ಏನು ಹೀಗಂದರೆ.. ಏನಿದರ ಅರ್ಥ ಅಂತಾ ತಲೆ ಕೆರೆದುಕೊಳ್ಳಬೇಡಿ. ವಿಕ್ರಾಂತ್ ರೋಣನಲ್ಲಿ ಕೇಳಿಸಿದ ತುಳು ಪದಗಳಿವು. ನೆತ್ತರ ಪರ್ಬ ಎಂದರೆ ರಕ್ತಮಳೆ ಎಂದರ್ಥ.
ಗರ ಗರ ಗರ ಗಗ್ಗರ ಜರ್ಬ..
ಪಿರ ನಲ್ಕುರಿ ನೆತ್ತರ ಪರ್ಬ..
ನೆತ್ತರ ಪರ್ಬ
ಇದು ಅಲ್ಲಿರೋದು. ಡೌಟೇ ಇಲ್ಲದಂತೆ ಇದು ಸಸ್ಪೆನ್ಸ್ ಥ್ರಿಲ್ಲರ್ ಮಿಸ್ಟರಿ ಕಥೆ. ರಂಗಿತರಂಗ ಅನೂಪ್ ಭಂಡಾರಿ ಮತ್ತೊಮ್ಮೆ ಹೊಸ ಸೆನ್ಸೇಷನ್ ಸೃಷ್ಟಿಸೋಕೆ ಹೊರಟಿದ್ದಾರೆ ಅನ್ನಿಸೋದು ಸುಳ್ಳಲ್ಲ. ಅವರು ತುಳುನಾಡಿನವರೇ. ಈಗಾಗಲೇ ತಮ್ಮ ರಕ್ಕಮ್ಮ ಸಾಂಗಿನಲ್ಲಿ ಯಕ್ಕ ಸಕ್ಕ.. ಪದಗಳನ್ನು ಬಳಸಿರೋ ಅನೂಪ್, ಚಿತ್ರದ ಬ್ಯಾಕ್‍ಗ್ರೌಂಡಿನಲ್ಲಿ ಇದನ್ನು ಬಳಸಿಕೊಂಡಿದ್ದಾರೆ. ರಂಗಿತರಂಗ ನಂತರ ಡಣ್ಣಾಣ.. ಡಣ್ಣಾನ.. ಫೇಮಸ್ ಆಗಿತ್ತು. ಈಗ
ಗರ ಗರ ಗರ ಗಗ್ಗರ ಜರ್ಬ..
ಪಿರ ನಲ್ಕುರಿ ನೆತ್ತರ ಪರ್ಬ..
ನೆತ್ತರ ಪರ್ಬ
ವಿಕ್ರಾಂತ್ ರೋಣ ಟ್ರೇಲರ್ ಅಷ್ಟು ಕುತೂಹಲ ಹುಟ್ಟಿಸಿದೆ. ಒಂದೊಂದು ಫ್ರೇಮ್ ಕೂಡಾ ದೃಶ್ಯ ವೈಭವ. ಕಲಾಕೃತಿಯಂತೆ ಕಾಣುತ್ತಿದೆ. ಕಿಚ್ಚ ಸುದೀಪ್, ನಿರೂಪ್ ಭಂಡಾರಿ, ಜಾಕ್ವೆಲಿನ್ ಫರ್ನಾಂಡಿಸ್, ನೀತಾ ಅಶೋಕ್.. ಹೀಗೆ ಪ್ರತಿಭಾವಂತರ ದಂಡಿನ ಚಿತ್ರಕ್ಕೆ ಜಾಕ್ ಮಂಜು ಪ್ರೊಡ್ಯೂಸರ್. ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಹವಾ ಭರ್ಜರಿಯಾಗಿಯೇ ಸೃಷ್ಟಿಯಾಗಿದೆ.
ಗರ ಗರ ಗರ ಗಗ್ಗರ ಜರ್ಬ..
ಪಿರ ನಲ್ಕುರಿ ನೆತ್ತರ ಪರ್ಬ..
ನೆತ್ತರ ಪರ್ಬ
ಭಯದಲ್ಲಿಯೇ ಬದುಕುತ್ತಿರುವವರ ಊರಿಗೆ ಭಯ ಎಂದರೇನೆಂದೇ ಗೊತ್ತಿಲ್ಲದ ವ್ಯಕ್ತಿಯೊಬ್ಬ ಬರುತ್ತಾನೆ. ಆ ವಿಚಿತ್ರ ಊರಿನಲ್ಲಿ ಜನ ಕಾಣೆಯಾಗುತ್ತಿದ್ದಾರೆ. ಪೊಲೀಸ್ ಅಧಿಕಾರಿಯ ಹೆಣವೇ ಸಿಕ್ಕಿದೆ. ರಕ್ತದ ಹಬ್ಬ ನಡೆಸೋ ಊರದು. ಆ ವಿಚಿತ್ರ ಊರಿನ ಭಯಾನಕ ಕಥೆಯೇ ವಿಕ್ರಾಂತ್ ರೋಣ.