` Govinda Govinda - chitraloka.com | Kannada Movie News, Reviews | Image

Govinda Govinda

  • Govinda Govinda Movie Review, Chitraloka Rating 3.5/5

    Govinda Govinda Movie Review, Chitraloka Rating 3.5/5

    Film: Govinda Govinda

    Director: Thilak

    Cast: Samanth Shailendra, Kavitha Gowda, Ajay Ghosh, Achyuth Kumar, Vijay Chendur, Pawan

    Duration: 139 minutes

    Stars: 3.5

    Entertainment is the only motto of Govinda Govinda. It sticks to this basic premise and in that aspect gives good value for your money. Three vagabond students, a girl desperate to make a mark and a film director who erases the line between reel and reality. Put them together and you get Govinda Govinda.

    Fun, frolic, humour and thrills are the four pillars of this film. It takes its plot from the Telugu film Brochevarevarura and has been remade in Kannada, Telugu and Malayalam. The Kannada version we saw has some subtle changes and adds some more value.

    The film starts with two parallel plots. A film director is narrating a story to a film star (Bhavana Menon). Meanwhile the three college students are helping their college mate (Kavitha Gowda) escape from her house. She wants to be a dancer but is opposed by her father. In a series of funny incidents, the two plots combine to start another round of funny twists. There is a third angle to the story too. A bunch of villains who are on the lookout for a big money making idea end up in the middle of this already comedy of errors.

    The director has kept faith in the original plot and makes nativity changes. The narrative in the first half focuses only on funny incidents. In the second half, the comedy is combined with unusual twists and meaty story. Despite being his first film, he manages to show deft handling of the plot.

    Sumanth, Kavitha and Achyuth shine in their roles. Even if all characters are created to provide laughs, Vijay Chendur and Pawan nail the timing to perfection. Most of the actors are apt for their roles and manage to deliver the promised entertainment.

    Kidnap as the central plot trigger opens up a variety of unusual and amusing incidents. What is real and what is unreal merge and become one thrill ride. The film makes for a perfect family outing as the humour and comedy is not aimed at any one age group.

    Govinda Govinda is magic without worrying too much about logic. You will enjoy it without regret.

           - Review By S Shyam Prasad

  • Sumanth Shailendra Returns With Govinda Govinda

    kavitha gowda, sumanth shailendra image

    After Lee and a Telugu film, Sumanth Shailendra, son of renowned film producer Shailendra Babu, is all set to make a comeback after a gap of almost three years. His latest, which is titled 'Govinda Govinda', a complete comedy thriller is being directed by Tilak, who makes his silver screen debut after directing series of teleserials. Shailendra Babu, Ravi Gharani and Kishore are the producers.

    govinda_govinda_team_20.jpg

    On his comeback, Sumanth shares that he made sure he spent some quality time with his family after his marriage. In between, I kept getting offers but since most of them were of no interest, he waited for the right kind of project and finally 'Govinda Govinda' happened to him, he says.

    He plays the role of a student who repeatedly fails in PUC.  Sumanth is paired with Kavita Gowda along with Jackie Bhavana, who plays an important role in Govinda Govinda. While the shoot is almost over, the film team is eyeing for April release.

  • ಅಲಮೇಲು ಹೇಳಿದ ಗೋವಿಂದನ ಕಥೆ

    govinda govinda image

    ನನ್ನದು ಈ ಚಿತ್ರದಲ್ಲಿ ಕಾಲೇಜು ಹುಡುಗಿಯ ಪಾತ್ರ. ಹೆಸರು ಅಲಮೇಲು. ಅಪ್ಪನ ಆಸೆಯಂತೆ ಬೆಂಗಳೂರಿಗೆ ಓದಲು ಬಂದವಳು ಪ್ರೀತಿಯಲ್ಲಿ ಬೀಳ್ತೇನೆ. ಹುಡುಗರ ಜೊತೆ ಸುತ್ತೋದನ್ನು ಎಂಜಾಯ್ ಮಾಡೋ ಹುಡುಗಿಯ ಪಾತ್ರ. ಆಗ ಸಡನ್ನಾಗಿ ನನ್ನ ತಾಯಿ ವಿಜಯಪುರದಲ್ಲಿಸಾವನ್ನಪ್ಪುತ್ತಾರೆ. ಊರಿಗೆ ವಾಪಸ್ ಹೋಗುತ್ತೇನೆ. ಅಲ್ಲಿ ನನ್ನ ತಂದೆ ಅಚ್ಯುತ್ ಕುಮಾರ್, ಪ್ರಿನ್ಸಿಪಾಲ್.. ಇಬ್ಬರೂ ಜೊತೆಯಾಗುತ್ತಾರೆ. ಅದು ಹೇಗೆ ಆಗುತ್ತೆ ಅನ್ನೋದೇ ಸಖತ್ ಫನ್ನಿಯಾಗಿದೆ. ಸಿನಿಮಾ ಶುರುವಾದಾಗಿನಿಂದ ಕೊನೆಯವರೆಗೆ ಕಾಮಿಡಿ.. ಕಾಮಿಡಿ.. ಕಾಮಿಡಿ.

    ಇದು ಗೋವಿಂದ ಗೋವಿಂದ ಚಿತ್ರದ ನಾಯಕಿ ಅಲಮೇಲು ಅಲಿಯಾಸ್ ಕವಿತಾ ಗೌಡ ಹೇಳಿದ ಕಥೆ. ತಿಲಕ್ ನಿರ್ದೇಶನದ ಚಿತ್ರ ಇದೇ ವಾರ ರಿಲೀಸ್ ಆಗುತ್ತಿದೆ.

    ನಿರ್ಮಾಪಕ ಕಿಶೋರ್ ಮಧುಗಿರಿ ವಿತರಕರಾಗಿದ್ದವರು. ಚಿತ್ರರಂಗದಲ್ಲಿ 30 ವರ್ಷದ ಅನುಭವ ಬೆನ್ನಿಗಿಟ್ಟುಕೊಂಡು ಇದೇ ಮೊದಲ ಬಾರಿಗೆ ನಿರ್ಮಾಪಕರಾಗಿದ್ದಾರೆ. ಶೈಲೇಂದ್ರ ಬಾಬು, ರವಿ ಆರ್.ಗರಣಿ ಕೂಡಾ ಕೈಜೋಡಿಸಿದ್ದಾರೆ.

     

    #chitraloka #govindagovinda #tilak #kavithagowda #sumanthshailendra

     

  • ಎಲ್ಲ ಟೆನ್ಷನ್ ಮರೆಸಿ ನಕ್ಕು ನಲಿಸುವ ಸಿನಿಮಾ ಗೋವಿಂದ ಗೋವಿಂದ..

    ಎಲ್ಲ ಟೆನ್ಷನ್ ಮರೆಸಿ ನಕ್ಕು ನಲಿಸುವ ಸಿನಿಮಾ ಗೋವಿಂದ ಗೋವಿಂದ..

    ಇದು ಪಕ್ಕಾ ಕಾಮಿಡಿ ಸಿನಿಮಾ. ಚಿತ್ರದಲ್ಲಿ ಎರಡು ಟ್ರ್ಯಾಕ್‍ಗಳಿವೆ. ಒಬ್ಬ ಹೊಸ ನಿರ್ದೇಶಕ ಖ್ಯಾತ ನಟಿಗೆ ಕಥೆ ಹೇಳಿ ಆಕೆಯ ಡೇಟ್ಸ್ ಕೇಳೋದು ಒಂದು. ಮತ್ತೊಂದು.. ತಂದೆಯ ವಿರೋಧದ ನಡುವೆಯೂ ಭರತನಾಟ್ಯ ಕಲಾವಿದೆಯಾಗಲು ಬಯಸುವ ನಾಯಕಿ. ಆಕೆಯ ಕನಸು ಈಡೇರಿಸಲು ಹೊರಡುವ ಗೆಳೆಯರ ಬಳಗ. ಈ ಎರಡೂ ಸೃಷ್ಟಿಸುವ ಅವಾಂತರಗಳು, ತರಲೆಗಳು ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ. ಮೆಸೇಜ್ ಸೀರಿಯಸ್ಸೇ. ಆದರೆ, ಹೇಳಿರೋದು ಮಾತ್ರ ಪಕ್ಕಾ ಕಾಮಿಡಿ ಟ್ರ್ಯಾಕ್‍ನಲ್ಲಿ. ಎಲ್ಲ ಸಂಕಟಗಳನ್ನೂ ಮರೆತು ಹೊಟ್ಟೆ ಹುಣ್ಣಾಗುವಂತೆ ನಕ್ಕು ಹಗುರಾಗಬಹುದಾದ ಸಿನಿಮಾ ಗೋವಿಂದ ಗೋವಿಂದ.

    ಇದು ಚಿತ್ರದ ನಾಯಕ ಸುಮಂತ್ ಶೈಲೇಂದ್ರಬಾಬು ಅವರ ಆತ್ಮವಿಶ್ವಾಸದ ಮಾತು. ಕ್ರೆಡಿಟ್ ಎಲ್ಲವನ್ನೂ ಡೈರೆಕ್ಟರ್ ತಿಲಕ್ ಅವರಿಗೆ ನೀಡೋ ಸುಮಂತ್, ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

    ಭರತನಾಟ್ಯದ ಆಸೆ ಹೊತ್ತಿರೋ ನಾಯಕಿಯಾಗಿ ಕವಿತಾ ಗೌಡ, ಆಕೆಯ ತಂದೆಯಾಗಿ ಪ್ರಿನ್ಸಿಪಾಲ್ ಪಾತ್ರದಲ್ಲಿ ಅಚ್ಯುತ್ ಕುಮಾರ್, ಪವನ್, ವಿಜಯ್ ಚೆಂಡೂರ್, ರೂಪೇಶ್ ಶೆಟ್ಟಿ, ಸುನೇತ್ರಾ ಪಂಡಿತ್.. ಹೀಗೆ ಕಲಾವಿದರ ದಂಡೇ ಚಿತ್ರದಲ್ಲಿದೆ. ನಕ್ಕು ನಲಿಯೋಕೆ ರೆಡಿಯಾಗಿ ಅಷ್ಟೆ. ನ.26ಕ್ಕೆ ರಿಲೀಸ್.

  • ಕಿಡ್ನಾಪ್ ಕೂಡಾ ಬೊಂಬಾಟ್. ಕಾಮಿಡಿ ಫುಲ್ ಮೀಲ್ಸ್ ಗೋವಿಂದ ಗೋವಿಂದ

    ಕಿಡ್ನಾಪ್ ಕೂಡಾ ಬೊಂಬಾಟ್. ಕಾಮಿಡಿ ಫುಲ್ ಮೀಲ್ಸ್ ಗೋವಿಂದ ಗೋವಿಂದ

    ಒಂದು ಕಂಪ್ಲೀಟ್ ಕಾಮಿಡಿ ಚಿತ್ರಕ್ಕೆ ಕಾಯುತ್ತಿದ್ದವರಿಗೆ ಭರಪೂರ ಕಾಮಿಡಿಯನ್ನೇ ಬಡಿಸಿದ್ದಾರೆ ನಿರ್ದೇಶಕ ತಿಲಕ್. ಇದು ಪ್ರೇಕ್ಷಕರ ಮಾತು. ಅದರಲ್ಲೂ ಚಿತ್ರದಲ್ಲಿರೋ ಕಿಡ್ನಾಪ್ ಕಥೆ.

    ಕಿಡ್ನಾಪರ್‍ಗಳಾಗಿ ಸುಮಂತ್ ಶೈಲೇಂದ್ರ, ವಿಜಯ್ ಚೆಂಡೂರು, ಪವನ್ ಮಿಂಚಿದ್ದರೆ.. ಕಿಡ್ನಾಪ್ ಮಾಡಿಸಿಕೊಳ್ಳೋ ಸುಂದರಿ ಕವಿತಾ ಗೌಡ. ಸ್ಟಾರ್ ನಟಿ ಭಾವನಾ. ಹುಚ್ಚ ಗೋವಿಂದೇಗೌಡ.. ಹೀಗೆ ಚಿತ್ರದುದ್ದಕ್ಕೂ ಕಚಗುಳಿಯಿಡುತ್ತಲೇ ಸಾಗುವ ಪಾತ್ರಗಳಿಗೆ ನಕ್ಕು ನಲಿಯುವಂತೆ ಜೀವ ತುಂಬಿಸಿದ್ದಾರೆ ತಿಲಕ್.

    ಟೆನ್ಷನ್ ಯಾವುದೇ ಇದ್ದರೂ ಸಿನಿಮಾ ಆರಂಭವಾಗಿ ಶುಭಂ ಬರುವವುದರೊಳಗೆ ಪ್ರೇಕ್ಷಕರು ಎಲ್ಲವನ್ನೂ ಮರೆತು ನಕ್ಕುನಲಿಯುತ್ತಾರೆ. ಇದು ಚಿತ್ರ ನೋಡಿದವರ ಮಾತು.

  • ಗೋವಿಂದ ಗೋವಿಂದನ ಪದ್ಮಾವತಿ ಕಥೆ ಕೇಳಿ..

    ಗೋವಿಂದ ಗೋವಿಂದನ ಪದ್ಮಾವತಿ ಕಥೆ ಕೇಳಿ..

    ಗೋವಿಂದ ಗೋವಿಂದ ಅಪ್ಪಟ ಕಾಮಿಡಿ ಮೂವಿ. ಹೀರೋ ಸುಮಂತ್ ಶೈಲೇಂದ್ರಬಾಬು. ಹೀರೋಯಿನ್ ಕವಿತಾ ಗೌಡ. ಇದರ ಮಧ್ಯೆ ಜಾಕಿ ಭಾವನಾ ಕಥೆ ಏನು? ಡೌಟೇ ಇಲ್ಲ.. ಭಾವನಾ ಕೂಡಾ ಗೋವಿಂದ ಗೋವಿಂದ ಚಿತ್ರದಲ್ಲಿ ಹೀರೋಯಿನ್. ಅರೆ.. ಅದು ಹೇಗೆ ಅಂತೀರಾ..ಚಿತ್ರದಲ್ಲಿ ಭಾವನಾ ಸಿನಿಮಾ ಹೀರೋಯಿನ್ ಆಗಿಯೇ ನಟಿಸಿದ್ದಾರೆ. ಪದ್ಮಾವತಿಯಾಗಿ.

    ಚಿತ್ರದಲ್ಲಿ ಎರಡು ಟ್ರ್ಯಾಕ್ ಬರುತ್ತವೆ. ಎರಡೂ ಟ್ರ್ಯಾಕ್ ಏಕಕಾಲಕ್ಕೆ ರನ್ ಆಗುತ್ತಿರುತ್ತವೆ. ನಾನು ಚಿತ್ರದಲ್ಲಿ ಸಿನಿಮಾ ಹೀರೋಯಿನ್ ಆಗಿಯೇ ನಟಿಸಿದ್ದೇನೆ. ನನಗೆ ನಿರ್ದೇಶಕನೊಬ್ಬ ಕಥೆ ಹೇಳೋಕೆ ಬರುತ್ತಾನೆ. ಚಿತ್ರದಲ್ಲಿ ನನ್ನ ರೋಲ್ ಬಹಳ ಕಡಿಮೆ. ನಾನು ಸುಮಾರು ಐದಾರು ದಿನವಷ್ಟೇ ಈ ಸಿನಿಮಾಗೆ ಕೆಲಸ ಮಾಡಿದ್ದೇನೆ. ಆದರೆ, ಅಷ್ಟೂ ದಿನ ಹೊಟ್ಟೆಹುಣ್ಣಾಗುವಂತೆ ನಕ್ಕಿದ್ದೇನೆ ಎನ್ನುತ್ತಾರೆ ಭಾವನಾ.

    ತಿಲಕ್ ನಿರ್ದೇಶನಕ್ಕೆ ಭಾವನಾ 100ಕ್ಕೆ 100 ಅಂಕ ಕೊಟ್ಟಿದ್ದಾರೆ. ಅವರು ಹೊಸ ನಿರ್ದೇಶಕ ಎನಿಸುವುದೇ ಇಲ್ಲ. ತುಂಬಾ ಚೆನ್ನಾಗಿ ಕಥೆ ಹೇಳುವ ಅನುಭವ ಅವರಿಗೆ ಇದೆ ಅನ್ನೋದು ಭಾವನಾ ಮಾತು. ಸಿನಿಮಾ ಈಗ ಥಿಯೇಟರಿನಲ್ಲಿದೆ. ನೋಡಿ.. ನಕ್ಕು.. ನಲಿದು.. ಹಗುರಾಗಿ..

  • ನವೆಂಬರ್ 26ಕ್ಕೆ ಗೋವಿಂದ ಗೋವಿಂದ

    ನವೆಂಬರ್ 26ಕ್ಕೆ ಗೋವಿಂದ ಗೋವಿಂದ

    ಸುಮಂತ್, ಜಾಕಿ ಭಾವನಾ, ಕವಿತಾ ಗೌಡ ನಟಿಸಿರೋ ಹೊಸ ಸಿನಿಮಾ ಗೋವಿಂದ ಗೋವಿಂದ. ಫುಲ್ ಕಾಮಿಡಿ ಇರೋ ಚಿತ್ರಕ್ಕೆ ರವಿ ಆರ್.ಗರಣಿ, ಎಂ.ಕೆ.ಕಿಶೋರ್ ಮತ್ತು ಎಸ್.ಶೈಲೇಂದ್ರ ಬಾಬು ಚಿತ್ರ ನಿರ್ಮಾಪಕರು. ತಿಲಕ್ ನಿರ್ದೇಶನದ ಚಿತ್ರಲ್ಲಿರೋದು ಅಪ್ಪಟ ಕಾಮಿಡಿ  ಟ್ರ್ಯಾಕ್. ನವೆಂಬರ್ 26ಕ್ಕೆ ಕನ್ನಡದಲ್ಲಿ ರಿಲೀಸ್ ಆಗುತ್ತಿದೆ.

    ಮಕ್ಕಳ ಮೇಲೆ ಪೋಷಕರು ಹೇರುವ ಟೆನ್ಷನ್, ಒತ್ತಡ ಮತ್ತು ಅದರಿಂದ ಹೊರಬರಲು ಅದೇ ಮಕ್ಕಳು ಮಾಡುವ ಸಾಹಸ. ಅದರಿಂದ ಸೃಷ್ಟಿಯಾಗುವ ಸಮಸ್ಯೆಗಳನ್ನು ಕಾಮಿಡಿ ಥ್ರಿಲ್ಲರ್ ಆಗಿ ಚಿತ್ರದಲ್ಲಿ ತೋರಿಸಲಾಗಿದೆ.

    ದೇವ್ ರಂಗಭೂಮಿ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿರುವ ಚಿತ್ರದಲ್ಲಿ ಭಾವನಾ ಸಿನಿಮಾ ನಟಿಯಾಗಿಯೇ ನಟಿಸಿದ್ದಾರೆ. ಅಚ್ಯುತ್ ಕುಮಾರ್, ರೂಪೇಶ್ ಶೆಟ್ಟಿ,ಮಜಾ ಟಾಕೀಸ್ ಪವನ್, ಶೋಭರಾಜ್, ವಿ.ಮನೋಹರ್, ಕಡ್ಡಿಪುಡಿ ಚಂದ್ರು ಸೇರಿದಂತೆ ದೊಡ್ಡ ಕಲಾವಿದರ ದಂಡೇ ಚಿತ್ರದಲ್ಲಿದೆ.