ನಾಗಮಂಡಲ ಮೂಲಕ ಬೆಳಕಿಗೆ ಬಂದ ಪ್ರತಿಭೆ ವಿಜಯಲಕ್ಷ್ಮಿ. ಕನಸುಗಾರ ರವಿಚಂದ್ರನ್ ಶೋಧಿಸಿದ ಪ್ರತಿಭೆ. ಈ ಪ್ರತಿಭೆಯನ್ನು ಹೊಳೆಯುವಂತೆ ಮಾಡಿದ್ದು ಟಿ.ಎಸ್.ನಾಗಾಭರಣ. ಪ್ರತಿಭಾನ್ವಿತೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಸುಂದರಿಯಷ್ಟೇ ಅಲ್ಲ, ಅಭಿನಯ ಪ್ರತಿಭೆಯೂ ಅಗಾಧವಾಗಿದ್ದ ಚೆಲುವೆ. ಆರಂಭದ ಚಿತ್ರ ನಾಗಮಂಡಲ, ನಂತರ ಜೋಡಿಹಕ್ಕಿ, ಅರುಣೋದಯ, ನಂ.1.. ಹೀಗೆ ವಿಭಿನ್ನ ಪಾತ್ರಗಳಲ್ಲಿ ನಟಿಸಿದ ವಿಜಯಲಕ್ಷ್ಮಿ, ವಿವಾದಗಳಿಂದ ಸುದ್ದಿಯಾಗಿದ್ದೇ ಹೆಚ್ಚು. ಈ ಬಾರಿಯೂ ಅಷ್ಟೆ..
ಕೆಲವೇ ದಿನಗಳ ಹಿಂದೆ ಒಂದು ವಿಡಿಯೋ ರಿಲೀಸ್ ಮಾಡಿದ್ದ ವಿಜಯಲಕ್ಷ್ಮಿ, ತಾನು ತಮಿಳುನವಳು ಎಂದು ಕಿರುಕುಳ ಮಾಡುತ್ತಿದ್ದಾರೆ. ನಟ ರವಿಪ್ರಕಾಶ್ ಅನ್ನುವವರು ನನಗೆ ಹಿಂಸೆ ಕೊಟ್ಟಿದ್ದರು. ಸಹಾಯಕ್ಕಾಗಿ ಬೇಡಿದರೆ ನೀನು ತಮಿಳಿನವಳು ಎಂದು ಯಾರೂ ಸಹಾಯ ಮಾಡಲ್ಲ. ಇಲ್ಲಿ ತಮಿಳಿನವರ ಮೇಲೆ ಆಗುತ್ತಿರುವ ದೌರ್ಜನ್ಯಗಳು ಹೊರಗೆ ಬರೋದೇ ಇಲ್ಲ ಎಂದೆಲ್ಲ ಮಾತನಾಡಿದ್ದರು. ಆರೋಪ ಮಾಡಿರುವ ರವಿಪ್ರಕಾಶ್ ಅವರ ಜೊತೆ ಸಂಧಾನಕ್ಕೆ, ರಾಜಿಗೆ ಮುಂದಾಗಿರುವುದು ಬೇರೆ ವಿಷಯ. ಆದರೆ ಆ ವಿಡಿಯೋಗೆ ನಿರೀಕ್ಷಿಸಿದ್ದಂತೆ ಪ್ರತಿಕ್ರಿಯೆಗಳು ಸಿಗಲಿಲ್ಲ.

ಈಗ ನನಗೆ ತಮಿಳಿನವರಿಂದ ಅನ್ಯಾಯವಾಗುತ್ತಿದೆ. ತಮಿಳಿನಲ್ಲಿ ಸೀಮನ್, ಹರೀಂದ್ರನ್ ಎನ್ನುವವರು ಕಿರುಕುಳ ಕೊಡುತ್ತಿದ್ದಾರೆ. ನಾನು ಸಾಯುತ್ತಿದ್ದೇನೆ ಎಂದು ಹೇಳಿ, 3 ಬಿಪಿ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಇವೆಲ್ಲವೂ ನಡೆದಿರುವುದು 2 ವಾರಗಳ ಗ್ಯಾಪ್‍ನಲ್ಲಿ. ಮೊದಲಿಗೆ ವಿಜಯಲಕ್ಷ್ಮಿ, ಕನ್ನಡಿಗರ ವಿರುದ್ಧ ತಮಿಳರನ್ನೂ, ನಂತರ ಈಗ ತಮಿಳರ ವಿರುದ್ಧ ಕನ್ನಡಿಗರನ್ನೂ ಎತ್ತಿಕಟ್ಟುವ ಪ್ರಯತ್ನ ಮಾಡಿದ್ದಾರೆ. ಅವರಿಗೆ ನಿಜಕ್ಕೂ ಅನ್ಯಾಯವಾಗಿದ್ದರೆ ಕಾನೂನು ಸಮರ ನಡೆಸುವ ಮುಕ್ತ ಅವಕಾಶಗಳಿವೆ. ಆದರೆ, ಹೀಗೆ ಭಾಷಾ ಸಾಮರಸ್ಯ ಕೆಣಕುವುದು ಸರಿಯಲ್ಲ ಎನ್ನುವ ಭಾವನೆ ಚಿತ್ರರಂಗದಲ್ಲಿದೆ. ವಿಜಯಲಕ್ಷ್ಮಿ ವೈಯಕ್ತಿಕ ಸಮಸ್ಯೆಗಳನ್ನು ಇಡೀ ಕರ್ನಾಟಕದ, ಕನ್ನಡಿಗರ ಸಮಸ್ಯೆ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಆರೋಪಗಳಿವೆ. ಉತ್ತರಿಸಬೇಕಾದವರು ಸ್ವತಃ ವಿಜಯಲಕ್ಷ್ಮಿ.
Also Read
ನಾಗಮಂಡಲ ವಿಜಯಲಕ್ಷ್ಮಿ ಆತ್ಮಹತ್ಯೆ ಯತ್ನ : ಸ್ಥಿತಿ ಗಂಭೀರ
Raviprakash says he won't compromise in Vijayalakshmi case
ವಿಜಯಲಕ್ಷ್ಮಿಗೆ ಸಹಾಯ ಮಾಡಿ ಸಂಕಷ್ಟಕ್ಕೆ ಸಿಲುಕಿದರಾ ನಟ ರವಿಪ್ರಕಾಶ್..?
Vijayalakshmi Used Me Like A Tissue Paper & Then Made False Accusation: Raviprakash
Vijayalakshmi Profile