ ಹಾಡು ರಿಲೀಸ್ ಮಾಡಿ ಹಬ್ಬ ಮಾಡುತ್ತಿದೆ ಚಿತ್ರತಂಡ. ಈ ಗಡಂಗ್ ರಕ್ಕಮ್ಮ ಹಾಡಿನಲ್ಲಿ ಕಿಚ್ಚನ ಜೊತೆ ಕುಣಿದು ಕಿಕ್ಕೇರಿಸಿರೋದು ಜಾಕ್ವೆಲಿನ್ ಫರ್ನಾಂಡಿಸ್.

    ಸಂಭ್ರಮವನ್ನು ಒಂದೇ ದಿನಕ್ಕೆ ಸೀಮಿತ ಮಾಡಬಾರದು. ದಿನಕ್ಕೊಂದು ಭಾಷೆಯ ಹಾಡನ್ನು ಬಿಡುಗಡೆ ಮಾಡೋದ್ರಿಂದ ಅದು ಹೆಚ್ಚು ಜನಕ್ಕೆ ತಲುಪುತ್ತದೆ ಎನ್ನುವುದು ಈ ಗಡಂಗ್ ರಕ್ಕಮ್ಮ ಹಾಡಿನ ಹಬ್ಬದ ಯೋಜನೆ ಎನ್ನುತ್ತಾರೆ ನಿರ್ಮಾಪಕ ಜಾಕ್ ಮಂಜು.

    ಇದರ ಮಧ್ಯೆ ಈ ಚಿತ್ರದ ಬಗ್ಗೆ ಭರ್ಜರಿ ಭವಿಷ್ಯ ನುಡಿದಿರೋದು ರಾಮ್ ಗೋಪಾಲ್ ವರ್ಮಾ. ನೋಡಿದವರು.. ಕೇಳಿದವರು ಒಪ್ಪುತಾರೋ.. ಬಿಡುತ್ತಾರೋ.. ತನಗೆ ಅನ್ನಿಸಿದ್ದನ್ನು ಮುಚ್ಚುಮರೆಯಿಲ್ಲದೆ ನೇರವಾಗಿ ಹೇಳೋ ಆರ್.ಜಿ.ವಿ. ವಿಕ್ರಾಂತ್ ರೋಣ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಈ ಚಿತ್ರ ಕನ್ನಡದಿಂದ ಇನ್ನೊಂದು ಮಾಸ್ಟರ್ ಪೀಸ್ ಆಗಿ ಹೊರಹೊಮ್ಮಲಿದೆ. ಚಿತ್ರದ ಕೆಲವು ದೃಶ್ಯಗಳನ್ನು ನೋಡಿದ್ದೇನೆ. ಚೆನ್ನಾಗಿದೆ. ಜೊತೆಗೆ ಚಿತ್ರದ ಬಿಡುಗಡೆಗೆ ಪಿವಿಆರ್ ಕೈಜೋಡಿಸಿರುವುದು ತುಂಬಾ ಖುಷಿಯಾಯಿತು ಎಂದಿದ್ದಾರೆ ಆರ್.ಜಿ.ವಿ.

    ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನದ ಚಿತ್ರ ಈಗಾಗಲೇ ಪ್ರಚಾರ ಶುರು ಮಾಡಿದೆ. ಹಿಂದಿಯಲ್ಲಿ ಸಲ್ಮಾನ್, ಝೀ ಸ್ಟುಡಿಯೋಸ್ ಮತ್ತು ಪಿವಿಆರ್ ಚಿತ್ರದ ಜೊತೆ ಕೈಜೋಡಿಸಿವೆ. ಇಂಟರ್‍ನ್ಯಾಷನಲ್ ರಿಲೀಸ್ ಈಗಾಗಲೇ 10 ಕೋಟಿ ಡೀಲ್ ಮಾಡಿದೆ.

  • ವಿಕ್ರಾಂತ್ ರೋಣನ ಹೊಸ ಬಿಸಿನೆಸ್ ಪ್ಲಾನ್

    ವಿಕ್ರಾಂತ್ ರೋಣನ ಹೊಸ ಬಿಸಿನೆಸ್ ಪ್ಲಾನ್

    ಒಂದು ಕಡೆ ವಿಕ್ರಾಂತ್ ರೋಣ ಸಿನಿಮಾ ದೇಶದಾದ್ಯಂತ ಸಂಚಲನ ಸೃಷ್ಟಿಸುತ್ತಿದೆ. ಇದೇ ಮೊದಲ ಬಾರಿಗೆ ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್ ಆಗುತ್ತಿರೋ ಕನ್ನಡದ ಸಿನಿಮಾ ವಿಕ್ರಾಂತ್ ರೋಣ. ರಕ್ಕಮ್ಮ ಹಾಡಿನ ಕ್ರೇಜ್ ಒಂದು ಕಡೆಯಾದರೆ, ಉಳಿದ ಹಾಡುಗಳ ಕಿಚ್ಚು ಮತ್ತೊಂದು ಕಡೆ. ಸುದೀಪ್ ಮತ್ತು ಅನೂಪ್ ಭಂಡಾರಿ ಕಾಂಬಿನೇಷನ್`ನ ಸಿನಿಮಾ ಅಮಿತಾಭ್ ಬಚ್ಚನ್ ಸೇರಿದಂತೆ ಸ್ಟಾರ್ ನಟರನ್ನೆಲ್ಲ ಸೆಳೆಯುವಲ್ಲಿ ಗೆದ್ದಿದೆ. ಇದರ ಮಧ್ಯೆಯೇ ಕಿಚ್ಚ ಹೊಸ ಬಿಸಿನೆಸ್ ಆರಂಭಿಸುವ ಉತ್ಸಾಹ ತೋರಿಸಿದ್ದಾರೆ. ಇದು ಸಿನಿಮಾಗೆ ಸಂಬಂಧಿಸಿದ್ದಲ್ಲ. ಸಿನಿಮಾ ಹೊರತಾದ ಅಡುಗೆಗೆ ಸಂಬಂಧಿಸಿದ್ದು.

    ಕಿಚ್ಚ ಸುದೀಪ್ ಅವರ ಕ್ವಾಲಿಟಿಗಳಲ್ಲಿ ಇನ್ನೊಂದು.. ಸುದೀಪ್ ಒಳ್ಳೆಯ ಅಡುಗೆ ಭಟ್ಟ. ಮನೆಗೆ ಹೋದವರಿಗೆ ಪ್ರೀತಿಯಿಂದ ಅಡುಗೆ ಮಾಡಿ ಬಡಿಸುವುದು ಎಂದರೆ ಸುದೀಪ್‍ಗೆ ವಿಶೇಷ ಸಂಭ್ರಮ. ಆ ಸಂಭ್ರಮವೇ ಈಗ ಬಿಸಿನೆಸ್ ಆಗುತ್ತಿದೆ.

    ಕಾಫಿ & ಬನ್ಸ್ ಇನ್ನೋವೇಷನ್ಸ್ ಅನ್ನೋ ಹೋಟೆಲ್, ರೆಸ್ಟೋರೆಂಟ್ ಉದ್ಯಮ ಆರಂಭಿಸುತ್ತಿದ್ದಾರೆ ಸುದೀಪ್. ಈ ಉದ್ದಿಮೆಗೆ ಎಂದಿನಂತೆ ಸಾಥ್ ಕೊಟ್ಟಿರುವುದು ಪ್ರಿಯಾ ಸುದೀಪ್.

    ಅಪ್ಪ ಹೋಟೆಲ್ ಉದ್ಯಮಿ. ಅವರಂತೆ ಸರೋವರದಂತಾ ದೊಡ್ಡ ಸಂಸ್ಥೆ ಕಟ್ಟುತ್ತೇನೆಯೋ ಇಲ್ಲವೋ ಗೊತ್ತಿಲ್ಲ. ಒಂದಂತೂ ನಿಜ. ಅದರಲ್ಲಿ ಸ್ವಲ್ಪವನ್ನಾದರೂ ಸಾಧಿಸಬಲ್ಲೆ. ಈ ಸಂಸ್ಥೆಯ ಅಡಿಯಲ್ಲಿ ಹೋಟೆಲ್, ಕೆಫೆ, ರೆಸ್ಟೋರೆಂಟ್ ಶುರು ಮಾಡಲಿದ್ದೇವೆ ಎಂದಿದ್ದಾರೆ ಸುದೀಪ್. ಸಂಸ್ಥೆಯ ಚೇರ್ಮನ್ ಪ್ರಿಯಾ ಸುದೀಪ್.

    ಇದು ಸುದೀಪ್ ಅವರದ್ದೇ ಐಡಿಯಾ. ಹೆಸರೂ ಅವರದ್ದೇ ಸೆಲೆಕ್ಷನ್. 26 ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲೇ ಇದ್ದಾರೆ. ಸಿನಿಮಾ, ಕ್ರಿಕೆಟ್, ಹೋಟೆಲ್ ಅವರ ಇಷ್ಟವಾದ ಪ್ಯಾಷನ್ ಎಂದಿದ್ದಾರೆ ಪ್ರಿಯಾ.

    ಹಾಗಂತ ಸುದೀಪ್ ಸಿನಿಮಾದಿಂದ ದೂರವಾಗುತ್ತಾರೆ ಎಂದಲ್ಲ. ಕೆಫೆ ಬಿಸಿನೆಸ್ ಪ್ರಿಯಾ ಅವರದ್ದಾದರೆ, ಸಿನಿಮಾ ಸುದೀಪ್ ಅವರದ್ದೇ.  ಪ್ರಿಯಾ ಸುದೀಪ್ ಅವರಿಗೆ ವ್ಯವಹಾರ ಚೆನ್ನಾಗಿಯೇ ಗೊತ್ತಿದೆ. ಹೀಗಾಗಿ ಸುದೀಪ್ ಅವರ ಬೆನ್ನ ಹಿಂದಿನ ಶಕ್ತಿಯಾಗಿರೋ ಪ್ರಿಯಾ ಸುದೀಪ್ ತಾವು ಬಿಸಿನೆಸ್ ನೋಡಿಕೊಂಡು ಸುದೀಪ್ ಅವರನ್ನು ಸಂಪೂರ್ಣ ಚಿತ್ರರಂಗಕ್ಕೆ ಬಿಡಲಿದ್ದಾರೆ.

    ಇದೆಲ್ಲದರ ಮಧ್ಯೆ ಸುದೀಪ್ ವಿಕ್ರಾಂತ್ ರೋಣ ಚಿತ್ರದ ಪ್ರಚಾರದಲ್ಲಿ ಬ್ಯುಸಿ. ಇದರ ಅಂಗವಾಗಿ ಜುಲೈ 25ಕ್ಕೆ ಕಿಚ್ಚವರ್ಸ್ ಲಾಂಚ್ ಆಗುತ್ತಿದೆ.