ಲಹರಿ ಸಂಸ್ಥೆ ಸುದೀರ್ಘ ಗ್ಯಾಪ್ ನಂತರ ಚಿತ್ರ ನಿರ್ಮಾಣಕ್ಕೆ ಧುಮುಕಿದೆ. ಲಹರಿ ಸಂಸ್ಥೆಯ ಹೊಸ ಚಿತ್ರಕ್ಕೆ ನಿಖಿಲ್ ಕುಮಾರಸ್ವಾಮಿ ನಾಯಕರಾಗಿದ್ದು, ಈಗ ಚಿತ್ರಕ್ಕೆ ನಾಯಕಿಯ ಆಯ್ಕೆಯೂ ಮುಗಿದಿದೆ. ಚಿತ್ರಕ್ಕೆ ನಾಯಕಿಯಾಗಿ ಕಾಶ್ಮೀರ ಪರದೇಶಿ ಆಯ್ಕೆಯಾಗಿದ್ದಾರೆ.
ಮುಂಬೈ ಮೂಲದ ಕಾಶ್ಮೀರ ಪರದೇಶಿ, ಮಾಡೆಲಿಂಗ್, ರಂಗಭೂಮಿಯಲ್ಲಿ ಸಕ್ರಿಯವಾಗಿರುವ ಹುಡುಗಿ. ಈಗಾಗಲೇ ಹಿಂದಿಯಲ್ಲಿ ಅಕ್ಷಯ್ ಕುಮಾರ್ ಜೊತೆ ಮಿಷನ್ ಮಂಗಲ್ ಚಿತ್ರದಲ್ಲಿ, ತೆಲುಗಿನಲ್ಲಿ ನಾಗಶೌರ್ಯ ಜೊತೆ ನರ್ತನ್ ಶಾಲಾ ಚಿತ್ರದಲ್ಲಿ ನಟಿಸಿದ್ದಾರೆ. ವಿಜಯ್ ಕುಮಾರ್ ಕೊಂಡ ನಿರ್ದೇಶನದ ಚಿತ್ರಕ್ಕೆ ಈಗಾಗಲೇ ಸಂಪದ ಎಂಬ ಕಲಾವಿದೆ ಆಯ್ಕೆಯಾಗಿದ್ದಾರೆ. ಕಾಶ್ಮೀರ ಮೊದಲನೇ ನಾಯಕಿಯಾದರೆ, ಸಂಪದಾ 2ನೇ ನಾಯಕಿ.