` alidhu ulidavaru, - chitraloka.com | Kannada Movie News, Reviews | Image

alidhu ulidavaru,

  • Alidu Ulidavaru Review: Chitraloka Rating 3.5/ 5*

    alidhu ulidavaru movie review

    Seems like it is all about suspense for sandalwood for the past few weeks with back to back movies haunting the audience. Arvind Shastry blends this latest suspense thriller with a touch of fine illusion and grades of a story of its kind.

    Sheelam played by producer turned actor Ashu Bedra, is a television journalist who hosts a popular show which has successfully completed 99 episodes. Ashu along with Sangeetha Bhat is impressive on the screen. It is all about disproving paranormal activities and presenting it in an interesting manner to the audience.

    While on the outset, Alidu Ulidavaru sounds like any other haunted tale, but it is the making and the surprising twists which differs it from the usual lot.

    Moving ahead with the tale, Sheelam is in search of a different story to mark his 100 th episode. This is when he is challenged by the character played by Pawan Kumar, to disprove that his bungalow given to by his father is not haunted. In between, the physiological thriller has shades of romance before it gears up for all the action in the bungalow.

    The beauty lies in the unpredicted twists which the director frames it pretty well when it all seems very much predictable. Horror, suspense and illusion is mixed to perfection which keeps the audience on the edge of their seats.

    After the television anchor is 'found dead', what follows next with an investigation over the haunted reality makes Alidu Ulidavaru one of the finest in the recent past. Thriving for the best in suspense which had a psychological edge? Then Alidu Ulidavaru is what you should watch at a theatre near you.

  • ಅಳಿದು ಉಳಿದವರ ಅರ್ಧಶತಕ

    alidhu ulidavaru crossed 50 days

    ಡಿಸೆಂಬರ್‍ನಲ್ಲಿ ರಿಲೀಸ್ ಆಗಿ, ವಿಭಿನ್ನತೆಯ ಮೂಲಕವೇ ಗಮನ ಸೆಳೆದಿದ್ದ ಸಿನಿಮಾ ಅಳಿದು ಉಳಿದವರು. ಈಗ ಚಿತ್ರ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ನಿರ್ಮಾಪಕ ಅಶುಬೆದ್ರ ಅವರೇ ನಾಯಕರಾಗಿದ್ದ ಚಿತ್ರಕ್ಕೆ ಅರವಿಂದ್ ಶಾಸ್ತ್ರಿ ನಿರ್ದೇಶಕ.

    ಚಿತ್ರ ತಂಡದ 50 ದಿನಗಳ ಸಂಭ್ರಮಾಚರಣೆಗೆ ಹೊಸ ಮೆರುಗು ಕೊಟ್ಟವರು ಸಿಂಪಲ್ ಸುನಿ. ಸಾಮಾನ್ಯವಾಗಿ ನಿರ್ಮಾಕರು ನಾಯಕರಾಗಲು ಹೊರಟರೆ, ಇವರಿಗ್ಯಾಪ್ಪ ಇದೆಲ್ಲದರ ಉಸಾಬರಿ ಎನ್ನಿಸುತ್ತೆ. ಆದರೆ, ಅಶುಬೆದ್ರ ವಿಚಾರದಲ್ಲಿ ಇದ್ದುದೇ ಬೇರೆ. ಇವರೇಕೆ ಇನ್ನೂ ನಟಿಸುತ್ತಿಲ್ಲ ಎನ್ನಿಸುತ್ತಿತ್ತು. ನನ್ನ ನಂಬಿಕೆ ಸುಳ್ಳಾಗಲಿಲ್ಲ. ಅವರು ಕಲಾವಿದರಾಗಿಯೂ ಗೆದ್ದಿದ್ದಾರೆ ಎಂದಿದ್ದಾರೆ ಸುನಿ. ಸುನಿ ನಿರ್ದೇಶನದ ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ ಚಿತ್ರದ ನಿರ್ಮಾಪಕ ಅಶುಬೆದ್ರ, ಈಗ ಹೀರೋ ಆಗಿಯೂ ಗೆದ್ದಿದ್ದಾರೆ.

    ಚಿತ್ರತಂಡದವರಿಗೆ ಸ್ಮರಣಿಕೆ ವಿತರಿಸಿದ ಸುನಿ ಚಿತ್ರ 100 ದಿನ ಪೂರೈಸಲಿ ಎಂದು ಹಾರೈಸಿದರೆ, ನಟ, ನಿರ್ಮಾಪಕ ಅಶು ಬೆದ್ರ ಇದು ಟೀಂ ವರ್ಕ್ ಎಂದು ತಂಡಕ್ಕೇ ಗೆಲುವಿನ ಕ್ರೆಡಿಟ್ ಕೊಟ್ಟಿದ್ದಾರೆ.

  • ಅಳಿದು ಉಳಿದವರ ಸಸ್ಪೆನ್ಸ್ ಥ್ರಿಲ್ಲರ್ ಗೇಮ್

    alidhu ulidavaru is a suspense thriller

    ಇದು ಪಕ್ಕಾ ಹೊಸತನದ ಕಥೆ. ಹೊಸತನದಿಂದಲೇ ಸ್ಯಾಂಡಲ್ವುಡ್ನಲ್ಲಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಅಳಿದು ಉಳಿದವರು. ಮುಂದಿನ ವಾರ ರಿಲೀಸ್ ಆಗುತ್ತಿರುವ ಈ ಚಿತ್ರದಲ್ಲಿರೋದು ಸಸ್ಪೆನ್ಸ್ ಥ್ರಿಲ್ಲರ್ ಸ್ಟೋರಿ. ಅರವಿಂದ್ ಶಾಸ್ತ್ರಿ ನಿರ್ದೇಶನದ ಚಿತ್ರದಲ್ಲಿ ಅಶು ಬೆದ್ರ ಹೀರೋ. ಅವರೇ ನಿರ್ಮಾಪಕರೂ ಹೌದು.

    ಸಂಗೀತಾ ಭಟ್, ಪವನ್ ಕುಮಾರ್, ಅತುಲ್ ಕುಲಕರ್ಣಿ, ಬಿ.ಸುರೇಶ್ ಮೊದಲಾದವರು ನಟಿಸಿರುವ ಚಿತ್ರಕ್ಕೆ ಮಿಥುನ್ ಮುಕುಂದ್ ಸಂಗೀತವಿದೆ. ಜನಪ್ರಿಯ ಟಿವಿ ಚಾನೆಲ್ನ ಜನಪ್ರಿಯ ಶೋವೊಂದರ 100ನೇ ಸಂಚಿಕೆ ರೂಪಿಸುವ ಸಂದರ್ಭದಲ್ಲಿ ಎದುರಾಗುವ ಸವಾಲುಗಳೇ ಚಿತ್ರದ ಕಥೆ. ಟಿಆರ್ಪಿ ಕಥೆ ಹೇಳುವ ಅಳಿದು ಉಳಿದವರು ಸಿನಿಮಾದಲ್ಲಿ, ಹಲವು ನಿಗೂಢ ಪ್ರಶ್ನೆಗಳಿಗೆ ಉತ್ತರವೂ ಇದೆ. ಅವು ಸಿಗುವುದು ಡಿಸೆಂಬರ್ 6ಕ್ಕೆ.

  • ಟಿ.ಆರ್.ಪಿ. ಸೀಕ್ರೆಟ್ ಹೇಳುತ್ತಾ ಅಳಿದು ಉಳಿದವರು..?

    alidhu ulidavar all about trp

    ಇದೇ ವಾರ ರಿಲೀಸ್ ಆಗುತ್ತಿರೋ ಚಿತ್ರದ ಟ್ರೇಲರ್ ನೋಡಿದವರಿಗೆ ಈ ಪ್ರಶ್ನೆ ಕಾಡಿದ್ದರೆ ಅಚ್ಚರಿಯಿಲ್ಲ. ಏಕೆಂದರೆ ಇದು ಸಸ್ಪೆನ್ಸ್ ಥ್ರಿಲ್ಲರ್.  ಟ್ರೇಲರ್ ನೋಡಿದವರಿಗೆ ಅರ್ಥವಾಗುವುದು ಇಷ್ಟು. ಟಿವಿ ಚಾನೆಲ್ಲೊಂದರ ಜನಪ್ರಿಯ ಕಾರ್ಯಕ್ರಮದ 100ನೇ ಎಪಿಸೋಡ್‌ನ್ನು ರೋಚಕವಾಗಿಸಲು ನಡೆಯುವ ಪೈಪೋಟಿಯ ಕಥೆ. ಹೀಗಾಗಿಯೇ ಇದು ಟೆಲಿವಿಷನ್ ಚಾನೆಲ್‌ಗಳ ಟಿಆರ್‌ಪಿ ಕಥೆ, ರಹಸ್ಯ ಬಿಚ್ಚಿಡುತ್ತಾ ಅನ್ನೋ ಕುತೂಹಲ ಪ್ರೇಕ್ಷಕರದ್ದು. ಏಕೆಂದರೆ ಸಾಮಾನ್ಯ ಜನರಿಗೆ ಟಿಆರ್‌ಪಿ ಕೇಳಿ ಗೊತ್ತು, ಟಿವಿ ಮಂದಿಗೆ ಅನುಭವಿಸಿ ಗೊತ್ತು. ಆದರೆ.. ವಾಟ್ ಈಸ್ ರಿಯಾಲಿಟಿ..?

    ಅರವಿಂದ ಶಾಸ್ತಿç ಅಳಿದು ಉಳಿದವರು ಚಿತ್ರದಲ್ಲಿ ಆ ರಹಸ್ಯವನ್ನೇನಾದರೂ ಬಿಚ್ಚಿಟ್ಟಿದ್ದಾರಾ..? ನಿರ್ಮಾಪಕ, ನಾಯಕ ಅಶು ಬೆದ್ರ ಹೇಳೋದು ಅದೇ ಕಥೆನಾ..? ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ನಿರ್ದೇಶಕ ಪವನ್ ಕುಮಾರ್, ಅತುಲ್ ಕುಲಕರ್ಣಿ ಪಾತ್ರಗಳ ಸೀಕ್ರೆಟ್ ಏನು..? ಎಲ್ಲವೂ ಗೊತ್ತಾಗೋದು ಡಿಸೆಂಬರ್ 6ಕ್ಕೆ.