` sakkath, - chitraloka.com | Kannada Movie News, Reviews | Image

sakkath,

  •  ಗಣಿ ಹುಟ್ಟುಹಬ್ಬಕ್ಕೆ ಸಿಂಪಲ್ ಸುನಿ ಸಖತ್ ಗಿಫ್ಟ್

    simple suni's special birthday gift to ganesh

    ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬ. ಈ ಹುಟ್ಟುಹಬ್ಬದ ದಿನ ಮನೆಯ ಬಳಿ ಬರಬೇಡಿ. ದೂರದಿಂದಲೇ ಹಾರೈಸಿ. ಕೊರೊನಾ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಗಣೇಶ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಆ ಮನವಿಯ ತೀವ್ರತೆ ಎಷ್ಟಿತ್ತೆಂದರೆ ಅಂದಿನಿಂದಲೇ ಟ್ವಿಟರ್‍ನಲ್ಲಿ ಗಣೇಶ್ ಹುಟ್ಟುಬ್ಬ ಟ್ರೆಂಡ್ ಆಗಿ ಹೋಯ್ತು. ಸ್ವತಃ ಸುದೀಪ್ ಕನ್‍ಫ್ಯೂಸ್ ಆಗಿ ಗಣೇಶ್ ಅವರಿಗೆ 3 ದಿನ ಮೊದಲೇ ಶುಭ ಕೋರಿದ್ದರು. ಇವತ್ತು ಹುಟ್ಟುಹಬ್ಬ.

    ಗಣೇಶ್ ಅವರಿಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಶುಭ ಕೋರಿದ್ದಾರೆ. ಸಖತ್ ಸಿನಿಮಾ ಮಾಡುತ್ತಿರೋ ಸಿಂಪಲ್ ಸುನಿ, ಗಣೇಶ್ ಅವರಿಗಾಗಿ ಜ್ಯೂಡಾ ಸ್ಯಾಂಡಿಯವರಿಂದ ಒಂದು ರ್ಯಾಪ್ ಸಾಂಗ್ ಮಾಡಿಸಿ ಶುಭ ಕೋರಿದ್ದಾರೆ. 

     

  • 'Sakath' Team To Release Rap Motion Poster On Ganesh's Birthday

    sakkath team to release rap motion poster on ganesh's birthday

    If everything had gone as planned, then Ganesh starrer 'Sakath' should have been complete by now. But due to lock down, the shooting of the film was stopped mid-way. Though the permission for shooting has been given, the team is waiting for some more time as the condition is critical now.

    Meanwhile, Suni has decided to release the motion poster of the film on Ganesh's birthday (July 02). The motion poster will be blended with rap music  and this is the first of its kind in Kannada cinema.

    'Sakath' is scripted and directed by Simple Suni and produced by Supreeth. The film stars Ganesh along with Surabhi, Kuri Prathap, Dharmanna Kadur, Sadhu Kokila and others in prominent roles. Judah Sandy is the music composer, while Santhosh Rai Pathaje is the music director.

  • Ganesh Plays A Blind In 'Sakath'

    Ganesh Plays A Blind In 'Sakath'

    Actor Ganesh has played varied roles in a career spanning 15 years. For the first time, the actor will be seen as a blind in his forthcoming film 'Sakath'.

    Ganesh plays a blind singer and the film revolves around a Television Reality Program. Though the film is a family entertainer, the film has a lot of thrilling elements to it.

    'Sakath' is written and directed by Simple Suni who had earlier worked  with Ganesh in 'Chamak'. This is his second collaboration with Ganesh. Supreeth who had produced 'Bharaate' is producing the film. 'Sakath' was launched last year itself and the team had completed one schedule before the lockdown. However, the film got delayed due to lockdown and the team is back to shooting once again.

    'Sakath' stars Ganesh along with Nishvika Naidu, Surabhi, Kuri Prathap, Dharmanna Kadur, Sadhu Kokila and others in prominent roles. Judah Sandy is the music composer, while Santhosh Rai Pathaje is the music director.

  • ಅರೆರೆರೆರೇ... ಸಕ್ಕತ್‍ನಲ್ಲಿ ಹನುಮನ ಕಥೆನಾ..?

    what is the story of sakkath

    ಸಿಂಪಲ್ ಸುನಿ, ಗೋಲ್ಡನ್ ಸ್ಟಾರ್ ಕಾಂಬಿನೇಷನ್‍ನ ಸಕ್ಕತ್ ಚಿತ್ರ ಪೋಸ್ಟರ್ ಹೊರಬಿದ್ದಿದ್ದೇ ತಡ.. ಎಲ್ಲರಲ್ಲೂ ಒಂದು ಪ್ರಶ್ನೆ ಮನೆ ಮಾಡಿದೆ. ಕುತೂಹಲ ಹುಟ್ಟಿಸಿದೆ. ಆ ಕುತೂಹಲದ ಕೇಂದ್ರ ಬಿಂದುವಾಗಿರೋದು ಸದ್ಯಕ್ಕೆ ಕಿರುತೆರೆ ಸೆನ್ಸೇಷನ್ ಜವಾರಿ ಹನುಮ.

    ಹಾವೇರಿ ಮೂಲದ ಜವಾರಿ ಹನುಮಮಂತ ಕಿರುತೆರೆಗೆ ಪರಿಚಯವಾಗಿದ್ದು ಝೀ ಸರಿಗಮಪ ಮೂಲಕ. ಅದೇನೋ ಎಂತೋ.. ಕಿರುತೆರೆಯಲ್ಲಿ ಕ್ರಾಂತಿಯನ್ನೇ ಮಾಡಿಬಿಟ್ಟ ಹನುಮಂತ. ಇವತ್ತಿಗೂ ಹನುಮಂತನ ಹಾಡುಗಳಿಗೆ ಕಿರುತೆರೆಯಲ್ಲಿ ಒಳ್ಳೆಯ ಟಿಆರ್‍ಪಿ ಇದೆ.

    ಈಗ ಗಣೇಶ್ ಲುಕ್ ಹೊರಬಿತ್ತಲ್ಲ.. ಅಲ್ಲಿ ಎಲ್ಲರಿಗೂ ಈ ಪ್ರಶ್ನೆ ಮೂಡೋಕೆ ಕಾರಣವಾಗಿದ್ದು ಲುಂಗಿ. ಗಣೇಶ್ ಧರಿಸಿರೋ ಲುಂಗಿ, ಹಾಡುತ್ತಿರುವ ಸ್ಟೈಲು ಎಲ್ಲವೂ ಹನುಮನನ್ನೇ ನೆನಪಿಸಿದೆ. ಹಾಗಾದರೆ.. ಇದು ಆ ಕಥೆನಾ..?

    ಸಿಂಪಲ್ ಸುನಿ ಸಿಂಪಲ್ಲಾಗ್ ಕೇಳಿದ್ರೂ.. ಸೀರಿಯಸ್ಸಾಗ್ ಕೇಳಿದ್ರೂ.. ಏನೂ ಹೇಳಲ್ಲ.

  • ಗಣೇಶ್ ಕಣ್ಣಿಗೆ ಏನ್ ಮಾಡಿದ್ರಪ್ಪೋ ಸಿಂಪಲ್ ಸುನಿ..?

    ಗಣೇಶ್ ಕಣ್ಣಿಗೆ ಏನ್ ಮಾಡಿದ್ರಪ್ಪೋ ಸಿಂಪಲ್ ಸುನಿ..?

    ಗೋಲ್ಡನ್ ಸ್ಟಾರ್ ಗಣೇಶ್ ಅವರ ಅತಿ ದೊಡ್ಡ ಆಸ್ತಿ ಅವರ ನಗು ಮತ್ತು ಕಣ್ಣು. ಈಗ ಅವರ ಕಣ್ಣುಗಳಿಗೇ ಕಣ್ಣು ಹಾಕಿಬಿಟ್ರಾ ಸಿಂಪಲ್ ಸುನಿ ಅನ್ನೋ ಅನುಮಾನ ಬಂದಿದೆ. ಕಾರಣ ಇಷ್ಟೆ, ಗಣೇಶ್ ಹಂಚಿಕೊಂಡಿರೋ ಒಂದು ಫೋಟೋ. ಕಟಕಟೆಯಲ್ಲಿ ಅಂಧರು ಹಾಕಿಕೊಳ್ಳುವ ಕಪ್ಪು ಕನ್ನಡಕ ಮತ್ತು ಕುರುಡರು ಬಳಸುವ ವಾಕಿಂಗ್ ಸ್ಟಿಕ್ ಹಿಡಿದಿರೋ ಗಣೇಶ್, ಅದಕ್ಕೆ ಸಖತ್ ಫಿಲ್ಮ್ ಅನ್ನೋ ಹ್ಯಾಷ್ ಟ್ಯಾಗ್ ಕೊಟ್ಟಿದ್ಧಾರೆ.

    ನಾಯಕನಾಗಿ 15 ವರ್ಷಗಳಿಂದ ನಿಮ್ಮ ನೋಟಗಳಿಗೆ ಸೆರೆಯಾಗಿದ್ದೇನೆ.. ಮೊದಲ ಬಾರಿಗೆ ನನ್ನ ನೋಟವನು ಕಟ್ಟಿಟ್ಟು ಕಾಣಿಸಿಕೊಳ್ಳುತ್ತಿದ್ದೇನೆ. ಮುಚ್ಚಿಟ್ಟ ಕಣ್ಗಳಿಗೆ. ಬಿಚ್ಚಿಟ್ಟ ಪ್ರೀತಿಯ ಬೆಳಕಚೆಲ್ಲಿ ಹಾರೈಸಿ ಎಂದು ಚೆಂದವಾಗಿ ಬರೆದೂ ಇದ್ಧಾರೆ.ಅದನ್ನು ಸುನಿ ರೀಟ್ವೀಟ್ ಮಾಡಿದ್ದಾರೆ.

    ಸಖತ್, ಸಿಂಪಲ್ ಸುನಿ ನಿರ್ದೇಶನದ ಸಿನಿಮಾ. ಈ ಚಿತ್ರಕ್ಕೆ ಇತ್ತೀಚೆಗಷ್ಟೇ ನಿಶ್ವಿಕಾ ನಾಯ್ಡು ಅವರನ್ನು ನಾಯಕನಾಗಿ ಆಯ್ಕೆ ಮಾಡಿದ್ದರು ಸುನಿ. ಈಗ ಅಂತಹ ಚೆಲುವೆಯ ಎದುರು ನಿಲ್ಲೋ ನಾಯಕನ ಕಣ್ಣಿನ ಮೇಲೇ ಸಖತ್ ಆಗಿ ಕಣ್ಣಿಟ್ಟುಬಿಟ್ರಾ..?

    ಚಿತ್ರದಲ್ಲಿ ಗಣೇಶ್ ಅಂಧರಾಗಿದ್ದು, ಗಾಯಕನ ಪಾತ್ರ ಮಾಡಿದ್ದಾರೆ. ರಿಯಾಲಿಟಿ ಶೋವೊಂದರಲ್ಲಿ ನಡೆಯುವ ಕಥೆಯೇ ಸಿನಿಮಾ. ಗಣೇಶ್‍ಗೂ ಇಂತಹ ಪಾತ್ರ ಇದೇ ಮೊದಲು. 

  • ಗಣೇಶ್-ಸುನಿ ಸಖತ್

    ganesh - suni combination's next titled sakkath

    ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಸಿಂಪಲ್ ಸುನಿ ಕಾಂಬಿನೇಷನ್ನಿನ ಹೊಸ ಸಿನಿಮಾ ಸಖತ್ ಆಗಿದೆ. ಸಖತ್ತಾಗಿರುತ್ತೆ ಬಿಡ್ರಿ.. ಒಳ್ಳೆ ಕಾಂಬಿನೇಷನ್ನು.. ಅದೇ ರೀ ಸಖತ್..

    ಹೌದ್ರೀ.. ನಾನೂ ಅದನ್ನೇ ಹೇಳಿದ್ದು. ಆ ಸುನಿ ಪೆನ್ನಲ್ಲಿ ಸಖತ್ತು.. ಈ ಗಣೇಶು ಡೈಲಾಗಲ್ಲಿ ಸಖತ್ತು.. ಒಳ್ಳೆ ಕಾಂಬಿನೇಷನ್ನು.. ಅಯ್ಯೋ.. ಹಂಗಲ್ರೀ.. ಅವರ ಹೊಸ ಸಿನಿಮಾ ಟೈಟಲ್ಲೇ ಸಖತ್.

    ಅರೇ.. ಹೌದಾ.. ಈ ಸುನಿನೇ ಹಿಂಗೆ ಬಿಡಪ್ಪಾ.. ಏನೇನೋ ಮಾಡ್ತಿರ್ತಾರೆ.. ಅತ್ತ ಸುನಿ ಅವತಾರ ಪುರುಷನಿಗೆ ಫೈನಲ್ ಟಚ್ ಕೊಡುತ್ತಿದ್ದರೆ, ಇತ್ತ ಗಣೇಶ್ ಭಟ್ಟರೊಂದಿಗೆ ಗಾಳಿಪಟ ಹಾರಿಸುತ್ತಿದ್ದಾರೆ. ಈ ಸೈಕಲ್  ಗ್ಯಾಪಲ್ಲೇ ಹೊಸ ಸುನಿ-ಗಣೇಶ್ ಹೊಸ ಚಿತ್ರ `ಸಖತ್'ಗೆ ಬುನಾದಿ ಹಾಕಿದ್ದಾರೆ. ಭರಾಟೆ ಸುಪ್ರೀತ್ ನಿರ್ಮಾಣದ `ಸಖತ್'ಗೆ ನಾಯಕಿಯಾಗಿರೋದು ಸುರಭಿ ಅನ್ನೋ ಚೆಲುವೆ.

     

  • ಸಖತ್ ಬಾಲು ಮಸ್ತ್ ಮಸ್ತ್

    ಸಖತ್ ಬಾಲು ಮಸ್ತ್ ಮಸ್ತ್

    ಸಿಂಪಲ್ಲಾಗಿದ್ದರೂ ಸಖತ್ ಆಗಿರೋದೇ ಸಖತ್ ಟೀಸರ್ ಹೆಗ್ಗಳಿಕೆ. ಚಿತ್ರದ ಟೀಸರ್‍ನಲ್ಲಿ ಎಂದಿನಂತೆ ಮುಗುಳುನಗೆ ಮೂಡುವಂತೆ ಮಾಡುತ್ತಲೇ ನಾನು ಹೊಸ ಕಥೆ ಹೇಳುತ್ತಿದ್ದೇನೆ ಎನ್ನುವುದನ್ನು ಸಾರಿಬಿಡುತ್ತಾರೆ ಸಿಂಪಲ್ ಸುನಿ.

    ಟೀಸರ್ ನೋಡಿದವರಿಗೆ ಗೋಲ್ಡನ್ ಸ್ಟಾರ್ ಗಣೇಶ್ ಅಂಧ ಹೌದೋ.. ಅಲ್ಲವೋ.. ಆತ ನಾಟಕ ಮಾಡುತ್ತಿದ್ದಾನೋ.. ನಾಯಕಿಗಾಗಿ ಇದನ್ನೆಲ್ಲ ಆಡ್ತಿದ್ದಾನಾ.. ಸಂಥಿಂಗ್ ಡ್ರಾಮಾ ಇದೆ ಅನ್ನೊದನ್ನು ತೋರಿಸಿಬಿಡ್ತಾರೆ ಸುನಿ. ಇದರ ಜೊತೆ ಒಂದು ಮರ್ಡರ್, ಕೋರ್ಟು.. ಎಲ್ಲವೂ ಬರುತ್ತೆ. ಕಥೆಯಲ್ಲಿ ಕೇವಲ ಕಾಮಿಡಿ ಅಷ್ಟೇ ಅಲ್ಲ, ಲವ್ ಸ್ಟೋರಿ ಅಷ್ಟೇ ಅಲ್ಲ.. ಕ್ರೈಂ ಥ್ರಿಲ್ಲರ್ ಸಸ್ಪೆನ್ಸ್ ಕೂಡಾ ಇದೆ.

    ಗಣೇಶ್ ಎದುರು ನಾಯಕಿಯಾಗಿರೋದು ನಿಶ್ವಿಕಾ ನಾಯ್ಡು. ಸಾಧು ಕಚಗುಳಿ ಇಡೋಕೆ ರೆಡಿ ಇದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಮೂಲಕ ನಿಶಾ ವೆಂಕಟ್ ಕೋಣಂಕಿ ಮತ್ತು ಸುಪ್ರೀತ್ ಈ ಚಿತ್ರಕ್ಕೆ ನಿರ್ಮಾಪಕರಾಗಿದ್ದಾರೆ. ನವೆಂಬರ್ 12ಕ್ಕೆ ರಿಲೀಸ್ ಮಾಡೋಕೆ ಸಖತ್ ಆಗಿ ಪ್ಲಾನ್ ಮಾಡಿಕೊಂಡಿದೆ ಸಖತ್ ಟೀಂ.

  • ಸಖತ್ ಬಾಲುಗೆ ಅಕ್ಟೋಬರ್ 24ರ ಮುಹೂರ್ತ

    ಸಖತ್ ಬಾಲುಗೆ ಅಕ್ಟೋಬರ್ 24ರ ಮುಹೂರ್ತ

    ಚಮಕ್ ನಂತರ ಸಿಂಪಲ್ ಸುನಿ ಮತ್ತು ಗಣೇಶ್ ಮತ್ತೊಮ್ಮೆ ಜೊತೆಯಾಗಿರುವ ಸಿನಿಮಾ ಸಖತ್. ಗಣೇಶ್ ಪಾತ್ರದ ಹೆಸರು ಬಾಲು. ಗಣೇಶ್‍ಗೆ ಸಖತ್ತಾಗಿ ಜೋಡಿಯಾಗಿರೋದು ನಿಶ್ವಿಕಾ ನಾಯ್ಡು. ಅವರ ಪಾತ್ರದ ಹೆಸರು ನಕ್ಷತ್ರ. ನಿಶ್ವಿಕಾ ಟೀಚರ್ ಆದರೆ, ಗಣೇಶ್ ರಿಯಾಲಿಟಿ ಶೋ ಸಿಂಗರ್.

    ಈಗ ಚಿತ್ರದ ಟೀಸರ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ ಸುನಿ. ನಿಶಾ ವೆಂಕಟ್ ಸೋಣಂಕಿ ಮತ್ತು ಸುಪ್ರೀತ್ ನಿರ್ಮಾಣದ ಚಿತ್ರದ ಟೀಸರ್ ಅಕ್ಟೋಬರ್ 24ರಂದು ರಿಲೀಸ್ ಆಗಲಿದೆ. ಬೆಳಗ್ಗೆ 11 ಗಂಟೆ 24 ನಿಮಿಷಕ್ಕೆ.

    ಅಂದಹಾಗೆ ಸಿಂಪಲ್ ಸುನಿ ಕ್ರಿಕೆಟ್ ಪ್ರೇಮಿ. ಅದೇ ಅಕ್ಟೋಬರ್ 24ರಂದು ಇಂಡಿಯಾ ಪಾಕಿಸ್ತಾನ ವಿಶ್ವಕಪ್ ಪಂದ್ಯವೂ ಇದೆ. ಅದನ್ನೇನಾದರೂ ಟೀಸರಿನಲ್ಲಿ ತರುತ್ತಾರಾ..? ಸಿಂಪಲ್ ಸುನಿ ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ.

  • ಸಖತ್ ಮ್ಯೂಸಿಕ್ ಮುಗಿಸೇ ಬಿಟ್ರು ಸಿಂಪಲ್ ಸುನಿ

    sakkath music completed during lock down

    ಸಖತ್, ಇದು ಸಿಂಪಲ್ ಸುನಿ ಮತ್ತು ಗಣೇಶ್ ಕಾಂಬಿನೇಷನ್‍ನಲ್ಲಿ ಬರುತ್ತಿರುವ ಹೊಸ ಸಿನಿಮಾ. ಮುಹೂರ್ತವನ್ನೂ ಮುಗಿಸಿಕೊಂಡಿದ್ದ ಸಿನಿಮಾ ಚಿತ್ರೀಕರಣಕ್ಕೆ ಬ್ರೇಕ್ ಹಾಕಿದ್ದು ಚೈನೀಸ್ ವೈರಸ್. ಆದರೆ ಸುನಿ ಸುಮ್ಮನಾಗಲಿಲ್ಲ. ಲಾಕ್ ಡೌನ್ ನಡುವೆ ಇದ್ದ ವಿಡಿಯೋ ಕಾಲ್ ವ್ಯವಸ್ಥೆಯನ್ನೇ ಬಳಸಿಕೊಂಡು ಸಂಗೀತ ನಿರ್ದೇಶಕ ಜ್ಯೂಡಾ ಸ್ಯಾಂಡಿ ಬೆನ್ನು ಹತ್ತಿದರು.

    ಕೇವಲ ಒಂದು ತಿಂಗಳಲ್ಲೇ 4 ಹಾಡುಗಳ ಟ್ಯೂನ್ ಮುಗಿಸಿದ್ದೇವೆ. ಲಾಕ್ ಡೌನ್ ಇಲ್ಲದೇ ಇದ್ದರೆ, ಇನ್ನೂ ಹೆಚ್ಚು ಸಮಯ ಕೇಳುತ್ತಿತ್ತು. ಒಳ್ಳೆಯ ಟ್ಯೂನ್‍ಗಾಗಿ ಜ್ಯಾಡಾ ಸ್ಯಾಂಡಿಗೆ ಇನ್ನಿಲ್ಲದಷ್ಟು ಕಾಟ ಕೊಟ್ಟಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಸುನಿ.

    ಭರಾಟೆ ಸುಪ್ರೀತ್ ನಿರ್ಮಾಣದ ಸಖತ್, ಲಾಕ್ ಡೌನ್ ಮುಗಿಯುತ್ತಿದ್ದಂತೆಯೇ ಶುರುವಾಗಲಿದೆ. ಚಮಕ್ ನಂತರ ಗಣೇಶ್ ಮತ್ತು ಸುನಿ ಮತ್ತೆ ಜೊತೆಯಾಗಿರುವ ಚಿತ್ರವಿದು. ಸುರಭಿ ಸಖತ್ ಹೀರೋಯಿನ್.

     

  • ಸಖತ್ ಸುನಿ ಸತ್ಯವನ್ನಲ್ಲದೆ ಬೇರೇನೂ ಹೇಳೋದಿಲ್ಲ..!

    ಸಖತ್ ಸುನಿ ಸತ್ಯವನ್ನಲ್ಲದೆ ಬೇರೇನೂ ಹೇಳೋದಿಲ್ಲ..!

    ಸಿಂಪಲ್ ಸುನಿ ಗೊತ್ತು. ಇದ್ಯಾರು ಸಖತ್ ಸುನಿ ಎನ್ನಬೇಡಿ. ಈಗ ರಿಲೀಸ್ ಆಗ್ತಿರೋ ಸಖತ್ ಸಿನಿಮಾದ ಸೃಷ್ಟಿಕರ್ತ ಇವರೇ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸಿನಿಮಾ ಸಖತ್. ನಿಶ್ವಿಕಾ ನಾಯ್ಡು ಮತ್ತು ಸುರಭಿ ನಾಯಕಿಯಾಗಿರೋ ಚಿತ್ರದಲ್ಲಿ ಗಣೇಶ್ ಕಟಕಟೆಯಲ್ಲಿರೋದೇ ಹೈಲೈಟ್. ಕಣ್ಣು ಕಾಣುತ್ತೊ.. ಕಾಣಲ್ವೋ.. ಅದನ್ನೆಲ್ಲ ಸಖತ್ ಆಗಿ ಚಿತ್ರಮಂದಿರದಲ್ಲೇ ತೋರಿಸ್ತಿದ್ದಾರೆ ಸಖತ್ ಸುನಿ.

    ಆ ಚಿತ್ರದ ಪ್ರಚಾರಕ್ಕಾಗಿಯೇ ಹೀಗೆ ಕಟಕಟೆಯೊಳಗೆ ನಿಂತಿರೋದು. ಸಿನಿಮಾ ರಿಲೀಸ್ ಆಗೋ ಪ್ರತಿ ಮಾಲ್‍ಗಳಲ್ಲೂ ಇಂಥಾದ್ದೊಂದು ಕಟಕಟೆ ನಿರ್ಮಿಸುತ್ತಿದ್ದಾರೆ ನಿರ್ಮಾಪಕರಾದ ಕೆವಿಎನ್ ಪ್ರೊಡಕ್ಷನ್ಸ್‍ನ ನಿಶಾ ವೆಂಕಟ್ ಕೋಣಂಕಿ ಮತ್ತು ಸುಪ್ರೀತ್.

  • ಸಿಂಪಲ್ ಸುನಿ ಡಬಲ್ ಪಟಾಕಿ

    ಸಿಂಪಲ್ ಸುನಿ ಡಬಲ್ ಪಟಾಕಿ

    ನವೆಂಬರ್ 26ಕ್ಕೆ ಗಣೇಶ್, ನಿಶ್ವಿಕಾ ನಾಯ್ಡು ನಟಿಸಿರೋ ಸಖತ್ ರಿಲೀಸ್.

    ಡಿಸೆಂಬರ್ 10ಕ್ಕೆ ಶರಣ್, ಆಶಿಕಾ ರಂಗನಾಥ್, ಶ್ರೀನಗರ ಕಿಟ್ಟಿ ಪ್ರಧಾನ ಪಾತ್ರದಲ್ಲಿರೋ ಅವತಾರ್ ಪುರುಷ ರಿಲೀಸ್.

    ಎರಡೂ ಚಿತ್ರಗಳ ಡೈರೆಕ್ಟರ್ ಒಬ್ಬರೇ. ಸಿಂಪಲ್ ಸುನಿ. ಹಾಗಾಗಿಯೇ ಇದು ಡಬಲ್ ಪಟಾಕಿ.

    ಸಖತ್ ಚಿತ್ರಕ್ಕೆ ನಿಶಾ ವೆಂಕಟ್ ಸೋಳಂಕಿ, ಸುಪ್ರೀತ್ ನಿರ್ಮಾಪಕರಾದರೆ, ಅವತಾರ್ ಪುರುಷ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕರು.

    ಸುನಿ ಕೈಚಳಕ ಇದ್ದ ಮೇಲೆ ನಗುವಿಗೆ ಬರವಿರಲ್ಲ. ಜೊತೆಗೆ ಸಖತ್ ಚಿತ್ರದಲ್ಲಿ ಗಣೇಶ್ ಹೀರೋ ಆದರೆ, ಅವತಾರ್ ಪುರುಷನಾಗಿರೋದು ಶರಣ್. ಅಲ್ಲಿಗೆ ನಗುವೂ ಡಬಲ್ ಪಟಾಕಿಯಂತೆ ಸಿಡಿಯಲಿದೆ.