` hari santhosh - chitraloka.com | Kannada Movie News, Reviews | Image

hari santhosh

  • ಧನ್ವೀರ್ ಬಂಪರ್‍ಗೆ ದರ್ಶನ್ ಕ್ಲಾಪ್

    Darshan claps for Dhanveer movie bumper image

    ಬಜಾರ್ ಚಿತ್ರದ ಮೂಲಕ ಲಾಂಚ್ ಆದ ಹೀರೋ ಧನ್ವೀರ್. ಸಿಂಪಲ್ ಸುನಿ ಗರಡಿಯಲ್ಲಿ ಪಳಗಿದ ಹುಡುಗ ಈಗ 2ನೇ ಸಿನಿಮಾಗೆ ಹೀರೋ ಆಗಿದ್ದಾರೆ. ಚಿತ್ರದ ಟೈಟಲ್ ಬಂಪರ್. ಹರಿ ಸಂತೋಷ್ ನಿರ್ದೇಶನದ ಬಂಪರ್ ಚಿತ್ರ ಈಗ ಸೆಟ್ಟೇರಿದೆ.

    ಧನ್ವೀರ್, ದರ್ಶನ್ ಅವರ ಕಟ್ಟಾ ಅಭಿಮಾನಿ. ಅಭಿಮಾನಿಯೇ ಹೀರೋ ಆಗಿರುವ ಚಿತ್ರಕ್ಕೆ ದರ್ಶನ್ ಅವರೇ ಕ್ಲಾಪ್ ಮಾಡಿದ್ದು ವಿಶೇಷ. ಭರಾಟೆ ಚಿತ್ರದ ನಿರ್ಮಾಪಕ ಸುಪ್ರೀತ್, ಬಂಪರ್ ಚಿತ್ರಕ್ಕೆ ನಿರ್ಮಾಪಕರಾಗಿದ್ದಾರೆ.

  • ಬಾಲಿವುಡ್`ಗೆ ಹರಿಸಂತೋಷ್ : ಥ್ಯಾಂಕ್ಸ್ ಹೇಳಿದ್ದ ಆ ಇಬ್ಬರಿಗೆ..

    ಬಾಲಿವುಡ್`ಗೆ ಹರಿಸಂತೋಷ್ : ಥ್ಯಾಂಕ್ಸ್ ಹೇಳಿದ್ದ ಆ ಇಬ್ಬರಿಗೆ..

    ಅಲೆಮಾರಿ, ಕಾಲೇಜ್ ಕುಮಾರ, ಬೈ ಟು ಲವ್.. ಹೀಗೆ ಒಂದರ ಹಿಂದೊಂದು ಹಿಟ್ ಕೊಟ್ಟ ನಿರ್ದೇಶಕ ಹರಿಸಂತೋಷ್ ಈಗ ಬಾಲಿವುಡ್ಡಿಗೆ ಹೊರಟು ನಿಂತಿದ್ದಾರೆ. ಹರಿ ಸಂತೋಷ್ ಅವರು ನಿರ್ದೇಶಿಸುತ್ತಿರೋ ಮೊದಲ ಸಿನಿಮಾ ಪಪ್ಪಿ ಲವ್. ತನುಜ್ ವಿರ್ವಾನಿ, ತ್ರಿಧಾ ಚೌಧರಿ, ಸಪ್ನಾ ಪಬ್ಬಿ ನಟಿಸುತ್ತಿರೋ ಸಿನಿಮಾ ಪಪ್ಪಿ ಲವ್.

    ಎಲ್ಲದಕ್ಕೂ ಕಾರಣ ರಾಜಮೌಳಿ ಮತ್ತು ಪ್ರಶಾಂತ್ ನೀಲ್. ಅವರ ಆರ್.ಆರ್.ಆರ್. ಮತ್ತು ಕೆಜಿಎಫ್ ಗೆದ್ದ ನಂತರ ನಮಗೆಲ್ಲ ಬಾಲಿವುಡ್ ಬಾಗಿಲು ತೆರೆಯುತ್ತಿದೆ. ಮೊದಲೆಲ್ಲ ಅಲ್ಲಿನವರು ದಕ್ಷಿಣದ ಕಥೆಗಳನ್ನು ರೀಮೇಕ್ ಮಾಡುತ್ತಿದ್ದರೇ ಹೊರತು, ಹೊಸ ಕಥೆಗೆ ಓಪನ್ ಆಗುತ್ತಿರಲಿಲ್ಲ. ಮೊದಲು ನನಗೆ ನನ್ನದೇ ಕಾಲೇಜ್ ಕುಮಾರ ಚಿತ್ರವನ್ನ ಹಿಂದಿಗೆ ರೀಮೇಕ್ ಮಾಡಿ ಅನ್ನೋ ಆಫರ್ ಬಂತು. ಆಗ ನನ್ನ ಬಳಿ ಇದ್ದ ಹೊಸ ಕಥೆಗಳಿಗೆ ಅಲ್ಲಿನವರು ಇಂಟ್ರೆಸ್ಟ್ ಕೊಟ್ಟಿರಲಿಲ್ಲ ಎಂದಿದ್ದಾರೆ ಹರಿ ಸಂತೋಷ್.

    ಈ ಚಿತ್ರಕ್ಕೆ ಕನ್ನಡದವರಾದ ಸುರೇಶ್ ಮತ್ತು ಅವಿನಾಶ್ ಡೇನಿಯಲ್ ಸಹ ನಿರ್ಮಾಪಕರು. ಹರಿಗೆ ಇಲ್ಲಿನ ಇನ್ನೂ ಒಂದಷ್ಟು ಪ್ರತಿಭೆಗಳನ್ನು ಬಳಸಿಕೊಳ್ಳೋ ಕನಸಿದೆ.