ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಅಮೂಲ್ಯ ನಾಯಕಿಯಾಗುತ್ತಿದ್ದಾರಾ..? ಮದುವೆಯ ನಂತರ ಮತ್ತೆ ಸಿನಿಮಾಗೆ ಕಮ್‍ಬ್ಯಾಕ್ ಸುಳಿವು ಕೊಟ್ಟಿರುವ ಅಮೂಲ್ಯ, ದರ್ಶನ್ ಚಿತ್ರದ ಮೂಲಕ ರೀ ಎಂಟ್ರಿ ಕೊಡ್ತಾರಾ..? ಸದ್ಯಕ್ಕೆ ಗಾಂಧಿನಗರದಲ್ಲಿ ಇಂಥಾದ್ದೊಂದು ಮಾತು ದೊಡ್ಡದಾಗಿ ಕೇಳಿಬರುತ್ತಿದೆ.
ಅಧಿಕೃತವಾಗಿಲ್ಲ ಅಷ್ಟೆ.
ದರ್ಶನ್, ತಮಿಳಿನ ವೇದಾಳಂ ರೀಮೇಕ್‍ಗೆ ಗ್ರೀನ್‍ಸಿಗ್ನಲ್ ಕೊಟ್ಟಿದ್ದಾರಂತೆ. ಆ ಚಿತ್ರದಲ್ಲಿ ಅಮೂಲ್ಯ ನಾಯಕಿಯಾಗಲಿದ್ದಾರಂತೆ. ಹಾಗೇನಾದರೂ ಆದರೆ, ದರ್ಶನ್ ಜೊತೆ 15 ವರ್ಷಗಳ ನಂತರ ತೆರೆ ಹಂಚಿಕೊಳ್ಳಲಿದ್ದಾರೆ ಅಮೂಲ್ಯ.
ಸುಮಾರು 15 ವರ್ಷಗಳ ಹಿಂದೆ, ಅಮೂಲ್ಯ ದರ್ಶನ್ ಅವರ ಲಾಲಿಹಾಡು ಚಿತ್ರದಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲ, ದರ್ಶನ್ ಅವರ ಪ್ರೊಡಕ್ಷನ್ಸ್‍ನಲ್ಲಿಯೇ ತಯಾರಾಗಿದ್ದ ಮದುವೆಯ ಮಮತೆಯ ಕರೆಯೋಲೆ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಅಮೂಲ್ಯ, ಈಗ ದರ್ಶನ್‍ಗೇ ಜೋಡಿಯಾಗಲಿದ್ಧಾರೆ ಎನ್ನವುದು ಗಾಂಧಿನಗರದ ಬಿಸಿಬಿಸಿ ಸುದ್ದಿ.