ಭರತ ಬಾಹುಬಲಿಯಲ್ಲಿ ಹೀರೋ ಮಂಜು ಮಾಂಡವ್ಯ. ಮಂಜು ಮಾಂಡವ್ಯ ಇಲ್ಲಿ ತಮ್ಮ ಬಹುಮುಖ ಪ್ರತಿಭೆ ಪ್ರದರ್ಶನ ಮಾಡಿದ್ದಾರೆ. ಚಿತ್ರಕ್ಕೆ ಅವರದ್ದೇ ನಿರ್ದೇಶನ. ಚಿತ್ರದ ಸಾಹಿತ್ಯದಲ್ಲೂ ಅವರ ಪಾತ್ರವಿದೆ. ಕಣ್ಣಾಮುಚ್ಚೆ.. ಹಾಡಿನ ಗಾಯಕರೂ ಅವರೇ. ಅವರಿಗೆ ಜೊತೆಯಾಗಿರುವುದು ಚಿಕ್ಕಣ್ಣ. ಚಿತ್ರದ ಟೈಟಲ್ ರೋಲ್ ಅವರದ್ದಾದರೂ ಇಡೀ ಚಿತ್ರದ ಕಥೆ ಸುತ್ತುವುದು ಹೀರೋಯಿನ್ ಸುತ್ತ ಅಂತಾರೆ ನಾಯಕಿ ಸಾ.ರಾ.ಹರೀಶ್.
`ನಾನು ವೃತ್ತಿಯಲ್ಲಿ ಮಾಡೆಲ್. ಸಿನಿಮಾ ಮತ್ತು ಮಾಡೆಲಿಂಗ್ ಎರಡೂ ಒಂದೇ ಎಂದುಕೊಂಡಿದ್ದೆ. ಆದರೆ, ಸಿನಿಮಾ ಮಾಡೆಲಿಂಗ್ಗಿಂತ ಹೆಚ್ಚು ತಾಳ್ಮೆ ಬೇಡುವ ಕ್ಷೇತ್ರ' ಎಂದಿದ್ದಾರೆ ಸಾ.ರಾ.ಹರೀಶ್.
ನನ್ನದು ಚಿತ್ರದಲ್ಲಿ ಎನ್ಆರ್ಐ ಪಾತ್ರ. ಇಡೀ ಕಥೆ ಸುತ್ತುವುದು ನನ್ನ ಸುತ್ತ. ಒಳ್ಳೆಯ ಅವಕಾಶವಿದೆ. ಕಥೆ ಇಷ್ಟವಾಯ್ತು. ನಿರ್ದೇಶಕರ ಮೇಲೆ ನಂಬಿಕೆಯಿತ್ತು. ಒಪ್ಪಿಕೊಂಡು ನಟಿಸಿದ್ದೇನೆ ಎಂದಿದ್ದಾರೆ ಸಾ.ರಾ.ಹರೀಶ್.