ಕಿಚ್ಚ ಸುದೀಪ್ ಅವರ ಒಂದು ಫಸ್ಟ್ ಲುಕ್ ನೋಡಿದವರಿಗೆ, ದಿ ವಿಲನ್ ಸಿನಿಮಾದಲ್ಲಿ ಸುದೀಪ್ ಅವರೇ ವಿಲನ್ ಇರಬೇಕು ಅನ್ನಿಸೋದು ಸಹಜ. ಆದರೆ, ಒಂದ್ಸಲ ಈ ಫೋಟೋ ನೋಡಿ, ಇದು ಶಿವರಾಜ್‍ಕುಮಾರ್ ಅವರದ್ದು.
ಸುದೀಪ್ ಬ್ಲಾಕ್ ಡ್ರೆಸ್ ಮತ್ತು ರಗಡ್ ಲುಕ್‍ನಲ್ಲಿದ್ದರೆ, ಶಿವಣ್ಣಂದು ಇನ್ನೂ ರಗಡ್ ಲುಕ್ಕು. ಉದ್ದನೆಯ ಕೂದಲು, ತಲೆಗೊಂದು ಸ್ಕಾರ್ಫ್, ಬಿಳಿಬಿಳಿಯಾದ ಕುರುಚಲು ಗಡ್ಡ, ಕಣ್ಣಿಗೆ ದಪ್ಪನೆಯ ಕನ್ನಡಕ, ಜೀನ್ಸ್ ಜಾಕೆಟ್ಟು..
ಈ ಲುಕ್ ನೋಡಿದ್ರೆ, ಶಿವರಾಜ್ ಕುಮಾರ್ ಅವರೇ ವಿಲನ್ ಇರಬೇಕು ಅನ್ನಿಸೋದು ಸಹಜ. ನಿರ್ದೇಶಕ ಪ್ರೇಮ್ ಬಾಯ್ಬಿಡಲ್ಲ, ಬಾಯಿಬಿಟ್ಟರೂ ಇನ್ನಷ್ಟು ಹುಳ ಬಿಡ್ತಾರೆ. ಕಿಚ್ಚ ಸುದೀಪ್ ಹೇಳಲ್ಲ, ಶಿವರಾಜ್‍ಕುಮಾರ್ ಕೂಡಾ ಡೈರೆಕ್ಟರ್ ಕಡೆ ಬೆರಳು ತೋರಿಸ್ತಾರೆ.
ಒಟ್ಟಿನಲ್ಲಿ ದಿ ವಿಲನ್ ಸಿನಿಮಾ ಹೇಗಿದೆ ಅನ್ನೋದನ್ನ ತಿಳಿಯೋಕೆ ರಿಲೀಸ್‍ವರೆಗೂ ಕಾಯೋದು ಅನಿವಾರ್ಯ.
Related Articles :-
ಫಸ್ಟ್ ಲುಕ್ ತೋರಿಸಿ ಮತ್ತೆ ಹುಳ ಬಿಟ್ಟ ಪ್ರೇಮ್