` dinga, - chitraloka.com | Kannada Movie News, Reviews | Image

dinga,

  • Dinga Audio Launched

    dinga audio launched

    Sandalwood first Kannada movie Shot on Apple I Phone Dinga audio was launched by V Nagenda Prasad and Arjun Janya.

    Made under the banner Sri Mayakara productions by M R Madhusudhan, it is directed and acted by Abhishek Jain. It also features Aarva and Anusha. The lyrical video of sum sumne sung by Sanjith Hegde and Anuradha Bhat, and composed by Suddho Roy was recently released by the Dinga team.

  • Dinga Dance, A Big Hit on Tik-Tok

    dinga dance, a big hit on tik tok

    The first ever Kannada film, shot entirely using a 'iPhone', is trending big on various social media platforms, especially the most popular video sharing social networking site tik tok. After 'handsup' challenge from Avane Srimannarayana went viral, the unique dance steps from 'Dinga' movie has been in the news.

    The Dinga dance has crossed over a million hits on the social media platforms. Directed and acted by Abhishek Jain, the movie starring Aarva, Anusha is ready to hit the screens in the last week of this month.

    Using the smartphone, the film has been shot in 27 locations. Bengali musician Suddho Roy has composed the songs for the film which revolves around a man and his most loyal friend - a pet dog.

     

  • Dinga review: Chitraloka Rating 3.5/ 5*

    dinga movie review

    After making it to the headlines for being the first ever Kannada movie shot entirely using a smartphone, Dinga hits the screens with a good mix of emotion and entertainment involving the man's best friend - the pet dog.

    The tale revolves around Bunty, played by protagonist who suffers from cancer, and his pet dog named Dinga. While his days are numbered, Bunty sets out on a journey with the help of his friend to find the best home for Dinga. Will he manage to do so is the crux of Abhishek Jain's decent attempt at presenting Dinga with a difference.

    The first thing which strikes the audience is the extraordinary work in handling the smartphone camera. Not many could actually differentiate the quality of pictures shot using the phone camera to that of the traditional camera. Given the limitations of the mode of the camera used, the cinematographer deserves appreciation for his skills.

    Beyond the most talked about experiment, the film is heavily based on the emotional connect between the protagonist and his unconditional love for his pet dog. To add to it, Dinga blends well with romance on a parallel track. A couple of songs and humour keeps the novel effort going for the audiey.

    Insofar the performances, Aarav does a good job as a man in his last days and his love for his pet. Anusha looks pretty in a short role. Dinga is worth its effort in technical significance for shooting using a smartphone and the relationship between a man and his best friend.

  • Dinga Shot on 'iPhone X' Set For Release

    dinga all set to released

    In another first for Sandalwood, the film titled 'Dinga' which has been completely shot on an iPhone, is ready for release in the coming weeks. Made under the banner Sri Mayakara productions by M R Madhusudhan, it is directed and acted by Abhishek Jain. It also features Aarva and Anusha.

    The audio of the film will be soon out even as the director shares that the entire budget of the movie was a little over Rs.50 lakh and shooting a full length feature film only on an iPhone is a first and one of its kind in Asia.

    He adds that he had several compatible lenses were imported from U.S., to shoot the film on iPhone X mobile phone. The output is as good as any other commercial movie shot using the expensive professional camera, he says adding that the movie was shot in 32 days.

    The lyrical video of sum sumne sung by Sanjith Hegde and Anuradha Bhat, and composed by Suddho Roy was recently released by the Dinga team.

  • iPhone Movie Dinga From Jan 31

    dinga image

    Entirely shot using an iPhone, Dinga directed by Abhisek Jain, has turned everyone's attention for its making quality when compared to the works using conventional methods such as cameras specially designed for the purpose of shooting movies.

    While the film is ready to hit the screens from January 31, the onscreen quality of Dinga has surprised many in the industry as well as the audience.

    "Knowing that Dinga has been shot using a smartphone, initially not many paid attention to our work. But when we released the video of the song and other promotional ones, the response to it has been overwhelming," says the director.

    While Dinga has nothing to do with the popular animated character Dinga from the past, Dinga here is the pet dog of the lead character played by Aarav Gowda. He is paired with Anusha. Book your tickets to witness the cinematic experience made using a smartphone.

  • ಐ ಫೋನ್ ಶೂಟಿಂಗ್ ಸಿನಿಮಾ ಡಿಂಗ ರಿಲೀಸ್

    dinga in theaters today

    ಐಫೋನ್‍ನಲ್ಲಿಯೇ ಚಿತ್ರೀಕರಣಗೊಂಡ ಮೊದಲ ಸಿನಿಮಾ ಡಿಂಗ. ನಿರ್ದೇಶಕ ಅಭಿಷೇಕ್ ಜೈನ್ ಒಂದು ಚೆಂದದ ಕಥೆಯನ್ನು ಅಷ್ಟೇ ನವಿರಾಗಿ ಹೇಳಿದ್ದಾರೆ. 11 ಜನ ನಿರ್ಮಾಪಕರು ಒಟ್ಟಿಗೇ ಸೇರಿ ನಿರ್ಮಿಸಿರುವ ಚಿತ್ರ ಡಿಂಗಕ್ಕೆ ಪ್ರಧಾನ ಶಕ್ತಿ ಮಧು ದೀಕ್ಷಿತ್.

    ಐಫೋನ್ ಸಿನಿಮಾ ಕೇಳೋಕೆ ಸರಳವಾಗಿ ಅನ್ನಿಸಿದ್ರೂ ಟೆಕ್ನಿಕಲಿ ಸಿಕ್ಕಾಪಟ್ಟೆ ಚಾಲೆಂಜಿಂಗ್. ಇದು ಏಷ್ಯಾದಲ್ಲೇ ಮೊದಲ ಪ್ರಯತ್ನ. ಛಾಯಾಗ್ರಹಕ ಮಂಜುನಾಥ್ ನಮ್ಮ ಪ್ರಯೋಗಕ್ಕೆ ಶಕ್ತಿ ಕೊಟ್ಟರು ಎನ್ನುವ ಅಭಿಷೇಕ್ ಜೈನ್ ಚಿತ್ರದ ಮೇಲೆ ಭಾರಿ ಭರವಸೆ ಇಟ್ಟಿದ್ದಾರೆ.

    ಆರವ್, ಅನುಷಾ ನಟಿಸಿರುವ ಚಿತ್ರಕ್ಕೆ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ.

     

  • ಐಫೋನ್ ಸಿನಿಮಾ ಡಿಂಗ ಶೂಟಿಂಗ್ ಹೇಗೆ..? ಕ್ವಾಲಿಟಿ ಹೇಗೆ..?

    dinga fil specialties

    ಡಿಂಗ, ಸಂಪೂರ್ಣವಾಗಿ ಐಫೋನ್‍ನಲ್ಲಿಯೇ ಶೂಟ್ ಆದ ಮೊತ್ತಮೊದಲ ಕನ್ನಡ ಸಿನಿಮಾ. ಒಂದು ಸಿನಿಮಾವನ್ನು ಐಫೋನ್‍ನಲ್ಲಿ ಶೂಟ್ ಮಾಡೋದು ಸಾಧ್ಯನಾ..? ಆ ಸಿನಿಮಾ ಕ್ವಾಲಿಟಿ ಹೇಗಿರಬಹುದು..? ಏನೋ.. ಡಿಜಿಟಲ್ ಹೆಚ್‍ಡಿ ಕ್ವಾಲಿಟಿ ಫೋಟೋ ಸಿಗುತ್ತೆ ಓಕೆ. ಹಾಗಂತ ಅದರಲ್ಲಿ ಸಿನಿಮಾ ಮಾಡ್ತಾರಾ..? ಇಂತಹ ಪ್ರಶ್ನೆಗಳಿಗೆಲ್ಲ ಡಿಂಗ ಚಿತ್ರದ ಟ್ರೇಲರ್, ಹಾಡುಗಳಲ್ಲೇ ಉತ್ತರವಿದೆ.

    ಯಾವುದೇ ಹೈಫೈ ಸಿನಿಮಾಗೂ ಕಮ್ಮಿಯಿಲ್ಲದಂತೆ ಒಳ್ಳೆಯ ಕ್ವಾಲಿಟಿ ಎಂದು ಸಾರಿ ಹೇಳ್ತಿವೆ ಟ್ರೇಲರ್, ಹಾಡುಗಳು. ಅಭಿಷೇಕ್ ಜೈನ್ ನಿರ್ದೇಶನದ ಚಿತ್ರಕ್ಕೆ ಮಾಯಕಾರ್ ಪ್ರೊಡಕ್ಷನ್ಸ್ ಮೂಲಕ 11 ಜನ ನಿರ್ಮಾಪಕರು ಬಂಡವಾಳ ಹೂಡಿದ್ದಾರೆ.

    ಡಿಂಗ ಅನ್ನೋದು ಪಗ್ ಜಾತಿಯ ಒಂದು ನಾಯಿ. ಆ ನಾಯಿಯೇ ಚಿತ್ರದ ಟೈಟಲ್. ಐಫೋನ್‍ಗೆ ಕ್ಯಾಮೆರಾ ಲೆನ್ಸ್ ಫಿಕ್ಸ್ ಮಾಡಿ ಶೂಟ್ ಮಾಡಿದ್ದು, ಸಿನಿಮಾ ಕಂಪ್ಲೀಟ್ ಕಾಮಿಡಿಮಯ. ಎಮೋಷನ್ಸ್ ಕೂಡಾ ಹಾಗೆಯೇ ಇವೆ. ಆರವ್ ಗೌಡ, ಅನುಷಾ ಪ್ರಮುಖ ಪಾತ್ರಧಾರಿಗಳು. ಮೂಗೂರು ಮಧು ದೀಕ್ಷಿತ್ ಪ್ರಧಾನ ನಿರ್ಮಾಪಕರಾಗಿದ್ದಾರೆ.

  • ಜ.31ಕ್ಕೆ ಡಿಂಗ ಬರ್ತಾನೆ

    dinga to hit screens on jan 31st

    ಐಫೋನ್‍ನಲ್ಲಿಯೇ ಚಿತ್ರೀಕರಣವಾದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಡಿಂಗ ಇದೇ ಜನವರಿ ಅಂತ್ಯಕ್ಕೆ ತೆರೆ ಮೇಲೆ ಪ್ರತ್ಯಕ್ಷವಾಗಲಿದ್ದಾನೆ. ಐ ಲವ್ ಯು, ದರ್ಬಾರ್ ಚಿತ್ರಗಳನ್ನು ವಿತರಣೆ ಮಾಡಿದ್ದ ಧೀರಜ್ ಎಂಟರ್‍ಪ್ರೈಸಸ್ ಡಿಂಗ ಚಿತ್ರವನ್ನು ರಿಲೀಸ್ ಮಾಡುತ್ತಿದೆ. ಚಿತ್ರ ಜನವರಿ 31ರಂದು ತೆರೆ ಮೇಲೆ ಬರುತ್ತಿದೆ.

    ಅಭಿಷೇಕ್ ಜೈನ್ ನಿರ್ದೇಶನದ ಚಿತ್ರದಲ್ಲಿ ನಾಯಕ ಕ್ಯಾನ್ಸರ್ ರೋಗಿ. ಸಾವು ಖಚಿತ ಎಂದು ಗೊತ್ತಾದ ಮೇಲೆ ತನ್ನ ಪ್ರೀತಿಯ ನಾಯಿಯನ್ನು ತನ್ನಷ್ಟೇ ಪ್ರೀತಿಸುವ ವ್ಯಕ್ತಿಗೆ ಕೊಟ್ಟು ಸಾಯಲು ಹೊರಡುತ್ತಾನೆ. ನಾಯಿಯನ್ನು ಸಾಕುವವರನ್ನು ಪರೀಕ್ಷೆಗೆ ಒಳಪಡಿಸುತ್ತಾನೆ. ಆಗ ಸೃಷ್ಟಿಯಾಗುವ ಭಾವನೆಗಳ ಮೆರವಣಿಗೆಯೇ ಚಿತ್ರದ ಕತೆ.

    ಆರವ್, ಅನುಷಾ ನಟಿಸಿರುವ ಚಿತ್ರದಲ್ಲಿ 100% ಮನರಂಜನೆ ಇದೆ. ಜೊತೆಗೊಂದು ಅತ್ಯುತ್ತಮ ಸಂದೇಶವೂ ಇದೆ ಎನ್ನುತ್ತಾರೆ ನಿರ್ದೇಶಕ ಅಭಿಷೇಕ್ ಜೈನ್.

  • ಡಿಂಗ ಡ್ಯಾನ್ಸ್ ಟಿಕ್‍ಟಾಕ್ ಕ್ರೇಜ್

    dinga craze in tik tok

    ಭಾರತದಲ್ಲೇ ಐ ಫೋನ್‍ನಲ್ಲಿ ಶೂಟ್ ಆದ ಮೊದಲ ಸಿನಿಮಾ ಎಂಬ ದಾಖಲೆ ಬರೆದಿರುವ ಚಿತ್ರ ಡಿಂಗ. ಶೀಘ್ರದಲ್ಲೇ ರಿಲೀಸ್ ಆಗುತ್ತಿರುವ ಡಿಂಗ ಚಿತ್ರದ ಹಾಡು ಟಿಕ್‍ಟಾಕ್‍ನಲಿ ಭರ್ಜರಿ ಸೌಂಡ್ ಮಾಡ್ತಿದೆ. ಡಿಂಗ ಡ್ಯಾನ್ಸ್ ಈಗ ಟಿಕ್‍ಟಾಕ್ ಟ್ರೆಂಡ್.

    ಅವನೇ ಶ್ರೀಮನ್ನಾರಾಯಣದ ಹ್ಯಾಂಡ್ಸಪ್ ಸಾಂಗ್ ಇಂತಾದ್ದೊಂದು ಕ್ರೇಜ್ ಸೃಷ್ಟಿಸಿತ್ತು. ಈಗ ಡಿಂಗನ ಸರದಿ.

    ಅಭಿಷೇಕ್ ಜೈನ್ ನಿರ್ದೇಶನದ ಚಿತ್ರದಲ್ಲಿ ಆರವ್ ಗೌಡ, ಅನುಷಾ ನಾಯಕ ನಾಯಕಿಯರು. ಇಡೀ ಚಿತ್ರದ ಕಥೆ ನಾಯಿಯೊಂದರ ಸುತ್ತ ನಡೆಯುತ್ತೆ. ಕ್ಯಾನ್ಸರ್‍ನಿಂದ ಬಳಲುವ ರೋಗಿಯೊಬ್ಬ, ಸಾಯುವುದಕ್ಕೂ ಮುನ್ನ ತನ್ನ ನಾಯಿಯನ್ನು ತನ್ನಷ್ಟೇ ಪ್ರೀತಿಸುವ ವ್ಯಕ್ತಿಗೆ ಕೊಡಲು ಹೊರಡುತ್ತಾನೆ. ಆಗ ಆತ ಎದುರಿಸುವ ವಿಭಿನ್ನ ವ್ಯಕ್ತಿಗಳ ಜೊತೆಗಿನ ಪಯಣವೇ ಚಿತ್ರದ ಕಥೆ.

  • ಡಿಂಗನ ಐಫೋನ್ ಸಾಹಸ

    dinga image

    ಐಫೋನ್‍ನಲ್ಲಿಯೇ ಸಿನಿಮಾ ಮಾಡಿದ್ದಾರಂತೆ ಎಂಬ ಅಚ್ಚರಿಯೊಂದಿಗೆ ಪ್ರೇಕ್ಷಕರ ಎದುರು ಬರುತ್ತಿದೆ ಡಿಂಗ. ಚಿತ್ರದ ನಿರ್ದೇಶಕ, ನಟ ಅಭಿಷೇಕ್ ಜೈನ್ ಅವರೇ ಹೇಳೋ ಪ್ರಕಾರ `ಇದು ಹಣವಿಲ್ಲದೆ ಮಾಡಿದ ಸಾಹಸವಲ್ಲ. ಹೊಸಬರಾಗಿ ಬಂದ ನಾವು ಏನಾದರೊಂದು ಹೊಸದಾಗಿ, ವಿಭಿನ್ನವಾಗಿ ಮಾಡಬೇಕಿತ್ತು. ಹೀಗಾಗಿ ಐಫೋನ್ ಶೂಟಿಂಗ್ ಆಯ್ಕೆ ಮಾಡಿಕೊಂಡೆವು. ಕ್ರಿಯೇಟಿವ್ ಆಗಿ ಗುರುತಿಸಿಕೊಳ್ಳುವುದಕ್ಕಾಗಿ ಐಫೋನ್ ಆಯ್ಕೆ ಮಾಡಿಕೊಂಡಿಡೆವು'

    11 ನಿರ್ಮಾಪಕರು ಒಗ್ಗೂಡಿ ನಿರ್ಮಿಸಿರುವ ಚಿತ್ರಕ್ಕೆ ಆರವ್ ಗೌಡ ಹೀರೋ. ಅನುಷಾ ನಾಯಕಿ. ಸಾವಿನ ಹೊಸ್ತಿಲಲ್ಲಿರುವ ವ್ಯಕ್ತಿಯೊಬ್ಬ, ತನ್ನ ಪ್ರೀತಿಯ ನಾಯಿಯನ್ನು ತನ್ನಷ್ಟೇ ಪ್ರೀತಿಸುವ ವ್ಯಕ್ತಿಗೆ ಕೊಡಬೇಕು ಎಂದು ಹೊರಡುತ್ತಾನೆ. ಪರೀಕ್ಷಿಸುತ್ತಾನೆ. ಇದೇ ಕಥೆ. ಈ ಭಾವನಾತ್ಮಕ ಕಥೆ ಹೊಂದಿರುವ ಚಿತ್ರ ಇದೇ ತಿಂಗಳಲ್ಲಿ ತೆರೆಗೆ ಬರುತ್ತಿದೆ.

  • ಡಿಂಗನಿಗೆ ಸ್ಟಾರ್ ಬಲ

    dinga gets star support

    ಡಿಂಗ.. ಬಾಲ್ಯದಲ್ಲಿ ಬಾಲಮಂಗಳ ಎಂಬ ಮಕ್ಕಳ ಮಾಸಪತ್ರಿಕೆ ಓದಿದ್ದವರಿಗೆ ಈ ಹೆಸರು ಖಂಡಿತಾ ಗೊತ್ತಿರುತ್ತೆ. ಈಗ ಆ ಹೆಸರನ್ನೇ ಇಟ್ಟುಕೊಂಡು

    ಸಿನಿಮಾ ಮಾಡಿದ್ದಾರೆ ಮೈಸೂರಿನ ಖ್ಯಾತ ಜ್ಯೋತಿಷಿ ಡಾ.ಮೂಗೂರು ಮಧು ದೀಕ್ಷಿತ್. ಐ ಫೋನ್‌ನಲ್ಲಿಯೇ ಇಡೀ ಸಿನಿಮಾ ಚಿತ್ರೀಕರಿಸಿರುವುದು ಈ ಚಿತ್ರದ ವಿಶೇಷ. ಇವರ ಜೊತೆ ಇನ್ನೂ 10 ಜನ ನಿರ್ಮಾಪಕರು ಕೈ ಜೋಡಿಸಿದ್ದಾರೆ.

    ಅಭಿಷೇಕ್ ಜೈನ್ ನಿರ್ದೇಶನದ ಚಿತ್ರದಲ್ಲಿ  ಅರವ್ ಗೌಡ ನಾಯಕ. ಅನುಶಾ ನಾಯಕಿ. ಕ್ಯಾನ್ಸರ್‌ನಿಂದಾಗಿ ಸಾಯುತ್ತಿರುವ ತನ್ನ ಪ್ರೀತಿಯ ನಾಯಿಯನ್ನು ತನ್ನದೇ ಗುಣವುಳ್ಳವರಿಗೆ ನೀಡಲು ಹೊರಡುವ ಕಥೆ ಡಿಂಗನಲ್ಲಲಿದೆ. ಜನವರಿ 4ರಂದು ಸಿನಿಮಾದ ಆಡಿಯೋ ರಿಲೀಸ್ ಆಗುತ್ತಿದ್ದು, ಕನ್ನಡ ಚಿತ್ರರಂಗದ ಸ್ಟಾರ್ ನಟರೊಬ್ಬರು ಆಡಿಯೋ ರಿಲೀಸ್ ಮಾಡಲಿದ್ದಾರೆ.

  • ನಕ್ಕು ನಗಿಸಿ ಕಣ್ಣಂಚು ಒದ್ದೆಯಾಗಿಸಿದ ಡಿಂಗ

    dinga emotionally attracts audience

    ಡಿಂಗ ಚಿತ್ರ ಎಲ್ಲರ ಗಮನ ಸೆಳೆದಿದ್ದೇ ಇದು ಐಫೋನ್‍ನಲ್ಲಿ ಚಿತ್ರೀಕರಣಗೊಂಡ ಸಿನಿಮಾ ಎನ್ನುವ ಕಾರಣಕ್ಕೆ. ಆದರೆ, ಅದಕ್ಕಿಂತಲೂ ವಿಭಿನ್ನವಾಗಿ ಚಿತ್ರ ಗಮನ ಸೆಳೆದಿರುವುದು ಚಿತ್ರದ ಕಥೆ, ಚಿತ್ರಕಥೆಗೆ. ಪುಟ್ಟದೊಂದು ನಾಯಿಯ ಸುತ್ತ ಭಾವನೆಗಳ ಕೋಟೆಯನ್ನೇ ಕಟ್ಟುವ ನಿರ್ದೇಶಕ ಅಭಿಷೇಕ್ ಜೈನ್, ಡಿಂಗನನ್ನು ನೋಡುವವರ ಕಣ್ಣಂಚನ್ನು ಎರಡು ಬಾರಿ ಒದ್ದೆಯಾಗಿಸಿ ಗೆದ್ದಿದ್ದಾರೆ.

    ಮೊದಲನೆಯದಾಗಿ ನಕ್ಕೂ ನಕ್ಕೂ ಕಣ್ಣಲ್ಲಿ ನೀರು ಬಂದರೆ, ಎರಡನೆಯದಾಗಿ ಭಾವುಕ ದೃಶ್ಯಗಳು ಕಣ್ಣು ಒದ್ದೆಯಾಗಿಸುತ್ತವೆ. ಆರವ್ ಗೌಡ, ಅನುಷಾ ನಟಿಸಿರುವ ಚಿತ್ರದಲ್ಲಿ ಭಾವುಕತೆಯ ದೃಶ್ಯಗಳ ಮೆರವಣಿಗೆಯೇ ಇದೆ. ಪ್ರೇಕ್ಷಕರಿಗೆ ಇಷ್ಟವಾಗಿರುವುದೇ ಇದು.

     

  • ಬಂಟಿ ಅಲ್ಲಲ್ಲ.. ಬನ್ ಟೀ.. ಏನ್ರೀ ಇದು ಡಿಂಗನ ಕಥೆ..?

    dinga is a comedy emotional drama

    ನಿನ್ ಹೆಸರನ್ನು ಯಾಕೆ ನೀವೇ ಬಂಟಿ ಅಂಥಾ ಇಟ್ಕೊಂಡಿದ್ದಿರಾ..?

    ನಂಗೆ ಬನ್ನು, ಟೀ ಅಂದ್ರೆ ಇಷ್ಟ ಸಾರ್.. ಅದಕ್ಕೆ..

    ಕಚಗುಳಿ ಶುರುವಾಗುವುದೇ ಹೀಗೆ.. ಇದು ಡಿಂಗನ ಲೋಕ. ಡಿಂಗ ಅಂದ್ರೆ ಬಂಟಿಯ ಮಗ. ಅಯ್ಯೋ ಅವನು ಮದುವೆ ಆಗಿಲ್ಲ. ಹಂಗಾದ್ರೆ ಮಗ ಹೆಂಗೆ.. ಡಿಂಗ ಅಂದ್ರೆ ಅವನ ಪ್ರೀತಿಯ ನಾಯಿ.

    ಅವನಿಗೊಬ್ಬ ಪ್ರೀತಿಯ ಗೆಳೆಯ. ಅವನ ಹೆಸರು ತರುಣ್. ನನ್ ಫ್ರೆಂಡ್ನ್ನ ಬೇಗ ಕರೆಸ್ಕೊಳ್ಳಪ್ಪಾ ಅಂತಾ ಬೇಡಿಕೊಳ್ಳುವಷ್ಟು ಪ್ರೀತಿಯ ಗೆಳೆಯ. ಬೆಳ್ಳಂಬೆಳಗ್ಗೆ ನಗ್ನ ದೇವರ ದರ್ಶನ  ತೋರಿಸಿದವನಿಗೆ ಅವನಾದರೂ ಇನ್ನೇನು ಕೇಳ್ಕೊತಾನೇ.. ಅಲ್ವಾ..?

    ಅಲ್ಲೊಬ್ಬಳು ಸುಂದರಿಯೂ.. ಇವನಿಗೆ ಕ್ಯಾನ್ಸರೂ ಬಂದಾಗ.. ಕಥೆಯಲ್ಲೊಂದು ಇಂಟ್ರೆಸ್ಟಿಂಗ್ ಟ್ರ್ಯಾಕ್ ಶುರುವಾಗುತ್ತೆ. ನನ್ನ ಡಿಂಗನನ್ನು ನನಗಿಂತಲೂ ಹೆಚ್ಚು ಪ್ರೀತಿಸುವವರಿಗೆ ಕೊಡಲು ನಿರ್ಧರಿಸಿ ಹುಡುಕಾಟಕ್ಕೆ ಹೊರಡುತ್ತಾನೆ ಬಂಟಿ.

    ಆಗ ಶುರುವಾಗುವುದೇ ಡಿಂಗ ಎಂಬ ಹೃದಯವನ್ನೇ ತಲ್ಲಣಗೊಳಿಸುವ ಕಥೆ. ಇದು ಡಿಂಗನ ಕಥೆ. ಅಭಿಷೇಕ್ ಜೈನ್ ಎಂಬ ನಿರ್ದೇಶಕ, ಐಫೋನ್ನಲ್ಲಿಯೇ ಚಿತ್ರೀಕರಣ ಮಾಡಿ ತೆರೆಗೆ ತರುತ್ತಿರೋ ಸಿನಿಮಾ ಇದು. ಡಾಕ್ಟರ್ ಮೂಗೂರು ದೀಕ್ಷಿತ್ ನಿರ್ಮಾಪಕರು. ಒಂದು ವಿಭಿನ್ನ ಕಥೆಯ ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದೆ.

    --